< ಯೆಹೆಜ್ಕೇಲನು 47 >

1 ಆಮೇಲೆ ಅವನು ನನ್ನನ್ನು ದೇವಸ್ಥಾನದ ಬಾಗಿಲಿಗೆ ಪುನಃ ಕರೆದು ತಂದನು. ಆಹಾ, ದೇವಸ್ಥಾನದ ಹೊಸ್ತಿಲ ಕೆಳಗಿನಿಂದ ನೀರು ಹೊರಟು ಪೂರ್ವಕ್ಕೆ ಹರಿಯುತ್ತಿತ್ತು. (ದೇವಸ್ಥಾನವು ಪೂರ್ವಾಭಿಮುಖವಷ್ಟೆ) ಆ ನೀರು ದೇವಸ್ಥಾನದ ಬಲಗಡೆ ಕೆಳಗಿನಿಂದ ಹೊರಟು ಯಜ್ಞವೇದಿಯ ದಕ್ಷಿಣದಲ್ಲಿ ಹರಿಯುತ್ತಿತ್ತು.
त्यसपछि ती मानिसले मलाई फेरि मन्दिरको ढोकामा लगे, र पूर्वपट्टि मन्‍दिरको मन्दिरको सँघारमुनिबाट पानी बगिरहेको थियो, किनकि मन्दिरको अगाडिको भाग पूर्व फर्केको थियो, र पानीचाहिं मन्दिरको दक्षिणतिर, वेदीको दाहिनेतिर बगिरहेको थियो ।
2 ಆಗ ಅವನು ನನ್ನನ್ನು ಉತ್ತರದಿಕ್ಕಿನ ಹೆಬ್ಬಾಗಿಲಿನಿಂದ ದೇವಾಲಯದ ಹೊರಗಿನ ಮಾರ್ಗವಾಗಿ ಸುತ್ತಿಕೊಂಡು ಪೂರ್ವದಿಕ್ಕಿನ ಹೆಬ್ಬಾಗಿಲಿಗೆ ಕರೆದು ತಂದನು. ಅಲ್ಲಿ ನೋಡಲು ಅದರ ಬಲಗಡೆ ಮೆಲ್ಲನೆ ಹರಿಯುವ ನೀರು ಕಾಣಿಸಿತು.
यसैले तिनले मलाई उत्तरी ढोकाबाट बाहिर निकाले, र पूर्वपट्टि फर्किएको ढिकाको वरिपरि डोर्‍याए, र त्यो ढोकाबाट दक्षिणतिर पानी बगिरहेको थियो ।
3 ಆ ಪುರುಷನು ಕೈಯಲ್ಲಿ ಹುರಿಯನ್ನು ಹಿಡಿದುಕೊಂಡು ಪೂರ್ವಕ್ಕೆ ಮುಂದುವರಿದು ಸಾವಿರ ಮೊಳ ಅಳೆದು, ನನ್ನನ್ನು ನೀರಿನ ಆಚೆಗೆ ದಾಟಿಸಿದನು. ಅಲ್ಲಿ ನೀರು ಕಾಲು ಮುಳುಗುವಷ್ಟಿತ್ತು.
ती मानिस पूर्वतिर गइरहँदा, तिनको हातमा एउटा नाप्‍ने टाँगो थियो । तिनले एक हजार हात नापे र तिनले मलाई त्यो पानीको बाटोहुँदै गोलिगाँठोसम्म पानी आउने ठाउँमा ल्याए ।
4 ಅವನು ತಿರುಗಿ ಸಾವಿರ ಮೊಳ ಅಳೆದು, ನನ್ನನ್ನು ನೀರಿನ ಆಚೆಗೆ ದಾಟಿಸುವಾಗ, ಆ ನೀರು ಮೊಣಕಾಲಿನವರೆಗೆ ಇತ್ತು. ಅವನು ತಿರುಗಿ ಸಾವಿರ ಮೊಳ ಅಳೆದು, ನನ್ನನ್ನು ನೀರಿನ ಆಚೆಗೆ ದಾಟಿಸುವಾಗ, ಆ ನೀರು ಸೊಂಟದವರೆಗೆ ಇತ್ತು.
त्‍यसपछि तिनले फेरि एक हजार हात नापे र मलाई पानीको बाटोहुँदै घुँडासम्म पानी आउने ठाउँमा ल्याए । अनि तिनले अर्को एक हजार हात नापे र मलाई कम्मरसम्म पानी आउने ठाउँमा ल्याए ।
5 ಅವನು ಮತ್ತೆ ಸಾವಿರ ಮೊಳ ಅಳೆದನು. ಅದು ನನ್ನಿಂದ ದಾಟಲಾಗದ ನದಿಯಾಗಿತ್ತು; ನೀರು ಆಳವಾಗಿ ಈಜಾಡುವಷ್ಟು ಪ್ರವಾಹವಾಗಿತ್ತು, ದಾಟಲಾಗದ ನದಿಯಾಗಿತ್ತು.
त्‍यसपछि तिनले एक हजार हात नापे, तर त्यहाँ एउटा नदी थियो जसलाई मैले तर्न सकिनँ किनभने पानी बढेको थियो र पौडिन मिल्‍ने गरी गहिरो थियो । त्यो तर्न नसकिने नदी थियो ।
6 ಆಗ ಅವನು ನನಗೆ, “ನರಪುತ್ರನೇ, ಇದನ್ನು ನೋಡಿದೆಯಾ?” ಎಂದು ಹೇಳಿ ನನ್ನನ್ನು ನದಿಯ ದಡಕ್ಕೆ ಹತ್ತಿಸಿ ಹಿಂದಿರುಗಿಸಿದನು.
ती मानिसले मलाई भने, “ए मानिसको छोरो, के तँ यो देख्‍न सक्छस्?” र तिनले मलाई बाहिर ल्याए र त्‍यो नदीको किनारमा हिंडाए ।
7 ನಾನು ಹಿಂದಿರುಗಲು ಆಹಾ, ನದಿಯ ಎರಡು ದಡಗಳಲ್ಲಿಯೂ ಅನೇಕ ವೃಕ್ಷಗಳು ಕಾಣಿಸಿದವು.
जब म हिंड्दै थिएँ, नदीको दुवैपट्टिको किनारमा धेरै वटा रूखहरू थिए ।
8 ಆಗ ಅವನು ನನಗೆ ಹೀಗೆ ಹೇಳಿದನು, “ಈ ಪ್ರವಾಹವು ಪೂರ್ವ ಪ್ರಾಂತ್ಯಕ್ಕೆ ಹೊರಟು, ಅರಾಬಾ ಎಂಬ ಕಣಿವೆಗೆ ಇಳಿದು ಲವಣ ಸಮುದ್ರದ ಕಡೆಗೆ ಹರಿಯುವುದು. ಈ ನೀರು ಲವಣ ಸಮುದ್ರಕ್ಕೆ ಸೇರಲು ಅದರ ನೀರು ಸಿಹಿಯಾಗುವುದು.
ती मानिसले मलाई भने, “यो पानी पूर्वी इलाकातिर र तल अराबामा जान्छ । यो पानी खारा समुद्रमा बगेर जान्छ र त्यसलाई ताजा बनाउँछ ।
9 ಈ ನದಿಯು ಎಲ್ಲೆಲ್ಲಿ ಹರಿಯುತ್ತದೋ ಅಲ್ಲಲ್ಲಿ ಗುಂಪು ಗುಂಪಾಗಿ ಚಲಿಸುವ ಸಕಲ ವಿಧವಾದ ಜಲಜಂತುಗಳು ಬದುಕಿ ಬಾಳುವವು; ಮೀನುಗಳು ಗುಂಪು ಗುಂಪಾಗಿರುವವು. ಈ ನೀರು ಸಮುದ್ರಕ್ಕೆ ಬೀಳಲು, ಆ ನೀರೂ ಸಿಹಿಯಾಗುವುದು. ಈ ನದಿಯು ಎಲ್ಲೆಲ್ಲಿ ಹರಿದರೂ ಅಲ್ಲಲ್ಲಿ ಜೀವವುಂಟಾಗುವುದು.
झुण्डमा बस्‍ने हरेक जीवित प्राणी त्यो पानी जहाँ-जहाँ जान्छ त्यहीं नै बस्‍नेछ । त्यहाँ धेरै माछा हुनेछन्, किनकि यो पानी त्यहाँ बग्छ । त्यसले नुनिलो पानीलाई ताजा बनाउनेछ । त्यो नदी जहाँ-जहाँ जान्छ हरेक कुरा बाँच्‍नेछ ।
10 ೧೦ ಆಗ ಆ ಸಮುದ್ರದ ತೀರದಲ್ಲಿ ಬೆಸ್ತರು ನಿಂತಿರುವರು; ಏನ್ ಗೆದಿಯಿಂದ ಏನ್ ಎಗ್ಲಯಿಮಿನವರೆಗೆ ದಡವೆಲ್ಲಾ ಬಲೆ ಹಾಸುವ ಸ್ಥಳವಾಗುವುದು; ಬಗೆಬಗೆಯ ಮೀನುಗಳು ಮಹಾಸಾಗರದ ಮೀನುಗಳಂತೆ ಅವರಿಗೆ ರಾಶಿ ರಾಶಿಯಾಗಿ ಸಿಕ್ಕುವವು.
तब एन-गदीका जालहारीहरू त्यो पानीको छेउमा उभिनेछन्, र एन-एग्लैसम्म माछाको जाल सुकाउने ठाउँ हुनेछ । त्यो खारा समुद्रमा धेरै किसिमका माछा हुनेछन् जस्‍तो महासमुद्रमा प्रशस्‍त माछाहरू हुन्‍छन् ।
11 ೧೧ ಆದರೆ ಅದರ ಸುತ್ತಣ ಕೆಸರಾದ ಸ್ಥಳಗಳು, ಕೊಳಚೆಗಳು ಸಿಹಿಯಾಗುವುದಿಲ್ಲ. ಅವು ಉಪ್ಪಿನ ಗಣಿಯಾಗುವುವು.
तर खारा समुद्रका दलदल र सिमसार भने ताजा बनाइनेछैन । तिनीहरू नून दिनका निम्ति रहनेछन् ।
12 ೧೨ ನದಿಯ ಎರಡು ದಡಗಳ ತನಕ ಸಕಲ ಫಲವೃಕ್ಷಗಳು ಬೆಳೆಯುವವು. ಅವುಗಳ ಎಲೆ ಬಾಡುವುದಿಲ್ಲ, ಹಣ್ಣು ತೀರುವುದಿಲ್ಲ; ನದಿಯ ನೀರು ಪವಿತ್ರಾಲಯದಿಂದ ಹೊರಟು ಬರುವ ಕಾರಣ ಅವು ತಿಂಗಳುಗಳ ಪ್ರಕಾರ ಹೊಸ ಫಲವನ್ನು ಫಲಿಸುವವು; ಅವುಗಳ ಹಣ್ಣು ಆಹಾರಕ್ಕೂ, ಸೊಪ್ಪು ಔಷಧಕ್ಕೂ ಉಪಯೋಗವಾಗುವುದು.”
यस नदीको छेउमा, दुवैपट्टिको किनारमा, फल फलाउने सबै प्रकारका रूखहरू बढ्नेछन् । तिनीहरूका पातहरू सुक्‍नेछैनन् र तिनीहरूका फल कहिल्यै पनि रोकिनेछैनन् । हरेक महिना रूखहरूले फल दिनेछन्, किनभने पवित्र-स्थानबाट पानी त्यहाँ बग्छ । तिनीहरूको फल भोजनको निम्ति हुनेछ, र तिनीहरूका पात निको पार्नको निम्ति हुनेछन् ।
13 ೧೩ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನೀವು ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ದೇಶವನ್ನು ಬಾಧ್ಯವಾಗಿ ಹಂಚಿಕೊಡುವಾಗ ಮುಂದಿನ ಮೇರೆಗಳನ್ನು ಅನುಸರಿಸಬೇಕು. ಯೋಸೇಫಿಗೆ ಎರಡು ಪಾಲು ಸೇರಲಿ.
परमप्रभु परमेश्‍वर यसो भन्‍नुहुन्छ: इस्राएलका बाह्र कुलहरूका निम्ति देश विभाजन गर्ने तरिका यस्तो हुनेछ: योसेफलाई दुई भाग हुनेछ ।
14 ೧೪ ನಾನು ನಿಮ್ಮ ಪೂರ್ವಿಕರಿಗೆ ಪ್ರಮಾಣವಾಗಿ ವಾಗ್ದಾನ ಮಾಡಿದ ಈ ದೇಶವನ್ನು ನೀವೆಲ್ಲರೂ ಸರಿಸಮಾನವಾಗಿ ಅನುಭವಿಸುವಿರಿ. ಇದು ನಿಮಗೆ ಸ್ವತ್ತಾಗಿಯೇ ಇರುವುದು.
मैले आफ्नो हात उठाएर तिमीहरूका पुर्खाहरूलाई प्रतिज्ञा गरेका देशलाई बराबर गरेर तिमीहरूले विभाजन गर्नुपर्छ । त्यो देश तिमीहरूका निम्ति उत्तराधिकार हुनेछ ।
15 ೧೫ “ನಿಮ್ಮ ದೇಶದ ಮೇರೆಗಳು ಹೀಗಿರಬೇಕು, ಉತ್ತರದ ಮೇರೆಯು ಮಹಾ ಸಮುದ್ರದಿಂದ ಆರಂಭವಾಗಿ ಹೆತ್ಲೋನಿನ ಮಾರ್ಗವಾಗಿ ಚೆದಾದಿಗೆ ಸೇರುವುದು.
महासमुद्रदेखि हेतलोनको बाटो भएर सदादसम्म उत्तरी भागमा देशको निम्ति सिमाना यही हुनेछ ।
16 ೧೬ ಹಮಾತ್, ಬೇರೋತ, ದಮಸ್ಕದವರೆಗೂ ಹಮಾತಿನ ಮೇರೆಗೂ ಮಧ್ಯವಾಗಿರುವ ಸಿಬ್ರಯಿಮ್ ಎಂಬ ಊರುಗಳ ಮೇಲೆ ಹವ್ರಾನಿನ ಮೇರೆಯಲ್ಲಿರುವ ಹಾಚೇರ್ ಹತ್ತೀಕೋನಿನ ಬಳಿಯಲ್ಲಿ ಮುಗಿಯಬೇಕು.
अनि त्यो सिमाना बेरोतह हुँदै सिब्रैमसम्म जानेछ, जुन दमस्कस र हमातको बिचमा छ, अनि त्यसपछि हासेर हात्तीकनसम्मै जानेछ, जुन हौरानको सिमानाको छेउमा छ ।
17 ೧೭ ಹೀಗೆ ಉತ್ತರ ಮೇರೆಯು ಸಮುದ್ರದಿಂದ ದಮಸ್ಕದ ಮೇರೆಯ ಹಚರ್ ಐನೋನಿನವರೆಗೆ ಹಬ್ಬುವುದು. ಅದರ ಉತ್ತರದಲ್ಲಿ ಹಮಾತಿನ ಪ್ರಾಂತ್ಯವಿರುವುದು.
यसैले त्यो सिमाना समुद्रदेखि दमस्कस हुँदै उत्तरमा हमात भएर हसर-एनानसम्म जानेछ । योचाहिं उत्तरी भाग हुनेछ ।
18 ೧೮ “ಇದು ಪೂರ್ವದಿಕ್ಕಿನ ಮೇರೆಯಾಗಿದೆ: ಹವ್ರಾನ್, ದಮಸ್ಕ, ಗಿಲ್ಯಾದ್ ಇವುಗಳಿಗೂ ಇಸ್ರಾಯೇಲ್ ದೇಶಕ್ಕೂ ಮಧ್ಯದಲ್ಲಿರುವ ಯೊರ್ದನ್ ಹೊಳೆಯು ಮೇರೆಯಾಗಿರುವುದು. ಉತ್ತರ ಮೇರೆಯಿಂದ ದಕ್ಷಿಣ ಸಮುದ್ರದವರೆಗೆ ನೀವು ಗುರುತು ಹಾಕಿಕೊಳ್ಳಬೇಕು.
पूर्वपट्टि त्यो सिमाना हौरान र दमस्कसको बिचमा गिलाद र इस्राएल देशको बिचमा भएको यर्दन नदीको छेउमा हुनेछ । तिमीहरूले पूर्वी समुद्रको सिमानाबाट नाप्‍नुपर्छ । पूर्वी सिमानाचाहिं पूर्वी समुद्रसम्म हुनेछ ।
19 ೧೯ ಇದು ದಕ್ಷಿಣದ ಮೇರೆಯಾಗಿದೆ: ದಕ್ಷಿಣದ ಮೇರೆಯು ತಾಮಾರಿನಿಂದ ಹೊರಟು, ಮೆರೀಬೋತ್ ಕಾದೇಶಿನ ಹಳ್ಳದ ಮೇಲೆ ಐಗುಪ್ತದವರೆಗೆ ಮುಂದುವರೆಯುವ ನದಿಯ ಮಾರ್ಗವಾಗಿ ಮಹಾ ಸಮುದ್ರವನ್ನು ಮುಟ್ಟಬೇಕು.
अनि दक्षिण भागमा त्यो सिमाना तामारदेखि मेरीबा-कादेशका पानीहरूसम्मै, त्‍यसपछि मिश्रदेशको खोलाका छेउ-छेउ भएर महासमुद्रसम्म जानेछ । योचाहिं दक्षिणको सिमाना हुनेछ ।
20 ೨೦ ಇದು ಪಶ್ಚಿಮದ ಮೇರೆಯಾಗಿದೆ. ಹಮಾತಿನ ದಾರಿಗೆ ಎದುರಿನ (ಕರಾವಳಿಯ) ತನಕ ಮಹಾ ಸಮುದ್ರದವರೆಗೂ ಪಶ್ಚಿಮದ ಮೇರೆಯಾಗಿರುವುದು.
अनि पश्‍चिमको सिमानाचाहिं लेबो-हमातको विपरित, महासमुद्रसम्म हुनेछ । योचाहिं पश्‍चिमको सिमाना हुनेछ ।
21 ೨೧ ಈ ರೀತಿಯಾಗಿ ದೇಶವನ್ನು ನೀವು ಇಸ್ರಾಯೇಲಿನ ಎಲ್ಲಾ ಕುಲಕ್ಕೂ ಹಂಚಿಕೊಳ್ಳಬೇಕು.
यसरी तिमीहरूले आफ्नो निम्ति, अर्थात् इस्राएलका कुलको निम्ति यो देशलाई विभाजन गर्नेछौ ।
22 ೨೨ ನಿಮಗೂ, ನಿಮ್ಮ ಮಧ್ಯದಲ್ಲಿ ಪ್ರವಾಸ ಮಾಡುತ್ತಾ, ಮಕ್ಕಳನ್ನು ಪಡೆದಿರುವ ವಿದೇಶಿಗಳಿಗೂ ದೇಶವನ್ನು ಬಾಧ್ಯವಾಗಿ ಹಂಚಬೇಕು. ಅವರು ಇಸ್ರಾಯೇಲರ ಮಧ್ಯದಲ್ಲಿ ನಿಮಗೆ ಸ್ವದೇಶಿಗಳಂತೆಯೇ ಇರಬೇಕು. ಇಸ್ರಾಯೇಲಿನ ಕುಲಗಳೊಳಗೆ ನಿಮ್ಮೊಂದಿಗೆ ಅವರಿಗೆ ಸ್ವಾಸ್ತ್ಯವಾಗಲಿ.
यसरी तिमीहरूले उत्तराधिकार आफूलाई र तिमीहरूका बिचमा भएका परदेशीहरूलाई विभाजन गर्नेछौ, जसले तिमीहरूका बिचमा बालक जन्माएका छन्, जो इस्राएलमा जन्मिएका मानिसहरूझैं तिमीहरूका बिचमा छन् । तिमीहरूले इस्राएलका कुलहरूका निम्ति उत्तराधिकार पाउन चिठ्ठा हाल्नुपर्छ ।
23 ೨೩ ಯಾವ ಕುಲದಲ್ಲಿ ವಿದೇಶಿಯು ಪ್ರವಾಸವಾಗಿರುತ್ತಾನೋ ಅಲ್ಲಿ ಅವನಿಗೆ ಸ್ವತ್ತನ್ನು ಕೊಡಬೇಕು” ಇದು ಕರ್ತನಾದ ಯೆಹೋವನ ನುಡಿ.
अनि त्यो परदेशी त्यही कुलको हुनेछ जसको बिचमा त्यो बसोबास गरिरहेको हुन्छ । तिमीहरूले त्यसलाई पनि उत्तराधिकार दिनुपर्छ, यो परमप्रभु परमेश्‍वरको घोषणा हो ।”

< ಯೆಹೆಜ್ಕೇಲನು 47 >