< ಯೆಹೆಜ್ಕೇಲನು 40 >
1 ೧ ನಾವು ಸೆರೆಯಾದ ಇಪ್ಪತ್ತೈದನೆಯ ವರ್ಷದ, ಮೊದಲನೆಯ ತಿಂಗಳಿನ, ಹತ್ತನೆಯ ದಿನದಲ್ಲಿ, ಪಟ್ಟಣವು ಹಾಳಾದ ಮೇಲೆ ಹದಿನಾಲ್ಕನೆಯ ವರ್ಷದ ಆ ದಿನದಲ್ಲೇ ಯೆಹೋವನ ಹಸ್ತಸ್ಪರ್ಶದಿಂದ ನಾನು ಪರವಶನಾಗಲು, ಆತನು ನನ್ನನ್ನು ಅಲ್ಲಿಗೆ ಬರಮಾಡಿದನು.
ଆମ୍ଭମାନଙ୍କ ନିର୍ବାସନର ପଚିଶ ବର୍ଷରେ, ବର୍ଷର ଆରମ୍ଭରେ ମାସର ଦଶମ ଦିନରେ, ଅର୍ଥାତ୍, ନଗର ନିପାତିତ ହେଲା ଉତ୍ତାରେ ଚତୁର୍ଦ୍ଦଶ ବର୍ଷର ଉକ୍ତ ଦିବସରେ ସଦାପ୍ରଭୁଙ୍କର ହସ୍ତ ମୋʼ ଉପରେ ଅଧିଷ୍ଠିତ ଥିଲା ଓ ସେ ମୋତେ ସେହି ସ୍ଥାନରେ ଉପସ୍ଥିତ କରାଇଲେ।
2 ೨ ಯೆಹೋವನು ನನ್ನನ್ನು ಇಸ್ರಾಯೇಲ್ ದೇಶಕ್ಕೆ ತಂದು, ಅತ್ಯುನ್ನತ ಪರ್ವತದ ಮೇಲೆ ಇಳಿಸಿದನೆಂದು ದೇವರ ದರ್ಶನದಲ್ಲಿ ನನಗೆ ಕಂಡುಬಂದಿತು. ದಕ್ಷಿಣದ ಕಡೆ ಆ ಪರ್ವತದ ಮೇಲೆ ಪಟ್ಟಣದಂತಿರುವ ಕಟ್ಟಡಗಳು ಕಾಣಿಸಿತು.
ଈଶ୍ୱରୀୟ ଦର୍ଶନରେ ସେ ମୋତେ ଇସ୍ରାଏଲ ଦେଶକୁ ଆଣି ଅତି ଉଚ୍ଚ ଏକ ପର୍ବତରେ ବସାଇଲେ, ତହିଁ ଉପରେ, ଦକ୍ଷିଣ ଦିଗରେ ଗୋଟିଏ ନଗର ତୁଲ୍ୟ ଆକୃତି ଥିଲା।
3 ೩ ಆಮೇಲೆ ಆತನು ನನ್ನನ್ನು ಅಲ್ಲಿಗೆ ತಂದಾಗ, ಇಗೋ, ತಾಮ್ರದಂತೆ ಹೊಳೆಯುವ ಒಬ್ಬ ಪುರುಷನು ನಾರಿನ ನೂಲನ್ನು, ಅಳತೆಯ ಕೋಲನ್ನೂ ಕೈಯಲ್ಲಿ ಹಿಡಿದುಕೊಂಡು ಬಾಗಿಲಲ್ಲೇ ನಿಂತುಕೊಂಡಿದ್ದನು.
ସେ ମୋତେ ସେହି ସ୍ଥାନକୁ ନେଇଗଲେ, ଆଉ ଦେଖ, ସେଠାରେ ଏକ ପୁରୁଷ ଥିଲେ, ପିତ୍ତଳର ଆଭା ତୁଲ୍ୟ ତାଙ୍କର ଆଭା, ତାଙ୍କ ହସ୍ତରେ ଛଣପଟର ଏକ ରଜ୍ଜୁ ଓ ପରିମାପକ ଏକ ନଳ ଥିଲା ଓ ସେ ଦ୍ୱାରରେ ଠିଆ ହୋଇଥିଲେ।
4 ೪ ಆ ಪುರುಷನು ನನಗೆ, “ನರಪುತ್ರನೇ, ನೀನು ಕಣ್ಣಿಟ್ಟು ನೋಡು, ಕಿವಿಗೊಟ್ಟು ಕೇಳು; ನಾನು ನಿನಗೆ ತೋರಿಸುವುದನ್ನೆಲ್ಲಾ ಮನಸ್ಸಿಟ್ಟು ತಿಳಿದುಕೋ. ನಾನು ನಿನಗೆ ತೋರಿಸುವುದನ್ನು ನೀನು ನೋಡಬೇಕೆಂದೇ ಇಲ್ಲಿಗೆ ಬರಮಾಡಿದ್ದೇನೆ. ನೀನು ನೋಡುವುದನ್ನೆಲ್ಲಾ ಇಸ್ರಾಯೇಲ್ ವಂಶದವರಿಗೆ ಪ್ರಕಟಿಸು” ಎಂದು ಹೇಳಿದನು.
ଏଥିରେ ସେ ପୁରୁଷ ମୋତେ କହିଲେ, “ହେ ମନୁଷ୍ୟ-ସନ୍ତାନ, ଆମ୍ଭେ ତୁମ୍ଭକୁ ଯାହା ଯାହା ଦେଖାଇବା, ସେହି ସବୁ ତୁମ୍ଭେ ଆପଣା ଚକ୍ଷୁରେ ଦେଖ ଓ ଆପଣା କର୍ଣ୍ଣରେ ଶୁଣ ଓ ତହିଁରେ ମନୋନିବେଶ କର; କାରଣ ଆମ୍ଭେ ଯେପରି ସେହି ସବୁ ତୁମ୍ଭକୁ ଦେଖାଉ, ଏ ଅଭିପ୍ରାୟରେ ତୁମ୍ଭେ ଏଠାକୁ ଆନୀତ ହୋଇଅଛ; ତୁମ୍ଭେ ଯାହା ଯାହା ଦେଖିବ, ତାହାସବୁ ଇସ୍ରାଏଲ ବଂଶକୁ ଜ୍ଞାତ କରାଅ।”
5 ೫ ಇಗೋ, ಒಂದು ಗೋಡೆಯು ಆ ಕಟ್ಟಡವನ್ನು ಸುತ್ತಿಕೊಂಡಿತ್ತು. ಆ ಪುರುಷನ ಕೈಯಲ್ಲಿ ಆರು ಮೊಳ ಉದ್ದದ ಅಳತೆ ಕೋಲು ಇತ್ತು. (ಉದ್ದಮೊಳ ಅಂದರೆ ಮೊಳದ ಮೇಲೆ ಒಂದು ಹಿಡಿ ಉದ್ದ); ಅವನು ಆ ಗೋಡೆಯ ಅಗಲವನ್ನು ಅಳತೆ ಮಾಡಿದಾಗ ಅದರ ಅಗಲವೂ ಮತ್ತು ಎತ್ತರವೂ ಒಂದೇ ಕೋಲಾಗಿತ್ತು.
ଆଉ ଦେଖ, ଗୃହର ବାହାରେ ଚତୁର୍ଦ୍ଦିଗରେ ଏକ ପ୍ରାଚୀର ଥିଲା ଓ ସେହି ପୁରୁଷଙ୍କ ହସ୍ତରେ ଏକ ପରିମାପକ ଦଣ୍ଡ ଥିଲା, ତାହା ଛଅ ହାତ ଦୀର୍ଘ, ପ୍ରତ୍ୟେକ ହାତ ଏକ ହାତ ଚାରି ଅଙ୍ଗୁଳି ପରିମିତ; ତହିଁରେ ସେ ଗୃହର ସ୍ଥୂଳତା ଏକ ହାତ ଓ ଉଚ୍ଚତା ଏକ ହାତ ମାପିଲେ।
6 ೬ ಆಮೇಲೆ ಅವನು ಪೂರ್ವದಿಕ್ಕಿನ ಹೆಬ್ಬಾಗಿಲಿಗೆ ಬಂದು, ಮೆಟ್ಟಿಲುಗಳನ್ನು ಹತ್ತಿ, ಹೊಸ್ತಿಲಿನ ಅಗಲವನ್ನು ಅಳೆದನು. ಅದು ಒಂದೇ ಕೋಲು ಅಗಲವಾಗಿತ್ತು. ಅಗಲವಾದ ಹೊಸ್ತಿಲಿನ ಬಾಗಿಲೂ ಅಲ್ಲಿ ಇತ್ತು.
ଏଉତ୍ତାରେ ସେ ପୂର୍ବାଭିମୁଖ ଦ୍ୱାରକୁ ଆସି ତହିଁର ପାବଚ୍ଛ ଦେଇ ଉପରକୁ ଉଠିଲେ; ଆଉ, ଦ୍ୱାରର ସମ୍ମୁଖ ସ୍ଥାନର ପ୍ରସ୍ଥ ଏକ ହାତ ଓ ଅନ୍ୟ ସମ୍ମୁଖ ସ୍ଥାନର ପ୍ରସ୍ଥ ଏକ ହାତ ମାପିଲେ।
7 ೭ ಅಲ್ಲಿ ಗೋಡೆಯಲ್ಲಿದ್ದ ಒಂದೊಂದು ಕೋಣೆಯು ಒಂದು ಕೋಲು ಉದ್ದವಾಗಿಯೂ, ಒಂದು ಕೋಲು ಅಗಲವಾಗಿಯೂ ಇತ್ತು. ದೇವಸ್ಥಾನಕ್ಕೆ ಎದುರಾಗಿರುವ ಹೆಬ್ಬಾಗಿಲ ಕೈಸಾಲೆಯ ಹೊಸ್ತಿಲಿನ ಅಗಲವು ಒಂದು ಕೋಲು. ಆ ಗೋಡೆಕೋಣೆಗಳು ಒಂದಕ್ಕೊಂದು ಐದೈದು ಮೊಳ ದೂರವಾಗಿದ್ದವು; ದೇವಸ್ಥಾನಕ್ಕೆ ಎದುರಾಗಿರುವ ಹೆಬ್ಬಾಗಿಲ ಕೈಸಾಲೆಯ ಹೊಸ್ತಿಲಿನ ಅಗಲವು ಒಂದು ಕೋಲು.
ପୁଣି, ପ୍ରତ୍ୟେକ କ୍ଷୁଦ୍ର କୋଠରି ଏକ ହାତ ଦୀର୍ଘ ଓ ଏକ ହାତ ପ୍ରସ୍ଥ ଥିଲା; ଆଉ, ପ୍ରତ୍ୟେକ କ୍ଷୁଦ୍ର କୋଠରିର ମଧ୍ୟରେ ପାଞ୍ଚ ପାଞ୍ଚ ହାତ ଛଡ଼ା ଥିଲା ଓ ଗୃହାଭିମୁଖ ଦ୍ୱାରର ବାରଣ୍ଡା ନିକଟସ୍ଥ ଦ୍ୱାରର ସମ୍ମୁଖ ସ୍ଥାନ ଏକ ହାତ ଥିଲା।
8 ೮ ಆಮೇಲೆ ಅವನು ಹೆಬ್ಬಾಗಿಲ ಕೈಸಾಲೆಯ ಅಗಲವನ್ನು ಅಳೆದನು. ಅದು ಒಂದು ಕೋಲು ಉದ್ದವಾಗಿತ್ತು.
ଗୃହାଭିମୁଖ ଦ୍ୱାରର ବାରଣ୍ଡା ମଧ୍ୟ ସେ ଏକ ହାତ ମାପିଲେ।
9 ೯ ಆಮೇಲೆ ಅವನು ಹೆಬ್ಬಾಗಿಲ ಕೈಸಾಲೆಯನ್ನು ಎಂಟು ಮೊಳವೆಂದೂ; ಅದರ ಕಂಬಗಳನ್ನು ಎರಡು ಮೊಳವೆಂದೂ ಅಳೆದನು. ಹೆಬ್ಬಾಗಿಲಿನ ಕೈಸಾಲೆಯು ದೇವಸ್ಥಾನಕ್ಕೆ ಎದುರಾಗಿತ್ತು.
ତହୁଁ ସେ ଦ୍ୱାରର ବାରଣ୍ଡା ଆଠ ହାତ ମାପିଲେ ଓ ତହିଁର ଉପସ୍ତମ୍ଭସକଳ ଦୁଇ ହାତ ଥିଲା; ପୁଣି, ଦ୍ୱାରର ବାରଣ୍ଡା ଗୃହ ପ୍ରତି ଥିଲା।
10 ೧೦ ಪೂರ್ವದಿಕ್ಕಿನ ಹೆಬ್ಬಾಗಿಲಿನ ಎರಡು ಪಕ್ಕಗಳಲ್ಲಿ ಮೂರು ಗೋಡೆಕೋಣೆಗಳಿದ್ದವು. ಆ ಮೂರಕ್ಕೂ ಒಂದೇ ಅಳತೆ ಇತ್ತು. ಎರಡು ಪಕ್ಕಗಳಲ್ಲಿನ ಕಂಬಗಳೂ ಒಂದೇ ಅಳತೆಯಾಗಿದ್ದವು.
ଆଉ, ପୂର୍ବାଭିମୁଖ ଦ୍ୱାରର କ୍ଷୁଦ୍ର କୋଠରି ଏପାଖରେ ତିନି ଓ ସେପାଖରେ ତିନି ଥିଲା; ସେ ତିନିର ମାପ ଏକ ସମାନ ଥିଲା; ଆଉ, ଏପାଖ ଓ ସେପାଖ ସ୍ତମ୍ଭସବୁର ଏକ ସମାନ ମାପ ଥିଲା।
11 ೧೧ ಅನಂತರ ಅವನು ಹೆಬ್ಬಾಗಿಲ ದ್ವಾರದ ಅಗಲ ಹತ್ತು ಮೊಳವೆಂದೂ ಉದ್ದ ಹದಿಮೂರು ಮೊಳವೆಂದೂ ಅಳೆದನು.
ପୁଣି, ସେ ଦ୍ୱାରର ପ୍ରବେଶ ସ୍ଥାନର ପ୍ରସ୍ଥ ଦଶ ହାତ ଓ ଦ୍ୱାରର ଦୀର୍ଘତା ତେର ହାତ ମାପିଲେ,
12 ೧೨ ಎರಡು ಪಕ್ಕಗಳಲ್ಲಿನ ಗೋಡೆಕೋಣೆಗಳ ಮುಂದೆ ಒಂದೊಂದು ಮೊಳ ಅವಕಾಶ; ಎರಡು ಕಡೆಯ ಗೋಡೆಕೋಣೆಗಳ ಅಗಲವು ಮೂರು ಮೊಳ.
ଆଉ କ୍ଷୁଦ୍ର କୋଠରିସକଳର ସମ୍ମୁଖରେ, ଏପାଖରେ ଏକ ହାତ, ସେପାଖରେ ଏକ ହାତ ଧାର ଥିଲା ଓ ପ୍ରତ୍ୟେକ କ୍ଷୁଦ୍ର କୋଠରି ଏକ ପାଖରେ ଛଅ ହାତ, ଅନ୍ୟ ପାଖରେ ଛଅ ହାତ ଥିଲା।
13 ೧೩ ಅವನು ಒಂದು ಕಡೆಯ ಗೋಡೆಕೋಣೆಗಳ ಮಾಳಿಗೆಯ ಹೊರಗಡೆಯಿಂದ ಇನ್ನೊಂದು ಕಡೆಯ ಗೋಡೆಕೋಣೆಗಳ ಮಾಳಿಗೆಯ ಹೊರಗಡೆ ಅಂದರೆ ಒಂದು ಕೋಣೆಯ ಬಾಗಿಲಿಂದ ಇನ್ನೊಂದು ಕೋಣೆಯ ಬಾಗಿಲಿಗೆ ಹೆಬ್ಬಾಗಿಲಿನ ಅಗಲವನ್ನು ಅಳೆಯಲು ಇಪ್ಪತ್ತೈದು ಮೊಳವಾಗಿತ್ತು.
ପୁଣି, ସେ ଏକ କ୍ଷୁଦ୍ର କୋଠରିର ଛାତଠାରୁ ଅନ୍ୟ କ୍ଷୁଦ୍ର କୋଠରିର ଛାତ ପର୍ଯ୍ୟନ୍ତ ଦ୍ୱାରର ପ୍ରସ୍ଥ ପଚିଶ ହାତ ମାପିଲେ; ଦ୍ୱାର ସମ୍ମୁଖରେ ଦ୍ୱାର ଥିଲା।
14 ೧೪ ಅಂಗಳದಲ್ಲಿನ ಕಂಬಗಳನ್ನು ಅಳತೆ ಮಾಡಲು ಅರವತ್ತು ಮೊಳವಿದ್ದವು; ಅದನ್ನು ಹೆಬ್ಬಾಗಿಲಿನ ಸುತ್ತುಮುತ್ತಲಿರುವ ಕಂಬದವರೆಗೂ ಅಳೆದನು.
ଉପସ୍ତମ୍ଭସକଳ ମଧ୍ୟ ସେ ଷାଠିଏ ହାତ ମାପିଲେ; ପୁଣି, ପ୍ରାଙ୍ଗଣ ଉପସ୍ତମ୍ଭ ପର୍ଯ୍ୟନ୍ତ ଗଲା, ଚାରିଆଡ଼େ ଦ୍ୱାର ଥିଲା।
15 ೧೫ ಪ್ರವೇಶದ ಬಾಗಿಲಿನ ಮುಂದುಗಡೆಯಿಂದ ಒಳ ಬಾಗಿಲಿನ ದ್ವಾರದ ಅಂಗಳದವರೆಗೂ ಐವತ್ತು ಮೊಳ ಉದ್ದವಾಗಿತ್ತು.
ପୁଣି, ପ୍ରବେଶାର୍ଥକ ଦ୍ୱାରର ଅଗ୍ରଭାଗରୁ ଅନ୍ତରସ୍ଥ ବାରଣ୍ଡାର ଅଗ୍ରଭାଗ ପର୍ଯ୍ୟନ୍ତ ପଚାଶ ହାତ ଥିଲା।
16 ೧೬ ಗೋಡೆ ಕೋಣೆಗಳಲ್ಲಿಯೂ ಒಳ ಎರಡು ಕಡೆಯ ನಿಲುವು ಕಂಬಗಳಲ್ಲಿಯೂ, ಕೈಸಾಲೆಗಳಲ್ಲಿಯೂ ಸಹ ಒಳಗಡೆ ಸುತ್ತಲೂ ಇಕ್ಕಟಾದ ಕಿಟಕಿಗಳಿದ್ದವು. ಒಂದೊಂದು ಗೋಡೆಯ ಮೇಲೆ ಖರ್ಜೂರ ಮರಗಳ ಚಿತ್ರಗಳಿದ್ದವು.
ପୁଣି, ଦ୍ୱାର ଭିତରେ ଚାରିଆଡ଼େ କ୍ଷୁଦ୍ର କୋଠରି ଓ ଉପସ୍ତମ୍ଭସକଳର ବନ୍ଦ ଜଳାକବାଟି ଥିଲା ଓ ମଣ୍ଡପସକଳରେ ମଧ୍ୟ ତଦ୍ରୂପ ଥିଲା, ଆଉ ଜଳାକବାଟିସବୁ ଭିତରେ ଚାରିଆଡ଼େ ଥିଲା ଓ ପ୍ରତ୍ୟେକ ଉପସ୍ତମ୍ଭ ଉପରେ ଖର୍ଜ୍ଜୁର ବୃକ୍ଷର ଆକୃତି ଥିଲା।
17 ೧೭ ಆ ಮೇಲೆ ಅವನು ನನ್ನನ್ನು ಹೊರಗಿನ ಅಂಗಳಕ್ಕೆ ಕರೆದು ತಂದನು; ಇಗೋ, ಕೋಣೆಗಳೂ ಅಂಗಳದ ಸುತ್ತಲೂ ಕಲ್ಲುಹಾಸಿದ ನೆಲವೂ ಕಾಣಿಸಿದವು; ಕಲ್ಲುಹಾಸಿದ ನೆಲದ ಮೇಲೆ ಒಟ್ಟಾಗಿ ಮೂವತ್ತು ಕೊಠಡಿಗಳಿದ್ದವು.
ତହୁଁ ସେ ମୋତେ ବାହାର ପ୍ରାଙ୍ଗଣକୁ ଆଣିଲେ, ଆଉ ଦେଖ, ପ୍ରାଙ୍ଗଣର ଚାରିଆଡ଼େ କେତେକ କୋଠରି ଓ ନିର୍ମିତ ଚଟାଣ ଥିଲା; ସେହି ଚଟାଣ ଉପରେ ତିରିଶ କୋଠରି ଥିଲା।
18 ೧೮ ಆ ಕೆಳಗಣ ಕಲ್ಲುಹಾಸಿದ ನೆಲವೂ ಹೆಬ್ಬಾಗಿಲುಗಳ ಎರಡು ಪಕ್ಕಗಳವರೆಗೂ ಹಾಸಲ್ಪಟಿತ್ತು. ಅದರ ಅಗಲವೂ ಬಾಗಿಲುಗಳ ಉದ್ದಕ್ಕೆ ಸಮನಾಗಿತ್ತು. ಇದು ಕೆಳಗಿನ ಕಲ್ಲುಹಾಸಿದ ನೆಲವಾಗಿತ್ತು.
ପୁଣି, ସେହି ଚଟାଣ ଦ୍ୱାରସକଳର ପାର୍ଶ୍ୱରେ, ଦ୍ୱାରର ଦୀର୍ଘତାନୁସାରେ ଥିଲା, ଏହା ନିମ୍ନତର ଚଟାଣ।
19 ೧೯ ಅವನು ಪೂರ್ವಕ್ಕೂ, ಉತ್ತರಕ್ಕೂ ಕೆಳಗಣ ಹೆಬ್ಬಾಗಿಲಿನ ಒಳಗಡೆಯಿಂದ ಒಳಗಣ ಅಂಗಳದ ಹೊರಗಡೆಯ ತನಕ ಅಳೆಯಲು, ಅದು ನೂರು ಮೊಳವಿತ್ತು.
ତେବେ ସେ ନିମ୍ନତର ଦ୍ୱାରର ଅଗ୍ରଭାଗଠାରୁ ଭିତର ପ୍ରାଙ୍ଗଣର ଅଗ୍ରଭାଗ ପର୍ଯ୍ୟନ୍ତ ବାହାର ପ୍ରସ୍ଥ ମାପିଲେ, ପୂର୍ବ ଓ ଉତ୍ତର ଉଭୟ ଦିଗରେ ଏକ ଶହ ହାତ।
20 ೨೦ ಇದಲ್ಲದೆ ಹೊರಗಣ ಅಂಗಳದ ಉತ್ತರದ ಹೆಬ್ಬಾಗಿಲಿನ ಅಗಲವನ್ನೂ ಮತ್ತು ಉದ್ದವನ್ನೂ ಅಳೆದನು.
ପୁଣି, ସେ ବାହାର ପ୍ରାଙ୍ଗଣର ଉତ୍ତରାଭିମୁଖ ଦ୍ୱାରର ଦୀର୍ଘତା ଓ ପ୍ରସ୍ଥ ମାପିଲେ।
21 ೨೧ ಅದರೊಳಗೆ ಎರಡು ಕಡೆ ಮೂರು ಗೋಡೆಕೋಣೆಗಳಿದ್ದವು; ಅಲ್ಲಿನ ಕಂಬಗಳೂ ಕೈಸಾಲೆಯೂ ಮೊದಲನೆಯ ಹೆಬ್ಬಾಗಿಲಿನ ಅಳತೆಯಂತಿದ್ದವು. ಆ ಹೆಬ್ಬಾಗಿಲಿನ ಉದ್ದವೂ ಐವತ್ತು ಮೊಳ, ಅಗಲವೂ ಇಪ್ಪತ್ತೈದು ಮೊಳವಾಗಿತ್ತು.
ଆଉ, ତହିଁର ଏକ ପାର୍ଶ୍ୱରେ ତିନି, ଅନ୍ୟ ପାର୍ଶ୍ୱରେ ତିନି କ୍ଷୁଦ୍ର କୋଠରି ଓ ତହିଁର ଉପସ୍ତମ୍ଭ ଓ ମଣ୍ଡପସକଳର ପରିମାଣ ପ୍ରଥମ ଦ୍ୱାରର ପରିମାଣ ତୁଲ୍ୟ, ଅର୍ଥାତ୍, ତହିଁର ଦୀର୍ଘତା ପଚାଶ ହାତ ଓ ପ୍ରସ୍ଥ ପଚିଶ ହାତ ଥିଲା।
22 ೨೨ ಅಲ್ಲಿನ ಕಿಟಕಿಗಳೂ, ಕೈಸಾಲೆಯೂ, ಚಿತ್ರಿತವಾಗಿದ್ದ ಖರ್ಜೂರ ಮರಗಳೂ ಮೂಡಣ ಹೆಬ್ಬಾಗಿಲಿನ ಕಡೆಗೆ ಅಭಿಮುಖವಾಗಿದ್ದವು. ಅವರು ಏಳು ಮೆಟ್ಟಿಲುಗಳನ್ನು ಹತ್ತಿ, ಅಲ್ಲಿಗೆ ಸೇರುತ್ತಿದ್ದರು. ಕೈಸಾಲೆಯು ಅದರ ಒಳಗಡೆಯಿತ್ತು.
ପୁଣି, ତହିଁର ଜଳାକବାଟି, ମଣ୍ଡପ ଓ ଖର୍ଜ୍ଜୁର ବୃକ୍ଷର ଆକୃତିସକଳ ପୂର୍ବାଭିମୁଖ ଦ୍ୱାରର ପରିମାଣାନୁସାରେ ଥିଲା; ଲୋକମାନେ ସାତ ପାହାଚ ଦେଇ ତହିଁ ଉପରକୁ ଗଲେ ଓ ତହିଁର ମଣ୍ଡପ ତହିଁ ସମ୍ମୁଖରେ ଥିଲା।
23 ೨೩ ಹೊರಗಣ ಅಂಗಳದ ಉತ್ತರ ಮತ್ತು ಪೂರ್ವಕ್ಕಿರುವ ಹೆಬ್ಬಾಗಿಲುಗಳಿಗೆ ಎದುರಾಗಿ ಒಳಗಣ ಹೆಬ್ಬಾಗಿಲುಗಳು ಇದ್ದವು; ಒಂದು ಬಾಗಿಲಿನಿಂದ ಎದುರು ಬಾಗಿಲಿಗೆ ನೂರು ಮೊಳ ಅಳತೆ ಮಾಡಿದನು.
ଆଉ, ଉତ୍ତର ଓ ପୂର୍ବ ଦୁଇଆଡ଼େ, ଅନ୍ୟ ଦ୍ୱାରର ସମ୍ମୁଖରେ ଭିତର ପ୍ରାଙ୍ଗଣକୁ ଗୋଟିଏ ଦ୍ୱାର ଥିଲା; ପୁଣି, ସେ ଏକ ଦ୍ୱାରଠାରୁ ଅନ୍ୟ ଦ୍ୱାର ପର୍ଯ୍ୟନ୍ତ ଏକ ଶହ ହାତ ମାପିଲେ।
24 ೨೪ ಆ ಮೇಲೆ ಅವನು ನನ್ನನ್ನು ದಕ್ಷಿಣಕ್ಕೆ ಕರೆ ತಂದನು. ಇಗೋ, ಅಲ್ಲಿಯೂ ಒಂದು ಹೆಬ್ಬಾಗಿಲು ಇತ್ತು; ಅವನು ಅಲ್ಲಿನ ಕಂಬಗಳನ್ನೂ, ಕೈಸಾಲೆಯನ್ನೂ ಈ ಅಳತೆಯ ಪ್ರಕಾರವೇ ಅಳೆದನು.
ଏଥିଉତ୍ତାରେ ସେ ମୋତେ ଦକ୍ଷିଣ ଦିଗକୁ ନେଇଗଲେ, ଆଉ ଦେଖ, ଦକ୍ଷିଣ ଆଡ଼େ ଏକ ଦ୍ୱାର ଥିଲା; ଆଉ, ସେ ଉପରୋକ୍ତ ପରିମାଣାନୁସାରେ ତହିଁର ଉପସ୍ତମ୍ଭ ଓ ମଣ୍ଡପସକଳ ପରିମାଣ କଲେ।
25 ೨೫ ಅದರ ಕೈಸಾಲೆಗಳಲ್ಲಿಯೂ ಸುತ್ತಲೂ ಕಿಟಕಿಗಳೇ ಇದ್ದವು; ಅದರ ಉದ್ದವೂ ಐವತ್ತು ಮೊಳ ಮತ್ತು ಅಗಲವೂ ಇಪ್ಪತ್ತೈದು ಮೊಳವಾಗಿತ್ತು.
ପୁଣି, ତହିଁରେ ଓ ତହିଁର ମଣ୍ଡପସକଳର ଚାରିଆଡ଼େ ପୂର୍ବୋକ୍ତ ଜଳାକବାଟି ପରି ଜଳାକବାଟି ଥିଲା; ଦୀର୍ଘତା ପଚାଶ ହାତ ଓ ପ୍ରସ୍ଥ ପଚିଶ ହାତ ଥିଲା।
26 ೨೬ ಅಲ್ಲಿ ಹತ್ತುವುದಕ್ಕೆ ಏಳು ಮೆಟ್ಟಿಲುಗಳಿದ್ದವು. ಕೈಸಾಲೆಯ ಎರಡು ಪಕ್ಕದ ಕಂಬಗಳಲ್ಲಿ ಖರ್ಜೂರ ಮರಗಳ ಚಿತ್ರಗಳಿದ್ದವು.
ତହିଁ ଉପରକୁ ଯିବା ପାଇଁ ସାତୋଟି ପାବଚ୍ଛ ଥିଲା ଓ ତହିଁର ମଣ୍ଡପ ତହିଁ ସମ୍ମୁଖରେ ଥିଲା; ପୁଣି, ତହିଁର ଉପସ୍ତମ୍ଭସକଳର ଏପାଖରେ ସେପାଖରେ ଏକ ଏକ ଖର୍ଜ୍ଜୁର ବୃକ୍ଷର ଆକୃତି ଥିଲା।
27 ೨೭ ಒಳಗಿನ ಅಂಗಳದಲ್ಲಿ ದಕ್ಷಿಣದ ಕಡೆಗೆ ಹೆಬ್ಬಾಗಿಲಿತ್ತು; ದಕ್ಷಿಣದ ಒಂದು ಬಾಗಿಲಿಂದ ಮತ್ತೊಂದು ಬಾಗಿಲಿಗೆ ನೂರು ಮೊಳ ಅಳೆದನು.
ଆଉ, ଦକ୍ଷିଣ ଆଡ଼ ଭିତର ପ୍ରାଙ୍ଗଣକୁ ଏକ ଦ୍ୱାର ଥିଲା; ତହୁଁ ସେ ଦକ୍ଷିଣ ଆଡ଼ର ଏକ ଦ୍ୱାରଠାରୁ ଅନ୍ୟ ଦ୍ୱାର ପର୍ଯ୍ୟନ୍ତ ଏକ ଶହ ହାତ ମାପିଲେ।
28 ೨೮ ಆಮೇಲೆ ಅವನು ನನ್ನನ್ನು ದಕ್ಷಿಣ ಬಾಗಿಲಿನ ಮಾರ್ಗವಾಗಿ ಒಳಗಣ ಅಂಗಳಕ್ಕೆ ಕರೆದು ತಂದನು. ಅವನು ಆ ದಕ್ಷಿಣ ಹೆಬ್ಬಾಗಿಲನ್ನೂ, ಅಲ್ಲಿನ ಗೋಡೆಕೋಣೆ, ಕಂಬ, ಕೈಸಾಲೆ ಇವುಗಳನ್ನೂ ಅಳೆಯಲು, ಅದರ ಅಳತೆಗಳೆಲ್ಲ ಸಮನಾಗಿದ್ದವು.
ଏଉତ୍ତାରେ ସେ ମୋତେ ଦକ୍ଷିଣ ଦ୍ୱାର ଦେଇ ଭିତର ପ୍ରାଙ୍ଗଣକୁ ଆଣିଲେ ଓ ସେ ପୂର୍ବୋକ୍ତ ପରିମାଣାନୁସାରେ ଦକ୍ଷିଣ ଦ୍ୱାର ମାପିଲେ;
29 ೨೯ ಅದರಲ್ಲಿಯೂ, ಅದರ ಕೈಸಾಲೆಯಲ್ಲಿಯೂ ಕಿಟಕಿಗಳು ಎಲ್ಲಾ ಕಡೆಯಿದ್ದವು; ಹೆಬ್ಬಾಗಿಲಿನ ಉದ್ದ ಐವತ್ತು ಮೊಳ ಮತ್ತು ಅಗಲ ಇಪ್ಪತ್ತೈದು ಮೊಳವಾಗಿತ್ತು.
ଆଉ, ତହିଁର କ୍ଷୁଦ୍ର କୋଠରି ଓ ଉପସ୍ତମ୍ଭ ଓ ମଣ୍ଡପସକଳ ସେହି ପରିମାଣାନୁସାରେ ମାପିଲେ; ଆଉ, ତହିଁରେ ଓ ତହିଁର ମଣ୍ଡପରେ ଚାରିଆଡ଼େ ଜଳାକବାଟି ଥିଲା; ତାହା ପଚାଶ ହାତ ଦୀର୍ଘ ଓ ପଚିଶ ହାତ ପ୍ରସ୍ଥ ଥିଲା।
30 ೩೦ ಸುತ್ತುಮುತ್ತಲಿನ ಕೈಸಾಲೆಗಳ ಉದ್ದ ಇಪ್ಪತ್ತೈದು ಮೊಳ ಮತ್ತು ಅಗಲ ಐದು ಮೊಳವಾಗಿತ್ತು.
ପୁଣି, ତହିଁର ଚାରିଆଡ଼େ ପଚିଶ ହାତ ଦୀର୍ଘ ପାଞ୍ଚ ହାତ ପ୍ରସ୍ଥ ମଣ୍ଡପ ଥିଲା।
31 ೩೧ ಆ ಹೆಬ್ಬಾಗಿಲ ಕೈಸಾಲೆಯು ಹೊರಗಣ ಅಂಗಳಕ್ಕೆ ಅಭಿಮುಖವಾಗಿತ್ತು. ಅದರ ಕಂಬಗಳಲ್ಲಿ ಖರ್ಜೂರ ಮರಗಳು ಚಿತ್ರಿತವಾಗಿದ್ದವು. ಅಲ್ಲಿ ಹತ್ತುವುದಕ್ಕೆ ಎಂಟು ಮೆಟ್ಟಿಲುಗಳಿದ್ದವು.
ଆଉ, ତହିଁର ମଣ୍ଡପସକଳ ବାହାର ପ୍ରାଙ୍ଗଣର ଅଭିମୁଖରେ ଥିଲା ଓ ତହିଁର ଉପସ୍ତମ୍ଭସକଳର ଉପରେ ଖର୍ଜ୍ଜୁର ବୃକ୍ଷର ଆକୃତି ଥିଲା; ଆଉ, ତହିଁ ଉପରକୁ ଯିବା ପାଇଁ ଆଠଟି ପାବଚ୍ଛ ଥିଲା।
32 ೩೨ ಅವನು ನನ್ನನ್ನು ಒಳಗಣ ಅಂಗಳದ ಪೂರ್ವಕ್ಕೆ ಕರೆದು ತಂದು, ಅಲ್ಲಿನ ಹೆಬ್ಬಾಗಿಲನ್ನೂ ಅಳೆಯಲು, ಅದರ ಅಳತೆಗಳೆಲ್ಲಾ ಒಂದೇ ಆಗಿ ಕಂಡುಬಂದವು.
ଏଥିଉତ୍ତାରେ ସେ ମୋତେ ପୂର୍ବ ଦିଗର ଭିତର ପ୍ରାଙ୍ଗଣ ମଧ୍ୟକୁ ଆଣିଲେ ଓ ସେ ପୂର୍ବୋକ୍ତ ପରିମାଣ ଅନୁସାରେ ଦ୍ୱାର ମାପିଲେ।
33 ೩೩ ಅದರಲ್ಲಿಯೂ ಮತ್ತು ಅದರ ಕೈಸಾಲೆಯಲ್ಲಿಯೂ ಎಲ್ಲಾ ಕಡೆ ಕಿಟಕಿಗಳಿದ್ದವು; ಆ ಹೆಬ್ಬಾಗಿಲಿನ ಉದ್ದ ಐವತ್ತು ಮೊಳ ಮತ್ತು ಅಗಲ ಇಪ್ಪತ್ತೈದು ಮೊಳವಾಗಿತ್ತು.
ଆଉ, ତହିଁର କ୍ଷୁଦ୍ର କୋଠରି ଓ ଉପସ୍ତମ୍ଭ ଓ ମଣ୍ଡପସକଳ ସେହି ପରିମାଣାନୁସାରେ ମାପିଲେ; ପୁଣି, ତହିଁରେ ଓ ତହିଁର ମଣ୍ଡପସକଳର ଚାରିଆଡ଼େ ଜଳାକବାଟି ଥିଲା; ତାହା ଦୀର୍ଘରେ ପଚାଶ ହାତ ଓ ପ୍ରସ୍ଥରେ ପଚିଶ ହାତ।
34 ೩೪ ಅದರ ಕೈಸಾಲೆಯು ಹೊರಗಿನ ಅಂಗಳಕ್ಕೆ ಅಭಿಮುಖವಾಗಿತ್ತು; ಕೈಸಾಲೆಯ ಎದುರುಬದುರಿನ ಕಂಬಗಳಲ್ಲಿ ಖರ್ಜೂರ ಮರಗಳು ಚಿತ್ರಿತವಾಗಿದ್ದವು; ಅಲ್ಲಿ ಹತ್ತುವುದಕ್ಕೆ ಎಂಟು ಮೆಟ್ಟಿಲುಗಳಿದ್ದವು.
ଆଉ, ତହିଁର ମଣ୍ଡପସକଳ ବାହାର ପ୍ରାଙ୍ଗଣର ଅଭିମୁଖରେ ଥିଲା ଓ ତହିଁର ଉପସ୍ତମ୍ଭସକଳର ଏପାଖେ ସେପାଖେ ଖର୍ଜ୍ଜୁର ବୃକ୍ଷର ଆକୃତି ଥିଲା; ପୁଣି, ତହିଁ ଉପରକୁ ଯିବା ପାଇଁ ଆଠଟି ପାବଚ୍ଛ ଥିଲା।
35 ೩೫ ಆ ಮೇಲೆ ಅವನು ನನ್ನನ್ನು ಉತ್ತರದ ಬಾಗಿಲಿಗೆ ಕರೆದು ತಂದನು. ಅದರ ಗೋಡೆಕೋಣೆ, ಕಂಬ, ಕೈಸಾಲೆ ಇವುಗಳನ್ನೂ ಆ ಅಳತೆಯ ಪ್ರಕಾರವೇ ಅಳೆದನು.
ତହୁଁ ସେ ମୋତେ ଉତ୍ତର ଦ୍ୱାରକୁ ଆଣିଲେ ଓ ସେ ପୂର୍ବୋକ୍ତ ପରିମାଣାନୁସାରେ ତାହା ମାପିଲେ;
36 ೩೬ ಅಲ್ಲಿನ ಕೋಣೆಗಳ, ಕಂಬಗಳ, ಕೈಸಾಲೆಗಳ ಎಲ್ಲಾ ಕಡೆಗಳಲ್ಲಿಯೂ ಕಿಟಕಿಗಳಿದ್ದವು; ಅದರ ಉದ್ದ ಐವತ್ತು ಮೊಳ ಮತ್ತು ಅಗಲ ಇಪ್ಪತ್ತೈದು ಮೊಳವಾಗಿತ್ತು.
ତହିଁର କ୍ଷୁଦ୍ର କୋଠରି, ଉପସ୍ତମ୍ଭ ଓ ମଣ୍ଡପସକଳ ମାପିଲେ; ଆଉ, ତହିଁରେ ଚାରିଆଡ଼େ ଜଳାକବାଟି ଥିଲା; ତାହା ଦୀର୍ଘରେ ପଚାଶ ହାତ ଓ ପ୍ରସ୍ଥରେ ପଚିଶ ହାତ।
37 ೩೭ ಅದರ ಕಂಬಗಳು, ಕೈಸಾಲೆಗಳು ಹೊರಗಣ ಅಂಗಳಕ್ಕೆ ಅಭಿಮುಖವಾಗಿದ್ದವು; ಆ ಎದುರುಬದುರಿನ ಕಂಬಗಳಲ್ಲಿ ಖರ್ಜೂರ ಮರಗಳು ಚಿತ್ರಿತವಾಗಿದ್ದವು; ಅಲ್ಲಿ ಹತ್ತುವುದಕ್ಕೆ ಎಂಟು ಮೆಟ್ಟಿಲುಗಳಿದ್ದವು.
ପୁଣି, ତହିଁର ଉପସ୍ତମ୍ଭସକଳ ତାହାର ପ୍ରାଙ୍ଗଣର ଅଭିମୁଖରେ ଥିଲା; ଆଉ, ସେହି ଉପସ୍ତମ୍ଭସକଳର ଉପରେ ଏପାଖେ ସେପାଖେ ଖର୍ଜ୍ଜୁର ବୃକ୍ଷର ଆକୃତି ଥିଲା; ପୁଣି, ତହିଁ ଉପରକୁ ଯିବା ପାଇଁ ଆଠଟି ପାବଚ୍ଛ ଥିଲା।
38 ೩೮ ಹೆಬ್ಬಾಗಿಲ ಕಂಬಗಳ ಪಕ್ಕದಲ್ಲಿ ಒಂದು ಕೋಣೆಯೂ, ಅದರ ದ್ವಾರವೂ ಕಾಣಿಸಿದವು. ಆ ಕೋಣೆಯೊಳಗೆ ಸರ್ವಾಂಗಹೋಮ ಪಶುಗಳ ಮಾಂಸವನ್ನು ತೊಳೆಯುತ್ತಿದ್ದರು.
ପୁଣି, ଦ୍ୱାରମାନର ନିକଟସ୍ଥ ଉପସ୍ତମ୍ଭସକଳର ପାଖରେ ଦ୍ୱାରବିଶିଷ୍ଟ ଏକ କୋଠରି ଥିଲା; ସେଠାରେ ସେମାନେ ହୋମବଳି ଧୌତ କଲେ
39 ೩೯ ಹೆಬ್ಬಾಗಿಲಿನ ಕೈಸಾಲೆಯಲ್ಲಿ ಎರಡು ಕಡೆಯಲ್ಲಿಯೂ ಎರಡೆರಡು ಪೀಠಗಳಿದ್ದವು; ಅವುಗಳ ಮೇಲೆ ಸರ್ವಾಂಗಹೋಮ ಪಶು, ದೋಷಪರಿಹಾರಕ ಯಜ್ಞ ಪಶು, ಪ್ರಾಯಶ್ಚಿತ್ತಯಜ್ಞ ಪಶು ಇವುಗಳನ್ನು ವಧಿಸುತ್ತಿದ್ದರು.
ଆଉ, ତହିଁ ଉପରେ ହୋମାର୍ଥକ, ପାପାର୍ଥକ ଓ ଦୋଷାର୍ଥକ ବଳି ବଧ କରିବା ପାଇଁ ଦ୍ୱାର ବାରଣ୍ଡାର ଏପାଖରେ ଦୁଇ ମେଜ ଓ ସେପାଖରେ ଦୁଇ ମେଜ ଥିଲା।
40 ೪೦ ಉತ್ತರದ ಹೆಬ್ಬಾಗಿಲಿನ ಪ್ರವೇಶ ಸ್ಥಾನದ ಮೆಟ್ಟಿಲುಗಳ ಹತ್ತಿರ ಎರಡು ಪೀಠಗಳು ಇದ್ದವು.
ପୁଣି, ଦ୍ୱାରର ପାର୍ଶ୍ୱରେ ବାହାରେ ଓ ଉତ୍ତର ଦ୍ୱାର ଉପରକୁ ଯିବାର ପ୍ରବେଶ ସ୍ଥାନ ନିକଟରେ ଏପାଖରେ ଦୁଇ ମେଜ ଥିଲା ଓ ଦ୍ୱାର ବାରଣ୍ଡାର ସେପାଖରେ ଦୁଇ ମେଜ ଥିଲା;
41 ೪೧ ಹೆಬ್ಬಾಗಿಲಿನ ಎರಡು ಪಕ್ಕಗಳಲ್ಲಿ ನಾಲ್ಕು ನಾಲ್ಕು ಪೀಠಗಳು, ಒಟ್ಟಿಗೆ ಯಜ್ಞಪಶುಗಳನ್ನು ವಧಿಸುವ ಎಂಟು ಪೀಠಗಳಿದ್ದವು.
ଦ୍ୱାର ପାର୍ଶ୍ୱର ଏପାଖରେ ଚାରି ମେଜ, ସେପାଖରେ ଚାରି ମେଜ ଥିଲା; ଏହିରୂପେ ଆଠ ମେଜ ଥିଲା, ତହିଁ ଉପରେ ବଳି ବଧ କରାଗଲା।
42 ೪೨ ಇದಲ್ಲದೆ ಸರ್ವಾಂಗಹೋಮಕ್ಕಾಗಿ ಉಪಯುಕ್ತವಾದ ಕೆತ್ತಿದ ಕಲ್ಲಿನ ನಾಲ್ಕು ಪೀಠಗಳಿದ್ದವು. ಅವುಗಳ ಅಗಲ ಒಂದುವರೆ ಮೊಳ, ಉದ್ದ ಒಂದುವರೆ ಮೊಳ, ಎತ್ತರ ಒಂದುವರೆ ಮೊಳವಾಗಿತ್ತು. ಅವುಗಳ ಮೇಲೆ ಸರ್ವಾಂಗಹೋಮ ಪಶುಗಳನ್ನು ವಧಿಸುವ ಉಪಕರಣಗಳನ್ನು ಇಡುತ್ತಿದ್ದರು.
ଆଉ, ହୋମବଳି ନିମନ୍ତେ କଟା ପ୍ରସ୍ତରର ଚାରି ମେଜ ଥିଲା, ତହିଁର ଦୀର୍ଘତା ଦେଢ଼ ହାତ ଓ ପ୍ରସ୍ଥ ଦେଢ଼ ହାତ ଓ ଉଚ୍ଚ ଏକ ହାତ; ତହିଁ ଉପରେ ହୋମ ଓ ପ୍ରାୟଶ୍ଚିତ୍ତାର୍ଥକ ବଳି ବଧ କରିବାର ଅସ୍ତ୍ର ରଖାଗଲା।
43 ೪೩ ಒಳಗೆ, ಸುತ್ತಲು ಕೈ ಅಗಲದಷ್ಟು ಕೊಂಡಿಗಳು ಜಡಿಯಲ್ಪಟ್ಟಿದ್ದವು. ನೈವೇದ್ಯ ಮಾಂಸವು ಪೀಠಗಳ ಮೇಲಿತ್ತು.
ପୁଣି, ଚାରି ଅଙ୍ଗୁଳି ଦୀର୍ଘ ଆଙ୍କୁଡ଼ିମାନ ଭିତର ଚାରିଆଡ଼େ ଲଗା ହୋଇଥିଲା; ଆଉ, ମେଜମାନର ଉପରେ ଉପହାରାର୍ଥକ ମାଂସ ରଖାଗଲା।
44 ೪೪ ಆ ಮೇಲೆ ಅವನು ನನ್ನನ್ನು ಒಳಗಣ ಅಂಗಳಕ್ಕೆ ಕರೆ ತಂದನು. ಇಗೋ, ಅಲ್ಲಿ ಎರಡು ಕೋಣೆಗಳು ಕಾಣಿಸಿದವು. ಉತ್ತರದ ಹೆಬ್ಬಾಗಿಲ ಪಕ್ಕದಲ್ಲಿ ಒಂದು ಕೋಣೆಯು ದಕ್ಷಿಣಕ್ಕೆ ಅಭಿಮುಖವಾಗಿತ್ತು; ಒಂದು ಕೋಣೆಯು ಉತ್ತರಕ್ಕೂ, ಇನ್ನೊಂದು ಕೋಣೆಯು ದಕ್ಷಿಣಕ್ಕೂ ಇತ್ತು.
ଆଉ, ଭିତର ଦ୍ୱାରର ବାହାରେ ଭିତର ପ୍ରାଙ୍ଗଣରେ ଗାୟକମାନଙ୍କ ପାଇଁ କୋଠରି ଥିଲା, ସେହି ସବୁ ଉତ୍ତର ଦ୍ୱାରର ପାର୍ଶ୍ୱସ୍ଥିତ ଓ ସେହି ସବୁର ମୁଖ ଦକ୍ଷିଣ ପ୍ରତି ଥିଲା; ପୂର୍ବ-ଦ୍ୱାରର ପାର୍ଶ୍ୱସ୍ଥିତ ଗୋଟିଏ କୋଠରିର ମୁଖ ଉତ୍ତର ପ୍ରତି ଥିଲା।
45 ೪೫ ಆಗ ಅವನು ನನಗೆ, “ದಕ್ಷಿಣಕ್ಕೆ ಅಭಿಮುಖವಾಗಿರುವ ಈ ಕೋಣೆಯು ದೇವಾಲಯದ ಮೇಲ್ವಿಚಾರಣೆಯನ್ನು ನಡೆಸುವ ಯಾಜಕರಿಗೆ ನೇಮಕವಾಗಿದೆ.
ପୁଣି, ସେ ମୋତେ କହିଲେ, “ଏହି ଦକ୍ଷିଣାଭିମୁଖ କୋଠରିଗୃହର ରକ୍ଷଣୀୟ ରକ୍ଷାକାରୀ ଯାଜକମାନଙ୍କ ପାଇଁ ଅଛି।
46 ೪೬ ಉತ್ತರಕ್ಕೆ ಅಭಿಮುಖವಾಗಿರುವ ಆ ಕೋಣೆಯು ಯಜ್ಞವೇದಿಯ ಕಾರ್ಯದರ್ಶಿಗಳಾದ ಯಾಜಕರಿಗೆ ನೇಮಕವಾಗಿದೆ. ಚಾದೋಕನ ಸಂತತಿಯವರಾದ ಇವರು ಲೇವಿಯ ಕುಲದವರಲ್ಲಿ ಯೆಹೋವನ ಸನ್ನಿಧಿ ಸೇವಕರಾಗಿದ್ದಾರೆ” ಎಂದು ಹೇಳಿದನು.
ଆଉ, ଯେଉଁ କୋଠରିର ମୁଖ ଉତ୍ତର ଆଡ଼େ ଅଛି, ତାହା ଯଜ୍ଞବେଦିର ରକ୍ଷଣୀୟ ରକ୍ଷାକାରୀ ଯାଜକମାନଙ୍କ ପାଇଁ ଅଛି; ଏମାନେ ସାଦୋକର ସନ୍ତାନ, ଲେବୀର ସନ୍ତାନଗଣ ମଧ୍ୟରୁ ଏମାନେ ସଦାପ୍ରଭୁଙ୍କର ପରିଚର୍ଯ୍ୟା କରିବା ପାଇଁ ତାହାଙ୍କ ନିକଟକୁ ଆସନ୍ତି।”
47 ೪೭ ಆ ಮೇಲೆ ಅವನು ಅಂಗಳವನ್ನು ಅಳೆಯಲು, ಅದು ನೂರು ಮೊಳ ಉದ್ದವಾಗಿಯೂ, ನೂರು ಮೊಳ ಅಗಲವಾಗಿಯೂ ಚಚ್ಚೌಕವಾಗಿತ್ತು. ಯಜ್ಞವೇದಿಯು ದೇವಸ್ಥಾನದ ಮುಂದೆ ಇತ್ತು.
ଏଉତ୍ତାରେ ସେ ପ୍ରାଙ୍ଗଣ ମାପିଲେ, ତାହା ଏକ ଶହ ହାତ ଦୀର୍ଘ, ଏକ ଶହ ହାତ ପ୍ରସ୍ଥ, ଚାରିଆଡ଼େ ଏକ ସମାନ ଥିଲା ଓ ଗୃହ ସମ୍ମୁଖରେ ଯଜ୍ଞବେଦି ଥିଲା।
48 ೪೮ ಕೂಡಲೆ ಅವನು ನನ್ನನ್ನು ದೇವಸ್ಥಾನದ ದ್ವಾರಮಂಟಪಕ್ಕೆ ಕರೆ ತಂದನು. ಅದನ್ನು ಅಳೆಯಲು, ಅದರ ಎದುರುಬದುರಿನ ಕಂಬಗಳ ಅಗಲ ಐದೈದು ಮೊಳ, ಬಾಗಿಲಿನ ಎರಡು ಪಕ್ಕದ ಗೋಡೆಗಳ ಅಗಲ ಮೂರು ಮೂರು ಮೊಳವಾಗಿತ್ತು.
ତେବେ ସେ ମୋତେ ଗୃହର ବାରଣ୍ଡାକୁ ଆଣି ବାରଣ୍ଡାରେ ସ୍ଥିତ ପ୍ରତ୍ୟେକ ଉପସ୍ତମ୍ଭ ମାପିଲେ, ସେ ପ୍ରତ୍ୟେକ ଏପାଖେ ପାଞ୍ଚ ହାତ, ସେପାଖେ ପାଞ୍ଚ ହାତ; ପୁଣି, ଦ୍ୱାରର ପ୍ରସ୍ଥ ଏପାଖେ ତିନି ହାତ, ସେପାଖେ ତିନି ହାତ ଥିଲା।
49 ೪೯ ದ್ವಾರಮಂಟಪದ ಉದ್ದ ಇಪ್ಪತ್ತು ಮೊಳ, ಅಗಲ ಹನ್ನೊಂದು ಮೊಳ ಇದ್ದವು. ಹತ್ತು ಮೆಟ್ಟಿಲುಗಳನ್ನು ಹತ್ತಿ, ಅಲ್ಲಿಗೆ ಸೇರುತ್ತಿದ್ದರು. ಎರಡು ಕಡೆಯ ಕಂಬಗಳ ಪಕ್ಕದಲ್ಲಿ ಒಂದೊಂದು ಉಪಸ್ತಂಭವು ಇತ್ತು.
ବାରଣ୍ଡାର ଦୀର୍ଘ କୋଡ଼ିଏ ହାତ; ତହିଁର ପ୍ରସ୍ଥ ଏଗାର ହାତ ଓ ପାବଚ୍ଛ ଦେଇ ଲୋକମାନେ ଉପରକୁ ଗଲେ, ଆଉ ଉପସ୍ତମ୍ଭମାନଙ୍କ ନିକଟରେ ଏପାଖେ ଏକ ଓ ସେପାଖେ ଏକ ସ୍ତମ୍ଭ ଥିଲା।