< ವಿಮೋಚನಕಾಂಡ 39 >

1 ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರಗಳಿಂದ ದೇವಮಂದಿರದ ಸೇವೆಗೆ ಅಲಂಕಾರವಾದ ವಸ್ತ್ರಗಳನ್ನೂ ಮತ್ತು ಆರೋನನಿಗೆ ಪರಿಶುದ್ಧ ವಸ್ತ್ರಗಳನ್ನೂ ಮಾಡಿದರು.
သန့်ရှင်းရာဌာန၌ အမှုတော်ကို ဆောင်သောအခါ၊ ဝတ်ရသောအဝတ်ကို၎င်း၊ အာရုန်ဝတ်ဘို့ သန့်ရှင်းသော အဝတ်ကို၎င်း၊ ထာဝရဘုရားသည် မောရှေအား မှာထားတော်မူသည်အတိုင်း၊ ပြာသောအထည်၊ မောင်းသောအထည်၊ နီသောအထည်နှင့် လုပ်လေ၏။
2 ಮಹಾಯಾಜಕನ ಏಫೋದೆಂಬ ಕವಚವನ್ನು ನಯವಾಗಿ ಹೊಸೆದ ಹತ್ತಿಯ ಬಟ್ಟೆಯಿಂದಲೂ ಚಿನ್ನದ ದಾರದಿಂದಲೂ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರಗಳಿಂದಲೂ ಮಾಡಿದರು.
ပြာသောအထည်၊ မောင်းသောအထည်၊ နီသောအထည်၊ ပိတ်ချောနှင့် ယဇ်ပုရောဟိတ် သင်တိုင်းကို လုပ်ရာတွင်၊
3 ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರದೊಡನೆಯೂ ಹತ್ತಿಯ ಬಟ್ಟೆಯೊಡನೆಯೂ ಕಸೂತಿ ಕೆಲಸದವರ ಪದ್ಧತಿಯ ಮೇರೆಗೆ ಕಸೂತಿ ಕೆಲಸವನ್ನು ಮಾಡುವುದಕ್ಕಾಗಿ ಬಂಗಾರವನ್ನು ಬಡಿದು ಹಗುರವಾದ ತಗಡುಗಳನ್ನು ಮಾಡಿ ಸಣ್ಣ ಸಣ್ಣ ಎಳೆಗಳಾಗಿ ಕತ್ತರಿಸಿದರು.
ရွှေကို အပြားခတ်၍ ရွှေကြိုးကို လှီးပြီးမှ၊ ပြာသောအထည်၊ မောင်းသောအထည်၊ နီသောအထည်၊ ပိတ်ချောတို့ကို ထူးဆန်းစွာ အပြောက်ထိုးလေ၏။
4 ಏಫೋದ್ ಕವಚಕ್ಕೆ ಹೆಗಲಿನ ಮೇಲೆ ಎರಡು ಪಟ್ಟಿಗಳನ್ನು ಮಾಡಿದರು; ಅದರ ಎರಡು ಅಂಚುಗಳು ಜೋಡಿಸಲ್ಪಟ್ಟಿದ್ದವು.
သိုင်းကြိုးနှစ်ပင်ကို လုပ်၍ သင်တိုင်းအပေါ် နားချင်းတွဲမိစေခြင်းငှာ၊ တဘက်တချက်ကို ဆွဲချုပ်လေ၏။
5 ಕವಚದ ಮೇಲಿರುವ ಕಸೂತಿ ನಡುಕಟ್ಟು ಕವಚಕ್ಕೆ ಏಕವಾಗಿದ್ದು ಅದರಂತೆಯೇ ನಯವಾಗಿ ಹೊಸೆದ ಹತ್ತಿಯ ಬಟ್ಟೆಯಿಂದಲು, ಚಿನ್ನದ ದಾರಗಳಿಂದಲು ಹಾಗೂ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರದಿಂದಲೂ ಮಾಡಲ್ಪಟ್ಟಿತ್ತು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅದನ್ನು ಮಾಡಿದರು.
ထာဝရဘုရားသည် မောရှေအား မှာထားတော်မူသည်အတိုင်း၊ သင်တိုင်းအပေါ်နား၌ ထူးဆန်းသော ရင်စည်းကိုလည်း သင်တိုင်းကိုယ်ကဲ့သို့ ရွှေနှင့်၎င်း၊ ပြာသောအထည်၊ မောင်းသောအထည်၊ နီသောအထည်၊ ပိတ်ချောတို့နှင့်၎င်း လုပ်လေ၏။
6 ಮುದ್ರಾಕ್ಷವನ್ನು ಕೆತ್ತುವ ರೀತಿಯಲ್ಲಿ ಗೋಮೇಧಕರತ್ನಗಳಲ್ಲಿ ಇಸ್ರಾಯೇಲನ ಹನ್ನೆರಡು ಮಕ್ಕಳ ಹೆಸರುಗಳನ್ನು ಕೆತ್ತಿ ಆ ರತ್ನಗಳನ್ನು ಕುಂದಣದಲ್ಲಿ ಹಚ್ಚಿದರು.
ရှဟံကျောက်နှစ်လုံးကို သွေး၍ တံဆိပ်ပေါ်မှာ အက္ခရာတင်သကဲ့သို့ ဣသရေလအမျိုး၏ နာမတို့ကို အက္ခရာတင်ပြီးမှ၊ ရွှေကျောက်အိုး၌ ထည့်လေ၏။
7 ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಆ ರತ್ನಗಳನ್ನು ಇಸ್ರಾಯೇಲರ ಜ್ಞಾಪಕಾರ್ಥವಾಗಿ ಅವುಗಳನ್ನು ಏಫೋದ್ ಕವಚದ ಹೆಗಲಿನ ಮೇಲಿರುವ ಪಟ್ಟಿಗಳಲ್ಲಿ ಬಿಗಿಸಿದನು.
ထာဝရဘုရားသည် မောရှေအား မှာထားတော်မူသည်အတိုင်း၊ ဣသရေလအမျိုးသားတို့ကို အောက်မေ့ဘို့ရာ၊ ထိုကျောက်နှစ်လုံးကို သင်တိုင်းသိုင်းကြိုးအပေါ်မှာ တပ်လေ၏။
8 ಏಫೋದ್ ಕವಚದಂತೆಯೇ ಕಸೂತಿಯಿಂದಲೂ ಕೆಲಸದಿಂದ ಚಿನ್ನದ ದಾರಗಳಿಂದಲೂ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರಗಳಿಂದಲೂ ನಯವಾದ ನಾರಿನ ಬಟ್ಟೆಯಲ್ಲಿ ಎದೆಯಪದಕವನ್ನು ಮಾಡಿದನು.
ရွှေနှင့်၎င်း၊ ပြာသောအထည်၊ မောင်းသောအထည်၊ နီသောအထည်၊ ပိတ်ချောနှင့်၎င်း၊ သင်တိုင်းကို လုပ်သည်နည်းတူ၊ ရင်ဖုံးကို ထူးဆန်းစွာ လုပ်လေ၏။
9 ಅದು ಚಚ್ಚೌಕವಾಗಿತ್ತು. ಆ ಎದೆಯಪದಕವು ಎರಡು ಪದರುಗಳ್ಳುಳದ್ದಾಗಿತ್ತು; ಅದು ಒಂದು ಗೇಣು ಉದ್ದವೂ ಒಂದು ಗೇಣು ಅಗಲವೂ ಆಗಿತ್ತು.
ရင်ဖုံးနှစ်ထပ်ခေါက်လျက်၊ အလျားတထွာ၊ အနံတထွာ၊ စတုရန်းလေးထောင့်ဖြစ်၏။
10 ೧೦ ಅದರ ಮುಂಭಾಗದಲ್ಲಿ ನಾಲ್ಕು ಸಾಲುಗಳಾಗಿ ರತ್ನಗಳನ್ನು ಇರಿಸಿದರು. ಮೊದಲನೆಯ ಸಾಲಿನಲ್ಲಿ ಮಾಣಿಕ್ಯ, ಪುಷ್ಯರಾಗ ಮತ್ತು ಸ್ಫಟಿಕಗಳು.
၁၀ထိုရင်ဖုံး၌ ကျောက်မြတ်ကို လေးတန်း စီလေ၏။ ပဌမ အတန်းကား ကျောက်နီ၊ ဥဿဘယား၊ ပတ္တမြား။
11 ೧೧ ಎರಡನೆಯ ಸಾಲಿನಲ್ಲಿ ಪಚ್ಚೆ, ನೀಲಮಣಿ ಮತ್ತು ವಜ್ರಗಳು.
၁၁ဒုတိယအတန်းကား မြ၊ နီလာ၊ စိန်။
12 ೧೨ ಮೂರನೆಯ ಸಾಲಿನಲ್ಲಿ ಸುವರ್ಣರತ್ನ, ಸುಗಂಧಿ ಮತ್ತು ಪದ್ಮರಾಗಗಳು.
၁၂တတိယအတန်းကား ဝှါကိနသု၊ မဟူရာ၊ ဂေါမိတ်။
13 ೧೩ ನಾಲ್ಕನೆಯ ಸಾಲಿನಲ್ಲಿ ಪೀತರತ್ನ, ಬೆರುಲ್ಲ ಮತ್ತು ವೈಡೂರ್ಯಗಳು ಇದ್ದವು. ಈ ರತ್ನಗಳನ್ನು ಕುಂದಣಗಳಲ್ಲಿ ಇರಿಸಿದರು.
၁၃စတုတ္ထအတန်းကား မျက်ရွဲ၊ ကြောင်၊ နဂါးသွဲ့ဖြစ်၍၊ အသီးအသီးတို့ကို ရွှေအိုး၌ စီလေ၏။
14 ೧೪ ಇಸ್ರಾಯೇಲರ ಕುಲಗಳ ಸಂಖ್ಯೆಯ ಪ್ರಕಾರ ಹನ್ನೆರಡು ರತ್ನಗಳಿದ್ದವು; ಮುದ್ರಾಕ್ಷಗಳಲ್ಲಿ ಕೆತ್ತುವ ರೀತಿಯಲ್ಲಿ ಒಂದೊಂದು ರತ್ನದಲ್ಲಿ ಒಂದೊಂದು ಕುಲದ ಹೆಸರು ಕೆತ್ತಲ್ಪಟ್ಟಿತ್ತು.
၁၄ဣသရေလအမျိုး တဆယ်နှစ်မျိုးရှိသည်အတိုင်း တံဆိပ်ပေါ်မှာ အက္ခရာတင်သကဲ့သို့၊ ထိုကျောက်တို့၌ ထိုတဆယ်နှစ်ပါးသော နာမည်အသီးအသီးတို့ကို တင်လျက် ကျောက်တလုံးလျှင် နာမည် တပါးစီပါ၏။
15 ೧೫ ಎದೆಪದಕದ ಮೇಲ್ಗಡೆಯಲ್ಲಿ ಹುರಿಗಳಂತಿರುವ ಚೊಕ್ಕಬಂಗಾರದ ಸರಪಣಿಗಳನ್ನು ನೇಯ್ಗೆಯ ಕೆಲಸದಿಂದ ಮಾಡಿದರು.
၁၅ရင်ဖုံးအပေါ်ထောင့်နှစ်ခု၌၊ ရွှေနှစ်ကွင်းကို၎င်း၊ ရွှေကျောက်အိုး နှစ်လုံးကို၎င်း ကျစ်သော ရွှေကြိုး နှစ်ပင်ကို၎င်း လုပ်ပြီးမှ၊ ထိုရွှေကွင်း၌ တပ်၍ သင်တိုင်းသိုင်းကြိုးအပေါ်မှာရှိသော ကျောက်အိုးတို့၌ တွဲလေ၏။
16 ೧೬ ಎರಡು ಚಿನ್ನದ ಬಳೆಗಳನ್ನೂ ಎರಡು ಚಿನ್ನದ ಉಂಗುರಗಳನ್ನೂ ಮಾಡಿ ಆ ಉಂಗುರಗಳನ್ನು ಎದೆಪದಕದ ಎರಡು ಮೂಲೆಗಳಿಗೆ ಜೋಡಿಸಿದರು.
၁၆
17 ೧೭ ಹೆಣಿಗೇಕೆಲಸದ ಆ ಎರಡು ಚಿನ್ನದ ಸರಪಣಿಗಳನ್ನು ಪದಕದ ಮೂಲೆಗಳಲ್ಲಿರುವ ಉಂಗುರಗಳಿಗೆ ಜೋಡಿಸಿದರು.
၁၇
18 ೧೮ ಹೆಣಿಗೇಕೆಲಸದ ಆ ಸರಪಣಿಗಳ ಅಂಚುಗಳನ್ನು ಏಫೋದ್ ಕವಚದ ಹೆಗಲಿನ ಪಟ್ಟಿಗಳಲ್ಲಿರುವ ಎರಡು ಬಳೆಗಳ ಮುಂಭಾಗಕ್ಕೆ ಜೋಡಿಸಿದರು.
၁၈
19 ೧೯ ಅದಲ್ಲದೆ ಎರಡು ಚಿನ್ನದ ಉಂಗುರಗಳನ್ನು ಮಾಡಿ ಪದಕದ ಒಳಗಣ ಅಂಚಿನ ಮೂಲೆಗಳಲ್ಲಿ ಕವಚದ ಹತ್ತಿರದಲ್ಲೇ ಇಟ್ಟರು.
၁၉တဖန် ရွှေနှစ်ကွင်းကို လုပ်၍ သင်တိုင်းအောက်နားမှာရှိသော ရင်ဖုံးအောက်ထောင့်နှစ်ခု၌ တပ်လေ၏။
20 ೨೦ ಅವರು ಬೇರೆ ಎರಡು ಚಿನ್ನದ ಉಂಗುರಗಳನ್ನು ಮಾಡಿ ಕವಚದ ಎರಡು ಹೆಗಲಿನ ಪಟ್ಟಿಗಳ ಮುಂಭಾಗದ ಕೆಳಗೆ, ಏಫೋದ್ ಕವಚವನ್ನು ಜೋಡಿಸಿರುವ ಸ್ಥಳದ ಹತ್ತಿರ ಆ ಕಸೂತಿಯ ನಡುಕಟ್ಟಿನ ಮೇಲ್ಗಡೆಯಲ್ಲಿ ಇರಿಸಿದರು.
၂၀အခြားသောရွှေနှစ်ကွင်းကိုလည်း လုပ်၍ သင်တိုင်းအရှေ့ဘက်အောက်နားနှင့် ထူးဆန်းသော ရင်စည်းအပေါ်နားဆက်မှီရာတွင် သင်တိုင်းကို တဘက်တချက်၌ တပ်လေ၏။
21 ೨೧ ಎದೆಯಪದಕವು ಕಸೂತಿಯ ನಡುಕಟ್ಟಿನ ಮೇಲ್ಗಡೆಯಲ್ಲಿ ಬಿಗಿಯಾಗಿರುವಂತೆಯೂ ಕವಚದಿಂದ ಕಳಚಿಬೀಳದಂತೆಯೂ ಅದರ ಉಂಗುರಗಳನ್ನು ಕವಚದ ಉಂಗುರಗಳಿಗೆ ನೀಲಿ ದಾರದಿಂದ ಕಟ್ಟಿದರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಇದನ್ನು ಮಾಡಿದರು.
၂၁ရင်ဖုံးရွှေနှစ်ကွင်းကို၊ သင်တိုင်းရွှေနှစ်ကွင်းနှင့် တွဲ၍၊ ပြာသောကြိုးဖြင့် ပြီးစေ၏။ ထိုသို့ ထာဝရဘုရား သည် မောရှေအား မှာထားတော်မူသည်အတိုင်း၊ ရင်ဖုံးသည် ထူးဆန်းသော ရင်စည်းအပေါ်မှာ ဆွဲ၍ သင်တိုင်းနှင့် မကွာဘဲ အမြဲနေလေ၏။
22 ೨೨ ಬೆಚಲೇಲನು ಏಫೋದ್ ಕವಚದ ಸಂಗಡ ತೊಟ್ಟುಕೊಳ್ಳಬೇಕಾದ ನಿಲುವಂಗಿಯನ್ನು ನೀಲಿಬಣ್ಣದ ಬಟ್ಟೆಯಿಂದಲೇ ನೇಕಾರನ ಕೆಲಸದಿಂದ ಮಾಡಿದನು.
၂၂ထိုမှတပါး၊ ပြာသောအထည်ကို ရက်ပြီးမှ၊ သင်တိုင်းနှင့်ဆိုင်သော ဝတ်လုံကို ထိုအထည်နှင့်သာ လုပ်လေ၏။
23 ೨೩ ತಲೆತೂರಿಸುವುದಕ್ಕೆ ಅದರಲ್ಲಿ ಕೊರಳು ಪಟ್ಟಿಯನ್ನು ಮಾಡಿ ಅದು ಹರಿಯದಂತೆ ಅದರ ಸುತ್ತಲೂ ನೇಯ್ಗೆ ಕಸೂತಿಯನ್ನು ಹಾಕಿದನು.
၂၃ဝတ်လုံ၌ လည်စွပ်ပါ၍ လည်စွပ်ကို မစုတ်စေခြင်းငှာ၊ သံချပ်လည်စွပ် ကွပ်သကဲ့သို့ ကွပ်လေ၏။
24 ೨೪ ನಿಲುವಂಗಿಯ ಅಂಚಿನ ಸುತ್ತಲೂ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರಗಳಿಂದ ದಾಳಿಂಬೆ ಹಣ್ಣಿನಂತೆ ಚೆಂಡುಗಳನ್ನು ಮಾಡಿದರು.
၂၄ပြာသောအထည်၊ မောင်းသောအထည်၊ နီသောအထည်၊ ပိတ်ချောနှင့်လုပ်သော သလဲသီးများကို၎င်း၊
25 ೨೫ ಮತ್ತು ಚೊಕ್ಕ ಬಂಗಾರದಿಂದ ಗೆಜ್ಜೆಗಳನ್ನು ಮಾಡಿ ನಿಲುವಂಗಿಯ ಅಂಚಿನಲ್ಲಿ ದಾಳಿಂಬೆ ಚೆಂಡುಗಳ ನಡುವೆ ಇಟ್ಟರು.
၂၅ရွှေစင်ဆည်းလည်းများကို၎င်း၊ ဝတ်လုံအောက်စွန်းနားပတ်လည်၌၊
26 ೨೬ ಚಿನ್ನದ ಗೆಜ್ಜೆಯೂ ದಾಳಿಂಬೆಯಂತಿರುವ ಚೆಂಡೂ ಒಂದಾದ ಮೇಲೆ ಒಂದು ದೇವರ ಸೇವೆಗಾಗಿ ಇರುವ ಆ ನಿಲುವಂಗಿಯ ಅಂಚಿನ ಸುತ್ತಲೂ ಇದ್ದವು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅದನ್ನು ಮಾಡಿದನು.
၂၆သလဲသီးတလုံး၊ ဆည်းလည်းတလုံးစီခြားလျက် အစဉ်အတိုင်း ဆွဲထားသဖြင့်၊ ထာဝရဘုရားသည် မောရှေအား မှာထားတော်မူသည်အတိုင်း၊ အမှုတော်ကို ဆောင်ရသော ဝတ်လုံးကို လုပ်၍ပြီးလေ၏။
27 ೨೭ ಅವರು ಆರೋನನಿಗೂ ಅವನ ಮಕ್ಕಳಿಗೂ ನಯವಾದ ನಾರಿನಿಂದ ನೇಕಾರರ ಕೆಲಸದ ರೀತಿಯಲ್ಲಿ ಮೇಲಂಗಿಗಳನ್ನೂ,
၂၇တဖန် ထာဝရဘုရားသည် မောရှေအား မှာထားတော်မူသည်အတိုင်း၊ အာရုန်နှင့် သူ၏သားတို့အဘို့ ရက်သော ပိတ်ချောအင်္ကျီများကို၎င်း၊
28 ೨೮ ನಯವಾದ ನಾರಿನಿಂದ ಮಹಾಯಾಜಕನ ಮುಂಡಾಸವನ್ನು, ಯಾಜಕರ ಅಲಂಕಾರವಾದ ಮುಂಡಾಸಗಳನ್ನು ಹಾಗೂ ಚಡ್ಡಿಗಳನ್ನು,
၂၈ပိတ်ချောဗေါင်းကို၎င်း၊ တင့်တယ်သောပိတ်ချောဦးထုပ်များကို၎င်း၊ ပိတ်ချောပေါင်းဘီများကို၎င်း၊
29 ೨೯ ಮತ್ತು ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರದಿಂದಲೂ ಕಸೂತಿ ಕೆಲಸದ ರೀತಿಯಲ್ಲಿ ನಡುಕಟ್ಟನ್ನೂ ಮಾಡಿದರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅದನ್ನು ಮಾಡಿದರು.
၂၉ချယ်လှယ်သော ပိတ်ချော၊ အထည်ပြာ၊ အထည်မောင်း၊ အထည်နီဖြင့်ပြီးသော ခါးပန်းကို၎င်း လုပ်လေ၏။
30 ೩೦ ಅವರು ಚೊಕ್ಕ ಬಂಗಾರದಿಂದ ಪರಿಶುದ್ಧ ಕಿರೀಟಕ್ಕೆ ಬಾಸಿಂಗವನ್ನು ಮಾಡಿ ಮುದ್ರೆಯನ್ನು ಕೆತ್ತುವ ರೀತಿಯಲ್ಲಿ ಅದರಲ್ಲಿ, ಯೆಹೋವನಿಗೆ ಮೀಸಲು ಎಂಬ ಲಿಪಿಯನ್ನು ಬರೆದರು.
၃၀မောရှေအား ထာဝရဘုရားမှာထားတော်မူသည်အတိုင်း၊ သန့်ရှင်းသော သင်းကျစ်ပြားကိုလည်း ရွှေစင်နှင့်လုပ်၍ တံဆိပ်ပေါ်မှာ အက္ခရာတင်သကဲ့သို့၊ ထာဝရဘုရားအား သန့်ရှင်းခြင်းဟု အက္ခရာတင်၍၊
31 ೩೧ ಅದನ್ನು ಮುಂಡಾಸಕ್ಕೆ ಜೋಡಿಸುವುದಕ್ಕಾಗಿ ನೀಲಿ ದಾರವನ್ನು ಅದಕ್ಕೆ ಕಟ್ಟಿದರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅದನ್ನು ಮಾಡಿದರು.
၃၁ပြာသောကြိုးနှင့် ဗေါင်းအပေါ်နား၌ ချည်ထားလေ၏။
32 ೩೨ ಈ ರೀತಿಯಲ್ಲಿ ದೇವದರ್ಶನದ ಗುಡಾರದ ಕೆಲಸವೆಲ್ಲಾ ಮುಗಿಯಿತು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಾಯೇಲರು ಅದನ್ನು ಮಾಡಿದರು.
၃၂ထိုသို့ မောရှေအား ထာဝရဘုရား မှာထားတော်မူသည်အတိုင်း၊ ဣသရေလအမျိုးသားတို့သည် ပြု၍ ပရိသတ်စည်းဝေးရာ တဲတော်အလုပ်ရှိသမျှကို ပြီးစီးကြ၏။
33 ೩೩ ಆಗ ಅವರು ಆ ದೇವದರ್ಶನ ಗುಡಾರವನ್ನು ಮೋಶೆಯ ಬಳಿಗೆ ತೆಗೆದುಕೊಂಡು ಬಂದರು. ಗುಡಾರವನ್ನು, ಅದಕ್ಕೆ ಸಂಬಂಧಪಟ್ಟ ಉಪಕರಣಗಳೆಲ್ಲವನ್ನೂ ಅಂದರೆ ಅದರ ಕೊಂಡಿಗಳನ್ನು, ಚೌಕಟ್ಟುಗಳನ್ನು, ಅಗುಳಿಗಳನ್ನು, ಕಂಬಗಳನ್ನು, ಮೆಟ್ಟುವಕಲ್ಲುಗಳನ್ನು,
၃၃ထိုအခါ ဣသရေလအမျိုးသားတို့သည်၊ တဲတော်နှင့် အပေါ်တဲမှစ၍၊ ရွှေချောင်း၊ ပျဉ်ပြား၊ ကန့်လန့်ကျင်၊ တိုင်၊ ခြေစွပ်တည်းဟူသော တဲတော်တန်ဆာရှိသမျှကို၎င်း၊
34 ೩೪ ಹದಮಾಡಿರುವ ಕೆಂಪುಬಣ್ಣದ ಟಗರಿನ ತೊಗಲುಗಳಿಂದ ಮಾಡಿದ ಮೇಲ್ಹೊದಿಕೆಯನ್ನು, ಕಡಲಪ್ರಾಣಿಯ ತೊಗಲುಗಳಿಂದ ಮಾಡಿದ ಮೇಲ್ಹೊದಿಕೆಯನ್ನು ಹಾಗೂ ಗರ್ಭಗುಡಿಯನ್ನು ಮರೆಮಾಡುವ ಪರದೆಯನ್ನು,
၃၄အနီဆိုးသော သိုးရေအမိုး၊ တဟာရှသားရေအမိုး၊ ကွယ်ကာရာအတွင်းကုလားကာကို၎င်း၊
35 ೩೫ ಆಜ್ಞಾಶಾಸನಗಳ ಮಂಜೂಷವನ್ನು, ಅದರ ಕೋಲುಗಳನ್ನು, ಕೃಪಾಸನವನ್ನು,
၃၅သက်သေခံချက်သေတ္တာနှင့် သူ၏ထမ်းဘိုး၊ သူ၏အဖုံးကို၎င်း၊
36 ೩೬ ಮೇಜನ್ನು, ಅದರ ಎಲ್ಲಾ ಉಪಕರಣಗಳನ್ನು, ನೈವೇದ್ಯದ ರೊಟ್ಟಿಯನ್ನು,
၃၆စားပွဲမှစ၍ စားပွဲတန်ဆာနှင့် ရှေ့တော်မုန့်ကို၎င်း၊
37 ೩೭ ಚೊಕ್ಕ ಬಂಗಾರದ ದೀಪಸ್ತಂಭವನ್ನು, ಅದರ ಮೇಲಿಡಬೇಕಾದ ಹಣತೆಗಳನ್ನು, ಅದರ ಉಪಕರಣಗಳನ್ನು, ದೀಪಕ್ಕೆ ಬೇಕಾದ ಎಣ್ಣೆಯನ್ನು,
၃၇စင်ကြယ်သော မီးခုံမှစ၍၊ ပြင်ဆင်ရသော မီးခွက်များ၊ မီးခုံတန်ဆာ ရှိသမျှနှင့် မီးထွန်းစရာ ဆီကို၎င်း၊
38 ೩೮ ಚಿನ್ನದ ಧೂಪವೇದಿಯನ್ನು, ಅಭಿಷೇಕತೈಲವನ್ನು, ಸುವಾಸನೆಯುಳ್ಳ ಧೂಪವನ್ನು, ಗುಡಾರದ ಬಾಗಿಲಿನ ಪರದೆಯನ್ನು,
၃၈ရွှေယဇ်ပလ္လင်၊ လိမ်းရန်ဆီ၊ မီးရှို့ရာနံ့သာပေါင်းမွှေး၊ တဲတော်တံခါးဝ ကာစရာ ကုလားကာကို၎င်း၊
39 ೩೯ ತಾಮ್ರದ ಯಜ್ಞವೇದಿಯನ್ನು, ಅದರ ತಾಮ್ರದ ಜಾಲರಿಯನ್ನು, ಅದರ ಕೋಲುಗಳನ್ನು, ಉಪಕರಣಗಳನ್ನು,
၃၉ကြေးဝါယဇ်ပလ္လင်၊ ကြေးဝါဆန်ခါ၊ ပလ္လင်ထမ်းဘိုး အစရှိသော တန်ဆာရှိသမျှကို၎င်း၊ အင်တုံနှင့် သူ၏ခြေထောက်ကို၎င်း၊
40 ೪೦ ತೊಟ್ಟಿಯನ್ನು, ಅದರ ಪೀಠವನ್ನು, ಅಂಗಳದ ತೆರೆಗಳನ್ನು, ಕಂಬಗಳನ್ನು, ಮೆಟ್ಟುವಕಲ್ಲುಗಳನ್ನು, ಅಂಗಳದ ಬಾಗಿಲಿನ ಪರದೆಯನ್ನು, ಅದರ ಹಗ್ಗಗಳನ್ನು, ಗೂಟಗಳನ್ನು, ದೇವದರ್ಶನದ ಗುಡಾರದ ಸೇವೆಗೆ ಬೇಕಾದ ಎಲ್ಲಾ ಉಪಕರಣಗಳನ್ನು,
၄၀ဝင်းကုလားကာ၊ ဝင်းတိုင်၊ ခြေစွပ်၊ ဝင်းတံခါးဝကာစရာ ကုလားကာကြိုးများ၊ တံသင်များကို၎င်း၊ တဲတော်အတွင်း၌ အမှုတော်ကို ဆောင်စရာတန်ဆာ၊ ပရိသတ်စည်းဝေးရာ တဲတော်တန်ဆာရှိသမျှကို၎င်း၊
41 ೪೧ ದೇವಮಂದಿರದೊಳಗೆ ನಡೆಯುವ ದೇವರಕಾರ್ಯಗಳಿಗೆ ಅಲಂಕಾರ ವಸ್ತ್ರ ಅಂದರೆ ಆರೋನನಿಗೆ ಬೇಕಾದ ಪವಿತ್ರ ವಸ್ತ್ರಗಳನ್ನು ಯಾಜಕಸೇವೆ ಮಾಡುವವರಾದ ಅವನ ಮಕ್ಕಳಿಗೆ ಬೇಕಾದ ವಸ್ತ್ರಗಳನ್ನು ತಂದರು.
၄၁သန့်ရှင်းရာဌာန၌ အမှုတော်ကို ဆောင်သောအခါ ဝတ်ရသောအဝတ်၊ ယဇ်ပုရောဟိတ်အမှုကို ဆောင်သောအခါ၊ ယဇ်ပုရောဟိတ် အာရုန်ဝတ်ဘို့ သန့်ရှင်းသော အဝတ်၊ သူ၏သားဝတ်ရသော အဝတ်ကို၎င်း
42 ೪೨ ಯೆಹೋವನು ಮೋಶೆಗೆ ಆಜ್ಞಾಪಿಸಿದ್ದಂತೆಯೇ ಇಸ್ರಾಯೇಲರು ಆ ಕೆಲಸಗಳನ್ನೆಲ್ಲಾ ಮಾಡಿದ್ದರು.
၄၂ထာဝရဘုရားသည် မောရှေအား မှာထားတော်မူသည်အတိုင်း ပြီးစီးအောင် လုပ်ပြီးမှ မောရှေထံသို့ ဆောင်ခဲ့ကြ၏။
43 ೪೩ ಅವರು ಮಾಡಿದ್ದ ಕೆಲಸವನ್ನು ಮೋಶೆಯು ಪರೀಕ್ಷಿಸಿ ನೋಡಲಾಗಿ ಯೆಹೋವನ ಅಪ್ಪಣೆಯಂತೆಯೇ ಅವರು ಎಲ್ಲವನ್ನು ಮಾಡಿದ್ದರಿಂದ ಮೋಶೆಯು ಅವರನ್ನು ಆಶೀರ್ವದಿಸಿದನು.
၄၃ထာဝရဘုရားမှာထားတော်မူသည်အတိုင်း၊ အလုပ်ရှိသမျှကို ပြီးစီးစေခြင်းငှါ၊ လုပ်ကြောင်းကို မောရှေ သိမြင်သောအခါ၊ သူတို့ကို ကောင်းကြီးပေးလေ၏။

< ವಿಮೋಚನಕಾಂಡ 39 >