< ಯೆಹೆಜ್ಕೇಲನು 48 >

1 ಹಂಚುವಿಕೆಯನ್ನು ಅನುಸರಿಸಿ ಕುಲಗಳ ಹೆಸರುಗಳು ಇವೇ. ದೇಶದ ಉತ್ತರದಲ್ಲಿ ಹಮಾತ್ ಸೀಮೆಯ ಹತ್ತಿರ ದಾನ್ ಕುಲಕ್ಕೆ ಒಂದು ಭಾಗವಿದೆ. ಅದರ ಉತ್ತರ ಮೇರೆಯು ಹೆತ್ಲೋನಿನ ದಾರಿಯ ಪಕ್ಕದಲ್ಲಿ ಹೊರಟು, ಹಮಾತಿನ ದಾರಿಯನ್ನು ದಾಟಿ, ದಮಸ್ಕದ ಮೇರೆಯಲ್ಲಿರುವ ಹಚರ್ ಏನಾನಿನವರೆಗೆ ಹಬ್ಬುವುದು. ಅದರ ಕಡೆಗಳು ದೇಶದ ಪೂರ್ವ, ಪಶ್ಚಿಮಗಳ ಮೇರೆಗಳ ತನಕ ಚಾಚಿಕೊಂಡಿರುವವು.
וְאֵ֖לֶּה שְׁמ֣וֹת הַשְּׁבָטִ֑ים מִקְצֵ֣ה צָפ֡וֹנָה אֶל־יַ֣ד דֶּֽרֶךְ־חֶתְלֹ֣ן ׀ לְֽבוֹא־חֲמָ֡ת חֲצַ֣ר עֵינָן֩ גְּב֨וּל דַּמֶּ֤שֶׂק צָפ֙וֹנָה֙ אֶל־יַ֣ד חֲמָ֔ת וְהָיוּ־ל֧וֹ פְאַת־קָדִ֛ים הַיָּ֖ם דָּ֥ן אֶחָֽד׃
2 ದಾನಿನ ದಕ್ಷಿಣ ದಿಕ್ಕಿನ ಮೇರೆಯ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ಆಶೇರಿಗೆ ಒಂದು ಪಾಲು.
וְעַ֣ל ׀ גְּב֣וּל דָּ֗ן מִפְּאַ֥ת קָדִ֛ים עַד־פְּאַת־יָ֖מָּה אָשֵׁ֥ר אֶחָֽד׃
3 ಆಶೇರಿನ ಮೇರೆಯ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ನಫ್ತಾಲಿಗೆ ಒಂದು ಪಾಲು.
וְעַ֣ל ׀ גְּב֣וּל אָשֵׁ֗ר מִפְּאַ֥ת קָדִ֛ימָה וְעַד־פְּאַת־יָ֖מָּה נַפְתָּלִ֥י אֶחָֽד׃
4 ನಫ್ತಾಲಿಯ ಮೇರೆಯ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ಮನಸ್ಸೆಗೆ ಒಂದು ಪಾಲು.
וְעַ֣ל ׀ גְּב֣וּל נַפְתָּלִ֗י מִפְּאַ֥ת קָדִ֛מָה עַד־פְּאַת־יָ֖מָּה מְנַשֶּׁ֥ה אֶחָֽד׃
5 ಮನಸ್ಸೆಯ ಮೇರೆಯ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ಎಫ್ರಾಯೀಮಿಗೆ ಒಂದು ಪಾಲು.
וְעַ֣ל ׀ גְּב֣וּל מְנַשֶּׁ֗ה מִפְּאַ֥ת קָדִ֛מָה עַד־פְּאַת־יָ֖מָּה אֶפְרַ֥יִם אֶחָֽד׃
6 ಎಫ್ರಾಯೀಮಿನ ಮೇರೆಯ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ರೂಬೇನಿಗೆ ಒಂದು ಪಾಲು.
וְעַ֣ל ׀ גְּב֣וּל אֶפְרַ֗יִם מִפְּאַ֥ת קָדִ֛ים וְעַד־פְּאַת־יָ֖מָּה רְאוּבֵ֥ן אֶחָֽד׃
7 ರೂಬೇನಿನ ಮೇರೆಯ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ಯೆಹೂದಕ್ಕೆ ಒಂದು ಪಾಲು.
וְעַ֣ל ׀ גְּב֣וּל רְאוּבֵ֗ן מִפְּאַ֥ת קָדִ֛ים עַד־פְּאַת־יָ֖מָּה יְהוּדָ֥ה אֶחָֽד׃
8 ಯೆಹೂದದ ಮೇರೆಯ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ನೀವು ಮೀಸಲಾಗಿ ಸಮರ್ಪಿಸುವ ಪಾಲು ಇರುವುದು. ಅದರ ಅಗಲವು ಇಪ್ಪತ್ತೈದು ಸಾವಿರ ಮೊಳ ಉದ್ದವು, ಪೂರ್ವದಿಂದ ಪಶ್ಚಿಮ ಕುಲಗಳ ಪಾಲುಗಳ ಉದ್ದಕ್ಕೆ ಸಮಾನವಾಗಿದೆ. ಅದರ ಮಧ್ಯದಲ್ಲಿ ಪವಿತ್ರಾಲಯವಿರುವುದು.
וְעַל֙ גְּב֣וּל יְהוּדָ֔ה מִפְּאַ֥ת קָדִ֖ים עַד־פְּאַת־יָ֑מָּה תִּהְיֶ֣ה הַתְּרוּמָ֣ה אֲֽשֶׁר־תָּרִ֡ימוּ חֲמִשָּׁה֩ וְעֶשְׂרִ֨ים אֶ֜לֶף רֹ֗חַב וְאֹ֜רֶךְ כְּאַחַ֤ד הַחֲלָקִים֙ מִפְּאַ֤ת קָדִ֙ימָה֙ עַד־פְּאַת־יָ֔מָּה וְהָיָ֥ה הַמִּקְדָּ֖שׁ בְּתוֹכֽוֹ׃
9 ನೀವು ಮೀಸಲು ಭೂಮಿಯಲ್ಲಿ ಯೆಹೋವನಿಗೆ ವಿಶೇಷವಾದ ಮೀಸಲಾಗಿ ಸಮರ್ಪಿಸುವ ಪಾಲಿನ ಉದ್ದವು ಇಪ್ಪತ್ತೈದು ಸಾವಿರ ಮೊಳವು ಮತ್ತು ಅಗಲವು ಹತ್ತು ಸಾವಿರ ಮೊಳವಾಗಿದೆ.
הַתְּרוּמָ֕ה אֲשֶׁ֥ר תָּרִ֖ימוּ לַֽיהוָ֑ה אֹ֗רֶךְ חֲמִשָּׁ֤ה וְעֶשְׂרִים֙ אֶ֔לֶף וְרֹ֖חַב עֲשֶׂ֥רֶת אֲלָפִֽים׃
10 ೧೦ ಮೀಸಲಾದ ಆ ಪವಿತ್ರ ಕ್ಷೇತ್ರವು ಯಾಜಕರಿಗೆ ಸಲ್ಲತಕ್ಕದ್ದು. ಉತ್ತರಕ್ಕೆ ಅದರ ಉದ್ದವು ಇಪ್ಪತ್ತೈದು ಸಾವಿರ ಮೊಳವು, ಪಶ್ಚಿಮಕ್ಕೆ ಹತ್ತು ಸಾವಿರ ಮೊಳ ಅಗಲವು, ದಕ್ಷಿಣಕ್ಕೆ ಇಪ್ಪತ್ತೈದು ಸಾವಿರ ಮೊಳ ಉದ್ದವಾಗಿದೆ. ಅದರ ಮಧ್ಯದಲ್ಲಿ ಯೆಹೋವನ ಪವಿತ್ರಾಲಯವಿರುವುದು.
וּ֠לְאֵ֜לֶּה תִּהְיֶ֣ה תְרֽוּמַת־הַקֹּדֶשׁ֮ לַכֹּֽהֲנִים֒ צָפ֜וֹנָה חֲמִשָּׁ֧ה וְעֶשְׂרִ֣ים אֶ֗לֶף וְיָ֙מָּה֙ רֹ֚חַב עֲשֶׂ֣רֶת אֲלָפִ֔ים וְקָדִ֗ימָה רֹ֚חַב עֲשֶׂ֣רֶת אֲלָפִ֔ים וְנֶ֕גְבָּה אֹ֕רֶךְ חֲמִשָּׁ֥ה וְעֶשְׂרִ֖ים אָ֑לֶף וְהָיָ֥ה מִקְדַּשׁ־יְהוָ֖ה בְּתוֹכֽוֹ׃
11 ೧೧ ಆ ಕ್ಷೇತ್ರವು ಚಾದೋಕನ ಸಂತಾನದವರಲ್ಲಿ ನನಗಾಗಿ ಪ್ರತಿಷ್ಠಿತರೂ, ನನ್ನ ಆಲಯದ ಪಾರುಪತ್ಯವನ್ನು ನೆರವೇರಿಸಿದವರೂ ಆದ ಯಾಜಕರಿಗೇ ಸೇರತಕ್ಕದ್ದು. ಇಸ್ರಾಯೇಲರು ನನ್ನನ್ನು ತೊರೆದಾಗ, ಲೇವಿಯರೂ ತೊರೆದಂತೆ ಇವರು ತೊರೆಯಲಿಲ್ಲ.
לַכֹּהֲנִ֤ים הַֽמְקֻדָּשׁ֙ מִבְּנֵ֣י צָד֔וֹק אֲשֶׁ֥ר שָׁמְר֖וּ מִשְׁמַרְתִּ֑י אֲשֶׁ֣ר לֹֽא־תָע֗וּ בִּתְעוֹת֙ בְּנֵ֣י יִשְׂרָאֵ֔ל כַּאֲשֶׁ֥ר תָּע֖וּ הַלְוִיִּֽם׃ ס
12 ೧೨ ಲೇವಿಯರ ಪಾಲಿನ ಮೇರೆಯ ಪಕ್ಕದಲ್ಲಿರುವ ಆ ಕ್ಷೇತ್ರವು ಅತಿ ಪವಿತ್ರವೂ ದೇಶದೊಳಗೆ ಮೀಸಲೂ ಆಗಿ ಯಾಜಕರಿಗೆ ಸೇರತಕ್ಕದ್ದಾಗಿದೆ.
וְהָיְתָ֨ה לָהֶ֧ם תְּרוּמִיָּ֛ה מִתְּרוּמַ֥ת הָאָ֖רֶץ קֹ֣דֶשׁ קָדָשִׁ֑ים אֶל־גְּב֖וּל הַלְוִיִּֽם׃
13 ೧೩ ಮತ್ತು ಇಪ್ಪತ್ತೈದು ಸಾವಿರ ಮೊಳ ಉದ್ದದ ಮತ್ತು ಹತ್ತು ಸಾವಿರ ಮೊಳ ಅಗಲದ ಒಂದು ಪಾಲು ಯಾಜಕರ ಪಾಲಿನ ಮೇರೆಯ ಪಕ್ಕದಲ್ಲಿ ಲೇವಿಯರಿಗೆ ಸಲ್ಲತಕ್ಕದ್ದು. ಈ ಎರಡು ಪಾಲುಗಳ ಒಟ್ಟು ಅಳತೆ ಎಷ್ಟೆಂದರೆ ಉದ್ದವು ಇಪ್ಪತ್ತೈದು ಸಾವಿರ ಮೊಳ ಮತ್ತು ಅಗಲವು ಇಪ್ಪತ್ತು ಸಾವಿರ ಮೊಳವಾಗಿದೆ.
וְהַלְוִיִּ֗ם לְעֻמַּת֙ גְּב֣וּל הַכֹּהֲנִ֔ים חֲמִשָּׁ֨ה וְעֶשְׂרִ֥ים אֶ֙לֶף֙ אֹ֔רֶךְ וְרֹ֖חַב עֲשֶׂ֣רֶת אֲלָפִ֑ים כָּל־אֹ֗רֶךְ חֲמִשָּׁ֤ה וְעֶשְׂרִים֙ אֶ֔לֶף וְרֹ֖חַב עֲשֶׂ֥רֶת אֲלָפִֽים׃
14 ೧೪ ಆ ಕ್ಷೇತ್ರವು ಯೆಹೋವನಿಗೆ ಮೀಸಲಾದುದರಿಂದ ಅದರಲ್ಲಿ ಯಾವ ಭಾಗವನ್ನೂ ಮಾರಬಾರದು ಮತ್ತು ಬದಲಾಯಿಸಲೂಬಾರದು. ದೇಶದ ಆ ಪ್ರಥಮ ಫಲವನ್ನು ಯಾರಿಗೂ ಕೊಡಬಾರದು. ಏಕೆಂದರೆ ಅದು ಯೆಹೋವನಿಗೆ ಪರಿಶುದ್ಧವಾಗಿದೆ.
וְלֹא־יִמְכְּר֣וּ מִמֶּ֗נּוּ וְלֹ֥א יָמֵ֛ר וְלֹ֥א יַעֲבִ֖יר רֵאשִׁ֣ית הָאָ֑רֶץ כִּי־קֹ֖דֶשׁ לַיהוָֽה׃
15 ೧೫ ಇಪ್ಪತ್ತೈದು ಸಾವಿರ ಮೊಳ ಉದ್ದದ ಆ ಕ್ಷೇತ್ರದ ಪಕ್ಕದಲ್ಲಿ ಮೀಸಲು ಪಾಲಿನ ಒಟ್ಟು ಅಳತೆಯಲ್ಲಿ ಉಳಿದ ಐದು ಸಾವಿರ ಮೊಳ ಅಗಲದ ಭೂಮಿಯು ಮೀಸಲಿಲ್ಲವೆಂದೆಣಿಸಿ ಪಟ್ಟಣಕ್ಕೆ ಅಂದರೆ ಜನರ ನಿವಾಸಕ್ಕೂ ಮತ್ತು ಸುತ್ತಣ ಪ್ರದೇಶಕ್ಕೂ ಪ್ರತ್ಯೇಕಿಸಲ್ಪಡಲಿ. ಪಟ್ಟಣವು ಅದರ ಮಧ್ಯದಲ್ಲಿರಲಿ.
וַחֲמֵ֨שֶׁת אֲלָפִ֜ים הַנּוֹתָ֣ר בָּרֹ֗חַב עַל־פְּנֵ֨י חֲמִשָּׁ֤ה וְעֶשְׂרִים֙ אֶ֔לֶף חֹֽל־ה֣וּא לָעִ֔יר לְמוֹשָׁ֖ב וּלְמִגְרָ֑שׁ וְהָיְתָ֥ה הָעִ֖יר בְּתוֹכֽוֹ׃
16 ೧೬ ಪಟ್ಟಣದ ಅಳತೆಯು ಹೀಗಿರಬೇಕು: ಉತ್ತರದ ಕಡೆಯಲ್ಲಿ ನಾಲ್ಕು ಸಾವಿರದ ಐನೂರು ಮೊಳವು, ದಕ್ಷಿಣದ ಕಡೆಯಲ್ಲಿ ನಾಲ್ಕು ಸಾವಿರದ ಐನೂರು ಮೊಳವು; ಪೂರ್ವದ ಕಡೆಯಲ್ಲಿ ನಾಲ್ಕು ಸಾವಿರದ ಐನೂರು ಮೊಳವು ಮತ್ತು ಪಶ್ಚಿಮಕ್ಕೆ ನಾಲ್ಕು ಸಾವಿರದ ಐನೂರು ಮೊಳವು ಇರಬೇಕು.
וְאֵלֶּה֮ מִדּוֹתֶיהָ֒ פְּאַ֣ת צָפ֗וֹן חֲמֵ֤שׁ מֵאוֹת֙ וְאַרְבַּ֣עַת אֲלָפִ֔ים וּפְאַת־נֶ֕גֶב חֲמֵ֥שׁ חֲמֵשׁ מֵא֖וֹת וְאַרְבַּ֣עַת אֲלָפִ֑ים וּמִפְּאַ֣ת קָדִ֗ים חֲמֵ֤שׁ מֵאוֹת֙ וְאַרְבַּ֣עַת אֲלָפִ֔ים וּפְאַת־יָ֕מָּה חֲמֵ֥שׁ מֵא֖וֹת וְאַרְבַּ֥עַת אֲלָפִֽים׃
17 ೧೭ ಪಟ್ಟಣಕ್ಕೆ ಸುತ್ತಣ ಪ್ರದೇಶವಿರಬೇಕು. ಅದರ ಅಗಲವು ಉತ್ತರದಲ್ಲಿ ಇನ್ನೂರೈವತ್ತು ಮೊಳವು, ದಕ್ಷಿಣದಲ್ಲಿ ಇನ್ನೂರೈವತ್ತು ಮೊಳವು, ಪೂರ್ವದಲ್ಲಿ ಇನ್ನೂರೈವತ್ತು ಮೊಳವು ಮತ್ತು ಪಶ್ಚಿಮದಲ್ಲಿ ಇನ್ನೂರೈವತ್ತು ಮೊಳವು ಇರಬೇಕು.
וְהָיָ֣ה מִגְרָשׁ֮ לָעִיר֒ צָפ֙וֹנָה֙ חֲמִשִּׁ֣ים וּמָאתַ֔יִם וְנֶ֖גְבָּה חֲמִשִּׁ֣ים וּמָאתָ֑יִם וְקָדִ֙ימָה֙ חֲמִשִּׁ֣ים וּמָאתַ֔יִם וְיָ֖מָּה חֲמִשִּׁ֥ים וּמָאתָֽיִם׃
18 ೧೮ ಪಟ್ಟಣವನ್ನು ಹೊರತುಪಡಿಸಿ, ಅದಕ್ಕೆ ಒಳಪಟ್ಟ ಉಳಿದ ಭೂಮಿಯ ಉದ್ದವು ಮೀಸಲಾದ ಪವಿತ್ರ ಕ್ಷೇತ್ರದ ಪಕ್ಕದಲ್ಲಿ ಪೂರ್ವದ ಕಡೆಗೆ ಹತ್ತು ಸಾವಿರ ಮೊಳವು, ಪಶ್ಚಿಮದ ಕಡೆಗೆ ಹತ್ತು ಸಾವಿರ ಮೊಳವು ಆಗಿರಬೇಕು. ಆ ಭೂಮಿಯು ಮೀಸಲಾದ ಪವಿತ್ರ ಕ್ಷೇತ್ರದ ಮೇರೆಯನ್ನು ಅನುಸರಿಸುವುದು. ಅದರ ಉತ್ಪತ್ತಿಯು ಆ ಪಟ್ಟಣದ ನಿವಾಸಿಗಳಿಗೆ ಆಹಾರವಾಗುವುದು.
וְהַנּוֹתָ֨ר בָּאֹ֜רֶךְ לְעֻמַּ֣ת ׀ תְּרוּמַ֣ת הַקֹּ֗דֶשׁ עֲשֶׂ֨רֶת אֲלָפִ֤ים קָדִ֙ימָה֙ וַעֲשֶׂ֤רֶת אֲלָפִים֙ יָ֔מָּה וְהָיָ֕ה לְעֻמַּ֖ת תְּרוּמַ֣ת הַקֹּ֑דֶשׁ וְהָיְתָ֤ה תְבֽוּאָתוֹ֙ לְלֶ֔חֶם לְעֹבְדֵ֖י הָעִֽיר׃
19 ೧೯ ಅವರು ಇಸ್ರಾಯೇಲಿನ ಯಾವ ಕುಲಕ್ಕೆ ಸೇರಿದ್ದರೂ, ಪಟ್ಟಣದಲ್ಲಿ ವಾಸಿಸುತ್ತಾ ಆ ಭೂಮಿಯನ್ನು ಬಿತ್ತುವರು.
וְהָעֹבֵ֖ד הָעִ֑יר יַעַבְד֕וּהוּ מִכֹּ֖ל שִׁבְטֵ֥י יִשְׂרָאֵֽל׃
20 ೨೦ ಮೀಸಲಾದ ಪೂರ್ಣ ಕ್ಷೇತ್ರದ ಉದ್ದ ಇಪ್ಪತ್ತೈದು ಸಾವಿರ ಮೊಳವು, ಅಗಲ ಇಪ್ಪತ್ತೈದು ಸಾವಿರ ಮೊಳ ಮತ್ತು ನೀವು ಮೀಸಲಾಗಿ ಅರ್ಪಿಸುವ ಪವಿತ್ರ ಕ್ಷೇತ್ರವು ಪಟ್ಟಣಕ್ಕೆ ಒಳಪಟ್ಟು, ಭೂಮಿ ಸಹಿತವಾಗಿ ಚಚ್ಚೌಕವಾಗಿರಬೇಕು.
כָּל־הַתְּרוּמָ֗ה חֲמִשָּׁ֤ה וְעֶשְׂרִים֙ אֶ֔לֶף בַּחֲמִשָּׁ֥ה וְעֶשְׂרִ֖ים אָ֑לֶף רְבִיעִ֗ית תָּרִ֙ימוּ֙ אֶת־תְּרוּמַ֣ת הַקֹּ֔דֶשׁ אֶל־אֲחֻזַּ֖ת הָעִֽיר׃
21 ೨೧ ಮೀಸಲಾದ ಪವಿತ್ರ ಕ್ಷೇತ್ರದ ಮತ್ತು ಪಟ್ಟಣಕ್ಕೆ ಒಳಪಟ್ಟ ಭೂಮಿಯ ಎರಡು ಕಡೆಗಳಲ್ಲಿ ಉಳಿದ ಭೂಮಿಯು ಅರಸನ ಪಾಲಾಗಿರಲಿ. ಆ ಪಾಲು ಮೀಸಲಾದ ಕ್ಷೇತ್ರದ ಪೂರ್ವದ ಕಡೆಗೆ ಇಪ್ಪತ್ತೈದು ಸಾವಿರ ಮೊಳ ಉದ್ದವು, ಮೇರೆಯ ಪಕ್ಕದಲ್ಲಿಯ ಪಶ್ಚಿಮದ ಕಡೆಗೆ ಇಪ್ಪತ್ತೈದು ಸಾವಿರ ಮೊಳ ಉದ್ದವು, ಮೇರೆಯ ಪಕ್ಕದಲ್ಲಿಯೂ ಕುಲಗಳ ಪಾಲಿನಷ್ಟು ಉದ್ದವಾಗಿ ಹಬ್ಬುವುದು; ಅದು ಪ್ರಭುವಿಗೆ ಸೇರತಕ್ಕದ್ದು. ಪವಿತ್ರಾಲಯವೂ ಮೀಸಲಾದ ಪವಿತ್ರ ಕ್ಷೇತ್ರದ ಮಧ್ಯದಲ್ಲಿರುವುದು.
וְהַנּוֹתָ֣ר לַנָּשִׂ֣יא מִזֶּ֣ה ׀ וּמִזֶּ֣ה ׀ לִתְרֽוּמַת־הַקֹּ֣דֶשׁ וְלַאֲחֻזַּ֪ת הָעִ֟יר אֶל־פְּנֵ֣י חֲמִשָּׁה֩ וְעֶשְׂרִ֨ים אֶ֥לֶף ׀ תְּרוּמָה֮ עַד־גְּב֣וּל קָדִימָה֒ וְיָ֗מָּה עַל־פְּ֠נֵי חֲמִשָּׁ֨ה וְעֶשְׂרִ֥ים אֶ֙לֶף֙ עַל־גְּב֣וּל יָ֔מָּה לְעֻמַּ֥ת חֲלָקִ֖ים לַנָּשִׂ֑יא וְהָֽיְתָה֙ תְּרוּמַ֣ת הַקֹּ֔דֶשׁ וּמִקְדַּ֥שׁ הַבַּ֖יִת בְּתוֹכֽוֹ׃
22 ೨೨ ಅರಸನ ಪಾಲಿನ ಎರಡು ಭಾಗಗಳ ಮಧ್ಯದಲ್ಲಿ ಲೇವಿಯರ ಪಾಲಿನ (ಬಡಗಣ) ಮೇರೆಯಿಂದ ಪಟ್ಟಣಕ್ಕೆ ಒಳಪಟ್ಟ ಭೂಮಿಯ (ತೆಂಕಣ) ಮೇರೆಯ ತನಕ ಅಂದರೆ ಯೆಹೂದದ (ತೆಂಕಣ) ಮೇರೆಯಿಂದ ಬೆನ್ಯಾಮೀನಿನ (ಬಡಗಣ) ಮೇರೆಯವರೆಗೆ ಅರಸನ ಪಾಲು ಹರಡಿರುವುದು.
וּמֵאֲחֻזַּ֤ת הַלְוִיִּם֙ וּמֵאֲחֻזַּ֣ת הָעִ֔יר בְּת֛וֹךְ אֲשֶׁ֥ר לַנָּשִׂ֖יא יִֽהְיֶ֑ה בֵּ֣ין ׀ גְּב֣וּל יְהוּדָ֗ה וּבֵין֙ גְּב֣וּל בִּנְיָמִ֔ן לַנָּשִׂ֖יא יִהְיֶֽה׃
23 ೨೩ ಉಳಿದ ಕುಲಗಳ ಪಾಲಿನ ಕ್ರಮವೇನೆಂದರೆ, ಪೂರ್ವದಿಂದ ಪಶ್ಚಿಮದ ತನಕ ಬೆನ್ಯಾಮೀನಿಗೆ ಒಂದು ಪಾಲು.
וְיֶ֖תֶר הַשְּׁבָטִ֑ים מִפְּאַ֥ת קָדִ֛ימָה עַד־פְּאַת־יָ֖מָּה בִּנְיָמִ֥ן אֶחָֽד׃
24 ೨೪ ಬೆನ್ಯಾಮೀನಿನ ಮೇರೆಯ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ಸಿಮೆಯೋನಿಗೆ ಒಂದು ಪಾಲು.
וְעַ֣ל ׀ גְּב֣וּל בִּנְיָמִ֗ן מִפְּאַ֥ת קָדִ֛ימָה עַד־פְּאַת־יָ֖מָּה שִׁמְע֥וֹן אֶחָֽד׃
25 ೨೫ ಸಿಮೆಯೋನಿನ ಮೇರೆಯ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ಇಸ್ಸಾಕಾರಿಗೆ ಒಂದು ಪಾಲು.
וְעַ֣ל ׀ גְּב֣וּל שִׁמְע֗וֹן מִפְּאַ֥ת קָדִ֛ימָה עַד־פְּאַת־יָ֖מָּה יִשָׂשכָ֥ר אֶחָֽד׃
26 ೨೬ ಇಸ್ಸಾಕಾರಿನ ಮೇರೆಯ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ಜೆಬುಲೂನಿಗೆ ಒಂದು ಪಾಲು.
וְעַ֣ל ׀ גְּב֣וּל יִשָׂשכָ֗ר מִפְּאַ֥ת קָדִ֛ימָה עַד־פְּאַת־יָ֖מָּה זְבוּלֻ֥ן אֶחָֽד׃
27 ೨೭ ಜೆಬುಲೂನಿನ ಮೇರೆಯ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ಗಾದಿಗೆ ಒಂದು ಪಾಲು.
וְעַ֣ל ׀ גְּב֣וּל זְבוּלֻ֗ן מִפְּאַ֥ת קָדִ֛מָה עַד־פְּאַת־יָ֖מָּה גָּ֥ד אֶחָֽד׃
28 ೨೮ ಗಾದನ್ ಮೇರೆಯು ದಕ್ಷಿಣದ ಕಡೆಯಲ್ಲಿ, ದಕ್ಷಿಣದ ಮೇರೆಯು ತಾಮಾರಿನಿಂದ ಹೊರಟು ಮೇರೀಬತ್ ಕಾದೇಶಿನ ಹಳ್ಳವನ್ನು ದಾಟಿ, (ಐಗುಪ್ತದ ಮುಂದಣ) ನದಿಯ ಮಾರ್ಗವಾಗಿ ಮಹಾ ಸಮುದ್ರಕ್ಕೆ ಸೇರುವುದು.
וְעַל֙ גְּב֣וּל גָּ֔ד אֶל־פְּאַ֖ת נֶ֣גֶב תֵּימָ֑נָה וְהָיָ֨ה גְב֜וּל מִתָּמָ֗ר מֵ֚י מְרִיבַ֣ת קָדֵ֔שׁ נַחֲלָ֖ה עַל־הַיָּ֥ם הַגָּדֽוֹל׃
29 ೨೯ ನೀವು ಇಸ್ರಾಯೇಲಿನ ಕುಲಗಳಿಗೆ ಸ್ವತ್ತಾಗಿ ಹಂಚಿ ಕೊಡಬೇಕಾದ ದೇಶವು ಇದೇ. ಕುಲಗಳ ಪಾಲುಗಳು ಇವೇ. ಇದು ಕರ್ತನಾದ ಯೆಹೋವನ ನುಡಿ.
זֹ֥את הָאָ֛רֶץ אֲשֶׁר־תַּפִּ֥ילוּ מִֽנַּחֲלָ֖ה לְשִׁבְטֵ֣י יִשְׂרָאֵ֑ל וְאֵ֙לֶּה֙ מַחְלְקוֹתָ֔ם נְאֻ֖ם אֲדֹנָ֥י יְהוִֽה׃ פ
30 ೩೦ ಪಟ್ಟಣದ ನಿರ್ಗಮನ ಹೀಗಿರಬೇಕು: ಉತ್ತರದ ಕಡೆಯ ಉದ್ದ ನಾಲ್ಕು ಸಾವಿರದ ಐನೂರು ಮೊಳವಾಗಿದೆ.
וְאֵ֖לֶּה תּוֹצְאֹ֣ת הָעִ֑יר מִפְּאַ֣ת צָפ֔וֹן חֲמֵ֥שׁ מֵא֛וֹת וְאַרְבַּ֥עַת אֲלָפִ֖ים מִדָּֽה׃
31 ೩೧ ಪಟ್ಟಣದ ಬಾಗಿಲುಗಳಿಗೆ ಇಸ್ರಾಯೇಲಿನ ಕುಲಗಳ ಆಯಾ ಹೆಸರುಗಳು ಇರಲಿ; ಉತ್ತರಕ್ಕೆ ಮೂರು ಬಾಗಿಲುಗಳು; ಒಂದು ರೂಬೇನ್ ಬಾಗಿಲು, ಇನ್ನೊಂದು ಯೆಹೂದ ಬಾಗಿಲು, ಮತ್ತೊಂದು ಲೇವಿಯರ ಬಾಗಿಲು.
וְשַׁעֲרֵ֣י הָעִ֗יר עַל־שְׁמוֹת֙ שִׁבְטֵ֣י יִשְׂרָאֵ֔ל שְׁעָרִ֥ים שְׁלוֹשָׁ֖ה צָפ֑וֹנָה שַׁ֣עַר רְאוּבֵ֞ן אֶחָ֗ד שַׁ֤עַר יְהוּדָה֙ אֶחָ֔ד שַׁ֥עַר לֵוִ֖י אֶחָֽד׃
32 ೩೨ ಪೂರ್ವದ ಕಡೆಯ ಉದ್ದವು ನಾಲ್ಕು ಸಾವಿರದ ಇನ್ನೂರು ಮೊಳವಾಗಿದೆ; ಅದರಲ್ಲಿ ಮೂರು ಬಾಗಿಲುಗಳು; ಒಂದು ಯೋಸೇಫನ ಬಾಗಿಲು; ಇನ್ನೊಂದು ಬೆನ್ಯಾಮೀನನ ಬಾಗಿಲು, ಮತ್ತೊಂದು ದಾನಿನ ಬಾಗಿಲು.
וְאֶל־פְּאַ֣ת קָדִ֗ימָה חֲמֵ֤שׁ מֵאוֹת֙ וְאַרְבַּ֣עַת אֲלָפִ֔ים וּשְׁעָרִ֖ים שְׁלֹשָׁ֑ה וְשַׁ֨עַר יוֹסֵ֜ף אֶחָ֗ד שַׁ֤עַר בִּנְיָמִן֙ אֶחָ֔ד שַׁ֥עַר דָּ֖ן אֶחָֽד׃
33 ೩೩ ದಕ್ಷಿಣದ ಕಡೆಯಲ್ಲಿ ಉದ್ದವು ನಾಲ್ಕು ಸಾವಿರದ ಐನೂರು ಮೊಳವು; ಅದರಲ್ಲಿ ಮೂರು ಬಾಗಿಲುಗಳು; ಒಂದು ಸಿಮೆಯೋನನ ಬಾಗಿಲು, ಇನ್ನೊಂದು ಇಸ್ಸಾಕಾರನ ಬಾಗಿಲು, ಮತ್ತೊಂದು ಜೆಬುಲೂನಿನ ಬಾಗಿಲು.
וּפְאַת־נֶ֗גְבָּה חֲמֵ֨שׁ מֵא֜וֹת וְאַרְבַּ֤עַת אֲלָפִים֙ מִדָּ֔ה וּשְׁעָרִ֖ים שְׁלֹשָׁ֑ה שַׁ֣עַר שִׁמְע֞וֹן אֶחָ֗ד שַׁ֤עַר יִשָּׂשכָר֙ אֶחָ֔ד שַׁ֥עַר זְבוּלֻ֖ן אֶחָֽד׃
34 ೩೪ ಪಶ್ಚಿಮದ ಗಡಿಯ ಉದ್ದವು ನಾಲ್ಕು ಸಾವಿರದ ಐನೂರು ಮೊಳವು; ಅದರಲ್ಲಿ ಮೂರು ಬಾಗಿಲುಗಳು; ಒಂದು ಗಾದಿನ ಬಾಗಿಲು, ಇನ್ನೊಂದು ಆಶೇರಿನ ಬಾಗಿಲು, ಮತ್ತೊಂದು ನಫ್ತಾಲಿನ ಬಾಗಿಲು.
פְּאַת־יָ֗מָּה חֲמֵ֤שׁ מֵאוֹת֙ וְאַרְבַּ֣עַת אֲלָפִ֔ים שַֽׁעֲרֵיהֶ֖ם שְׁלֹשָׁ֑ה שַׁ֣עַר גָּ֞ד אֶחָ֗ד שַׁ֤עַר אָשֵׁר֙ אֶחָ֔ד שַׁ֥עַר נַפְתָּלִ֖י אֶחָֽד׃
35 ೩೫ ಪಟ್ಟಣದ ಸುತ್ತಳತೆಯು ಹದಿನೆಂಟು ಸಾವಿರ ಮೊಳವು; ಅದನ್ನು ನಿರ್ಮಿಸಿದ ದಿನದಿಂದ ಆ ಪಟ್ಟಣಕ್ಕೆ “ಯೆಹೋವನ ನೆಲೆ” ಎಂದು ಹೆಸರಾಗುವುದು.
סָבִ֕יב שְׁמֹנָ֥ה עָשָׂ֖ר אָ֑לֶף וְשֵׁם־הָעִ֥יר מִיּ֖וֹם יְהוָ֥ה ׀ שָֽׁמָּה׃

< ಯೆಹೆಜ್ಕೇಲನು 48 >