< ವಿಮೋಚನಕಾಂಡ 37 >
1 ೧ ಬೆಚಲೇಲನು ಜಾಲೀಮರದಿಂದ ಮಂಜೂಷವನ್ನು ಮಾಡಿಸಿದನು. ಅದು ಎರಡುವರೆ ಮೊಳ ಉದ್ದ, ಒಂದುವರೆ ಮೊಳ ಅಗಲ ಹಾಗೂ ಒಂದುವರೆ ಮೊಳ ಎತ್ತರವೂ ಆಗಿತ್ತು.
브사렐이 조각목으로 궤를 만들었으니 장이 이 규빗 반, 광이 일 규빗 반, 고가 일 규빗 반이며
2 ೨ ಚೊಕ್ಕ ಬಂಗಾರದ ತಗಡುಗಳನ್ನು ಅದರ ಹೊರಗಡೆಯೂ ಮತ್ತು ಒಳಗಡೆಯೂ ಹೊದಿಸಿದನು. ಅದರ ಮೇಲೆ ಸುತ್ತಲು ಚಿನ್ನದ ಕಿರೀಟವನ್ನು ಕಟ್ಟಿಸಿದನು.
정금으로 안팎을 싸고 윗가로 돌아가며 금테를 만들었으며
3 ೩ ನಾಲ್ಕು ಬಂಗಾರದ ಬಳೆಗಳನ್ನು ಎರಕಹೊಯಿಸಿ ಅದರ ನಾಲ್ಕು ಮೂಲೆಗಳಲ್ಲಿ ಅಂದರೆ, ಒಂದೊಂದು ಕಡೆಯಲ್ಲಿ ಎರಡೆರಡು ಬಳೆಗಳನ್ನು ಇರಿಸಿದನು.
금고리 넷을 부어 만들어 네 발에 달았으니 곧 이편에 두 고리요 저편에 두 고리며
4 ೪ ಮತ್ತು ಜಾಲೀಮರದ ಕಂಬಗಳನ್ನು ಮಾಡಿ ಅವುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಿದನು.
조각목으로 채를 만들어 금으로 싸고
5 ೫ ಮಂಜೂಷವನ್ನು ಹೊರುವುದಕ್ಕಾಗಿ ಕಂಬಗಳನ್ನು ಮಂಜೂಷದ ಪಾರ್ಶ್ವಗಳಲ್ಲಿರುವ ಬಳೆಗಳಲ್ಲಿ ಅದನ್ನು ಸಿಕ್ಕಿಸಿದನು.
그 채를 궤 양편 고리에 꿰어 궤를 메게 하였으며
6 ೬ ಇದಲ್ಲದೆ ಚೊಕ್ಕಬಂಗಾರದಿಂದ ಕೃಪಾಸನವನ್ನು ಮಾಡಿದನು. ಅದು ಎರಡುವರೆ ಮೊಳ ಉದ್ದವು, ಒಂದುವರೆ ಮೊಳ ಅಗಲವೂ ಆಗಿತ್ತು.
정금으로 속죄소를 만들었으니 장이 이 규빗 반, 광이 일 규빗 반이며
7 ೭ ಬೆಚಲೇಲನು ಕೃಪಾಸನದ ಎರಡು ಕೊನೆಗಳಲ್ಲಿ ಕೆರೂಬಿಗಳ ಎರಡು ಬಂಗಾರದ ಆಕಾರಗಳನ್ನು ನಕಾಸಿಕೆಲಸದಿಂದ ಮಾಡಿಸಿದನು.
금으로 그룹 둘을 속죄소 양편에 쳐서 만들었으되
8 ೮ ಕೃಪಾಸನದ ಒಂದೊಂದು ಕೊನೆಯಲ್ಲಿ ಒಂದೊಂದು ಕೆರೂಬಿಗಳನ್ನು ಮಾಡಿ ಅವುಗಳನ್ನು ಕೃಪಾಸನಕ್ಕೆ ಜೋಡಿಸಿದನು.
한 그룹은 이편 끝에, 한 그룹은 저편 끝에 곧 속죄소와 한 덩이로 그 양편에 만들었으니
9 ೯ ಆ ಕೆರೂಬಿಗಳು ಮೇಲಕ್ಕೆ ರೆಕ್ಕೆಗಳನ್ನು ಚಾಚಿರುವಂತೆಯೂ, ಕೃಪಾಸನವನ್ನು ತಮ್ಮ ರೆಕ್ಕೆಗಳಿಂದ ಮುಚ್ಚುವಂತೆಯೂ ಇದ್ದವು. ಅವುಗಳ ಮುಖಗಳು ಎದುರು ಬದುರಾಗಿ ಕೃಪಾಸನವನ್ನು ನೋಡುತ್ತಿದ್ದವು.
그룹들이 그 날개를 높이 펴서 그 날개로 속죄소를 덮으며 그 얼굴을 서로 대하여 속죄소를 향하였더라
10 ೧೦ ಬೆಚಲೇಲನು ಜಾಲೀಮರದಿಂದ ಮೇಜನ್ನು ಮಾಡಿದನು. ಅದು ಎರಡು ಮೊಳ ಉದ್ದವೂ ಒಂದು ಮೊಳ ಅಗಲವೂ ಒಂದುವರೆ ಮೊಳ ಎತ್ತರವೂ ಆಗಿತ್ತು.
그가 또 조각목으로 상을 만들었으니 장이 이 규빗, 광이 일 규빗, 고가 일 규빗 반이며
11 ೧೧ ಅದಕ್ಕೆ ಚೊಕ್ಕ ಬಂಗಾರದ ತಗಡುಗಳನ್ನು ಹೊದಿಸಿ ಸುತ್ತಲೂ ಚಿನ್ನದ ತೋರಣಗಳನ್ನು ಕಟ್ಟಿದನು.
정금으로 싸고 윗가로 돌아가며 금테를 둘렀으며
12 ೧೨ ಮೇಜಿನ ಸುತ್ತಲು ಅಂಗೈ ಅಗಲದ ಅಡ್ಡಪಟ್ಟಿಗಳನ್ನು ಮಾಡಿ ಅದಕ್ಕೂ ನಾಲ್ಕು ಚಿನ್ನದ ತೋರಣ ಕಟ್ಟಿದನು.
그 사면에 손바닥 넓이만한 턱을 만들고 그 턱 주위에 금으로 테를 만들었고
13 ೧೩ ಮೇಜನ್ನು ಎತ್ತುವ ಕಂಬಗಳನ್ನು ಸೇರಿಸುವುದಕ್ಕಾಗಿ ಅದಕ್ಕೆ ನಾಲ್ಕು ಚಿನ್ನದ ಬಳೆಗಳನ್ನು ಎರಕಹೊಯಿಸಿ ಅದರ ನಾಲ್ಕು ಕಾಲುಗಳಲ್ಲಿ ಜೋಡಿಸಿದನು.
상을 위하여 금고리 넷을 부어 만들어 네 발 위 네 모퉁이에 달았으니
14 ೧೪ ಆ ಬಳೆಗಳು ಅಡ್ಡಪಟ್ಟಿಗೆ ಸೇರಿಕೊಂಡಿದ್ದವು.
그 고리가 턱 곁에 있어서 상을 메는 채를 꿰게 하였으며
15 ೧೫ ಮೇಜನ್ನು ಹೊತ್ತುಕೊಂಡು ಹೋಗುವವರಿಗಾಗಿ ಜಾಲೀಮರದಿಂದ ಕಂಬಗಳನ್ನು ಮಾಡಿ, ಅವುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಿದನು.
또 조각목으로 상 멜 채를 만들어 금으로 쌌으며
16 ೧೬ ಮೇಜಿನ ಮೇಲೆ ಇಡಬೇಕಾದ ಉಪಕರಣಗಳನ್ನು ಅಂದರೆ ಹರಿವಾಣಗಳು, ಧೂಪಾರತಿಗಳು, ಹೂಜಿಗಳು, ಪಾನದ್ರವ್ಯವನ್ನು ಅರ್ಪಿಸುವುದಕ್ಕೆ ಬೇಕಾದ ಬಟ್ಟಲುಗಳು ಇವುಗಳನ್ನು ಚೊಕ್ಕ ಬಂಗಾರದಿಂದ ಮಾಡಿದನು.
상 위의 기구 곧 대접과 숟가락과 잔과 붓는 병을 정금으로 만들었더라
17 ೧೭ ಮತ್ತು ಚೊಕ್ಕ ಬಂಗಾರದ ದೀಪಸ್ತಂಭವನ್ನು ಮಾಡಿದನು. ಅದರ ಬುಡವನ್ನು ಮತ್ತು ಕಂಬವನ್ನು ನಕಾಸಿಕೆಲಸದಿಂದ ಮಾಡಿದನು. ಆ ದೀಪಸ್ತಂಭವನ್ನು ಅಖಂಡವಾಗಿ ಪುಷ್ಪದಗೊಂಚಲುಗಳು, ಪುಷ್ಪಗಳು, ಮೊಗ್ಗುಗಳು ಅಲಂಕಾರವಾಗಿ ಅದರಿಂದಲೇ ಹೊರಟಂತೆ ಕೆತ್ತಲಾಗಿತ್ತು.
그가 또 정금으로 등대를 만들되 그것을 쳐서 만들었으니 그 밑판과 줄기와 잔과 꽃받침과 꽃이 그것과 한 덩이로 되었고
18 ೧೮ ಕಂಬದ ಒಂದೊಂದು ಪಾರ್ಶ್ವದಲ್ಲಿ ಮೂರು ಮೂರು ಕೊಂಬೆಗಳಂತೆ ಒಟ್ಟು ಆರು ಕೊಂಬೆಗಳು ಇದ್ದವು.
여섯 가지가 그 곁에서 나왔으니 곧 등대의 세 가지는 저편으로 나왔고 등대의 세 가지는 이 편으로 나왔으며
19 ೧೯ ಪ್ರತಿಯೊಂದು ಕೊಂಬೆಯಲ್ಲಿ ಬಾದಾಮಿ ಹೂವುಗಳಂತಿರುವ ಮೂರು ಮೂರು ಪುಷ್ಪಾಕೃತಿಗಳಿದ್ದವು; ಒಂದೊಂದು ಆಕೃತಿಗೆ ಒಂದೊಂದು ಪುಷ್ಪವೂ, ಒಂದು ಮೊಗ್ಗು ಇದ್ದವು. ಆರು ಕೊಂಬೆಗಳಲ್ಲಿಯೂ ಹಾಗೆಯೇ ಇದ್ದವು.
이 편 가지에 살구꽃 형상의 잔 셋과 꽃받침과 꽃이 있고 저편 가지에 살구꽃 형상의 잔 셋과 꽃받침과 꽃이 있어 등대에서 나온 여섯 가지가 그러하며
20 ೨೦ ದೀಪಸ್ತಂಭದಲ್ಲಿ ಬಾದಾಮಿ ಹೂವುಗಳಂತಿರುವ ಪುಷ್ಪಗಳೂ, ಮೊಗ್ಗುಗಳೂ ಇರುವ ಹೂ ಗೊಂಚಲುಗಳಂತೆ ನಾಲ್ಕು ಪುಷ್ಪಾಕೃತಿಗಳು ಇದ್ದವು.
등대 줄기에는 살구꽃 형상의 잔 넷과 꽃받침과 꽃이 있고
21 ೨೧ ಎರಡೆರಡು ಕೊಂಬೆಗಳು ಕವಲು ಒಡೆದಿರುವ ಸ್ಥಳಗಳಲ್ಲೆಲ್ಲಾ ಒಂದೊಂದು ಮೊಗ್ಗು, ಕೊಂಬೆಗಳ ಕೆಳಗೆ ಕವಲೊಡೆದಿರುವ ಜಾಗಗಳಲ್ಲಿಯೂ ಒಂದೊಂದು ಮೊಗ್ಗು ಹೀಗೆ ಕೊಂಬೆಗಳ ಆರು ಶಾಖೆಗಳಲ್ಲಿಯೂ ಮೊಗ್ಗುಗಳಿದ್ದವು.
등대에서 나온 여섯 가지를 위하여는 꽃받침이 있게 하였으되 두가지 아래 한 꽃받침이 있어 줄기와 연하였고 또 두 가지 아래 한 꽃받침이 있어 줄기와 연하게 하였으니
22 ೨೨ ಮೊಗ್ಗುಗಳು, ಶಾಖೆಗಳು ಒಂದೇ ಕಡೆಯಿಂದ ಉದ್ಭವಗೊಂಡಿದ್ದವು. ದೀಪಸ್ತಂಭವನ್ನೆಲ್ಲಾ ಒಟ್ಟಿಗೆ ಚೊಕ್ಕಬಂಗಾರದಿಂದ ಏಕವಾಗಿ ಮಾಡಲಾಗಿತ್ತು.
이 꽃받침과 가지들을 줄기와 연하여 전부를 정금으로 쳐서 만들었으며
23 ೨೩ ಅದರ ಏಳು ಹಣತೆಗಳನ್ನೂ ಅದರ ಕತ್ತರಿಗಳನ್ನೂ ದೀಪದ ಕುಡಿತೆಗೆಯುವ ಬಟ್ಟಲುಗಳನ್ನೂ ಚೊಕ್ಕ ಬಂಗಾರದಿಂದ ಮಾಡಲಾಗಿತ್ತು.
등잔 일곱과 그 불집게와 불똥 그릇을 정금으로 만들었으니
24 ೨೪ ದೀಪಸ್ತಂಭವನ್ನೂ ಅದರ ಎಲ್ಲಾ ಉಪಕರಣಗಳನ್ನೂ ಒಂದು ತಲಾಂತು ಚೊಕ್ಕ ಬಂಗಾರದಿಂದ ಮಾಡಲಾಗಿತ್ತು.
등대와 그 모든 기구는 정금 한 달란트로 만들었더라
25 ೨೫ ಅವನು ಜಾಲೀಮರದಿಂದ ಧೂಪವೇದಿಯನ್ನು ಮಾಡಿಸಿದನು. ಅದು ಒಂದು ಮೊಳ ಉದ್ದವಾಗಿಯೂ, ಒಂದು ಮೊಳ ಅಗಲವಾಗಿಯು ಇದ್ದು ಚಚ್ಚೌಕವಾಗಿತ್ತು; ಅದರ ಎತ್ತರವು ಎರಡು ಮೊಳವಾಗಿತ್ತು. ಅದರ ಕೊಂಬುಗಳು ಅದರೊಂದಿಗೆ ಏಕವಾಗಿದ್ದವು.
그가 또 조각목으로 분향할 단을 만들었으니 장이 일 규빗이요 광이 일 규빗이라 네모 반듯하고 고는 이 규빗이며 그 뿔들이 단과 연하였으며
26 ೨೬ ಅದರ ಮೇಲ್ಭಾಗಕ್ಕೂ ಹಲಗೆಗಳಿಗೂ ನಾಲ್ಕು ಪಕ್ಕಗಳಲ್ಲಿದ್ದ ಹಲಗೆಗಳಿಗೂ ಮತ್ತು ಕೊಂಬುಗಳಿಗೂ ಚೊಕ್ಕ ಬಂಗಾರದ ತಗಡುಗಳನ್ನು ಹೊದಿಸಿದನು. ಸುತ್ತಲೂ ಚಿನ್ನದ ತೋರಣ ಕಟ್ಟಿಸಿದನು.
단 상면과 전후 좌우면과 그 뿔을 정금으로 싸고 주위에 금테를 둘렀고
27 ೨೭ ಅದನ್ನು ಎತ್ತುವ ಕೋಲುಗಳನ್ನು ಸೇರಿಸುವುದಕ್ಕಾಗಿ ತೋರಣದ ಕೆಳಗೆ ವೇದಿಕೆಯ ಎರಡು ಪಾರ್ಶ್ವಗಳ ಮೂಲೆಗಳಲ್ಲಿ ಎರಡೆರಡು ಚಿನ್ನದ ಬಳೆಗಳನ್ನು ಜೋಡಿಸಿದನು.
그 테 아래 양 편에 금고리 둘을 만들었으되 곧 그 양 편에 만들어 단을 메는 채를 꿰게 하였으며
28 ೨೮ ಜಾಲೀಮರದಿಂದ ಕೋಲುಗಳನ್ನು ಮಾಡಿ ಅವುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಿದನು.
조각목으로 그 채를 만들어 금으로 쌌으며
29 ೨೯ ಅದಲ್ಲದೆ ಅವನು ದೇವರ ಪವಿತ್ರ ಸೇವೆಗೆ ನೇಮಕವಾದ ಪಟ್ಟಾಭಿಷೇಕತೈಲವನ್ನೂ ಪರಿಮಳದ್ರವ್ಯಗಳಿಂದ ಮಾಡಿದ ಸ್ವಚ್ಛವಾದ ಧೂಪದ್ರವ್ಯವನ್ನೂ ಸುಗಂಧದ್ರವ್ಯಮಾಡುವವರ ವಿಧಾನದ ಪ್ರಕಾರವೇ ತಯಾರಿಸಿದನು.
거룩한 관유와 향품으로 정결한 향을 만들었으되 향을 만드는 법대로 하였더라