< ಯೆಹೆಜ್ಕೇಲನು 32 >
1 ೧ (ಯೆಹೋಯಾಖೀನನು ಸೆರೆಯಾದ) ಹನ್ನೆರಡನೆಯ ವರ್ಷದ, ಹನ್ನೆರಡನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
Mfe dumien mu, ɔsram a ɛto so dumien no da a edi kan no, Awurade asɛm baa me nkyɛn se:
2 ೨ “ನರಪುತ್ರನೇ, ನೀನು ಐಗುಪ್ತದ ಅರಸನಾದ ಫರೋಹನ ವಿಷಯವಾಗಿ ಶೋಕ ಗೀತೆಯನ್ನು ಹಾಡಿ ಅವನಿಗೆ ಹೀಗೆ ನುಡಿ, ‘ನೀನು ಜನಾಂಗಗಳಲ್ಲಿ ಸಿಂಹದ ಮರಿಗೆ ಸಮನಾಗಿರುವೆ ಮತ್ತು ಸಮುದ್ರಗಳಲ್ಲಿರುವ ತಿಮಿಂಗಿಲದ ಹಾಗಿರುವೆ. ನೀನಿದ್ದ ನದಿಗಳನ್ನು ಭೇದಿಸಿಕೊಂಡು ಬಂದು, ನೀರನ್ನು ನಿನ್ನ ಕಾಲುಗಳಿಂದ ಕಲಕಿ, ಜನಾಂಗಗಳ ಹೊಳೆಗಳನ್ನೂ ತುಳಿದು ಬದಿಮಾಡಿದೆ.’”
“Onipa ba, to kwadwom fa Misraimhene Farao ho na ka kyerɛ no se: “‘Wote sɛ gyata wɔ aman no mu: wote sɛ po mu aboa a ne ho yɛ hu wububu dikyi wɔ wo nsuten mu, wode wo nan boro nsuten no de fono nsu no.
3 ೩ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಗುಂಪಾಗಿ ಕೂಡಿದ ಬಹು ಜನಾಂಗಗಳವರ ಮೇಲೆ ನಾನು ನನ್ನ ಬಲೆಯನ್ನು ಬೀಸುವೆನು; ಅವರು ನಿನ್ನನ್ನು ಆ ಬಲೆಯಿಂದ ಮೇಲಕ್ಕೆ ಎಳೆಯುವರು.
“‘Sɛɛ na Otumfo Awurade se: “‘Mede dɔm bɛba abɛtow mʼasau agu wo so, na wɔbɛtwe wo afi mʼasau mu.
4 ೪ ನಾನು ನಿನ್ನನ್ನು ನೆಲದ ಮೇಲೆ ಹಾಕಿಬಿಡುವೆನು; ನಿನ್ನನ್ನು ಬಯಲಿನಲ್ಲಿ ಎಸೆದು ಆಕಾಶದ ಪಕ್ಷಿಗಳೆಲ್ಲಾ ನಿನ್ನ ಮೇಲೆ ಎರಗುವಂತೆ ಮಾಡಿ, ಸಮಸ್ತ ಭೂಜಂತುಗಳನ್ನು ನಿನ್ನಿಂದ ತೃಪ್ತಿಗೊಳಿಸುವೆನು.
Mɛtow wo akyene asase no so na mahiri wo ato sare so. Mɛma wim nnomaa nyinaa abesisi wo so na asase so mmoa nyinaa adi wo nam afrɛ so.
5 ೫ ನಿನ್ನ ಮಾಂಸವನ್ನು ಗುಡ್ಡಗಳ ಮೇಲೆ ಹಾಕಿ, ಆ ನಿನ್ನ ಕಣಿವೆಗಳನ್ನು ಹೆಣಗಳ ರಾಶಿಯಿಂದ ತುಂಬಿಸುವೆನು.
Mɛhata wo nam wɔ mmepɔw no so na mede wo funu ahyɛ aku ma.
6 ೬ ನಿನ್ನ ರಕ್ತಪ್ರವಾಹದಿಂದ ದೇಶವನ್ನು ಬೆಟ್ಟಗಳ ತನಕ ತೋಯಿಸುವೆನು; ಹಳ್ಳಗಳು ನಿನ್ನ ರಕ್ತದಿಂದ ತುಂಬುವವು.
Mede wo mogya a ɛresen no afɔw asase no de akɔka mmepɔw no na wo nam bɛhyɛ abon nketewa no ma.
7 ೭ ಫರೋಹನನೇ, ಆಗ ನಾನು ನಿನ್ನ ಬೆಳಕನ್ನು ನಂದಿಸುವಾಗ, ಆಕಾಶಕ್ಕೆ ಮುಸುಕುಹಾಕಿ, ಅಲ್ಲಿನ ನಕ್ಷತ್ರಗಳನ್ನು ಮಸುಕುಮಾಡಿ, ಸೂರ್ಯನನ್ನು ಮೋಡದಿಂದ ಮುಚ್ಚಿಬಿಡುವೆನು, ಚಂದ್ರನೂ ಪ್ರಕಾಶಿಸನು.
Sɛ mitwa wo fi hɔ a, mɛkata ɔsoro ani na madunnum wɔn nsoromma; mede omununkum bɛkata owia ani, na ɔsram renhyerɛn.
8 ೮ ನಿನ್ನ ಮೇಲೆ ಆಕಾಶದಲ್ಲಿ ಮಿನುಗುವ ಸಕಲ ಜ್ಯೋತಿಗಳನ್ನೂ ನಾನು ಮಸುಕುಮಾಡಿ, ನಿನ್ನ ದೇಶವನ್ನು ಕತ್ತಲು ಮಾಡುವೆನು” ಇದು ಕರ್ತನಾದ ಯೆಹೋವನ ನುಡಿ.
Ɔsoro akanea a ɛhyerɛn nyinaa mɛma aduru sum wɔ wo so; mɛma sum aduru wʼasase, Otumfo Awurade asɛm ni.
9 ೯ “ನಾನು ನಿನ್ನ ನಾಶದ ಸುದ್ದಿಯನ್ನು, ಜನಾಂಗಗಳಲ್ಲಿ ನಿನಗೆ ತಿಳಿಯದ ದೇಶಗಳಿಗೂ ಮುಟ್ಟಿಸುವಾಗ, ಅವರ ಮನಸ್ಸಿನಲ್ಲಿ ಗಲಿಬಿಲಿಯನ್ನು ಎಬ್ಬಿಸುವೆನು.
Mɛma nnipa bebree koma atutu bere a mede wo sɛe aba aman no mu, nsase a wunnya nhuu mu.
10 ೧೦ ಹೌದು, ಅನೇಕ ಜನಾಂಗಗಳು ನಿನ್ನ ವಿಷಯದಲ್ಲಿ ಬೆಚ್ಚಿಬೆರಗಾಗುವಂತೆ ಮಾಡುವೆನು, ನಾನು ನನ್ನ ಖಡ್ಗವನ್ನು ಅವುಗಳ ಅರಸರ ಕಣ್ಣೆದುರಿಗೆ ಬೀಸುವಾಗ, ಅವರು ನಿನ್ನ ದುರ್ಗತಿಯನ್ನು ನೆನಸಿ ಭಯಭ್ರಾಂತರಾಗುವರು; ನಿನ್ನ ಸೋಲಿನ ದಿನದಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ಪ್ರಾಣದ ಬಗ್ಗೆ ಕ್ಷಣಕ್ಷಣವೂ ನಡುಗುವನು.”
Mɛma nnipa bebree ho adwiriw wɔn wɔ wo ho, wo nti, hu bɛma wɔn ahene ho apopo bere a merehim mʼafoa wɔ wɔn anim no. Da a wobɛhwe ase no wɔn mu biara ho bɛwosow bere nyinaa mu wɔ wɔn nkwa nti.
11 ೧೧ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಬಾಬೆಲಿನ ಅರಸನ ಖಡ್ಗವು ನಿನ್ನ ಮೇಲೆ ಬೀಳುವುದು.
“‘Na sɛɛ na Otumfo Awurade se: “‘Babiloniahene afoa bɛsɔre wɔ wo so.
12 ೧೨ ನಾನು ನಿನ್ನ ಪ್ರಜೆಯನ್ನು ಅತಿಭಯಂಕರ ಜನಾಂಗದವರಾದ ಬಲಿಷ್ಠರ ಕತ್ತಿಗಳಿಂದ ಸಂಹರಿಸುವೆನು. ಅವರು ಐಗುಪ್ತದ ಮಹತ್ತನ್ನು ನಾಶ ಮಾಡುವರು. ಅದರ ಜನ ಸಮೂಹವೆಲ್ಲಾ ನಿರ್ನಾಮವಾಗುವುದು.
Mɛma wo dɔm no atotɔ wɔ dɔmmarima afoa ano, wɔ aman a wɔyɛ anuɔdenfo mu. Wɔbɛsɛe Misraim ahomaso pasaa na ne dɔm no nyinaa bedi nkogu.
13 ೧೩ ನಾನು ಬಹು ಪ್ರವಾಹಗಳ ತೀರದಲ್ಲಿನ ಪಶುಗಳನ್ನೆಲ್ಲಾ ನಾಶಪಡಿಸುವೆನು; ಇನ್ನು ಮೇಲೆ ಯಾವ ಮನುಷ್ಯನ ಕಾಲಾಗಲಿ, ಯಾವ ಪಶುವಿನ ಗೊರಸಾಗಲಿ ನೀರಿನಲ್ಲಿ ಹೆಜ್ಜೆಯಿಡುವುದಿಲ್ಲ.
Mekunkum nʼanantwi nyinaa afi nsu bebree no ho na onipa nan rentiatia mu bio na anantwi tɔte nso remfono no.
14 ೧೪ ಆಗ ಆ ನೀರು ತಿಳಿಯಾಗುವಂತೆಯೂ, ಆ ಪ್ರವಾಹಗಳು ಎಣ್ಣೆಯ ಹಾಗೆ ಹರಿಯುವಂತೆಯೂ ಮಾಡುವೆನು” ಇದು ಕರ್ತನಾದ ಯೆಹೋವನ ನುಡಿ.
Afei mɛma ne nsu ani atew na mama ne nsuten ateɛ sɛ ngo,
15 ೧೫ “ಐಗುಪ್ತದಲ್ಲಿ ತುಂಬಿದ್ದ ಸೊತ್ತನ್ನೆಲ್ಲಾ ನಾನು ಧ್ವಂಸಗೊಳಿಸಿ, ಆ ದೇಶವನ್ನು ಹಾಳುಮಾಡಿ, ಅಲ್ಲಿನ ಸಕಲ ನಿವಾಸಿಗಳನ್ನು ಸಂಹರಿಸಿದಾಗ ನಾನೇ ಯೆಹೋವನು ಎಂದು ಗೊತ್ತಾಗುವುದು.
Sɛ mema Misraim da mpan na miyi biribiara fi asase no so, sɛ mikum wɔn a wɔte so nyinaa a, afei na wobehu sɛ mene Awurade no.’
16 ೧೬ ಪ್ರಲಾಪಿಸುವವರು ಈ ಶೋಕ ಗೀತವನ್ನೆತ್ತಲಿ; ಜನಾಂಗಗಳ ಯುವತಿಯರು ಹೀಗೆ ಗೋಳಾಡಲಿ; ಐಗುಪ್ತಕ್ಕಾಗಿಯೂ, ಅಲ್ಲಿನ ಬಹು ಪ್ರಜೆಗಳಿಗಾಗಿಯೂ ದುಃಖಿಸಿ ಈ ಗೀತೆಯನ್ನು ಹಾಡಲಿ” ಇದು ಕರ್ತನಾದ ಯೆಹೋವನ ನುಡಿ.
“Eyi ne kwadwom a wɔbɛto ama no. Amanaman no mmabea bɛto ama Misraim ne ne dɔm nyinaa, Otumfo Awurade asɛm ni.”
17 ೧೭ (ಯೆಹೋಯಾಖೀನನು ಸೆರೆಯಾದ) ಹನ್ನೆರಡನೆಯ ವರ್ಷದ, ತಿಂಗಳಿನ ಹದಿನೈದನೆಯ ದಿನದಲ್ಲಿ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
Afe a ɛto so dumien no ne sram da a ɛto so dunum no, Awurade asɛm baa me nkyɛn se:
18 ೧೮ “ನರಪುತ್ರನೇ, ನೀನು ಐಗುಪ್ತದ ಅಸಂಖ್ಯಾತ ಪ್ರಜೆಗಾಗಿ ಗೋಳಾಡಿ, ಅವರನ್ನೂ ಮತ್ತು ಘನವಾದ ಜನಾಂಗಗಳವರನ್ನೂ ಅಧೋಲೋಕಕ್ಕೆ, ಪ್ರೇತಗಳ ಜೊತೆಗೆ ತಳ್ಳಿಬಿಡು.
“Onipa ba, twa adwo ma Misraim dɔm na ma ɔne amanaman akɛse no mmabea nsian nkɔ asase ase nkɔka wɔn a wɔasian kɔ amoa mu no ho.
19 ೧೯ ಐಗುಪ್ತ್ಯವೇ, ನೀನು ಸೌಂದರ್ಯದಲ್ಲಿ ಯಾರಿಗೆ ಹೋಲುವೆ? ಕೆಳಗೆ ಹೋಗು ಮತ್ತು ಸುನ್ನತಿಹೀನರ ಸಂಗಡ ಮಲಗು.
Ka kyerɛ wɔn se, ‘Wadom mo dodo sen wɔn a aka no ana? Munsian nkɔ na mo ne momonotofo no nkɔda.’
20 ೨೦ ಅವರು ಖಡ್ಗದಿಂದ ಹತರಾದವರ ಮಧ್ಯದಲ್ಲಿ ಬೀಳುವರು. ಐಗುಪ್ತವೂ ಮತ್ತು ಅದರ ಸಮೂಹವೂ ಕತ್ತಿಗೆ ಒಪ್ಪಿಸಲ್ಪಟ್ಟಿದೆ.
Wɔbɛka wɔn a wowuwuu wɔ afoa ano no ho. Wɔatwe afoa no, ma wɔntwe ne nnipadɔm no ase nkɔ.
21 ೨೧ ಪಾತಾಳದೊಳಗಿನ ಬಲಿಷ್ಠ ಶೂರರು ಅದನ್ನೂ, ಅದರ ಸಹಾಯಕರನ್ನೂ ನೋಡಿ, ‘ಇವರು ಸುನ್ನತಿಯಿಲ್ಲದವರಾಗಿಯೂ, ಖಡ್ಗದಿಂದ ಹತರಾದವರಾಗಿಯೂ ಇಳಿದು ಬಂದಿದ್ದಾರೆ’ ಅಂದುಕೊಳ್ಳುವರು. (Sheol )
Akannifo akɛse a wɔwɔ ɔda mu bɛka afa Misraim ne ne dɔm ho se, ‘Wɔasian aba na wɔdeda momonotofo mu, wɔn a wowuwuu wɔ afoa ano no.’ (Sheol )
22 ೨೨ ಅಶ್ಶೂರವೂ ಮತ್ತು ಅದರ ಎಲ್ಲಾ ಗುಂಪು ಅಲ್ಲಿರುತ್ತವೆ. ಆ ಜನರ ಗೋರಿಗಳು ಅದನ್ನು ಸುತ್ತಿಕೊಂಡಿವೆ; ಅವರೆಲ್ಲರೂ ಸಂಹೃತರು, ಖಡ್ಗದಿಂದ ಹತರಾದವರು.
“Asiria ne nʼasraafo nyinaa wɔ hɔ, wɔn a wɔakunkum wɔn no nna atwa ne ho ahyia, wɔn a wɔatotɔ wɔ afoa ano no.
23 ೨೩ ಅವರ ಗೋರಿಗಳು ಅಧೋಲೋಕದ ಅಗಾಧ ಸ್ಥಳಗಳಲ್ಲಿ ಹರಡಿಕೊಂಡಿವೆ; ಸಂಹೃತರಾದವರು, ಖಡ್ಗದಿಂದ ಹತರಾದವರು ಗೋರಿಯ ಸುತ್ತಲಿದ್ದಾರೆ; ಜೀವಲೋಕದಲ್ಲಿ ಹತರಾದವರು ಜೀವಿತರ ದೇಶದಲ್ಲಿ ಭಯವನ್ನು ಉಂಟುಮಾಡಿದ್ದಾರೆ.
Wɔn nna no wɔ amoa no ase tɔnn na nʼasraafo deda ne nna ho nyinaa. Wɔn a na wohunahuna afoforo wɔ ateasefo asase so no nyinaa awuwu, wɔatotɔ wɔ afoa ano.
24 ೨೪ ಅಲ್ಲಿ ಏಲಾಮು ಮತ್ತು ಅದರ ಸಮೂಹವು ಗೋರಿಯನ್ನು ಸುತ್ತಿಕೊಂಡಿದೆ; ಅವರೆಲ್ಲರೂ ಸಂಹೃತರು, ಖಡ್ಗದಿಂದ ಹತರಾದವರು; ಜೀವಲೋಕದಲ್ಲಿ ಭೀಕರರಾಗಿದ್ದ ಆ ಸುನ್ನತಿಹೀನರು ಅಧೋಲೋಕಕ್ಕೆ ಇಳಿದು ಪ್ರೇತಗಳ ಸಂಗಡ ಸೇರಿ ನಿಂದೆಯನ್ನು ಹೊತ್ತುಕೊಂಡಿದ್ದಾರೆ.
“Elam wɔ hɔ, ne nnipadɔm nyinaa atwa ne da ho ahyia. Wɔn nyinaa awuwu, wɔatotɔ wɔ afoa ano. Wɔn a na wohunahuna afoforo wɔ ateasefo asase so nyinaa sian kɔɔ asase ase sɛ momonotofo. Wɔde wɔn animguase kɔka wɔn a wosian kɔ amoa mu no ho.
25 ೨೫ ಏಲಾಮು ಮಲಗುವುದಕ್ಕೆ ಹತರಾದ ಅದರ ಸಮೂಹಕ್ಕೆ ಸ್ಥಳವನ್ನು ಏರ್ಪಡಿಸಿದ್ದಾರೆ, ಅವರ ಗೋರಿಗಳು ಅದರ ಸುತ್ತುಮುತ್ತಲಿವೆ; ಅವರೆಲ್ಲರೂ ಸುನ್ನತಿಹೀನರು, ಖಡ್ಗದಿಂದ ಹತರಾದವರು; ಅವರು ಜೀವಲೋಕದಲ್ಲಿ ಭೀಕರರಾಗಿದ್ದು, ಪ್ರೇತಗಳ ಜೊತೆಗೆ ಸೇರಿ ನಿಂದೆಯನ್ನು ಹೊತ್ತುಕೊಂಡಿದ್ದಾರೆ. ಸಂಹೃತರ ಮಧ್ಯದಲ್ಲೇ ಏಲಾಮಿಗೆ ಸ್ಥಳವು ಏರ್ಪಾಡಾಗಿದೆ.
Wɔato mpa ama no wɔ atɔfo no mu, na ne dɔm atwa ne da ho ahyia. Wɔn nyinaa yɛ momonotofo a wɔatotɔ wɔ afoa ano. Esiane sɛ wɔn ahunahuna trɛw wɔ ateasefo asase so no nti, wɔne wɔn a wosian kɔ amoa mu no nyinaa anim agu ase. Wɔadeda wɔn wɔ atɔfo no mu.
26 ೨೬ ಅಲ್ಲಿ ಮೆಷೆಕ್ ತೂಬಲ್ ಮತ್ತು ಅವುಗಳ ಎಲ್ಲಾ ಸಮೂಹವು ಅಲ್ಲಿರುತ್ತವೆ; ಆ ಪ್ರಜೆಗಳ ಗೋರಿಗಳು ಅವುಗಳನ್ನು ಸುತ್ತಿಕೊಂಡಿವೆ; ಅವರೆಲ್ಲರೂ ಸುನ್ನತಿಹೀನರು, ಖಡ್ಗದಿಂದ ಹತರಾದವರು; ಜೀವಲೋಕದಲ್ಲಿ ಭೀಕರರಾಗಿದ್ದಾರೆ.
“Mesek ne Tubal wɔ hɔ a wɔn dɔm atwa wɔn nna ho ahyia. Wɔn nyinaa yɛ momonotofo a wɔatotɔ wɔ afoa ano efisɛ wɔtrɛtrɛw wɔn ahunahuna mu wɔ ateasefo asase so.
27 ೨೭ ಸುನ್ನತಿಯಿಲ್ಲದವರಲ್ಲಿ ಶೂರರು ಜೀವಲೋಕದೊಳಗೆ ಬಲಿಷ್ಠರಿಗೂ ಭೀಕರರಾಗಿದ್ದು ಹತರಾಗಿ, ಆಯುಧ ಸಹಿತ ಪಾತಾಳಕ್ಕೆ ಇಳಿದು, ಕತ್ತಿಗಳನ್ನು ತಲೆದಿಂಬು ಮಾಡಿಕೊಂಡು, ತಮ್ಮ ಎಲಬುಗಳ ಮೇಲೆ ತಮ್ಮ ದುಷ್ಕೃತ್ಯಗಳ ಭಾರವನ್ನು ಹೊತ್ತುಕೊಂಡಿದ್ದಾರೋ ಅವರ ನಡುವೆ ಮೆಷೆಕಿನವರೂ ತೂಬಲಿನವರೂ ಒರಗದೆ ಹೋಗುವರೇ? (Sheol )
Ɛnyɛ wɔn ne akofo momonotofo foforo a wɔatotɔ na wɔdeda hɔ no ana? Wɔn a wɔne wɔn akode sian kɔɔ nna mu na wɔn ti deda wɔn afoa so no. Wɔn amumɔyɛ so asotwe daa wɔn nnompe so, mmom saa akofo yi ahunahuna atrɛtrɛw wɔ ateasefo asase so. (Sheol )
28 ೨೮ ಐಗುಪ್ತ್ಯವೇ, ನೀನು ಸುನ್ನತಿಹೀನರ ಮಧ್ಯದಲ್ಲಿ ನಾಶವಾಗಿ ಖಡ್ಗದಿಂದ ಹತರಾದವರ ನಡುವೆ ಮಲಗುವೆ!
“Farao, wo nso wobebubu wo mu na woakɔda momonotofo mu, wo ne wɔn a wɔtotɔɔ wɔ afoa ano no.
29 ೨೯ ಅಲ್ಲಿ ಎದೋಮು, ಅದರ ಅರಸರೂ ಮತ್ತು ಎಲ್ಲಾ ಸರದಾರರೂ ಅಲ್ಲಿದ್ದಾರೆ; ಅವರು ಬಲಾತ್ಕಾರಿಗಳಾಗಿದ್ದು ಖಡ್ಗದಿಂದ ಹತರಾದವರ ಸಂಗಡ ಬಿದ್ದಿರುತ್ತಾರೆ; ಸುನ್ನತಿಹೀನರೊಡನೆ ಪ್ರೇತಗಳ ಸಂಗಡ ಮಲಗಿದ್ದಾರೆ.
“Edom wɔ hɔ, nʼahemfo ne ne mmapɔmma nyinaa deda wɔn a wɔatotɔ wɔ afoa ano no mu, wɔn tumi nyinaa akyi. Wɔdeda momonotofo mu, wɔne wɔn a wosian kɔ amoa mu no.
30 ೩೦ “ಉತ್ತರ ದೇಶದ ಸಕಲ ಪ್ರಭುಗಳೂ ಸಮಸ್ತ ಮತ್ತು ಚೀದೋನ್ಯರೂ ಸಂಹೃತರೊಂದಿಗೆ ಇಳಿದು ಅಲ್ಲಿದ್ದಾರೆ; ಭಯಂಕರವಾಗಿದ್ದ ತಮ್ಮ ಶೌರ್ಯಕ್ಕೆ ನಾಚಿಕೊಂಡು ಖಡ್ಗದಿಂದ ಹತರಾದವರ ಮಧ್ಯೆ ಸುನ್ನತಿಹೀನರಾಗಿ ಬಿದ್ದು, ಪ್ರೇತಗಳ ಸಂಗಡ ಸೇರಿ ನಿಂದೆಯನ್ನು ಹೊತ್ತುಕೊಂಡಿದ್ದಾರೆ.
“Mmapɔmma a wofi atifi fam nyinaa ne Sidonfo nyinaa wɔ hɔ, wɔne atɔfo kɔɔ wɔ animguase mu, wɔn tumi a wɔde hunahuna no nyinaa akyi. Wɔdeda hɔ sɛ momonotofo, wɔne wɔn a wokum wɔn wɔ afoa ano, na wɔne wɔn a wosian kɔ amoa mu no asoa wɔn animguase.
31 ೩೧ ಫರೋಹನು ಇವರೆಲ್ಲರನ್ನೂ ನೋಡಿ ತನ್ನ ಸಮಸ್ತ ಪ್ರಜೆಯ ವಿಷಯದಲ್ಲಿ ಸಮಾಧಾನ ಹೊಂದುವನು; ಹೌದು, ಫರೋಹನೂ ಮತ್ತು ಖಡ್ಗದಿಂದ ಹತರಾದ ಅವನ ಸಕಲ ಸೈನಿಕರೂ ಸಮಾಧಾನ ಹೊಂದುವರು” ಇದು ಕರ್ತನಾದ ಯೆಹೋವನ ನುಡಿ.
“Farao, ɔne nʼasraafo nyinaa behu wɔn na ne werɛ bɛkyekye wɔ ne dɔm a wokunkum wɔn wɔ afoa ano no ho, Otumfo Awurade asɛm ni.
32 ೩೨ “ಇಗೋ, ಜೀವಲೋಕದಲ್ಲಿ ನಾನು ನನ್ನ ಭಯವನ್ನು ಹುಟ್ಟಿಸಿದ್ದೇನೆ; ಫರೋಹನೂ ಮತ್ತು ಅವನ ಸಮಸ್ತ ಪ್ರಜೆಯೂ ಸುನ್ನತಿಹೀನರ ಮಧ್ಯೆ, ಖಡ್ಗದಿಂದ ಹತರಾದವರ ನಡುವೆ ಮಲಗುವರು” ಎಂಬುದು ಕರ್ತನಾದ ಯೆಹೋವನ ನುಡಿ.
Mmom me na memaa Farao ne ne nnipadɔm de ahunahuna trɛtrɛw wɔ ateasefo asase so de, nanso wɔbɛdeda momonotofo mu, wɔn a wɔde afoa kunkum wɔn, Otumfo Awurade asɛm ni.”