< ಯೆಹೆಜ್ಕೇಲನು 27 >

1 ಯೆಹೋವನು ಇನ್ನೊಂದು ವಾಕ್ಯವನ್ನು ನನಗೆ ದಯಪಾಲಿಸಿದನು,
Anplis, pawòl SENYÈ a te rive kote mwen. Li te di:
2 “ನರಪುತ್ರನೇ, ನೀನು ತೂರಿನ ವಿಷಯದಲ್ಲಿ ಶೋಕ ಗೀತೆಯನ್ನೆತ್ತು, ಅದಕ್ಕೆ ಹೀಗೆ ನುಡಿ,
“Ou menm, fis a lòm, leve yon lamantasyon sou Tyr.
3 ‘ಸಮುದ್ರ ದ್ವಾರದಲ್ಲಿ ವಾಸಿಸುತ್ತಾ, ಜನಾಂಗಗಳಿಗಾಗಿ ಅನೇಕ ದ್ವೀಪಗಳೊಂದಿಗೆ ವ್ಯಾಪಾರ ಮಾಡುವ ನಗರಿಯೇ!’ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ತೂರೇ, ‘ನಾನು ಪರಿಪೂರ್ಣ ಸುಂದರಿಯಾಗಿದ್ದೇನೆ’ ಎಂದು ನೀನು ಅಂದುಕೊಂಡಿದ್ದೀ!
Di a Tyr, ‘Ou ki rete nan antre lanmè a, komèsan a pèp anpil peyi bò kot lanmè yo, Konsa pale Senyè BONDYE a: “O Tyr, ou te di ‘Mwen pafè nan bèlte.’
4 ನಿನ್ನ ನೆಲೆಯು ಸಮುದ್ರದ ಮಧ್ಯವೇ; ನಿನ್ನನ್ನು ಕಟ್ಟಿದವರು ನಿನ್ನ ಸೌಂದರ್ಯವನ್ನು ಪರಿಪೂರ್ಣಗೊಳಿಸಿದರು.
Lizyè ou nan kè lanmè yo. Sila ki te bati ou yo te fè bèlte ou pafè.
5 ಸೆನೀರಿನ ತುರಾಯಿ ಮರದಿಂದ ನಿನ್ನ ಹಲಗೆಗಳನ್ನು ಮಾಡುವುದಕ್ಕೆ ಮತ್ತು ನಿನ್ನ ಸ್ತಂಭವನ್ನು ರಚಿಸುವುದಕ್ಕೆ ಲೆಬನೋನಿನಿಂದ ದೇವದಾರು ಮರವನ್ನು ತಂದರು.
Yo te fè tout planch ou yo ak pye siprè Senir yo. Yo te chache pye sèd Liban yo pou fè ma pou ou.
6 ನಿನ್ನ ಹುಟ್ಟುಗೋಲನ್ನು ಬಾಷಾನಿನ ಓಕ್ ಮರದಿಂದ ಮಾಡಿ, ಕಿತ್ತೀಮ್ ದ್ವೀಪದ ಹಲಿಗೆಯಿಂದ ನಿನ್ನ ಹಡಗಿನ ಮೇಲ್ಮಾಳಿಗೆಯನ್ನು ಕಟ್ಟಿ, ಅದನ್ನು ದಂತದಿಂದ ಕೆತ್ತಿದ್ದಾರೆ.
Ak chèn a Basan, yo te fè zaviwon ou yo. Ak ban ivwa, yo te koupe fè tras sou bwa siprè ki te fèt ak pye sèd ki te mennen sòti jis rive Kittim.
7 ನಿನ್ನ ಹಾಯಿಯು ನಿನಗೆ ಧ್ವಜವಾಗಲೆಂದು ಅದನ್ನು ಐಗುಪ್ತದ ಕಸೂತಿಯ ನಾರು ಬಟ್ಟೆಯಿಂದ ಮಾಡಿದರು. ನಿನ್ನ ಮೇಲ್ಕಟ್ಟನ್ನು ಎಲೀಷ ಕರಾವಳಿಯ ಧೂಮ್ರ ರಕ್ತವರ್ಣಗಳಿಂದ ಚಿತ್ರಿತವಾಗಿದೆ.
Vwal ou te fèt ak len fen ki te sòti an Égypte, ki te sèvi kon mak drapo ou. Anba pwotèj solay byen kolore an ble e mov, ki te sòti nan peyi kòt Élischa yo,
8 ಚೀದೋನಿನ, ಅರ್ವಾದಿನ ನಿವಾಸಿಗಳು ನಿನಗೆ ಹುಟ್ಟು ಹಾಕುವರು; ತೂರೇ, ನಿನ್ನಲ್ಲಿನ ವಿವೇಕಿಗಳು ನಿನ್ನ ನಾವಿಕರು.
mesye Sidon yo ak Arvad t ap bourade zaviwon ou yo. Mesye saj ou yo, O Tyr, te nan ou. Se yo ki te pilòt yo.
9 ನಿನ್ನಲ್ಲಿ ಸೇರಿಕೊಂಡಿದ್ದ ಗೇಬಾಲಿನ ಹಿರಿಯರೂ ಮತ್ತು ಜಾಣರೂ ನಿನ್ನ ಬಿರುಕುಗಳನ್ನು ಮುಚ್ಚಿದ್ದಾರೆ. ಸಮುದ್ರದ ಸಕಲ ನಾವೆಗಳ ಮತ್ತು ನಾವಿಕರ ಸಮೇತ ನಿನ್ನ ಬಳಿಯಲ್ಲಿದ್ದು, ನಿನಗೆ ಸರಕುಗಳನ್ನು ತಂದೊಪ್ಪಿಸಿದ್ದಾರೆ.
Ansyen a Guebal yo ak mesye saj li yo te avèk nou, pou repare kote ki ouvri yo. Tout bato lanmè yo ak mèt bato yo te la pou okipe machandiz ou yo.
10 ೧೦ ಪಾರಸಿಯರೂ, ಲೂದ್ಯರೂ, ಪೂಟ್ಯರೂ ನಿನ್ನ ಸೈನ್ಯಾಧಿಕಾರಿಗಳಾಗಿ ನಿನ್ನ ಸೈನ್ಯದಲ್ಲಿದ್ದರು. ಗುರಾಣಿಯನ್ನು ಮತ್ತು ಶಿರಸ್ತ್ರಾಣವನ್ನು ನಿನ್ನಲ್ಲಿ ತೂಗಿಸಿದರು. ಇವರು ನಿನಗೆ ಮಹತ್ತನ್ನು ಕೊಟ್ಟರು!
“‘“Perse, Lud, ak Puth te nan lame ou, mesye lagè ou yo. Yo te pann boukliye ak kas nan ou. Yo te fè grandè ou parèt byen bèl.
11 ೧೧ ಅರ್ವಾದಿನವರೂ ಮತ್ತು ಹೆಲೆಕರು ನಿನ್ನ ಸೈನಿಕರ ಸಂಗಡ ನಿನ್ನ ಗೋಡೆಗಳ ಸುತ್ತಲೂ ನಿಂತಿದ್ದರು. ಗಮ್ಮಾದ್ಯರು ನಿನ್ನ ಕೊತ್ತಲುಗಳಲ್ಲಿ ಕಾವಲಾಗಿದ್ದರು. ಎಲ್ಲರೂ ತಮ್ಮ ಗುರಾಣಿಗಳನ್ನು ಸುತ್ತಮುತ್ತಲು ನಿನ್ನ ಗೋಡೆಗಳ ಮೇಲೆ ನೇತುಹಾಕಿ, ನಿನ್ನ ಸೌಂದರ್ಯವನ್ನು ಪರಿಪೂರ್ಣಗೊಳಿಸಿದರು!
Fis a Avad yo ak lame ou a te sou miray ou yo, e gèrye yo te pann boukliye yo sou miray ou yo toupatou. Yo te vin pèfeksone bèlte ou a.
12 ೧೨ “ಅಪಾರವಾದ ಬಗೆಬಗೆಯ ಆಸ್ತಿಯು ನಿನಗೆ ಬೇಕಾಗಿದ್ದರಿಂದ ತಾರ್ಷೀಷಿನವರು ನಿನ್ನ ಕಡೆಯ ವರ್ತಕರಾಗಿ ಬೆಳ್ಳಿ, ಕಬ್ಬಿಣ, ತವರ ಮತ್ತು ಸೀಸಗಳನ್ನು ಒದಗಿಸುತ್ತಿದ್ದರು.
“‘“Tarsis te kliyan ou, akoz abondans tout kalite richès ou yo. Avèk ajan, fè, fè blan, ak plon, yo te achte machandiz ou yo.
13 ೧೩ ಯಾವಾನ್, ತೂಬಲ್, ಮೆಷೆಕ್ ಇವರು ನಿನ್ನ ವರ್ತಕರಾಗಿದ್ದರು. ಗುಲಾಮರನ್ನೂ ಮತ್ತು ತಾಮ್ರದ ಪಾತ್ರೆಗಳನ್ನೂ ನಿನಗೆ ಸರಬರಾಜು ಮಾಡುತ್ತಿದ್ದರು.
“‘“Javan, Tubal, ak Méschec te fè komès ak ou. Ak lavi a moun ak veso plen bwonz, yo te achte machandiz ou yo.”
14 ೧೪ “ತೋಗರ್ಮ ವಂಶದವರು ಕುದುರೆಗಳಿಂದಲೂ, ಕುದುರೆ ಸವಾರಿಗಳಿಂದಲೂ, ಹೇಸರಗತ್ತೆಗಳಿಂದಲೂ ನಿನ್ನ ಸಂತೆಗಳಲ್ಲಿ ವ್ಯಾಪಾರ ನಡೆಸಿದರು.
“‘“Sila nan Beth-Togarma yo te bay cheval ak cheval lagè ak milèt pou byen ou yo.”
15 ೧೫ ದೇದಾನಿನವರು ನಿನ್ನ ವರ್ತಕರಾಗಿದ್ದರು; ಅನೇಕ ದ್ವೀಪಗಳು ನಿನ್ನ ಕೈಕೆಳಗೆ ವ್ಯಾಪಾರವನ್ನು ನಡೆಸಿದವು; ಅವರು ದಂತ ಕೊಂಬು ಮತ್ತು, ಕಪ್ಪುಮರಗಳನ್ನೂ ನಿನಗೆ ಕಪ್ಪವಾಗಿ ಸಲ್ಲಿಸುತ್ತಿದ್ದರು.
“‘“Fis a Dedan yo te fè trafik avèk ou. Anpil peyi kot lanmè yo te vin fè mache ou. Kòn ivwa ak ebèn te pote pou fè twòk.
16 ೧೬ “ನಿನ್ನ ಕೈಕೆಲಸದ ವಸ್ತುಗಳು ಅಪಾರವಾಗಿದ್ದುದರಿಂದ ಅರಾಮಿನವರೂ ನಿನ್ನವರಾಗಿ ವ್ಯಾಪಾರಮಾಡಿ, ಕೆಂಪರಲು, ರಕ್ತಾಂಬರ, ಕಸೂತಿಯ ವಸ್ತ್ರ, ನಾರುಬಟ್ಟೆ, ಹವಳ, ಮಾಣಿಕ್ಯ ಮೊದಲಾದ ಸರಕುಗಳನ್ನು ನಿನಗೆ ತಂದು ಸುರಿದರು.
“‘“Syrie te fè trafik avèk ou akoz abondans byen ou yo. Yo te peye pou bagay ou yo ak pyè presye, tenti mov, zèv bwodri, len fen, koray ak pyè woubi.”
17 ೧೭ “ಯೆಹೂದ್ಯರೂ, ಇಸ್ರಾಯೇಲ್ ದೇಶದವರೂ ನಿನ್ನ ಕಡೆಯ ವರ್ತಕರಾಗಿ ಮಿನ್ನೀಥಿನ ಗೋದಿಯಿಂದಲೂ, ಖಂಡಸಕ್ಕರೆ, ಜೇನು, ಎಣ್ಣೆ ಮತ್ತು ಸುಗಂಧತೈಲದಿಂದಲೂ ನಿನ್ನೊಂದಿಗೆ ವ್ಯಾಪಾರ ನಡೆಸಿದರು.
“‘“Juda ak peyi Israël te fè komès ak ou. Ak ble ki sòti Minnith, gato, siwo myèl, lwil ak bom, yo te peye pou machandiz ou.”
18 ೧೮ “ನಿನ್ನ ಕೈಕೆಲಸದ ವಸ್ತುಗಳು ನಿನ್ನಲ್ಲಿ ಅಪಾರವಾಗಿದ್ದುದರಿಂದಲೂ, ಅಪರಿಮಿತವಾದ ಬಗೆಬಗೆಯ ಆಸ್ತಿಯೂ ನಿನಗೆ ಬೇಕಾಗಿದ್ದುದರಿಂದಲೂ ದಮಸ್ಕದವರೂ ನಿನ್ನ ಪರವಾಗಿ ವ್ಯಾಪಾರಮಾಡಿ, ಹೆಲ್ಬೋನಿನ ದ್ರಾಕ್ಷಾರಸವನ್ನೂ ಹಾಗು ಚಾಹರಿನ ಉಣ್ಣೆಯನ್ನೂ ನಿನ್ನಲ್ಲಿ ತುಂಬಿಸುತ್ತಿದ್ದರು.
“‘“Damas te kliyan ou akoz gwo kantite byen ou yo, akoz gwo kantite a tout kalite richès ou yo, akoz diven Helbon an ak len blan an.”
19 ೧೯ “ದಾನಿನವರೂ ಮತ್ತು ಯಾವಾನಿನವರೂ ಊಜಾಲಿನಿಂದ ನಾನಾ ಸರಕುಗಳನ್ನು ತಂದು ನಿನಗೆ ಒಪ್ಪಿಸಿದರು. ಕಬ್ಬಿಣ, ಬಜೆ, ಲವಂಗ, ಚಕ್ಕೆ ಇವುಗಳು ನಿನಗೆ ಆಮದಾಗುತ್ತಿದ್ದವು.
“‘“Vendan ak Javan te peye pou bagay ki sòti Uzal yo. Fè fòje, kasya, ak kann dous te pami machandiz ou yo.”
20 ೨೦ ದೇದಾನಿನವರು ರಥಗಳ ಸವಾರಿಗಳಿಗೆ ತಕ್ಕ ಒಳ್ಳೆಯ ಬಟ್ಟೆಗಳಿಂದ ನಿನ್ನ ಸಂಗಡ ವ್ಯಾಪಾರ ಮಾಡುತ್ತಿದ್ದರು.
“‘“Dedan te fè komès ak ou nan sèl pou monte cheval.”
21 ೨೧ ಅರಬರು ಮತ್ತು ಕೇದಾರಿನ ಪ್ರಧಾನರೂ ನಿನ್ನ ಕೈಕೆಳಗಿನ ವರ್ತಕರಾಗಿದ್ದರು; ಕುರಿಮರಿಗಳಿಂದಲೂ, ಟಗರುಗಳಿಂದಲೂ, ಹೋತಗಳಿಂದಲೂ ನಿನ್ನೊಡನೆ ವ್ಯಾಪಾರ ಮಾಡಿದ್ದರು.
“‘“Arabie ak tout prens a Kédar yo, te kliyan ou pou jenn mouton, belye ak kabrit yo. Nan tout sa yo, yo te kliyan ou.”
22 ೨೨ “ಶೆಬದವರೂ ಮತ್ತು ರಗ್ಮದವರೂ ನಿನ್ನ ಕಡೆಯ ವರ್ತಕರಾಗಿ, ಎಲ್ಲಾ ಶ್ರೇಷ್ಠವಾದ ಸುಗಂಧದ್ರವ್ಯದಿಂದಲೂ, ಅಮೂಲ್ಯವಾದ ರತ್ನಗಳಿಂದಲೂ, ಚಿನ್ನದಿಂದಲೂ ನಿನ್ನೊಡನೆ ವ್ಯಾಪಾರ ಮಾಡಿದರು.
“‘“Vandè a Séba ak Raema yo te fè trafik ak ou. Yo te peye pou byen ou yo ak pi bon nan tout kalite epis, e ak tout bijou presye ak lò.”
23 ೨೩ ಹಾರಾನ್, ಕನ್ನೆ, ಎದೆನ್ ಸ್ಥಳಗಳವರೂ, ಶೆಬ, ಅಶ್ಶೂರ್ ಕಿಲ್ಮದ್ ಪ್ರಾಂತ್ಯಗಳವರೂ ನಿನ್ನ ವರ್ತಕರಾಗಿದ್ದರು.
“‘“Charan, Canné, ak Éden, machann a Séba, Assyrie, ak Kilmad yo te fè komès ak ou.”
24 ೨೪ ಅವರು ನಿನ್ನ ವ್ಯಾಪಾರಿಗಳಾಗಿ, ಉತ್ತಮ ಕಸೂತಿಯ ಧೂಮ್ರ ವರ್ಣದ ನಿಲುವಂಗಿ ಮೊದಲಾದ ಸರಕುಗಳನ್ನೂ, ಹಗ್ಗಗಳಿಂದ ಬಲವಾಗಿ ಬಿಗಿದ ವಿಚಿತ್ರ ವಸ್ತ್ರಗಳ ಪೆಟ್ಟಿಗೆಗಳನ್ನೂ ತಂದರು.
Yo te fè komès ak ou nan bèl abiman, nan vètman an ble ak bwodri fen, nan tapi a tout koulè, ak kòd trese byen sere, ki te pami machandiz ou yo.
25 ೨೫ ತಾರ್ಷೀಷಿನ ಹಡಗಿನ ಪ್ರಯಾಣಿಕರು ನಿನ್ನನ್ನು ನಿನ್ನ ಮಾರುಕಟ್ಟೆಯಲ್ಲಿ ಹೊಗಳುವರು. ನೀನು ಸಮುದ್ರ ಮಧ್ಯದಲ್ಲಿ ಬಹಳ ಘನವುಳ್ಳವಳಾದೆ.
“‘“Bato a Tarsis yo te transpòte machandiz ou yo. Epi ou te vin ranpli, te tèlman vin bèl nan kè lanmè yo.
26 ೨೬ ಹುಟ್ಟುಹಾಕುವವರು ನಿನ್ನನ್ನು ಮಹಾ ತರಂಗಗಳಿಗೆ ಸಿಕ್ಕಿಸಿದ್ದಾರೆ; ಮೂಡಣ ಗಾಳಿಯು ನಿನ್ನನ್ನು ಸಾಗರದ ಮಧ್ಯದಲ್ಲಿ ಒಡೆದುಬಿಟ್ಟಿದೆ.
Mèt zaviwon yo te mennen ou nan gwo dlo. Van lès la te vin kraze ou nan kè lanmè yo.
27 ೨೭ ನಿನ್ನ ಆಸ್ತಿಯು, ನಿನ್ನ ವಸ್ತುಗಳು, ನಿನ್ನ ಸರಕುಗಳು, ನಿನ್ನ ನಾವಿಕರು, ನಿನ್ನ ಅಂಬಿಗರು, ನಿನ್ನ ಒಡಕುಗಳನ್ನು ಭದ್ರಪಡಿಸುವವರು, ನಿನ್ನ ವ್ಯಾಪಾರಿಗಳು, ನಿನ್ನಲ್ಲಿನ ಸಮಸ್ತ ಸೈನಿಕರು, ಅಂತು ನಿನ್ನೊಳಗೆ ಸೇರಿಕೊಂಡಿರುವ ನಿನ್ನ ಸಿಬ್ಬಂದಿಯೆಲ್ಲವೂ ನಿನ್ನ ನಾಶದ ದಿನದಲ್ಲಿ ಸಮುದ್ರದೊಳಗೆ ಮುಳುಗಿ ಹೋಗುವರು.
Richès ou yo, byen ou yo, machandiz ou yo, maren ak pilòt ou yo, Gwo bòs pou ranje bato yo, vandè ki fè komès machandiz, Ak tout mesye lagè ki nan ou yo, ak tout twoup ki pami ou a, va tonbe antre nan kè lanmè yo nan jou boulvèsman ou an.
28 ೨೮ ನಿನ್ನ ನಾವಿಕರ ಕೂಗಾಟಕ್ಕೆ ಸಮೀಪದ ಪ್ರದೇಶಗಳು ನಡುಗುವುವು.
Nan son kri a pilòt ou yo, tè patiraj yo va souke.
29 ೨೯ ಹುಟ್ಟುಹಾಕುವವರೆಲ್ಲರೂ, ಅಂಬಿಗರೂ, ಸಮುದ್ರದ ಸಕಲ ನಾವಿಕರೂ ತಮ್ಮ ತಮ್ಮ ಹಡಗುಗಳಿಂದ ಇಳಿದು ನೆಲದ ಮೇಲೆ ನಿಂತುಕೊಳ್ಳುವರು.
Tout moun ki konn manyen zaviwon, mesye maren ak tout pilòt lanmè yo va desann kite bato yo. Yo va kanpe atè,
30 ೩೦ ನಿನ್ನ ನಿಮಿತ್ತ ದುಃಖದಿಂದ ಅರಚಿ, ತಲೆಗೆ ಧೂಳೆರಚಿಕೊಂಡು, ಬೂದಿಯಲ್ಲಿ ಬಿದ್ದು ಹೊರಳಾಡಿ,
epi yo va fè vwa yo vin tande sou ou, e yo va kriye anmè. Yo va jete pousyè sou tèt yo. Yo va vire tounen nan mitan sann yo.
31 ೩೧ ನಿನಗಾಗಿ ತಲೆ ಬೋಳಿಸಿಕೊಂಡು, ಗೋಣಿತಟ್ಟನ್ನು ಸುತ್ತಿಕೊಂಡು, ಮನೋವ್ಯಥೆಯಿಂದ ಗೋಳಾಡಿ, ನಿನಗೋಸ್ಕರ ಬಿಕ್ಕಿಬಿಕ್ಕಿ ಅಳುವರು.
Anplis, yo va fè tèt yo vin chòv pou ou, e mare senti yo ak twal sak. Yo va kriye pou ou nan amètim nanm yo, ak yon plenyen byen anmè.
32 ೩೨ ಅವರು ರೋದನ ಮಾಡುತ್ತಾ ನಿನ್ನ ವಿಷಯವಾಗಿ ಶೋಕ ಗೀತವನ್ನೆತ್ತಿ ಹೀಗೆ ಪ್ರಲಾಪಿಸುವರು, ‘ಸಮುದ್ರದ ನಡುವೆ ಹಾಳಾಗಿರುವ ತೂರಿಗೆ ಯಾವ ಪಟ್ಟಣ ಸಮಾನವಾಗಿದೆ?’
Anplis, nan gwo kri yo fè, yo va fè leve yon lamantasyon pou ou, e menm kriye pou ou: ‘Se kilès ki tankou Tyr, tankou sila ki rete an silans nan mitan lanmè a?’
33 ೩೩ ನಿನ್ನ ಸರಕುಗಳು ಸಮುದ್ರಗಳನ್ನು ದಾಟಿ ಹರಡಿಕೊಂಡವು, ಅವುಗಳಿಂದ ಅನೇಕ ಜನಾಂಗಗಳನ್ನು ತೃಪ್ತಿಪಡಿಸಿದಿ; ನಿನ್ನ ಅಪಾರವಾದ ಐಶ್ವರ್ಯದಿಂದಲೂ, ವ್ಯಾಪಾರದ ವಸ್ತುಗಳಿಂದಲೂ ಭೂರಾಜರನ್ನು ಸಮೃದ್ಧಿಪಡಿಸಿದಿ.
Lè tout byen ou yo te sòti toupatou sou lanmè yo, ou te fè kè anpil pèp kontan. Ak fòs kantite richès ak machandiz ou yo, ou te fè wa latè yo vin rich.
34 ೩೪ ಈಗಲಾದರೋ ನೀನು ಸಮುದ್ರದಿಂದ ಹಾಳಾದೆ, ನಿನ್ನ ಸರಕುಗಳೂ, ನಿನ್ನಲ್ಲಿ ಸೇರಿಕೊಂಡಿದ್ದ ಸಕಲ ಜನರೂ ಅಗಾಧಜಲದಲ್ಲಿ ಮುಳುಗಿ ಹೋದರು.
Alò, nan moman an, lè ou vin kraze nèt pa lanmè yo, nan fon dlo yo, machandiz ou ak tout twoup ou yo te tonbe pami ou.
35 ೩೫ ಕರಾವಳಿಯ ಸಮಸ್ತ ನಿವಾಸಿಗಳು ನಿನ್ನ ಸ್ಥಿತಿಗೆ ಬೆಚ್ಚಿ ವಿಸ್ಮಯರಾಗಿದ್ದಾರೆ; ಅರಸರು ಭಯಪಟ್ಟಿದ್ದಾರೆ. ಅರಸರು ನಡುಗಿ ಭೀತಿಗೊಂಡಿದ್ದಾರೆ.
Tout sila ki rete nan peyi kot lanmè yo te vin efreye de ou, e wa yo vin plen ak gwo laperèz. Vizaj yo vin twouble.
36 ೩೬ ಜನಾಂಗಗಳ ವರ್ತಕರು ನಿನ್ನನ್ನು ನೋಡಿ, ಸಿಳ್ಳು ಹಾಕುತ್ತಾರೆ; ನೀನು ಸಂಪೂರ್ಣ ಧ್ವಂಸವಾಗಿ ಇನ್ನೆಂದಿಗೂ ಇಲ್ಲದಂತಾಗಿರುವೆ.”
Komèsan pami pèp yo vin sifle anlè kon koulèv sou ou. Lafèn ou te vreman etonnan, e ou p ap la ankò, jis pou tout tan.”’”

< ಯೆಹೆಜ್ಕೇಲನು 27 >