< ಯೆಹೆಜ್ಕೇಲನು 9 >
1 ೧ ಆಮೇಲೆ ಆತನು, “ಪಟ್ಟಣವನ್ನು ದಂಡಿಸತಕ್ಕವರೇ, ನೀವೆಲ್ಲರೂ ನಿಮ್ಮ ಹತ್ಯಾ ಆಯುಧಗಳನ್ನು ಹಿಡಿದವರಾಗಿ ಸಮೀಪಿಸಿರಿ” ಎಂದು ಗಟ್ಟಿಯಾಗಿ ಕೂಗಿ ಹೇಳಿದ ಮಾತು ನನ್ನ ಕಿವಿಗೆ ಬಿತ್ತು.
Et d'une grande voix il cria à mes oreilles, disant: Le jugement de la ville est proche, et chacun a dans la main un instrument de destruction.
2 ೨ ಕೂಡಲೆ ಗದೆಗಳನ್ನು ಹಿಡಿದುಕೊಂಡ ಆರು ಮಂದಿ ಪುರುಷರು ಉತ್ತರ ಮುಖವಾಗಿರುವ ಮೇಲಣ ಹೆಬ್ಬಾಗಿಲಿನ ಮಾರ್ಗವಾಗಿ ಬಂದರು; ನಾರಿನ ಬಟ್ಟೆಯನ್ನು ಹೊದ್ದುಕೊಂಡು ಲೇಖಕನ ಮಸಿಕುಡಿಕೆಯನ್ನು ನಡುವಿಗೆ ಕಟ್ಟಿಕೊಂಡಿರುವ ಮತ್ತೊಬ್ಬ ಪುರುಷನು ಅವರ ಮಧ್ಯದಲ್ಲಿದ್ದನು. ಇವರೆಲ್ಲರೂ ಒಳಕ್ಕೆ ಸೇರಿ ತಾಮ್ರದ ಯಜ್ಞವೇದಿಯ ಪಕ್ಕದಲ್ಲಿ ನಿಂತುಕೊಂಡರು.
Et voilà que six hommes vinrent par la porte haute qui regarde l'aquilon, et chacun avait à la main une hache. Et au milieu d'eux il y avait un homme vêtu d'une robe traînante, avec une ceinture de saphirs autour des reins; et ils entrèrent, et ils s'arrêtèrent vers l'autel d'airain.
3 ೩ ಇಷ್ಟರಲ್ಲಿ ಇಸ್ರಾಯೇಲಿನ ದೇವರ ತೇಜಸ್ಸು ತನ್ನ ವಾಹನವಾದ ಕೆರೂಬಿಯನ್ನು ಬಿಟ್ಟು ಮೇಲಕ್ಕೇರಿ ಆಲಯದ ಹೊಸ್ತಿಲಿನ ಮೇಲ್ಗಡೆ ನಿಂತಿತ್ತು; ಆಗ ನಾರಿನ ಬಟ್ಟೆಯನ್ನು ಹೊದ್ದುಕೊಂಡು, ಲೇಖಕನ ಮಸಿಕೊಂಬನ್ನು ನಡುವಿಗೆ ಕಟ್ಟಿಕೊಂಡಿರುವ ಪುರುಷನನ್ನು ಕಂಡನು.
Et la gloire du Dieu d'Israël s'élevant, portée par des chérubins, alla au portique du temple; puis elle appela l'homme vêtu d'une longue robe, qui avait une ceinture sur les reins.
4 ೪ ಯೆಹೋವನು ಕೂಗಿ ಅವನಿಗೆ, “ನೀನು ಯೆರೂಸಲೇಮ್ ಪಟ್ಟಣದಲ್ಲೆಲ್ಲಾ ತಿರುಗಿ ಅದರೊಳಗೆ ನಡೆಯುವ ಸಮಸ್ತ ಅಸಹ್ಯ ಕಾರ್ಯಗಳಿಗಾಗಿ ನರಳಿ ಗೋಳಾಡುತ್ತಿರುವ ಜನರ ಹಣೆಯ ಮೇಲೆ ಗುರುತುಮಾಡು” ಎಂದು ಅಪ್ಪಣೆಕೊಟ್ಟನು.
Et le Seigneur lui dit: Traverse Jérusalem, et marque au front les hommes qui gémissent et pleurent sur toutes les iniquités qui se sont faites au milieu d'eux.
5 ೫ ಮತ್ತೂ ಆತನು ಉಳಿದವರಿಗೆ, “ನೀವು ಪಟ್ಟಣದಲ್ಲೆಲ್ಲಾ ಇವನ ಹಿಂದೆ ತಿರುಗುತ್ತಾ ಹತಿಸಿರಿ; ಯಾರನ್ನೂ ಕಟಾಕ್ಷಿಸದಿರಿ, ಉಳಿಸದಿರಿ; ವೃದ್ಧ, ಯುವಕ, ಯುವತಿ, ಸ್ತ್ರೀ, ಬಾಲಕ ಎನ್ನದೆ ಸಕಲರನ್ನೂ ಸಂಹಾರ ಮಾಡಿಬಿಡಿರಿ; ಆದರೆ ಆ ಗುರುತುಳ್ಳವರಲ್ಲಿ ಯಾರನ್ನೂ ಮುಟ್ಟಬೇಡಿರಿ; ನನ್ನ ಆಲಯದಲ್ಲಿಯೇ ಪ್ರಾರಂಭಮಾಡಿರಿ” ಎಂಬುದಾಗಿ ಆತನು ನನಗೆ ಕೇಳಿಸುವಂತೆ ಅಪ್ಪಣೆಮಾಡಿದನು.
Et il dit aux six hommes pendant que je l'écoutais: Allez derrière lui dans la cité, et que vos yeux soient sans pitié, et vous, soyez sans miséricorde.
6 ೬ ಆಗ ಅವರು ದೇವಾಲಯದ ಮುಂದೆ ಇದ್ದ ಹಿರಿಯರನ್ನು ಮೊದಲುಗೊಂಡು ಹತಿಸತೊಡಗಿದರು.
Tuez, exterminez le vieillard, le jeune homme et la vierge, les enfants et les femmes; mais n'attaquez point ceux qui auront la marque, et commencez par mon sanctuaire. Ils commencèrent donc par les vieillards qui étaient dans le temple.
7 ೭ ಆತನು ಅವರಿಗೆ, “ಹೊರಡಿರಿ, ಪ್ರಾಕಾರಗಳನ್ನು ಶವಗಳಿಂದ ತುಂಬಿಸಿ, ದೇವಾಲಯವನ್ನು ಹೊಲೆಗೆಡಿಸಿರಿ” ಎಂದು ಅಪ್ಪಣೆ ಕೊಡಲು ಅವರು ಹೊರಟು ಪಟ್ಟಣದಲ್ಲಿದ್ದವರನ್ನು ಹತಿಸಿದರು.
Et le Seigneur dit aux six hommes: Souillez le temple; allez et remplissez les parvis de cadavres, et frappez.
8 ೮ ಅವರು ಹತಿಸುತ್ತಿರುವಾಗ ಅಲ್ಲಿ ಒಂಟಿಗನಾಗಿ ಉಳಿದ ನಾನು ಅಡ್ಡಬಿದ್ದು, “ಅಯ್ಯೋ, ಕರ್ತನಾದ ಯೆಹೋವನೇ, ನೀನು ಯೆರೂಸಲೇಮಿನ ಮೇಲೆ ನಿನ್ನ ಕೋಪಾಗ್ನಿಯನ್ನು ಹೊಯ್ದು, ಇಸ್ರಾಯೇಲರಲ್ಲಿ ಉಳಿದವರನ್ನೆಲ್ಲಾ ನಾಶಮಾಡುವಿಯಾ?” ಎಂದು ಮೊರೆಯಿಟ್ಟೆನು.
Et pendant qu'ils frappaient, je tombai la face contre terre, et je dis: Hélas! Seigneur, détruisez-vous les restes d'Israël, en répandant votre colère sur Jérusalem?
9 ೯ ಆತನು ನನಗೆ, “ಇಸ್ರಾಯೇಲ್ ಮತ್ತು ಯೆಹೂದ ವಂಶದವರ ಅಧರ್ಮವು ಅತ್ಯಂತವಾಗಿದೆ; ದೇಶವು ರಕ್ತಪೂರ್ಣವಾಗಿದೆ, ಪಟ್ಟಣವು ಅನ್ಯಾಯಭರಿತವಾಗಿದೆ; ಆ ವಂಶದವರು, ‘ನಮ್ಮ ದೇಶವನ್ನು ಯೆಹೋವನು ಬಿಟ್ಟುಬಿಟ್ಟಿದ್ದಾನೆ, ಯೆಹೋವನು ನೋಡುವುದಿಲ್ಲ’ ಎಂಬುದಾಗಿ ಮಾತನಾಡಿಕೊಳ್ಳುತ್ತಿದ್ದಾರೆ.
Et il me dit: L'iniquité de la maison d'Israël et de Juda a beaucoup, beaucoup grandi, parce que la terre regorge d'étrangers, et que la ville regorge de crimes et d'impuretés; car ils ont dit: Le Seigneur a délaissé la terre, le Seigneur ne nous voit pas.
10 ೧೦ ನಾನಂತು, ಅವರನ್ನು ಕಟಾಕ್ಷಿಸುವುದಿಲ್ಲ, ಉಳಿಸುವುದಿಲ್ಲ, ಅವರ ದುರ್ನಡತೆಯನ್ನು ಅವರ ತಲೆಗೆ ಕಟ್ಟುವೆನು” ಎಂದು ಹೇಳಿದನು.
Et mon œil sera sans pitié, et je serai sans miséricorde, et je fais retomber leurs voies sur leurs têtes.
11 ೧೧ ಕೂಡಲೆ ನಾರಿನ ಬಟ್ಟೆಯನ್ನು ಹೊದ್ದುಕೊಂಡು ಮಸಿಕೊಂಬನ್ನು ನಡುವಿಗೆ ಕಟ್ಟಿಕೊಂಡಿರುವ ಪುರುಷನು, “ನಿನ್ನ ಅಪ್ಪಣೆಯಂತೆಯೇ ಮಾಡಿದ್ದೇನೆ” ಎಂದು ಅರಿಕೆಮಾಡಿದನು.
Et l'homme revêtu d'une robe traînante, avec une ceinture sur les reins, prit la parole, et dit: J'ai fait ce que vous m'avez commandé.