< ಯೆಹೆಜ್ಕೇಲನು 4 >
1 ೧ “ನರಪುತ್ರನೇ, ನೀನು ಒಂದು ಇಟ್ಟಿಗೆಯನ್ನು ತೆಗೆದುಕೊಂಡು ನಿನ್ನ ಮುಂದಿಟ್ಟುಕೊಂಡು, ಅದರ ಮೇಲೆ ಯೆರೂಸಲೇಮ್ ಪಟ್ಟಣದ ನಕ್ಷೆಯನ್ನು ಬರೆ.
“Na afei, onipa ba, fa ntayaa bi to wʼanim na kurukyerɛw Yerusalem kuropɔn mfoni wɔ so.
2 ೨ ಆ ನಕ್ಷೆಯ ಸುತ್ತಲು ದಿಬ್ಬಹಾಕಿ, ಅಡ್ಡಕಟ್ಟಿ, ಪಾಳೆಯಗಳನ್ನು ಮಾಡಿ, ಕತ್ತರಿಸುವ ಯಂತ್ರಗಳನ್ನು ನಿಲ್ಲಿಸಿ, ಅದಕ್ಕೆ ಮುತ್ತಿಗೆ ಹಾಕು.
Afei tua nʼano: Di ntuano dwuma ahorow tia no, yɛ pie tia no, yɛ mpampim ne nsraban wɔ ho, na sisi mpuran twa ne ho dantaban.
3 ೩ ಆಮೇಲೆ ಕಬ್ಬಿಣದ ಹಂಚನ್ನು ತೆಗೆದುಕೊಂಡು ಅದನ್ನು ನಿನಗೂ ಮತ್ತು ಆ ಪಟ್ಟಣಕ್ಕೂ ಮಧ್ಯೆ ಕಬ್ಬಿಣದ ಗೋಡೆಯನ್ನಾಗಿ ನಿಲ್ಲಿಸಿ ಆ ಪಟ್ಟಣದ ಮೇಲೆ ದೃಷ್ಟಿಯಿಡು; ಅದು ಮುತ್ತಿಗೆ ಹಾಕಲ್ಪಡುವುದು, ನೀನು ಅದನ್ನು ಮುತ್ತಿಗೆ ಹಾಕಿದಂತಾಗುವುದು. ಇದು ಇಸ್ರಾಯೇಲ್ ವಂಶದವರಿಗೆ ಒಂದು ಗುರುತು.
Afei, fa dade kyɛmfɛre to ɔfasu wɔ wo ne kuropɔn no ntam na dan wʼani kyerɛ no. Wobetua kuropɔn no ano na wo na wubetua nʼano. Eyi bɛyɛ nsɛnkyerɛnne ama Israelfi.
4 ೪ “ಇದಲ್ಲದೆ, ನೀನು ನಿನ್ನ ಎಡಮಗ್ಗುಲಲ್ಲಿ ಮಲಗಿಕೋ. ಇಸ್ರಾಯೇಲ್ ವಂಶದವರ ಪಾಪದ ಭಾರವನ್ನು ಅದರ ಮೇಲಿಡಬೇಕು. ನೀನು ಎಡಮಗ್ಗುಲಲ್ಲಿ ಮಲಗುವ ದಿನಗಳ ಪ್ರಕಾರ ಅವರ ಪಾಪದ ಭಾರವನ್ನು ಹೊತ್ತುಕೊಂಡಿರಬೇಕು.
“Afei da wo benkum so na fa Israel bɔne to wo ho so. Wobɛsoa wɔn bɔne nna dodow a wode da wo fa so no.
5 ೫ ನಾನು ದಿನಗಳ ಲೆಕ್ಕದ ಪ್ರಕಾರ ಅವರ ಪಾಪದ ವರ್ಷಗಳನ್ನು ನಿನಗೆ ನೇಮಿಸಿದ್ದೇನೆ. ಅವು ಮುನ್ನೂರತೊಂಬತ್ತು ದಿನಗಳಾಗಿವೆ. ಹೀಗೆ ನೀನು ಇಸ್ರಾಯೇಲ್ ವಂಶದವರ ಪಾಪವನ್ನು ನೀನು ಹೊರಬೇಕು.
Mede wɔn bɔne mfe no ayɛ nna dodow ama wo. Enti nnafua ahaasa ne aduɔkron na wode bɛsoa Israelfi bɔne.
6 ೬ “ಅಷ್ಟು ದಿನಗಳು ತೀರಿದ ಮೇಲೆ ಬಲಮಗ್ಗುಲಲ್ಲಿ ಮಲಗಿಕೊಂಡು ಯೆಹೂದ ವಂಶದವರ ಪಾಪವನ್ನು ಅನುಭವಿಸಬೇಕು; ವರ್ಷ ಒಂದಕ್ಕೆ ಒಂದು ದಿನದ ಮೇರೆಗೆ ನಲ್ವತ್ತು ದಿನ ಅವರ ಪಾಪವನ್ನು ಹೊರಬೇಕೆಂದು ನಿನಗೆ ಗೊತ್ತುಮಾಡಿದ್ದೇನೆ.
“Ɛno akyi no, da bio wɔ wo nifa so na soa Yudafo bɔne adaduanan a da koro biara bɛyɛ afe baako.
7 ೭ ನಿನ್ನ ತೋಳಿಗೆ ಹೊದಿಕೆಯಿಲ್ಲದೆ, ಮುತ್ತಿಗೆಯಾದ ಯೆರೂಸಲೇಮಿನ ಕಡೆಗೆ ಮುಖವನ್ನು ತಿರುಗಿಸಿ, ಅದರ ವಿಷಯವಾಗಿ ಅಶುಭವನ್ನು ಪ್ರವಾದಿಸು.
Dan wʼani kyerɛ Yerusalem ntuano no na fa nsa pan hyɛ nkɔm tia no.
8 ೮ ಇಗೋ, ನಿನ್ನ ಮುತ್ತಿಗೆಯ ದಿನಗಳು ತೀರುವ ತನಕ ನೀನು ಬಲಮಗ್ಗುಲಿಂದ ಎಡಮಗ್ಗುಲಿಗೆ ಹೊರಳದಂತೆ ನಿನ್ನನ್ನು ಬಂಧಿಸುವೆನು.
Mede ntampehama bɛkyekyere wo sɛnea worentumi nnan wo ho kosi sɛ nna a wɔde tua mo ano no bɛba nʼawie.
9 ೯ “ಇದಲ್ಲದೆ ನೀನು ಗೋದಿ, ಜವೆಗೋದಿ, ಅವರೆ, ಅಲಸಂದಿ, ನವಣೆ, ಕಡಲೆ, ಇವುಗಳನ್ನು ತೆಗೆದುಕೊಂಡು ಒಂದೇ ಪಾತ್ರೆಯಲ್ಲಿ ಹಾಕಿ ಅವುಗಳಿಂದ ರೊಟ್ಟಿಯನ್ನು ಮಾಡಿಕೋ; ಮಗ್ಗುಲಲ್ಲಿ ಮಲಗಿಕೊಳ್ಳುವಷ್ಟು ದಿನ, ಅಂದರೆ ಮುನ್ನೂರತೊಂಬತ್ತು ದಿನ ಅದನ್ನು ತಿನ್ನು.
“Fa atoko ne awi, asɛ ne asedua, kɔkɔte ne aburow; fa ne nyinaa gu adekora kuruwa mu na fa to brodo a wubedi. Eyi na wubedi wɔ nnafua ahaasa ne aduɔkron a woda wo fa so no.
10 ೧೦ ನಿನ್ನ ಆಹಾರವನ್ನು ತೂಕದ ಪ್ರಕಾರ ದಿನವೊಂದಕ್ಕೆ ಇಪ್ಪತ್ತು ತೊಲಾದಂತೆ (230 ಗ್ರಾಂ) ತಿನ್ನು; ಆಗಾಗ್ಗೆ ಸ್ವಲ್ಪ ಸ್ವಲ್ಪ ತಿನ್ನಬೇಕು.
Kari aduan gram ahannu ne aduasa aduonu a wubedi no da koro biara wɔ bere ano, bere ano.
11 ೧೧ ನೀರನ್ನು ಅಳತೆಯ ಪ್ರಕಾರ ದಿನವೊಂದಕ್ಕೆ ಎರಡು ಬಟ್ಟಲಂತೆ ಕುಡಿ; ಆಗಾಗ್ಗೆ ಸ್ವಲ್ಪ ಸ್ವಲ್ಪ ಕುಡಿಯಬೇಕು.
Afei susuw nsu sukuruwa baako na nom no bere ano bere ano.
12 ೧೨ ನೀನು ಸೌದೆಗೆ ಬದಲಾಗಿ ಮನುಷ್ಯರ ಮಲವನ್ನು ಉರಿಸಿ, ನಿನ್ನ ಜನರ ಕಣ್ಣೆದುರಿಗೆ ಆ ಹಿಟ್ಟನ್ನು ರೊಟ್ಟಿಮಾಡಿ ಜವೆಗೋದಿಯ ರೊಟ್ಟಿಗಳಂತೆ ತಿನ್ನು.
Di aduan no sɛnea anka wubedi atoko ɔfam; to ma nnipa nhu na fa onipa agyanan yɛ ogya.”
13 ೧೩ ಹಾಗೆಯೇ ಇಸ್ರಾಯೇಲ್ ವಂಶದವರು ನನ್ನಿಂದ ಅನ್ಯದೇಶಗಳಿಗೆ ಅಟ್ಟಲ್ಪಟ್ಟು ಆ ದೇಶೀಯರ ನಡುವೆ ವಾಸಿಸುತ್ತಾ ತಮ್ಮ ಆಹಾರವನ್ನು ಹೊಲಸಾಗಿ ತಿನ್ನುವರು” ಇದು ಯೆಹೋವನ ನುಡಿ.
Awurade kae se: “Saa ara na Israelfo bedi aduan a wɔagu ho fi wɔ amanaman a mɛpam wɔn akɔ so no.”
14 ೧೪ ಅದಕ್ಕೆ ನಾನು, “ಅಯ್ಯೋ, ಕರ್ತನಾದ ಯೆಹೋವನೇ, ನಾನು ಹೊಲಸನ್ನು ಮುಟ್ಟಿದವನಲ್ಲ, ನಾನು ಹುಟ್ಟಿದಂದಿನಿಂದ ಇಂದಿನವರೆಗೂ ಸತ್ತ ಪಶುವಿನ ಮಾಂಸವನ್ನಾಗಲಿ, ಕಾಡುಮೃಗವು ಕೊಂದ ಪಶುವಿನ ಮಾಂಸವನ್ನಾಗಲಿ ತಿಂದವನೇ ಅಲ್ಲ; ಯಾವ ಅಸಹ್ಯಪದಾರ್ಥವೂ ನನ್ನ ಬಾಯೊಳಗೆ ಸೇರಲಿಲ್ಲ” ಎಂದು ಅರಿಕೆಮಾಡಲು,
Na mekae se, “Ɛnte saa, Otumfo Awurade! Minguu me ho fi da. Efi me mmofraase besi saa bere yi, minnii aboa funu anaa nea nkekaboa bi akum no atetew ne mu da. Nam a ɛho agu fi nkaa mʼano da.”
15 ೧೫ ಆತನು ನನಗೆ, “ನೋಡು, ಮನುಷ್ಯರ ಮಲಕ್ಕೆ ಬದಲಾಗಿ ದನಗಳ ಸಗಣಿಯನ್ನು ನಿನಗೆ ಗೊತ್ತುಮಾಡಿದ್ದೇನೆ, ಇದನ್ನು ಉರಿಸಿ ನಿನ್ನ ರೊಟ್ಟಿಯನ್ನು ಸುಟ್ಟುಕೋ” ಎಂದು ಉತ್ತರಕೊಟ್ಟನು.
Awurade kae se, “eye, mɛma wode nantwi agyanan asi onipa de anan mu, na woato wo brodo wɔ so.”
16 ೧೬ ಇದಲ್ಲದೆ ಆತನು ನನಗೆ ಹೀಗೆ ಹೇಳಿದನು, “ನರಪುತ್ರನೇ, ನಾನು ಯೆರೂಸಲೇಮಿನಲ್ಲಿ ಆಹಾರ ಸರಬರಾಜನ್ನು ನಿಲ್ಲಿಸಿಬಿಡುವೆನು. ನಿವಾಸಿಗಳು ಅನ್ನವನ್ನು ತೂಕದ ಪ್ರಕಾರ ಕಳವಳದಿಂದ ತಿನ್ನುವರು, ನೀರನ್ನು ಅಳತೆಯ ಪ್ರಕಾರ ನಡುಗುತ್ತಾ ಕುಡಿಯುವರು.
Afei ɔka kyerɛɛ me se, “Onipa ba, metwa aduan a wɔde ba Yerusalem so. Nnipa no de ahoyeraw bedi aduan a wɔkyekyɛ mu na wɔde abasamtu anom nsu a wɔkyekyɛ,
17 ೧೭ ಅವರಲ್ಲಿ ಪ್ರತಿಯೊಬ್ಬರೂ ಅನ್ನ ಮತ್ತು ನೀರಿನ ಕೊರತೆಯಿಂದ ಕುಗ್ಗಿ ತಮ್ಮ ಅಧರ್ಮದಿಂದ ನಾಶವಾಗಿ ಹೋಗುವರು.”
efisɛ aduan ne nsu ho bɛyɛ na. Wɔn ho bedwiriw wɔn sɛ wohu wɔn ho wɔn ho, na wɔn bɔne nti wɔbɛfonfɔn.”