< ಯೆಹೆಜ್ಕೇಲನು 11 >
1 ೧ ಆ ಮೇಲೆ ದೇವರಾತ್ಮವು ನನ್ನನ್ನು ಎತ್ತಿ ಪೂರ್ವದಿಕ್ಕಿಗೆ ಅಭಿಮುಖವಾಗಿರುವ ಯೆಹೋವನ ಆಲಯದ ಮೂಡಣ ಬಾಗಿಲಿಗೆ ತಂದುಬಿಟ್ಟಿತು; ಇಗೋ, ಬಾಗಿಲ ಮುಂದೆ ಇಪ್ಪತ್ತೈದು ಜನರು ನಿಂತಿದ್ದರು; ಅವರ ಮಧ್ಯದಲ್ಲಿ ಅಜ್ಜೂರನ ಮಗನಾದ ಯಾಜನ್ಯ, ಬೆನಾಯನ ಮಗನಾದ ಪೆಲತ್ಯ ಎಂಬ ಜನನಾಯಕರನ್ನು ನಾನು ನೋಡಿದೆ.
၁ဘုရားသခင်၏ဝိညာဉ်တော်သည်ငါ့အား ချီပင့်၍ ဗိမာန်တော်အရှေ့တံခါးသို့ခေါ် ဆောင်သွားတော်မူ၏။ တံခါးအနီး၌နိုင်ငံ့ ခေါင်းဆောင်များဖြစ်ကြသော အဇုရ၏သား ယာဇညာနှင့်ဗေနာယ၏သားပေလတိ အပါအဝင်လူပေါင်းနှစ်ဆယ့်ငါးယောက် ကိုငါမြင်ရ၏။
2 ೨ ಅಲ್ಲಿ ದೇವರು ನನಗೆ, “ನರಪುತ್ರನೇ, ಪಟ್ಟಣದಲ್ಲಿ ಕುತಂತ್ರಗಳನ್ನು ಕಲ್ಪಿಸಿ ದುರಾಲೋಚನೆಯನ್ನು ಹೇಳಿಕೊಡುವವರು ಈ ಜನರೇ.
၂ဘုရားသခင်ကငါ့အား``အချင်းလူသား၊ ဤမြို့၌မကောင်းသောအကြံကိုပေးကြ သူလူယုတ်မာများကားဤသူတို့ပင် ဖြစ်၏။-
3 ೩ ಇವರು, ‘ಮನೆಗಳನ್ನು ಕಟ್ಟಿಕೊಳ್ಳುವ ಕಾಲವು ಬಂದಿಲ್ಲ; ಈ ಪಟ್ಟಣವು ಒಂದು ಹಂಡೆ, ನಾವು ಅದರಲ್ಲಿನ ಮಾಂಸ’ ಎಂದು ಹೇಳುತ್ತಾರೆ.
၃သူတို့က`ငါတို့သည်အိမ်များကိုမကြာမီ တစ်ဖန်ဆောက်လုပ်ကြမည်။ ဤမြို့သည်အိုး ကင်းနှင့်တူ၍ ငါတို့ကားအိုးကင်းထဲမှ အမဲသားနှင့်တူကြ၏' ဟုဆိုကြ၏။-
4 ೪ ಆದಕಾರಣ, ನರಪುತ್ರನೇ, ನೀನು ಇವರ ವಿಷಯವಾಗಿ ಅಹಿತವನ್ನು ನುಡಿ, ತಪ್ಪದೆ ನುಡಿ” ಎಂದು ಆಜ್ಞಾಪಿಸಿದನು.
၄သို့ဖြစ်၍အချင်းလူသားသူတို့အားရှုတ် ချ၍ပရောဖက်ပြုကြလော့'' ဟုမိန့်တော် မူ၏။
5 ೫ ಆಗ ಯೆಹೋವನ ಆತ್ಮವು ನನ್ನಲ್ಲಿ ಆವೇಶ ಉಂಟುಮಾಡಿ, ಹೀಗೆ ಸಾರಬೇಕೆಂದು ಅಪ್ಪಣೆಯಾಯಿತು. ಯೆಹೋವನು ಇಂತೆನ್ನುತ್ತಾನೆ, “ಇಸ್ರಾಯೇಲ್ ವಂಶದವರೇ, ನೀವು ಹೀಗೆ ಮಾತನಾಡುತ್ತಿದ್ದೀರಿ, ಸರಿ; ನಿಮ್ಮ ಮನಸ್ಸಿನಲ್ಲಿ ಹುಟ್ಟಿರುವ ಆಲೋಚನೆಗಳು ನನಗೆ ಗೊತ್ತೇ ಇವೆ.
၅ဘုရားသခင်၏ဝိညာဉ်တော်သည်ငါ၏ အပေါ်သို့သက်ရောက်တော်မူ၏။ ထာဝရ ဘုရားက``အို ဣသရေလအမျိုးသားတို့၊ သင်တို့ပြောဆိုနေကြသောစကားများ နှင့်သင်တို့၏အကြံအစည်များကိုငါ သိ၏။-
6 ೬ ನೀವು ಈ ಪಟ್ಟಣದಲ್ಲಿ ನರಹತ್ಯವನ್ನು ಹೆಚ್ಚೆಚ್ಚಾಗಿ ಮಾಡಿ, ಹತರಾದವರಿಂದ ಬೀದಿಗಳನ್ನು ತುಂಬಿಸಿದ್ದೀರಿ.
၆သင်တို့သတ်ဖြတ်သောသူတို့သည်လွန်စွာ များပြားလှသဖြင့် လမ်းများသည်လူသေ ကောင်တို့ဖြင့်ပြည့်နှက်နေလေပြီ။
7 ೭ “ಆದಕಾರಣ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ನಿಮ್ಮ ದೋಷದಿಂದ ಹತರಾಗಿ ಪಟ್ಟಣದಲ್ಲಿ ಬಿದ್ದಿರುವ ನಿಮ್ಮವರ ಶವಗಳೇ ಹಂಡೆಯಲ್ಲಿನ ಮಾಂಸ, ಈ ಪಟ್ಟಣವೇ ಹಂಡೆ, ನಿಮ್ಮನ್ನಾದರೋ ನಾನು ಪಟ್ಟಣದೊಳಗಿಂದ ಕಿತ್ತುಹಾಕುವೆನು.
၇သို့ဖြစ်၍ငါအရှင်ထာဝရဘုရားမိန့်တော် မူသည်ကား``ဤမြို့သည်အမှန်ပင်အိုးကင်း နှင့်တူလိမ့်မည်။ သို့ရာတွင်အမဲသားက အဘယ်အရာဖြစ်သနည်း။ သင်တို့လက် ဖြင့်သေရသည့်အလောင်းများပင်ဖြစ်ပါ သည်တကား။ သို့ရာတွင်ငါသည်သင်တို့ အားမြို့ပြင်သို့ပစ်ထုတ်လိုက်မည်။-
8 ೮ ಖಡ್ಗಕ್ಕೆ ಹೆದರಿದ ನಿಮ್ಮನ್ನೇ ಖಡ್ಗಕ್ಕೆ ಗುರಿಮಾಡುವೆನು’” ಇದು ಕರ್ತನಾದ ಯೆಹೋವನ ನುಡಿ.
၈သင်တို့သည်ဋ္ဌားကိုကြောက်ကြသလော။ သင် တို့အားဋ္ဌားဖြင့်ခုတ်ဖြတ်မည့်သူတို့ကိုငါ ခေါ်ဆောင်ခဲ့မည်ဟုအရှင်ထာဝရဘုရား မိန့်ဆို၏။-
9 ೯ “ನಾನು ಪಟ್ಟಣದೊಳಗಿಂದ ನಿಮ್ಮನ್ನು ಕಿತ್ತು ಅನ್ಯರ ಕೈಗೆ ಕೊಟ್ಟು ದಂಡಿಸುವೆನು.
၉သင်တို့အားမြို့ပြင်သို့ထုတ်၍တစ်ကျွန်း တစ်နိုင်ငံသားတို့၏လက်သို့ပေးအပ်မည်။ ငါသည်သင်တို့အားပြစ်ဒဏ်စီရင်ပြီ။-
10 ೧೦ ನೀವು ಖಡ್ಗಕ್ಕೆ ತುತ್ತಾಗುವಿರಿ. ಇಸ್ರಾಯೇಲಿನ ಮೇರೆಯಲ್ಲಿ ನಿಮಗೆ ದಂಡನೆಯನ್ನು ವಿಧಿಸುವೆನು, ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವುದು.
၁၀သင်တို့သည်မိမိတို့ပြည်နယ်စပ်၌သင်တို့ ကိုတရားစီရင်သဖြင့် စစ်ပွဲတွင်ကျဆုံးရ ကြလိမ့်မည်။ ထိုအခါငါသည်ထာဝရ ဘုရားဖြစ်ကြောင်းကို လူတိုင်းသိရှိကြ လိမ့်မည်။-
11 ೧೧ ಈ ಪಟ್ಟಣವು ನಿಮಗೆ ಹಂಡೆಯಾಗುವುದಿಲ್ಲ; ನೀವು ಅದರಲ್ಲಿನ ಮಾಂಸವಾಗುವುದಿಲ್ಲ. ಇಸ್ರಾಯೇಲಿನ ಮೇರೆಯಲ್ಲಿ ನಿಮಗೆ ದಂಡನೆಯನ್ನು ವಿಧಿಸುವೆನು.
၁၁အိုးကင်းသည်အမဲသားကိုကာကွယ်သကဲ့ သို့ ဤမြို့သည်သင်တို့အားအကာအကွယ် ပေးလိမ့်မည်မဟုတ်။ သင်တို့သည်ဣသရေလ ပြည်နယ်စပ်တွင် ငါသည်သင်တို့ကိုအပြစ် ဒဏ်ခတ်မည်။-
12 ೧೨ “‘ನಾನೇ ಯೆಹೋವನು’ ಎಂದು ನಿಮಗೆ ಗೊತ್ತಾಗುವುದು; ನೀವು ನನ್ನ ವಿಧಿಗಳನ್ನು ಕೈಕೊಳ್ಳದೆ, ನನ್ನ ನಿಯಮಗಳನ್ನು ಅನುಸರಿಸದೆ, ನಿಮ್ಮ ಸುತ್ತಲಿನ ಜನಾಂಗಗಳ ಆಚಾರಗಳನ್ನೇ ಅನುಸರಿಸಿದ್ದರಿಂದ ಇದೆಲ್ಲಾ ಆಗುವುದು.”
၁၂ငါသည်ထာဝရဘုရားဖြစ်ကြောင်းကိုလည်း ကောင်း၊ အိမ်နီးချင်းတိုင်းပြည်များ၏တရား ဥပဒေကိုလိုက်နာ၍ငါ၏ပညတ်များ၊ အမိန့် များကိုချိုးဖောက်ကြောင်းကိုလည်းကောင်း သင် တို့သိရှိကြလိမ့်မည်'' ဟူ၍ငါ့အားမိန့်တော် မူ၏။
13 ೧೩ ನಾನು ಈ ಮಾತನ್ನು ನುಡಿಯುತ್ತಿರುವಾಗಲೇ ಬೆನಾಯನ ಮಗನಾದ ಪೆಲತ್ಯನು ಸತ್ತುಹೋದನು. ಆಗ ನಾನು ಅಡ್ಡಬಿದ್ದು ಗಟ್ಟಿಯಾಗಿ ಕೂಗಿಕೊಂಡೆ, “ಅಯ್ಯೋ, ಕರ್ತನಾದ ಯೆಹೋವನೇ, ಇಸ್ರಾಯೇಲಿನಲ್ಲಿ ಉಳಿದವರನ್ನು ಸಂಪೂರ್ಣವಾಗಿ ನಿರ್ಮೂಲಮಾಡುವಿಯೋ?” ಎಂದು ಮೊರೆಯಿಟ್ಟೆನು.
၁၃ငါသည်ထိုဗျာဒိတ်တော်ကိုဆင့်ဆိုနေစဉ် ဗေနာယ၏သားပေလတိသည်လဲ၍သေ လေ၏။ ထိုအခါငါသည်မြေပေါ်သို့လှဲချ ပျပ်ဝပ်လိုက်ပြီးလျှင်``အို အရှင်ထာဝရ ဘုရား၊ ကိုယ်တော်ရှင်သည်ကျန်ရှိနေသေး သည့်ဣသရေလအမျိုးသားမှန်သမျှ တို့အားသုတ်သင်ပစ်တော်မူမည်လော'' ဟုဟစ်အော်လျှောက်ထား၏။
14 ೧೪ ಆಗ ಯೆಹೋವನು ಈ ಮಾತನ್ನು ನನಗೆ ದಯಪಾಲಿಸಿದನು,
၁၄ထာဝရဘုရား၏နှုတ်ကပတ်တော်သည် ငါ့ထံ သို့ရောက်လာ၏။ ကိုယ်တော်က``အချင်းလူသား၊ ယေရုရှလင်မြို့တွင်နေထိုင်ကြသောသူတို့ သည်သင်နှင့်သင်၏ညီအစ်ကိုဣသရေလ အမျိုးသားတို့၏အကြောင်းကိုပြောဆိုနေ ကြ၏။ သူတို့က`ပြည်နှင်ဒဏ်ခံရသူတို့သည် ထာဝရဘုရားသွေးတော်စပ်သူညီအစ်ကို နှင့်ထံတော်မှ ရပ်ဝေးသို့ရောက်ရှိနေကြ၏။ သို့ဖြစ်၍ကိုယ်တော်သည်ဤပြည်ကိုငါတို့ အားပေးတော်မူပြီ' ဟုဆိုကြ၏။''
15 ೧೫ “ನರಪುತ್ರನೇ, ನಿನ್ನ ಸಹೋದರರು, ನಿನ್ನ ಅಣ್ಣತಮ್ಮಂದಿರು, ನಿನ್ನ ನೆಂಟರು ಅಂತು ಯೆರೂಸಲೇಮಿನವರು ಮತ್ತು ಇಸ್ರಾಯೇಲ್ ವಂಶದವರಲ್ಲಿ ಉಳಿದಿರುವವರು, ‘ಯೆಹೋವನ ಬಳಿಯಿಂದ ದೂರವಾಗಿ ತೊಲಗಿರಿ, ಈ ದೇಶವು ನಮಗೇ ಸ್ವತ್ತಾಗಿ ಸಿಕ್ಕಿದೆ’ ಎಂದು ಹೀನೈಸಿದರೋ ಅವರೆಲ್ಲರು ಉಳಿದಿದ್ದಾರಲ್ಲಾ.
၁၅
16 ೧೬ “ಆದಕಾರಣ ನೀನು ಹೀಗೆ ಸಾರು, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ನಾನು ಅವರನ್ನು ದೂರವಾಗಿ ತೊಲಗಿಸಿ, ಜನಾಂಗಗಳಲ್ಲಿ ಮತ್ತು ಅನ್ಯದೇಶದ ಜನಾಂಗಗಳಲ್ಲಿ ಚದರಿಸಿದರೂ ಅವರು ಸೇರಿರುವ ದೇಶಗಳಲ್ಲಿಯೇ ನಾನು ಸ್ವಲ್ಪ ಕಾಲದ ಮಟ್ಟಿಗೆ ಅವರಿಗೆ ಪವಿತ್ರಾಲಯವಾಗಿರುವೆನು.’
၁၆ထို့ကြောင့်ငါအရှင်ထာဝရဘုရားမိန့်တော် မူသည်ကား``သူတို့အားရပ်ဝေးရှိလူမျိုးခြား နှင့်အတူနေထိုင်ရန်စေလွှတ်၍ တိုင်းတစ်ပါး တို့တွင်ပျံ့လွင့်စေခဲ့သော်လည်းအခိုက်အတန့် အားဖြင့် သူတို့ရှိရာအရပ်၌သူတို့နှင့် အတူငါရှိမည်။''
17 ೧೭ “ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಅವರನ್ನು ಜನಾಂಗಗಳೊಳಗಿಂದ ಕೂಡಿಸುವೆನು, ಚದರಿರುವ ದೇಶಗಳಿಂದ ಅವರನ್ನು ಒಟ್ಟಿಗೆ ಬರಮಾಡಿ ಇಸ್ರಾಯೇಲ್ ದೇಶವನ್ನು ಅವರಿಗೆ ದಯಪಾಲಿಸುವೆನು.’
၁၇``သို့ဖြစ်၍ငါအရှင်ထာဝရဘုရားမိန့်တော်မူ သောစကားကိုသူတို့အားဆင့်ဆိုလော့။ ငါသည် လူမျိုးခြားတို့ထဲမှသူတို့အားပြန်လည်သိမ်း ဆည်း၍ သူတို့ပျံ့လွင့်လျက်ရှိသည့်ပြည်များ မှသူတို့ကိုပြန်လည်စုသိမ်းမည်။ ဣသရေလ ပြည်ကိုပြန်လည်ပေးအပ်မည်။-
18 ೧೮ ಅವರು ಅಲ್ಲಿಗೆ ಸೇರಿ ಎಲ್ಲಾ ಅಸಹ್ಯ ವಸ್ತುಗಳನ್ನೂ, ಸಮಸ್ತ ಅಸಹ್ಯ ವಿಗ್ರಹಗಳನ್ನೂ ಅಲ್ಲಿಂದ ತೆಗೆದುಹಾಕುವರು.
၁၈သူတို့သည်ပြန်လည်ရောက်ရှိလာသောအခါ မိမိတို့တွေ့ရှိရသမျှသောစက်ဆုပ်ဖွယ်ကောင်း သည့်ရုပ်တုများကိုပယ်ရှားရကြမည်။-
19 ೧೯ “ಅವರು ನನ್ನ ನಿಯಮಗಳನ್ನು ಅನುಸರಿಸಿ, ನನ್ನ ವಿಧಿಗಳನ್ನು ಕೈಕೊಂಡು ನೆರವೇರಿಸಲಿ ಎಂದು ನಾನು ಅವರಿಗೆ ಒಂದೇ ಮನಸ್ಸನ್ನು ದಯಪಾಲಿಸಿ ನೂತನ ಸ್ವಭಾವವನ್ನು ಅವರಲ್ಲಿ ಹುಟ್ಟಿಸುವೆನು.
၁၉သူတို့အားစိတ်သဘောတညီတညွတ်တည်း ဖြစ်စေ၍ စိတ်သစ်နှလုံးသစ်ကိုငါပေးမည်။ ငါသည်သူတို့၏ခိုင်မာသောကျောက်နှလုံး ကိုယူပစ်၍ နာခံတတ်သောနှလုံးကိုပေး မည်။-
20 ೨೦ ಕಲ್ಲಾದ ಹೃದಯವನ್ನು ಅವರೊಳಗಿಂದ ತೆಗೆದು ಮೃದುವಾದ ಹೃದಯವನ್ನು ಅವರಿಗೆ ಅನುಗ್ರಹಿಸುವೆನು; ಅವರು ನನಗೆ ಪ್ರಜೆಯಾಗಿರುವರು, ನಾನು ಅವರಿಗೆ ದೇವರಾಗಿರುವೆನು.
၂၀သို့ဖြစ်၍သူတို့သည်ငါ၏ပညတ်များကို စောင့်ထိန်း၍ငါ၏အမိန့်များကိုတိကျ စွာလိုက်နာကြလိမ့်မည်။ သူတို့သည်ငါ၏ လူမျိုးတော်ဖြစ်၍ငါသည်လည်းသူတို့၏ ဘုရားဖြစ်လိမ့်မည်။-
21 ೨೧ ಆದರೆ ಯಾರ ಮನಸ್ಸು ತಮ್ಮ ಅಸಹ್ಯ ವಸ್ತುಗಳನ್ನೂ, ಅಸಹ್ಯ ವಿಗ್ರಹಗಳನ್ನೂ ಅನುಸರಿಸುತ್ತದೋ ಅವರ ದುರ್ನಡತೆಯನ್ನು ಅವರ ತಲೆಗೆ ಕಟ್ಟುವೆನು” ಇದು ಕರ್ತನಾದ ಯೆಹೋವನ ನುಡಿ.
၂၁သို့ဖြစ်၍ငါသည်ညစ်ညမ်းစက်ဆုပ်ဖွယ် ကောင်းသောရုပ်တုများကိုစိတ်စွဲလမ်းသူ တို့ကိုဒဏ်ခတ်တော်မူမည်။ သူတို့ပြုခဲ့ သည့်အမှုများအတွက်ဒဏ်ခတ်တော်မူ မည်'' ဟုမိန့်တော်မူ၏။ ဤကားအရှင် ထာဝရဘုရားမိန့်မြွက်တော်မူချက် ပင်ဖြစ်သတည်း။
22 ೨೨ ಬಳಿಕ ಚಕ್ರಗಳ ಪಕ್ಕದಲ್ಲಿದ್ದ ಕೆರೂಬಿಗಳು ರೆಕ್ಕೆಗಳನ್ನು ಹರಡಿಕೊಂಡವು, ಇಸ್ರಾಯೇಲಿನ ದೇವರ ತೇಜಸ್ಸು ಅವುಗಳ ಮೇಲ್ಗಡೆ ನೆಲೆಸಿತ್ತು.
၂၂အသက်ရှင်သောသတ္တဝါတို့သည်စ၍ပျံ ကြသောအခါဘီးများသည်လည်းလိုက် သွားကြ၏။ ဣသရေလအမျိုးသားတို့ ဘုရားသခင်၏တောက်ပသောဘုန်းအသ ရေတော်သည်သူတို့၏အပေါ်၌တည် လျက်ရှိ၏။-
23 ೨೩ ಆಗ ಯೆಹೋವನ ತೇಜಸ್ಸು ಪಟ್ಟಣದ ಮಧ್ಯದೊಳಗಿಂದ ಏರಿ ಪಟ್ಟಣಕ್ಕೆ ಪೂರ್ವದಲ್ಲಿರುವ ಗುಡ್ಡದ ಮೇಲೆ ನಿಂತಿತು.
၂၃ထိုနောက်တောက်ပသောဘုန်းတော်ရောင်ခြည် သည်မြို့မှထွက်ခွာ၍ အရှေ့ဘက်တွင်ရှိ သောတောင်ရိုးသို့ရွေ့လျားသွားတော်မူ၏။-
24 ೨೪ ಆಮೇಲೆ ದೇವರಾತ್ಮ ಪರವಶನಾದ ನನ್ನನ್ನು ಎತ್ತಿ, ದಿವ್ಯ ದರ್ಶನದ ಮುಖಾಂತರ ಕಸ್ದೀಯರ ದೇಶದಲ್ಲಿ ಸೆರೆಯಾದವರ ಬಳಿಗೆ ಕರೆತಂದಿತು. ನನಗಾದ ದಿವ್ಯದರ್ಶನವು ಆಗ ಮಾಯವಾಯಿತು.
၂၄ဘုရားသခင်၏ဝိညာဉ်တော်ပေးတော်မူ သောဗျာဒိတ်ရူပါရုံထဲ၌ ဘုရားသခင် ၏ဝိညာဉ်တော်သည်ငါ့ကိုချီပင့်တော်မူ ပြီးလျှင် ပြည်နှင်ဒဏ်ခံရသူများရှိရာ ဗာဗုလုန်ပြည်သို့ပြန်လည်ပို့ဆောင်တော် မူ၏။ ထိုနောက်ဗျာဒိတ်ရူပါရုံသည်မှေး မှိန်၍သွားလေသည်။-
25 ೨೫ ಯೆಹೋವನು ತೋರಿಸಿದ ಎಲ್ಲವುಗಳನ್ನು ಕೂಡಲೆ ಸೆರೆಯವರಿಗೆ ತಿಳಿಸಿದೆನು.
၂၅ငါသည်ငါ့အားထာဝရဘုရားဖော်ပြ တော်မူသမျှသောအမှုအခြင်းအရာ တို့ကို ပြည်နှင်ဒဏ်ခံရသူတို့အားပြန် ကြားလေ၏။