< ಯೆಹೆಜ್ಕೇಲನು 22 >
1 ೧ ಯೆಹೋವನು ಇನ್ನೊಂದು ವಾಕ್ಯವನ್ನು ನನಗೆ ದಯಪಾಲಿಸಿದನು,
And the word of Jehovah came to me, saying:
2 ೨ “ನರಪುತ್ರನೇ, ರಕ್ತಮಯವಾದ ಆ ಪಟ್ಟಣಕ್ಕೆ ನ್ಯಾಯತೀರಿಸಲು ನಿನ್ನ ಮನಸ್ಸು ಸ್ಥಿರವಾಗಿದೆಯೋ? ಅದರ ದುರಾಚಾರಗಳನ್ನೆಲ್ಲಾ ಅದಕ್ಕೆ ಹೀಗೆ ತಿಳಿಸು,
Punish, punish, son of man, the city of blood, and show her all her abominations, and say,
3 ೩ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ನಿನ್ನ ಮಧ್ಯದಲ್ಲಿ ರಕ್ತವನ್ನು ಸುರಿಸಿ, ದಂಡನೆಯ ಕಾಲವನ್ನು ಹತ್ತಿರಕ್ಕೆ ತಂದುಕೊಂಡ ನಗರಿಯೇ! ನಿನ್ನ ಕೇಡಿಗಾಗಿ ವಿಗ್ರಹಗಳನ್ನು ಮಾಡಿಕೊಂಡು ನಿನ್ನನ್ನು ಹೊಲೆಗೆಡಿಸಿಕೊಂಡ ನಗರಿಯೇ!
Thus saith the Lord Jehovah: O city that sheddest blood in the midst of thee, that thy time may come, and makest idols to defile thyself!
4 ೪ ನೀನು ಸುರಿಸಿದ ರಕ್ತದಿಂದ ಅಪರಾಧಿಯಾಗಿರುವೆ; ಮಾಡಿಕೊಂಡ ವಿಗ್ರಹಗಳಿಂದ ಅಶುದ್ಧವಾಗಿ, ಶಿಕ್ಷೆಯ ಸಮಯವನ್ನು ಹತ್ತಿರಕ್ಕೆ ತಂದುಕೊಂಡು ದಂಡನೆಯ ಕಾಲಕ್ಕೆ ಬಂದಿರುವೆ. ಆದಕಾರಣ ನಿನ್ನನ್ನು ಜನಾಂಗಗಳ ದೂಷಣೆಗೂ, ಸಕಲ ದೇಶಗಳ ಹಾಸ್ಯಕ್ಕೂ ಗುರಿಮಾಡಿದ್ದೇನೆ.
Through the blood which thou sheddest thou bringest guilt upon thyself, and through the idols which thou makest thou pollutest thyself, and thou causest thy days to draw near, and comest to thy years. Therefore do I make thee a reproach to the nations, and a derision to all countries.
5 ೫ ಅಶುದ್ಧವಾದ ನಗರವೇ, ಗದ್ದಲಕ್ಕೆ ಪ್ರಸಿದ್ಧವಾದ ನಗರಿಯೇ, ಹತ್ತಿರದವರೂ, ದೂರದವರೂ ನಿನ್ನನ್ನು ಹಾಸ್ಯಮಾಡುವರು.
Those that are near, and those that are far from thee, shall mock thee as infamous, full of confusion.
6 ೬ “‘ಇಗೋ, ಇಸ್ರಾಯೇಲಿನ ಪ್ರಭುಗಳು ತಮ್ಮ ತಮ್ಮ ಶಕ್ತ್ಯಾನುಸಾರ ನಿನ್ನಲ್ಲಿ ರಕ್ತ ಸುರಿಸುತ್ತಲೇ ಇದ್ದಾರೆ.
Behold the princes of Israel are engaged every one according to his strength within thee to shed blood.
7 ೭ ನಿನ್ನವರು ತಾಯಿ ತಂದೆಗಳನ್ನು ತುಚ್ಛೀಕರಿಸಿದ್ದಾರೆ, ನಿನ್ನವರು ವಿದೇಶಿಗಳನ್ನು ಬಾಧಿಸಿದ್ದಾರೆ, ನಿನ್ನವರು ಅನಾಥರನ್ನೂ, ವಿಧವೆಯರನ್ನೂ ಹಿಂಸಿಸಿದ್ದಾರೆ.
In thee they set light by father and mother; in thee are they guilty of oppression to the stranger; in thee do they oppress the fatherless and the widow.
8 ೮ ನೀನು ನನ್ನ ಪವಿತ್ರ ವಸ್ತುಗಳನ್ನು ಅಲಕ್ಷ್ಯಮಾಡಿ ನಾನು ನೇಮಿಸಿದ ಸಬ್ಬತ್ ದಿನಗಳನ್ನು ಹೊಲೆಮಾಡಿದ್ದಿ.
Thou hast despised my holy things, and profaned my sabbaths.
9 ೯ ನಿನ್ನಲ್ಲಿ ಚಾಡಿಕೋರರು ರಕ್ತ ಹರಿಸಿದ್ದಾರೆ; ನಿನ್ನವರು ಗುಡ್ಡಗಳ ಮೇಲೆ ಯಜ್ಞಶೇಷವನ್ನು ತಿಂದಿದ್ದಾರೆ; ನಿನ್ನ ಮಧ್ಯದಲ್ಲಿ ದುರಾಚಾರಗಳನ್ನು ನಡೆಸಿದ್ದಾರೆ.
In thee are men who carry tales, that they may shed blood; in thee do they eat upon the mountains; in the midst of thee do they commit lewdness.
10 ೧೦ ನಿನ್ನವರು ತಂದೆಗೆ ಮಾನಭಂಗ ಮಾಡಿದ್ದಾರೆ; ನಿನ್ನಲ್ಲಿ ಮುಟ್ಟಿನಿಂದ ಅಶುದ್ಧಳಾದವಳನ್ನು ಕೂಡಿದ್ದಾರೆ.
In thee doth the son uncover the father's nakedness; in thee do they lie with a woman in her uncleanness.
11 ೧೧ ನಿನ್ನಲ್ಲಿ ಒಬ್ಬನು ನೆರೆಯವನ ಹೆಂಡತಿಯಲ್ಲಿ ದುರಾಚಾರ ನಡಿಸಿದ್ದಾನೆ; ಇನ್ನೊಬ್ಬನು ಅತ್ಯಾಚಾರ ಮಾಡಿ ಸೊಸೆಯನ್ನು ಕೆಡಿಸಿದ್ದಾನೆ; ಮತ್ತೊಬ್ಬನು ತನ್ನ ತಂದೆಯ ಮಗಳೇ ಆದ ತಂಗಿಯ ಮಾನಭಂಗಪಡಿಸಿದ್ದಾನೆ.
And one committeth abomination with his neighbor's wife; and another, with incestuous lewdness, defileth his daughter-in-law; and in thee another lieth with his sister, his father's daughter.
12 ೧೨ ನಿನ್ನವರು ರಕ್ತ ಸುರಿಸುವುದಕ್ಕೆ ಲಂಚ ತೆಗೆದುಕೊಂಡಿದ್ದಾರೆ; ನಿನ್ನವರು ಸಾಲಕ್ಕೆ ಬಡ್ಡಿ ತೆಗೆದುಕೊಂಡು ಲಾಭಕ್ಕೆ ಹಣಕೊಟ್ಟು ತಮ್ಮ ನೆರೆಯವರನ್ನು ಬಾಧಿಸಿ, ದೋಚಿಕೊಂಡು ನನ್ನನ್ನು ಮರೆತೇ ಬಿಟ್ಟಿದ್ದಾರೆ ಇದು ಕರ್ತನಾದ ಯೆಹೋವನ ನುಡಿ.
In thee do they take a reward to shed blood. Thou takest usury and increase, and thou hast enriched thyself from thy neighbor by extortion, and hast forgotten me, saith the Lord Jehovah.
13 ೧೩ “‘ಇಗೋ, ನೀನು ದೋಚಿಕೊಂಡ ಲಾಭವನ್ನೂ, ನಿನ್ನಲ್ಲಿ ಸುರಿದ ರಕ್ತವನ್ನೂ ನಾನು ನೋಡಿ ಕೈ ಎತ್ತಿದ್ದೇನೆ.
Therefore, behold, I have smitten my hands together at thy dishonest gain which thou hast made, and at the blood which hath been shed in the midst of thee.
14 ೧೪ ನಾನು ನಿನ್ನನ್ನು ದಂಡಿಸುವ ಕಾಲದಲ್ಲಿ ಮನಸ್ಸನ್ನು ಗಟ್ಟಿ ಮಾಡಿಕೊಂಡಿರುವೆಯೋ? ಕೈಗಳನ್ನು ಬಲಪಡಿಸಿಕೊಂಡಿರುವೆಯೋ? ಯೆಹೋವನಾದ ನಾನೇ ಇದನ್ನು ನುಡಿದಿದ್ದೇನೆ, ಅದರಂತೆ ನಡೆಸುತ್ತೇನೆ.
Can thy heart endure, or can thy hands be strong, in the day when I shall deal with thee? I, Jehovah, have spoken it, and will do it.
15 ೧೫ ನಾನು ನಿನ್ನನ್ನು ಜನಾಂಗಗಳಲ್ಲಿ ಚದುರಿಸಿ, ದೇಶ ದೇಶಗಳಿಗೆ ಹರಡಿಸಿಬಿಟ್ಟು, ನಿನ್ನ ಹೊಲಸನ್ನು ನಿನ್ನೊಳಗಿಂದ ತೆಗೆದು ನಾಶಮಾಡುವೆನು.
I will scatter thee among the nations, and disperse thee in the countries, and will consume thine impurity out of thee;
16 ೧೬ ಜನಾಂಗಗಳ ಕಣ್ಣೆದುರಿಗೆ ನಿನ್ನಷ್ಟಕ್ಕೆ ನೀನೇ ಅಪಕೀರ್ತಿಗೆ ಗುರಿಯಾಗುವಿ; ನಾನೇ ಯೆಹೋವನು ಎಂದು ನಿನಗೆ ಗೊತ್ತಾಗುವುದು.’”
and thou shalt through thyself be profaned before the eyes of the nations, and thou shalt know that I am Jehovah.
17 ೧೭ ಆ ಮೇಲೆ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
And the word of Jehovah came to me, saying:
18 ೧೮ “ನರಪುತ್ರನೇ, ಇಸ್ರಾಯೇಲ್ ವಂಶವೆಂಬ ಲೋಹವು ನನ್ನ ದೃಷ್ಟಿಯಲ್ಲಿ ಕಲ್ಮಷವಾಗಿದೆ; ಕುಲುಮೆಯಲ್ಲಿನ ತಾಮ್ರ, ತವರ, ಕಬ್ಬಿಣ, ಸೀಸ ಮತ್ತು ಕಂದು ಬೆಳ್ಳಿಯ ಹಾಗೆ ಇದ್ದಾರೆ.
Son of man, the house of Israel is become dross to me; all of them are brass, and tin, and iron, and lead, in the midst of the furnace; they are the dross of silver.
19 ೧೯ ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ನೀವೆಲ್ಲರು ಕಲ್ಮಷವಾಗಿರುವುದರಿಂದ ಇಗೋ, ನಿಮ್ಮನ್ನು ಯೆರೂಸಲೇಮಿನೊಳಕ್ಕೆ ಸೇರಿಸುವೆನು.
Therefore thus saith the Lord Jehovah: Because ye are all of you become dross, therefore, behold, I will gather you into the midst of Jerusalem.
20 ೨೦ ಬೆಳ್ಳಿ, ತಾಮ್ರ, ಕಬ್ಬಿಣ, ಸೀಸ, ತವರ ಇವುಗಳನ್ನು ಕುಲುಮೆಯೊಳಗೆ ಹಾಕಿ, ಊದಿ, ಉರಿಹತ್ತಿಸಿ, ಕರಗಿಸುವಂತೆ ನಾನು ನಿಮ್ಮನ್ನು ನನ್ನ ಉಗ್ರಕೋಪದಲ್ಲಿ ಇಟ್ಟು ಕರಗಿಸುವೆನು.
As men gather silver, and brass, and iron, and lead, and tin, into the midst of the furnace, to blow the fire upon it, to melt it, so will I gather you in my anger and in my fury, and I will place you there and melt you.
21 ೨೧ ಹೌದು, ನಾನು ನಿಮ್ಮನ್ನು ನನ್ನ ರೋಷಾಗ್ನಿಯಲ್ಲಿ ಹಾಕಿ, ಊದಲು ನೀವು ಅದರೊಳಗೆ ಕರಗಿ ಹೋಗುವಿರಿ.
Yea, I will gather you, and blow upon you with the fire of my wrath, and ye shall be melted in the midst thereof.
22 ೨೨ ಬೆಳ್ಳಿಯು ಕುಲುಮೆಯೊಳಗೆ ಕರಗುವಂತೆ ನೀವು ನನ್ನ ರೋಷಾಗ್ನಿಯಲ್ಲಿ ಕರಗುವಿರಿ; ನಿಮ್ಮ ಮೇಲೆ ರೋಷಾಗ್ನಿಯನ್ನು ಸುರಿಸಿದಾತನು ಯೆಹೋವನಾದ ನಾನೇ ಎಂದು ನಿಮಗೆ ಗೊತ್ತಾಗುವುದು.’”
As silver is melted in the midst of the furnace, so shall ye be melted in the midst thereof; and ye shall know that I, Jehovah, have poured out my fury upon you.
23 ೨೩ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
And the word of Jehovah came to me, saying:
24 ೨೪ “ನರಪುತ್ರನೇ, ಆ ನಾಡಿಗೆ ಹೀಗೆ ಹೇಳು, ‘ದೇವರ ಕೋಪದ ಈ ದಿನದಲ್ಲಿ ನೀನು ಶುದ್ಧಿಯಾಗದ ದೇಶ, ಮಳೆಯಿಲ್ಲದ ದೇಶ.’
Son of man, say to her, Thou art a land that is not cleansed, nor rained upon in the day of indignation.
25 ೨೫ ಆ ನಾಡಿನೊಳಗೆ ಪ್ರವಾದಿಗಳು ಒಳಸಂಚು ಮಾಡಿಕೊಂಡಿದ್ದಾರೆ, ಬೇಟೆಯನ್ನು ಸೀಳುತ್ತಾ ಗರ್ಜಿಸುವ ಸಿಂಹದಂತಿದ್ದಾರೆ, ನರಪ್ರಾಣಿಗಳನ್ನು ನುಂಗಿದ್ದಾರೆ. ಆಸ್ತಿಯನ್ನೂ, ಅಮೂಲ್ಯ ವಸ್ತುಗಳನ್ನೂ ದೋಚಿಕೊಂಡಿದ್ದಾರೆ; ದೇಶದಲ್ಲಿ ಬಹಳ ಮಂದಿಯನ್ನು ವಿಧವೆಯರನ್ನಾಗಿ ಮಾಡಿದ್ದಾರೆ.
There is a conspiracy of her prophets in the midst of her; like a roaring lion tearing the prey, they devour the lives of men; they take possession of treasures, and precious things, and make many widows in the midst of her.
26 ೨೬ ಅಲ್ಲಿನ ಯಾಜಕರು ನನ್ನ ವಿಧಿಗಳನ್ನು ಭಂಗಮಾಡಿದ್ದಾರೆ, ನನ್ನ ಪರಿಶುದ್ಧ ವಸ್ತುಗಳನ್ನು ಅಪವಿತ್ರ ಮಾಡಿದ್ದಾರೆ; ಮೀಸಲಾದದ್ದಕ್ಕೂ, ಮೀಸಲಿಲ್ಲದ್ದಕ್ಕೂ ಭೇದವೆಣಿಸಲಿಲ್ಲ, ಶುದ್ಧವಾದ ವಿವೇಚನೆಯನ್ನು ಬೋಧಿಸಲಿಲ್ಲ; ನಾನು ನೇಮಿಸಿದ ಸಬ್ಬತ್ ದಿನಗಳನ್ನು ಕಡೆಗಣಿಸಿದ್ದಾರೆ. ಇದರಿಂದ ನಾನು ಅವರ ಮಧ್ಯದಲ್ಲಿ ಅಪಕೀರ್ತಿಗೆ ಗುರಿಯಾಗಿದ್ದೇನೆ.
Her priests violate my law, and profane my holy things. They make no distinction between the holy and profane, and show not the difference between the clean and the unclean; and they hide their eyes from my sabbaths, and I am profaned among them.
27 ೨೭ ಅಲ್ಲಿನ ಪ್ರಧಾನರು ಸುಲಿಗೆಗಾಗಿ ರಕ್ತ ಸುರಿಸಿ, ನರಪ್ರಾಣಿಗಳನ್ನು ನುಂಗುವವರಾಗಿ ಬೇಟೆಯನ್ನು ಸೀಳುವ ತೋಳಗಳಂತಿದ್ದಾರೆ.
Her princes in the midst of her are like wolves tearing the prey. They shed blood, they destroy life, that they may get gain.
28 ೨೮ ಅಲ್ಲಿನ ಸುಳ್ಳು ಪ್ರವಾದಿಗಳು ಇವರಿಗಾಗಿ ವ್ಯರ್ಥ ದರ್ಶನವನ್ನೂ, ಸುಳ್ಳು ಕಣಿಯನ್ನೂ ಕಂಡು ಯೆಹೋವನು ಅವರೊಂದಿಗೆ ಮಾತನಾಡದಿದ್ದರೂ, ‘ಕರ್ತನಾದ ಯೆಹೋವನು ಇಂತೆನ್ನುತ್ತಾನೆ’ ಎಂದು ನುಡಿಯುತ್ತಾ ಮೇಲೆ ಸುಣ್ಣ ಹಚ್ಚುತ್ತಾರೆ.
Her prophets daub for them with untempered mortar, seeing falsehood, and divining to them, saying, “Thus saith the Lord Jehovah,” when Jehovah hath not spoken.
29 ೨೯ ಸಾಮಾನ್ಯ ಜನರನ್ನು ಹಿಂಸಿಸಿ ಸೂರೆಮಾಡಿದ್ದಾರೆ, ದೀನದರಿದ್ರರನ್ನು ಬಾಧಿಸಿ, ವಿದೇಶಿಗಳನ್ನು ಅನ್ಯಾಯಕ್ಕೆ ಒಳಪಡಿಸಿದ್ದಾರೆ.
The people of the land are guilty of oppression, and practise robbery, and distress the poor and needy; yea, they oppress the stranger, and have no justice.
30 ೩೦ “‘ನಾನು ದೇಶವನ್ನು ಹಾಳು ಮಾಡದಂತೆ ನನ್ನೆದುರಿಗೆ ದೇಶ ರಕ್ಷಣೆಗಾಗಿ ಪೌಳಿ ಗೋಡೆಯ ಬಿರುಕಿನಲ್ಲಿ ನಿಲ್ಲುವುದಕ್ಕೂ, ಗೋಡೆಯನ್ನು ಗಟ್ಟಿಮಾಡುವುದಕ್ಕೂ ತಕ್ಕವನನ್ನು ನಾನು ಹುಡುಕಲು ಯಾರೂ ಸಿಕ್ಕಲಿಲ್ಲ.
I have sought for a man among them that should make a wall, and stand in the gap before me for the land, that I might not destroy it; but I found none.
31 ೩೧ ಆದಕಾರಣ ನಾನು ನನ್ನ ಕೋಪವನ್ನು ಅವರ ಮೇಲೆ ಸುರಿಸಿ, ನನ್ನ ರೋಷಾಗ್ನಿಯಿಂದ ಅವರನ್ನು ಧ್ವಂಸ ಮಾಡಿ ಅವರ ದುರ್ನಡತೆಯನ್ನು ಅವರ ತಲೆಗೇ ಕಟ್ಟಿದ್ದೇನೆ.’ ಇದು ಕರ್ತನಾದ ಯೆಹೋವನ ನುಡಿ.”
Therefore will I pour out my indignation upon them; I will consume them with the fire of my wrath; I will bring their way upon their heads, saith the Lord Jehovah.