< ವಿಮೋಚನಕಾಂಡ 35 >

1 ಮೋಶೆ ಇಸ್ರಾಯೇಲರ ಸಮೂಹವನ್ನೆಲ್ಲಾ ಸೇರಿಸಿ ಅವರಿಗೆ, “ನೀವು ಅನುಸರಿಸಬೇಕೆಂದು ಯೆಹೋವನು ನಿಮಗೆ ಹೀಗೆ ಅಪ್ಪಣೆ ಮಾಡಿದ್ದಾನೆ.
मोशाले इस्राएलका सारा समुदायलाई भेला गरी तिनीहरूलाई भने, “परमप्रभुले तिमीहरूलाई गर्नू भनी आज्ञा दिनुभएका कुराहरू यी नै हुन् ।
2 ಆರು ದಿನಗಳು ನೀವು ಕೆಲಸ ಮಾಡಬೇಕು; ಏಳನೆಯ ದಿನವು ಪರಿಶುದ್ಧವಾದ ದಿನ; ಅದು ಯೆಹೋವನಿಗೆ ಮೀಸಲಾದ ಸಬ್ಬತ್ ದಿನವಾಗಿರುವುದರಿಂದ ಅಂದು ನೀವು ಸಂಪೂರ್ಣವಾಗಿ ಕೆಲಸವನ್ನು ನಿಲ್ಲಿಸಿಬಿಡಬೇಕು; ಆ ದಿನದಲ್ಲಿ ಕೆಲಸಮಾಡುವವನಿಗೆ ಮರಣದಂಡನೆಯಾಗಬೇಕು;
छ दिनसम्म काम गर्न सकिन्छ, तर सातौँचाहिँ दिन तिमीहरूका लागि पवित्र दिन हो । यो परमप्रभुको निम्ति पूर्ण विश्राम गर्ने शबाथ-दिन हो । त्यस दिन जसले काम गर्छ, त्यो मारियोस् ।
3 ನೀವು ವಾಸಿಸುವ ಯಾವ ಸ್ಥಳದಲ್ಲಿಯಾದರೂ ಸಬ್ಬತ್ ದಿನದಲ್ಲಿ ಬೆಂಕಿಯನ್ನೂ ಹೊತ್ತಿಸಬಾರದು ಎಂದು” ಹೇಳಿದನು.
शबाथ-दिनमा तिमीहरूका घरमा आगो नबलोस् ।”
4 ಮೋಶೆಯು ಇಸ್ರಾಯೇಲ್ಯರ ಸರ್ವಸಮೂಹಕ್ಕೆ ಹೀಗೆಂದನು: “ಯೆಹೋವನು ಆಜ್ಞಾಪಿಸಿದ್ದೇನೆಂದರೆ,
मोशाले इस्राएलीहरूका सारा समुदायलाई यसो भने, “परमप्रभुले आज्ञा दिनुभएको कुरा यही नै हो ।
5 ನೀವು ನಿಮ್ಮ ನಿಮ್ಮೊಳಗೆ ಯೆಹೋವನಿಗಾಗಿ ಕಾಣಿಕೆಯನ್ನು ತೆಗೆದುಕೊಡಬೇಕು; ಒಳ್ಳೆಯ ಮನಸ್ಸಿರುವವರೆಲ್ಲರೂ ಕಾಣಿಕೆಯನ್ನು ತಂದುಕೊಡಬೇಕು. ಯೆಹೋವನಿಗೆ ತರಬೇಕಾದ ಆ ಕಾಣಿಕೆಯು ಎಂಥದಾಗಿರಬೇಕೆಂದರೆ; ಚಿನ್ನ, ಬೆಳ್ಳಿ, ತಾಮ್ರ ಎಂಬ ಲೋಹಗಳು,
इच्छुक ह्रदय भएका सबैले परमप्रभुका निम्ति यी भेटीहरू ल्याऊन्: सुन, चाँदी, काँसा,
6 ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರಗಳು, ನಾರುಬಟ್ಟೆಗಳು, ಉಣ್ಣೆಯ ಬಟ್ಟೆಗಳು,
निलो, बैजनी र रातो ऊन अनि मसिनो सुती कपडा, बाख्राको भुत्ला,
7 ಹದಮಾಡಿರುವ ಕೆಂಪುಬಣ್ಣದ ಟಗರಿನ ತೊಗಲುಗಳು, ಕಡಲಪ್ರಾಣಿಯ ತೊಗಲುಗಳು, ಜಾಲೀಮರವು, ದೀಪಕ್ಕೆ ಬೇಕಾದ ಎಣ್ಣೆಯು,
रातो रङ्गाइएको भेडाको छाला र सीलको छाला, बबुल काठ,
8 ಅಭಿಷೇಕತೈಲಕ್ಕೆ ಮತ್ತು ಪರಿಮಳಧೂಪಕ್ಕೆ ಬೇಕಾದ ಸುಗಂಧದ್ರವ್ಯಗಳು,
पवित्रस्थानका दियाहरूका लागि तेल, अभिषेक गर्ने तेलका लागि मसला र सुगन्धित धूप, एपोद र छाती-पाताको लागि
9 ಏಫೋದ್ ಕವಚಕ್ಕೆ ಬೇಕಾಗಿರುವ ರತ್ನಗಳು ಹಾಗು ಎದೆಪದಕದಲ್ಲಿ ಹಚ್ಚಬೇಕಾದ ನಾನಾ ರತ್ನಗಳು ಇವೇ.
आनिक्ससाथै अन्य बहुमूल्य रत्‍नहरू ।
10 ೧೦ “ನಿಮ್ಮಲ್ಲಿರುವ ಜ್ಞಾನಿಗಳಾದ ಶಿಲ್ಪಿಗಳು ಬಂದು ಯೆಹೋವನು ಆಜ್ಞಾಪಿಸಿದವುಗಳನ್ನೆಲ್ಲಾ ಮಾಡಬೇಕು.
तिमीहरूका बिचमा भएका हरेक सिपालु व्यक्ति आएर परमप्रभुले आज्ञा दिनुभएका हरेक कुरा बनाओस्:
11 ೧೧ ಅವರು ಮಾಡಬೇಕಾದವುಗಳು ಯಾವುವೆಂದರೆ; ದೇವದರ್ಶನದ ಗುಡಾರ, ಅದರ ಮೇಲ್ಹೊದಿಕೆಗಳು, ಕೊಂಡಿಗಳು, ಚೌಕಟ್ಟುಗಳು, ಅಗುಳಿಗಳು, ಕಂಬಗಳು, ಗದ್ದಿಗೆಕಲ್ಲುಗಳು,
पवित्रस्थान र यसको पाल, यसको छत, यसका अङ्कुसेहरू, फल्याकहरू, बारहरू, खम्बाहरू
12 ೧೨ ಆಜ್ಞಾಶಾಸನಗಳ ಮಂಜೂಷ, ಅದನ್ನು ಹೊರುವ ಕಂಬಗಳು, ಕೃಪಾಸನ, ಅದನ್ನು ಮರೆಮಾಡುವ ಪರದೆ,
र आधारहरू, सन्दुक र यसका डन्डाहरू, प्रायश्‍चित्तको ढकनी र यसलाई ढाक्‍ने पर्दा ।
13 ೧೩ ಮೇಜು, ಅದರ ಕಂಬಗಳು, ಅದರ ಉಪಕರಣಗಳು, ಅದರ ಮೇಲೆ ಇಡತಕ್ಕ ನೈವೇದ್ಯದ ರೊಟ್ಟಿಗಳು,
तिनीहरूले टेबुल र यसका डन्डाहरू, यसका सबै भाँडाकुँडाहरू र उपस्थितिको रोटी,
14 ೧೪ ದೀಪಸ್ತಂಭ, ಅದರ ಉಪಕರಣಗಳು, ಹಣತೆಗಳು, ದೀಪಕ್ಕೆ ಬೇಕಾದ ಎಣ್ಣೆ,
बत्तीका निम्ति सामदान, यसका सामग्रीहरू, दियाहरू र दियाका लागि तेल,
15 ೧೫ ಧೂಪವೇದಿ, ಅದರ ಕಂಬಗಳು, ಅಭಿಷೇಕ ತೈಲ, ಪರಿಮಳಧೂಪದ್ರವ್ಯ, ಗುಡಾರದ ಬಾಗಿಲಿನ ಪರದೆ,
धूपको वेदी र यसका डन्डाहरू, अभिषेक गर्ने तेल र सुगन्धित धूप, पवित्र वासस्थानको प्रवेशद्वारको पर्दा,
16 ೧೬ ಯಜ್ಞವೇದಿ, ಅದರ ತಾಮ್ರದ ಜಾಳಿಗೆ, ಕಂಬಗಳು, ಉಪಕರಣಗಳು, ಬೋಗುಣಿ, ಅದರ ಪೀಠ,
होमबलिको वेदी र यसका काँसाका जालीसाथै डन्डाहरू अनि भाँडाकुँडाहरू, आधार भएको ठुलो बाटा बनाऊन् ।
17 ೧೭ ಅಂಗಳದ ತೆರೆಗಳು, ಕಂಬಗಳು, ಗದ್ದಿಗೆಕಲ್ಲುಗಳು, ಅಂಗಳದ ಬಾಗಿಲಿನ ಪರದೆ,
तिनीहरूले चोकको लागि पर्दा र यसका डन्डासाथै आधारहरू अनि चोकको प्रवेशद्वारको लागि पर्दा,
18 ೧೮ ಗುಡಾರದ ಗೂಟಗಳು, ಅಂಗಳದ ಗೂಟಗಳು, ಇವುಗಳ ಹಗ್ಗಗಳು,
र पवित्र वासस्थान र चोकको लागि पालका किलाहरूसाथै तिनीहरूका डोरीहरू ल्याए ।
19 ೧೯ ಪವಿತ್ರಸ್ಥಾನದ ಸೇವೆಗೆ ಬೇಕಾದ ಸುಂದರವಾದ ದೀಕ್ಷಾವಸ್ತ್ರಗಳು ಅಂದರೆ ಮಹಾಯಾಜಕನಾದ ಆರೋನನಿಗೂ ಅವನ ಮಕ್ಕಳಿಗೂ ಬೇಕಾದ ಪವಿತ್ರ ಯಾಜಕವಸ್ತ್ರಗಳು ಇವೇ” ಅಂದನು.
तिनीहरूले पवित्रस्थानमा सेवा गर्ने राम्ररी बुनेका पोशाकहरू, हारून पुजारी र तिनका छोराहरूले पुजारी भएर सेवा गर्दा लगाउने पवित्र पोशाकहरू ल्याए ।
20 ೨೦ ಇಸ್ರಾಯೇಲರು ಮತ್ತು ಸಮೂಹದವರೆಲ್ಲರೂ ಮೋಶೆಯ ಎದುರಿನಿಂದ ಹೊರಟು ಹೋದರು.
तब इस्राएलका सबै कुल मोशाको उपस्थितिबाट बिदा भएर गए ।
21 ೨೧ ಯಾರನ್ನು ಹೃದಯವು ಪ್ರೇರೇಪಿಸಿತೋ, ಯಾರ ಮನಸ್ಸು ಸಿದ್ಧವಾಗಿತ್ತೋ ಅವರೆಲ್ಲರೂ ಬಂದು ದೇವದರ್ಶನದ ಗುಡಾರದ ಕೆಲಸಕ್ಕಾಗಿಯೂ ಅದರ ಸಮಸ್ತ ಸೇವೆಗಳಿಗಾಗಿಯೂ, ಪವಿತ್ರ ವಸ್ತ್ರಗಳಿಗಾಗಿಯೂ ಯೆಹೋವನಿಗೆ ಕಾಣಿಕೆಗಳನ್ನು ತಂದರು.
जस-जसका ह्रदय प्रेरणाले भरिए र आत्माद्वारा इच्छुक भए तिनीहरू आएर पवित्र वासस्थानको रचना, यसमा प्रयोग हुने सेवाका सबै सामग्री र पवित्र पोशाकहरूको लागि परमप्रभुको निम्ति भेटी ल्याए ।
22 ೨೨ ಸಿದ್ಧಚಿತ್ತರಾದ ಗಂಡಸರೂ, ಹೆಂಗಸರೂ ಬಂದು ಯೆಹೋವನಿಗೆ ಚಿನ್ನದ ಕಾಣಿಕೆಗಳನ್ನು ಅಂದರೆ ಕಡಗ, ಮೂಗುತಿ, ಮುದ್ರೆಯುಂಗರ, ಕಂಠಮಾಲೆ ಮೊದಲಾದ ಚಿನ್ನದ ಒಡವೆಗಳನ್ನು ಸಮರ್ಪಿಸಿದರು.
इच्छुक ह्रदय भएका पुरुष र स्‍त्रीहरू सबै जना आए । तिनीहरूले पीन, कुण्डल, औँठी र सिङ्गारका सरसामानहरूसाथै सबै किसिमका सुनका गरगहनाहरू ल्याए ।
23 ೨೩ ಯಾರಲ್ಲಿ ನೀಲಿ, ನೇರಳೆ ಹಾಗು ಕಡುಗೆಂಪು ವರ್ಣಗಳುಳ್ಳ ದಾರಗಳು, ನಾರುಬಟ್ಟೆಯು, ಉಣ್ಣೆ ಬಟ್ಟೆಯು, ಹದಮಾಡಿದ ಕೆಂಪುಬಣ್ಣದ ಟಗರಿನ ತೊಗಲುಗಳು ಹಾಗು ಕಡಲಪ್ರಾಣಿಯ ತೊಗಲುಗಳು ಇದ್ದವೋ ಅವರು ಅವುಗಳನ್ನು ತಂದುಕೊಟ್ಟರು.
तिनीहरू सबैले परमप्रभुको लागि डोलाइने बलिको रूपमा सुनका भेटीहरू टक्र्याए । जो-जोसँग निलो, बैजनी वा रातो ऊन, मसिनो सुती कपडा, बाख्राको भुत्ला, रातो रङ्ग्याइएको भेडाको छाला वा सीलका छालाहरू थिए, तिनीहरूले ती ल्याए ।
24 ೨೪ ಯಾರಲ್ಲಿ ಬೆಳ್ಳಿ ಇಲ್ಲವೇ ತಾಮ್ರ ಇತ್ತೋ ಅವರು ಅವುಗಳನ್ನೇ ತಂದು ಯೆಹೋವನಿಗೆ ಸಮರ್ಪಿಸಿದರು. ಯಾರ ಬಳಿಯಲ್ಲಿ ಗುಡಾರದ ಕೆಲಸಕ್ಕೆ ಬೇಕಾದ ಜಾಲೀಮರವಿತ್ತೋ ಅವರು ಅದನ್ನು ತಂದುಕೊಟ್ಟರು.
चाँदी वा काँसाको भेटी ल्याउने हरेकले परमप्रभुको लागि भेटी ल्यायो र काममा प्रयोग हुन सक्‍ने कुनै किसिमको बबुल काठ भएकोले त्यसलाई ल्यायो ।
25 ೨೫ ನಿಪುಣೆಯರಾದ ಸ್ತ್ರೀಯರು ತಮ್ಮ ಕೈಗಳಿಂದ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ನೂಲನ್ನೂ, ಹತ್ತಿಯ ನೂಲನ್ನೂ ನೇಯ್ದು ಆ ನೂಲನ್ನು ತಂದುಕೊಟ್ಟರು.
हरेक सिपालु स्‍त्रीले आफ्ना हातले ऊन कातेर आफूले कातेको निलो, बैजनी वा रातो ऊन वा मसिनो सुती कपडा ल्याई ।
26 ೨೬ ಬುದ್ಧಿವಂತೆಯರಾದ ಬೇರೆ ಸ್ತ್ರೀಯರು ಆಡಿನ ಕೂದಲುಗಳನ್ನು ನೇಯ್ದು ತಂದುಕೊಟ್ಟರು.
जो-जो स्‍त्रीका ह्रदय प्रेरणाले भरिए र जससित सिप थियो, तिनीहरूले बाख्राका भुत्ला काते ।
27 ೨೭ ಅಧಿಪತಿಗಳು ಏಫೋದ್ ಕವಚಕ್ಕೆ ಬೇಕಾದ ಗೋಮೇಧಕ ರತ್ನಗಳನ್ನು, ಎದೆಪದಕದಲ್ಲಿ ಇಡಬೇಕಾದ ರತ್ನಗಳನ್ನು,
एपोद र छाती-पातामा जड्नका लागि अगुवाहरूले आनिक्ससाथै अन्य बहुमूल्य रत्‍नहरू ल्याए ।
28 ೨೮ ದೀಪಕ್ಕೆ ಬೇಕಾದ ಎಣ್ಣೆಯನ್ನು ಹಾಗು ಅಭಿಷೇಕತೈಲಕ್ಕೆ ಮತ್ತು ಪರಿಮಳಧೂಪಕ್ಕೆ ಬೇಕಾದ ಸುಗಂಧದ್ರವ್ಯಗಳನ್ನು ತಂದುಕೊಟ್ಟರು.
तिनीहरूले मसला र बत्तीहरूका लागि तेल, अभिषेक गर्ने तेल अनि सुगन्धित धूप ल्याए ।
29 ೨೯ ಮೋಶೆಯ ಮೂಲಕ ಯೆಹೋವನು ಆಜ್ಞಾಪಿಸಿದ ಎಲ್ಲಾ ಕೆಲಸಕಾರ್ಯಗಳಿಗಾಗಿ ಆತನಿಗೆ ಕಾಣಿಕೆಗಳನ್ನು ತಂದುಕೊಡುವುದಕ್ಕೆ ಹೃದಯದಿಂದ ಪ್ರೇರೇಪಿತರಾಗಿ ಇಸ್ರಾಯೇಲ್ಯರ ಸ್ತ್ರೀಪುರುಷರೆಲ್ಲರೂ ಮನಃಪೂರ್ವಕವಾಗಿಯೇ ತಂದುಕೊಟ್ಟರು.
इस्राएलीहरूले परमप्रभुको निम्ति स्वैच्छिक भेटी ल्याए । हरेक स्‍त्री र पुरुष जस-जसको ह्रदय इच्छुक थियो, तिनीहरूले परमप्रभुले मोशाद्वारा आज्ञा गर्नुभएका सबै सरसामान ल्याए ।
30 ೩೦ ಮೋಶೆಯು ಇಸ್ರಾಯೇಲ್ಯರಿಗೆ ಹೀಗೆಂದನು, “ನೋಡಿರಿ, ಯೆಹೋವನು ಯೆಹೂದ ಕುಲದವನಾದ ಹೂರನ ಮೊಮ್ಮಗನೂ, ಊರಿಯ ಮಗನೂ ಆಗಿರುವ ಬೆಚಲೇಲನೆಂಬವನನ್ನು ಹೆಸರು ಹಿಡಿದು ಕರೆದಿದ್ದಾನೆ.
मोशाले इस्राएलीहरूलाई भने, “हेर, परमप्रभुले यहूदाको कुलबाट हूरका नाति, ऊरीका छोरा बजलेललाई डाक्‍नुभएको छ ।
31 ೩೧ ಕಲಾತ್ಮಕವಾದ ವಿನ್ಯಾಸಗಳನ್ನು ಕಲ್ಪಿಸುವುದಕ್ಕೂ, ಚಿನ್ನ, ಬೆಳ್ಳಿ ಹಾಗು ತಾಮ್ರಗಳಿಂದ ಕೆಲಸ ಮಾಡುವುದಕ್ಕೂ,
उहाँले सबै किसिमका कारीगरीको काम गर्नका लागि त्यसलाई बुद्धि, समझशक्ति, ज्ञान दिन उहाँका आत्माले भरिपूर्ण पार्नुभएको छ ।
32 ೩೨ ರತ್ನಗಳನ್ನು ಕೆತ್ತುವುದಕ್ಕೂ, ಮರದಲ್ಲಿ ಕೆತ್ತನೇ ಕೆಲಸವನ್ನು ಮಾಡುವುದಕ್ಕೂ,
तिनले सुन, चाँदी, काँसाका कलापूर्ण रचनाहरू बनाउनेछन् ।
33 ೩೩ ಅವನಿಗೆ ದೇವರಾತ್ಮವನ್ನು ಕೊಟ್ಟು ಅವನಿಗೆ ಬೇಕಾದ ಜ್ಞಾನ, ವಿದ್ಯೆ, ವಿವೇಕಗಳನ್ನೂ ಸಕಲ ಶಿಲ್ಪಕಲಾಜ್ಞಾನವನ್ನೂ ಅನುಗ್ರಹಿಸಿದ್ದೇನೆ.
सबै किसिमका कारीगरीका काम गर्न तिनले पत्थर काट्ने, जड्ने र काठ खोप्‍ने गर्छन् ।
34 ೩೪ ಅದಲ್ಲದೆ ಮತ್ತೊಬ್ಬರಿಗೆ ಕಲಿಸಿಕೊಡುವುದಕ್ಕೆ ಸಹ ಅವನಿಗೂ ಮತ್ತು ದಾನ್ ಕುಲದ ಅಹೀಸಾಮಾಕನ ಮಗನಾದ ಒಹೋಲೀಯಾಬನಿಗೂ ವರಕೊಟ್ಟಿದ್ದೇನೆ.
तिनले र दानको कुलका अहीसामाकका छोरा ओहोलीआबले अरूहरूलाई सिकाऊन् भनेर उहाँले यो तिनको ह्रदयमा राखिदिनुभएको छ ।
35 ೩೫ ಕಸೂತಿ ಕೆಲಸ ಕಲ್ಪಿಸುವವರು, ನೀಲಿ, ನೇರಳೆ ಕಡುಗೆಂಪು ವರ್ಣದ ದಾರದಿಂದಲೂ, ಹತ್ತಿಬಟ್ಟೆಯಿಂದಲೂ ಕಸೂತಿ ಕೆಲಸ ಮಾಡುವವರು, ನೇಯುವವರು, ಅಂತೂ ಎಲ್ಲಾ ಕಸಬುದಾರರು ಮಾಡುವ ಕೆಲಸಗಳನ್ನು ಕಸಿಮಾಡುವುದಕ್ಕೂ ಯೆಹೋವನು ಅವರಿಗೆ ಜ್ಞಾನವನ್ನು ಪರಿಪೂರ್ಣವಾಗಿ ಅನುಗ್ರಹಿಸಿದ್ದಾನೆ.”
तिनीहरूले सबै किसिमका शिल्पकारी, खोप्‍ने, चित्र बनाउने काम, निलो, बैजनी, रातो ऊन र मसिनो सुती कपडा र जुलहाको काम गरून् भनेर उहाँले तिनीहरूलाई सिपले भरिपूर्ण पार्नुभएको छ । सबै किसिमका काममा तिनीहरू शिल्पकारी र कलापूर्ण रचनाकारहरू हुन् ।

< ವಿಮೋಚನಕಾಂಡ 35 >