< ವಿಮೋಚನಕಾಂಡ 9 >
1 ೧ ತರುವಾಯ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ, “ನೀನು, ಫರೋಹನ ಬಳಿಗೆ ಹೋಗಿ ಅವನಿಗೆ, ‘ಇಬ್ರಿಯರ ದೇವರಾದ ಯೆಹೋವನು ತನ್ನನ್ನು ಆರಾಧಿಸುವಂತೆ ತನ್ನ ಜನರಿಗೆ ಅಪ್ಪಣೆಕೊಡಬೇಕೆಂಬುದಾಗಿ ಹೇಳಿದ್ದಾನೆ.
ଏଥିଉତ୍ତାରେ ସଦାପ୍ରଭୁ ମୋଶାଙ୍କୁ କହିଲେ, “ତୁମ୍ଭେ ଫାରୋ ନିକଟକୁ ଯାଇ ତାହାଙ୍କୁ କୁହ, ‘ଏବ୍ରୀୟମାନଙ୍କ ସଦାପ୍ରଭୁ ପରମେଶ୍ୱର ଏହି କଥା କହନ୍ତି, ଆମ୍ଭର ସେବା କରିବା ପାଇଁ ତୁମ୍ଭେ ଆମ୍ଭ ଲୋକମାନଙ୍କୁ ଯିବାକୁ ଦିଅ।
2 ೨ ನೀನು ಅವರಿಗೆ ಅಪ್ಪಣೆ ಕೊಡದೆ ಇನ್ನೂ ಅವರನ್ನು ತಡೆದರೆ,
ମାତ୍ର ଯଦି ସେମାନଙ୍କୁ ଯିବା ପାଇଁ ନାସ୍ତି କରି ଏବେ ମଧ୍ୟ ବାଧା ଦେବ,
3 ೩ ಯೆಹೋವನು ಅಡವಿಯಲ್ಲಿರುವ ನಿನ್ನ ಎಲ್ಲಾ ಪಶುಗಳಿಗೂ, ಕುದುರೆ, ಕತ್ತೆ, ಒಂಟೆ, ದನ, ಕುರಿ, ಆಡು ಇವೆಲ್ಲವುಗಳಿಗೂ ವಿರೋಧವಾಗಿ ತನ್ನ ಕೈಯನ್ನು ಎತ್ತಿ ಘೋರವ್ಯಾಧಿಯನ್ನು ಉಂಟುಮಾಡುವನೆಂದು ತಿಳಿದುಕೋ.
ତେବେ ଦେଖ, ତୁମ୍ଭ କ୍ଷେତ୍ରସ୍ଥିତ ଘୋଡା, ଗର୍ଦ୍ଦଭ, ଓଟ, ଗୋରୁ ଓ ମେଷାଦି ପଶୁଗଣ ଉପରେ ସଦାପ୍ରଭୁଙ୍କ ହସ୍ତ ଅଛି; ଏଣୁ ଅତିଶୟ ମହାମାରୀ ହେବ।
4 ೪ ಯೆಹೋವನು ಇಸ್ರಾಯೇಲರ ಪಶುಗಳಿಗೂ, ಐಗುಪ್ತರ ಪಶುಗಳಿಗೂ ವ್ಯತ್ಯಾಸವನ್ನುಂಟು ಮಾಡುವನು. ಇಸ್ರಾಯೇಲರಿಗಿರುವ ಪಶುಗಳಲ್ಲಿ ಒಂದೂ ಸಾಯುವುದಿಲ್ಲ’ ಎಂದು ಹೇಳಬೇಕು” ಎಂದನು.
ମାତ୍ର ସଦାପ୍ରଭୁ ଇସ୍ରାଏଲୀୟମାନଙ୍କ ଓ ମିସରୀୟମାନଙ୍କ ପଶୁଗଣ ମଧ୍ୟରେ ପ୍ରଭେଦ କରିବେ; ତହିଁରେ ଇସ୍ରାଏଲ ସନ୍ତାନମାନଙ୍କର କୌଣସି ପଶୁ ମରିବ ନାହିଁ।’”
5 ೫ ಇದಲ್ಲದೆ ಯೆಹೋವನು, “ನಿರ್ದಿಷ್ಟವಾದ ಸಮಯವನ್ನು ನೇಮಿಸಿ, ನಾಳೆಯೇ ಈ ಕಾರ್ಯವನ್ನು ಈ ದೇಶದಲ್ಲಿ ಮಾಡುವನು ಎಂದು ಹೇಳು” ಎಂದನು.
ସଦାପ୍ରଭୁ ସମୟ ନିରୂପଣ କରି କହନ୍ତି, “ଆସନ୍ତାକାଲି ସଦାପ୍ରଭୁ ଏ ଦେଶରେ ଏହି କର୍ମ କରିବେ।”
6 ೬ ಮರುದಿನ ಯೆಹೋವನು ಆ ಕಾರ್ಯವುಂಟಾಗುವಂತೆ ಮಾಡಿದನು. ಐಗುಪ್ತ್ಯರ ಪಶುಗಳೆಲ್ಲಾ ಸತ್ತುಹೋದವು. ಇಸ್ರಾಯೇಲರ ಪಶುಗಳಲ್ಲಿ ಒಂದೂ ಸಾಯಲಿಲ್ಲ.
ଆରଦିନ ସଦାପ୍ରଭୁ ସେହି କର୍ମ କଲେ, ତହିଁରେ ମିସରୀୟମାନଙ୍କ ସମସ୍ତ ପଶୁ ମଲେ; ମାତ୍ର ଇସ୍ରାଏଲ ସନ୍ତାନମାନଙ୍କ ପଶୁଗଣ ମଧ୍ୟରୁ ଗୋଟିଏ ହେଁ ମଲା ନାହିଁ।
7 ೭ ಫರೋಹನು ವಿಚಾರಿಸಿದಾಗ, ಇಸ್ರಾಯೇಲ್ಯರ ಪಶುಗಳಲ್ಲಿ ಒಂದೂ ಸಾಯಲಿಲ್ಲವೆಂಬುದನ್ನು ತಿಳಿದುಕೊಂಡನು. ಆದರೂ ಫರೋಹನ ಹೃದಯವು ಕಠಿಣವಾಗಿದ್ದರಿಂದ ಆ ಜನರಿಗೆ ಹೋಗುವುದಕ್ಕೆ ಅಪ್ಪಣೆಕೊಡಲಿಲ್ಲ.
ତହୁଁ ଫାରୋ ଲୋକ ପଠାଇ ଇସ୍ରାଏଲୀୟମାନଙ୍କର ଗୋଟିଏ ମାତ୍ର ପଶୁ ମରି ନ ଥିବାର ଦେଖିଲେ। ତଥାପି ଫାରୋଙ୍କ ହୃଦୟ କଠିନ ହେଲା ଓ ସେ ଲୋକମାନଙ୍କୁ ଯିବାକୁ ଦେଲେ ନାହିଁ।
8 ೮ ಯೆಹೋವನು ಮೋಶೆ ಮತ್ತು ಆರೋನರಿಗೆ, “ನೀವು ಒಲೆಯ ಬೂದಿಯನ್ನು ಕೈತುಂಬಾ ತೆಗೆದುಕೊಳ್ಳಿರಿ. ಮೋಶೆ ಅದನ್ನು ಫರೋಹನ ಕಣ್ಣುಗಳ ಮುಂದೆ ಆಕಾಶದ ಕಡೆಗೆ ತೂರಲಿ.
ଆଉ ସଦାପ୍ରଭୁ ମୋଶା ଓ ହାରୋଣଙ୍କୁ କହିଲେ, “ତୁମ୍ଭେମାନେ ମୁଷ୍ଟି ପୂର୍ଣ୍ଣ କରି ଭାଟିର ଭସ୍ମ ନିଅ, ପୁଣି, ମୋଶା ଫାରୋଙ୍କ ସାକ୍ଷାତରେ ତାହା ଆକାଶ ଆଡ଼କୁ ବିଞ୍ଚି ଦେଉ।
9 ೯ ಆಗ ಅದು ಐಗುಪ್ತ ದೇಶದಲ್ಲೆಲ್ಲಾ ಧೂಳಿನ ಕಣಗಳಾಗಿ ಮಾರ್ಪಟ್ಟು ಅದು ಐಗುಪ್ತ ದೇಶದಲ್ಲೆಲ್ಲಾ ಮನುಷ್ಯರ ಮೇಲೆಯೂ ಪಶುಗಳ ಮೇಲೆಯೂ ಹುಣ್ಣುಗಳಾಗುವ ಬೊಕ್ಕೆಗಳು ಏಳುವಂತೆ ಮಾಡುವವು” ಎಂದು ಹೇಳಿದನು.
ତହିଁରେ ତାହା ସମୁଦାୟ ମିସର ଦେଶ ଉପରେ ସୂକ୍ଷ୍ମ ଧୂଳି ହୋଇ ମିସରୀୟ ସମସ୍ତ ମନୁଷ୍ୟ ଓ ପଶୁମାନଙ୍କ ଶରୀରରେ ଦାହଯୁକ୍ତ ବଥ ଜନ୍ମାଇବ।”
10 ೧೦ ಅದರಂತೆ ಮೋಶೆ ಮತ್ತು ಆರೋನರು ಒಲೆಯ ಬೂದಿಯನ್ನು ತೆಗೆದುಕೊಂಡು ಫರೋಹನ ಮುಂದೆ ನಿಂತರು. ಮೋಶೆಯು ಆ ಬೂದಿಯನ್ನು ಆಕಾಶದ ಕಡೆಗೆ ತೂರಿದನು. ಆಗ ಅದು ಮನುಷ್ಯರ ಮೇಲೆಯೂ, ಪಶುಗಳ ಮೇಲೆಯೂ ಹರಡಿ ಹುಣ್ಣುಗಳಾಗುವಂತೆ ಬೊಕ್ಕೆಗಳನ್ನೆಬ್ಬಿಸಿತು.
ତହୁଁ ସେମାନେ ଭାଟିର ଭସ୍ମ ନେଇ ଫାରୋ ଆଗରେ ଠିଆ ହେଲେ; ପୁଣି, ମୋଶା ଆକାଶ ଆଡ଼େ ତାହା ବିଞ୍ଚି ଦିଅନ୍ତେ, ସମସ୍ତ ମନୁଷ୍ୟ ଓ ପଶୁମାନଙ୍କ ଶରୀରରେ ଦାହଯୁକ୍ତ ବଥ ହେଲା।
11 ೧೧ ಇದಲ್ಲದೆ ಮಂತ್ರಗಾರರು, ಹುಣ್ಣುಗಳ ದೆಸೆಯಿಂದ ಮೋಶೆಯ ಮುಂದೆ ನಿಲ್ಲಲಾರದೆ ಹೋದರು. ಏಕೆಂದರೆ ಹುಣ್ಣುಗಳು ಮಂತ್ರಗಾರರ ಮೇಲೆಯೂ, ಐಗುಪ್ತ್ಯರ ಮೇಲೆಯೂ ಎದ್ದಿದ್ದವು.
ସେହି ବଥ ସକାଶୁ ମନ୍ତ୍ରଜ୍ଞମାନେ ମୋଶାଙ୍କ ସାକ୍ଷାତରେ ଠିଆ ହୋଇ ପାରିଲେ ନାହିଁ; କାରଣ ମନ୍ତ୍ରଜ୍ଞମାନଙ୍କ ଓ ସମସ୍ତ ମିସରୀୟମାନଙ୍କ ଶରୀରରେ ବଥ ଜାତ ହେଲା।
12 ೧೨ ಆದರೂ ಯೆಹೋವನು ಮೋಶೆಗೆ ಹೇಳಿದಂತೆಯೇ ಆಯಿತು. ಯೆಹೋವನು ಫರೋಹನ ಹೃದಯವನ್ನು ಕಠಿಣಮಾಡಿದ್ದರಿಂದ ಅವನು ಅವರ ಮಾತಿಗೆ ಕಿವಿಗೊಡದೆ ಹೋದನು.
ଏଥିଉତ୍ତାରେ ସଦାପ୍ରଭୁ ଫାରୋଙ୍କର ହୃଦୟ କଠିନ କଲେ, ତହିଁରେ ସେ ମୋଶାଙ୍କ ପ୍ରତି ଉକ୍ତ ସଦାପ୍ରଭୁଙ୍କ ବାକ୍ୟ ପ୍ରମାଣେ ସେମାନଙ୍କ କଥାରେ ମନୋଯୋଗ କଲେ ନାହିଁ।
13 ೧೩ ತರುವಾಯ ಯೆಹೋವನು ಮೋಶೆಗೆ, “ನೀನು ಬೆಳಿಗ್ಗೆ ಎದ್ದು ಫರೋಹನ ಮುಂದೆ ನಿಂತುಕೊಂಡು ಅವನಿಗೆ, ‘ಇಬ್ರಿಯರ ದೇವರಾದ ಯೆಹೋವನು ಆಜ್ಞಾಪಿಸುವುದೇನೆಂದರೆ, ನನ್ನನ್ನು ಆರಾಧಿಸುವಂತೆ ನನ್ನ ಜನರಿಗೆ ಅಪ್ಪಣೆಕೊಡಬೇಕು.
ଏଥିଉତ୍ତାରେ ସଦାପ୍ରଭୁ ମୋଶାଙ୍କୁ କହିଲେ, “ତୁମ୍ଭେ ପ୍ରଭାତରେ ଉଠି ଫାରୋ ସମ୍ମୁଖରେ ଠିଆ ହୋଇ ତାହାଙ୍କୁ ଏହି କଥା କୁହ, ‘ଏବ୍ରୀୟମାନଙ୍କ ସଦାପ୍ରଭୁ ପରମେଶ୍ୱର କହନ୍ତି, ଆମ୍ଭର ସେବା କରିବାକୁ ଆମ୍ଭ ଲୋକମାନଙ୍କୁ ଯିବାକୁ ଦିଅ;
14 ೧೪ ಈ ಸಾರಿ ನಾನು ನನ್ನ ವಶದಲ್ಲಿರುವ ಈ ಬಾಧೆಗಳನ್ನು ನಿನ್ನ ಪ್ರಜಾಪರಿವಾರದವರಿಗೆ ಉಂಟಾಗುವಂತೆಯೂ, ನಿನ್ನ ಹೃದಯಕ್ಕೂ ತಗಲುವಂತೆಯೂ ಮಾಡುವೆನು. ಆದುದರಿಂದ ಸಮಸ್ತ ಲೋಕದಲ್ಲಿ ನನಗೆ ಸಮಾನರು ಬೇರೆ ಯಾರೂ ಇಲ್ಲವೆಂದು ನನ್ನ ವಿಷಯದಲ್ಲಿ ತಿಳಿದುಕೊಳ್ಳುವಿ.
ନୋହିଲେ ଏହିଥର ଆମ୍ଭେ ତୁମ୍ଭ ହୃଦୟ ବିରୁଦ୍ଧରେ, ପୁଣି, ତୁମ୍ଭ ଦାସଗଣ ଓ ଲୋକମାନଙ୍କ ମଧ୍ୟରେ ଆମ୍ଭର ସର୍ବପ୍ରକାର ମହାମାରୀ ପଠାଇବା; ତହିଁରେ ସମୁଦାୟ ପୃଥିବୀରେ ଆମ୍ଭ ତୁଲ୍ୟ କେହି ନାହାନ୍ତି, ଏହା ତୁମ୍ଭେ ଜ୍ଞାତ ହେବ।
15 ೧೫ ನಾನು ಕೈಯನ್ನೆತ್ತಿ ನಿನ್ನನ್ನೂ, ನಿನ್ನ ಪ್ರಜೆಗಳನ್ನೂ, ವ್ಯಾಧಿಯಿಂದ ಬಾಧಿಸುವೆನು. ನಿನ್ನನ್ನು ಭೂಮಿಯೊಳಗಿಂದ ನಿರ್ಮೂಲ ಮಾಡುವೆನು.
କାରଣ ବର୍ତ୍ତମାନ ସୁଦ୍ଧା ଆମ୍ଭେ ଆପଣା ହସ୍ତ ବିସ୍ତାର କରି ମହାମାରୀ ଦ୍ୱାରା ତୁମ୍ଭକୁ ଓ ତୁମ୍ଭ ଲୋକମାନଙ୍କୁ ସଂହାର କରନ୍ତୁଣି, ପୁଣି, ତୁମ୍ଭେ ପୃଥିବୀରୁ ଉଚ୍ଛିନ୍ନ ହୋଇ ସାରନ୍ତଣି;
16 ೧೬ ಆದರೆ ನಾನು ನಿನ್ನಲ್ಲಿ ನನ್ನ ಶಕ್ತಿಯನ್ನು ತೋರಿಸಿ, ನನ್ನ ಹೆಸರನ್ನು ಲೋಕದಲ್ಲೆಲ್ಲಾ ಪ್ರಸಿದ್ಧಿಪಡಿಸಬೇಕೆಂಬ ಉದ್ದೇಶದಿಂದಲೇ ನಿನ್ನನ್ನು ಸಾಯಿಸದೇ ಉಳಿಸಿರುವೆನು.
ମାତ୍ର ତୁମ୍ଭକୁ ଆପଣା ପରାକ୍ରମ ଦେଖାଇବାକୁ ଓ ସମୁଦାୟ ପୃଥିବୀରେ ଯେପରି ଆମ୍ଭର ନାମ କୀର୍ତ୍ତିତ ହେବ, ପ୍ରକୃତରେ ଏଥିପାଇଁ ଆମ୍ଭେ ତୁମ୍ଭକୁ ସ୍ଥାପନ କରି ରଖିଅଛୁ।
17 ೧೭ ನೀನು ನನ್ನ ಜನರನ್ನು ಇನ್ನೂ ಹೋಗಗೊಡಿಸದೆ ಅವರ ಮುಂದೆ, ಅಡ್ಡಿ ಆತಂಕಗಳನ್ನು ಒಡ್ಡುತ್ತಿರುವೆಯಾ?
ତଥାପି ତୁମ୍ଭେ ଆମ୍ଭ ଲୋକମାନଙ୍କୁ ଯିବାକୁ ନ ଦେଇ ସେମାନଙ୍କ ଉପରେ ଦର୍ପ କରୁଅଛ?
18 ೧೮ ಹಾಗಾದರೆ, ನಾಳೆ ಇಷ್ಟು ಹೊತ್ತಿಗೆ ವಿಪರೀತವಾದ ಆನೆಕಲ್ಲಿನ ಮಳೆ ಬೀಳುವಂತೆ ಮಾಡುವೆನು. ಐಗುಪ್ತ ರಾಜ್ಯವು ಸ್ಥಾಪಿತವಾದ ದಿನ ಮೊದಲುಗೊಂಡು ಇಂದಿನವರೆಗೂ ಅಂಥ ಕಲ್ಲಿನ ಮಳೆ ಬಿದ್ದಿರುವುದಿಲ್ಲ.
ଦେଖ, ଆମ୍ଭେ ଆସନ୍ତାକାଲି ଏପରି ସମୟରେ ମିସର ଦେଶରେ ଏପରି ଭାରୀ ଶିଳାବୃଷ୍ଟି କରିବା ଯେ, ମିସରର ପତ୍ତନାବଧି ଆଜିଯାଏ ସେପରି କେବେ ହୋଇ ନାହିଁ।
19 ೧೯ ಆದಕಾರಣ ನೀನು ಆಳುಗಳನ್ನು ಕಳುಹಿಸಿ ನಿನ್ನ ಪಶುಗಳನ್ನೂ, ನಿನಗೆ ಹೊಲದಲ್ಲಿರುವುದೆಲ್ಲವನ್ನೂ ಬೇಗ ಭದ್ರಪಡಿಸು. ಮನೆಯೊಳಗೆ ಬಾರದೆ ಬಯಲಿನಲ್ಲೇ ಇರುವ ಎಲ್ಲಾ ಮನುಷ್ಯರೂ, ಪಶುಗಳೂ ಆ ಕಲ್ಲಿನ ಮಳೆಯ ಹೊಡೆತದಿಂದ ಸಾಯುವರು’” ಎಂದು ಹೇಳಿದನು.
ଏନିମନ୍ତେ ଏବେ ଲୋକ ପଠାଇ କ୍ଷେତ୍ରରେ ତୁମ୍ଭର ପଶ୍ୱାଦି ଯାହା ଯାହା ଅଛି, ତାହାସବୁ ଶୀଘ୍ର ଅଣାଅ, କାରଣ ଯେଉଁ ମନୁଷ୍ୟ କି ପଶୁ କ୍ଷେତ୍ରରେ ରହିବେ, ଗୃହକୁ ଅଣା ନ ଯିବେ, ସେମାନଙ୍କ ଉପରେ ଶିଳାବୃଷ୍ଟି ହେଲେ ସେମାନେ ମରିବେ।’”
20 ೨೦ ಆಗ ಫರೋಹನ ಸೇವಕರಲ್ಲಿ ಯಾರಾರು ಯೆಹೋವನ ಮಾತಿಗೆ ಹೆದರಿದರೋ ಅವರು ತಮ್ಮ ಆಳುಗಳನ್ನೂ ಪಶುಗಳನ್ನೂ ಬೇಗ ಮನೆಗೆ ಬರಮಾಡಿಕೊಂಡರು.
ସେତେବେଳେ ଫାରୋଙ୍କର ଦାସମାନଙ୍କ ମଧ୍ୟରୁ ଯେଉଁ ବ୍ୟକ୍ତି ସଦାପ୍ରଭୁଙ୍କ ବାକ୍ୟରେ ଭୀତ ହେଲା, ସେ ଶୀଘ୍ର ଆପଣା ଦାସ ଓ ପଶୁମାନଙ୍କୁ ଗୃହକୁ ଆଣିଲା।
21 ೨೧ ಯಾರು ಯೆಹೋವನ ಮಾತನ್ನು ಮನಸ್ಸಿಗೆ ತೆಗೆದುಕೊಳ್ಳಲಿಲ್ಲವೋ, ಅವರು ತಮ್ಮ ಆಳುಗಳನ್ನೂ, ಪಶುಗಳನ್ನೂ ಹೊಲದಲ್ಲಿಯೇ ಬಿಟ್ಟರು.
ମାତ୍ର ଯେ ସଦାପ୍ରଭୁଙ୍କ ବାକ୍ୟରେ ମନୋଯୋଗ ନ କଲା, ସେ ଆପଣା ଦାସ ଓ ପଶୁମାନଙ୍କୁ କ୍ଷେତ୍ରରେ ତ୍ୟାଗ କଲା।
22 ೨೨ ಯೆಹೋವನು ಮೋಶೆಗೆ, “ಆಕಾಶಕ್ಕೆ ನಿನ್ನ ಕೈಚಾಚು, ಆಗ ಐಗುಪ್ತ ದೇಶದಲ್ಲೆಲ್ಲಾ ಮನುಷ್ಯರ ಮೇಲೆಯೂ, ಪಶುಗಳ ಮೇಲೆಯೂ, ಹೊಲದಲ್ಲಿರುವ ಎಲ್ಲಾ ಪೈರುಗಳ ಮೇಲೆಯೂ ಆನೆಕಲ್ಲಿನ ಮಳೆ ಬೀಳುವುದು” ಎಂದು ಹೇಳಿದನು.
ଏଥିଉତ୍ତାରେ ସଦାପ୍ରଭୁ ମୋଶାଙ୍କୁ କହିଲେ, “ତୁମ୍ଭେ ଆକାଶ ଆଡ଼େ ଆପଣା ହସ୍ତ ବିସ୍ତାର କର, ତହିଁରେ ମିସରୀୟ ସମସ୍ତ ମନୁଷ୍ୟ, ପଶୁ ଓ କ୍ଷେତ୍ରସ୍ଥ ତୃଣାଦି ସମସ୍ତ ଉପରେ ଶିଳାବୃଷ୍ଟି ହେବ।”
23 ೨೩ ಮೋಶೆಯು ತನ್ನ ಕೋಲನ್ನು ಆಕಾಶದ ಕಡೆಗೆ ಚಾಚಿದಾಗ ಯೆಹೋವನು ಗುಡುಗನ್ನು, ಆನೆಕಲ್ಲಿನ ಮಳೆಯನ್ನು ಕಳುಹಿಸಿದನು. ಸಿಡಿಲುಗಳು ನೆಲಕ್ಕೆ ಅಪ್ಪಳಿಸಿದವು. ಯೆಹೋವನು ಐಗುಪ್ತ ದೇಶದ ಮೇಲೆ ಆನೆಕಲ್ಲಿನ ಮಳೆಯನ್ನು ಸುರಿಸಿದನು.
ତହୁଁ ମୋଶା ଆପଣା ଯଷ୍ଟି ଆକାଶ ଆଡ଼େ ବିସ୍ତାର କରନ୍ତେ, ସଦାପ୍ରଭୁ ମେଘ ଗର୍ଜ୍ଜନ ଓ ଶିଳାବୃଷ୍ଟି କଲେ; ପୁଣି, ବିଜୁଳି ଭୂମି ଆଡ଼େ ବେଗେ ଗମନ କଲା; ଏହିରୂପେ ସଦାପ୍ରଭୁ ମିସର ଦେଶରେ ଶିଳାବୃଷ୍ଟି କଲେ।
24 ೨೪ ಆನೆಕಲ್ಲಿನ ಮಳೆಯು ಬಹು ರಭಸವಾಗಿತ್ತು. ಅದರೊಂದಿಗೆ ಮಿಂಚು ಫಳಫಳನೆ ಹೊಳೆಯುತಿತ್ತು. ಐಗುಪ್ತ್ಯದವರು ಒಂದು ರಾಷ್ಟ್ರವಾದಂದಿನಿಂದ ಆ ದೇಶದಲ್ಲಿ ಅಂಥ ಘೋರವಾದ ಆನೆಕಲ್ಲಿನ ಮಳೆ ಆಗಿರಲಿಲ್ಲ.
ତହିଁରେ ଶିଳାବୃଷ୍ଟି ହେଲା ଓ ଶିଳା ସଙ୍ଗେ ସଙ୍ଗେ ବିଜୁଳି ଚମକିଲା; ଏପ୍ରକାର ଅତି ଦୁଃସହ ଶିଳାବୃଷ୍ଟି ମିସର ଦେଶରେ ରାଜ୍ୟସ୍ଥାପନାବଧି କେବେ ହୋଇ ନ ଥିଲା।
25 ೨೫ ಆ ಮಳೆಯಿಂದ ಐಗುಪ್ತ ದೇಶದ ಎಲ್ಲಾ ಕಡೆಗಳಲ್ಲಿದ್ದ ಮನುಷ್ಯರು, ಪಶುಗಳು, ಬಯಲಿನಲ್ಲಿದ್ದ ಎಲ್ಲವೂ ನಾಶವಾದವು. ಆನೆಕಲ್ಲಿನ ಮಳೆಯಿಂದ ಹೊಲಗಳಲ್ಲಿದ್ದ ಪೈರುಗಳು ಹಾಳಾದವು. ಹೊಲಗಳಲ್ಲಿದ್ದ ಮರಗಳು ಮುರಿದುಹೋದವು.
ତହିଁରେ ସମୁଦାୟ ମିସର ଦେଶର କ୍ଷେତ୍ରସ୍ଥ ମନୁଷ୍ୟ ଓ ପଶୁ ସମସ୍ତେ ଶିଳା ଦ୍ୱାରା ହତ ହେଲେ ଓ କ୍ଷେତ୍ରସ୍ଥ ସକଳ ତୃଣ ଶିଳାବୃଷ୍ଟିରେ ନଷ୍ଟ ହେଲା, କ୍ଷେତ୍ରସ୍ଥ ସବୁ ବୃକ୍ଷ ଭାଙ୍ଗିଗଲା।
26 ೨೬ ಇಸ್ರಾಯೇಲರು ವಾಸವಾಗಿದ್ದ ಗೋಷೆನ್ ಸೀಮೆಯಲ್ಲಿ ಮಾತ್ರ ಆನೆಕಲ್ಲಿನ ಮಳೆ ಬೀಳಲಿಲ್ಲ.
କେବଳ ଇସ୍ରାଏଲ-ସନ୍ତାନଗଣର ବାସସ୍ଥାନ ଗୋଶନ ପ୍ରଦେଶରେ ଶିଳାବୃଷ୍ଟି ହେଲା ନାହିଁ।
27 ೨೭ ಆಗ ಫರೋಹನು ಮೋಶೆ ಆರೋನರನ್ನು ಕರೆಯಿಸಿ ಅವರಿಗೆ, “ನಾನು ಅಪರಾಧಿಯೆಂದು ಈಗ ಒಪ್ಪಿಕೊಳ್ಳುತ್ತೇನೆ. ಯೆಹೋವನು ನ್ಯಾಯವಂತನು. ನಾನೂ ನನ್ನ ಜನರೂ ದೋಷಿಗಳು.
ଏଥିଉତ୍ତାରେ ଫାରୋ ଲୋକ ପଠାଇ ମୋଶା ଓ ହାରୋଣଙ୍କୁ ଡକାଇ କହିଲେ, “ଏହିଥର ମୁଁ ପାପ କରିଅଛି; ସଦାପ୍ରଭୁ ଧାର୍ମିକ, ମାତ୍ର ଆମ୍ଭେ ଓ ଆମ୍ଭ ଲୋକମାନେ ଦୋଷୀ ଅଟୁ।
28 ೨೮ ಈ ಭಯಂಕರವಾದ ಗುಡುಗು ಮತ್ತು ಆನೆಕಲ್ಲಿನ ಮಳೆಯೂ ಬಹಳ ಹೆಚ್ಚಾದವು. ಇವುಗಳನ್ನು ನಿಲ್ಲಿಸುವುದಕ್ಕೆ ಯೆಹೋವನನ್ನು ಪ್ರಾರ್ಥಿಸಿರಿ. ಈ ದೇಶವನ್ನು ಬಿಟ್ಟು ಹೊರಡುವುದಕ್ಕೆ ನಿಮಗೆ ಅಪ್ಪಣೆ ಕೊಡುತ್ತೇನೆ. ಇನ್ನು ನಿಮ್ಮನ್ನು ತಡೆಯುವುದಿಲ್ಲ” ಎಂದನು.
ସଦାପ୍ରଭୁଙ୍କ ନିକଟରେ ପ୍ରାର୍ଥନା କର; କାରଣ ପରମେଶ୍ୱରକୃତ ଗର୍ଜ୍ଜନ ଓ ଶିଳାବୃଷ୍ଟି ଯଥେଷ୍ଟ ହୋଇଅଛି; ଆମ୍ଭେ ତୁମ୍ଭମାନଙ୍କୁ ଯିବାକୁ ଦେବା, ତୁମ୍ଭମାନଙ୍କର ଆଉ ବିଳମ୍ବ ହେବ ନାହିଁ।”
29 ೨೯ ಅದಕ್ಕೆ ಮೋಶೆ, “ನಾನು ಈ ಪಟ್ಟಣದಿಂದಾಚೆಗೆ ಹೋದ ಕೂಡಲೇ ಕೈಯೆತ್ತಿ ಯೆಹೋವನನ್ನು ಪ್ರಾರ್ಥಿಸುವೆನು. ಆಗ ಗುಡುಗು ಮತ್ತು ಆನೆಕಲ್ಲಿನ ಮಳೆಯು ನಿಂತುಹೋಗುವದು. ಇದರಿಂದ ಸಮಸ್ತ ಭೂಲೋಕವು ಯೆಹೋವನ ಅಧೀನದಲ್ಲಿದೆ ಎಂದು ನೀನು ತಿಳಿದುಕೊಳ್ಳುವಿ.
ସେତେବେଳେ ମୋଶା ତାଙ୍କୁ କହିଲେ, “ମୁଁ ନଗରରୁ ବାହାର ହୋଇଗଲା କ୍ଷଣେ ସଦାପ୍ରଭୁଙ୍କ ନିକଟରେ ଆପଣ ହସ୍ତ ବିସ୍ତାର କରିବି, ତହିଁରେ ମେଘ ଗର୍ଜ୍ଜନ ନିବୃତ୍ତ ହେବ ଓ ଶିଳାବୃଷ୍ଟି ଆଉ ହେବ ନାହିଁ; ପୁଣି, ଏହି ପୃଥିବୀ ଯେ ସଦାପ୍ରଭୁଙ୍କର, ତାହା ଆପଣ ଜାଣି ପାରିବେ।
30 ೩೦ ಆದರೂ ನೀನಾಗಲಿ, ನಿನ್ನ ಪರಿವಾರದವರಾಗಲಿ, ದೇವರಾಗಿರುವ ಯೆಹೋವನಿಗೆ ಆಗಲೂ ಭಯಪಡುವುದಿಲ್ಲವೆಂದು ಬಲ್ಲೆನು” ಎಂದನು.
ମାତ୍ର ମୁଁ ଜାଣେ, ଆପଣ ଓ ଆପଣଙ୍କ ଦାସଗଣ ଆଜି ପର୍ଯ୍ୟନ୍ତ ସଦାପ୍ରଭୁ ପରମେଶ୍ୱରଙ୍କୁ ଭୟ କରୁ ନାହାନ୍ତି।”
31 ೩೧ ಜವೆಗೋದಿ ಮತ್ತು ಅಗಸೆ ಬೆಳೆಗಳು ನಾಶವಾದವು. ಏಕೆಂದರೆ ಜವೆಗೋದಿ ತೆನೆ ಬಿಟ್ಟಿತ್ತು, ಅಗಸೆ ಮೊಗ್ಗು ಬಿಟ್ಟಿತ್ತು.
ସେସମୟରେ ଫେସି ଓ ଯବ ସବୁ ନଷ୍ଟ ହେଲା, କାରଣ ଯବ ଶିଷାଯୁକ୍ତ ଓ ଫେସି ପୁଷ୍ପିତ ଥିଲା।
32 ೩೨ ಆದರೆ ಗೋದಿ ಮತ್ತು ಕಡಲೆ ಹಿಂದಿನ ಬೆಳೆಗಳಾಗಿದ್ದುದರಿಂದ ಅವುಗಳಿಗೆ ಹಾನಿಯಾಗಲಿಲ್ಲ.
ମାତ୍ର ଗହମ ଓ ଜହ୍ନା ବଡ଼ ହୋଇ ନ ଥିବାରୁ ନଷ୍ଟ ହେଲା ନାହିଁ।
33 ೩೩ ಮೋಶೆಯು ಫರೋಹನನ್ನು ಬಿಟ್ಟು ಪಟ್ಟಣದಿಂದ ಹೊರಕ್ಕೆ ಬಂದು ಕೈಯನ್ನೆತ್ತಿ ಯೆಹೋವನನ್ನು ಪ್ರಾರ್ಥಿಸಿದನು. ಗುಡುಗೂ, ಆನೆಕಲ್ಲಿನ ಮಳೆಯೂ ನಿಂತುಹೋದವು.
ଏଥିଉତ୍ତାରେ ମୋଶା ଫାରୋଙ୍କ ନିକଟରୁ ନଗରର ବାହାରକୁ ଯାଇ ସଦାପ୍ରଭୁଙ୍କ ଛାମୁରେ ଆପଣା ହସ୍ତ ବିସ୍ତାର କରନ୍ତେ, ମେଘ ଗର୍ଜ୍ଜନ ଓ ଶିଳାବୃଷ୍ଟି ନିବୃତ୍ତ ହେଲା, ଭୂମିରେ ଆଉ ଜଳ ବୃଷ୍ଟି ହେଲା ନାହିଁ।
34 ೩೪ ಆದರೆ ಆನೆಕಲ್ಲು ಮಳೆ, ಗುಡುಗು ನಿಂತುಹೋದದ್ದನ್ನು ಫರೋಹನು ಕಂಡಾಗ ಅವನೂ, ಅವನ ಪರಿವಾರದವರೂ ತಮ್ಮ ಹೃದಯಗಳನ್ನು ಕಠಿಣಮಾಡಿಕೊಂಡು ಇನ್ನೂ ಪಾಪ ಮಾಡಿದರು.
ସେତେବେଳେ ବୃଷ୍ଟି ଓ ଶିଳାପାତ ଓ ମେଘ ଗର୍ଜ୍ଜନ ନିବୃତ୍ତ ହେବାର ଦେଖି ଫାରୋ ଆହୁରି ପାପ କଲେ, ପୁଣି, ସେ ଓ ତାଙ୍କ ଦାସମାନେ ଆପଣା ଆପଣା ମନ କଠିନ କଲେ।
35 ೩೫ ಯೆಹೋವನು ಮೋಶೆಯಿಂದ ಹೇಳಿಸಿದಂತೆಯೇ ಆಯಿತು. ಫರೋಹನ ಹೃದಯವು ಕಠಿಣವಾಗಿತ್ತು. ಅವನು ಇಸ್ರಾಯೇಲರನ್ನು ಹೋಗಲು ಬಿಡಲಿಲ್ಲ.
ତହିଁରେ ଫାରୋଙ୍କର ହୃଦୟ କଠିନ ହେଲା; ଏଣୁ ମୋଶାଙ୍କ ଦ୍ୱାରା କଥିତ ସଦାପ୍ରଭୁଙ୍କ ବାକ୍ୟାନୁସାରେ ସେ ଇସ୍ରାଏଲ-ସନ୍ତାନଗଣଙ୍କୁ ଯିବାକୁ ଦେଲେ ନାହିଁ।