< ಎಜ್ರನು 3 >
1 ೧ ಸೆರೆವಾಸದಿಂದ ಹಿಂದಿರುಗಿ ಬಂದು ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸಿಸುತ್ತಿದ್ದ ಇಸ್ರಾಯೇಲರು ಏಳನೆಯ ತಿಂಗಳಿನಲ್ಲಿ ಏಕಮನಸ್ಸಿನಿಂದ ಯೆರೂಸಲೇಮಿಗೆ ಕೂಡಿಬಂದರು.
Tukun malem itkosr, mwet Israel elos oakwuki in acn selos. Na elos nukewa toeni Jerusalem.
2 ೨ ಆಗ ದೇವರ ಮನುಷ್ಯನಾದ ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿರುವ ಪ್ರಕಾರ ಸರ್ವಾಂಗಹೋಮಗಳನ್ನು ಸಮರ್ಪಿಸುವುದಕ್ಕಾಗಿ ಯೋಚಾದಾಕನ ಮಗನಾದ ಯೇಷೂವನೂ, ಯಾಜಕರಾದ ಅವನ ಬಂಧುಗಳೂ, ಶೆಯಲ್ತೀಯೇಲನ ಮಗನಾದ ಜೆರುಬ್ಬಾಬೆಲನೂ ಮತ್ತು ಅವನ ಬಂಧುಗಳೂ ಇಸ್ರಾಯೇಲ್ ದೇವರ ಯಜ್ಞವೇದಿಯನ್ನು ಪುನಃ ಕಟ್ಟುವುದಕ್ಕೆ ಪ್ರಾರಂಭಿಸಿದರು.
Ac Joshua wen natul Jehozadak, oayapa mwet tol wial, ac Zerubbabel wen natul Shealtiel wi sou lal, elos tukeni sifilpa musai loang lun God lun Israel, tuh elos fah ku in orek kisa firir fac fal nu ke ouiya ma simla in Ma Sap lal Moses, mwet lun God.
3 ೩ ಅವರು ಸುತ್ತಣ ಪ್ರಾಂತ್ಯಗಳ ಜನರಿಗೆ ಹೆದರಿಕೊಂಡಿದ್ದರಿಂದ ವೇದಿಯನ್ನು ಅದರ ಸ್ಥಳದಲ್ಲಿ ಕಟ್ಟಿ, ಅದರ ಮೇಲೆ ಯೆಹೋವನಿಗೋಸ್ಕರ ಮುಂಜಾನೆಯ ಹಾಗು ಸಾಯಂಕಾಲಗಳ ಸರ್ವಾಂಗಹೋಮಗಳನ್ನು ಅರ್ಪಿಸಿದರು.
Mwet su foloko liki sruoh elos finne sangeng sin mwet muta fin acn ah, elos sifil pacna musaela loang in kisa fin acn se na ma oan we meet ah. Na elos sifilpa mutawauk in kisakin mwe kisa in lotutang ac mwe kisa in eku ke len nukewa.
4 ೪ ಇದಲ್ಲದೆ ಶಾಸ್ತ್ರದಲ್ಲಿ ಬರೆದಿರುವಂತೆ ಅವರು ಪರ್ಣಶಾಲೆಗಳ ಜಾತ್ರೆಯನ್ನು ಆಚರಿಸಿ, ಪ್ರತಿದಿನ ನಿಗದಿಪಡಿಸಿದ ವಿಧಿಗನುಸಾರವಾದ ಸರ್ವಾಂಗಹೋಮಗಳನ್ನು ಅರ್ಪಿಸಿದರು.
Elos akfulatye Kufwen Iwen Aktuktuk, fal nu ke ma oakwuk. Ke kais sie len elos sang mwe kisa fal nu ke ma oakwuki nu ke len sac.
5 ೫ ಅಂದಿನಿಂದ ನಿತ್ಯ ಸರ್ವಾಂಗಹೋಮ, ಅಮಾವಾಸ್ಯೆ, ಯೆಹೋವನ ಎಲ್ಲಾ ಉತ್ಸವದಿನ ಇವುಗಳಲ್ಲಿ ನೇಮಕವಾದ ಸರ್ವಾಂಗಹೋಮಗಳೂ, ಜನರು ಸ್ವ ಇಚ್ಛೆಯಿಂದ ತಂದುಕೊಟ್ಟ ಯಜ್ಞಗಳೂ ಯೆಹೋವನಿಗೆ ಸಮರ್ಪಣೆಯಾಗುತ್ತಾ ಬಂದವು.
Ac sayen ma inge, elos oru pac mwe kisa firir ma enenu in fonna kisakinyuk, ac mwe kisa ke Kufwa lun Malem Sasu ac ke toeni nukewa su mwet uh alu nu sin LEUM GOD, oayapa elos sang mwe sang ke insewowo nu sin LEUM GOD.
6 ೬ ಏಳನೆಯ ತಿಂಗಳಿನ ಮೊದಲನೆಯ ದಿನದಿಂದ ಯೆಹೋವನಿಗೆ ಸರ್ವಾಂಗಹೋಮಗಳನ್ನು ಅರ್ಪಿಸತೊಡಗಿದರು. ಆಗ ಯೆಹೋವನ ಆಲಯದ ಅಸ್ತಿವಾರವು ಇನ್ನೂ ಹಾಕಲ್ಪಟ್ಟಿರಲಿಲ್ಲ.
Mwet uh finne soenna mutawauk in musai Tempul, a ke len se emeet in malem se akitkosr elos mutawauk in orek kisa firir nu sin LEUM GOD.
7 ೭ ಆದರೆ ಪರ್ಷಿಯ ರಾಜನಾದ ಕೋರೆಷನಿಂದ ಪಡೆದುಕೊಂಡ ಅಪ್ಪಣೆಯ ಮೇರೆಗೆ ಅವರು ಕಲ್ಲುಕುಟಿಗರಿಗೆ ಮತ್ತು ಬಡಗಿಗಳಿಗೆ ಹಣವನ್ನೂ, ಲೆಬನೋನಿನಿಂದ ಸಮುದ್ರಮಾರ್ಗವಾಗಿ ಯೊಪ್ಪಕ್ಕೆ ದೇವದಾರು ಮರಗಳನ್ನು ತರುತ್ತಿದ್ದ ಚೀದೋನ್ಯರಿಗೆ ಮತ್ತು ತೂರ್ಯರಿಗೆ ಅನ್ನಪಾನಗಳನ್ನೂ ಮತ್ತು ಎಣ್ಣೆಯನ್ನೂ ಕೊಟ್ಟಿದ್ದರು.
Mwet uh sang mani in moli mwet orekma ke eot ac mwet kamtu, ac elos sang mwe mongo, mwe nim, ac oil in olive tuh in supweyukla nu in siti Tyre ac Sidon, mwe ayaol nu ke sak cedar Lebanon me. Sak inge ac pahkinyuk ut meoa nu Joppa. Tokosra Fulat Cyrus lun Persia pa fuhlela tuh ma inge nukewa in orek.
8 ೮ ಅವರು ಯೆರೂಸಲೇಮಿನ ದೇವಾಲಯವನ್ನು ತಲುಪಿದ ಎರಡನೆಯ ವರ್ಷದ ಎರಡನೆಯ ತಿಂಗಳಲ್ಲಿ ಶೆಯಲ್ತಿಯೇಲನ ಮಗನಾದ ಜೆರುಬ್ಬಾಬೆಲ್, ಯೋಚಾದಾಕನ ಮಗನಾದ ಯೇಷೂವ ಇವರೂ, ಲೇವಿಯರೂ, ಸೆರೆಯಿಂದ ಯೆರೂಸಲೇಮಿಗೆ ಹಿಂತಿರುಗಿ ಬಂದ ಬೇರೆ ಎಲ್ಲರೂ ದೇವಾಲಯವನ್ನು ಕಟ್ಟುವುದಕ್ಕೆ ಪ್ರಾರಂಭಿಸಿ, ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸುಳ್ಳ ಲೇವಿಯರನ್ನು ಯೆಹೋವನ ಆಲಯದಲ್ಲಿ ಕಟ್ಟುವವರ ಮೇಲ್ವಿಚಾರಣೆಗಾಗಿ ನೇಮಿಸಿದರು.
Ouinge elos mutawauk orekma ke malem se akluo in yac se tukun elos foloko nu ke acn se Tempul tuh oan we Jerusalem. Zerubbabel, Joshua, ac mwet wialos, oayapa mwet tol, ac mwet Levi, aok mwet nukewa su folok liki sruoh nu Jerusalem, elos tukeni kasru ke orekma. Mwet Levi nukewa yac longoul matwa ku matu liki, pa itukyang in kol orekma in sifil musai Tempul uh.
9 ೯ ಕೂಡಲೆ ಲೇವಿಯರಲ್ಲಿ ಹೋದವ್ಯನ ಸಂತಾನದವರಾದ ಯೇಷೂವನು ಅವನ ಮಕ್ಕಳು ಮತ್ತು ಸಹೋದರರು, ಕದ್ಮೀಯೇಲನು ಮತ್ತು ಅವನ ಮಕ್ಕಳು, ಹೇನಾದಾದನ ಮಕ್ಕಳು ಅವರ ಮಕ್ಕಳು ಮತ್ತು ಬಂಧುಗಳು ಇವರೆಲ್ಲರೂ ಕೂಡಿಕೊಂಡು ದೇವಾಲಯ ಕಟ್ಟುವವರ ಮೇಲ್ವಿಚಾರಕರಾಗಿ ನಿಂತರು.
Jeshua mwet Levi, ac wen natul nukewa ac sou lalos, oayapa Kadmiel ac wen natul nukewa (elos ma in sou lal Hodaviah) elos tukeni kol orekma ke sifilpa musa lun Tempul. (Oasr pac kasreyuk nu selos sin mwet Levi in sou lal Henadad.)
10 ೧೦ ಕಟ್ಟುವವರು ಯೆಹೋವನ ಮಂದಿರದ ಅಸ್ತಿವಾರವನ್ನು ಹಾಕಿದಾಗ ಇಸ್ರಾಯೇಲರ ಅರಸನಾದ ದಾವೀದನು ನೇಮಿಸಿದ ಕ್ರಮಕ್ಕನುಸಾರವಾಗಿ ಯೆಹೋವನನ್ನು ಸ್ತುತಿಸಿ ಕೀರ್ತಿಸುವುದಕ್ಕೋಸ್ಕರ ಯಾಜಕರು ತಮ್ಮ ದೀಕ್ಷಾವಸ್ತ್ರಗಳಿಂದ ಭೂಷಿತರಾಗಿ ತುತ್ತೂರಿಗಳೊಡನೆಯೂ, ಆಸಾಫನ ಮಕ್ಕಳಾದ ಲೇವಿಯರು ತಾಳಗಳೊಡನೆಯೂ ನಿಂತುಕೊಂಡರು.
Ke mwet musa elos mutawauk in oaki pwelung lun Tempul uh, mwet tol elos nokomang nuknuk in alu lalos, ac tu yen srisrngiyuk nu selos wi mwe ukuk in paolos, na mwet Levi in sou lal Asaph elos sruok cymbal natulos ac wi pac tuyak. Elos kaksakin LEUM GOD fal nu ke ma fwack nu selos tutafme in pacl lal Tokosra David me.
11 ೧೧ ಅವರು ಪರಸ್ಪರ ಹಾಡುತ್ತಾ, ಯೆಹೋವನನ್ನು ಸಂಕೀರ್ತಿಸುತ್ತಾ, “ಆತನು ಒಳ್ಳೆಯವನು; ಆತನ ಕೃಪೆಯು ಇಸ್ರಾಯೇಲರೊಂದಿಗೆ ಶಾಶ್ವತವಾಗಿರುತ್ತದೆ” ಎಂದು ಕೃತಜ್ಞತಾಸ್ತುತಿಮಾಡಿದರು. ಯೆಹೋವನ ಕೀರ್ತನೆ ಕೇಳಿಸಿದ ಕೂಡಲೆ ಯೆಹೋವನ ಆಲಯದ ಅಸ್ತಿವಾರವು ಹಾಕಲ್ಪಟ್ಟಿರುತ್ತದೆಂದು ಜನರೆಲ್ಲರೂ ಉತ್ಸಾಹಧ್ವನಿಯಿಂದ ಜಯಘೋಷ ಮಾಡಿದರು.
Ke elos on ac kaksakin LEUM GOD, elos kalweni kas inge: “LEUM GOD El wo, ac lungse lal nu sin Israel oan ma pahtpat.” Mwet nukewa elos sala ke kuiyalos nufon, ac kaksakin LEUM GOD, mweyen orekma in oakiya pwelung lun Tempul uh srola.
12 ೧೨ ಆದರೆ ಯಾಜಕರಲ್ಲಿಯೂ, ಲೇವಿಯರಲ್ಲಿಯೂ, ಗೋತ್ರಪ್ರಧಾನರಲ್ಲಿಯೂ ಅನೇಕರು ಅಂದರೆ ಮೊದಲಿನ ದೇವಾಲಯವನ್ನು ನೋಡಿದ್ದ ಹಿರಿಯರು ತಮ್ಮ ಕಣ್ಣ ಮುಂದೆ ದೇವಾಲಯದ ಅಸ್ತಿವಾರವು ಹಾಕಲ್ಪಟ್ಟಿದ್ದನ್ನು ನೋಡಿದಾಗ ಬಹಳವಾಗಿ ಅತ್ತರು. ಬೇರೆ ಹಲವರು ಹರ್ಷಧ್ವನಿಯಿಂದ ಜಯಘೋಷ ಮಾಡಿದರು.
Mwet matu puspis sin mwet tol ac mwet Levi ac sifen sou, elos tuh liye Tempul se meet ah, na ke elos liye oakwuki lun pwelung ke Tempul se inge, elos wowoyak ac tung. A mwet saya su wi tukeni sac elos sasa ke engan.
13 ೧೩ ಜನರು ಮಹಾಧ್ವನಿಯಿಂದ ಅರ್ಭಟಿಸುತ್ತಿದ್ದರಿಂದ ಹರ್ಷಧ್ವನಿ ಯಾವುದು ಅಳುವವರ ಧ್ವನಿ ಯಾವುದು ಗೊತ್ತಾಗಲಿಲ್ಲ. ಗದ್ದಲವು ಬಹುದೂರದ ವರೆಗೂ ಕೇಳಿಸಿತು.
Wangin mwet ku in akilen inmasrlon wowo ke engan ac wowo ke tung, mweyen pusren ngisyak lalos orala pusra na lulap su ku in lohngyuk yen loessula.