< ಎಸ್ತೇರಳು 8 >
1 ೧ ಆ ದಿನದಲ್ಲಿ ಅರಸನಾದ ಅಹಷ್ವೇರೋಷನು ಯೆಹೂದ್ಯರ ವೈರಿಯಾದ ಹಾಮಾನನ ಮನೆಯನ್ನು ಎಸ್ತೇರ್ ರಾಣಿಗೆ ಕೊಟ್ಟನು. ಆಕೆಯು ಮೊರ್ದೆಕೈಗೂ ತನಗೂ ಇರುವ ಸಂಬಂಧವನ್ನು ತಿಳಿಸಿದಳು.
Iti dayta nga aldaw, inted ni Ari Ahasuero kenni Reyna Ester ti sanikua ni Haman, a kabusor dagiti Judio. Ken nangrugi a nagserbi ni Mardokeo iti ari, ta imbagan ni Ester no ania ti pakainaigan ni Mardokeo kenkuana.
2 ೨ ಆಗ ಅರಸನು ತಾನು ಹಾಮಾನನಿಗೆ ನೀಡಿದ್ದ ತನ್ನ ಮುದ್ರೆಯುಂಗುರವನ್ನು ಮೊರ್ದೆಕೈಗೆ ಕೊಟ್ಟನು; ಎಸ್ತೇರಳು ಹಾಮಾನನ ಮನೆಯ ಆಡಳಿತವನ್ನು ಅವನಿಗೆ ಒಪ್ಪಿಸಿದಳು.
Inuksot ti ari ti singsingna nga adda pagseliona, a binabawina manipud kenni Haman, ket intedna daytoy kenni Mardokeo. Dinutokan ni Ester ni Madokeo a mangimaton iti sanikua ni Haman.
3 ೩ ಎಸ್ತೇರಳು ಪುನಃ ಅರಸನನ್ನು ಮಾತನಾಡಿಸುವುದಕ್ಕೆ ಹೋಗಿ ಅವನ ಪಾದಗಳಿಗೆ ಬಿದ್ದು, ಅಳುತ್ತಾ, “ಅಗಾಗನ ವಂಶದವನಾದ ಹಾಮಾನನು ಯೆಹೂದ್ಯರ ಹಾನಿಗಾಗಿ ಕಲ್ಪಿಸಿದ ದುಷ್ಟ ಯೋಜನೆಗಳನ್ನು, ಅಪಾಯಗಳನ್ನು ನಿವಾರಿಸಬೇಕು” ಎಂದು ವಿಜ್ಞಾಪಿಸಿದಳು.
Kalpasanna, nakisarita manen ni Ester iti ari. Nagpakleb isuna iti daga ken nagsangit kabayatan ti panangpakpakaasina kenkuana tapno gibusenna ti dakes a panggep ni Haman a kaputotan ni Agag, ti gandat nga insaganana a maibusor kadagiti Judio.
4 ೪ ಅರಸನು ಸುವರ್ಣ ರಾಜದಂಡವನ್ನು ಆಕೆಯ ಕಡೆಗೆ ಚಾಚಿದ್ದರಿಂದ ಆಕೆಯು ಎದ್ದು ಅರಸನ ಮುಂದೆ ನಿಂತಳು.
Ket inturong ti ari ti balitok a setro kenni Ester; bimmangon isuna ken nagtakder iti sangoanan ti ari.
5 ೫ ಆಗ ಎಸ್ತೇರಳು ಅವನಿಗೆ, “ಅರಸನು ನನ್ನ ಮೇಲೆ ಕಟಾಕ್ಷವಿಟ್ಟು, ನನ್ನನ್ನು ಮೆಚ್ಚಿ, ನಾನು ಹೇಳುವ ಮಾತು ಒಳ್ಳೆಯದೆಂದು ಅದಕ್ಕೆ ಸಮ್ಮತಿಸುವುದಾದರೆ, ಅರಸನ ಎಲ್ಲಾ ಸಂಸ್ಥಾನಗಳಲ್ಲಿರುವ ಯೆಹೂದ್ಯರನ್ನು ಸಂಹರಿಸುವ ವಿಷಯವಾಗಿ ಅಗಾಗನ ವಂಶದವನೂ, ಹಮ್ಮೆದಾತನ ಮಗನು ಆದ ಹಾಮಾನನು ಬರೆಯಿಸಿದ ಪತ್ರವನ್ನು ರದ್ದುಮಾಡುವುದಕ್ಕಾಗಿ ಆಜ್ಞಾಪತ್ರವನ್ನು ಪ್ರಕಟಿಸಬೇಕು.
Kinunana, “No makaayo daytoy iti ari, ken no nakasarakak iti pabor iti panagkitam, no ti banag ket agparang a nalinteg iti sangoanan ti ari, ken no makaay-ayoak kadagiti matam, palubosam a maysa a bilin ti maipaulog iti nagan ti ari a mangwaswas kadagiti surat nga insurat ni Haman nga anak a lalaki ni Hamedata nga Agagita, dagiti surat nga insuratna tapno dadaelenna dagiti Judio nga adda kadagiti amin a probinsia ti ari.
6 ೬ ನನ್ನ ಜನರಿಗೆ ಕೇಡು ಸಂಭವಿಸುವುದನ್ನು ನೋಡಿ ನಾನು ಸಹಿಸಿಕೊಂಡಿರುವುದು ಹೇಗೆ? ನನ್ನ ಕುಲನಾಶನವನ್ನು ನೋಡುತ್ತಾ ಸುಮ್ಮನಿರುವುದು ಹೇಗೆ?” ಎಂದು ಬಿನ್ನವಿಸಿದಳು.
Ta kasano a maituredko a kitaen ti didigra a mapasamak kadagiti tattaok? Kasano a maibturak a buyaen ti pannakadadael dagiti kakabagiak?”
7 ೭ ಆಗ ಅಹಷ್ವೇರೋಷ್ ರಾಜನು ರಾಣಿಯಾದ ಎಸ್ತೇರಳಿಗೂ ಮತ್ತು ಯೆಹೂದ್ಯನಾದ ಮೊರ್ದೆಕೈಗೂ, “ಹಾಮಾನನು ಯೆಹೂದ್ಯರಿಗೆ ವಿರುದ್ಧವಾಗಿ ಕೈಯೆತ್ತಿದ್ದರಿಂದ ಅವನನ್ನು ಗಲ್ಲಿಗೆ ಹಾಕಿಸಿ, ಅವನ ಸೊತ್ತನ್ನು ಎಸ್ತೇರಳಿಗೆ ದಾನಮಾಡಿದ್ದೇನಲ್ಲಾ, ಅರಸನ ಹೆಸರಿನಲ್ಲಿ ಬರೆಯಲ್ಪಟ್ಟು ರಾಜಮುದ್ರೆಯಿರುವ ಲೇಖನವನ್ನು ಯಾರೂ ರದ್ದುಮಾಡಲು ಬರುವುದಿಲ್ಲ.
Kinuna ni Ari Ahasuero kenni Reyna Ester ken kenni Mardokeo a Judio, “Kitaenyo, intedkon kenni Ester ti balay ni Haman, ken imbitinda isuna iti pagbitayan, gapu ta rautenna koma dagiti Judio.
8 ೮ ಆದುದರಿಂದ ಯೆಹೂದ್ಯರ ವಿಷಯವಾಗಿ ನಿಮಗೆ ಸರಿತೋರುವುದನ್ನು ಅರಸನ ಹೆಸರಿನಲ್ಲಿ ನೀವೂ ಬರೆಯಿಸಿ, ಅದಕ್ಕೆ ರಾಜಮುದ್ರೆಯನ್ನು ಹಾಕಿರಿ” ಎಂದು ಹೇಳಿದನು.
Mangisuratkayo iti sabali a bilin a maipaulog iti nagan ti ari para kadagiti Judio, ken deppelanyo daytoy iti selio babaen iti singsing ti ari. Ta ti bilin a naipaulog iti nagan ti ari a naisuraten ken nadeppelanen iti selio babaen iti singsing ti ari ket saanen a mabalin a mawaswas.”
9 ೯ ಆಗ ರಾಜಲೇಖಕರು ಕರೆಯಲ್ಪಟ್ಟರು. ಅವರು ಬಂದು ಮೂರನೆಯ ತಿಂಗಳಾದ ಜೇಷ್ಠಮಾಸದ ಇಪ್ಪತ್ತಮೂರನೆಯ ದಿನದಲ್ಲಿ, ಮೊರ್ದೆಕೈಯ ಆಜ್ಞಾನುಸಾರ ಯೆಹೂದ್ಯರಿಗೂ, ಭಾರತ ಮೊದಲುಗೊಂಡು ಕೂಷಿನ ವರೆಗೂ ಇರುವ ನೂರ ಇಪ್ಪತ್ತೇಳು ಸಂಸ್ಥಾನಗಳ ಉಪರಾಜರಿಗೂ, ದೇಶಾಧಿಪತಿಗಳಿಗೂ ಮತ್ತು ಅಧಿಕಾರಿಗಳಿಗೂ ಪತ್ರಗಳನ್ನು ಬರೆದರು. ಆ ಪತ್ರಗಳು ಆಯಾ ಸಂಸ್ಥಾನಗಳ ಬರಹಗಳಲ್ಲಿಯೂ, ಆಯಾ ಜನಾಂಗಗಳ ಭಾಷೆಗಳಲ್ಲಿಯೂ ಇದ್ದವು. ಯೆಹೂದ್ಯರಿಗೆ ಬರೆದ ಪತ್ರಗಳು ಯೆಹೂದ್ಯ ಬರಹದಲ್ಲಿಯೂ, ಭಾಷೆಗಳಲ್ಲಿಯೂ ಲಿಖಿತವಾದವು.
Kalpasanna, naayaban dagiti eskriba ti ari iti dayta a kanito, iti maikatallo a bulan, nga isu ti bulan ti Sivan, iti maika-23 nga aldaw ti bulan. Maysa a bilin ti naipaulog iti nagan ti ari ti naisurat a naglaon iti amin nga imbilbilin ni Mardokeo maipapan kadagiti Judio. Naisurat daytoy para kadagiti gobernador dagiti probinsia, kadagiti gobernador ken kadagiti opisial dagiti probinsia a masarakan manipud idiay India agingga idiay Etiopia, kadagiti 127 a probinsia, iti tunggal probinsia a naisurat iti bukodda a panagsurat, ken kadagiti tribu dagiti tattao iti pagsasaoda, ken kadagiti Judio kadagiti bukodda a panagsurat ken pagsasao.
10 ೧೦ ಮೊರ್ದೆಕೈಯು ಅರಸನ ಹೆಸರಿನಲ್ಲಿ ಬರೆಯಲ್ಪಟ್ಟ ಆ ಪತ್ರಗಳಿಗೆ ರಾಜಮುದ್ರೆಯನ್ನು ಹಾಕಿ, ಅರಮನೆಯ ಅಶ್ವಾಲಯಗಳಲ್ಲಿ ಹುಟ್ಟಿ ಬೆಳೆದಂಥ, ಅರಸನ ಸೇವೆಗಾಗಿ ಉಪಯೋಗಿಸಲ್ಪಡುತ್ತಿದ್ದ ವೇಗವಾಗಿ ಓಡುವಂಥ ಕುದುರೆಗಳ ಮುಖಾಂತರ ಕಳುಹಿಸಿದನು.
Nangisurat ni Mardokeo iti nagan ni Ari Ahasuero ken dineppelanna daytoy iti singsing ti ari a pagselio. Impatulodna dagiti surat babaen kadagiti para itulod kadagiti surat nga agluglugan kadagiti napapartak a kabalio a nausar para iti panagserbi iti ari, a naiyanak manipud iti kuadra ti ari.
11 ೧೧ ಆ ಪತ್ರಗಳಲ್ಲಿ ಅರಸನು, “ಅಹಷ್ವೇರೋಷ್ ರಾಜನ ಎಲ್ಲಾ ಸಂಸ್ಥಾನಗಳ ಆಯಾ ಪಟ್ಟಣಗಳಲ್ಲಿರುವ ಯೆಹೂದ್ಯರು ಒಂದೇ ದಿನದಲ್ಲಿ ಅಂದರೆ, ಹನ್ನೆರಡನೆಯ ತಿಂಗಳಾದ ಫಾಲ್ಗುಣಮಾಸದ ಹದಿಮೂರನೆಯ ದಿನದಲ್ಲಿ ಒಟ್ಟಾಗಿ ಸೇರಿಕೊಳ್ಳಬೇಕು.
Inted ti ari kadagiti Judio nga adda iti tunggal siudad ti pammalubos nga aguummong ken agkaykaysa a mangsalakib kadagiti biagda; a mangkisap, mangpapatay, ken mangdadael iti aniaman nga armada manipud kadagiti aniaman a tattao wenno probinsia a mabalin a mangraut kadakuada, kadagiti annakda, agraman kadagiti babbai, wenno kadagiti mangtakaw kadagiti sanikuada.
12 ೧೨ ತಮ್ಮ ಪ್ರಾಣರಕ್ಷಣೆಗಾಗಿ ಎದ್ದು, ತಮ್ಮ ವಿರುದ್ಧವಾಗಿ ಆಯುಧಗಳೊಡನೆ ನೆರೆದು ಬರುವ ಎಲ್ಲಾ ಜನಾಂಗಗಳವರನ್ನೂ, ಸಂಸ್ಥಾನಗಳವರನ್ನೂ, ಅವರ ಹೆಂಡತಿಯರು ಮಕ್ಕಳು ಸಹಿತವಾಗಿ ಕೊಂದು, ಸಂಹರಿಸಿ, ನಿರ್ನಾಮಗೊಳಿಸಬೇಕು.
Maipatungpal daytoy kadagiti amin a probinsia ni Ari Ahasuero, iti maika-13 nga aldaw ti maika-12 a bulan, nga isu ti bulan ti Adar.
13 ೧೩ ಅವರ ಸೊತ್ತನ್ನು ಸೂರೆಮಾಡಬೇಕು, ಈ ಪತ್ರದ ಒಂದೊಂದು ಪ್ರತಿಯನ್ನು ಪ್ರತಿಯೊಂದು ಸಂಸ್ಥಾನದಲ್ಲಿ ರಾಜವಿಧಿಯೆಂದು ಎಲ್ಲಾ ಜನರಲ್ಲಿ ಪ್ರಕಟಿಸಬೇಕು, ಆ ದಿನದಲ್ಲಿ ಯೆಹೂದ್ಯರು ತಮ್ಮ ಶತ್ರುಗಳಿಗೆ ಮುಯ್ಯಿತೀರಿಸುವುದಕ್ಕೆ ಸಿದ್ಧರಾಗಿರಬೇಕು” ಎಂದು ಅಪ್ಪಣೆಮಾಡಿದ್ದನು.
Ti kopia ti bilin a naipaulog iti nagan ti ari ket maited a kas linteg ken maipablaak kadagiti amin a tattao. Masapul a sisasagana dagiti Judio nga agibales kadagiti kabusorda iti dayta nga aldaw.
14 ೧೪ ಈ ರಾಜಾಜ್ಞೆಯು ಶೂಷನ್ ಕೋಟೆಯಲ್ಲಿ ಪ್ರಕಟವಾದಾಗಲೇ ಅಂಚೆಯವರು ಅರಮನೆಯ ಸವಾರಿಕುದುರೆಗಳನ್ನು ಹತ್ತಿಕೊಂಡು ಅರಸನ ಅಪ್ಪಣೆಯಿಂದ ಪ್ರೇರಿತರಾಗಿ ಅತಿ ಶೀಘ್ರವಾಗಿ ಹೊರಟರು.
Isu a naglugan dagiti para itulod kadagiti surat kadagiti kabalio ti ari a maus-usar iti panagserbi iti ari. Napanda nga awan taktakna. Ti bilin a naipaulog iti nagan ti ari ket naited met manipud iti palasio idiay Susa.
15 ೧೫ ಮೊರ್ದೆಕೈಯಾದರೋ ನೀಲಿ ಮತ್ತು ಶುಭ್ರವರ್ಣಗಳುಳ್ಳ ರಾಜವಸ್ತ್ರಗಳನ್ನು ಧರಿಸಿಕೊಂಡು, ಬಂಗಾರದ ದೊಡ್ಡ ಕಿರೀಟವನ್ನು ಇಟ್ಟುಕೊಂಡು, ರಕ್ತವರ್ಣದ ನಾರಿನ ನಿಲುವಂಗಿಯನ್ನು ಹೊದ್ದುಕೊಂಡು ರಾಜಸನ್ನಿಧಿಯಿಂದ ಹೊರಟನು. ಶೂಷನ್ ಪಟ್ಟಣದಲ್ಲಿ ಸಂತೋಷದ ಆರ್ಭಟವು ಕೇಳಿಸಿತು.
Kalpasanna, pimmanaw ni Mardokeo iti imatang ti ari a nakakawes iti naarian a pagan-anay nga asul ken puraw, nga addaan iti nadayag a korona a balitok ken maris-ube a kagay a naaramid iti kasasayaatan a lino. Ket nagpukkaw ken nagragsak ti siudad ti Susa.
16 ೧೬ ಅಲ್ಲಿನ ಯೆಹೂದ್ಯರಿಗೆ ಸಂತೋಷ, ಗೌರವ, ಹರ್ಷಪ್ರಭಾವ ಮತ್ತು ತೇಜಸ್ಸುಳ್ಳವರಾದರು.
Naaddaan dagiti Judio iti lawag ken kinaragsak, rag-o ken dayaw.
17 ೧೭ ರಾಜನಿರ್ಣಯ ಶಾಸನಗಳು ಪ್ರಕಟಿಸಲ್ಪಟ್ಟ ಪ್ರತಿಯೊಂದು ಸಂಸ್ಥಾನದಲ್ಲಿಯೂ ಪಟ್ಟಣದಲ್ಲಿಯೂ ಇದ್ದ ಯೆಹೂದ್ಯರಿಗೆ ಶುಭದಿನ ಉಂಟಾಯಿತು; ಅವರು ಸಂತೋಷದಿಂದಲೂ, ಉಲ್ಲಾಸದಿಂದಲೂ ಭಕ್ಷ್ಯಭೋಜನಮಾಡಿದರು. ದೇಶದ ಜನರಲ್ಲಿ ಅನೇಕರು ಯೆಹೂದ್ಯರಿಗೆ ಭಯಪಟ್ಟು ಅವರ ಮತಕ್ಕೆ ಸೇರಿದರು.
Kadagiti amin a probinsia ken kadagiti amin a siudad, sadinoman a nakadanonan ti bilin a naipaulog iti nagan ti ari, adda iti kinaragsak ken rag-o kadagiti Judio, padaya ken piesta. Adu kadagiti nadumaduma a tattao iti daga ti nagbalin a Judio, gapu ta ti panagbuteng dagiti Judio ket nagdissuor kadakuada.