< ವಿಮೋಚನಕಾಂಡ 7 >
1 ೧ ಆಗ ಯೆಹೋವನು ಮೋಶೆಗೆ ಇಂತೆಂದನು, “ನಿನ್ನನ್ನು ಫರೋಹನಿಗೆ ದೇವರಂತೆ ನೇಮಿಸಿದ್ದೇನೆ. ನೋಡು, ನಿನ್ನ ಅಣ್ಣನಾದ ಆರೋನನು ನಿನಗೋಸ್ಕರ ಪ್ರವಾದಿಯಾಗಿರುವನು.
၁ထာဝရဘုရားကမောရှေအား``အီဂျစ်ဘုရင် ၏ရှေ့တွင်သင်သည်ဘုရားကဲ့သို့လည်းကောင်း၊ သင်၏အစ်ကိုအာရုန်သည်သင့်ကိုယ်စားပြော ဆိုရသောပရောဖက်ကဲ့သို့လည်းကောင်းငါ ဖြစ်စေမည်။-
2 ೨ ನಾನು ನಿನಗೆ ಆಜ್ಞಾಪಿಸುವುದ್ದನ್ನೆಲ್ಲಾ ನೀನು ಹೇಳಬೇಕು. ಇಸ್ರಾಯೇಲರು ದೇಶದಿಂದ ಹೊರಟುಹೋಗುವುದಕ್ಕೆ ಅಪ್ಪಣೆಕೊಡಬೇಕೆಂಬುದಾಗಿ ನಿನ್ನ ಅಣ್ಣನಾದ ಆರೋನನೇ ಫರೋಹನ ಮುಂದೆ ಮಾತನಾಡಬೇಕು.
၂ငါသည်သင့်အားမိန့်ကြားသမျှကိုအာရုန် အားပြောရမည်။ ဣသရေလအမျိုးသား တို့ကိုအီဂျစ်ပြည်မှထွက်ခွင့်ပြုစေရန် သူ သည်ဖာရောဘုရင်အားလျှောက်ထားရမည်။-
3 ೩ ಆದರೂ ನಾನು ಫರೋಹನ ಮನಸ್ಸಿನಲ್ಲಿ ಹಠವನ್ನು ಹುಟ್ಟಿಸಿ, ಐಗುಪ್ತದೇಶದಲ್ಲಿ ಅನೇಕ ಸೂಚಕಕಾರ್ಯಗಳನ್ನೂ ಮತ್ತು ಅದ್ಭುತಕಾರ್ಯಗಳನ್ನೂ ಮಾಡಿ ನನ್ನ ಶಕ್ತಿಯನ್ನು ತೋರಿಸುವೆನು.
၃သို့ရာတွင်ငါသည်ဘုရင်အားခေါင်းမာစေ သဖြင့် နိမိတ်လက္ခဏာများနှင့်အံ့သြဖွယ် ရာအမှုတို့ကိုငါပြသော်လည်း၊-
4 ೪ ಫರೋಹನು ನಿಮ್ಮ ಮಾತನ್ನು ಕೇಳುವುದಿಲ್ಲ. ಆಗ ನಾನು ಐಗುಪ್ತದೇಶದವರನ್ನು ಬಾಧಿಸಿ, ಅವರಿಗೆ ಮಹಾಶಿಕ್ಷೆಗಳನ್ನು ವಿಧಿಸಿ, ನನ್ನ ಜನರಾಗಿರುವ ಇಸ್ರಾಯೇಲರ ಸೈನ್ಯವನ್ನೆಲ್ಲಾ ಐಗುಪ್ತದೇಶದಿಂದ ಹೊರತರುವೆನು.
၄သူသည်သင်တို့၏စကားကိုနားမထောင် ဘဲနေလိမ့်မည်။ ထိုအခါအီဂျစ်ပြည်တွင်ငါ၏တန်ခိုးကို ပြ၍ ပြည်သူပြည်သားတို့ကိုပြင်းထန်စွာ ဒဏ်ခတ်လျက် ငါ၏လူမျိုးတော်ဖြစ်သော ဣသရေလအမျိုးသားဗိုလ်ခြေအပေါင်း တို့ကိုအီဂျစ်ပြည်မှထုတ်ဆောင်မည်။-
5 ೫ ನಾನು ಐಗುಪ್ತ್ಯರಿಗೆ ವಿರೋಧವಾಗಿ ಕೈಚಾಚಿ ಅವರ ಮಧ್ಯದಿಂದ ಇಸ್ರಾಯೇಲರನ್ನು ಹೊರತಂದಾಗ ನಾನು ಯೆಹೋವನು ಎಂಬುವುದನ್ನು ಐಗುಪ್ತ್ಯರು ತಿಳಿದುಕೊಳ್ಳುವರು” ಅಂದನು.
၅ထိုသို့အီဂျစ်အမျိုးသားတို့အားတန်ခိုး ကိုပြ၍ ဣသရေလအမျိုးသားတို့ကိုထုတ် ဆောင်သောအခါ၊ ငါသည်ထာဝရဘုရား ဖြစ်ကြောင်းအီဂျစ်အမျိုးသားတို့သိ ကြလိမ့်မည်'' ဟုမိန့်တော်မူ၏။-
6 ೬ ಯೆಹೋವನ ಆಜ್ಞೆಯಂತೆಯೇ ಮೋಶೆ ಮತ್ತು ಆರೋನರು ಮಾಡಿದರು.
၆မောရှေနှင့်အာရုန်တို့သည်ထာဝရဘုရား မိန့်မှာတော်မူသည့်အတိုင်း ဘုရင်အားလျှောက် ထားကြ၏။-
7 ೭ ಅವರು ಫರೋಹನ ಹತ್ತಿರ ಮಾತನಾಡಿದ ಕಾಲದಲ್ಲಿ ಮೋಶೆ ಎಂಬತ್ತು ವರ್ಷದವನೂ ಮತ್ತು ಆರೋನನು ಎಂಭತ್ತಮೂರು ವರ್ಷದವನೂ ಆಗಿದ್ದರು.
၇ဘုရင်ထံသို့ဝင်၍လျှောက်ထားချိန်၌မောရှေ သည် အသက်ရှစ်ဆယ်၊ အာရုန်သည်အသက်ရှစ် ဆယ်သုံးနှစ်ရှိကြသတည်း။
8 ೮ ಯೆಹೋವನು ಮೋಶೆ ಹಾಗೂ ಆರೋನರ ಸಂಗಡ ಮಾತನಾಡಿ,
၈ထာဝရဘုရားကမောရှေနှင့်အာရုန်တို့ အား၊-
9 ೯ “ಫರೋಹನು ನಿಮಗೆ ‘ನಾನು ನಿಮ್ಮ ಮಾತನ್ನು ನಂಬುವಂತೆ ನೀವು ಮಹತ್ಕಾರ್ಯವನ್ನು ನನ್ನ ಮುಂದೆ ಮಾಡಬೇಕು’ ಎಂದು ಹೇಳಿದರೆ ಮೋಶೆಯು ಆರೋನನಿಗೆ, ‘ನಿನ್ನ ಕೈಯಲ್ಲಿರುವ ಕೋಲನ್ನು ಫರೋಹನ ಮುಂದೆ ನೆಲದಲ್ಲಿ ಹಾಕು’ ಎಂದು ಹೇಳಬೇಕು. ಅದು ಸರ್ಪವಾಗುವುದು” ಎಂದು ಆಜ್ಞಾಪಿಸಿದನು.
၉``အကယ်၍ဖာရောဘုရင်က`ငါယုံနိုင်ရန် နိမိတ်လက္ခဏာကိုပြလော့' ဟုဆိုလျှင်သင် သည်အာရုန်အား`ဘုရင်ရှေ့၌သင်၏တောင် ဝှေးကိုပစ်ချရန်ပြောလော့။ တောင်ဝှေးသည် မြွေဖြစ်လိမ့်မည်'' ဟူ၍မိန့်တော်မူ၏။-
10 ೧೦ ಮೋಶೆ ಆರೋನರು ಫರೋಹನ ಬಳಿಗೆ ಹೋಗಿ ತಮಗೆ ಆಜ್ಞಾಪಿಸಿದಂತೆಯೇ ಮಾಡಿದರು. ಆರೋನನು ತನ್ನ ಕೋಲನ್ನು ಫರೋಹನ ಮತ್ತು ಅವನ ಪರಿವಾರದವರ ಮುಂದೆ ನೆಲದಲ್ಲಿ ಹಾಕಿದಾಗ ಅದು ಸರ್ಪವಾಯಿತು.
၁၀မောရှေနှင့်အာရုန်တို့သည်ထာဝရဘုရား မိန့်တော်မူသည်အတိုင်း ဘုရင်ထံသို့ဝင်ကြ ၏။ ထိုနောက်အာရုန်သည်သူ၏တောင်ဝှေးကို ဘုရင်နှင့်မှူးမတ်များရှေ့တွင်ပစ်ချလိုက် ရာတောင်ဝှေးသည်မြွေဖြစ်လေ၏။-
11 ೧೧ ಫರೋಹನು ಐಗುಪ್ತದೇಶದ ವಿದ್ವಾಂಸರನ್ನೂ ಮತ್ತು ಮಂತ್ರವಾದಿಗಳನ್ನೂ ಕರೆಯಿಸಿದಾಗ ಆ ಮಾಂತ್ರಿಕರು ತಮ್ಮ ಮಂತ್ರವಿದ್ಯೆಗಳಿಂದ ಅದೇ ರೀತಿಯಾಗಿ ಮಾಡಿದರು.
၁၁ထိုအခါဘုရင်သည်သူ၏ပညာရှိများနှင့် မှော်ဆရာများကိုဆင့်ခေါ်၍၊ သူတို့သည် မှော်အတတ်ဖြင့်အလားတူပညာစွမ်းကို ပြကြ၏။-
12 ೧೨ ಅವರು ತಮ್ಮ ತಮ್ಮ ಕೋಲುಗಳನ್ನು ನೆಲಕ್ಕೆ ಹಾಕಲು ಅವು ಸರ್ಪಗಳಾದವು. ಆದರೆ ಆರೋನನ ಕೋಲು ಅವರ ಕೋಲುಗಳನ್ನು ನುಂಗಿಬಿಟ್ಟಿತು.
၁၂ထိုသူတို့သည်မိမိတို့၏တောင်ဝှေးများကို ပစ်ချရာ တောင်ဝှေးများသည်မြွေဖြစ်ကြ ကုန်၏။ သို့ရာတွင်အာရုန်၏မြွေကထိုသူ တို့၏မြွေများကိုမျိုလိုက်လေ၏။-
13 ೧೩ ಯೆಹೋವನು ಮೊದಲು ಹೇಳಿದಂತೆಯೇ ಫರೋಹನ ಹೃದಯವು ಕಠಿಣವಾಯಿತು. ಅವನು ಅವರ ಮಾತಿಗೆ ಕಿವಿಗೊಡದೆ ಹೋದನು.
၁၃ဘုရင်သည်ထာဝရဘုရားမိန့်တော်မူသည့် အတိုင်း မောရှေနှင့်အာရုန်တို့၏စကားကို နားမထောင်ဘဲခေါင်းမာလျက်နေလေ၏။
14 ೧೪ ಆಗ ಯೆಹೋವನು ಮೋಶೆಗೆ, “ಫರೋಹನ ಹೃದಯವು ಕಠಿಣವಾಗಿದೆ, ತಾನು ಜನರಿಗೆ ಹೋಗುವುದಕ್ಕೆ ಅಪ್ಪಣೆಕೊಡುವುದಿಲ್ಲ ಎನ್ನುತ್ತಾನೆ.
၁၄ထိုနောက်ထာဝရဘုရားကမောရှေအား``ဘုရင် သည်အလွန်ခေါင်းမာလျက်ရှိ၏။ သူသည်ဣသ ရေလအမျိုးသားတို့အားမလွှတ်ဘဲနေ၏။-
15 ೧೫ ನೀನು ಬೆಳಿಗ್ಗೆ ಫರೋಹನ ಬಳಿಗೆ ಹೋಗು, ಅವನು ನೀರಿನ ಬಳಿಗೆ ಇಳಿದು ಬರುತ್ತಾನಲ್ಲಾ. ಸರ್ಪವಾಗಿ ಮಾರ್ಪಾಟುಮಾಡಿದ ಆ ಕೋಲನ್ನು ನಿನ್ನ ಕೈಯಲ್ಲಿ ತೆಗೆದುಕೊಂಡು ಅವನನ್ನು ಎದುರುಗೊಳ್ಳುವುದಕ್ಕೆ ನೈಲ್ ನದಿ ತೀರದಲ್ಲಿ ನಿಂತುಕೊಂಡು ಅವನಿಗೆ ಹೀಗನ್ನಬೇಕು,
၁၅နံနက်တွင်ဘုရင်သည်နိုင်းမြစ်ကမ်းသို့ဆင်း သောအခါသူ့ထံသို့သွားလော့။ မြွေအဖြစ် သို့ပြောင်းခဲ့သောတောင်ဝှေးကိုယူဆောင်၍ မြစ်ကမ်းပေါ်တွင်စောင့်နေလော့။-
16 ೧೬ ‘ಇಬ್ರಿಯರ ದೇವರಾದ ಯೆಹೋವನು ನನ್ನನ್ನು ನಿನ್ನ ಬಳಿಗೆ ಕಳುಹಿಸಿ, ಅರಣ್ಯದಲ್ಲಿ ತನ್ನನ್ನು ಆರಾಧಿಸುವಂತೆ ತನ್ನ ಜನರಿಗೆ ಅಪ್ಪಣೆಕೊಡಬೇಕೆಂದು ನಿನಗೆ ಆಜ್ಞಾಪಿಸಿದ್ದಾನಷ್ಟೇ. ಈ ವರೆಗೂ ನೀನು ಅದನ್ನು ಲಕ್ಷ್ಯಕ್ಕೆ ತರಲಿಲ್ಲ.
၁၆ဘုရင်အား`ဟေဗြဲအမျိုးသားတို့၏ဘုရားသခင်ထာဝရဘုရားက မိမိ၏လူမျိုးတော် သည်တောကန္တာရတွင်မိမိအားဝတ်ပြုနိုင်ရန် သွားခွင့်ပေးရန် ကျွန်ုပ်ကိုပြောခိုင်းသည်။ သို့ရာ တွင်ကိုယ်တော်သည်ယခုတိုင်အောင်အမိန့် တော်ကိုမလိုက်နာပါ။-
17 ೧೭ ಆದುದರಿಂದ ಯೆಹೋವನು ಹೇಳುವುದೇನೆಂದರೆ, ನೀನು ನನ್ನನ್ನು ಯೆಹೋವನೆಂದು ತಿಳಿದುಕೊಳ್ಳುವುದಕ್ಕಾಗಿ ನನ್ನ ಸೇವಕನ ಕೈಯಲ್ಲಿರುವ ಕೋಲಿನಿಂದ ನೈಲ್ ನದಿಯ ನೀರನ್ನು ಹೊಡೆಸುವೆನು. ಆಗ ಅದು ರಕ್ತವಾಗುವುದು.
၁၇အရှင်မင်းကြီး၊ ထာဝရဘုရားကငါသည် ထာဝရဘုရားဖြစ်ကြောင်း ယခုငါပြု မည့်အမှုဖြင့်သင်သိရလိမ့်မည်ဟုမိန့်တော် မူပြီ။ ကျွန်ုပ်သည်ဤတောင်ဝှေးနှင့်မြစ်ရေကို ရိုက်သဖြင့်ရေသည်သွေးဖြစ်လိမ့်မည်။-
18 ೧೮ ನದಿಯಲ್ಲಿರುವ ಮೀನುಗಳು ಸಾಯುವವು. ನದಿಯು ಹೊಲಸಾಗಿ ನಾರುವುದು. ಅದನ್ನು ಕುಡಿಯುವುದಕ್ಕೆ ಐಗುಪ್ತರಿಗೆ ಹೇಸಿಗೆಯಾಗುವುದು’ ಎಂದು ಹೇಳಬೇಕು” ಅಂದನು.
၁၈မြစ်ထဲရှိငါးတို့သေ၍မြစ်ရေသည်နံစော် သဖြင့်၊ အီဂျစ်ပြည်သားတို့သည်ထိုရေကို မသောက်သုံးနိုင်ဖြစ်ရလိမ့်မည်' ဟုဘုရင် ကိုပြောလော့'' ဟူ၍မိန့်တော်မူ၏။
19 ೧೯ ಯೆಹೋವನು ಮೋಶೆಯ ಸಂಗಡ ಮಾತನಾಡಿ, “ನೀನು ಆರೋನನಿಗೆ ‘ನಿನ್ನ ಕೋಲನ್ನು ತೆಗೆದುಕೊಂಡು ಐಗುಪ್ತದೇಶದಲ್ಲಿರುವ ಹೊಳೆ, ಕಾಲುವೆ, ಕೆರೆ, ಕೊಳ ಮೊದಲಾದ ನೀರಿರುವ ಎಲ್ಲಾ ಸ್ಥಳಗಳ ಮೇಲೆ ಅದನ್ನು ಚಾಚು’ ಎಂದು ಹೇಳಬೇಕು. ಅವನು ಚಾಚುವಾಗ ಆ ನೀರೆಲ್ಲಾ ರಕ್ತವಾಗುವುದು. ಐಗುಪ್ತದೇಶದಲ್ಲೆಲ್ಲಾ ಮರದ ಪಾತ್ರೆಗಳಲ್ಲಿಯೂ, ಕಲ್ಲಿನ ಪಾತ್ರೆಗಳಲ್ಲಿಯೂ ಇರುವ ನೀರು ರಕ್ತವಾಗುವುದು” ಅಂದನು.
၁၉တစ်ဖန်ထာဝရဘုရားက မောရှေကိုမိန့်တော် မူသည်မှာ ``အာရုန်အား သင်သည်အီဂျစ်ပြည် တွင်ရှိသမျှသော မြစ်၊ ချောင်း၊ အင်း၊ အိုင်ရေ လှောင်ကန်တို့၏ရေပေါ်၌ တောင်ဝှေးကိုကိုင်၍ လက်ဆန့်လော့။ တစ်ပြည်လုံးတွင်သစ်သားခွက်၊ ကျောက်ခွက်တို့ပါမကျန်ရှိသမျှသောရေ တို့သည်သွေးဖြစ်လိမ့်မည်' ဟုပြောလော့'' ဟူ၍မိန့်တော်မူ၏။
20 ೨೦ ಮೋಶೆ ಮತ್ತು ಆರೋನರು ಯೆಹೋವನು ತಮಗೆ ಆಜ್ಞಾಪಿಸಿದಂತೆಯೇ ಮಾಡಿದರು. ಆರೋನನು ಫರೋಹನ ಮತ್ತು ಅವನ ಪರಿವಾರದ ಮುಂದೆ ಕೋಲನ್ನು ಎತ್ತಿ, ನೈಲ್ ನದಿಯಲ್ಲಿರುವ ನೀರನ್ನು ಹೊಡೆಯಲು ಅದೆಲ್ಲಾ ರಕ್ತವಾಯಿತು.
၂၀မောရှေနှင့်အာရုန်တို့သည် ထာဝရဘုရားမိန့် တော်မူသည့်အတိုင်းလိုက်နာဆောင်ရွက်ကြ၏။ အာရုန်သည်ဘုရင်နှင့်သူ၏မှူးမတ်များ၏ ရှေ့တွင်တောင်ဝှေးကိုမြှောက်၍ မြစ်ရေကိုရိုက် ရာမြစ်ရေသည်သွေးဖြစ်လေ၏။-
21 ೨೧ ಅದರಲ್ಲಿದ್ದ ಮೀನುಗಳು ಸತ್ತುಹೋದವು. ನದಿಯು ದುರ್ವಾಸನೆಗೊಂಡಿದ್ದರಿಂದ ಐಗುಪ್ತರು ನೈಲ್ ನದಿಯ ನೀರನ್ನು ಕುಡಿಯಲಾರದೆ ಹೋದರು. ಐಗುಪ್ತ ದೇಶದಲ್ಲೆಲ್ಲಾ ರಕ್ತವೇ ಕಾಣುತಿತ್ತು.
၂၁မြစ်ထဲ၌ရှိသောငါးတို့သည်သေကုန်၏။ ရေ သည်အလွန်အနံ့ဆိုးသဖြင့် အီဂျစ်ပြည် သားတို့သည်ထိုရေကိုမသောက်သုံးနိုင် ကြချေ။ အီဂျစ်တစ်ပြည်လုံးနေရာအနှံ့ တွင်သွေးနှင့်ပြည့်လေ၏။-
22 ೨೨ ಆದರೆ ಐಗುಪ್ತ್ಯ ದೇಶದ ಮಾಂತ್ರಿಕರು ತಮ್ಮ ಮಂತ್ರವಿದ್ಯೆಗಳಿಂದ ಅದೇ ರೀತಿಯಾಗಿ ಮಾಡಿದ್ದರಿಂದ ಫರೋಹನ ಹೃದಯವು ಇನ್ನೂ ಕಠಿಣವಾಯಿತು. ಯೆಹೋವನು ಹೇಳಿದಂತೆಯೇ ಅವನು ಮೋಶೆ ಮತ್ತು ಆರೋನರ ಮಾತನ್ನು ಕೇಳದೆ ಹೋದನು.
၂၂သို့ရာတွင်အီဂျစ်မှော်ဆရာတို့ကလည်း၊ မိမိတို့၏အတတ်ဖြင့်ရေကိုသွေးဖြစ်စေ ကြရာဘုရင်သည် ယခင်နည်းတူခေါင်းမာ မြဲခေါင်းမာလျက်နေ၏။ ထာဝရဘုရား မိန့်တော်မူသည့်အတိုင်း သူသည်မောရှေ နှင့်အာရုန်တို့၏စကားကိုနားမထောင် ဘဲနေလေ၏။-
23 ೨೩ ಫರೋಹನು ಆ ಮಹತ್ಕಾರ್ಯವನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳದೆ ತನ್ನ ಮನೆಗೆ ಹೊರಟುಹೋದನು.
၂၃ဘုရင်သည်ထိုအမှုအရာကိုအရေးမ ကြီးသောကိစ္စဟူ၍ သဘောပိုက်ကာနန်း တော်သို့ပြန်သွားလေ၏။-
24 ೨೪ ಐಗುಪ್ತ್ಯರೆಲ್ಲರೂ ನದಿಯ ನೀರನ್ನು ಕುಡಿಯಲಾರದೆ ಕುಡಿಯುವ ನೀರಿಗಾಗಿ ನದಿಯ ಸುತ್ತಲೂ ಗುಂಡಿಗಳನ್ನು ತೆಗೆದರು.
၂၄အီဂျစ်ပြည်သားတို့သည်မြစ်ရေကိုမသောက် သုံးနိုင်ကြသဖြင့်၊ မြစ်ကမ်းတစ်လျှောက် တွင်သောက်ရေအတွက်တွင်းတူးကြ၏။
25 ೨೫ ಯೆಹೋವನು ನೈಲ್ ನದಿಯನ್ನು ಹೊಡೆದ ಮೇಲೆ ಏಳು ದಿನಗಳು ತುಂಬಿದವು.
၂၅ထာဝရဘုရားသည်မြစ်ကိုသွေးဖြစ်စေ ပြီးနောက် ခုနစ်ရက်ကြာလေ၏။