< ಯೆಹೆಜ್ಕೇಲನು 26 >

1 ಹನ್ನೊಂದನೆಯ ವರ್ಷದ, ತಿಂಗಳಿನ ಮೊದಲನೆಯ ದಿನದಲ್ಲಿ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
А једанаесте године први дан месеца дође ми реч Господња говорећи:
2 “ನರಪುತ್ರನೇ, ತೂರು, ಯೆರೂಸಲೇಮಿನ ವಿಷಯವಾಗಿ, ಅಹಾ!, ಜನಾಂಗಗಳಿಗೆ ಅಡ್ಡಿಯಾಗಿದ್ದ ಬಾಗಿಲು ಮುರಿದುಹೋಗಿದೆ! ಅದು ನನ್ನ ಕಡೆಗೆ ತಿರುಗಿಕೊಂಡಿದೆ, ಯೆರೂಸಲೇಮು ಹಾಳಾದ ಕಾರಣ ನಾನು ತುಂಬಿಕೊಳ್ಳುವೆನು ಎಂದು” ಅಂದುಕೊಳ್ಳುವೆನು.
Сине човечји, што Тир говори за Јерусалим: Ха, ха! Разбише се врата народима, обратише се к мени, напунићу се кад опусте;
3 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಇಗೋ, ತೂರ್ ದೇಶವೇ, ನಾನು ನಿನಗೆ ವಿರುದ್ಧವಾಗಿದ್ದೇನೆ; ಸಮುದ್ರವು ತನ್ನ ತೆರೆಗಳನ್ನು ಎಬ್ಬಿಸುವಂತೆ ನಾನು ಅನೇಕ ಜನಾಂಗಗಳನ್ನು ನಿನ್ನ ಮೇಲೆ ಎಬ್ಬಿಸುವೆನು.
Зато овако вели Господ Господ: Ево мене на те, Тире, и довешћу многе народе на те као да бих довео море с валима његовим.
4 ಅವು ತೂರಿನ ಪೌಳಿಗೋಡೆಯನ್ನು ಉರುಳಿಸಿ, ಅದರ ಕೋಟೆ ಕೊತ್ತಲುಗಳನ್ನು ಕೆಡವಿ ಹಾಕುವವು; ನಾನು ಅದರ ಧೂಳನ್ನು ಒರೆಸಿ, ಅದನ್ನು ಬೋಳು ಬಂಡೆಯಂತೆ ಮಾಡುವೆನು.
И они ће обалити зидове тирске и куле у њему раскопати, и омешћу прах његов и претворићу га у го камен.
5 ಅದು ಸಮುದ್ರದ ಮಧ್ಯದಲ್ಲಿ ಬಲೆಗಳನ್ನು ಹಾಕುವ ಸ್ಥಳವಾಗಿರುವುದು. ನಾನೇ ಇದನ್ನು ನುಡಿದಿದ್ದೇನೆ ಎಂದು ಕರ್ತನಾದ ಯೆಹೋವನು ಅನ್ನುತ್ತಾನೆ, ‘ಅದು ಜನಾಂಗಗಳಿಗೆ ಸೂರೆಯಾಗುವುದು.’
И постаће место да се разастиру мреже усред мора, јер ја говорих, вели Господ Господ, и биће грабеж народима.
6 ಬಯಲು ಭೂಮಿಯಲ್ಲಿನ ಅದರ ಕುಮಾರ್ತೆಯರು ಖಡ್ಗದಿಂದ ಹತರಾಗುವರು. ಆಗ ನಾನೇ ಯೆಹೋವನು” ಎಂದು ಎಲ್ಲರಿಗೂ ಗೊತ್ತಾಗುವುದು.
И кћери његове по пољу изгинуће од мача, и познаће да сам ја Господ.
7 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಇಗೋ, ರಾಜಾಧಿರಾಜನೂ, ಬಾಬೆಲಿನ ಅರಸನೂ ಆದ ನೆಬೂಕದ್ನೆಚ್ಚರನನ್ನು ಅಶ್ವಗಳ ಸಂಗಡಲೂ, ರಥಗಳ ಸಂಗಡಲೂ, ರಾಹುತರ ಸಂಗಡಲೂ, ಬಹುಜನರ ಸಂಗಡಲೂ ಕೂಡಿದವನಾಗಿ ನಾನು ಪೂರ್ವದಿಂದ ತೂರಿನ ಮೇಲೆ ಬರಮಾಡುವೆನು.
Јер овако вели Господ Господ: Ево, ја ћу довести на Тир Навуходоносора, цара вавилонског са севера, цара над царевима, с коњима и с колима и с коњицима и с војскама и многим народом.
8 ಅವನು ಬಯಲು ಭೂಮಿಯಲ್ಲಿನ ನಿನ್ನ ಕುಮಾರ್ತೆಯರನ್ನು ಖಡ್ಗದಿಂದ ಹತಿಸಿ, ನಿನಗೆ ವಿರುದ್ಧವಾಗಿ ಒಡ್ಡುಕಟ್ಟಿ, ದಿಬ್ಬವನ್ನು ಹಾಕುವನು.
Кћери твоје по пољу побиће мачем, и начиниће према теби куле, и ископаће опкопе према теби, и подигнуће према теби штитове.
9 ಗುರಾಣಿ ಹಿಡಿದಿರುವವರನ್ನು ಕಳುಹಿಸಿ, ತನ್ನ ಯುದ್ಧ ಯಂತ್ರಗಳಿಂದ ನಿನ್ನ ಪೌಳಿಗೋಡೆಯನ್ನು ಹೊಡೆಯಿಸಿ, ತನ್ನ ಆಯುಧಗಳಿಂದ ನಿನ್ನ ಕೋಟೆ ಕೊತ್ತಲಗಳನ್ನು ಒಡೆದು ಬಿಡುವನು.
И наместиће убојне справе према зидовима твојим, и развалиће куле твоје оружјем својим.
10 ೧೦ ಅವನ ಲೆಕ್ಕವಿಲ್ಲದ ಕುದುರೆಗಳಿಂದ ಏಳುವ ಧೂಳಿನಿಂದ ನಿನ್ನನ್ನು ಮುಸುಕುವನು; ಒಡಕು ಬಿದ್ದ ಕೋಟೆಯೊಳಗೆ ಶತ್ರುವು ನುಗ್ಗುವ ಪ್ರಕಾರ ಅವನು ನಿನ್ನ ಬಾಗಿಲುಗಳೊಳಗೆ ನುಗ್ಗುವಾಗ ರಾಹುತ, ಗಾಡಿ, ರಥ ಇವುಗಳ ಶಬ್ದಕ್ಕೆ ನಿನ್ನ ಗೋಡೆಗಳು ಕದಲುವವು.
Од мноштва коња његових покриће те прах, од праске коњика и точкова и кола затрешће се зидови твоји, кад стане улазити на твоја врата као што се улази у град испроваљиван.
11 ೧೧ ಅವನು ತನ್ನ ಕುದುರೆಗಳ ಗೊರಸುಗಳಿಂದ ನಿನ್ನ ಬೀದಿಗಳನ್ನು ತುಳಿಸಿ, ಖಡ್ಗದಿಂದ ನಿನ್ನ ಜನರನ್ನು ಸಂಹರಿಸಿ, ನಿನ್ನ ಬಲವಾದ ಕಲ್ಲು ಕಂಬಗಳನ್ನು ಕೆಡವಿ ಹಾಕುವನು.
Копитима коња својих изгазиће све улице твоје, побиће народ твој мачем, и ступови силе твоје попадаће на земљу.
12 ೧೨ ಅವನ ಸೈನಿಕರು ನಿನ್ನ ಆಸ್ತಿಯನ್ನು ಸುಲಿದುಕೊಂಡು, ನಿನ್ನ ಸರಕುಗಳನ್ನು ಕೊಳ್ಳೆಹೊಡೆದು, ನಿನ್ನ ಗೋಡೆಗಳನ್ನು ಉರುಳಿಸಿ, ನಿನ್ನ ರಮ್ಯವಾದ ಮನೆಗಳನ್ನು ಕೆಡವಿ, ನಿನ್ನ ಕಲ್ಲುಗಳನ್ನೂ, ಮರಗಳನ್ನೂ, ಮಣ್ಣುಗಳನ್ನೂ ಸಮುದ್ರದಲ್ಲಿ ಹಾಕುವರು.
И поплениће благо твоје и разграбити трг твој, и развалиће зидове твоје и лепе куће твоје разорити, и камење твоје и дрва твоја и прах твој бациће у воду.
13 ೧೩ ನಾನು ನಿನ್ನ ಸಂಗೀತಗಳ ಧ್ವನಿಯನ್ನು ನಿಲ್ಲಿಸಿಬಿಡುವೆನು; ನಿನ್ನ ಕಿನ್ನರಿಗಳ ನುಡಿಯು ಇನ್ನು ಕೇಳಿಸದು.
И прекинућу јеку песама твојих, и глас китара твојих неће се више чути.
14 ೧೪ ನಾನು ನಿನ್ನನ್ನು ಬೋಳು ಬಂಡೆಯನ್ನಾಗಿ ಮಾಡುವೆನು; ನೀನು ಬಲೆಗಳನ್ನು ಹಾಕುವ ಸ್ಥಳವಾಗುವಿ; ನಿನ್ನ ಮೇಲೆ ಇನ್ನು ಕಟ್ಟಡವನ್ನು ಕಟ್ಟುವುದಿಲ್ಲ; ಯೆಹೋವನಾದ ನಾನೇ ಅಪ್ಪಣೆ ಕೊಟ್ಟಿದ್ದೇನೆ” ಇದು ಕರ್ತನಾದ ಯೆಹೋವನ ನುಡಿ.
И учинићу од тебе го камен, бићеш место где се разастиру мреже, нећеш се више сазидати; јер ја Господ говорих, вели Господ Господ.
15 ೧೫ ಕರ್ತನಾದ ಯೆಹೋವನು ತೂರಿಗೆ ಹೀಗೆ ಹೇಳುತ್ತಾನೆ, “ನಿನ್ನ ಪತನದ ಶಬ್ದಕ್ಕೂ, ಗಾಯಪಟ್ಟವರು ಕೂಗುವಾಗಲೂ, ನಿನ್ನ ಮಧ್ಯದಲ್ಲಿ ಕೊಲೆಯಾಗುವಾಗಲೂ ದ್ವೀಪಗಳು ಅದರುವುದಿಲ್ಲವೇ?
Овако вели Господ Господ Тиру: Неће ли се задрмати острва од праске падања твог, кад зајаучу рањеници, кад покољ буде у теби?
16 ೧೬ ಆಗ ಸಮುದ್ರದ ಸುತ್ತುಮುತ್ತಲಿನ ಸಕಲ ಅರಸರು ತಮ್ಮ ಸಿಂಹಾಸನದಿಂದ ಇಳಿದು, ನಿಲುವಂಗಿಗಳನ್ನು ತೆಗೆದುಹಾಕಿ, ವಿಚಿತ್ರವಾಗಿ ಹೊಲೆದ ತಮ್ಮ ಕಸೂತಿಯ ಬಟ್ಟೆಯನ್ನು ಕಿತ್ತುಹಾಕಿ, ತತ್ತರವನ್ನೇ ಹೊದ್ದುಕೊಂಡು, ನೆಲದ ಮೇಲೆ ಕುಳಿತು, ಕ್ಷಣ ಕ್ಷಣಕ್ಕೂ ನಡುಗುತ್ತಾ, ನಿನ್ನ ವಿಷಯವಾಗಿ ಆಶ್ಚರ್ಯಪಡುವರು.
Сви ће кнезови морски сићи с престола својих и скинуће са себе плаште и свући са себе везене хаљине, и обући ће се у страх; седеће на земљи, и дрхтаће сваки час и чудити се теби.
17 ೧೭ ಇವರು ನಿನ್ನ ವಿಷಯದಲ್ಲಿ ಗೋಳಾಟವನ್ನೆತಿ, ನಾವಿಕರ ನಿವಾಸವೇ, ಹೆಸರುವಾಸಿಯ ಪುರಿಯೇ, ಸಮುದ್ರದಿಂದ ಬಲಗೊಂಡ ನಗರಿಯೇ, ನೀನು ಎಷ್ಟೋ ಹಾಳಾದಿ! ಸಮುದ್ರದ ಸಂಚಾರಿಗಳಿಗೆಲ್ಲಾ ಭಯಾಸ್ಪದರಾಗಿದ್ದ ನಿನ್ನ ನಿವಾಸಿಗಳು ಎಷ್ಟೋ ಹಾಳಾದವು!
И нарицаће за тобом и говориће ти: Како пропаде, славни граде! У коме живљаху поморци, који беше јак на мору, ти и становници твоји, који страх задаваху свима који живљаху у теби.
18 ೧೮ ಈ ನಿನ್ನ ಪತನದ ದಿನದಲ್ಲಿ ಕರಾವಳಿಯು ನಡುಗುತ್ತದೆ; ನೀನು ಇಲ್ಲವಾದದ್ದಕ್ಕೆ ಸಮುದ್ರ ದ್ವೀಪಗಳು ಗಾಬರಿಯಾಗುವವು.”
Сад ће се уздрхтати острва кад паднеш, и смешће се острва по мору од пропасти твоје.
19 ೧೯ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನು ನಿನ್ನನ್ನು ಹಾಳು ಊರನ್ನಾಗಿ ಮಾಡಿ, ನಿರ್ಜನ ಪಟ್ಟಣಗಳ ಗತಿಗೆ ತಂದು, ನೀನು ಜಲರಾಶಿಯಲ್ಲಿ ಮುಳುಗಿ ಹೋಗುವಂತೆ ನಿನ್ನ ಮೇಲೆ ಮಹಾಸಾಗರವನ್ನು ಬರಮಾಡುವೆನು.
Јер овако вели Господ Господ: Кад те учиним пустим градом, као што су градови у којима се не живи, кад пустим на те бездану, и велика те вода покрије,
20 ೨೦ “ಪುರಾತನ ಕಾಲದಲ್ಲಿ ಹಾಳಾದ ಪಟ್ಟಣಗಳಂತೆ ನಿನ್ನನ್ನು ಅಧೋಲೋಕಕ್ಕೆ ತಳ್ಳಿ, ಪಾತಾಳಕ್ಕೆ ಇಳಿದ ಪೂರ್ವಕಾಲದವರೊಂದಿಗೆ ವಾಸಿಸುವಂತೆ ಮಾಡುವೆನು; ಹೌದು, ನೀನು ನಿನ್ನ ಮಹಿಮೆಯನ್ನು ಜೀವಲೋಕದಲ್ಲಿ ನೆಲೆಗೊಳಿಸದೆ, ನಿರ್ಜನವಾಗುವಂತೆ ನಿನ್ನನ್ನು ಪಾತಾಳಕ್ಕೆ ಇಳಿದವರ ಸಹವಾಸದಲ್ಲಿ ಸೇರಿಸುವೆನು.
И кад те свалим с онима који силазе у јаму к старом народу, и наместим те на најдоњим крајевима земље, у пустињи старој с онима који силазе у јаму, да се не живи у теби, тада ћу опет поставити славу у земљи живих.
21 ೨೧ ನಿನ್ನನ್ನು ತೀರಾ ಧ್ವಂಸಮಾಡುವೆನು; ನೀನು ಇಲ್ಲವಾಗುವಿ; ಎಷ್ಟು ಹುಡುಕಿದರೂ ನೀನು ಎಂದಿಗೂ ಸಿಕ್ಕುವುದಿಲ್ಲ” ಇದು ಕರ್ತನಾದ ಯೆಹೋವನ ನುಡಿ.
Учинићу да будеш страхота кад те нестане, и тражиће те и нећеш се наћи до века, говори Господ Господ.

< ಯೆಹೆಜ್ಕೇಲನು 26 >