< ಯೆಹೆಜ್ಕೇಲನು 32 >

1 (ಯೆಹೋಯಾಖೀನನು ಸೆರೆಯಾದ) ಹನ್ನೆರಡನೆಯ ವರ್ಷದ, ಹನ್ನೆರಡನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
Godine dvanaeste, dvanaestoga mjeseca, prvoga dana, dođe mi riječ Jahvina:
2 “ನರಪುತ್ರನೇ, ನೀನು ಐಗುಪ್ತದ ಅರಸನಾದ ಫರೋಹನ ವಿಷಯವಾಗಿ ಶೋಕ ಗೀತೆಯನ್ನು ಹಾಡಿ ಅವನಿಗೆ ಹೀಗೆ ನುಡಿ, ‘ನೀನು ಜನಾಂಗಗಳಲ್ಲಿ ಸಿಂಹದ ಮರಿಗೆ ಸಮನಾಗಿರುವೆ ಮತ್ತು ಸಮುದ್ರಗಳಲ್ಲಿರುವ ತಿಮಿಂಗಿಲದ ಹಾಗಿರುವೆ. ನೀನಿದ್ದ ನದಿಗಳನ್ನು ಭೇದಿಸಿಕೊಂಡು ಬಂದು, ನೀರನ್ನು ನಿನ್ನ ಕಾಲುಗಳಿಂದ ಕಲಕಿ, ಜನಾಂಗಗಳ ಹೊಳೆಗಳನ್ನೂ ತುಳಿದು ಬದಿಮಾಡಿದೆ.’”
“Sine čovječji, zaplači nad faraonom, kraljem egipatskim, i kaži mu: 'Laviću naroda, propao si! Ti bješe kao krokodil u vodi, bučio si u rijekama svojim, nogama si vodu mutio, valove joj podizao!'
3 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಗುಂಪಾಗಿ ಕೂಡಿದ ಬಹು ಜನಾಂಗಗಳವರ ಮೇಲೆ ನಾನು ನನ್ನ ಬಲೆಯನ್ನು ಬೀಸುವೆನು; ಅವರು ನಿನ್ನನ್ನು ಆ ಬಲೆಯಿಂದ ಮೇಲಕ್ಕೆ ಎಳೆಯುವರು.
Ovako govori Jahve Gospod: 'Gle, razapet ću mrežu nad tobom sa skupom mnogih naroda: oni će te u mojoj mreži izvući.
4 ನಾನು ನಿನ್ನನ್ನು ನೆಲದ ಮೇಲೆ ಹಾಕಿಬಿಡುವೆನು; ನಿನ್ನನ್ನು ಬಯಲಿನಲ್ಲಿ ಎಸೆದು ಆಕಾಶದ ಪಕ್ಷಿಗಳೆಲ್ಲಾ ನಿನ್ನ ಮೇಲೆ ಎರಗುವಂತೆ ಮಾಡಿ, ಸಮಸ್ತ ಭೂಜಂತುಗಳನ್ನು ನಿನ್ನಿಂದ ತೃಪ್ತಿಗೊಳಿಸುವೆನು.
Ostavit će te na zemlji, tresnuti tobom o tlo. Sve ptice nebeske na te ću pustiti i zvijeri zemaljske tobom ću nahraniti!
5 ನಿನ್ನ ಮಾಂಸವನ್ನು ಗುಡ್ಡಗಳ ಮೇಲೆ ಹಾಕಿ, ಆ ನಿನ್ನ ಕಣಿವೆಗಳನ್ನು ಹೆಣಗಳ ರಾಶಿಯಿಂದ ತುಂಬಿಸುವೆನು.
Meso ću ti razbacat' po gorama, doline ću prekriti strvinom tvojom.
6 ನಿನ್ನ ರಕ್ತಪ್ರವಾಹದಿಂದ ದೇಶವನ್ನು ಬೆಟ್ಟಗಳ ತನಕ ತೋಯಿಸುವೆನು; ಹಳ್ಳಗಳು ನಿನ್ನ ರಕ್ತದಿಂದ ತುಂಬುವವು.
Istekom iz tebe zemlju ću napojiti, krvlju tvojom po gorama, i korita riječna njome napuniti.
7 ಫರೋಹನನೇ, ಆಗ ನಾನು ನಿನ್ನ ಬೆಳಕನ್ನು ನಂದಿಸುವಾಗ, ಆಕಾಶಕ್ಕೆ ಮುಸುಕುಹಾಕಿ, ಅಲ್ಲಿನ ನಕ್ಷತ್ರಗಳನ್ನು ಮಸುಕುಮಾಡಿ, ಸೂರ್ಯನನ್ನು ಮೋಡದಿಂದ ಮುಚ್ಚಿಬಿಡುವೆನು, ಚಂದ್ರನೂ ಪ್ರಕಾಶಿಸನು.
A kada te utrnem, nebesa ću potamniti i zvijezde na njima ugasiti! Oblakom ću sunce zastrijeti, i mjesec svjetlošću neće svijetliti.
8 ನಿನ್ನ ಮೇಲೆ ಆಕಾಶದಲ್ಲಿ ಮಿನುಗುವ ಸಕಲ ಜ್ಯೋತಿಗಳನ್ನೂ ನಾನು ಮಸುಕುಮಾಡಿ, ನಿನ್ನ ದೇಶವನ್ನು ಕತ್ತಲು ಮಾಡುವೆನು” ಇದು ಕರ್ತನಾದ ಯೆಹೋವನ ನುಡಿ.
Sva ću svjetlila na nebu zbog tebe utrnuti i mrak ću nad zemljom razastrijeti!' - riječ je Jahve Gospoda.
9 “ನಾನು ನಿನ್ನ ನಾಶದ ಸುದ್ದಿಯನ್ನು, ಜನಾಂಗಗಳಲ್ಲಿ ನಿನಗೆ ತಿಳಿಯದ ದೇಶಗಳಿಗೂ ಮುಟ್ಟಿಸುವಾಗ, ಅವರ ಮನಸ್ಸಿನಲ್ಲಿ ಗಲಿಬಿಲಿಯನ್ನು ಎಬ್ಬಿಸುವೆನು.
'Ucvilit ću srca mnogih naroda kad izgnanike tvoje odvedem u zemlje tebi nepoznate.
10 ೧೦ ಹೌದು, ಅನೇಕ ಜನಾಂಗಗಳು ನಿನ್ನ ವಿಷಯದಲ್ಲಿ ಬೆಚ್ಚಿಬೆರಗಾಗುವಂತೆ ಮಾಡುವೆನು, ನಾನು ನನ್ನ ಖಡ್ಗವನ್ನು ಅವುಗಳ ಅರಸರ ಕಣ್ಣೆದುರಿಗೆ ಬೀಸುವಾಗ, ಅವರು ನಿನ್ನ ದುರ್ಗತಿಯನ್ನು ನೆನಸಿ ಭಯಭ್ರಾಂತರಾಗುವರು; ನಿನ್ನ ಸೋಲಿನ ದಿನದಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ಪ್ರಾಣದ ಬಗ್ಗೆ ಕ್ಷಣಕ್ಷಣವೂ ನಡುಗುವನು.”
Narode će mnoge strava uhvatiti, a njihovi će se kraljevi nad tobom užasnuti njima naočigled. I na dan pada tvojega svatko će za svoj život neprestano strepiti.'
11 ೧೧ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಬಾಬೆಲಿನ ಅರಸನ ಖಡ್ಗವು ನಿನ್ನ ಮೇಲೆ ಬೀಳುವುದು.
Jer ovako govori Jahve Gospod: 'Mač kralja babilonskoga na te će se spustiti.
12 ೧೨ ನಾನು ನಿನ್ನ ಪ್ರಜೆಯನ್ನು ಅತಿಭಯಂಕರ ಜನಾಂಗದವರಾದ ಬಲಿಷ್ಠರ ಕತ್ತಿಗಳಿಂದ ಸಂಹರಿಸುವೆನು. ಅವರು ಐಗುಪ್ತದ ಮಹತ್ತನ್ನು ನಾಶ ಮಾಡುವರು. ಅದರ ಜನ ಸಮೂಹವೆಲ್ಲಾ ನಿರ್ನಾಮವಾಗುವುದು.
Tvoje ću mnoštvo pobiti mačevima junaka, najljući od svih naroda opustošit će ponos Egipta i sve mnoštvo njegovo zatrijeti.
13 ೧೩ ನಾನು ಬಹು ಪ್ರವಾಹಗಳ ತೀರದಲ್ಲಿನ ಪಶುಗಳನ್ನೆಲ್ಲಾ ನಾಶಪಡಿಸುವೆನು; ಇನ್ನು ಮೇಲೆ ಯಾವ ಮನುಷ್ಯನ ಕಾಲಾಗಲಿ, ಯಾವ ಪಶುವಿನ ಗೊರಸಾಗಲಿ ನೀರಿನಲ್ಲಿ ಹೆಜ್ಜೆಯಿಡುವುದಿಲ್ಲ.
Svu ću stoku njegovu uništiti pokraj voda obilnih. Ljudska ih noga više neće gaziti niti će ih životinjski papak mutiti.
14 ೧೪ ಆಗ ಆ ನೀರು ತಿಳಿಯಾಗುವಂತೆಯೂ, ಆ ಪ್ರವಾಹಗಳು ಎಣ್ಣೆಯ ಹಾಗೆ ಹರಿಯುವಂತೆಯೂ ಮಾಡುವೆನು” ಇದು ಕರ್ತನಾದ ಯೆಹೋವನ ನುಡಿ.
Onda ću im vode opet stišati i učinit ću da im rijeke kao ulje teku!' - riječ je Jahve Gospoda.
15 ೧೫ “ಐಗುಪ್ತದಲ್ಲಿ ತುಂಬಿದ್ದ ಸೊತ್ತನ್ನೆಲ್ಲಾ ನಾನು ಧ್ವಂಸಗೊಳಿಸಿ, ಆ ದೇಶವನ್ನು ಹಾಳುಮಾಡಿ, ಅಲ್ಲಿನ ಸಕಲ ನಿವಾಸಿಗಳನ್ನು ಸಂಹರಿಸಿದಾಗ ನಾನೇ ಯೆಹೋವನು ಎಂದು ಗೊತ್ತಾಗುವುದು.
'Kad zemlju egipatsku opustošim, kad bude opljačkano što je na njoj, kad udarim sve žitelje njezine, znat će da sam ja Jahve.
16 ೧೬ ಪ್ರಲಾಪಿಸುವವರು ಈ ಶೋಕ ಗೀತವನ್ನೆತ್ತಲಿ; ಜನಾಂಗಗಳ ಯುವತಿಯರು ಹೀಗೆ ಗೋಳಾಡಲಿ; ಐಗುಪ್ತಕ್ಕಾಗಿಯೂ, ಅಲ್ಲಿನ ಬಹು ಪ್ರಜೆಗಳಿಗಾಗಿಯೂ ದುಃಖಿಸಿ ಈ ಗೀತೆಯನ್ನು ಹಾಡಲಿ” ಇದು ಕರ್ತನಾದ ಯೆಹೋವನ ನುಡಿ.
Tužaljka je to koja će se naricati. Naricat će je kćeri naroda. Naricat će je nad Egiptom i nad svim njegovim mnoštvom' - riječ je Jahve Gospoda.”
17 ೧೭ (ಯೆಹೋಯಾಖೀನನು ಸೆರೆಯಾದ) ಹನ್ನೆರಡನೆಯ ವರ್ಷದ, ತಿಂಗಳಿನ ಹದಿನೈದನೆಯ ದಿನದಲ್ಲಿ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
Godine dvanaeste, prvoga mjeseca, petnaestoga dana, dođe mi riječ Jahvina:
18 ೧೮ “ನರಪುತ್ರನೇ, ನೀನು ಐಗುಪ್ತದ ಅಸಂಖ್ಯಾತ ಪ್ರಜೆಗಾಗಿ ಗೋಳಾಡಿ, ಅವರನ್ನೂ ಮತ್ತು ಘನವಾದ ಜನಾಂಗಗಳವರನ್ನೂ ಅಧೋಲೋಕಕ್ಕೆ, ಪ್ರೇತಗಳ ಜೊತೆಗೆ ತಳ್ಳಿಬಿಡು.
“Sine čovječji, nariči za egipatskim mnoštvom, gurni ga, njega i kćeri naroda slavnih, u podzemni kraj, k onima što siđoše u jamu.
19 ೧೯ ಐಗುಪ್ತ್ಯವೇ, ನೀನು ಸೌಂದರ್ಯದಲ್ಲಿ ಯಾರಿಗೆ ಹೋಲುವೆ? ಕೆಳಗೆ ಹೋಗು ಮತ್ತು ಸುನ್ನತಿಹೀನರ ಸಂಗಡ ಮಲಗು.
Od koga si bolji? Siđi i počini s neobrezanima.
20 ೨೦ ಅವರು ಖಡ್ಗದಿಂದ ಹತರಾದವರ ಮಧ್ಯದಲ್ಲಿ ಬೀಳುವರು. ಐಗುಪ್ತವೂ ಮತ್ತು ಅದರ ಸಮೂಹವೂ ಕತ್ತಿಗೆ ಒಪ್ಪಿಸಲ್ಪಟ್ಟಿದೆ.
Oni će pasti među one što ih mač pokosi. Ležaj će dobiti sa svim mnoštvom.
21 ೨೧ ಪಾತಾಳದೊಳಗಿನ ಬಲಿಷ್ಠ ಶೂರರು ಅದನ್ನೂ, ಅದರ ಸಹಾಯಕರನ್ನೂ ನೋಡಿ, ‘ಇವರು ಸುನ್ನತಿಯಿಲ್ಲದವರಾಗಿಯೂ, ಖಡ್ಗದಿಂದ ಹತರಾದವರಾಗಿಯೂ ಇಳಿದು ಬಂದಿದ್ದಾರೆ’ ಅಂದುಕೊಳ್ಳುವರು. (Sheol h7585)
Najhrabriji junaci govorit će mu iz srca Podzemlja: 'Ti i pomoćnici tvoji siđite i počinite s neobrezanima, mačem pokošenima!' (Sheol h7585)
22 ೨೨ ಅಶ್ಶೂರವೂ ಮತ್ತು ಅದರ ಎಲ್ಲಾ ಗುಂಪು ಅಲ್ಲಿರುತ್ತವೆ. ಆ ಜನರ ಗೋರಿಗಳು ಅದನ್ನು ಸುತ್ತಿಕೊಂಡಿವೆ; ಅವರೆಲ್ಲರೂ ಸಂಹೃತರು, ಖಡ್ಗದಿಂದ ಹತರಾದವರು.
Ondje je i Asirac i sva njegova gomila oko groba njegova - svi pobijeni, mačem pokošeni.
23 ೨೩ ಅವರ ಗೋರಿಗಳು ಅಧೋಲೋಕದ ಅಗಾಧ ಸ್ಥಳಗಳಲ್ಲಿ ಹರಡಿಕೊಂಡಿವೆ; ಸಂಹೃತರಾದವರು, ಖಡ್ಗದಿಂದ ಹತರಾದವರು ಗೋರಿಯ ಸುತ್ತಲಿದ್ದಾರೆ; ಜೀವಲೋಕದಲ್ಲಿ ಹತರಾದವರು ಜೀವಿತರ ದೇಶದಲ್ಲಿ ಭಯವನ್ನು ಉಂಟುಮಾಡಿದ್ದಾರೆ.
Grobovi im leže na dnu jame i sva mu je gomila oko grobova njegova - svi, nekoć užas u zemlji živih, sada pobijeni, mačem pokošeni.
24 ೨೪ ಅಲ್ಲಿ ಏಲಾಮು ಮತ್ತು ಅದರ ಸಮೂಹವು ಗೋರಿಯನ್ನು ಸುತ್ತಿಕೊಂಡಿದೆ; ಅವರೆಲ್ಲರೂ ಸಂಹೃತರು, ಖಡ್ಗದಿಂದ ಹತರಾದವರು; ಜೀವಲೋಕದಲ್ಲಿ ಭೀಕರರಾಗಿದ್ದ ಆ ಸುನ್ನತಿಹೀನರು ಅಧೋಲೋಕಕ್ಕೆ ಇಳಿದು ಪ್ರೇತಗಳ ಸಂಗಡ ಸೇರಿ ನಿಂದೆಯನ್ನು ಹೊತ್ತುಕೊಂಡಿದ್ದಾರೆ.
Ondje Elam i sve mnoštvo njegovo oko groba njegova - svi pobijeni, mačem pokošeni, neobrezani u podzemni kraj mrtvih siđoše: nekoć užas u zemlji živih, snose sad sramotu svoju s onima što u jamu siđoše.
25 ೨೫ ಏಲಾಮು ಮಲಗುವುದಕ್ಕೆ ಹತರಾದ ಅದರ ಸಮೂಹಕ್ಕೆ ಸ್ಥಳವನ್ನು ಏರ್ಪಡಿಸಿದ್ದಾರೆ, ಅವರ ಗೋರಿಗಳು ಅದರ ಸುತ್ತುಮುತ್ತಲಿವೆ; ಅವರೆಲ್ಲರೂ ಸುನ್ನತಿಹೀನರು, ಖಡ್ಗದಿಂದ ಹತರಾದವರು; ಅವರು ಜೀವಲೋಕದಲ್ಲಿ ಭೀಕರರಾಗಿದ್ದು, ಪ್ರೇತಗಳ ಜೊತೆಗೆ ಸೇರಿ ನಿಂದೆಯನ್ನು ಹೊತ್ತುಕೊಂಡಿದ್ದಾರೆ. ಸಂಹೃತರ ಮಧ್ಯದಲ್ಲೇ ಏಲಾಮಿಗೆ ಸ್ಥಳವು ಏರ್ಪಾಡಾಗಿದೆ.
Usred pobijenih ležaj smjestiše njemu i mnoštvu oko groba njegova - sve neobrezani, mačem probodeni: nekoć užas u zemlji živih, snose sad sramotu svoju s onima što u jamu siđoše, među pobijene položeni.
26 ೨೬ ಅಲ್ಲಿ ಮೆಷೆಕ್ ತೂಬಲ್ ಮತ್ತು ಅವುಗಳ ಎಲ್ಲಾ ಸಮೂಹವು ಅಲ್ಲಿರುತ್ತವೆ; ಆ ಪ್ರಜೆಗಳ ಗೋರಿಗಳು ಅವುಗಳನ್ನು ಸುತ್ತಿಕೊಂಡಿವೆ; ಅವರೆಲ್ಲರೂ ಸುನ್ನತಿಹೀನರು, ಖಡ್ಗದಿಂದ ಹತರಾದವರು; ಜೀವಲೋಕದಲ್ಲಿ ಭೀಕರರಾಗಿದ್ದಾರೆ.
Ondje je Mešek i Tubal i sve mnoštvo njegovo, s grobovima oko groba njegova - svi neobrezani, mačem probodeni, nekoć užas u zemlji živih.
27 ೨೭ ಸುನ್ನತಿಯಿಲ್ಲದವರಲ್ಲಿ ಶೂರರು ಜೀವಲೋಕದೊಳಗೆ ಬಲಿಷ್ಠರಿಗೂ ಭೀಕರರಾಗಿದ್ದು ಹತರಾಗಿ, ಆಯುಧ ಸಹಿತ ಪಾತಾಳಕ್ಕೆ ಇಳಿದು, ಕತ್ತಿಗಳನ್ನು ತಲೆದಿಂಬು ಮಾಡಿಕೊಂಡು, ತಮ್ಮ ಎಲಬುಗಳ ಮೇಲೆ ತಮ್ಮ ದುಷ್ಕೃತ್ಯಗಳ ಭಾರವನ್ನು ಹೊತ್ತುಕೊಂಡಿದ್ದಾರೋ ಅವರ ನಡುವೆ ಮೆಷೆಕಿನವರೂ ತೂಬಲಿನವರೂ ಒರಗದೆ ಹೋಗುವರೇ? (Sheol h7585)
Ne leže s junacima davno palima, u Podzemlje siđoše s oružjem, s mačem pod glavom i sa štitom na kostima, jer bijahu užas junacima u zemlji živih. (Sheol h7585)
28 ೨೮ ಐಗುಪ್ತ್ಯವೇ, ನೀನು ಸುನ್ನತಿಹೀನರ ಮಧ್ಯದಲ್ಲಿ ನಾಶವಾಗಿ ಖಡ್ಗದಿಂದ ಹತರಾದವರ ನಡುವೆ ಮಲಗುವೆ!
I ti ćeš ležati usred neobrezanih, mačem pokošenih.
29 ೨೯ ಅಲ್ಲಿ ಎದೋಮು, ಅದರ ಅರಸರೂ ಮತ್ತು ಎಲ್ಲಾ ಸರದಾರರೂ ಅಲ್ಲಿದ್ದಾರೆ; ಅವರು ಬಲಾತ್ಕಾರಿಗಳಾಗಿದ್ದು ಖಡ್ಗದಿಂದ ಹತರಾದವರ ಸಂಗಡ ಬಿದ್ದಿರುತ್ತಾರೆ; ಸುನ್ನತಿಹೀನರೊಡನೆ ಪ್ರೇತಗಳ ಸಂಗಡ ಮಲಗಿದ್ದಾರೆ.
Ondje je Edom i svi njegovi kraljevi i knezovi: unatoč svojemu junaštvu, i oni leže zajedno s onima što su mačem pokošeni, s neobrezanima, s onima koji u jamu siđoše.
30 ೩೦ “ಉತ್ತರ ದೇಶದ ಸಕಲ ಪ್ರಭುಗಳೂ ಸಮಸ್ತ ಮತ್ತು ಚೀದೋನ್ಯರೂ ಸಂಹೃತರೊಂದಿಗೆ ಇಳಿದು ಅಲ್ಲಿದ್ದಾರೆ; ಭಯಂಕರವಾಗಿದ್ದ ತಮ್ಮ ಶೌರ್ಯಕ್ಕೆ ನಾಚಿಕೊಂಡು ಖಡ್ಗದಿಂದ ಹತರಾದವರ ಮಧ್ಯೆ ಸುನ್ನತಿಹೀನರಾಗಿ ಬಿದ್ದು, ಪ್ರೇತಗಳ ಸಂಗಡ ಸೇರಿ ನಿಂದೆಯನ್ನು ಹೊತ್ತುಕೊಂಡಿದ್ದಾರೆ.
Ondje su knezovi sjevera i svi Sidonci, i oni siđoše među probodene. Unatoč užasu svojega junaštva, leže neobrezani, s mačem probodenima, snoseći svoju sramotu s onima što u jamu siđoše.
31 ೩೧ ಫರೋಹನು ಇವರೆಲ್ಲರನ್ನೂ ನೋಡಿ ತನ್ನ ಸಮಸ್ತ ಪ್ರಜೆಯ ವಿಷಯದಲ್ಲಿ ಸಮಾಧಾನ ಹೊಂದುವನು; ಹೌದು, ಫರೋಹನೂ ಮತ್ತು ಖಡ್ಗದಿಂದ ಹತರಾದ ಅವನ ಸಕಲ ಸೈನಿಕರೂ ಸಮಾಧಾನ ಹೊಂದುವರು” ಇದು ಕರ್ತನಾದ ಯೆಹೋವನ ನುಡಿ.
Vidjet će ih faraon i utješit će se zbog svog mnoštva - faraon i sva vojska njegova mačem pokošena, riječ je Jahve Gospoda!
32 ೩೨ “ಇಗೋ, ಜೀವಲೋಕದಲ್ಲಿ ನಾನು ನನ್ನ ಭಯವನ್ನು ಹುಟ್ಟಿಸಿದ್ದೇನೆ; ಫರೋಹನೂ ಮತ್ತು ಅವನ ಸಮಸ್ತ ಪ್ರಜೆಯೂ ಸುನ್ನತಿಹೀನರ ಮಧ್ಯೆ, ಖಡ್ಗದಿಂದ ಹತರಾದವರ ನಡುವೆ ಮಲಗುವರು” ಎಂಬುದು ಕರ್ತನಾದ ಯೆಹೋವನ ನುಡಿ.
Jer je zadavao strah u zemlji živih, faraon i sve mnoštvo njegovo leže s neobrezanima, s mačem pokošenima - riječ je Jahve Gospoda.”

< ಯೆಹೆಜ್ಕೇಲನು 32 >