< ಯೆಹೆಜ್ಕೇಲನು 43 >

1 ಆಮೇಲೆ ಆತನು ನನ್ನನ್ನು ಪೂರ್ವದಿಕ್ಕಿಗೆ ಅಭಿಮುಖವಾಗಿದ್ದ ಬಾಗಿಲಿಗೆ ಕರೆದುಕೊಂಡು ಹೋದನು.
و مرا نزد دروازه آورد، یعنی به دروازه‌ای که به سمت مشرق متوجه بود.۱
2 ಇಗೋ! ಇಸ್ರಾಯೇಲಿನ ದೇವರ ಮಹಿಮೆಯು ಪೂರ್ವದಿಕ್ಕಿನ ಮಾರ್ಗವಾಗಿ ಬಂದಿತ್ತು ಮತ್ತು ಆತನ ಧ್ವನಿಯು ಜಲಪ್ರವಾಹದ ಘೋಷದಂತಿತ್ತು; ಆತನ ಮಹಿಮೆಯಿಂದ ಭೂಮಿಯು ಪ್ರಕಾಶಿಸುತ್ತಿತ್ತು.
واینک جلال خدای اسرائیل از طرف مشرق آمد و آواز او مثل آبهای بسیار بود و زمین از جلال او منور گردید.۲
3 ನಾನು ಕಂಡು ದರ್ಶನವೂ, ಆತನು ಪಟ್ಟಣವನ್ನು ಹಾಳುಮಾಡಲು ಬಂದಾಗ ನೋಡಿದ ದರ್ಶನದ ಹಾಗೂ, ಕೆಬಾರ್ ನದಿಯ ಹತ್ತಿರ ನನಗಾದ ದರ್ಶನದ ಹಾಗೂ ಇತ್ತು. ಆಗ ನಾನು ಬೋರಲು ಬಿದ್ದೆನು.
و مثل منظر آن رویایی بود که دیده بودم یعنی مثل آن رویا که در وقت آمدن من، برای تخریب شهر دیده بودم و رویاهامثل آن رویا بود که نزد نهر خابور مشاهده نموده بودم. پس به روی خود در‌افتادم.۳
4 ಆಗ ಯೆಹೋವನ ಮಹಿಮೆಯು ಪೂರ್ವದಿಕ್ಕಿಗೆ ಅಭಿಮುಖವಾಗಿದ್ದ ಬಾಗಿಲಿನ ಮಾರ್ಗವಾಗಿ ಆಲಯವನ್ನು ಪ್ರವೇಶಿಸಿತು.
پس جلال خداوند از راه دروازه‌ای که رویش به سمت مشرق بود به خانه درآمد.۴
5 ದೇವರಾತ್ಮವು ನನ್ನನ್ನು ಎತ್ತಿಕೊಂಡು ಒಳಗಿನ ಅಂಗಳಕ್ಕೆ ಕರೆದು ತಂದಿತು. ಆಗ ಯೆಹೋವನ ಮಹಿಮೆಯು ಆಲಯವನ್ನು ತುಂಬಿಕೊಂಡಿತು.
وروح مرا برداشته، به صحن اندرونی آورد و اینک جلال خداوند خانه را مملو ساخت.۵
6 ಆಗ ಆಲಯದೊಳಗಿಂದ ನನ್ನ ಸಂಗಡ ಮಾತನಾಡುವವನ ಶಬ್ದವನ್ನು ಕೇಳಿದೆನು. ಆ ಪುರುಷನು ನನ್ನ ಪಕ್ಕದಲ್ಲಿ ನಿಂತಿದ್ದನು.
و هاتفی راشنیدم که از میان خانه به من تکلم می‌نماید ومردی پهلوی من ایستاده بود.۶
7 ಮಾತನಾಡುವಾತನು ನನಗೆ ಹೀಗೆ ಹೇಳಿದನು, “ನರಪುತ್ರನೇ, ಇದು ನನ್ನ ಸಿಂಹಾಸನ, ನನ್ನ ಪಾದ ಪೀಠ, ಇಲ್ಲಿ ನಾನು ಇಸ್ರಾಯೇಲರ ಮಧ್ಯದಲ್ಲಿ ಸದಾ ವಾಸಿಸುವೆನು. ಇಸ್ರಾಯೇಲ್ ವಂಶದವರಾಗಲಿ, ಅವರ ಅರಸರಾಗಲಿ ತಮ್ಮ ದೇವದ್ರೋಹದಿಂದಲೂ, ಗತಿಸಿದ ಅರಸರ ಶವಗಳಿಂದಲೂ ನನ್ನ ಪರಿಶುದ್ಧ ನಾಮವನ್ನು ಅಪವಿತ್ರ ಮಾಡುವುದಿಲ್ಲ.
و مرا گفت: «ای پسر انسان این است مکان کرسی من و مکان کف پایهایم که در آن در میان بنی‌اسرائیل تا به ابدساکن خواهم شد و خاندان اسرائیل هم خودایشان و هم پادشاهان ایشان بار دیگر به زناها ولاشهای پادشاهان خود در مکان های بلند خویش نام قدوس مرا بی‌حرمت نخواهند ساخت.۷
8 ನನ್ನ ಹೊಸ್ತಿಲುಗಳ ಪಕ್ಕದಲ್ಲಿ ತಮ್ಮ ಹೊಸ್ತಿಲುಗಳನ್ನು ಹಾಕಿಕೊಂಡು ನನ್ನ ಮನೆಗೂ, ತಮ್ಮ ಮನೆಗೂ ಒಂದೇ ಗೋಡೆಯಾಗುವಂತೆ ಮಾಡಿಕೊಳ್ಳುವುದರಿಂದ ಇನ್ನು ಮೇಲೆ ನನ್ನ ಪವಿತ್ರ ನಾಮವನ್ನು ಅಪವಿತ್ರ ಮಾಡುವುದಿಲ್ಲ. ತಾವು ನಡೆಸಿದ ದುರಾಚಾರಗಳಿಂದ ನನ್ನ ಪವಿತ್ರ ನಾಮವನ್ನು ಅಪವಿತ್ರ ಮಾಡಿದರು. ಆದಕಾರಣ ನಾನು ಕೋಪಗೊಂಡು ಅವರನ್ನು ನಾಶಮಾಡಿದೆನು.
ازاینکه آستانه های خود را نزد آستانه من وباهوهای خویش را به پهلوی باهوهای من برپاکرده‌اند و در میان من و ایشان فقط دیواری است، پس اسم قدوس مرا به رجاسات خویش که آنهارا بعمل آورده‌اند بی‌حرمت ساخته‌اند، لهذا من در خشم خود ایشان را تلف نموده‌ام.۸
9 ಈಗಲಾದರೂ ತಮ್ಮ ದೇವದ್ರೋಹವನ್ನು ಮತ್ತು ಅರಸರ ಶವಗಳನ್ನು ನನ್ನಿಂದ ದೂರ ಮಾಡಲಿ. ಆಗ ನಾನು ಅದರ ಮಧ್ಯದಲ್ಲಿ ಸದಾ ವಾಸಿಸುವೆನು.”
حال زناهای خود و لاشهای پادشاهان خویش را از من دور بنمایند و من در میان ایشان تا به ابد سکونت خواهم نمود.۹
10 ೧೦ “ನರಪುತ್ರನೇ, ಇಸ್ರಾಯೇಲ್ ವಂಶದವರು ತಮ್ಮ ಅಪರಾಧಗಳ ನಿಮಿತ್ತ ನಾಚಿಕೆಪಡುವಂತೆ ಆಲಯವನ್ನು ಅವರಿಗೆ ತೋರಿಸು ಮತ್ತು ಅವರು ಅದನ್ನು ಅಳತೆ ಮಾಡಲಿ.
و تو‌ای پسر انسان خاندان اسرائیل را از این خانه مطلع ساز تا از گناهان خودخجل شوند و ایشان نمونه آن را بپیمایند.۱۰
11 ೧೧ ತಾವು ನಡೆಸಿದ ದುಷ್ಕೃತ್ಯಗಳಿಗೆಲ್ಲಾ ನಾಚಿಕೆಪಟ್ಟರೆ, ನೀನು ಆಲಯದ ರೂಪವನ್ನೂ, ವ್ಯವಸ್ಥೆಯನ್ನೂ ಅದರ ಆಗಮನ ಮತ್ತು ನಿರ್ಗಮನಗಳನ್ನೂ ಮತ್ತು ಅದರ ಎಲ್ಲಾ ಕಟ್ಟಳೆಗಳನ್ನೂ, ಸಕಲ ರಚನಾವಿಧಾನಗಳನ್ನೂ, ಸಮಸ್ತ ವಿಧಿಗಳನ್ನೂ, ಸರ್ವ ನಿರ್ಮಾಣ ರೀತಿಗಳನ್ನೂ ಅವರಿಗೆ ತಿಳಿಸು. ಅವರು ಅದರ ಪೂರ್ಣಕ್ರಮವನ್ನೂ, ಎಲ್ಲಾ ವಿಧಿಗಳನ್ನೂ ಅನುಸರಿಸಿ ಕೈಕೊಳ್ಳುವಂತೆ ಅವರ ಕಣ್ಣೆದುರಿಗೆ ಬರೆ.
واگر از هر‌چه بعمل آورده‌اند خجل شوند، آنگاه صورت خانه را و نمونه و مخرجها و مدخلها و تمامی شکلها و همه فرایض و جمیع صورتها وتمامی قانونهایش را برای ایشان اعلام نما و به نظر ایشان بنویس تا تمامی صورتش و همه فرایضش را نگاه داشته، به آنها عمل نمایند.۱۱
12 ೧೨ “ಇದೇ ಆ ಆಲಯದ ನಿಯಮವಾಗಿದೆ. ಆ ಪರ್ವತದ ಮೇಲೆಯೂ ಮತ್ತು ಅದರ ಸುತ್ತುಮುತ್ತಲಿನ ಪ್ರದೇಶವೆಲ್ಲಾ ಅತಿ ಪರಿಶುದ್ಧವಾಗಿರಬೇಕು. ಇಗೋ, ಆ ಆಲಯದ ನಿಯಮವು ಇದೇ.
وقانون خانه این است که تمامی حدودش بر سرکوه از همه اطرافش قدس اقداس باشد. اینک قانون خانه همین است.۱۲
13 ೧೩ “ಯಜ್ಞವೇದಿಯ ಅಳತೆಗಳು ಮೊಳದ ಪ್ರಕಾರ ಹೀಗಿರಬೇಕು. (ಉದ್ದ ಮೊಳ ಅಂದರೆ ಮೊಳದ ಮೇಲೆ ಒಂದು ಹಿಡಿ ಉದ್ದ) ಕೆಳಭಾಗದ ಎತ್ತರ ಒಂದು ಮೊಳ, ಮೇಲಿನ ಅಂಚಿನ ಅಗಲ ಸುತ್ತಲೂ ಒಂದು ಮೊಳ, ಅಂಚಿನ ತುದಿಯಲ್ಲಿ ಸುತ್ತಣ ದಿಂಡಿನ ಅಗಲವು ಒಂದು ಗೇಣು; ಇದೇ ಯಜ್ಞವೇದಿಯ ಪೀಠ.
و پیمایشهای مذبح به ذراعها که هر ذراع یک ذراع و یک قبضه باشد این است. سینه‌اش یک ذراع و عرضش یک ذراع و حاشیه‌ای که گرداگرد لبش می‌باشد یک وجب و این پشت مذبح می‌باشد.۱۳
14 ೧೪ ನೆಲದ ಮೇಲೆ ಅಂದರೆ ಕೆಳಭಾಗದ ಮೇಲೆ ಕೆಳಗಿನ ಅಂತಸ್ತಿನ ಎತ್ತರ ಎರಡು ಮೊಳ, ಅದರ ಮೇಲಣ ಅಂಚಿನ ಅಗಲ ಒಂದು ಮೊಳ; ಆ ಚಿಕ್ಕ ಅಂತಸ್ತಿನ ಮೇಲೆ ದೊಡ್ಡ ಅಂತಸ್ತಿನ ಎತ್ತರ ನಾಲ್ಕು ಮೊಳ, ಮೇಲಣ ಅಂಚಿನ ಅಗಲವು ಒಂದು ಮೊಳ.
و از سینه روی زمین تا خروج پایینی دو ذراع و عرضش یک ذراع و از خروج کوچک تا خروج بزرگ چهار ذراع و عرضش یک ذراع.۱۴
15 ೧೫ ಯಜ್ಞವೇದಿಯ ಅಂತಸ್ತಿನ ಎತ್ತರವು ನಾಲ್ಕು ಮೊಳ; ಆ ಯಜ್ಞವೇದಿಯ ಮೇಲ್ಗಡೆಯಲ್ಲಿ ನಾಲ್ಕು ಕೊಂಬುಗಳು ಇರಬೇಕು.
و آتش دانش چهار ذراع و از آتش دان چهار شاخ برآمده بود.۱۵
16 ೧೬ ಯಜ್ಞವೇದಿ ಹನ್ನೆರಡು ಮೊಳ ಉದ್ದವೂ, ಹನ್ನೆರಡು ಮೊಳ ಅಗಲವೂ ಮತ್ತು ಚಚ್ಚೌಕವಾಗಿರಬೇಕು.
و طول آتش دان دوازده و عرضش دوازده و از هر‌چهار طرف مربع بود.۱۶
17 ೧೭ ದೊಡ್ಡ ಅಂತಸ್ತು ಹದಿನಾಲ್ಕು ಮೊಳ ಉದ್ದವಾಗಿಯೂ, ಹದಿನಾಲ್ಕು ಮೊಳ ಅಗಲವಾಗಿಯೂ, ನಾಲ್ಕು ಕಡೆಗಳಲ್ಲಿ ಸಮವಾಗಿರಬೇಕು. ಸುತ್ತಣ ದಿಂಡಿನ ಅಗಲವು ಅರ್ಧ ಮೊಳ, ಕೆಳಭಾಗದ ಸುತ್ತಣ ಅಂಚಿನ ಅಗಲವು ಒಂದು ಮೊಳವಾಗಿಯೂ ಇರಬೇಕು. ಅದರ ಮೆಟ್ಟಲುಗಳು ಪೂರ್ವದಿಕ್ಕಿಗೆ ಅಭಿಮುಖವಾಗಿರಬೇಕು.”
و طول خروج چهارده و عرضش چهارده برچهار طرفش بود و حاشیه‌ای که گرداگردش بودنیم ذراع و دایره سینه‌اش یک ذراع و پله هایش به سمت مشرق متوجه بود.۱۷
18 ೧೮ ಆಗ ಆ ಪುರುಷನು ನನಗೆ ಹೀಗೆ ಹೇಳಿದನು, “ನರಪುತ್ರನೇ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ಸರ್ವಾಂಗಹೋಮಕ್ಕೂ, ರಕ್ತವೆರಚುವ ಸಂಸ್ಕಾರಕ್ಕೂ ಯಜ್ಞವೇದಿಯನ್ನು ನಿರ್ಮಿಸುವಾಗ ಈ ವಿಧಿಗಳನ್ನು ಕೈಗೊಳ್ಳಬೇಕು.
و او مرا گفت: «ای پسر انسان خداوند یهوه چنین می‌فرماید: این است قانون های مذبح درروزی که آن را بسازند تا قربانی های سوختی برآن بگذرانند و خون بر آن بپاشند.۱۸
19 ೧೯ ಲೇವಿಯರೂ, ಚಾದೋಕನ ಸಂತಾನದವರೂ, ನನ್ನ ಸನ್ನಿಧಿಸೇವಕರೂ ಆದ ಯಾಜಕರಿಗೆ ನೀನು ಒಂದು ಹೋರಿಯನ್ನು ದೋಷ ಪರಿಹಾರಕಯಜ್ಞಕ್ಕಾಗಿ ಕೊಡು ಇದು ಕರ್ತನಾದ ಯೆಹೋವನ ನುಡಿ.
و خداوندیهوه می‌فرماید که به لاویان کهنه که از ذریت صادوق می‌باشند و به جهت خدمت من به من نزدیک می‌آیند یک گوساله به جهت قربانی گناه بده.۱۹
20 ೨೦ ಆಮೇಲೆ ಅದರ ರಕ್ತದಲ್ಲಿ ಸ್ವಲ್ಪವನ್ನು ನೀನು ತೆಗೆದುಕೊಂಡು ಯಜ್ಞವೇದಿಯ ನಾಲ್ಕು ಕೊಂಬುಗಳಿಗೂ, ದೊಡ್ಡ ಅಂತಸ್ತಿನ ನಾಲ್ಕು ಮೂಲೆಗಳಿಗೂ, ಸುತ್ತಣ ದಿಂಡಿಗೂ ಹಚ್ಚಿ, ಯಜ್ಞವೇದಿಯ ದೋಷವನ್ನು ಪರಿಹರಿಸಿ ಅದನ್ನು ಶುದ್ಧಿಮಾಡು.
و از خونش گرفته، بر چهار شاخش و برچهار گوشه خروج و بر حاشیه‌ای که گرداگردش است بپاش و آن را طاهر ساخته، برایش کفاره کن.۲۰
21 ೨೧ ಮತ್ತು ದೋಷ ಪರಿಹಾರಕಯಜ್ಞಕ್ಕಾಗಿ ವಧಿಸಲ್ಪಟ್ಟ ಹೋರಿಯನ್ನು ನೀನು ಒಪ್ಪಿಸಲು ನೇಮಿಸಲ್ಪಟ್ಟವನು, ಪವಿತ್ರಾಲಯದ ಹೊರಗೆ ಆಲಯಕ್ಕೆ ಸಂಬಂಧಪಟ್ಟ ಗೊತ್ತಾದ ಸ್ಥಳದಲ್ಲಿ ಅದನ್ನು ಸುಡಬೇಕು.
گوساله قربانی گناه را بگیر و آن را در مکان معین خانه بیرون از مقدس بسوزانند.۲۱
22 ೨೨ “ಎರಡನೆಯ ದಿನದಲ್ಲಿ ನೀನು ಪೂರ್ಣಾಂಗವಾದ ಹೋತವನ್ನು ದೋಷ ಪರಿಹಾರಕಯಜ್ಞಕ್ಕಾಗಿ ಅರ್ಪಿಸು. ಹೋರಿಯಿಂದ ಯಜ್ಞವೇದಿಯನ್ನು ಶುದ್ಧಿಮಾಡಿದಂತೆ ಹೋತದಿಂದಲೂ ಶುದ್ಧಿಮಾಡಬೇಕು
و در روزدوم بز نر بی‌عیبی برای قربانی گناه بگذران تامذبح را به آن طاهر سازند چنانکه آن را به گوساله طاهر ساختند.۲۲
23 ೨೩ ನೀನು ಯಜ್ಞವೇದಿಯ ಶುದ್ಧೀಕರಣದ ಕಾರ್ಯವನ್ನು ಮುಗಿಸಿದ ಮೇಲೆ, ದೋಷವಿಲ್ಲದ ಪೂರ್ಣಾಂಗವಾದ ಹೋರಿಯನ್ನೂ ಹಿಂಡಿನಿಂದಲೂ ಮತ್ತು ಪೂರ್ಣಾಂಗವಾದ ಟಗರನ್ನೂ ಮಂದೆಯೊಳಗಿಂದಲೂ ತಂದು ಅರ್ಪಿಸಬೇಕು.
و چون از طاهر ساختن آن فارغ شدی گوساله بی‌عیب و قوچی بی‌عیب از گله بگذران.۲۳
24 ೨೪ ನೀನು ಅವುಗಳನ್ನು ಯೆಹೋವನಿಗೆ ಸಮರ್ಪಿಸಬೇಕು, ಯಾಜಕರು ಅವುಗಳ ಮೇಲೆ ಉಪ್ಪನ್ನು ಹಾಕಿ, ಯೆಹೋವನಿಗಾಗಿ ಸರ್ವಾಂಗಹೋಮವನ್ನು ಅರ್ಪಿಸಬೇಕು.
تو آن را به حضور خداوند نزدیک بیاور و کاهنان نمک بر آنها پاشیده، آنها را به جهت قربانی سوختنی برای خداوند بگذرانند.۲۴
25 ೨೫ “ಏಳು ದಿನಗಳ ತನಕ ನೀನು ಪ್ರತಿ ದಿನವೂ ದೋಷಪರಿಹಾರ ಬಲಿಗಾಗಿ ಒಂದೊಂದು ಹೋತವನ್ನು ಸಿದ್ಧಮಾಡಬೇಕು. ಯಾಜಕರು ಸಹ ದೋಷವಿಲ್ಲದ ಪೂರ್ಣಾಂಗವಾದ ಹೋರಿಯನ್ನೂ ಹಿಂಡಿನಿಂದಲೂ ಮತ್ತು ಪೂರ್ಣಾಂಗವಾದ ಟಗರನ್ನೂ ಮಂದೆಯೊಳಗಿಂದಲೂ ಸಿದ್ಧಮಾಡಬೇಕು.
هر روز از هفت روز تو بز نری برای قربانی گناه بگذران و ایشان گوساله‌ای و قوچی از گله هر دوبی عیب بگذرانند.۲۵
26 ೨೬ ಹೀಗೆ ಏಳು ದಿನ ಯಜ್ಞವೇದಿಯ ದೋಷವನ್ನು ಪರಿಹರಿಸುತ್ತಾ ಅದನ್ನು ಶುದ್ಧಿ ಮಾಡಿ ಪ್ರತಿಷ್ಠಿಸಬೇಕು.
هفت روز ایشان کفاره برای مذبح نموده، آن را طاهر سازند و تخصیص کنند.۲۶
27 ೨೭ ಏಳು ದಿನಗಳ ಕಾರ್ಯವನ್ನು ಮುಗಿಸಿದ ಬಳಿಕ, ಎಂಟನೆಯ ದಿನದಿಂದ ಯಾಜಕರು ಯಜ್ಞವೇದಿಯ ಮೇಲೆ ನಿಮ್ಮ ಪಕ್ಷವಾಗಿ ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಮಾಡಬೇಕು. ಆಗ ನಾನು ನಿಮ್ಮನ್ನು ಅಂಗೀಕರಿಸುವೆನು” ಇದು ಕರ್ತನಾದ ಯೆಹೋವನ ನುಡಿ.
و چون این‌روزها را به اتمام رسانیدند، پس درروز هشتم و بعد از آن کاهنان قربانی های سوختنی و ذبایح سلامتی شما را بر مذبح بگذرانند و من شما را قبول خواهم کرد. قول خداوند یهوه این است.»۲۷

< ಯೆಹೆಜ್ಕೇಲನು 43 >