< ವಿಮೋಚನಕಾಂಡ 1 >
1 ೧ ಯಾಕೋಬನೊಂದಿಗೆ ಐಗುಪ್ತದೇಶಕ್ಕೆ ತಮ್ಮತಮ್ಮ ಮನೆಯವರ ಸಂಗಡ ಬಂದ ಇಸ್ರಾಯೇಲರ ಮಕ್ಕಳ ಹೆಸರುಗಳು:
Ìwọ̀nyí ni àwọn orúkọ ọmọ Israẹli tí wọ́n bá Jakọbu lọ sí Ejibiti, ẹnìkọ̀ọ̀kan pẹ̀lú ìdílé rẹ̀:
2 ೨ ರೂಬೇನ್, ಸಿಮೆಯೋನ್, ಲೇವಿ, ಯೆಹೂದ,
Reubeni, Simeoni, Lefi àti Juda;
3 ೩ ಇಸ್ಸಾಕಾರ್, ಜೆಬುಲೂನ್ ಮತ್ತು ಬೆನ್ಯಾಮೀನ್,
Isakari, Sebuluni àti Benjamini;
4 ೪ ದಾನ್, ಗಾದ್, ನಫ್ತಾಲಿ ಮತ್ತು ಆಶೇರ್.
Dani àti Naftali; Gadi àti Aṣeri.
5 ೫ ಯಾಕೋಬನ ಎಲ್ಲಾ ಸಂತತಿಯವರು ಒಟ್ಟು ಎಪ್ಪತ್ತು ಮಂದಿ. ಆದರೆ ಯೋಸೇಫನು ಮೊದಲೇ ಐಗುಪ್ತದೇಶದಲ್ಲಿದ್ದನು.
Àwọn ìran Jakọbu sì jẹ́ àádọ́rin ní àpapọ̀; Josẹfu sì ti wà ní Ejibiti.
6 ೬ ಆ ನಂತರ ಯೋಸೇಫನೂ, ಅವನ ಅಣ್ಣತಮ್ಮಂದಿರೂ, ಆ ಸಂತತಿಯವರೆಲ್ಲರೂ ಮರಣ ಹೊಂದಿದರು.
Wàyí o, Josẹfu àti gbogbo àwọn arákùnrin rẹ̀ àti gbogbo ìran náà kú,
7 ೭ ಆದರೆ ಇಸ್ರಾಯೇಲರ ಮಕ್ಕಳು ಅತ್ಯಧಿಕವಾಗಿ ಅಭಿವೃದ್ಧಿಯಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಬೆಳೆದು ಬಲ ಹೊಂದಿದರು. ಆ ದೇಶವು ಅವರಿಂದ ತುಂಬಿಹೋಯಿತು.
ṣùgbọ́n àwọn ará Israẹli ń bí sí i, wọ́n ń pọ̀ sí i gidigidi, wọ́n kò sì ní òǹkà tí ó fi jẹ́ pé wọ́n kún ilẹ̀ náà.
8 ೮ ತರುವಾಯ ಯೋಸೇಫನನ್ನು ಅರಿಯದ ಹೊಸ ಅರಸನು ಐಗುಪ್ತದೇಶದ ಆಳ್ವಿಕೆಗೆ ಬಂದನು.
Nígbà náà ni ọba tuntun mìíràn tí kò mọ Josẹfu jẹ ní ilẹ̀ Ejibiti.
9 ೯ ಅರಸನು ತನ್ನ ಜನರಿಗೆ, “ಇಸ್ರಾಯೇಲರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಮತ್ತು ನಮಗಿಂತ ಬಹಳ ಬಲಶಾಲಿಗಳೂ ಆಗಿದ್ದಾರೆ ನೋಡಿರಿ.
Ó sọ fún àwọn ènìyàn rẹ̀, “Ẹ wò ó, àwọn ará Israẹli ti pọ̀ ní iye àti agbára jù fún wa.
10 ೧೦ ನಮಗೆ ಯುದ್ಧವೇನಾದರೂ ಸಂಭವಿಸಿದರೆ ಅವರು ನಮ್ಮ ಶತ್ರುಗಳೊಂದಿಗೆ ಸೇರಿಕೊಂಡು, ನಮಗೆ ವಿರುದ್ಧವಾಗಿ ಹೋರಾಡಿ ದೇಶವನ್ನು ಬಿಟ್ಟುಹೋದಾರು. ಆದ್ದರಿಂದ ಅವರು ನಮ್ಮ ದೇಶವನ್ನು ಬಿಟ್ಟು ಹೋಗದಂತೆ ನಾವು ಉಪಾಯ ಮಾಡೋಣ” ಎಂದು ಹೇಳಿ
Ẹ wá, ẹ jẹ́ kí a lo ọgbọ́n àlùmọ̀kọ́rọ́yí láti dá wọn lẹ́kun, bí kò ṣe bẹ́ẹ̀ wọn yóò túbọ̀ máa pọ̀ sí i. Bí ogun bá sì bẹ́ sílẹ̀, wọn yóò darapọ̀ mọ́ àwọn ọ̀tá wa, wọn yóò sì da ojú ìjà kọ wá, wọn yóò sì sá àsálà kúrò ní ilẹ̀ yìí.”
11 ೧೧ ಅವರನ್ನು ಬಿಟ್ಟೀ ಕೆಲಸಗಳಿಂದ ಪೀಡಿಸುವುದಕ್ಕಾಗಿ, ಬಿಟ್ಟೀಕೆಲಸ ಮಾಡಿಸುವ ಅಧಿಕಾರಿಗಳನ್ನು ಅವರ ಮೇಲೆ ಇರಿಸಿದನು. ಅವರು ಫರೋಹನನಿಗೆ ಪಿತೋಮ್ ಮತ್ತು ರಾಮ್ಸೇಸ್ ಎಂಬ ಉಗ್ರಾಣ ಪಟ್ಟಣಗಳನ್ನು ಕಟ್ಟಿಸಿದನು.
Nítorí náà, wọ́n yan àwọn ọ̀gá akóniṣiṣẹ́ lé wọn lórí láti máa ni wọ́n lára pẹ̀lú iṣẹ́ àṣekára. Wọ́n sì kọ́ Pitomi àti Ramesesi gẹ́gẹ́ bí ìlú ìṣúra pamọ́ sí fún Farao.
12 ೧೨ ಐಗುಪ್ತರು ಇಸ್ರಾಯೇಲರನ್ನು ಉಪದ್ರವಪಡಿಸಿದಷ್ಟೂ, ಅವರು ಬಹಳವಾಗಿ ಹೆಚ್ಚಿ ಹರಡಿಕೊಂಡಿದ್ದರಿಂದ ಐಗುಪ್ತರು ಇಸ್ರಾಯೇಲರ ವಿಷಯದಲ್ಲಿ ಬಹಳ ಹೆದರಿಕೆಯುಳ್ಳವರಾದರು.
Ṣùgbọ́n bí a ti ń ni wọ́n lára tó, bẹ́ẹ̀ ni wọ́n ń pọ̀ sí i, tí wọ́n sì ń tànkálẹ̀. Nítorí náà, àwọn ará Ejibiti bẹ̀rù nítorí àwọn ará Israẹli.
13 ೧೩ ಐಗುಪ್ತರು ಇಸ್ರಾಯೇಲರಿಂದ ಕ್ರೂರವಾಗಿ ಸೇವೆಮಾಡಿಸಿಕೊಂಡರು.
Àwọn ará Ejibiti sì mú àwọn ọmọ Israẹli sìn ní àsìnpa.
14 ೧೪ ಮಣ್ಣಿನ ಕೆಲಸದಲ್ಲಿಯೂ, ಇಟ್ಟಿಗೆಮಾಡುವ ಕೆಲಸದಲ್ಲಿಯೂ, ವ್ಯವಸಾಯದ ಎಲ್ಲಾ ವಿಧವಾದ ಕೆಲಸದಲ್ಲಿಯೂ ಕಠಿಣವಾಗಿ ದುಡಿಸಿಕೊಂಡು ಅವರ ಜೀವಿತವನ್ನೇ ಬೇಸರಪಡಿಸಿದರು. ಐಗುಪ್ತರು ಇಸ್ರಾಯೇಲರಿಂದ ಮಾಡಿಸಿದ ಎಲ್ಲಾ ಕೆಲಸಗಳು ಬಹಳ ಕಠಿಣವಾಗಿದ್ದವು.
Wọ́n mú wọn gbé ìgbé ayé kíkorò nípa iṣẹ́ bíríkì àti àwọn onírúurú iṣẹ́ oko; àwọn ará Ejibiti ń lò wọ́n ní ìlòkulò.
15 ೧೫ ಇದಲ್ಲದೆ ಐಗುಪ್ತ ದೇಶದ ಅರಸನು “ಶಿಪ್ರಾ” ಮತ್ತು “ಪೂಗಾ” ಎಂಬ ಹೆಸರಿನ ಇಬ್ರಿಯ ಸೂಲಗಿತ್ತಿಯರೊಂದಿಗೆ ಮಾತನಾಡಿದನು.
Ọba Ejibiti sọ fún àwọn agbẹ̀bí Heberu ti orúkọ wọn ń jẹ́ Ṣifura àti Pua pé,
16 ೧೬ ಅವನು ಅವರಿಗೆ, “ನೀವು ಇಬ್ರಿಯ ಹೆಂಗಸರಿಗೆ ಹೆರಿಗೆ ಮಾಡಿಸುವಾಗ ಅವರು ಹೆರುವ ಮಗುವು ಗಂಡು ಮಗುವಾಗಿದ್ದರೆ ಕೊಂದುಹಾಕಿರಿ, ಹೆಣ್ಣಾಗಿದ್ದರೆ ಬದುಕಲು ಬಿಡಿ” ಎಂದು ಹೇಳಿದನು.
“Nígbà ti ẹ̀yin bá ń gbẹ̀bí àwọn obìnrin Heberu, tí ẹ sì kíyèsi wọn lórí ìkúnlẹ̀ ìrọbí wọn, bí ó bá jẹ́ ọkùnrin ni ọmọ náà, ẹ pa á; ṣùgbọ́n bí ó bá jẹ́ obìnrin, ẹ jẹ́ kí ó wà láààyè.”
17 ೧೭ ಆದರೆ ಸೂಲಗಿತ್ತಿಯರು ದೇವರಿಗೆ ಭಯಪಟ್ಟು ಐಗುಪ್ತರ ಅರಸನ ಮಾತಿನಂತೆ ಮಾಡದೆ ಗಂಡು ಮಕ್ಕಳನ್ನು ಜೀವದಿಂದ ಉಳಿಸಿದರು.
Ṣùgbọ́n àwọn agbẹ̀bí bẹ̀rù Ọlọ́run, wọn kò sì ṣe gẹ́gẹ́ bí ọba Ejibiti ti wí fún wọn; wọ́n jẹ́ kí àwọn ọmọkùnrin wà láààyè.
18 ೧೮ ಆಗ ಐಗುಪ್ತದ ಅರಸನು ಸೂಲಗಿತ್ತಿಯರನ್ನು ಕರೆಯಿಸಿ, “ನೀವು ಅವರ ಗಂಡು ಮಕ್ಕಳನ್ನು ಉಳಿಸಿದ್ದೇನು? ಹೀಗೆ ಯಾಕೆ ಮಾಡಿದಿರಿ?” ಎಂದು ಕೇಳಿದನು.
Ọba Ejibiti pe àwọn agbẹ̀bí ó sì béèrè lọ́wọ́ wọn pé, “Èéṣe tí ẹ̀yin fi ṣe èyí? Èéṣe tí ẹ̀yin fi dá àwọn ọmọkùnrin si?”
19 ೧೯ ಸೂಲಗಿತ್ತಿಯರು ಫರೋಹನಿಗೆ, “ಇಬ್ರಿಯರ ಸ್ತ್ರೀಯರು ಐಗುಪ್ತ ಸ್ತ್ರೀಯರಂತೆ ಅಲ್ಲ, ಅವರು ಬಹು ಚುರುಕು ಬುದ್ಧಿಯವರು. ಸೂಲಗಿತ್ತಿಯು ಅವರ ಹತ್ತಿರ ಬರುವುದಕ್ಕೆ ಮೊದಲೇ ಮಗುವನ್ನು ಹೆರುತ್ತಿದ್ದರು” ಎಂದು ಹೇಳಿದರು.
Àwọn agbẹ̀bí náà sì dá Farao lóhùn pé, “Àwọn obìnrin Heberu kò rí bí àwọn obìnrin Ejibiti, wọ́n ní agbára, wọ́n sì ti máa ń bí ọmọ kí àwọn agbẹ̀bí tó dé ọ̀dọ̀ wọn.”
20 ೨೦ ಆದ್ದರಿಂದ ದೇವರು ಆ ಸೂಲಗಿತ್ತಿಯರಿಗೆ ಒಳ್ಳೆಯದನ್ನು ಮಾಡಿದನು. ಇದರಿಂದ ಇಸ್ರಾಯೇಲ್ ಜನರು ಹೆಚ್ಚಾಗಿ ಬಹಳ ಬಲಗೊಂಡರು.
Nítorí náà Ọlọ́run ṣàánú fún àwọn agbẹ̀bí náà, àwọn ọmọ Israẹli sì ń le sí i, wọ́n sì ń pọ̀ sí i jọjọ.
21 ೨೧ ಸೂಲಗಿತ್ತಿಯರು ದೇವರಿಗೆ ಭಯಪಟ್ಟಿದ್ದರಿಂದ, ಆತನು ಅವರಿಗೆ ವಂಶಾಭಿವೃದ್ಧಿಯನ್ನು ಅನುಗ್ರಹಿಸಿದನು. ಇಸ್ರಾಯೇಲರು ಹೆಚ್ಚಿ ಬಲಗೊಂಡರು.
Nítorí pé àwọn agbẹ̀bí bẹ̀rù Ọlọ́run, Ọlọ́run sì fún wọn ni ìdílé tiwọn.
22 ೨೨ ತರುವಾಯ ಫರೋಹನು ತನ್ನ ಜನರಿಗೆ, “ಇಬ್ರಿಯರ ಗಂಡು ಕೂಸುಗಳನ್ನೆಲ್ಲಾ ನೈಲ್ ನದಿಯಲ್ಲಿ ಹಾಕಬೇಕು, ಹೆಣ್ಣುಕೂಸುಗಳನ್ನೆಲ್ಲಾ ಉಳಿಸಬೇಕು” ಎಂದು ಆಜ್ಞೆ ಮಾಡಿದನು.
Nígbà náà ni Farao pàṣẹ yìí fún gbogbo àwọn ènìyàn rẹ̀ pé, “Gbogbo ọmọkùnrin tí a bí ni kí ẹ gbé jù sínú odò Naili, ṣùgbọ́n gbogbo àwọn ọmọbìnrin ni kí ẹ jẹ́ kí wọn ó wà láààyè.”