< ಯೆಹೆಜ್ಕೇಲನು 41 >
1 ೧ ಆಮೇಲೆ ಅವನು ನನ್ನನ್ನು ದೇವಾಲಯದ ಪರಿಶುದ್ಧ ಸ್ಥಳಕ್ಕೆ ಕರೆದುಕೊಂಡು ಬಂದು, ಅದರ ದ್ವಾರಕಂಬಗಳನ್ನು ಅಳತೆ ಮಾಡಲು, ಅದರ ಎರಡು ಕಡೆಗಳು ಆರು ಮೊಳ ಅಗಲವಾಗಿತ್ತು.
Och han hade mig in uti templet, och mälte pelarena; de höllo på hvar sidon sex alnars bredd, så bredt som huset var.
2 ೨ ದ್ವಾರದ ಅಗಲವು ಹತ್ತು ಮೊಳಗಳೂ, ದ್ವಾರದ ಎರಡು ಪಕ್ಕದ ಗೋಡೆಗಳ ಅಗಲವು ಐದೈದು ಮೊಳಗಳೂ ಆಗಿದ್ದವು. ಅವನು ಪರಿಶುದ್ಧ ಸ್ಥಳವನ್ನು ಅಳತೆಮಾಡಿದಾಗ ಅದರ ಉದ್ದ ನಲ್ವತ್ತು ಮೊಳಗಳೂ, ಅಗಲ ಇಪ್ಪತ್ತು ಮೊಳಗಳೂ ಇದ್ದವು.
Och dörren var tio alnar bred; men väggarna på båda sidor vid dörrena voro hvardera fem alnar breda; och han mälte rummet i templena; det höll fyratio alnar i längdene, och tjugu alnar i breddene.
3 ೩ ಆಮೇಲೆ ಅವನು ಇನ್ನೂ ಮುಂದಕ್ಕೆ ಹೋಗಿ, ಮಹಾಪರಿಶುದ್ಧ ಸ್ಥಳದ ಕಂಬಗಳನ್ನು ಅಳತೆ ಮಾಡಲು ದ್ವಾರದ ಒಂದೊಂದು ಕಂಬದ ಅಗಲ ಎರಡೆರಡು ಮೊಳಗಳೂ, ದ್ವಾರದ ಅಗಲವು ಆರು ಮೊಳಗಳೂ, ದ್ವಾರದ ಪಕ್ಕದ ಗೋಡೆಗಳ ಅಗಲವು ಏಳು ಮೊಳವೆಂದು ಅಳೆದನು.
Och han gick in uti det inra, och mälte pelaren till porten; den höll två alnar, och porten höll sex alnar, och var hela portens bredd sju alnar.
4 ೪ ಅದರ ಕೋಣೆಗಳ ಉದ್ದವು ಇಪ್ಪತ್ತು ಮೊಳಗಳೂ, ಅಗಲವು ಇಪ್ಪತ್ತು ಮೊಳಗಳೂ ಇದ್ದವು. ಆಗ ಅವನು ನನಗೆ, “ಇದು ಮಹಾಪರಿಶುದ್ಧ ಸ್ಥಳ” ಎಂದು ಹೇಳಿದನು.
Och han mälte tjugu alnar i längdene, och tjugu alnar i breddene, innantill i templena, och han sade till mig: Detta är det aldrahelgasta.
5 ೫ ಆಮೇಲೆ ಅವನು ಅಳತೆ ಮಾಡಲು, ದೇವಸ್ಥಾನದ ಗೋಡೆಯ ಅಗಲ ಆರು ಮೊಳಗಳೂ, ದೇವಸ್ಥಾನದ ಸುತ್ತುಮುತ್ತಲೂ ಎಲ್ಲಾ ಕಡೆ ಅದರ ಪಕ್ಕಗಳಿಗೆ ಅಂಟಿಕೊಂಡಿದ್ದ ಕೊಠಡಿಗಳ ಅಗಲ ನಾಲ್ಕು ನಾಲ್ಕು ಮೊಳಗಳೂ ಇದ್ದವು.
Och han mälte sex alnar högt på väggarna af templet; der voro gånger uppe allestäds omkring, skifte uti kamrar; de voro allestäds fyra alnar vide.
6 ೬ ಆ ಕೊಠಡಿಗಳು ಒಂದರ ಮೇಲೊಂದು ಮೂರು ಅಂತಸ್ತು ಆಗಿದ್ದವು; ಒಂದೊಂದು ಅಂತಸ್ತಿನಲ್ಲಿ ಮೂವತ್ತು ಕೊಠಡಿಗಳಿದ್ದವು; ದೇವಸ್ಥಾನದ ಗೋಡೆಯು ಮೆಟ್ಟಿಲುಗಳಿಂದ ಕಟ್ಟಲ್ಪಟ್ಟಿತ್ತು. ಗೋಡೆಯಲ್ಲಿ ರಂಧ್ರವಿಲ್ಲದೆ ಆ ಮೆಟ್ಟಿಲುಗಳೇ ಸುತ್ತಣ ಕೊಠಡಿಗಳ ತೊಲೆಗಳಿಗೆ ಆಧಾರವಾಗಿದ್ದವು. ಆದರೆ ಮನೆಯ ಗೋಡೆಗೆ ಯಾವ ಆಧಾರವಿರಲಿಲ್ಲ.
Och de samma kamrarna voro på hvar sidan tre och tretio, ju den ene vid den andra; och der stodo pelare nedre utmed väggarna af huset allt omkring, som uppehöllo dem.
7 ೭ ಸುತ್ತಣ ಅಂತಸ್ತುಗಳು ಮೇಲೆ ಹೋದ ಹಾಗೆಲ್ಲಾ ಆಯಾ ಕೊಠಡಿಗಳ ಅಗಲವು ಹೆಚ್ಚುತ್ತಾ ಬಂದಿತು. ಅವು ದೇವಸ್ಥಾನವನ್ನು ಸುತ್ತಿಕೊಂಡು ಮೇಲೆ ಹೋದ ಹಾಗೆಲ್ಲಾ ಅದನ್ನು ಬಿಗಿಯಾಗಿ ತಬ್ಬಿಕೊಂಡಂತೆ ಕಟ್ಟಲ್ಪಟ್ಟಿತ್ತು. ಹೀಗೆ ಮೇಲಿನ ಅಂತಸ್ತುಗಳು ದೇವಸ್ಥಾನದ ಕಡೆಗೆ ಅಗಲವಾಗುತ್ತಾ ಬಂದವು. ಕೆಳಗಿನ ಅಂತಸ್ತಿನಿಂದ ಮಧ್ಯದ ಅಂತಸ್ತಿನ ಮಾರ್ಗವಾಗಿ ಮೇಲಿನ ಅಂತಸ್ತಿಗೆ ಹತ್ತುತ್ತಿದ್ದರು.
Och ofvanuppå dessom voro ännu flere gånger omkring, och voro gångerna ofvantill vidare, så att man gick utaf den nedersta upp uti den medlersta, och utaf dem medleresta in uti den öfversta;
8 ೮ ದೇವಸ್ಥಾನದ ಸುತ್ತುಮುತ್ತಲೂ ಒಂದು ಜಗಲಿಯು ಕಾಣಿಸಿತು; ಅದು ಕೊಠಡಿಗಳಿಗೆ ತಳಹದಿಯಾಗಿ ನೆಲಮಟ್ಟದಿಂದ ಸುಮಾರು ಆರು ಮೊಳದ ಅಳತೆ ಕೋಲಿನಷ್ಟು ಎತ್ತರವಾಗಿತ್ತು.
Och hvar stod i ju sex alnar öfver den andra.
9 ೯ ಕೊಠಡಿಗಳ ಹೊರ ಗೋಡೆಯ ದಪ್ಪವು ಐದು ಮೊಳವಿತ್ತು ಮತ್ತು ಉಳಿದದ್ದು, ಒಳಗಿನ ಪಕ್ಕದ ಕೊಠಡಿಗಳ ಸ್ಥಳವಾಗಿತ್ತು.
Och öfversta gångens bredd var fem alnar, och pelarena båro uppe gångerna på husena.
10 ೧೦ ದೇವಸ್ಥಾನಕ್ಕೆ ಅಂಟಿಕೊಂಡ ಆ ಕೊಠಡಿಗಳಿಗೂ, ಪ್ರತ್ಯೇಕಿಸಿದ ಸ್ಥಳದ ಕೋಣೆಗಳಿಗೂ ನಡುವೆ ದೇವಸ್ಥಾನದ ಸುತ್ತುಮುತ್ತಲೂ ಇಪ್ಪತ್ತು ಮೊಳ ಅಂತರವಿತ್ತು.
Och det var ju, ifrå den ena väggene i husena intill den andra, tjugu alnar.
11 ೧೧ ಆ ಎಲ್ಲಾ ಕೊಠಡಿಗಳ ಪ್ರವೇಶಕ್ಕೂ ಎರಡೇ ಬಾಗಿಲು, ಉತ್ತರಕ್ಕೊಂದು, ದಕ್ಷಿಣಕ್ಕೊಂದು. ಅವೆರಡೂ ಜಗಲಿಯ ಕಡೆಗಿದ್ದವು. ಆ ಜಗಲಿಗಳೂ ಎಲ್ಲಾ ಸುತ್ತಲಿನ ಅಗಲವು ಐದು ಮೊಳವಾಗಿತ್ತು.
Och der voro två dörrar upp till vindstenen, en norrut, den andra söderut; och vindstenen var fem alnar vid.
12 ೧೨ ಪಶ್ಚಿಮದಲ್ಲಿ ಪ್ರತ್ಯೇಕಿಸಿದ ಸ್ಥಳದ ಹಿಂದಿನ ಶಾಲೆಯ ಅಗಲ ಎಪ್ಪತ್ತು ಮೊಳವೂ, ಉದ್ದ ತೊಂಭತ್ತು ಮೊಳವೂ, ಅದರ ಗೋಡೆಯ ದಪ್ಪ ಐದು ಮೊಳವಾಗಿತ್ತು.
Och muren vesterut var fem och sjutio alnar bred, och niotio alnar lång.
13 ೧೩ ಆ ಪುರುಷನು ಅಳೆಯಲು, ದೇವಸ್ಥಾನದ ಉದ್ದ ನೂರು ಮೊಳವೂ, ಪ್ರತ್ಯೇಕಿಸಿದ ಸ್ಥಳವನ್ನೂ ಮತ್ತು ಕಟ್ಟಡವನ್ನೂ ಗೋಡೆಗಳ ಸಹಿತವಾಗಿ ನೂರು ಮೊಳ ಉದ್ದವೆಂದು ಅಳೆದನು.
Och han mälte längdena af huset, den hade öfverallt hundrade alnar mur, och hvad dermed var.
14 ೧೪ ಇದಲ್ಲದೆ ದೇವಸ್ಥಾನದ ಮುಂಭಾಗ ಮತ್ತು ಪೂರ್ವದ ಕಡೆಗೆ ಇದ್ದ ಪ್ರತ್ಯೇಕ ಸ್ಥಳ ಇವುಗಳ ಒಟ್ಟು ಅಗಲ ನೂರು ಮೊಳವಾಗಿದ್ದವು.
Och vidden frammanför huset, östantill, med det som dervid stod, var också hundrade alnar.
15 ೧೫ ಅವನು ಪ್ರತ್ಯೇಕಿಸಿದ ಸ್ಥಳವನ್ನೂ, ಹಿಂದಿನ ಶಾಲೆಯನ್ನು ಆ ಪ್ರಾಕಾರದ ಕಡೆಯಲ್ಲಿ ಅಳತೆ ಮಾಡಲು ಅದರ ಉದ್ದ ಎರಡು ಪಕ್ಕದ ಗೋಡೆಗಳ ಸಹಿತ ನೂರು ಮೊಳವಿತ್ತು.
Och han mälte längdena af byggningene, med allt det dervid stod, ifrå den ena ändan till den andra; det var på hvar sidon hundrade alnar, med det inra templet och förhusen i gårdenom;
16 ೧೬ ಅವನು ಬಾಗಿಲುಗಳ ಕಂಬಗಳನ್ನೂ, ಇಕ್ಕಟ್ಟಾದ ಕಿಟಕಿಗಳನ್ನೂ ಮತ್ತು ಅದರ ಸುತ್ತಲೂ ಇದ್ದಂತಹ ಮೂರು ಅಂತಸ್ತಿನ ಬಾಗಿಲಿಗೆ ಎದುರಾಗಿ ಸುತ್ತಲೂ ಕಟ್ಟಲ್ಪಟ್ಟ ಗೋಡೆಗಳನ್ನೂ ಅಳೆದನು.
Samt med dörrar, fenster, hörn och de tre gånger, och brädeverk allt omkring.
17 ೧೭ ದ್ವಾರದಿಂದ ಗರ್ಭಗೃಹದವರೆಗೂ ಮತ್ತು ಗೃಹದ ಗೋಡೆಗೆಲ್ಲಾ ಸುತ್ತುಮುತ್ತಲೂ ಕೆರೂಬಿಗಳ ಮತ್ತು ಖರ್ಜೂರ ಮರಗಳ ಚಿತ್ರಗಳಿಗಿದ್ದವು.
Han mälte ock huru högt det var ifrå jordene upp till fenstren, och huru bred fenstren vara skulle, och mälte ifrå dörrene allt intill det aldrahelgasta, utantill och innantill allt omkring.
18 ೧೮ ಗೋಡೆಯ ಚೌಕಗಳಲ್ಲಿ ಕೆರೂಬಿಗಳೂ ಮತ್ತು ಖರ್ಜೂರ ಮರಗಳೂ ಚಿತ್ರಿತವಾಗಿದ್ದವು; ಎರಡೆರಡು ಕೆರೂಬಿಗಳ ನಡುವೆ ಒಂದೊಂದು ಖರ್ಜೂರ ಮರ; ಒಂದೊಂದು ಕೆರೂಬಿಗೆ ಎರಡೆರಡು ಮುಖಗಳಿತ್ತು.
Och på hela husena allt omkring ifrå nedan och allt uppåt, på dörrom och väggom, voro Cherubim och löfverk, gjordt emellan Cherub och Cherub, och hvar Cherub hade tu hufvud;
19 ೧೯ ಖರ್ಜೂರ ಮರದ ಒಂದು ಪಕ್ಕ ಮನುಷ್ಯನ ಮುಖಕ್ಕೆ ಎದುರಾಗಿಯೂ, ಇನ್ನೊಂದು ಪಕ್ಕ ಸಿಂಹದ ಮುಖಕ್ಕೆ ಎದುರಾಗಿತ್ತು. ಹೀಗೆ ದೇವಸ್ಥಾನದ ಒಳಗಿನ ಭಾಗವೆಲ್ಲಾ ಮತ್ತು ಸುತ್ತುಮುತ್ತಲೂ ಚಿತ್ರಮಯವಾಗಿತ್ತು.
På ene sidone såsom ens menniskos hufvud, på den andra sidone såsom ett lejons hufvud; detta var gjordt i hela huset rundtomkring.
20 ೨೦ ನೆಲದಿಂದ ದ್ವಾರದ ಮೇಲಿನ ತನಕ ಕೆರೂಬಿಗಳ ಮತ್ತು ಖರ್ಜೂರ ಮರಗಳ ಚಿತ್ರಗಳಿದ್ದವು.
Frå golfvet allt uppåt öfver dörren voro Cherubim och löfverk gjorde; desslikes på väggena af templet.
21 ೨೧ ಪರಿಶುದ್ಧ ಸ್ಥಳದ ಇನ್ನೊಂದು ಕಡೆಯ ಗೋಡೆಯ ಬಾಗಿಲ ಚೌಕಟ್ಟು ಚಚ್ಚೌಕವಾಗಿತ್ತು. ಮಹಾಪರಿಶುದ್ಧ ಸ್ಥಳದ ಈಚಿನ ಗೋಡೆಯ ಚೌಕಟ್ಟೂ ಹಾಗೆಯೇ ಇತ್ತು.
Och dörren i templet var fyrkant, och all ting var slögliga fogadt in uti det andra.
22 ೨೨ ಅಲ್ಲಿ ಮರದ ವೇದಿಕೆಯೊಂದಿತ್ತು. ಅದರ ಎತ್ತರ ಮೂರು ಮೊಳ, ಉದ್ದ ಎರಡು ಮೊಳವಾಗಿತ್ತು. ಅದರ ಮೂಲೆಗಳೂ, ಪೀಠವೂ, ಪಕ್ಕಗಳೂ ಮರದ್ದೇ ಆಗಿದ್ದವು. ಆ ಪುರುಷನು ನನಗೆ, “ಇದು ಯೆಹೋವನ ಸಮ್ಮುಖದ ಮೇಜು” ಎಂದು ಹೇಳಿದನು.
Och träaltaret var tre alnar högt, och två alnar långt och bredt, och dess hörn och alla dess sidor voro af trä. Och han sade till mig: Detta är bordet, som för Herranom stå skall.
23 ೨೩ ಪರಿಶುದ್ಧ ಸ್ಥಳಕ್ಕೆ ಮತ್ತು ಮಹಾಪರಿಶುದ್ಧ ಸ್ಥಳಕ್ಕೆ ಎರಡೆರಡು ಬಾಗಿಲುಗಳಿದ್ದವು.
Och dörrarna, både åt templet och åt det aldrahelgasta,
24 ೨೪ ಒಂದೊಂದು ಬಾಗಿಲಿಗೆ ಎರಡೆರಡು ಮಡಚುವ ಭಾಗಗಳಿದ್ದವು. ಈ ಕಡೆಯ ಬಾಗಿಲಿಗೆ ಎರಡು ಭಾಗ, ಆ ಕಡೆಯ ಬಾಗಿಲಿಗೆ ಎರಡು ಭಾಗಗಳು ಇದ್ದವು.
Hade två vingar, de man upp och till lät.
25 ೨೫ ಆ ಬಾಗಿಲುಗಳಲ್ಲಿ ಅಂದರೆ ಪರಿಶುದ್ಧ ಸ್ಥಳದ ಬಾಗಿಲುಗಳಲ್ಲಿ ಕೆರೂಬಿಗಳ ಮತ್ತು ಖರ್ಜೂರ ಮರಗಳ ಚಿತ್ರಗಳು ಗೋಡೆಗಳಲ್ಲಿ ಚಿತ್ರಿಸಲ್ಪಟ್ಟ ಹಾಗೆಯೇ ಇದ್ದವು. ದ್ವಾರಮಂಟಪದ ಹೊರಗಡೆ ಮರದ ಹಲಗೆಗಳಿದ್ದವು.
Och der voro också Cherubim och löfverk uppå, lika som på väggomen, och der voro starke bommar före in mot förhuset.
26 ೨೬ ದ್ವಾರಮಂಟಪದ ಪಕ್ಕದ ಗೋಡೆಗಳಲ್ಲಿ ತೆರೆಯಲಾಗದ ಕಿಟಕಿಗಳೂ ಇದ್ದವು. ಅವುಗಳ ಮೇಲೆ ಖರ್ಜೂರ ಮರಗಳು ಚಿತ್ರಿತವಾಗಿದ್ದವು ಮತ್ತು ಮೇಲೆ ತೂಗಾಡುವ ಮೇಲ್ಛಾವಣಿಗಳು ಇದ್ದವು.
Och voro trång fenster, och mycket löfverk allt omkring, på förhusens, och på väggomen.