< ಎಫೆಸದವರಿಗೆ ಬರೆದ ಪತ್ರಿಕೆ 1 >

1 ದೇವರ ಚಿತ್ತಾನುಸಾರವಾಗಿ ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನು ಎಫೆಸದಲ್ಲಿರುವ ದೇವಜನರಿಗೂ ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯಿಟ್ಟಿರುವವರಿಗೂ ಬರೆಯುವುದೇನಂದರೆ,
ဤၑွရသျေစ္ဆယာ ယီၑုခြီၐ္ဋသျ ပြေရိတး ပေါ်လ ဣဖိၐနဂရသ္ထာန် ပဝိတြာန် ခြီၐ္ဋယီၑော် ဝိၑွာသိနော လောကာန် ပြတိ ပတြံ လိခတိ၊
2 ನಮ್ಮ ತಂದೆಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯು ಶಾಂತಿಯೂ ಉಂಟಾಗಲಿ.
အသ္မာကံ တာတသျေၑွရသျ ပြဘော ရျီၑုခြီၐ္ဋသျ စာနုဂြဟး ၑာန္တိၑ္စ ယုၐ္မာသု ဝရ္တ္တတာံ၊
3 ನಮ್ಮ ಕರ್ತನಾದ ಯೇಸುಕ್ರಿಸ್ತನ ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರವಾಗಲಿ, ಆತನು ಪರಲೋಕದಲ್ಲಿನ ಸಕಲ ಆತ್ಮೀಕ ಆಶೀರ್ವಾದಗಳನ್ನು ನಮಗೆ ಕ್ರಿಸ್ತನಲ್ಲಿ ಅನುಗ್ರಹಿಸಿದ್ದಾನೆ.
အသ္မာကံ ပြဘော ရျီၑေား ခြီၐ္ဋသျ တာတ ဤၑွရော ဓနျော ဘဝတု; ယတး သ ခြီၐ္ဋေနာသ္မဘျံ သရွွမ် အာဓျာတ္မိကံ သွရ္ဂီယဝရံ ဒတ္တဝါန်၊
4 ನಾವು ಆತನ ಸನ್ನಿಧಿಯಲ್ಲಿ ಪರಿಶುದ್ಧರೂ ದೋಷವಿಲ್ಲದವರೂ ಆಗಿರಬೇಕೆಂದು, ಜಗತ್ತು ಸೃಷ್ಟಿಯಾಗುವುದಕ್ಕಿಂತ ಮೊದಲೇ ದೇವರು ಕ್ರಿಸ್ತನಲ್ಲಿ ನಮ್ಮನ್ನು ಆರಿಸಿಕೊಂಡನು.
ဝယံ ယတ် တသျ သမက္ၐံ ပြေမ္နာ ပဝိတြာ နိၐ္ကလင်္ကာၑ္စ ဘဝါမသ္တဒရ္ထံ သ ဇဂတး သၖၐ္ဋေ ပူရွွံ တေနာသ္မာန် အဘိရောစိတဝါန်, နိဇာဘိလၐိတာနုရောဓာစ္စ
5 ದೇವರು ತನ್ನ ದಯಾಪೂರ್ವಕವಾದ ಚಿತ್ತಕ್ಕನುಸಾರವಾಗಿ ಯೇಸು ಕ್ರಿಸ್ತನ ಮೂಲಕ ನಮ್ಮನ್ನು ತನ್ನ ಮಕ್ಕಳನ್ನಾಗಿ ಅಂಗೀಕರಿಸಲು ಪ್ರೀತಿಯಿಂದ ಮೊದಲೇ ಸಂಕಲ್ಪಮಾಡಿದ್ದನು.
ယီၑုနာ ခြီၐ္ဋေန သွသျ နိမိတ္တံ ပုတြတွပဒေ'သ္မာန် သွကီယာနုဂြဟသျ မဟတ္တွသျ ပြၑံသာရ္ထံ ပူရွွံ နိယုက္တဝါန်၊
6 ತನ್ನ ಪ್ರಿಯನಲ್ಲಿಯೇ ನಮಗೆ ಉಚಿತವಾಗಿ ಅನುಗ್ರಹಿಸಿರುವ ತನ್ನ ಮಹಿಮೆಯುಳ್ಳ ಕೃಪೆಯ ಸ್ತುತಿಗಾಗಿ ಇದೆಲ್ಲಾವನ್ನು ಮಾಡಿದನು.
တသ္မာဒ် အနုဂြဟာတ် သ ယေန ပြိယတမေန ပုတြေဏာသ္မာန် အနုဂၖဟီတဝါန်,
7 ಯೇಸುಕ್ರಿಸ್ತನು ನಮಗೋಸ್ಕರ ಸುರಿಸಿದ ರಕ್ತದ ಮೂಲಕ ನಮಗೆ ಆತನ ಕೃಪೆಯ ಐಶ್ವರ್ಯಕ್ಕನುಸಾರವಾಗಿ ಪಾಪ ಕ್ಷಮಾಪಣೆಯೆಂಬ ವಿಮೋಚನೆಯು ಉಂಟಾಯಿತು.
ဝယံ တသျ ၑောဏိတေန မုက္တိမ် အရ္ထတး ပါပက္ၐမာံ လဗ္ဓဝန္တး၊
8 ಈ ಕೃಪೆಯನ್ನು ಆತನು ಎಲ್ಲಾ ಜ್ಞಾನ ವಿವೇಕಗಳೊಂದಿಗೆ ನಮಗೆ ಹೇರಳವಾಗಿ ಸುರಿಸಿದ್ದಾನೆ.
တသျ ယ ဤဒၖၑော'နုဂြဟနိဓိသ္တသ္မာတ် သော'သ္မဘျံ သရွွဝိဓံ ဇ္ဉာနံ ဗုဒ္ဓိဉ္စ ဗာဟုလျရူပေဏ ဝိတရိတဝါန်၊
9 ದೇವರು ಆತನಲ್ಲಿ ಮೊದಲೇ ನಿರ್ಣಯಿಸಿಕೊಂಡಿದ್ದ ಕೃಪೆಯುಳ್ಳ ಸಂಕಲ್ಪದ ಪ್ರಕಾರ ತನ್ನ ಚಿತ್ತದ ರಹಸ್ಯವನ್ನು ನಮಗೆ ತಿಳಿಯಪಡಿಸಿದ್ದಾನೆ.
သွရ္ဂပၖထိဝျော ရျဒျဒ် ဝိဒျတေ တတ္သရွွံ သ ခြီၐ္ဋေ သံဂြဟီၐျတီတိ ဟိတဲၐိဏာ
10 ೧೦ ಕಾಲವು ಪರಿಪೂರ್ಣವಾದಾಗ, ಆತನು ಭೂಪರಲೋಕಗಳಲ್ಲಿರುವ ಸಮಸ್ತವನ್ನು ಕ್ರಿಸ್ತನಲ್ಲಿ ಒಂದುಗೂಡಿಸುವುದೇ ಆ ಸಂಕಲ್ಪವಾಗಿತ್ತು.
တေန ကၖတော ယော မနောရထး သမ္ပူရ္ဏတာံ ဂတဝတ္သု သမယေၐု သာဓယိတဝျသ္တမဓိ သ သွကီယာဘိလာၐသျ နိဂူဎံ ဘာဝမ် အသ္မာန် ဇ္ဉာပိတဝါန်၊
11 ೧೧ ಇದಲ್ಲದೆ ತನ್ನ ಚಿತ್ತದ ಉದ್ದೇಶಕ್ಕನುಸಾರವಾಗಿ ಎಲ್ಲಾ ಕಾರ್ಯಗಳನ್ನು ನಡೆಸುವಾತನು ತನ್ನ ಸಂಕಲ್ಪದ ಪ್ರಕಾರ ಮೊದಲೇ ನೇಮಿಸಲ್ಪಟ್ಟವರಾದ ನಮ್ಮನ್ನು ಕ್ರಿಸ್ತನಲ್ಲಿ ತನ್ನ ಸ್ವಕೀಯ ಜನರನ್ನಾಗಿ ಅರಿಸಿಕೊಂಡನು.
ပူရွွံ ခြီၐ္ဋေ ဝိၑွာသိနော ယေ ဝယမ် အသ္မတ္တော ယတ် တသျ မဟိမ္နး ပြၑံသာ ဇာယတေ,
12 ೧೨ ಕ್ರಿಸ್ತನಲ್ಲಿ ಮೊಟ್ಟ ಮೊದಲು ನಿರೀಕ್ಷೆಯನ್ನಿಟ್ಟ ನಾವು ಆತನ ಮಹಿಮೆಯನ್ನು ಸ್ತುತಿಸುವವರಾಗಿರಬೇಕೆಂದು ಹೀಗೆ ಮಾಡಿದನು.
တဒရ္ထံ ယး သွကီယေစ္ဆာယား မန္တြဏာတး သရွွာဏိ သာဓယတိ တသျ မနောရထာဒ် ဝယံ ခြီၐ္ဋေန ပူရွွံ နိရူပိတား သန္တော'ဓိကာရိဏော ဇာတား၊
13 ೧೩ ನೀವು ಸಹ ನಿಮ್ಮ ರಕ್ಷಣಾ ಸುವಾರ್ತೆಯ ಸತ್ಯವಾಕ್ಯವನ್ನು ಕೇಳಿ, ಕ್ರಿಸ್ತನಲ್ಲಿ ನಂಬಿಕೆಯಿಟ್ಟು, ವಾಗ್ದಾನಮಾಡಲ್ಪಟ್ಟ ಪವಿತ್ರಾತ್ಮನಿಂದ ಮುದ್ರೆಯನ್ನು ಹೊಂದಿದ್ದೀರಿ.
ယူယမပိ သတျံ ဝါကျမ် အရ္ထတော ယုၐ္မတ္ပရိတြာဏသျ သုသံဝါဒံ နိၑမျ တသ္မိန္နေဝ ခြီၐ္ဋေ ဝိၑွသိတဝန္တး ပြတိဇ္ဉာတေန ပဝိတြေဏာတ္မနာ မုဒြယေဝါင်္ကိတာၑ္စ၊
14 ೧೪ ದೇವರು ತನ್ನ ಸ್ವಕೀಯ ಜನರಿಗೆ ವಿಮೋಚನೆಯುಂಟಾಗುತ್ತದೆ ಎಂಬುದಕ್ಕೆ ಪವಿತ್ರಾತ್ಮನು ನಮ್ಮ ಬಾಧ್ಯತೆಗೆ ಸಂಚಕಾರವಾಗಿದ್ದಾನೆ. ಈ ಕಾರಣ ದೇವರಿಗೆ ಮಹಿಮೆಯನ್ನು ಸಲ್ಲಿಸೋಣ.
ယတသ္တသျ မဟိမ္နး ပြကာၑာယ တေန ကြီတာနာံ လောကာနာံ မုက္တိ ရျာဝန္န ဘဝိၐျတိ တာဝတ် သ အာတ္မာသ္မာကမ် အဓိကာရိတွသျ သတျင်္ကာရသျ ပဏသွရူပေါ ဘဝတိ၊
15 ೧೫ ಹೀಗಿರಲಾಗಿ ಕರ್ತನಾದ ಯೇಸುವಿನಲ್ಲಿ ನೀವು ಇಟ್ಟಿರುವ ನಂಬಿಕೆಯನ್ನು ಮತ್ತು ದೇವಜನರೆಲ್ಲರಿಗೆ ನೀವು ತೋರಿಸುವ ಪ್ರೀತಿಯ ವಿಷಯವನ್ನು ಕೇಳಿ,
ပြဘော် ယီၑော် ယုၐ္မာကံ ဝိၑွာသး သရွွေၐု ပဝိတြလောကေၐု ပြေမ စာသ္တ ဣတိ ဝါရ္တ္တာံ ၑြုတွာဟမပိ
16 ೧೬ ನಾನು ನಿಮಗೋಸ್ಕರ ನನ್ನ ಪ್ರಾರ್ಥನೆಗಳಲ್ಲಿ ವಿಜ್ಞಾಪನೆ ಮಾಡುವಾಗ ದೇವರಿಗೆ ಎಡೆಬಿಡದೆ ಸ್ತೋತ್ರ ಮಾಡುತ್ತೇನೆ.
ယုၐ္မာနဓိ နိရန္တရမ် ဤၑွရံ ဓနျံ ဝဒန် ပြာရ္ထနာသမယေ စ ယုၐ္မာန် သ္မရန် ဝရမိမံ ယာစာမိ၊
17 ೧೭ ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ಮಹಿಮಾಸ್ವರೂಪನಾದ ತಂದೆಯೂ ಆಗಿರುವಾತನು ತನ್ನ ವಿಷಯವಾಗಿ ಪೂರ್ಣವಾದ ತಿಳಿವಳಿಕೆಯನ್ನು ಕೊಟ್ಟು, ಜ್ಞಾನ ಮತ್ತು ಪ್ರಕಟಣೆಗಳ ಆತ್ಮವನ್ನು ನಿಮಗೆ ದಯಪಾಲಿಸಬೇಕೆಂದು ಪ್ರಾರ್ಥಿಸುತ್ತೇನೆ.
အသ္မာကံ ပြဘော ရျီၑုခြီၐ္ဋသျ တာတော ယး ပြဘာဝါကရ ဤၑွရး သ သွကီယတတ္တွဇ္ဉာနာယ ယုၐ္မဘျံ ဇ္ဉာနဇနကမ် ပြကာၑိတဝါကျဗောဓကဉ္စာတ္မာနံ ဒေယာတ်၊
18 ೧೮ ಆತನೇ ನಿಮ್ಮ ಮನೋನೇತ್ರಗಳನ್ನು ಬೆಳಗಿಸಿ, ಆತನ ಕರೆಯ ನಿರೀಕ್ಷೆಯು ಎಂಥದೆಂಬುದನ್ನೂ ಮತ್ತು ದೇವಜನರಲ್ಲಿರುವ ಆತನ ಸ್ವತ್ತಿನ ಮಹಿಮಾತಿಶಯವು ಎಂಥದೆಂಬುದನ್ನೂ,
ယုၐ္မာကံ ဇ္ဉာနစက္ၐူံၐိ စ ဒီပ္တိယုက္တာနိ ကၖတွာ တသျာဟွာနံ ကီဒၖၑျာ ပြတျာၑယာ သမ္ဗလိတံ ပဝိတြလောကာနာံ မဓျေ တေန ဒတ္တော'ဓိကာရး ကီဒၖၑး ပြဘာဝနိဓိ ရွိၑွာသိၐု စာသ္မာသု ပြကာၑမာနသျ
19 ೧೯ ಮತ್ತು ನಂಬುವವರಾದ ನಮ್ಮಲ್ಲಿ ಕಾರ್ಯ ಸಾಧಿಸುವ ಆತನ ಪರಾಕ್ರಮ ಶಕ್ತಿಯ ಅಪಾರವಾದ ಮಹತ್ವವು ಎಂಥದೆಂಬುದನ್ನೂ ನೀವು ತಿಳಿಯುವಂತೆ ದೇವರು ನಿಮಗೆ ಅನುಗ್ರಹಿಸಲಿ.
တဒီယမဟာပရာကြမသျ မဟတွံ ကီဒၖဂ် အနုပမံ တတ် သရွွံ ယုၐ္မာန် ဇ္ဉာပယတု၊
20 ೨೦ ಈ ಪರಾಕ್ರಮ ಶಕ್ತಿಯಿಂದಲೇ ದೇವರು ಕ್ರಿಸ್ತನನ್ನು ಮರಣದಿಂದ ಎಬ್ಬಿಸಿ, ಸಕಲ ರಾಜತ್ವ, ಅಧಿಕಾರ, ಅಧಿಪತ್ಯ ಮತ್ತು ಪ್ರಭುತ್ವಗಳ ಮೇಲೆಯೂ
ယတး သ ယသျား ၑက္တေး ပြဗလတာံ ခြီၐ္ဋေ ပြကာၑယန် မၖတဂဏမဓျာတ် တမ် ဥတ္ထာပိတဝါန်,
21 ೨೧ ಈ ಲೋಕದಲ್ಲಿ ಮಾತ್ರವಲ್ಲದೆ ಮುಂಬರುವ ಲೋಕದಲ್ಲಿಯೂ ಹೆಸರುಗೊಂಡವರೆಲ್ಲರ ಎಲ್ಲಾ ನಾಮಗಳ ಮೇಲೆಯೂ ಪರಲೋಕದಲ್ಲಿ ಆತನನ್ನು ತನ್ನ ಬಲಗಡೆಯಲ್ಲಿ ಕುಳ್ಳಿರಿಸಿಕೊಂಡನು. (aiōn g165)
အဓိပတိတွပဒံ ၑာသနပဒံ ပရာကြမော ရာဇတွဉ္စေတိနာမာနိ ယာဝန္တိ ပဒါနီဟ လောကေ ပရလောကေ စ ဝိဒျန္တေ တေၐာံ သရွွေၐာမ် ဦရ္ဒ္ဓွေ သွရ္ဂေ နိဇဒက္ၐိဏပါရ္ၑွေ တမ် ဥပဝေၑိတဝါန်, (aiōn g165)
22 ೨೨ ಇದಲ್ಲದೆ ದೇವರು ಸಮಸ್ತವನ್ನೂ ಯೇಸುಕ್ರಿಸ್ತನ ಪಾದದ ಕೆಳಗೆ ಅಧೀನಮಾಡಿ, ಸಭೆಗಾಗಿ ಎಲ್ಲಾದರ ಮೇಲೆ ಆತನನ್ನು ಶಿರಸ್ಸಾಗಿ ನೇಮಿಸಿದನು.
သရွွာဏိ တသျ စရဏယောရဓော နိဟိတဝါန် ယာ သမိတိသ္တသျ ၑရီရံ သရွွတြ သရွွေၐာံ ပူရယိတုး ပူရကဉ္စ ဘဝတိ တံ တသျာ မူရ္ဒ္ဓါနံ ကၖတွာ
23 ೨೩ ಸಭೆಯು ಕ್ರಿಸ್ತನ ದೇಹವಾಗಿದೆ, ಎಲ್ಲವನ್ನೂ ಎಲ್ಲಾ ವಿಧದಲ್ಲೂ ಪೂರೈಸುವಾತನಿಂದ ಅದು ಸಂಪೂರ್ಣತೆಯುಳ್ಳದ್ದಾಗಿದೆ.
သရွွေၐာမ် ဥပရျျုပရိ နိယုက္တဝါံၑ္စ သဲဝ ၑက္တိရသ္မာသွပိ တေန ပြကာၑျတေ၊

< ಎಫೆಸದವರಿಗೆ ಬರೆದ ಪತ್ರಿಕೆ 1 >