< ಎಸ್ತೇರಳು 2 >
1 ೧ ಇದಾದನಂತರ ಅರಸನಾದ ಅಹಷ್ವೇರೋಷನು ಕೋಪವನ್ನು ಬಿಟ್ಟು ವಷ್ಟಿಯನ್ನೂ, ಆಕೆ ಮಾಡಿದ್ದನ್ನೂ ಮತ್ತು ಆಕೆಯ ವಿಷಯದಲ್ಲಿ ಮಾಡಿದ ತೀರ್ಪನ್ನೂ ನೆನಪುಮಾಡಿಕೊಳ್ಳುತ್ತಿದ್ದನು.
यी कुरापछि जब राजा अहासूरसको रिस मर्यो तिनले वश्ती र उनले गरेकी कुराको बारेमा सोचे । तिनले उनको विरुद्धमा निकालेको आदेशको बारेमा पनि सोचे ।
2 ೨ ಆಗ ಅವನ ಸೇವೆಮಾಡುತ್ತಿದ್ದ ರಾಜಪರಿವಾರದವರು ಅರಸನಿಗೆ, “ಅರಸನಿಗೋಸ್ಕರ ಸುಂದರಿಯರಾದ ಕನ್ಯೆಯರನ್ನು ಹುಡುಕುವುದಕ್ಕೆ ಅಪ್ಪಣೆಮಾಡಬೇಕು.
तब राजाको सेवा गर्ने जवान मानिसहरूले तिनलाई भने, “राजाको लागि सुन्दरी कन्या युवतीहरूको खोजी गर्ने काम होस् ।
3 ೩ ಅರಸನು ತನ್ನ ರಾಜ್ಯದ ಎಲ್ಲಾ ಸಂಸ್ಥಾನಗಳಿಗೆ ಕಾರ್ಯನಿರ್ವಾಹಕರನ್ನು ಕಳುಹಿಸಬೇಕು; ಅವರು ಸುಂದರಿಯರಾದ ಎಲ್ಲಾ ಕನ್ಯೆಯರನ್ನು ಶೂಷನ್ ಕೋಟೆಯ ಅಂತಃಪುರದಲ್ಲಿ ಕೂಡಿಸಿ, ಅಂತಃಪುರದ ಪಾಲಕನೂ ರಾಜಕಂಚುಕಿಯೂ ಆದ ಹೇಗೈಯ ವಶಕ್ಕೆ ಕೊಡಲಿ. ಅವನು ಅವರಿಗೆ ಕಾಂತಿಯನ್ನು ಹೆಚ್ಚಿಸುವ ಲೇಪನ ದ್ರವ್ಯಗಳನ್ನು ಹಂಚಲಿ.
राजाले शूशनको किल्लाको स्त्री-घरमा सबै सुन्दरी कन्या युवतीहरू ल्याउनलाई आफ्नो राज्यका सारा प्रान्तहरूमा अधिकारीहरू नियुक्त गर्ने काम होस् । तिनीहरूलाई स्त्रीहरूको निरिक्षक राजाका अधिकारी हेगेको हेरचाहमा राखियोस्, र तिनले उनीहरूलाई आफ्ना सिङ्गारका सामानहरू उपलब्ध गराऊन् ।
4 ೪ ಅರಸನು ಯಾವ ಕನ್ಯೆಯನ್ನು ಇಷ್ಟಪಡುವನೋ ಆ ಕನ್ಯೆಯು ವಷ್ಟಿಗೆ ಬದಲಾಗಿ ರಾಣಿಯಾಗಲಿ” ಎಂದು ಹೇಳಿದರು. ಅರಸನು ಅವರ ಅಭಿಪ್ರಾಯಕ್ಕೆ ಸಮ್ಮತಿಸಿ ಅದರಂತೆಯೇ ಮಾಡಿದನು.
राजालाई खुसी पार्ने युवतीचाहिं वश्तीको सट्टामा रानी होऊन् ।” राजालाई यो सल्लाह मन पर्यो, र तिनले त्यसै गरे ।
5 ೫ ಶೂಷನ್ ಕೋಟೆಯಲ್ಲಿ ಮೊರ್ದೆಕೈ ಎಂಬ ಒಬ್ಬ ಯೆಹೂದ್ಯ ಮನುಷ್ಯನು ವಾಸಮಾಡುತ್ತಿದ್ದನು. ಇವನು ಬೆನ್ಯಾಮೀನ್ ಕುಲದ ಕೀಷನ ಮರಿಮಗನೂ, ಶಿಮ್ಗೀಯ ಮೊಮ್ಮಗನೂ, ಯಾಯೀರನ ಮಗನೂ ಆಗಿದ್ದನು.
शूशनको किल्लामा कोही एक जना यहूदी थिए जसको नाउँ मोर्दकै थियो जो याईरका छोरा, शिमीका नाति र कीशका पनाति बेन्यामीन कुलका थिए ।
6 ೬ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಂದ ಯೆಹೂದರಾಜನಾದ ಯೆಹೋಯಾಕೀನನೊಡನೆ ಸೆರೆಯಾಗಿ ಒಯ್ಯಲ್ಪಟ್ಟವರಲ್ಲಿ ಇವನೂ ಒಬ್ಬನು.
तिनी यहूदाका राजा यहोयाकीनसँगै यरूशलेमबाट निर्वासनमा लगिनेहरूमध्ये एक जना थिए जसलाई बेबिलोनका राजा नबूकदनेसरले कैद गरेर लगेका थिए ।
7 ೭ ಇವನು ಎಸ್ತೇರ್ ಎಂಬ ಹೆಸರಿನ ಹದೆಸ್ಸಾ ಎಂಬ ತನ್ನ ಚಿಕ್ಕಪ್ಪನ ಅನಾಥಳಾದ ಮಗಳನ್ನು ತಂದೆತಾಯಿಗಳು ಸತ್ತಂದಿನಿಂದ ಪುತ್ರಿಯನ್ನಾಗಿ ಸ್ವೀಕರಿಸಿ ಸಾಕುತ್ತಿದ್ದನು. ಆಕೆಯು ರೂಪವತಿಯೂ ಲಾವಣ್ಯವತಿಯೂ ಆಗಿದ್ದಳು.
तिनले हदस्सा अर्थात् आफ्ना काकाकी छोरी एस्तरको हेरचाह गर्दै थिए, किनकि उनका बुबाआमा थिएनन् । यी युवतीको चेहरा सुन्दर थियो, र हेर्दा राम्री देखिन्थिन् । मोर्दकैले उनलाई आफ्नै छोरीको रूपमा लिएका थिए ।
8 ೮ ಅರಸನ ನಿರ್ಣಯವೂ, ಆಜ್ಞೆಯೂ ಪ್ರಕಟಿಸಲ್ಪಟ್ಟ ತರುವಾಯ ಕಾರ್ಯನಿರ್ವಾಹಕರು ಅನೇಕಾನೇಕ ಕನ್ಯೆಯರನ್ನು ಕೂಡಿಸಿ ಶೂಷನ್ ಕೋಟೆಯಲ್ಲಿ ಹೇಗೈಯ ವಶಕ್ಕೆ ಒಪ್ಪಿಸಿದಾಗ ಎಸ್ತೇರಳೂ ಅರಮನೆಗೆ ಬಂದು ಅಂತಃಪುರ ಪಾಲಕನಾದ ಹೇಗೈಯ ಪರಾಂಬರಿಕೆಯಲ್ಲಿದ್ದಳು.
जब राजाको आदेश र उर्दीको घोषणा गरियो, तब धेरै जना युवतीहरू शूशनको किल्लामा ल्याइए । तिनीहरूलाई हेगेको हेरचाहमा राखियो । एस्तर पनि राजदरबारमा लगिइन् र स्त्रीहरूको निरिक्षक हेगेको हेरचाहमा राखिइन् ।
9 ೯ ಹೇಗೈಯು ಆಕೆಯನ್ನು ಮೆಚ್ಚಿ, ತನ್ನ ದಯೆಗೆ ಪಾತ್ರಳಾದ ಆಕೆಗೋಸ್ಕರ ತಕ್ಕ ಲೇಪನದ್ರವ್ಯಗಳನ್ನೂ ಮತ್ತು ಭೋಜನವನ್ನು ಒದಗಿಸಿದನು. ಅವನು ಆಕೆಗೊಸ್ಕರ ಏಳು ಮಂದಿ ಸೇವಕಿಯರನ್ನೂ ಅರಮನೆಯಿಂದ ಆರಿಸಿಕೊಂಡು ಆಕೆಯನ್ನೂ ಮತ್ತು ಆಕೆಯ ಸೇವಕಿಯರನ್ನೂ ಅಂತಃಪುರದ ಉತ್ತಮ ಭಾಗದಲ್ಲಿರಿಸಿದನು.
यी युवतीले तिनलाई खुसी पारिन्, र उनले तिनको निगाह पाइन् । तिनले तुरुन्तै उनको लागि सिङ्गारका सामानहरू र उनको खानाको हिस्सा उपलब्ध गराए । तिनले उनको लागि राजदरबारका सात जना सेविका तोकिदिए, र तिनले उनी र उनका सेविकाहरूलाई स्त्री-घरको सबैभन्दा राम्रो ठाउँमा सारे ।
10 ೧೦ ಎಸ್ತೇರಳು ತಾನು ಇಂಥ ಜನಾಂಗದವಳು, ಇಂಥ ಕುಲದವಳು ಎಂಬುದನ್ನು ತೋರ್ಪಡಿಸಿಕೊಳ್ಳಲಿಲ್ಲ; ಮೊರ್ದೆಕೈಯು ಹೀಗೆ ಅಪ್ಪಣೆಕೊಟ್ಟಿದ್ದನು.
एस्तरको मानिसहरू र उनका नातेदारहरू को थिए भनेर उनले कसैलाई भनेकी थिइनन्, किनकि मोर्दकैले त्यो नबताउन उनलाई निर्देशन दिएका थिए ।
11 ೧೧ ಅವನು ಆಕೆಯ ಕ್ಷೇಮವನ್ನು ಮತ್ತು ಆಕೆ ಮುಂದೆ ಏನು ಮಾಡಬೇಕು ಎಂದು ವಿಚಾರಿಸುವುದಕ್ಕಾಗಿ ಪ್ರತಿದಿನವೂ ಅಂತಃಪುರದ ಪ್ರಾಕಾರದ ಮುಂದೆ ತಿರುಗಾಡುತ್ತಿದ್ದನು.
एस्तरको अवस्था र उनलाई के गरिन्छ भनी जान्न हरेक दिन मोर्दकै स्त्री-घरको बाहिरपट्टि चोकमा ओहोर-दोहोर गर्थे ।
12 ೧೨ ಕನ್ಯೆಯರ ಲೇಪನಕಾಲವು ಪೂರೈಸುವುದಕ್ಕೆ ಗಂಧರಸಪ್ರಯೋಗದಲ್ಲಿ ಆರು ತಿಂಗಳೂ, ಪರಿಮಳದ್ರವ್ಯ ಕಾಂತಿವರ್ಧಕದ್ರವ್ಯಗಳ ಪ್ರಯೋಗದಲ್ಲಿ ಆರು ತಿಂಳಗಳೂ ಅಂತು ಹನ್ನೆರಡು ತಿಂಗಳು ಕಳೆದವು. ಈ ಕಾಲ ಮುಗಿದನಂತರ ರಾಜನ ಅರಮನೆಯ ನಿಯಮದ ಮೇರೆಗೆ ತನ್ನನ್ನು ಸಿದ್ಧಪಡಿಸಿಕೊಂಡ ಪ್ರತಿಯೊಬ್ಬ ಕನ್ಯೆಯು ಅರಸನಾದ ಅಹಷ್ವೇರೋಷನ ಬಳಿಗೆ ಹೋಗಬೇಕಾಗಿತ್ತು.
स्त्रीहरूका लागि तोकिएको प्रावधानअनुसार, छ महिनासम्म मूर्रको तेल दलेर र छ महिनासम्म अत्तरसाथै सिङ्गारका सामानहरूले सिङ्गारिएर हरेक कन्याले बाहृ महिनासम्म सुन्दरतामा ध्यान दिएपछि—प्रत्येक स्त्रीको राजा अहासूरसकहाँ जाने पालो आउँथ्यो—
13 ೧೩ ಅರಸನ ಬಳಿಗೆ ಹೋಗುವ ಸರದಿ ಯಾರಿಗೆ ಬರುವುದೋ ಆಕೆಯು ಅಂತಃಪುರದಿಂದ ಅರಮನೆಗೆ ತೆಗೆದುಕೊಂಡು ಹೋಗುವುದಕ್ಕೋಸ್ಕರ ಏನು ಕೇಳಿದರೂ ಕೊಡಲ್ಪಡುವುದು.
एक जना युवती राजाकहाँ जाँदा, स्त्री-घरबाट तिनलाई जे लिएर जाने इच्छा हुन्थ्यो त्यो तिनलाई राजदरबारमा लान दिइन्थ्यो ।
14 ೧೪ ಆಕೆಯು ಅಲ್ಲಿಗೆ ಸಾಯಂಕಾಲ ಹೋದವಳು ಮರುದಿನ ಬೆಳಿಗ್ಗೆ ಅರಸನ ಉಪಪತ್ನಿಯರ ಪಾಲಕನಾದ ಶವಷ್ಗಜನೆಂಬ ರಾಜಕಂಚುಕಿಯ ವಶದಲ್ಲಿದ್ದ ಎರಡನೆಯ ಅಂತಃಪುರಕ್ಕೆ ಬರುವಳು. ಅರಸನು ಅವಳನ್ನು ಮೆಚ್ಚಿ ಹೆಸರು ಹೇಳಿ ಕರೆಯಿಸಿದ ಹೊರತಾಗಿ ಒಬ್ಬಳೂ ಅರಸನ ಬಳಿಗೆ ಪುನಃ ಹೋಗುವ ಹಾಗಿರಲಿಲ್ಲ.
साँझमा तिनी भित्र जान्थिन्, र भोलिपल्ट बिहान तिनी दोस्रो स्त्री-घरमा फर्केर आउँथिन्, र फर्केर आएकाहरू उपपत्नीहरूका निरिक्षक राजाका अधिकारी शाश्गजको अधीनमा रहन्थे । राजाले तिनलाई मन पराएर फेरि तिनलाई नबोलाएसम्म तिनी फेरि राजाकहाँ फर्केर जानछैनन् ।
15 ೧೫ ಅರಸನ ಬಳಿಗೆ ಹೋಗುವುದಕ್ಕೆ ಮೊರ್ದೆಕೈಯ ದತ್ತುಪುತ್ರಿಯೂ ಅವನ ಚಿಕ್ಕಪ್ಪನಾದ ಅಬೀಹೈಲನ ಮಗಳೂ ಆದ ಎಸ್ತೇರಳ ಸರದಿ ಬಂದಾಗ, ಅಂತಃಪುರ ಪಾಲಕನಾದ ಹೇಗೈ ಎಂಬ ರಾಜಕಂಚುಕಿಯು ನೇಮಿಸಿದ್ದನ್ನೇ ಹೊರತು ಆಕೆ ಬೇರೇನೂ ಕೇಳಲಿಲ್ಲ. ನೋಡುವವರೆಲ್ಲರೂ ಆಕೆಯನ್ನು ಮೆಚ್ಚುತ್ತಿದ್ದರು.
जब राजाकहाँ जाने एस्तरको पालो आयो, (मोर्दकैका काका अबीहेलकी छोरी, जसलाई तिनले आफ्नै छोरी बनाएका थिए) स्त्रीहरूका निरक्षक राजाका अधिकारी हेगेले दिएका सल्लाहबाहेक उनले कुनै कुनै थोक मागिनन् । एस्तरलाई देख्ने सबै जनाबाट उनले निगाह पाइन् ।
16 ೧೬ ಅರಸನಾದ ಅಹಷ್ವೇರೋಷನ ಬಳಿಗೆ ಅವನ ಆಳ್ವಿಕೆಯ ಏಳನೆಯ ವರ್ಷದ ಹತ್ತನೆಯ ತಿಂಗಳಾದ ಪುಷ್ಯ ಮಾಸದಲ್ಲಿ ಆಕೆಯನ್ನು ರಾಜಗೃಹಕ್ಕೆ ಕರೆದುಕೊಂಡು ಬಂದರು.
अहासूरसको सातौँ वर्षको दसौँ महिना अर्थात् तेबेत महिनामा एस्तरलाई राजाको राजकीय बासस्थानमा लगियो ।
17 ೧೭ ಅರಸನು ಎಲ್ಲಾ ಸ್ತ್ರೀಯರಲ್ಲಿ ಎಸ್ತೇರಳನ್ನು ಮೆಚ್ಚಿದನು. ಎಲ್ಲಾ ಕನ್ಯೆಯರಲ್ಲಿ ಆಕೆಯು ಅವನ ದಯೆಗೂ, ಪ್ರೀತಿಗೂ ಪಾತ್ರಳಾದುದರಿಂದ ಅವನು ರಾಜ ಮುಕುಟವನ್ನು ಆಕೆಯ ತಲೆಯ ಮೇಲಿಟ್ಟು, ಆಕೆಯನ್ನು ವಷ್ಟಿಗೆ ಬದಲಾಗಿ ರಾಣಿಯನ್ನಾಗಿ ಮಾಡಿಕೊಂಡನು.
राजाले अन्य कुनै स्त्रीलाई भन्दा एस्तरलाई बढी मन पराए, र अन्य सबै कन्याहरूले भन्दा बढी उनले स्वीकृति र निगाह पाए । त्यसैले तिनले उनको शिरमा राजकीय शिरपेच पहिराइदिए, र वश्तीको साटो उनलाई रानी बनाए ।
18 ೧೮ ಅವನು ತನ್ನ ಎಲ್ಲಾ ಸರದಾರರಿಗೂ ಮತ್ತು ಪರಿವಾರದವರಿಗೂ ಎಸ್ತೇರಳ ಔತಣ ಎಂದು ದೊಡ್ಡ ಔತಣವನ್ನು ಮಾಡಿಸಿ, ಎಲ್ಲಾ ಸಂಸ್ಥಾನಗಳಲ್ಲಿಯೂ ಸೆರೆಯವರನ್ನು ಬಿಡಿಸಿ, ರಾಜರ ಘನತೆಗೆ ತಕ್ಕಂತೆ ಉದಾರವಾಗಿ ದಾನಧರ್ಮಗಳನ್ನು ಮಾಡಿದನು.
राजाले आफ्ना सबै अधिकारी र सेवकहरूलाई एउटा ठुलो, “एस्तरको भोज” भोज दिए र तिनले प्रान्तहरूलाई कर छुट दिए । तिनले राजकीय उदारतासहित उपहारहरू पनि दिए ।
19 ೧೯ ಎರಡನೆಯ ಬಾರಿ ಕನ್ಯೆಯರನ್ನು ಸೇರಿಸುತ್ತಿದ್ದಾಗ ಮೊರ್ದೆಕೈಯು ಅರಮನೆಯ ಹೆಬ್ಬಾಗಿಲಲ್ಲಿ ಕುಳಿತುಕೊಂಡಿದ್ದನು.
अब दोस्रो पटक कन्याहरू भेला भइरहेका समयमा मोर्दकै राजाको मूलद्वारमा बसिरहेका थिए ।
20 ೨೦ ಎಸ್ತೇರಳಾದರೋ ಮೊರ್ದೆಕೈಯ ಪರಾಂಬರಿಕೆಯಲ್ಲಿದ್ದ ದಿನಗಳಲ್ಲಿ ಹೇಗೋ ಹಾಗೆ ಆಗಲೂ ಅವನ ಆಜ್ಞೆಯನ್ನು ಅನುಸರಿಸುವವಳಾಗಿ ತಾನು ಇಂಥ ಕುಲದವಳು, ಇಂಥ ಜನಾಂಗದವಳು ಎಂಬುದನ್ನು ಯಾರಿಗೂ ತೋರ್ಪಡಿಸಿಕೊಳ್ಳಲಿಲ್ಲ.
मोर्दकैले एस्तरलाई निर्देशन दिएअनुसार उनले आफ्नो जाति र आफ्ना नातेदारहरूको बारेमा कसैलाई भनेकी थिइनन् । मोर्दकैले उनलाई हुर्काउँदाको बेलामा झैँ उनले तिनको सल्लाहलाई निरन्तर मानिन् ।
21 ೨೧ ಆ ದಿನಗಳಲ್ಲಿ ಮೊರ್ದೆಕೈಯು ಅರಮನೆಯ ದ್ವಾರಪಾಲಕರಾದ ಬಿಗೆತಾನ್ ಮತ್ತು ತೆರೆಷ್ ಎಂಬ ಇಬ್ಬರು ರಾಜಕಂಚುಕಿಯರು ಕೋಪವುಳ್ಳವರಾಗಿ ಅರಸನಾದ ಅಹಷ್ವೇರೋಷನಿಗೆ ವಿರುದ್ಧವಾಗಿ ಕೈಯೆತ್ತಬೇಕೆಂದು ಒಳಸಂಚು ಮಾಡಿದ್ದರು.
ती दिनमा मोर्दकै राजाको मूलद्वारमा बसिरहँदा राजाका दुई जना द्वारपाल अधिकारीहरू बिग्थाना र तेरेश रिसाए, अनि तिनीहरूले राजा अहासूरसको हानि गर्न खोजे ।
22 ೨೨ ಈ ಸಂಗತಿಯು ಮೊರ್ದೆಕೈಗೆ ಗೊತ್ತಾದಾಗ ಅವನು ಅದನ್ನು ಎಸ್ತೇರ್ ರಾಣಿಗೆ ತಿಳಿಸಿದನು. ಆಕೆಯು ಅವನ ಹೆಸರನ್ನು ಅರಸನಿಗೆ ಹೇಳಿ ಆ ಸಂಗತಿಯನ್ನು ತಿಳಿಸಿದಳು.
मोर्दकैले यो कुरो थाहा पाएपछि तिनले रानी एस्तरलाई बताए, अनि रानीले मोर्दकैको नाउँ लिएर राजालाई बताइन् ।
23 ೨೩ ಈ ವಿಷಯವು ವಿಚಾರಣೆಗೆ ಬಂದಾಗ ಅದು ನಿಜವೆಂದು ಸಾಬೀತಾದುದರಿಂದ ಆ ಇಬ್ಬರನ್ನೂ ಗಲ್ಲಿಗೆ ಹಾಕಿಸಿದರು. ಆ ಸಂಗತಿಯು ರಾಜನ ದಿನಚರಿಪುಸ್ತಕದಲ್ಲಿ ಬರೆದು ದಾಖಲಿಸಲಾಯಿತು.
त्यो सुचनको अनुसन्धान भयो र पुष्टि भयो, अनि दुवै जनालाई फाँसीको सजाए दिएर काठमा झुण्ड्याइयो । यो कुरोलाई राजाको उपस्थितिमा इतिहासको पुस्तकमा लेखियो ।