< ವಿಮೋಚನಕಾಂಡ 28 >
1 ೧ ನನಗೆ ಯಾಜಕನ ಸೇವೆ ಮಾಡುವುದಕ್ಕೆ ನೀನು ನಿನ್ನ ಅಣ್ಣನಾದ ಆರೋನನನ್ನೂ, ಅವನ ಮಕ್ಕಳಾದ ನಾದಾಬ್, ಅಬೀಹೂ, ಎಲ್ಲಾಜಾರ್, ಈತಾಮಾರ್ ಎಂಬುವರನ್ನೂ ಇಸ್ರಾಯೇಲ್ಯರಿಂದ ನಿನ್ನ ಹತ್ತಿರಕ್ಕೆ ಕರೆದುಕೊಂಡು ಬಾ.
౧“నాకు యాజకత్వం చేయడానికి నీ సోదరుడు అహరోనును అతని కొడుకులు నాదాబును, అబీహును, ఎలియాజరును ఈతామారును ఇశ్రాయేలీయుల్లో నుండి నీ దగ్గరికి పిలిపించు.
2 ೨ ನಿನ್ನ ಅಣ್ಣನಾದ ಆರೋನನಿಗೆ ಗೌರವವೂ, ಅಲಂಕಾರವೂ ಉಂಟಾಗುವಂತೆ ಅವನಿಗೆ ದೀಕ್ಷಾವಸ್ತ್ರಗಳನ್ನು (ಪರಿಶುದ್ಧವಸ್ತುಗಳು) ಮಾಡಿಸಬೇಕು.
౨అతనికి గౌరవం, వైభవం కలిగేలా నీ సోదరుడు అహరోనుకు ప్రతిష్ఠిత వస్త్రాలు కుట్టించాలి.
3 ೩ ಯಾರಿಗೆ ನಾನು ಜ್ಞಾನದ ವರವನ್ನು ಪರಿಪೂರ್ಣವಾಗಿ ಅನುಗ್ರಹಿಸಿದ್ದೇನೋ ಅಂಥ ಜ್ಞಾನಿಗಳೆಲ್ಲರ ಸಂಗಡ ನೀನು ಮಾತನಾಡಿ ಅವರ ಕೈಯಿಂದ ಆ ವಸ್ತ್ರಗಳನ್ನು ಸಿದ್ಧಪಡಿಸಬೇಕು. ಆರೋನನು ಅವುಗಳನ್ನು ಧರಿಸಿಕೊಂಡು ನನ್ನ ಯಾಜಕನಾಗುವುದಕ್ಕೆ ಪ್ರತಿಷ್ಠಿತನಾಗುವನು.
౩అహరోను నాకు యాజక సేవ జరిగించేలా నీవు అతణ్ణి ప్రత్యేక పరచడం కోసం అతని దుస్తులు కుట్టించాలి. నేను జ్ఞానాత్మతో నింపిన నిపుణులు అందరికీ ఆజ్ఞ జారీ చెయ్యి.
4 ೪ ಅವರು ಮಾಡಬೇಕಾದ ವಸ್ತ್ರಗಳು ಯಾವುವೆಂದರೆ; ಎದೆಯ ಪದಕದ ಚೀಲ, ಏಫೋದ್, ನಿಲುವಂಗಿ, ಕಸೂತಿ ಕೆಲಸದ ಮೇಲಂಗಿ, ಮುಂಡಾಸ ಹಾಗೂ ನಡುಕಟ್ಟು ಇವುಗಳೇ. ನಿನ್ನ ಸಹೋದರನಾದ ಆರೋನನೂ ಅವನ ಮಕ್ಕಳೂ ನನ್ನ ಯಾಜಕರಾಗುವುದಕ್ಕೆ ಅವರಿಗೋಸ್ಕರ ಈ ದೀಕ್ಷಾವಸ್ತ್ರಗಳನ್ನು ಮಾಡಿಸಬೇಕು.
౪వారు కుట్టవలసిన దుస్తులు ఇవి. వక్ష పతకం, ఏఫోదు, నిలువుటంగీ, రంగు దారాలతో కుట్టిన చొక్కా, తల పాగా, నడికట్టు. అతడు నాకు యాజకుడై యుండేలా వారు నీ సోదరుడు అహరోనుకు, అతని కుమారులకు ప్రతిష్ఠిత దుస్తులు కుట్టించాలి.
5 ೫ ಜನರು ಕಾಣಿಕೆಯಾಗಿ ಕೊಡುವ ಚಿನ್ನವನ್ನು, ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರವನ್ನು, ಹಾಗೂ ನಾರಿನ ಬಟ್ಟೆಯನ್ನು ಆ ಕೆಲಸಕ್ಕಾಗಿ ಉಪಯೋಗಿಸಬೇಕು.
౫కళాకారులు బంగారు, నీల, ధూమ్ర, రక్త వర్ణాలు గల నూలును సన్ననారను దీనికి ఉపయోగించాలి.
6 ೬ ಏಫೋದೆಂಬ ಕವಚವನ್ನು ನಯವಾಗಿ ಹೊಸೆದ ಹತ್ತಿಯ ದಾರದಿಂದ ಮಾಡಿಸಿ ಅದನ್ನು ಚಿನ್ನ, ನೀಲಿ, ನೇರಳೆ ಹಾಗೂ ಕಡುಗೆಂಪು ದಾರಗಳಿಂದಲೂ ಕಸೂತಿ ಹಾಕಿಸಿ ಅಲಂಕರಿಸಬೇಕು.
౬బంగారం నీల ధూమ్ర రక్త వర్ణాల ఏఫోదును పేనిన సన్న నారతో కళాకారుని నైపుణ్యంతో చెయ్యాలి.
7 ೭ ಆ ಕವಚಕ್ಕೆ ಹೆಗಲಿನ ಮೇಲೆ ಎರಡು ಪಟ್ಟಿಗಳು ಇರಬೇಕು. ಅದರ ಎರಡು ತುದಿಗಳು ಜೋಡಿಸಲ್ಪಟ್ಟಿರಬೇಕು.
౭రెండు భుజాలకు సరిపడేలా రెండు పై అంచుల్లో కూర్చిన పట్టీలు దానికి ఉండాలి.
8 ೮ ಕವಚದ ಮೇಲಿರುವ ಕಸೂತಿ ಕೆಲಸದ ನಡುಕಟ್ಟು ಏಕವಾಗಿದ್ದು ಅದರಂತೆಯೇ ನಯವಾಗಿ ಹೊಸೆದ ಹತ್ತಿಯ ದಾರದಿಂದ ಮಾಡಲ್ಪಟ್ಟು ಚಿನ್ನದ ದಾರದಿಂದಲೂ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರದಿಂದಲೂ ಅಲಂಕೃತವಾಗಿರಬೇಕು.
౮ఏఫోదుపై ధరించడానికి పనితనంతో చేసిన నడికట్టు ఏకాండంగా ఉండి, బంగారంతో, నీల, ధూమ్ర, రక్త వర్ణాల నూలుతో, పేనిన సన్ననారతో కుట్టాలి.
9 ೯ ಮತ್ತು ನೀನು ಎರಡು ಗೋಮೇಧಕ ಅಮೂಲ್ಯರತ್ನಗಳನ್ನು ತೆಗೆದುಕೊಂಡು ಅವುಗಳಲ್ಲಿ ಇಸ್ರಾಯೇಲರ ಕುಲಗಳ ಹೆಸರುಗಳನ್ನು ಕೆತ್ತಿಸಬೇಕು.
౯నీవు రెండు లేత పచ్చలను తీసుకుని వాటి మీద ఇశ్రాయేలీయుల పేర్లను అంటే వారి పుట్టుక క్రమం చొప్పున
10 ೧೦ ಒಂದು ರತ್ನದಲ್ಲಿ ಆರು ಹೆಸರುಗಳನ್ನೂ ಮತ್ತೊಂದು ರತ್ನದಲ್ಲಿ ಮಿಕ್ಕ ಆರು ಹೆಸರುಗಳನ್ನು ಅವರವರ ಜನನ ಕ್ರಮದ ಪ್ರಕಾರ ಕೆತ್ತಿಸಬೇಕು.
౧౦ఒక రత్నం మీద ఆరు పేర్లు, రెండవ రత్నం మీద తక్కిన ఆరు పేర్లను చెక్కించాలి.
11 ೧೧ ಮುದ್ರೆಗಳನ್ನು ಕೆತ್ತುವ ಹಾಗೆ ಆ ಶಿಲ್ಪಿಗರಿಂದ ಎರಡೂ ರತ್ನಗಳಲ್ಲಿ ಇಸ್ರಾಯೇಲರ ಕುಲಗಳ ಹೆಸರುಗಳನ್ನು ಕೆತ್ತಿಸಿ, ಅದಕ್ಕೆ ಚಿನ್ನವನ್ನು ಆ ಮುದ್ರೆಗಳ ಮೇಲೆ ಇರಿಸಬೇಕು.
౧౧ముద్ర మీద చెక్కిన పనిలాగా ఆ రెండు రత్నాలపై ఇశ్రాయేలీయుల పేర్లు చెక్కి బంగారు కుదురుల్లో వాటిని పొదగాలి.
12 ೧೨ ಆ ಎರಡು ರತ್ನಗಳನ್ನು ಹೆಗಲಿನ ಮೇಲಿರುವ ಏಫೋದಿನ ಪಟ್ಟಿಗಳಲ್ಲಿ ಹಾಕಿಸಬೇಕು. ಅವು ಇಸ್ರಾಯೇಲರ ಜ್ಞಾಪಕಾರ್ಥವಾದ ರತ್ನಗಳಾಗಿರುವವು. ಆರೋನನು ಯೆಹೋವನ ಸನ್ನಿಧಿಯಲ್ಲಿ ಹೋಗುವಾಗೆಲ್ಲಾ ಇಸ್ರಾಯೇಲರ ಕುಲಗಳ ಹೆಸರುಗಳನ್ನು ಆತನ ನೆನಪಿಗೆ ತರುವುದಕ್ಕಾಗಿ ತನ್ನ ಎರಡೂ ಭುಜಗಳ ಮೇಲೆ ಅವುಗಳನ್ನು ಧರಿಸಿಕೊಂಡು ಹೋಗುವನು.
౧౨అప్పుడు ఇశ్రాయేలీయులకు స్మారక సూచకమైన ఆ రెండు రత్నాలను ఏఫోదు భుజాలపై నిలపాలి. ఆ విధంగా అహరోను తన రెండు భుజాలపై యెహోవా సన్నిధిలో జ్ఞాపక సూచనగా ఆ పేర్లను ధరిస్తాడు.
13 ೧೩ ಆ ರತ್ನಗಳನ್ನು ಜೋಡಿಸುವುದಕ್ಕೆ ಚಿನ್ನದ ಸರಿಗೆಯನ್ನು ಹೆಣೆದು ಗೂಡುಗಳನ್ನು ಮಾಡಿಸಬೇಕು.
౧౩బంగారు కుదురులను తయారు చెయ్యాలి.
14 ೧೪ ಮತ್ತು ಹೆಣಿಗೆ ಕೆಲಸದಿಂದ ಹುರಿಗಳಂತಿರುವ ಎರಡು ಚೊಕ್ಕ ಬಂಗಾರದ ಸರಪಣಿಗಳನ್ನು ಮಾಡಿಸಿ ರತ್ನಗಳ ಗೂಡುಗಳಿಗೆ ಸಿಕ್ಕಿಸಬೇಕು.
౧౪మేలిమి బంగారంతో రెండు అల్లిక గొలుసులను చెయ్యాలి. ఆ అల్లిక పనికి అల్లిన గొలుసులను తగిలించాలి.
15 ೧೫ ನ್ಯಾಯತೀರ್ಪಿನ ಎದೆಯ ಪದಕದ ಕವಚವನ್ನು ಕಸೂತಿ ಕೆಲಸದಿಂದ ಮಾಡಿಸಬೇಕು. ಅದನ್ನು ಏಫೋದ್ ಅನ್ನು ಮಾಡಿಸಿದ ಹಾಗೆಯೇ ಚಿನ್ನದ ದಾರದಿಂದಲೂ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರದಿಂದಲೂ ನಯವಾಗಿ ಹೊಸೆದ ಹತ್ತಿಯ ದಾರದಿಂದ ಮಾಡಿಸಬೇಕು.
౧౫కళాకారుని నైపుణ్యంతో న్యాయనిర్ణయ పతకాన్ని చెయ్యాలి. ఏఫోదు పని లాగా దాన్ని చెయ్యాలి. బంగారంతో, నీల ధూమ్ర రక్త వర్ణాల నూలుతో పేనిన సన్ననారతో దాన్ని చెయ్యాలి.
16 ೧೬ ಅದು ಒಂದು ಗೇಣುದ್ದವಾಗಿಯೂ ಮತ್ತು ಒಂದು ಗೇಣಗಲವಾಗಿಯೂ ಎರಡು ಪದರುಳ್ಳದ್ದಾಗಿ ಚಚ್ಚೌಕವಾಗಿರಬೇಕು.
౧౬నలుచదరంగా ఉన్న ఆ పతకాన్ని మడత పెట్టాలి. దాని పొడవు జానెడు, వెడల్పు జానెడు ఉండాలి.
17 ೧೭ ಅದರ ಮುಂಭಾಗದಲ್ಲಿ ನಾಲ್ಕು ಸಾಲುಗಳಾಗಿ ರತ್ನಗಳನ್ನು ಹೆಚ್ಚಿಸಿರಬೇಕು. ಮೊದಲನೆಯ ಸಾಲಿನಲ್ಲಿ ಮಾಣಿಕ್ಯ, ಪುಷ್ಯರಾಗ ಮತ್ತು ಸ್ಫಟಿಕಗಳು ಇರಬೇಕು.
౧౭దానిలో నాలుగు వరసల్లో రత్నాలుండేలా రత్నాల కుదుర్లు చెయ్యాలి. మొదటి వరస మాణిక్యం, గోమేధికం, మరకతం.
18 ೧೮ ಎರಡನೆಯ ಸಾಲಿನಲ್ಲಿ ಪಚ್ಚೆ, ನೀಲರತ್ನ ಮತ್ತು ವಜ್ರಗಳಿರಬೇಕು.
౧౮రెండో వరస పద్మరాగం, నీలం, వజ్రం.
19 ೧೯ ಮೂರನೆಯ ಸಾಲಿನಲ್ಲಿ ಸುವರ್ಣರತ್ನ, ಸುಗಂಧಿ ಮತ್ತು ಪದ್ಮರಾಗಗಳು ಇರಬೇಕು.
౧౯మూడవది గారుత్మతం, యష్మురాయి, ఇంద్రనీలం.
20 ೨೦ ನಾಲ್ಕನೆಯ ಸಾಲಿನಲ್ಲಿ ಪೀತರತ್ನ, ಬೆರುಲ್ಲ, ವೈಡೂರ್ಯಗಳನ್ನೂ ಚಿನ್ನದ ಮಣಿಗಳಲ್ಲಿ ಸೇರಿಸಬೇಕು.
౨౦నాలుగవ వరస గరుడ పచ్చ, సులిమాని రాయి, సూర్యకాంతం. వాటిని బంగారు కుదురుల్లో పొదగాలి.
21 ೨೧ ಇಸ್ರಾಯೇಲರ ಕುಲಗಳ ಸಂಖ್ಯೆಗೆ ಅನುಗುಣವಾಗಿ ಹನ್ನೆರಡು ರತ್ನಗಳಿರಬೇಕು. ಮುದ್ರೆಗಳನ್ನು ಕೆತ್ತುವ ರೀತಿಯಲ್ಲಿ ಒಂದೊಂದು ರತ್ನದಲ್ಲಿ ಒಂದೊಂದು ಕುಲದ ಹೆಸರನ್ನು ಕೆತ್ತಿಸಬೇಕು.
౨౧ఆ రత్నాలపై ఇశ్రాయేలీయుల పేర్ల ప్రకారం పన్నెండు పేర్లు ఉండాలి. ముద్ర మీద చెక్కినట్టు వారిలో ఒక్కొక్క పేరు చొప్పున పన్నెండు గోత్రాల పేర్లు ఉండాలి.
22 ೨೨ ಅದಲ್ಲದೆ ಆ ಪದಕದ ಮೇಲ್ಗಡೆಯಲ್ಲಿ ಹುರಿಗಳಂತಿರುವ ಚೊಕ್ಕ ಬಂಗಾರದ ಸರಪಣಿಗಳನ್ನು ಹೆಣಿಗೆ ಕೆಲಸಗಳಿಂದ ಮಾಡಿಸಿಡಬೇಕು.
౨౨ఆ పతకాన్ని అల్లిక పనిగా పేనిన గొలుసులతో మేలిమి బంగారంతో చెయ్యాలి.
23 ೨೩ ಎರಡು ಚಿನ್ನದ ಕೊಂಡಿಗಳನ್ನು ಮಾಡಿಸಿ ಎದೆಯ ಪದಕದ ಕವಚದ ಎರಡು ಮೂಲೆಗಳಿಗೆ ಜೋಡಿಸಬೇಕು.
౨౩పతకానికి రెండు బంగారు రింగులు చేసి
24 ೨೪ ಆ ಎರಡು ಸರಪಣಿಗಳನ್ನು ಎದೆಯ ಪದಕದ ಕವಚದ ಮೂಲೆಗಳಲ್ಲಿರುವ ಕೊಂಡಿಗಳಿಗೆ ಸಿಕ್ಕಿಸಬೇಕು.
౨౪ఆ రెండు రింగులను పతకపు రెండు కొసలకు అల్లిన ఆ రెండు బంగారు గొలుసులను తగిలించాలి.
25 ೨೫ ಆ ಸರಪಣಿಗಳ ಕೊನೆಗಳನ್ನು ಏಫೋದ್ ಕವಚದ ಹೆಗಲಿನ ಪಟ್ಟಿಗಳಲ್ಲಿರುವ ಎರಡು ಕೊಂಡಿಗಳಲ್ಲಿ ಸಿಕ್ಕಿಸಿ ಮುಂಭಾಗದಲ್ಲಿರಿಸಬೇಕು.
౨౫అల్లిన ఆ రెండు గొలుసుల కొసలను రెండు కుదురులకు తగిలించి ఏఫోదు ముందు వైపు భుజాలపై కట్టాలి.
26 ೨೬ ಅದಲ್ಲದೆ ಎರಡು ಚಿನ್ನದ ಕೊಂಡಿಗಳನ್ನು ಮಾಡಿಸಿ ಎದೆ ಪದಕದ ಒಳಗಣ ಅಂಚಿನ ಮೂಲೆಗಳಲ್ಲಿ ಕವಚದ ಹತ್ತಿರದಲ್ಲೆ ಇಡಿಸಬೇಕು.
౨౬నీవు బంగారంతో రెండు రింగులు చేసి ఏఫోదు ముందు భాగంలో పతకం లోపలి అంచున దాని రెండు కొసలకు వాటిని తగిలించాలి.
27 ೨೭ ಮತ್ತು ಬೇರೆ ಎರಡು ಚಿನ್ನದ ಕೊಂಡಿಗಳನ್ನು ಮಾಡಿಸಿ ಏಫೋದ್ ಕವಚದ ಎರಡು ಹೆಗಲಿನ ಪಟ್ಟಿಗಳ ಮುಂಭಾಗದ ಕೆಳಗೆ ಕವಚವನ್ನು ಜೋಡಿಸಿರುವ ಸ್ಥಳದ ಹತ್ತಿರ ಕಸೂತಿ ಹಾಕಿಸಿದ ನಡುಕಟ್ಟಿನ ಮೇಲ್ಗಡೆಯಲ್ಲಿ ಇರಿಸಬೇಕು.
౨౭నీవు రెండు బంగారు రింగులు చేసి ఏఫోదు నమూనా ప్రకారం చేసిన నడికట్టుపై దాని ముందు వైపు కింది భాగంలో ఏఫోదు రెండు భుజాలకు వాటిని తగిలించాలి.
28 ೨೮ ಎದೆಯ ಪದಕವು ಕಸೂತಿಹಾಕಿದ ನಡುಕಟ್ಟಿನ ಮೇಲ್ಗಡೆಯಲ್ಲಿ ಬಿಗಿಯಾಗಿರುವಂತೆಯೂ, ಏಫೋದ್ ಕವಚದಿಂದ ಕಳಚಿಬೀಳದಂತೆಯೂ ಅದರ ಕೊಂಡಿಗಳನ್ನು ಏಫೋದ್ ಕವಚದ ಕೊಂಡಿಗಳಿಗೆ ನೀಲಿ ದಾರದಿಂದ ಕಟ್ಟಿಸಬೇಕು.
౨౮అప్పుడు పతకం ఏఫోదు నమూనా ప్రకారం చేసిన నడికట్టుకు పైగా ఉండేలా బిగించాలి. అది ఏఫోదునుండి విడిపోకుండా ఉండేలా వారు దాని రింగులను నీలి దారంతో కట్టాలి.
29 ೨೯ ನ್ಯಾಯತೀರ್ಪಿನ ಎದೆಯ ಪದಕದ ಮೇಲೆ ಇಸ್ರಾಯೇಲರ ಕುಲಗಳ ಹೆಸರುಗಳು ಬರೆದಿರುವುದರಿಂದ ಆರೋನನು ಪವಿತ್ರಸ್ಥಾನದೊಳಗೆ ಹೋಗುವಾಗೆಲ್ಲಾ ಆ ಹೆಸರುಗಳನ್ನು ಸತತವಾಗಿ ಯೆಹೋವನ ನೆನಪಿಗೆ ತರುವುದಕ್ಕಾಗಿ ಅದನ್ನು ತನ್ನ ಎದೆಯ ಮೇಲೆ ನಿತ್ಯವೂ ಧರಿಸುವನು.
౨౯ఆ విధంగా అహరోను పరిశుద్ధ స్థలం లోకి వెళ్ళినప్పుడల్లా అతడు తన రొమ్ము మీద న్యాయనిర్ణయ పతకంలోని ఇశ్రాయేలీయుల పేర్లను నిత్యం యెహోవా సన్నిధిలో జ్ఞాపకార్థంగా ధరించాలి.
30 ೩೦ ದೈವನಿರ್ಣಯವನ್ನು ತಿಳಿಸುವ ಊರೀಮ್ ತುಮ್ಮೀಮ್ ಆ ಎದೆಯ ಪದಕದಲ್ಲಿ ಇಡಬೇಕು. ಆರೋನನು ಯೆಹೋವನ ಸನ್ನಿಧಿಗೆ ಹೋಗುವಾಗ ಅವು ಅವನ ಎದೆಯ ಮೇಲೆ ಇರುವವು. ಇಸ್ರಾಯೇಲರು ಕೈಕೊಳ್ಳಬೇಕಾದ ದೈವನಿರ್ಣಯವನ್ನು ಆರೋನನು ಹೀಗೆ ತನ್ನ ಹೃದಯದ ಮೇಲೆ ಯೆಹೋವನ ಸನ್ನಿಧಿಯಲ್ಲಿ ಯಾವಾಗಲೂ ಧರಿಸಿಕೊಂಡಿರಬೇಕು.
౩౦నీవు ఈ న్యాయనిర్ణయ పతకంలో ఊరీము తుమ్మీము అనే వాటిని ఉంచాలి. అహరోను యెహోవా సన్నిధికి వెళ్లినప్పుడల్లా అవి అతని రొమ్ముపై ఉంటాయి. అతడు యెహోవా సన్నిధిలో తన రొమ్ముపై ఇశ్రాయేలీయుల న్యాయనిర్ణయాలను నిత్యం భరిస్తాడు.
31 ೩೧ ಮಹಾಯಾಜಕನು ಏಫೋದ್ ಕವಚದ ಸಂಗಡ ಧರಿಸಿಕೊಳ್ಳಬೇಕಾದ ಮೇಲಂಗಿಯನ್ನು ನೀನು ನೀಲಿಬಣ್ಣದ ಬಟ್ಟೆಯಿಂದಲೇ ಮಾಡಿಸಬೇಕು.
౩౧ఏఫోదు నిలువుటంగీని కేవలం నీలిరంగు దారంతోనే కుట్టాలి.
32 ೩೨ ತಲೆತೂರಿಸುವುದಕ್ಕೆ ಅದರಲ್ಲಿ ಸಂದು ಇರಬೇಕು. ಅದು ಹರಿಯದಂತೆ ಆ ಸಂದಿನ ಸುತ್ತಲೂ ನೇಯಿಗೆ ಕಸೂತಿಯನ್ನು ಅದರೊಂದಿಗೆ ಒಂದು ಪಟ್ಟಿಯನ್ನು ಹಾಕಿಸಬೇಕು.
౩౨దాని మధ్య భాగంలో తల దూర్చడానికి రంధ్రం ఉండాలి. అది చినిగి పోకుండా మెడ కవచం లాగా దాని రంధ్రం చుట్టూ నేతపని గోటు ఉండాలి.
33 ೩೩ ನಿಲುವಂಗಿಯ ಅಂಚಿನ ಸುತ್ತಲೂ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರದಿಂದ ದಾಳಿಂಬ ಹಣ್ಣುಗಳನ್ನು ಅವುಗಳ ನಡುವೆ ಚಿನ್ನದ ಗೆಜ್ಜೆಗಳನ್ನು ಹಾಕಿಸಬೇಕು.
౩౩దాని అంచుల చుట్టూ నీల ధూమ్ర రక్త వర్ణాల దానిమ్మ కాయ ఆకారాలను, వాటి మధ్యలో బంగారు గంటలను నిలువు టంగీ చుట్టూ తగిలించాలి.
34 ೩೪ ಚಿನ್ನದ ಗೆಜ್ಜೆಯೂ ದಾಳಿಂಬೆಯೂ ಒಂದಾದ ಮೇಲೆ ಒಂದು ಆ ನಿಲುವಂಗಿಯ ಅಂಚಿನ ಸುತ್ತಲೂ ಇರಬೇಕು.
౩౪ఒక్కొక్క బంగారు గంట, దానిమ్మకాయ ఆ నిలువుటంగీ కింది అంచున చుట్టూరా ఉండాలి.
35 ೩೫ ಆರೋನನು ಯಾಜಕ ಸೇವೆ ಮಾಡುವ ಸಮಯದಲ್ಲಿ ಅದನ್ನು ಧರಿಸಿಕೊಳ್ಳಬೇಕು. ಅವನು ಯೆಹೋವನ ಸನ್ನಿಧಿಗೆ ಪವಿತ್ರಸ್ಥಾನದೊಳಗೆ ಹೋಗುವಾಗಲೂ ಬರುವಾಗಲೂ ಸಾಯದಂತಿರಲು ಆ ಗೆಜ್ಜೆಗಳ ಶಬ್ದವು ಕೇಳಿಸಬೇಕು.
౩౫సేవ చేసేటప్పుడు అహరోను దాని ధరించాలి. అతడు యెహోవా సన్నిధిలో పరిశుద్ధస్థలం లోకి ప్రవేశించేటప్పుడు అతడు చావకుండేలా వాటి చప్పుడు వినబడుతూ ఉండాలి.
36 ೩೬ ಚೊಕ್ಕ ಬಂಗಾರದಿಂದ ಒಂದು ಪಟ್ಟಿಯನ್ನು ಮಾಡಿಸಿ ಮುದ್ರೆಯನ್ನು ಕೆತ್ತಿಸುವ ರೀತಿಯಲ್ಲಿ ಅದರ ಮೇಲೆ “ಯೆಹೋವನಿಗೆ ಮೀಸಲು” ಎಂಬ ಲಿಪಿಯನ್ನು ಕೆತ್ತಿಸಬೇಕು.
౩౬నీవు మేలిమి బంగారు రేకు చేసి ముద్ర చెక్కినట్టు దానిపై ‘యెహోవాకు పరిశుద్ధం’ అనే మాట చెక్కాలి.
37 ೩೭ ಅದನ್ನು ಮುಂಡಾಸಕ್ಕೆ ಬಿಗಿಯುವುದಕ್ಕಾಗಿ ನೀಲಿ ದಾರವನ್ನು ಅದಕ್ಕೆ ಕಟ್ಟಿಸಬೇಕು. ಅದು ಮುಂಡಾಸದ ಮುಂಭಾಗದಲ್ಲಿ ಇರಬೇಕು.
౩౭పాగాపై ఉండేలా నీలి దారంతో దాన్ని కట్టాలి. అది పాగా ముందు వైపు ఉండాలి.
38 ೩೮ ಇಸ್ರಾಯೇಲ್ಯರು ಕಾಣಿಕೆಯಾಗಿ ಸಮರ್ಪಿಸುವ ದೇವರ ಎಲ್ಲಾ ಪವಿತ್ರವಸ್ತುಗಳ ವಿಷಯದಲ್ಲಿ ದೋಷವೇನಾದರೂ ಇದ್ದರೆ ಆರೋನನು ಆ ಪಟ್ಟವನ್ನು ಯಾವಾಗಲೂ ಹಣೆಯ ಮೇಲೆ ಧರಿಸಿ ಆ ದೋಷ ಫಲವನ್ನು ವಹಿಸಿಕೊಳ್ಳುವುದರಿಂದ ಅವರು ಯೆಹೋವನಿಗೆ ಮೆಚ್ಚಿಕೆಯುಳ್ಳವರಾಗಿರುವರು.
౩౮ఇశ్రాయేలీయులు అర్పించే పరిశుద్ధమైన అర్పణలన్నిటిలో వాటిలో ఇమిడి ఉన్న దోషాలను అహరోను భరించేలా అది అహరోను నుదిటిపై ఉండాలి. వారికి యెహోవా సన్నిధిలో ఆమోదం ఉండేలా అది నిత్యం అతని నుదుటిపై ఉండాలి.
39 ೩೯ ಆರೋನನು ಧರಿಸಬೇಕಾದ ಒಳ ಅಂಗಿಯನ್ನು ಹತ್ತಿಯ ನೂಲಿನಿಂದ ಕಸೂತಿ ಹಾಕಿಸಿ ನೇಯಿಸಬೇಕು. ಅವನ ಮುಂಡಾಸವನ್ನು ಹತ್ತಿಯ ನೂಲಿನಿಂದ ಮಾಡಿಸಬೇಕು. ಅವನ ನಡುಕಟ್ಟನ್ನು ಕಸೂತಿ ಕೆಲಸದಿಂದ ಮಾಡಿಸಬೇಕು.
౩౯సన్న నారతో చొక్కాయిని బుట్టాపనిగా చెయ్యాలి. సన్న నారతో పాగాను నేయాలి. నడికట్టును కూడా బుట్టాపనిగా చెయ్యాలి.
40 ೪೦ ಆರೋನನ ಮಕ್ಕಳಿಗೆ ತಕ್ಕ ಗೌರವಕ್ಕಾಗಿಯೂ, ಅಲಂಕಾರಕ್ಕಾಗಿಯೂ ಅವರಿಗೆ ಮೇಲಂಗಿಗಳನ್ನು, ನಡುಕಟ್ಟುಗಳನ್ನು ಮತ್ತು ಮುಂಡಾಸಗಳನ್ನು ಮಾಡಿಸಬೇಕು.
౪౦నీవు అహరోను కుమారులకు చొక్కాలు కుట్టించాలి. వారికి నడికట్లు తయారు చెయ్యాలి. వారి ఘనత, వైభవాలు కలిగేలా వారికీ టోపీలు చెయ్యాలి.
41 ೪೧ ಅವರು ನನಗೆ ಯಾಜಕಸೇವೆ ಮಾಡುವುದಕ್ಕಾಗಿ ಆ ವಸ್ತ್ರಗಳನ್ನು ನಿನ್ನ ಅಣ್ಣನಾದ ಆರೋನನಿಗೂ, ಅವನ ಮಕ್ಕಳಿಗೂ ತೊಡಿಸಿ, ಅವರನ್ನು ಅಭಿಷೇಕಿಸಿ, ಸೇವೆಗಾಗಿ ಪ್ರತಿಷ್ಠಿಸಿ ಶುದ್ಧೀಕರಿಸಿಬೇಕು.
౪౧నీవు నీ సోదరుడు అహరోనుకు, అతని కుమారులకు వాటిని తొడిగించాలి. వారు నాకు యాజకులయ్యేలా వారికి అభిషేకం చేసి, వారిని ప్రతిష్ఠించి పవిత్రపరచాలి.
42 ೪೨ ಅದಲ್ಲದೆ ಅವರ ನಗ್ನತೆಯನ್ನು ಮರೆಮಾಡುವುದಕ್ಕಾಗಿ ಅವರಿಗೆ ಸೊಂಟದಿಂದ ತೊಡೆಯ ತನಕ ಇರುವ ನಾರಿನ ಚಡ್ಡಿಗಳನ್ನು ಸಣಬಿನ ದಾರದಿಂದ ಮಾಡಿಸಬೇಕು.
౪౨వారి నగ్నతను కప్పుకొనేందుకు నీవు వారికి నారతో చేసిన లోదుస్తులు కుట్టించాలి.
43 ೪೩ ಆರೋನನೂ, ಅವನ ಮಕ್ಕಳೂ ದೇವದರ್ಶನ ಗುಡಾರದೊಳಗೆ ಹೋಗುವಾಗಲೂ, ಪವಿತ್ರಸ್ಥಾನದಲ್ಲಿ ಸೇವೆಮಾಡುವುದಕ್ಕೆ ಯಜ್ಞವೇದಿಯ ಹತ್ತಿರಕ್ಕೆ ಬರುವಾಗಲೂ ಇವುಗಳನ್ನು ಧರಿಸಿಕೊಂಡಿರಬೇಕು. ಇಲ್ಲವಾದರೆ ಅವರು ಆ ಅಪರಾಧದ ಫಲವನ್ನು ಅನುಭವಿಸಿ ಸತ್ತಾರು. ಅವನಿಗೂ ಅವನ ವಂಶಸ್ಥರಿಗೂ ಇದು ಶಾಶ್ವತವಾದ ನಿಯಮವಾಗಿದೆ.
౪౩వారు ప్రత్యక్ష గుడారంలోకి ప్రవేశించేటప్పుడు గానీ పరిశుద్ధస్థలం లో సేవ చేయడానికి బలిపీఠం దగ్గరికి వచ్చేటప్పుడు గానీ వారు దోషులై చావకుండేలా అహరోను, అతని కుమారులు వాటిని ధరించాలి. ఇది అతనికి, అతని తరువాత అతని సంతానానికి ఎప్పటికీ నిలిచి ఉండే శాసనం.”