< ಎಸ್ತೇರಳು 7 >
1 ೧ ಅರಸನು ಹಾಮಾನನೊಡನೆ ಎಸ್ತೇರಳ ಮನೆಗೆ ಔತಣಕ್ಕಾಗಿ ಬಂದನು.
त्यसैले राजा र हामान रानी एस्तरसित भोजन गर्न गए ।
2 ೨ ಅವನು ಈ ಎರಡನೆಯ ದಿನದಲ್ಲಿಯೂ ದ್ರಾಕ್ಷಾರಸ ಪಾನಮಾಡುತ್ತಿರುವಾಗ ಅರಸನು ಎಸ್ತೇರಳಿಗೆ, “ಎಸ್ತೇರ್ ರಾಣಿಯೇ, ನಿನ್ನ ವಿಜ್ಞಾಪನೆ ಯಾವುದು ಹೇಳು; ಅದನ್ನು ನೆರವೇರಿಸುವೆನು. ನೀನು ನನ್ನ ಅರ್ಧರಾಜ್ಯವನ್ನು ಕೇಳಿಕೊಂಡರೂ ಸರಿಯೇ, ಅದನ್ನು ನಿನಗೆ ಕೊಡುವೆನು” ಎಂದು ಹೇಳಿದನು.
यो दोस्रो दिनमा, तिनीहरूले दाखमद्य बाँड्दै गर्दा राजाले एस्तरलाई सोधे, “रानी एस्तर, तिम्री बिन्ती के हो? तिमीलाई त्यो दिइनेछ । तिम्रो अनुरोध के हो? आधा राज्यसम्म पनि तिमीलाई दिइनेछ ।”
3 ೩ ಆಗ ಎಸ್ತೇರ್ ರಾಣಿಯು, “ಅರಸನು ನನ್ನ ಮೇಲೆ ಕಟಾಕ್ಷವಿಟ್ಟು ಸಮ್ಮತಿಸುವುದಾದರೆ ನನ್ನ ವಿಜ್ಞಾಪನೆಯನ್ನೂ, ಪ್ರಾರ್ಥನೆಯನ್ನೂ ಲಾಲಿಸಿ ನನ್ನ ಜೀವವನ್ನೂ ಮತ್ತು ನನ್ನ ಜನಾಂಗವನ್ನೂ ಉಳಿಸಬೇಕು.
तर रानी एस्तरले जवाफ दिइन्, “हे महाराज, मैले हजुरको नजरमा निगाह पाएकी छु र हजुरलाई खुसी लाग्छ भने, मेरो जीवन मलाई नै दिइयोस् । मेरो बिन्ती यही नै हो, र मेरो जातिको लागि पनि यसै गरियोस् भनी म बिन्ती गर्छु ।
4 ೪ ಜನರು ನಮ್ಮನ್ನು ಕೊಂದು ಸಂಹರಿಸಿ, ನಮ್ಮನ್ನು ನಿರ್ನಾಮಗೊಳಿಸುವ ಹಾಗೆ ನಾವು ಮಾರಲ್ಪಟ್ಟೆವು. ನಾವು ಸೇವಕ ಸೇವಕಿಯರಾಗುವುದಕ್ಕೆ ಗುಲಾಮರಂತೆ ಮಾರಲ್ಪಟ್ಟಿದ್ದರೆ ಆ ಕಷ್ಟದ ವಿಷಯದಲ್ಲಿ ರಾಜನನ್ನು ತೊಂದರೆಪಡಿಸುವುದು ಯೋಗ್ಯವಲ್ಲವೆಂದು ಸುಮ್ಮನಿರುತ್ತಿದ್ದೆನು” ಎಂದು ಉತ್ತರಕೊಟ್ಟಳು.
किनकि म र मेरो मानिसहरू नाश पारिन, मारिन र नामेट पारिन बेचिएका छौँ । हामी दास-दासीको रूपमा मात्र दासत्वमा बेचिएका भए म चुप रहन्थेँ किनकि त्यस्तो दुःखले मात्र त महाराजालाई बाधा दिनु न्यासङ्गत हुँदैन ।”
5 ೫ ಅಹಷ್ವೇರೋಷ್ ರಾಜನು ಎಸ್ತೇರ್ ರಾಣಿಯನ್ನು, “ಇಂಥ ದುಷ್ಕೃತ್ಯದ ಮೇಲೆ ಮನಸ್ಸಿಟ್ಟವನು ಯಾವನು? ಅವನೆಲ್ಲಿ?” ಎಂದು ಕೇಳಿದನು.
तब राजा अहासूरसले रानी एस्तरलाई सोधे, “त्यो को हो? यस्तो कुरा गर्न आफ्नो हृदय भरेर बस्ने त्यो व्यक्ति कहाँ छ?
6 ೬ ಆಗ ಆಕೆಯು, “ನಮ್ಮನ್ನು ಬಾಧಿಸಬೇಕೆಂದಿರುವ ಹಗೆಗಾರನು ಮತ್ತು ಶತ್ರುವು ಈ ದುಷ್ಟ ಹಾಮಾನನೇ” ಎಂದಳು. ಇದನ್ನು ಕೇಳಿ ಹಾಮಾನನು ರಾಣಿಯ ಮುಂದೆ ಭಯಭೀತನಾದನು.
एस्तरले जवाई दिइन्, “त्यो विरोधी, शत्रु यही दुष्ट हामान हो ।” तब हामान राजा र रानीको सामु डरले थरथर काँपे ।
7 ೭ ಅರಸನು ರೌದ್ರಾವೇಶನಾಗಿ ದ್ರಾಕ್ಷಾರಸ ಪಾನಮಾಡುವುದನ್ನು ಬಿಟ್ಟೆದ್ದು ಅರಮನೆಯ ತೋಟಕ್ಕೆ ಹೋದನು. ಹಾಮಾನನಾದರೋ ಅರಸನಿಂದ ತನಗೆ ಕೇಡು ಸಿದ್ಧವಾಯಿತೆಂದು ತಿಳಿದು ಎಸ್ತೇರಳ ಹತ್ತಿರ ತನ್ನ ಪ್ರಾಣರಕ್ಷಣೆಯ ನಿಮಿತ್ತವಾಗಿ ಬಿನ್ನಹಮಾಡಿಕೊಳ್ಳಲು ನಿಂತುಕೊಂಡಿದ್ದನು.
राजा भोजमा दाखमद्य पिइरहेको अवस्थाबाट रिसले चुर भएर उठे, र राजमहलको बगैँचामा गए, तर हामानचाहिं रानी एस्तरबाट आफ्नो जीवनको भिग माग्न त्यहीँ बसे । राजाले तिनको विरुद्धमा विपत्ती ल्याउँदै थिए भनी तिनले देखे ।
8 ೮ ಅರಸನು ಅರಮನೆಯ ತೋಟದಿಂದ ತಾನು ದ್ರಾಕ್ಷಾರಸ ಪಾನಮಾಡಿದ ಗೃಹಕ್ಕೆ ಹಿಂತಿರುಗಿ ಬಂದು ಎಸ್ತೇರಳು ಒರಗಿಕೊಳ್ಳುವ ಸುಖಾಸನದ ಮೇಲೆ ಹಾಮಾನನು ಬಿದ್ದುಕೊಂಡಿರುವುದನ್ನು ಕಂಡು, “ಇವನು ರಾಣಿಯನ್ನು ನನ್ನ ಮುಂದೆಯೇ ಅರಮನೆಯಲ್ಲಿ ಭಂಗಪಡಿಸಬೇಕೆಂದಿರುತ್ತಾನೋ?” ಅಂದನು. ಅರಸನ ಬಾಯಿಂದ ಈ ಮಾತು ಹೊರಬಂದ ಕೂಡಲೆ ಸೇವಕರು ಹಾಮಾನನ ಮುಖಕ್ಕೆ ಮುಸುಕು ಹಾಕಿ ಎಳೆದುಕೊಂಡು ಹೋದರು.
तब राजमहलको बगैँचाबाट दाखमद्य बाँडिएको कोठामा राजा फर्केर आए । हामानचाहिं भर्खरै एस्तर बसिरहेको सोफाको छेउमा पसारो परेका थिए । राजाले भने, “के मेरै उपस्थिति मेरै घरमा त्यसले रानीलाई बलात्कार गर्न खोज्छ?” राजाको मुखबाट यो वाक्य बाहिर निस्कनेबित्तिकै अधिकारीहरूले हामानको अनुहार छोपे ।
9 ೯ ಆಗ ಅರಸನ ಸೇವೆಮಾಡುತ್ತಿದ್ದ ಕಂಚುಕಿಗಳಲ್ಲಿ ಒಬ್ಬನಾದ ಹರ್ಬೋನನು, “ಅರಸನ ಪ್ರಾಣರಕ್ಷಣೆಗಾಗಿ ಸಮಾಚಾರವನ್ನು ತಿಳಿಸಿದ ಮೊರ್ದೆಕೈಯನ್ನು ನೇತುಹಾಕಿಸುವುದಕ್ಕೆ ಇವನು ಐವತ್ತು ಮೊಳ ಎತ್ತರವಾದ ಗಲ್ಲು ಕಂಬವನ್ನು ಸಿದ್ಧಮಾಡಿಸಿದ್ದಾನೆ” ಎಂದನು. ಅದಕ್ಕೆ ಅರಸನು, “ಹಾಗಾದರೆ ಹಾಮಾನನ್ನು ಅದಕ್ಕೇ ನೇತುಹಾಕಿರಿ” ಎಂದು ಆಜ್ಞಾಪಿಸಿದನು.
तब राजाको सेवा गर्ने एक जना अधिकारी हर्बोनाले भने, “हामानको घरको छेउमा पच्चिस मिटर लामो एउटा फाँसीको काठ खडा छ । महाराजाको ज्यान जोगाइदन बोल्ने मोर्दकैको निम्ति त्यसले त्यो तयार पारेको हो ।” राजाले भने, “त्यसलाई त्यसैमा झुण्ड्याओ ।”
10 ೧೦ ಹಾಮಾನನನ್ನು ಮೊರ್ದೆಕೈಗಾಗಿ ಸಿದ್ಧಮಾಡಿಸಿದ್ದ ಗಲ್ಲುಗಂಬಕ್ಕೆ ಏರಿಸಿದರು. ಹೀಗೆ ಅರಸನ ಕೋಪವೂ ಶಮನವಾಯಿತು.
त्यसैले तिनीहरूले हामानले मोर्दकै को निम्ति तयार पारेको फाँसीको काठमा उसैलाई झुण्ड्याए । तब राजाको रिस मर्यो ।