< ಯೆಹೆಜ್ಕೇಲನು 36 >
1 ೧ “ನರಪುತ್ರನೇ, ನೀನು ಇಸ್ರಾಯೇಲಿನ ಪರ್ವತಗಳಿಗೆ ಈ ಪ್ರವಾದನೆಯನ್ನು ನುಡಿ, ‘ಇಸ್ರಾಯೇಲಿನ ಪರ್ವತಗಳೇ, ಯೆಹೋವನ ವಾಕ್ಯವನ್ನು ಕೇಳಿರಿ.
“Na wewe, mwanadamu, itabirie milima ya Israeli na useme, 'Milima ya Israeli, lisikilizeni neno la Yahwe.
2 ೨ ದೇವರಾದ ಯೆಹೋವನು ಹೀಗೆ ಹೇಳುತ್ತಾನೆ, ಶತ್ರುವು ನಿಮ್ಮನ್ನು ನೋಡಿ, “ಆಹಾ!” ಎನ್ನುತ್ತಾ, ಈ ಪುರಾತನ ದುರ್ಗಗಳು ನಮ್ಮ ವಶವಾಗಿವೆ’” ಎಂದು ಹೇಳುವರು.
Bwana Yahwe asema hivi: Adui amesema kuhusu ninyi, “Aha!” na “Mahala pa juu pa zamani pamekuwa milki yetu.”'
3 ೩ ಈ ಪ್ರವಾದನೆಯನ್ನು ನುಡಿಯಬೇಕೆಂದು ಕರ್ತನಾದ ಯೆಹೋವನ ಅಪ್ಪಣೆಯಾಯಿತು, “‘ಅಯ್ಯೋ, ಎಲ್ಲಾ ಕಡೆಯೂ ತುಳಿಯಲ್ಪಟ್ಟು ಹಾಳಾದ ನೀವು ಜನಾಂಗಗಳಲ್ಲಿ ಉಳಿದವರ ವಶವಾಗಿದ್ದು, ಹರಟೆಗಾರರ ಬಾಯಿಗೆ ಬಿದ್ದು, ಜನರ ದೂಷಣೆಗೆ ಗುರಿಯಾಗಿದ್ದೀರಿ.
Kwa hiyo tabiri na sema, 'Bwana Yahwe asema hivi: Kwa sababu ya ukiwa wenu na kwa sababu mashambulizi yaliyokuja juu yenu kutoka pande zote, mmekuwa milki ya mataifa mengine; mmeambiwa kwa midomo yao waongeao, na kwa masingizio ya watu.
4 ೪ ಆದಕಾರಣ ಇಸ್ರಾಯೇಲಿನ ಪರ್ವತಗಳೇ, ಕರ್ತನಾದ ಯೆಹೋವನ ವಾಕ್ಯವನ್ನು ಕೇಳಿರಿ, ಬೆಟ್ಟಗಳಿಗೂ, ಗುಡ್ಡಗಳಿಗೂ, ತೊರೆತಗ್ಗುಗಳಿಗೂ, ಹಾಳುಪ್ರದೇಶಗಳಿಗೂ, ಸುತ್ತಣ ಜನಾಂಗಗಳಲ್ಲಿ ಉಳಿದವರು ಕೊಳ್ಳೆಹೊಡೆದು ಅಣಕಿಸುವ ಹಾಳು ಪಟ್ಟಣಗಳಿಗೂ,
Kwa hiyo, milima ya Israeli, sikilizeni neno la Bwana Yahwe: Bwana Yahwe asema hivi kwa milima na vilima, mifereji ya maji na mabonde, mahali palipoharibika kuwa ukiwa na miji iliyoachwa ambayo imetekwa nyara na kutokuwa huru kwa kutaniwa na mataifa yaliyowazunguka-
5 ೫ ದೇವರಾದ ಯೆಹೋವನಾದ ಕರ್ತನು ಹೀಗೆ ನುಡಿಯುತ್ತಾನೆ, ಆಹಾ, ನನ್ನ ದೇಶವನ್ನು ತಮ್ಮ ಸ್ವಾಸ್ತ್ಯಮಾಡಿಕೊಂಡು ಪೂರ್ಣಹೃದಯದಿಂದ ಆನಂದಪಟ್ಟವರೂ, ಅದನ್ನು ಮನಃಪೂರ್ವಕವಾಗಿ ತಿರಸ್ಕರಿಸಿ ಸೂರೆಗೆ ತಳ್ಳಿಬಿಟ್ಟವರೂ ಆದ ಎದೋಮಿನವರೆಲ್ಲರನ್ನೂ, ಇತರ ಜನಾಂಗಗಳಲ್ಲಿ ಉಳಿದವರನ್ನೂ ನಾನು ರೋಷದ ಬೆಂಕಿಯಿಂದ ಉರಿಯುತ್ತಾ ಶಪಿಸಿದ್ದೇನೆ.’
kwa hiyo Bwana Yahwe asema hivi: Hakika nimeongea katika moto wa hasira yangu juu ya mataifa meningine, juu ya Edemu na wote waliochukua nchi yangu kwa ajili yao wenyewe kama milki, dhidi ya wale walikuwa na furaha yote katika mioyo yao na dharau katika roho zao, kama walivyoitwaa nchi yangu kwamba wangeweza kudai nchi za malisho kwa ajili yao.
6 ೬ ಹೀಗಿರಲು ಇಸ್ರಾಯೇಲ್ ದೇಶದ ವಿಷಯವಾದ ಈ ಪ್ರವಾದನೆಯನ್ನು ಅದರ ಬೆಟ್ಟಗಳಿಗೆ, ಗುಡ್ಡಗಳಿಗೆ, ತೊರೆತಗ್ಗುಗಳಿಗೆ ನುಡಿಯಬೇಕೆಂದು ಅಪ್ಪಣೆಯಾಗಿದೆ. ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಆಹಾ! ನಾನು ಕೋಪೋದ್ರೇಕದಿಂದಲೂ, ರೋಷಾವೇಶದಿಂದಲೂ ಮಾತನಾಡಿದ್ದೇನೆ, ನೀವು ಅನ್ಯಜನಾಂಗಗಳಿಂದ ಅವಮಾನವನ್ನು ಅನುಭವಿಸಿದ್ದೀರಿ!’
Kwa hiyo, tabiri kwa nchi ya Israeli na sema kwa milima na vilima, hata kwenye mifereji na mabonde, Bwana Yahwe asema hivi: Tazama! Katika ghadhabu yangu na hasira yangu nasema hivi kwa sababu mmechukua fedheha za mataifa.
7 ೭ ಆದಕಾರಣ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ನಿಮ್ಮ ಸುತ್ತಣ ಆ ಅನ್ಯಜನಾಂಗಗಳೇ ತಮ್ಮ ಮೇಲೆ ಬಿದ್ದ ಅವಮಾನವನ್ನು ಅನುಭವಿಸುವುದು ಖಂಡಿತ ಎಂದು ಕೈಯೆತ್ತಿ ಪ್ರಮಾಣಮಾಡಿದ್ದೇನೆ.
Kwa hiyo, Bwana Yahwe asema hivi: Mimi mwenyewe nitainua mkono wangu kuapa kwamba mataifa yanayowazunguka yamkini yatawabebea aibu yao wenyewe.
8 ೮ ಇಸ್ರಾಯೇಲಿನ ಪರ್ವತಗಳೇ, ನಿಮ್ಮ ಗಿಡಗಳ ಕೊಂಬೆಗಳನ್ನು ಹರಡಿಕೊಂಡು, ನನ್ನ ಜನರಾದ ಇಸ್ರಾಯೇಲರಿಗೆ ಫಲಕೊಡುವವು. ಏಕೆಂದರೆ ಅವರ ಬರುವಿಕೆಯು ಸಮೀಪವಾಗಿದೆ.
Lakini ninyi, milima ya Israeli, mtachipuza matawi na kuzaa matunda kwa ajili ya watu wangu Israeli, kwa kuwa watarudi kwenu.
9 ೯ ಇಗೋ, ನಾನು ನಿಮ್ಮ ಪಕ್ಷದವನು; ನಿಮ್ಮ ಕಡೆಗೆ ತಿರುಗಿಕೊಳ್ಳುತ್ತೇನೆ ಮತ್ತು ನೀವು ಉತ್ತು, ಬಿತ್ತುವಿರಿ.
Maana tazama, nipo kwa ajili yenu, na kuwachukulia kwa fadhili; mtalimwa na kupandwa mbegu.
10 ೧೦ ನಿಮ್ಮಲ್ಲಿ ಬಹು ಜನರು ಅಂದರೆ ಇಸ್ರಾಯೇಲ್ ವಂಶದವರೆಲ್ಲರೂ ವಾಸಿಸುವಂತೆ ಮಾಡುವೆನು; ಪಟ್ಟಣಗಳು ಜನಭರಿತವಾಗುವವು, ಹಾಳು ನಿವೇಶನಗಳಲ್ಲಿ ಕಟ್ಟಡಗಳು ಏಳುವವು.
Hivyo nitawaongeza juu ya milima yenu watu katika nyumba ya Israeli, yote. Miji itakaa na palipoharibiwa kujengwa.
11 ೧೧ ನಿಮ್ಮಲ್ಲಿ ಬಹು ಜನರನ್ನೂ, ಪಶುಗಳನ್ನೂ ವೃದ್ಧಿಗೊಳಿಸುವೆನು; ಅವು ಹೆಚ್ಚಿ ಅಭಿವೃದ್ಧಿಯಾಗುವವು; ಮೊದಲಿನಂತೆ ನಿಮ್ಮಲ್ಲಿ ನಿವಾಸಿಗಳನ್ನು ತುಂಬಿಸಿ, ಮೊದಲಿಗಿಂತ ನಿಮ್ಮನ್ನು ಉತ್ತಮ ಸ್ಥಿತಿಗೆ ತರುವೆನು; ನಾನೇ ಯೆಹೋವನು ಎಂದು ನಿಮಗೆ ದೃಢವಾಗುವುದು.
Nitaongeza mtu na wanyama juu yenu milima ili kwamba itaongezeka na kuzaa. Kisha nitawafanya kuishi kama mlivyokuwa, na nitawafanya kustawi zaidi kuliko mlivyokuwa zamani, kwa kuwa mtajua yakwamba mimi ni Yahwe.
12 ೧೨ ಬೆಟ್ಟದ ಸೀಮೆಯೇ, ನಾನು ನಿನ್ನಲ್ಲಿ ಜನ ಸಂಚಾರವನ್ನು ಉಂಟುಮಾಡುವೆನು; ನನ್ನ ಜನರಾದ ಇಸ್ರಾಯೇಲರೇ, ನಿನ್ನಲ್ಲಿ ಸಂಚರಿಸುತ್ತಾ ನಿನ್ನನ್ನು ಸ್ವತ್ತಾಗಿ ಅನುಭವಿಸುವರು; ನೀನು ಇನ್ನು ಅವರಿಗೆ ಪುತ್ರ ಶೋಕವನ್ನು ಕೊಡುವುದಿಲ್ಲ.’”
Nitawaleta watu, watu wangu Israeli, kutembea juu yenu. Watakumiliki, na utakuwa urithi wao, na hutasababisha tena watoto wao kufa.
13 ೧೩ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನೀನು ನರಭಕ್ಷಕನಾಗಿ ನಿನ್ನ ಪ್ರಜೆಗೆ ಪುತ್ರಶೋಕವನ್ನು ಕೊಟ್ಟಿದ್ದೀ” ಎಂದು ನಿನ್ನನ್ನು ಬಯ್ಯುತ್ತಾರೆ.
Bwana Yahwe asema hivi: Kwa sababu wanakwambia, “Wewe unakula watu, na watoto wa nchi yako wamekufa,”
14 ೧೪ “ಇನ್ನು ಮುಂದೆ ನೀನು ನರಭಕ್ಷಕನಾಗುವುದಿಲ್ಲ, ನಿನ್ನ ಪ್ರಜೆಗೆ ಇನ್ನು ಪುತ್ರಶೋಕವನ್ನು ಕೊಡುವುದಿಲ್ಲ.
kwa hiyo hautawala watu wangu tena, na hutalifanya tena taifa lako kuomboleza vifo vyao. Hivi ndivyo Bwana Yahwe asemavyo.
15 ೧೫ ಮ್ಲೇಚ್ಛರ ಧಿಕ್ಕಾರವನ್ನು ಇನ್ನು ನಿನ್ನ ಕಿವಿಗೆ ಬೀಳಿಸೆನು; ನೀನು ಜನಾಂಗಗಳಿಂದ ಇನ್ನು ಅವಮಾನವನ್ನು ಅನುಭವಿಸದಿರುವಿ; ನಿನ್ನ ಪ್ರಜೆಯು ಮುಗ್ಗರಿಸುವುದಕ್ಕೆ ಇನ್ನು ನೀನು ಕಾರಣನಾಗುವುದಿಲ್ಲ” ಇದು ಕರ್ತನಾದ ಯೆಹೋವನ ನುಡಿ.
Wala sintokuruhusu kusikiliza fedhiha za mataifa tena; hautachukua tena aibu ya watu au kufanya taifa lako kuanguka-hivi ndivyo Bwana Yahwe asemavyo.”'
16 ೧೬ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
Kisha neno la Yahwe likanijia, kusema,
17 ೧೭ “ನರಪುತ್ರನೇ, ಇಸ್ರಾಯೇಲ್ ವಂಶದವರು ಸ್ವದೇಶದಲ್ಲಿ ವಾಸಿಸುತ್ತಿದ್ದಾಗ ತಮ್ಮ ದುರ್ಮಾರ್ಗ, ದುರಾಚಾರಗಳಿಂದ ಅದನ್ನು ಅಶುದ್ಧಗೊಳಿಸಿದರು; ಅವರ ನಡತೆಯು ಮುಟ್ಟಿನ ಅಶುದ್ಧತ್ವದ ಹಾಗಿತ್ತು.
“Mwanadamu, wakati nyumba ya Israeli walipoikalia nchi yao, waliinajisi kwa njia zao na matendo yao. Njia zao zilikuwa kama uchafu wa hedhi ya mwanamke mbele yangu.
18 ೧೮ ಅವರು ದೇಶದ ಮೇಲೆ ರಕ್ತವನ್ನು ಸುರಿಸಿ, ತಮ್ಮ ವಿಗ್ರಹಗಳಿಂದ ಅದನ್ನು ಅಶುದ್ಧಪಡಿಸಿದ ಕಾರಣ ನಾನು ಅವರ ಮೇಲೆ ನನ್ನ ರೋಷಾಗ್ನಿಯನ್ನು ಸುರಿಸಿದೆನು.
Hivyo nilimwaga ghadhabu yangu juu yao kwa ajili ya damu ambayo waliyoimwaga juu ya nchi na kwa ajili ya uchafu wa hiyo kwa sanamu zao.
19 ೧೯ ಜನಾಂಗಗಳೊಳಗೆ ಅವರನ್ನು ಚದರಿಸಿ, ದೇಶಗಳಿಗೆ ತೂರಿಬಿಟ್ಟು, ಅವರ ದುರ್ಮಾರ್ಗ, ದುರಾಚಾರಗಳಿಗೆ ಸರಿಯಾಗಿ ನ್ಯಾಯತೀರಿಸಿದೆನು.
Nimewatawanya miongoni mwa mataifa; walitawanyika katika nchi nyingi. Nimewahukumu kulingana na njia zao na matendo yao.
20 ೨೦ ಅವರು ಆ ಜನಾಂಗಗಳೊಳಗೆ ಸೇರಿಕೊಂಡ ಮೇಲೆ, ‘ಇವರು ಯೆಹೋವನ ಪ್ರಜೆಗಳು, ಆತನ ದೇಶದಿಂದ ಭ್ರಷ್ಟರಾಗಿ ಬಂದಿದ್ದಾರೆ’ ಎಂದು ಅವರಿಗೆ ಹೇಳಿ, ನನ್ನ ಪರಿಶುದ್ಧ ಹೆಸರನ್ನು ಅಪವಿತ್ರ ಮಾಡುವರು.
Kisha wakaenda kati ya mataifa, na popote walipoenda, walilitukana jina langu takatifu wakati watu waliwasema, 'Je! hawa kweli ni watu wa Yahwe? Kwa kuwa wamefukuzwa nje ya nchi yake.
21 ೨೧ ಆದರೆ ಇಸ್ರಾಯೇಲಿನ ವಂಶದವರು ಜನಾಂಗಗಳೊಳಗೆ ಸೇರಿ, ಅಲ್ಲಿ ಅಪಕೀರ್ತಿಗೆ ಗುರಿಮಾಡಿದ ನನ್ನ ಪರಿಶುದ್ಧ ನಾಮವನ್ನು ಕುರಿತು ಮನಮರುಗಿದೆನು.”
Lakini nilikuwa na huruma kwa ajili ya jina langu takatifu ambalo nyumba ya Israeli walilinajisi miongoni mwa mataifa, walipoenda huko.
22 ೨೨ ಆದಕಾರಣ ನೀನು ಇಸ್ರಾಯೇಲ್ ವಂಶದವರಿಗೆ ಹೀಗೆ ನುಡಿ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಇಸ್ರಾಯೇಲ್ ವಂಶದವರೇ, ನಿಮ್ಮ ನಿಮಿತ್ತವಲ್ಲ, ನೀವು ಜನಾಂಗಗಳೊಳಗೆ ಸೇರಿ ಅಪಕೀರ್ತಿಗೆ ಗುರಿಮಾಡಿದ ನನ್ನ ಪರಿಶುದ್ಧನಾಮದ ನಿಮಿತ್ತವೇ ಈ ರಕ್ಷಣ ಕಾರ್ಯವನ್ನು ಮಾಡುತ್ತೇನೆ.
Kwa hiyo waambie nyumba ya Israeli, 'Bwana Yahwe asema hivi: Sifanyi haya kwa ajili yenu, nyumba ya Israeli, lakini jina langu, mlilolitukana miongoni mwa mataifa kila sehemu mlipoenda.
23 ೨೩ ಜನಾಂಗಗಳಲ್ಲಿ ಅಪಕೀರ್ತಿಗೆ ಗುರಿಯಾದ, ಅಂದರೆ ನೀವು ಜನಾಂಗಗಳ ನಡುವೆ ಅಪಕೀರ್ತಿಗೆ ಗುರಿಮಾಡಿದ ನನ್ನ ಘನವುಳ್ಳ ನಾಮದ ಗೌರವವನ್ನು ನಾನು ಕಾಪಾಡಿಕೊಳ್ಳುವೆನು; ಹೀಗೆ ನಾನು ಅವುಗಳ ಕಣ್ಣೆದುರಿಗೆ ನಿಮ್ಮ ರಕ್ಷಣೆಯ ಮೂಲಕ ನನ್ನ ಗೌರವವನ್ನು ಕಾಪಾಡಿಕೊಳ್ಳುವಾಗ ನಾನೇ ಯೆಹೋವನು ಎಂದು ಅವರಿಗೆ ತಿಳಿಯುವುದು” ಇದು ಕರ್ತನಾದ ಯೆಹೋವನ ನುಡಿ.
Kwa kuwa nitalifanya jina langu kuu kuwa takatifu, mlilolitukana miongoni mwa mataifa-katikati ya mataifa, mmelitukana. Kisha mataifa watajua kwamba mimi ni Yahwe-hivi ndivyo asemavyo Bwana Yahwe-asemavyo-wakati mtakapoona kwamba mimi ni mtakatifu.
24 ೨೪ “ನಾನು ನಿಮ್ಮನ್ನು ಜನಾಂಗಗಳೊಳಗಿಂದ ಬಿಡಿಸಿ, ಸಕಲ ದೇಶಗಳಿಂದ ಒಟ್ಟುಗೂಡಿಸಿ ಸ್ವದೇಶಕ್ಕೆ ಬರಮಾಡುವೆನು.
Nitawachukua kutoka mataifa na kuwakusanya kutoka kila nchi, na nitawaleta hata nchi yenu.
25 ೨೫ ಆಮೇಲೆ ನಾನು ನಿಮ್ಮ ಮೇಲೆ ಶುದ್ಧವಾದ ನೀರನ್ನು ಪ್ರೋಕ್ಷಿಸಲು ನೀವು ನಿರ್ಮಲರಾಗುವಿರಿ; ನಿಮ್ಮ ಸಮಸ್ತ ವಿಗ್ರಹಗಳಿಂದಲೂ, ಸಕಲ ವಿಧವಾದ ಹೊಲಸಿನಿಂದಲೂ ನಿಮ್ಮನ್ನು ಶುದ್ಧಿಮಾಡುವೆನು.
Kisha nitanyunyiza maji masafi juu yenu ili muwe wasafi kutoka kwenye uchafu wote, na nitawasafisha kutoka sanamu zenu zenu.
26 ೨೬ ನಾನು ನಿಮಗೆ ಹೊಸ ಮನಸ್ಸನ್ನು ಕೊಟ್ಟು, ನಿಮ್ಮಲ್ಲಿ ನೂತನ ಸ್ವಭಾವವನ್ನು ಹುಟ್ಟಿಸುವೆನು; ಕಲ್ಲಾದ ಹೃದಯವನ್ನು ನಿಮ್ಮೊಳಗಿಂದ ತೆಗೆದು, ಮೃದುವಾದ ಹೃದಯವನ್ನು ನಿಮಗೆ ದಯಪಾಲಿಸುವೆನು.
Nitawapatia moyo mpya na roho mpya sehemu zenu za ndani, na nitautoa moyo wa jiwe kutoka kwenye nyama zenu. Kwa kuwa nitawapatia moyo wa nyama.
27 ೨೭ ನನ್ನ ಆತ್ಮವನ್ನು ನಿಮ್ಮಲ್ಲಿ ನೆಲಸಿರುವಂತೆ ಅನುಗ್ರಹಿಸಿ, ನೀವು ನನ್ನ ನಿಯಮಗಳನ್ನು ಅನುಸರಿಸುವ ಹಾಗೆ ಮಾಡುವೆನು. ನೀವು ನನ್ನ ವಿಧಿಗಳನ್ನು ಕೈಕೊಂಡು ಆಚರಿಸುವಿರಿ.
Nitaiweka Roho yangu ndani yenu na kuwawezesha kutembea katika sheria zangu na kuziweka hukumu zangu, hivyo mtazitenda.
28 ೨೮ ನಾನು ನಿಮ್ಮ ಪೂರ್ವಿಕರಿಗೆ ಅನುಗ್ರಹಿಸಿದ ದೇಶದಲ್ಲಿ ನೀವು ವಾಸಿಸುವಿರಿ. ನೀವು ನನಗೆ ಪ್ರಜೆಯಾಗಿರುವಿರಿ, ನಾನು ನಿಮಗೆ ದೇವರಾಗಿರುವೆನು.
Kisha mtakaa katika nchi niliyowapa babu zenu; mtakuwa watu wangu, nami nitakuwa Mungu wenu.
29 ೨೯ ನಾನು ನಿಮ್ಮನ್ನು ನಿಮ್ಮ ಎಲ್ಲಾ ಅಶುದ್ಧತ್ವಗಳಿಂದಲೂ ರಕ್ಷಿಸಿ, ಬೆಳೆ ಬೆಳೆಯಲೆಂದು ಅಪ್ಪಣೆಕೊಟ್ಟು, ಅದನ್ನು ವೃದ್ಧಿಗೊಳಿಸುವೆನು; ನಿಮಗೆ ಕ್ಷಾಮವನ್ನು ಇನ್ನು ಬರಮಾಡುವುದಿಲ್ಲ.
Kwa kuwa nitawaokoa kutokana na uchafu wenu wote. Nitaita ngano kuiongeza. Sitaweka tena njaa juu yenu.
30 ೩೦ ನೀವು ಕ್ಷಾಮ ದೇಶದವರೆಂದು ಜನಾಂಗಗಳು ಇನ್ನು ನಿಮ್ಮನ್ನು ನಿಂದಿಸದಂತೆ, ನಾನು ಮರದ ಹಣ್ಣನ್ನೂ, ಹೊಲದ ಬೆಳೆಯನ್ನೂ ಹೆಚ್ಚಿಸುವೆನು.
Nitaongeza tunda la mti na kuzalisha kwenye mashamba ili kwamba msichukue tena aibu ya njaa juu ya mataifa.
31 ೩೧ ಆಗ ನೀವು ನಿಮ್ಮ ದುರ್ಮಾರ್ಗ, ದುರಾಚಾರಗಳನ್ನು ಜ್ಞಾಪಕಕ್ಕೆ ತಂದುಕೊಂಡು, ನಿಮ್ಮ ಅಪರಾಧಗಳ ಮತ್ತು ಅಸಹ್ಯಕಾರ್ಯಗಳ ನಿಮಿತ್ತ ನಿಮಗೆ ನೀವೇ ಹೇಸಿಕೊಳ್ಳುವಿರಿ.”
Kisha mtazikumbuka njia zenu mbaya na matendo yenu ambayo hayakuwa mazuri, na mtaonyesha chuki kwenye nyuso zenu kwa sababu ya dhambi zenu na matendo yenu maovu.
32 ೩೨ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನು ಈ ರಕ್ಷಣ ಕಾರ್ಯವನ್ನು ಮಾಡುವುದು ನಿಮ್ಮ ನಿಮಿತ್ತವಲ್ಲ ಎಂಬುದು ನಿಮಗೆ ತಿಳಿದಿರಲಿ; ಇಸ್ರಾಯೇಲ್ ವಂಶದವರೇ, ನಿಮ್ಮ ದುರ್ಮಾರ್ಗಗಳಿಗೆ ಲಜ್ಜೆಗೊಳ್ಳಿರಿ, ನಾಚಿಕೆಪಡಿರಿ.”
Sifanyi hili kwa ajili yenu-hivi ndivyo Bwana Yahwe asemavyo-ijulikane kwenu. Hivyo tahayarikeni na kufadhaika kwa sababu ya njia zenu, nyumba ya Israeli.
33 ೩೩ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನು ನಿಮ್ಮನ್ನು ನಿಮ್ಮ ಅಪರಾಧಗಳಿಂದೆಲ್ಲಾ ಶುದ್ಧಿ ಮಾಡುವ ದಿನದಲ್ಲಿ, ಪಟ್ಟಣಗಳನ್ನು ನಿವಾಸಿಗಳಿಂದ ತುಂಬಿಸುವೆನು, ಹಾಳು ನಿವೇಶನಗಳಲ್ಲಿ ಕಟ್ಟಡಗಳು ಏಳುವವು.
Bwana Yahwe asema hivi: Katika siku niliyowatakasa kutoka kwenye uovu wenu wote, nitawafanya miji ikaliwe na kuzijenga sehemu zilizoharibiwa.
34 ೩೪ ಹಾದು ಹೋಗುವವರೆಲ್ಲರ ಕಣ್ಣೆದುರಿಗೆ ಹಾಳುಬಿದ್ದು ಭೂಮಿಯನ್ನು ಉಳುವರು.
Kwa kuwa mtailima nchi iliyoharibiwa hadi itakapoonekana haijaaharibika mbele za macho ya wote wapitao karibu.
35 ೩೫ ಆಗ ಜನರು, ‘ಹಾಳಾಗಿದ್ದ ಈ ದೇಶವು ಏದೆನ್ ಉದ್ಯಾನದಂತೆ ಕಂಗೊಳಿಸುತ್ತದೆ; ಬಿದ್ದುಹೋಗಿ ಹಾಳಾದ ಪಟ್ಟಣಗಳು ಕೋಟೆಕೊತ್ತಲಗಳಿಂದ ಕೂಡಿ, ಜನಭರಿತವಾಗಿದೆ’ ಎಂದು ಹೇಳುವರು.
Kisha watasema, “Hii nchi ilikuwa ukiwa, lakini imekuwa kama bustani ya Edeni; miji ya ukiwa na isiyo na wakaaji iliyo magofu ambayo ilibomolewa sasa inakaliwa.
36 ೩೬ ಯೆಹೋವನಾದ ನಾನೇ ಬಿದ್ದುಹೋದದ್ದನ್ನು ಕಟ್ಟಿ, ಹಾಳಾದದ್ದನ್ನು ಬೆಳೆಯಿಸಿದ್ದೇನೆ ಎಂಬುದು ನಿಮ್ಮ ಸುತ್ತಲು ಉಳಿದ ಜನಾಂಗಗಳಿಗೆ ಗೊತ್ತಾಗುವುದು. ಯೆಹೋವನಾದ ನಾನೇ ನುಡಿದಿದ್ದೇನೆ, ನಾನೇ ಇದನ್ನು ಮಾಡುತ್ತೇನೆ.”
Kisha mataifa mengine waliowazunguka watajua yakwamba mimi ni Yahwe, kwamba nimejenga palipokuwa pameharibiwa na kuipanda mbegu sehemu iliyokuwa ukiwa.
37 ೩೭ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನು ಇನ್ನೊಂದು ವಿಷಯದಲ್ಲಿ ಇಸ್ರಾಯೇಲ್ ವಂಶದವರ ವಿಜ್ಞಾಪನೆಯನ್ನು ಲಾಲಿಸಿ ನೆರವೇರಿಸುವೆನು; ಅಂದರೆ ಅವರ ಜನಸಂಖ್ಯೆಯನ್ನು ಹಿಂಡಿನೋಪಾದಿಯಲ್ಲಿ ಹೆಚ್ಚಿಸುವೆನು.
Bwana Yahwe asema hivi: Tena nitaulizwa na nyumba ya Israeli kufanya hivi kwa ajili yao, kuwaongeza kama kundi la watu.
38 ೩೮ ಮೀಸಲಾದ ಮಂದೆಯಂತೆ, ಹಬ್ಬಗಳಲ್ಲಿ ಯೆರೂಸಲೇಮಿಗೆ ಬಂದು ಸೇರುವ ಹಿಂಡಿನ ಹಾಗೆಯೂ ಇರುವರು. ಆದಕಾರಣ ಮನುಷ್ಯರು ಹಾಳು ಪಟ್ಟಣಗಳಲ್ಲಿ ಹಿಂಡುಹಿಂಡಾಗಿ ತುಂಬಿಕೊಳ್ಳುವರು. ಆಗ ನಾನೇ ಯೆಹೋವನು ಎಂದು ಅವರಿಗೆ ತಿಳಿಯುವುದು.”
Kama kundi lililotengwa kwa ajili ya sadaka, kama kundi katika Yerusalimu katika sikukuu yake iliyoteuliwa, hivyo miji itaharibiwa kwa kujazwa na makundi ya watu na watajua kwamba mimi ni Yahwe.”'