< ಯೆಹೆಜ್ಕೇಲನು 48 >
1 ೧ ಹಂಚುವಿಕೆಯನ್ನು ಅನುಸರಿಸಿ ಕುಲಗಳ ಹೆಸರುಗಳು ಇವೇ. ದೇಶದ ಉತ್ತರದಲ್ಲಿ ಹಮಾತ್ ಸೀಮೆಯ ಹತ್ತಿರ ದಾನ್ ಕುಲಕ್ಕೆ ಒಂದು ಭಾಗವಿದೆ. ಅದರ ಉತ್ತರ ಮೇರೆಯು ಹೆತ್ಲೋನಿನ ದಾರಿಯ ಪಕ್ಕದಲ್ಲಿ ಹೊರಟು, ಹಮಾತಿನ ದಾರಿಯನ್ನು ದಾಟಿ, ದಮಸ್ಕದ ಮೇರೆಯಲ್ಲಿರುವ ಹಚರ್ ಏನಾನಿನವರೆಗೆ ಹಬ್ಬುವುದು. ಅದರ ಕಡೆಗಳು ದೇಶದ ಪೂರ್ವ, ಪಶ್ಚಿಮಗಳ ಮೇರೆಗಳ ತನಕ ಚಾಚಿಕೊಂಡಿರುವವು.
कुलहरूका नाम यी नै हुन् । दानको कुलले देशको एक भाग पाउनेछ । त्यसको सिमाना इस्राएलको उत्तरी सिमाना भएर हेतलोन र लेबो-हमात हुँदै जानेछ । त्यसको सिमाना हसर-एनानसम्म र उत्तरमा दमस्कसको सिमाना र त्यसपछि हमातसम्म जानेछ । दानको सिमाना पूर्वदेखि महासमुद्रसम्म जानेछ ।
2 ೨ ದಾನಿನ ದಕ್ಷಿಣ ದಿಕ್ಕಿನ ಮೇರೆಯ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ಆಶೇರಿಗೆ ಒಂದು ಪಾಲು.
दानको सिमानासँग जोडिएर, पूर्वदेखि पश्चिमसम्म, आशेरले एक भाग पाउनेछ ।
3 ೩ ಆಶೇರಿನ ಮೇರೆಯ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ನಫ್ತಾಲಿಗೆ ಒಂದು ಪಾಲು.
आशेरको सिमानासँग जोडिएर, पूर्वदेखि पश्चिमसम्म, नप्तालीले एक भाग पाउनेछ ।
4 ೪ ನಫ್ತಾಲಿಯ ಮೇರೆಯ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ಮನಸ್ಸೆಗೆ ಒಂದು ಪಾಲು.
नाप्तालीको सिमानासँग जोडिएर, पूर्वदेखि पश्चिमसम्म, मनश्शेले एक भाग पाउनेछ ।
5 ೫ ಮನಸ್ಸೆಯ ಮೇರೆಯ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ಎಫ್ರಾಯೀಮಿಗೆ ಒಂದು ಪಾಲು.
मनश्शेको सिमानासँग जोडिएर, पूर्वदेखि पश्चिमसम्म, एफ्राइमले एक भाग पाउनेछ ।
6 ೬ ಎಫ್ರಾಯೀಮಿನ ಮೇರೆಯ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ರೂಬೇನಿಗೆ ಒಂದು ಪಾಲು.
एफ्राइमको सिमानासँग जोडिएर, पूर्वदेखि पश्चिमसम्म, रूबेनले एक भाग पाउनेछ ।
7 ೭ ರೂಬೇನಿನ ಮೇರೆಯ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ಯೆಹೂದಕ್ಕೆ ಒಂದು ಪಾಲು.
रूबेनको सिमानासँग जोडिएर, पूर्वदेखि पश्चिमसम्म, यहूदाले एक भाग पाउनेछ ।
8 ೮ ಯೆಹೂದದ ಮೇರೆಯ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ನೀವು ಮೀಸಲಾಗಿ ಸಮರ್ಪಿಸುವ ಪಾಲು ಇರುವುದು. ಅದರ ಅಗಲವು ಇಪ್ಪತ್ತೈದು ಸಾವಿರ ಮೊಳ ಉದ್ದವು, ಪೂರ್ವದಿಂದ ಪಶ್ಚಿಮ ಕುಲಗಳ ಪಾಲುಗಳ ಉದ್ದಕ್ಕೆ ಸಮಾನವಾಗಿದೆ. ಅದರ ಮಧ್ಯದಲ್ಲಿ ಪವಿತ್ರಾಲಯವಿರುವುದು.
तिमीहरूले पवित्र रूपमा अलग गर्नुपर्ने जमिन यहूदाको सिमानासँग जोडिएको हुनेछ र त्यो पूर्वदेखि पश्चिमसम्म जान्छ । त्यो पच्चीस हजार हात चौडा हुनेछ । त्यसको लमाइ एउटा कुलको पूर्वदेखि पश्चिमसम्मको भागसँग बराबर हुनेछ, र मन्दिरचाहिं त्यसको बिचमा हुनेछ ।
9 ೯ ನೀವು ಮೀಸಲು ಭೂಮಿಯಲ್ಲಿ ಯೆಹೋವನಿಗೆ ವಿಶೇಷವಾದ ಮೀಸಲಾಗಿ ಸಮರ್ಪಿಸುವ ಪಾಲಿನ ಉದ್ದವು ಇಪ್ಪತ್ತೈದು ಸಾವಿರ ಮೊಳವು ಮತ್ತು ಅಗಲವು ಹತ್ತು ಸಾವಿರ ಮೊಳವಾಗಿದೆ.
तिमीहरूले परमप्रभुको निम्ति पवित्र रूपमा अलग गर्ने यो जमिन पच्चीस हजार हात लामो र दश हजार हात चौडा हुनेछ ।
10 ೧೦ ಮೀಸಲಾದ ಆ ಪವಿತ್ರ ಕ್ಷೇತ್ರವು ಯಾಜಕರಿಗೆ ಸಲ್ಲತಕ್ಕದ್ದು. ಉತ್ತರಕ್ಕೆ ಅದರ ಉದ್ದವು ಇಪ್ಪತ್ತೈದು ಸಾವಿರ ಮೊಳವು, ಪಶ್ಚಿಮಕ್ಕೆ ಹತ್ತು ಸಾವಿರ ಮೊಳ ಅಗಲವು, ದಕ್ಷಿಣಕ್ಕೆ ಇಪ್ಪತ್ತೈದು ಸಾವಿರ ಮೊಳ ಉದ್ದವಾಗಿದೆ. ಅದರ ಮಧ್ಯದಲ್ಲಿ ಯೆಹೋವನ ಪವಿತ್ರಾಲಯವಿರುವುದು.
पवित्र रूपमा अलग यो जमिनको काम यस्तो हुनेछ: पुजारीहरूका लागि उत्तर भागमा पच्चीस हजार हात लामो, पश्चिममा दश हजार हात चौडा, पूर्वमा दश हजार हात चौडा र दक्षिणमा पच्चीस हजार हात लामो जमिन हुनेछ । त्यसको बिचमा परमप्रभुको पवित्र ठाउँ हुनेछ ।
11 ೧೧ ಆ ಕ್ಷೇತ್ರವು ಚಾದೋಕನ ಸಂತಾನದವರಲ್ಲಿ ನನಗಾಗಿ ಪ್ರತಿಷ್ಠಿತರೂ, ನನ್ನ ಆಲಯದ ಪಾರುಪತ್ಯವನ್ನು ನೆರವೇರಿಸಿದವರೂ ಆದ ಯಾಜಕರಿಗೇ ಸೇರತಕ್ಕದ್ದು. ಇಸ್ರಾಯೇಲರು ನನ್ನನ್ನು ತೊರೆದಾಗ, ಲೇವಿಯರೂ ತೊರೆದಂತೆ ಇವರು ತೊರೆಯಲಿಲ್ಲ.
सादोक वंशका पुजारीहरूका निम्ति यो पवित्र रूपमा अलग गरिनेछ, जसले विश्वस्ततासाथ मेरो सेवा गरेका छन् र इस्राएलका मानिसहरू अर्थात् लेवीहरूझैं तिनीहरू बरालिर गएनन् ।
12 ೧೨ ಲೇವಿಯರ ಪಾಲಿನ ಮೇರೆಯ ಪಕ್ಕದಲ್ಲಿರುವ ಆ ಕ್ಷೇತ್ರವು ಅತಿ ಪವಿತ್ರವೂ ದೇಶದೊಳಗೆ ಮೀಸಲೂ ಆಗಿ ಯಾಜಕರಿಗೆ ಸೇರತಕ್ಕದ್ದಾಗಿದೆ.
तिनीहरूका निम्ति यो अति पवित्र रूपमा जमिनको एक भाग दानको रूपमा अलग हुनेछ । यो लेवीहरूको सिमानालाई छुनेछ ।
13 ೧೩ ಮತ್ತು ಇಪ್ಪತ್ತೈದು ಸಾವಿರ ಮೊಳ ಉದ್ದದ ಮತ್ತು ಹತ್ತು ಸಾವಿರ ಮೊಳ ಅಗಲದ ಒಂದು ಪಾಲು ಯಾಜಕರ ಪಾಲಿನ ಮೇರೆಯ ಪಕ್ಕದಲ್ಲಿ ಲೇವಿಯರಿಗೆ ಸಲ್ಲತಕ್ಕದ್ದು. ಈ ಎರಡು ಪಾಲುಗಳ ಒಟ್ಟು ಅಳತೆ ಎಷ್ಟೆಂದರೆ ಉದ್ದವು ಇಪ್ಪತ್ತೈದು ಸಾವಿರ ಮೊಳ ಮತ್ತು ಅಗಲವು ಇಪ್ಪತ್ತು ಸಾವಿರ ಮೊಳವಾಗಿದೆ.
पुजारीहरूको जमिनको सिमानासँग जोडिएर लेवीहरूको जमिन पच्चीस हजार हात लामो र दश हजार हात चौडा हुनेछ । यी दुई जमिनका सम्पूर्ण क्षेत्र पच्चीस हजार हात लामो र बीस हजार हात चौडा हुनेछ ।
14 ೧೪ ಆ ಕ್ಷೇತ್ರವು ಯೆಹೋವನಿಗೆ ಮೀಸಲಾದುದರಿಂದ ಅದರಲ್ಲಿ ಯಾವ ಭಾಗವನ್ನೂ ಮಾರಬಾರದು ಮತ್ತು ಬದಲಾಯಿಸಲೂಬಾರದು. ದೇಶದ ಆ ಪ್ರಥಮ ಫಲವನ್ನು ಯಾರಿಗೂ ಕೊಡಬಾರದು. ಏಕೆಂದರೆ ಅದು ಯೆಹೋವನಿಗೆ ಪರಿಶುದ್ಧವಾಗಿದೆ.
तिनीहरूले त्यो बेच्नु वा सट्नु हुँदैन । इस्राएलको जमिनको यी पहिलो फलहरूमध्ये एउटा पनि यी सिमानबाट छुट्याउनुहुँदैन, किनकि यो सबै परमप्रभुको निम्ति पवित्र छ ।
15 ೧೫ ಇಪ್ಪತ್ತೈದು ಸಾವಿರ ಮೊಳ ಉದ್ದದ ಆ ಕ್ಷೇತ್ರದ ಪಕ್ಕದಲ್ಲಿ ಮೀಸಲು ಪಾಲಿನ ಒಟ್ಟು ಅಳತೆಯಲ್ಲಿ ಉಳಿದ ಐದು ಸಾವಿರ ಮೊಳ ಅಗಲದ ಭೂಮಿಯು ಮೀಸಲಿಲ್ಲವೆಂದೆಣಿಸಿ ಪಟ್ಟಣಕ್ಕೆ ಅಂದರೆ ಜನರ ನಿವಾಸಕ್ಕೂ ಮತ್ತು ಸುತ್ತಣ ಪ್ರದೇಶಕ್ಕೂ ಪ್ರತ್ಯೇಕಿಸಲ್ಪಡಲಿ. ಪಟ್ಟಣವು ಅದರ ಮಧ್ಯದಲ್ಲಿರಲಿ.
बाँकी जग्गामा, पाँच हजार हात चौडा र पच्चीस हजार हात लामो भागचाहिं, सहर, घरहरू र खर्कको जमिनको रूपमा प्रयोग हुनेछ । सहरचाहिं त्यसको बिचमा हुनेछ ।
16 ೧೬ ಪಟ್ಟಣದ ಅಳತೆಯು ಹೀಗಿರಬೇಕು: ಉತ್ತರದ ಕಡೆಯಲ್ಲಿ ನಾಲ್ಕು ಸಾವಿರದ ಐನೂರು ಮೊಳವು, ದಕ್ಷಿಣದ ಕಡೆಯಲ್ಲಿ ನಾಲ್ಕು ಸಾವಿರದ ಐನೂರು ಮೊಳವು; ಪೂರ್ವದ ಕಡೆಯಲ್ಲಿ ನಾಲ್ಕು ಸಾವಿರದ ಐನೂರು ಮೊಳವು ಮತ್ತು ಪಶ್ಚಿಮಕ್ಕೆ ನಾಲ್ಕು ಸಾವಿರದ ಐನೂರು ಮೊಳವು ಇರಬೇಕು.
सहरको नाप यी हुनेछन्: उत्तरतिर ४,५०० हात लामो हुनेछ । दक्षिणतिर ४,५०० हात लामो हुनेछ । पूर्वतिर ४,५०० हात लामो हुनेछ । अनि पश्चिमतिर ४,५०० हात लामो हुनेछ ।
17 ೧೭ ಪಟ್ಟಣಕ್ಕೆ ಸುತ್ತಣ ಪ್ರದೇಶವಿರಬೇಕು. ಅದರ ಅಗಲವು ಉತ್ತರದಲ್ಲಿ ಇನ್ನೂರೈವತ್ತು ಮೊಳವು, ದಕ್ಷಿಣದಲ್ಲಿ ಇನ್ನೂರೈವತ್ತು ಮೊಳವು, ಪೂರ್ವದಲ್ಲಿ ಇನ್ನೂರೈವತ್ತು ಮೊಳವು ಮತ್ತು ಪಶ್ಚಿಮದಲ್ಲಿ ಇನ್ನೂರೈವತ್ತು ಮೊಳವು ಇರಬೇಕು.
सहरको निम्ति उत्तरतिर एउटा खर्क हुनेछ । त्यो उत्तरतिर २५० हात, दक्षिणतिर २५० हात, पूर्वतिर २५० हात, र पश्चिमतिर २५० हात हुनेछ ।
18 ೧೮ ಪಟ್ಟಣವನ್ನು ಹೊರತುಪಡಿಸಿ, ಅದಕ್ಕೆ ಒಳಪಟ್ಟ ಉಳಿದ ಭೂಮಿಯ ಉದ್ದವು ಮೀಸಲಾದ ಪವಿತ್ರ ಕ್ಷೇತ್ರದ ಪಕ್ಕದಲ್ಲಿ ಪೂರ್ವದ ಕಡೆಗೆ ಹತ್ತು ಸಾವಿರ ಮೊಳವು, ಪಶ್ಚಿಮದ ಕಡೆಗೆ ಹತ್ತು ಸಾವಿರ ಮೊಳವು ಆಗಿರಬೇಕು. ಆ ಭೂಮಿಯು ಮೀಸಲಾದ ಪವಿತ್ರ ಕ್ಷೇತ್ರದ ಮೇರೆಯನ್ನು ಅನುಸರಿಸುವುದು. ಅದರ ಉತ್ಪತ್ತಿಯು ಆ ಪಟ್ಟಣದ ನಿವಾಸಿಗಳಿಗೆ ಆಹಾರವಾಗುವುದು.
पवित्र रूपमा अलग गर्ने जमिनको बाँकी क्षेत्र पूर्वमा दश हजार हात र पश्चिममा दश हजार हात हुनेछ । त्यो अलग गरिएको पवित्र जमिनको सिमानसँग जोडिएर जानेछ, र त्यसको उब्जनी त्यस सहरमा काम गर्ने मानिसहरूका निम्ति भोजन हुनेछ ।
19 ೧೯ ಅವರು ಇಸ್ರಾಯೇಲಿನ ಯಾವ ಕುಲಕ್ಕೆ ಸೇರಿದ್ದರೂ, ಪಟ್ಟಣದಲ್ಲಿ ವಾಸಿಸುತ್ತಾ ಆ ಭೂಮಿಯನ್ನು ಬಿತ್ತುವರು.
त्यस सहरमा काम गर्ने मानिसहरू अर्थात् इस्राएलका सबै कुलका मानिसहरूले त्यो जमिनमा खेती गर्नेछन् ।
20 ೨೦ ಮೀಸಲಾದ ಪೂರ್ಣ ಕ್ಷೇತ್ರದ ಉದ್ದ ಇಪ್ಪತ್ತೈದು ಸಾವಿರ ಮೊಳವು, ಅಗಲ ಇಪ್ಪತ್ತೈದು ಸಾವಿರ ಮೊಳ ಮತ್ತು ನೀವು ಮೀಸಲಾಗಿ ಅರ್ಪಿಸುವ ಪವಿತ್ರ ಕ್ಷೇತ್ರವು ಪಟ್ಟಣಕ್ಕೆ ಒಳಪಟ್ಟು, ಭೂಮಿ ಸಹಿತವಾಗಿ ಚಚ್ಚೌಕವಾಗಿರಬೇಕು.
पवित्र रूपमा अलग गरिएको सबै जमिनको नाप पच्चीस हजार लामो र पच्चीस हजार चौडा हुनेछ । यसरी सहरको लागि छुट्याइएको जमिनसँग जोडिएको जमिनलाई तिमीहरूले पवित्र रूपमा अलग गर्नेछौ ।
21 ೨೧ ಮೀಸಲಾದ ಪವಿತ್ರ ಕ್ಷೇತ್ರದ ಮತ್ತು ಪಟ್ಟಣಕ್ಕೆ ಒಳಪಟ್ಟ ಭೂಮಿಯ ಎರಡು ಕಡೆಗಳಲ್ಲಿ ಉಳಿದ ಭೂಮಿಯು ಅರಸನ ಪಾಲಾಗಿರಲಿ. ಆ ಪಾಲು ಮೀಸಲಾದ ಕ್ಷೇತ್ರದ ಪೂರ್ವದ ಕಡೆಗೆ ಇಪ್ಪತ್ತೈದು ಸಾವಿರ ಮೊಳ ಉದ್ದವು, ಮೇರೆಯ ಪಕ್ಕದಲ್ಲಿಯ ಪಶ್ಚಿಮದ ಕಡೆಗೆ ಇಪ್ಪತ್ತೈದು ಸಾವಿರ ಮೊಳ ಉದ್ದವು, ಮೇರೆಯ ಪಕ್ಕದಲ್ಲಿಯೂ ಕುಲಗಳ ಪಾಲಿನಷ್ಟು ಉದ್ದವಾಗಿ ಹಬ್ಬುವುದು; ಅದು ಪ್ರಭುವಿಗೆ ಸೇರತಕ್ಕದ್ದು. ಪವಿತ್ರಾಲಯವೂ ಮೀಸಲಾದ ಪವಿತ್ರ ಕ್ಷೇತ್ರದ ಮಧ್ಯದಲ್ಲಿರುವುದು.
पवित्र रूपमा अलग जमिन र सहरको क्षेत्रको दुवैपट्टिको जमिनको बाँकी भाग शासकको निम्ति हुनेछ । पूर्वतिर शासकको जमिनको क्षेत्र पवित्र रूपमा अलग जमिनको सिमानाबाट पूर्वी सिमानासम्म पच्चीस हजार हात हुनेछ र पश्चिममा पश्चिमी सिमानासम्म पच्चीस हजार हात हुनेछ । बिचमा पवित्र रूपमा अलग जमिन हुनेछ, र त्यसको बिचमा पवित्र मन्दिर हुनेछ ।
22 ೨೨ ಅರಸನ ಪಾಲಿನ ಎರಡು ಭಾಗಗಳ ಮಧ್ಯದಲ್ಲಿ ಲೇವಿಯರ ಪಾಲಿನ (ಬಡಗಣ) ಮೇರೆಯಿಂದ ಪಟ್ಟಣಕ್ಕೆ ಒಳಪಟ್ಟ ಭೂಮಿಯ (ತೆಂಕಣ) ಮೇರೆಯ ತನಕ ಅಂದರೆ ಯೆಹೂದದ (ತೆಂಕಣ) ಮೇರೆಯಿಂದ ಬೆನ್ಯಾಮೀನಿನ (ಬಡಗಣ) ಮೇರೆಯವರೆಗೆ ಅರಸನ ಪಾಲು ಹರಡಿರುವುದು.
लेवीहरूका जमिनदेखि फैलेको जमिन र त्यसको बीचको सहरको क्षेत्र शासकको निम्ति हुनेछ । त्यो यहूदाको सिमाना र बेन्यामीनको सिमानाको बिचमा हुनेछ । यो जमिन शासकको निम्ति हुनेछ ।
23 ೨೩ ಉಳಿದ ಕುಲಗಳ ಪಾಲಿನ ಕ್ರಮವೇನೆಂದರೆ, ಪೂರ್ವದಿಂದ ಪಶ್ಚಿಮದ ತನಕ ಬೆನ್ಯಾಮೀನಿಗೆ ಒಂದು ಪಾಲು.
बाँकी रहेका कुलहरूका बारेमा तिनीहरूका भाग पनि पूर्व देखि पश्चिमसम्म रहनेछ । बेन्यामीनले एउटा भाग पाउनेछ ।
24 ೨೪ ಬೆನ್ಯಾಮೀನಿನ ಮೇರೆಯ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ಸಿಮೆಯೋನಿಗೆ ಒಂದು ಪಾಲು.
बेन्यामीनको सिमानासँग जोडिएर, पूर्वदेखि पश्चिमसम्म, शिमियोनले एक भाग पाउनेछ ।
25 ೨೫ ಸಿಮೆಯೋನಿನ ಮೇರೆಯ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ಇಸ್ಸಾಕಾರಿಗೆ ಒಂದು ಪಾಲು.
शिमियोनको सिमानासँग जोडिएर, पूर्वदेखि पश्चिमसम्म, इस्साखारले एक भाग पाउनेछ ।
26 ೨೬ ಇಸ್ಸಾಕಾರಿನ ಮೇರೆಯ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ಜೆಬುಲೂನಿಗೆ ಒಂದು ಪಾಲು.
इस्साखारको सिमानासँग जोडिएर, पूर्वदेखि पश्चिमसम्म, जबूलूनले एक भाग पाउनेछ ।
27 ೨೭ ಜೆಬುಲೂನಿನ ಮೇರೆಯ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ಗಾದಿಗೆ ಒಂದು ಪಾಲು.
जबूलूनको सिमानाको दक्षिणतिर, पूर्वदेखि पश्चिमसम्म, एक भाग गादको जमिन हुनेछ ।
28 ೨೮ ಗಾದನ್ ಮೇರೆಯು ದಕ್ಷಿಣದ ಕಡೆಯಲ್ಲಿ, ದಕ್ಷಿಣದ ಮೇರೆಯು ತಾಮಾರಿನಿಂದ ಹೊರಟು ಮೇರೀಬತ್ ಕಾದೇಶಿನ ಹಳ್ಳವನ್ನು ದಾಟಿ, (ಐಗುಪ್ತದ ಮುಂದಣ) ನದಿಯ ಮಾರ್ಗವಾಗಿ ಮಹಾ ಸಮುದ್ರಕ್ಕೆ ಸೇರುವುದು.
गादको दक्षिणी सिमाना तामारदेखि मेरीबा-कादेशका पानीहरूसम्म, र मिश्रदेशका खोलाको छेउ-छेउ हुँदै महासमुद्रसम्म फैलिनेछ ।
29 ೨೯ ನೀವು ಇಸ್ರಾಯೇಲಿನ ಕುಲಗಳಿಗೆ ಸ್ವತ್ತಾಗಿ ಹಂಚಿ ಕೊಡಬೇಕಾದ ದೇಶವು ಇದೇ. ಕುಲಗಳ ಪಾಲುಗಳು ಇವೇ. ಇದು ಕರ್ತನಾದ ಯೆಹೋವನ ನುಡಿ.
जमिन यही हो जसको निम्ति तिमीहरूले चिठ्ठा हाल्नेछौ । यो इस्राएलका कुलहरूका निम्ति उत्तराधिकार हुनेछ । तिनीहरूका भाग यी नै हुन् । यो परमप्रभु परमेश्वरको घोषणा हो ।
30 ೩೦ ಪಟ್ಟಣದ ನಿರ್ಗಮನ ಹೀಗಿರಬೇಕು: ಉತ್ತರದ ಕಡೆಯ ಉದ್ದ ನಾಲ್ಕು ಸಾವಿರದ ಐನೂರು ಮೊಳವಾಗಿದೆ.
सहरका बाहिर निस्कने ढोकाहरू यी नै हुन्: उत्तरतिर ४,५०० हात लामो हुनेछ,
31 ೩೧ ಪಟ್ಟಣದ ಬಾಗಿಲುಗಳಿಗೆ ಇಸ್ರಾಯೇಲಿನ ಕುಲಗಳ ಆಯಾ ಹೆಸರುಗಳು ಇರಲಿ; ಉತ್ತರಕ್ಕೆ ಮೂರು ಬಾಗಿಲುಗಳು; ಒಂದು ರೂಬೇನ್ ಬಾಗಿಲು, ಇನ್ನೊಂದು ಯೆಹೂದ ಬಾಗಿಲು, ಮತ್ತೊಂದು ಲೇವಿಯರ ಬಾಗಿಲು.
इस्राएलका कुलहरूका नाउँमा तिनवटा ढोकाहरू हुनेछन्: एउटा ढोका रूबेन, अर्को ढोका यहूदा र अर्को ढोका लेवीको लागि हुनेछ ।
32 ೩೨ ಪೂರ್ವದ ಕಡೆಯ ಉದ್ದವು ನಾಲ್ಕು ಸಾವಿರದ ಇನ್ನೂರು ಮೊಳವಾಗಿದೆ; ಅದರಲ್ಲಿ ಮೂರು ಬಾಗಿಲುಗಳು; ಒಂದು ಯೋಸೇಫನ ಬಾಗಿಲು; ಇನ್ನೊಂದು ಬೆನ್ಯಾಮೀನನ ಬಾಗಿಲು, ಮತ್ತೊಂದು ದಾನಿನ ಬಾಗಿಲು.
पूर्वतिर ४,५०० हात लामो हुनेछ, जसमा तिनवटा ढोकाहरू हुनेछन्: एउटा ढोका योसेफ, अर्को ढोका बेन्यामीन, र अर्को ढोका दानको लागि हुनेछ।
33 ೩೩ ದಕ್ಷಿಣದ ಕಡೆಯಲ್ಲಿ ಉದ್ದವು ನಾಲ್ಕು ಸಾವಿರದ ಐನೂರು ಮೊಳವು; ಅದರಲ್ಲಿ ಮೂರು ಬಾಗಿಲುಗಳು; ಒಂದು ಸಿಮೆಯೋನನ ಬಾಗಿಲು, ಇನ್ನೊಂದು ಇಸ್ಸಾಕಾರನ ಬಾಗಿಲು, ಮತ್ತೊಂದು ಜೆಬುಲೂನಿನ ಬಾಗಿಲು.
दक्षिणतिर ४,५०० हात लामो हुनेछ, जसमा तिनवटा ढोकाहरू हुनेछन्: एउटा ढोका शिमियोन, अर्को ढोका इस्साखार, र अर्को ढोका जबूलूनको लागि हुनेछ ।
34 ೩೪ ಪಶ್ಚಿಮದ ಗಡಿಯ ಉದ್ದವು ನಾಲ್ಕು ಸಾವಿರದ ಐನೂರು ಮೊಳವು; ಅದರಲ್ಲಿ ಮೂರು ಬಾಗಿಲುಗಳು; ಒಂದು ಗಾದಿನ ಬಾಗಿಲು, ಇನ್ನೊಂದು ಆಶೇರಿನ ಬಾಗಿಲು, ಮತ್ತೊಂದು ನಫ್ತಾಲಿನ ಬಾಗಿಲು.
पश्चिमतिर ४,५०० हात लामो हुनेछ, जसमा तिनवटा ढोकाहरू हुनेछन्: एउटा ढोका गाद, अर्को ढोका आशेर, र अर्को ढोका नाप्तालीको लागि हुनेछ ।
35 ೩೫ ಪಟ್ಟಣದ ಸುತ್ತಳತೆಯು ಹದಿನೆಂಟು ಸಾವಿರ ಮೊಳವು; ಅದನ್ನು ನಿರ್ಮಿಸಿದ ದಿನದಿಂದ ಆ ಪಟ್ಟಣಕ್ಕೆ “ಯೆಹೋವನ ನೆಲೆ” ಎಂದು ಹೆಸರಾಗುವುದು.
सहरको वरिपरिको दुरी अठार हजार हात लामो हुनेछ । त्यस दिनदेखि त्यो सहरको नाउँ हुनेछ, “परमप्रभु त्यहाँ हुनुहुन्छ ।”