< ಪ್ರಸಂಗಿ 1 >
1 ೧ ಯೆರೂಸಲೇಮಿನಲ್ಲಿ ಅರಸನಾಗಿದ್ದ ದಾವೀದನ ಮಗನಾದ ಪ್ರಸಂಗಿಯ ಮಾತುಗಳು.
यी वचनहरू एक जना उपदेशकका हुन् जो दाऊदका छोरा र यरूशलेमका राजा थिए ।
2 ೨ ಪ್ರಸಂಗಿಯು ಹೀಗೆ ಹೇಳುತ್ತಾನೆ. “ವ್ಯರ್ಥವೇ ವ್ಯರ್ಥ, ವ್ಯರ್ಥವೇ ವ್ಯರ್ಥ, ಸಮಸ್ತವೂ ವ್ಯರ್ಥ.
उपदेशक यसो भन्छन्, “तुवाँलोको बाफ र बतासमा भएको मन्द हावाजस्तै हरेक कुरा व्यर्थ छ, जसले धेरै प्रश्न उब्जाउँछ ।
3 ೩ ಈ ಲೋಕದಲ್ಲಿ ಮನುಷ್ಯನು ಪಡುವ ಎಲ್ಲಾ ಪ್ರಯಾಸದಿಂದ ಅವನಿಗೆ ಲಾಭವೇನು?
मानिसले सूर्यमूनि कठिन परिश्रम गर्दा सारा कामबाट उसले के लाभ पाउँछ र?
4 ೪ ಒಂದು ಸಂತತಿಯು ಹೋಗುವುದು, ಇನ್ನೊಂದು ಸಂತತಿಯು ಬರುವುದು, ಆದರೆ ಭೂಮಿಯು ಶಾಶ್ವತವಾಗಿ ನಿಲ್ಲುವುದು.
एउटा पुस्ता जान्छ, र अर्को पुस्ता आउँछ, तर पृथ्वीचाहिँ सदासर्वदा रहिरहन्छ ।
5 ೫ ಸೂರ್ಯನು ಉದಯಿಸುತ್ತಾನೆ. ಸೂರ್ಯನು ಮುಳುಗುತ್ತಾನೆ. ತಾನು ಉದಯಿಸುವ ಸ್ಥಾನಕ್ಕೆ ಅವಸರವಾಗಿ ಹಿಂತಿರುಗಿ ಹೋಗುತ್ತಾನೆ.
सूर्य उदाउँछ, र अस्ताउँछ, अनि आफू उदाएको ठाउँमा चाँडै फर्केर जान्छ ।
6 ೬ ಗಾಳಿಯು ದಕ್ಷಿಣದ ಕಡೆಗೆ ಬೀಸುತ್ತದೆ. ಉತ್ತರದ ಕಡೆಗೆ ತಿರುಗುವುದು. ಅದು ಸುತ್ತುತ್ತಾ ಸುತ್ತುತ್ತಾ ಹೋಗಿ, ಗಾಳಿ ಸುತ್ತಳತೆಯ ಪ್ರಕಾರ ಹಿಂದಿರುಗುತ್ತವೆ.
बतास दक्षिणतिर बहन्छ, र अनि सधैँ उत्तरतिर चक्कर मार्छ । त्यो सधैँ आफ्नो मार्गमा जाने र फर्कने गर्छ ।
7 ೭ ನದಿಗಳೆಲ್ಲಾ ಸಮುದ್ರಕ್ಕೆ ಹರಿದು ಹೋಗುತ್ತವೆ. ಆದರೂ ಸಮುದ್ರವು ತುಂಬುವುದಿಲ್ಲ. ನದಿಗಳು ಎಲ್ಲಿಂದ ಬಂದಿವೆಯೋ ಅದೇ ಸ್ಥಳಕ್ಕೆ ಹಿಂತಿರುಗುತ್ತವೆ.
सबै नदी समुद्रमा बगेर जान्छन्, तर समुद्र कहिल्यै भरिँदैन । जहाँ नदीहरू बहन्छन्, तिनीहरू फेरि त्यहीँ जान्छन् ।
8 ೮ ಎಲ್ಲಾ ಕಾರ್ಯಗಳು ಪ್ರಯಾಸದಿಂದ ತುಂಬಿದೆ. ಇದನ್ನು ಮನುಷ್ಯನು ವಿವರಿಸಲಾರನು. ನೋಡುವುದರಿಂದ ಕಣ್ಣು ತೃಪ್ತಿಗೊಳ್ಳದು, ಕೇಳುವುದರಿಂದ ಕಿವಿಯು ದಣಿಯದು.
हरेक कुरो विरक्तलाग्दो छ, र कसैले यसको वर्णन गर्न सक्दैन । आँखाले जे देख्छ, त्यसबाट यो सन्तुष्ट हुँदैन, न त कानले जे सुन्छ, त्यसबाट यो सन्तुष्ट हुन्छ ।
9 ೯ ಇದ್ದದ್ದೇ ಇರುವುದು, ನಡೆದದ್ದೇ ನಡೆಯುವುದು. ಸೂರ್ಯನ ಕೆಳಗೆ ಹೊಸದಾದದ್ದು ಯಾವುದೂ ಇಲ್ಲ.
जे भएको छ, त्यो हुने छ, र जे गरिएको छ, त्यो गरिने छ । सूर्यमूनि केही पनि नयाँ छैन ।
10 ೧೦ ‘ನೋಡು, ಇದು ಹೊಸದು’ ಎಂದು ಯಾವ ವಿಷಯದಲ್ಲಾದರೂ ಹೇಳಬಹುದೋ? ನಮಗಿಂತ ಮೊದಲು ಇದ್ದದ್ದು, ಪುರಾತನ ಕಾಲದಿಂದ ಇದ್ದದ್ದೇ.
के यस्तो कुनै कुरो छ जसको विषयमा 'हेर्, यो त नयाँ छ' भन्न सकिन्छ? जे अस्तित्वमा छ, त्यो लामो समयदेखि अस्तित्वमा रहिआएको छ, हामीभन्दा धेरै पहिले देखि रहँदै आएको छ ।
11 ೧೧ ಪುರಾತನ ಕಾಲದಲ್ಲಿ ನಡೆದ ಸಂಗತಿಗಳ ಜ್ಞಾಪಕವು ಈಗಿನ ಜನರಿಗೆ ಇಲ್ಲ. ಮುಂದಿನ ಕಾಲದಲ್ಲಿ ನಡೆಯುವ ಸಂಗತಿಗಳ ಜ್ಞಾಪಕವು ಮುಂದಿನ ಕಾಲದ ಜನರಿಗೆ ಇರುವುದಿಲ್ಲ.”
प्राचीन कालमा भएका कुराहरू कसैले सम्झन्छजस्तो छैन; धेरै पछि भएका कुराहरू र भविष्यमा हुने कुराहरू पनि कसैले सम्झने छजस्तो छैन ।”
12 ೧೨ ಪ್ರಸಂಗಿಯಾದ ನಾನು ಯೆರೂಸಲೇಮಿನಲ್ಲಿ ಇಸ್ರಾಯೇಲರಿಗೆ ಅರಸನಾಗಿದ್ದೆನು.
म उपदेशक हुँ, र मैले यरूशलेममा राजा भएर शासन गरेको छु ।
13 ೧೩ ಆಕಾಶದ ಕೆಳಗಡೆ ನಡೆಯುವ ಎಲ್ಲಾ ಕೆಲಸಗಳನ್ನು ಜ್ಞಾನದಿಂದ ವಿಚಾರಿಸಿ ವಿಮರ್ಶಿಸುವುದಕ್ಕೆ ನನ್ನ ಮನಸ್ಸನ್ನು ಇಟ್ಟೆನು. ದೇವರು ಮನುಷ್ಯರ ಮೇಲೆ ನೇಮಿಸಿರುವ ಕೆಲಸವೆಲ್ಲಾ ಬಹು ಪ್ರಯಾಸವೇ.
आकाशमूनि गरिने हरेक कुरोलाई बुद्धिद्वारा अध्ययन गर्न र अनुसन्धान गर्न मैले मेरो मन लगाएँ । त्यो अनुसन्धान एउटा कष्टकर काम हो जुन परमेश्वरले मानिसहरूलाई व्यस्त राख्न दिनुभएको हो ।
14 ೧೪ ಲೋಕದಲ್ಲಿ ನಡೆಯುವ ಎಲ್ಲಾ ಕೆಲಸಗಳನ್ನು ನೋಡಿದ್ದೇನೆ. ಆಹಾ, ಗಾಳಿಯನ್ನು ಹಿಂದಟ್ಟುವ ಹಾಗೆ ಸಮಸ್ತವೂ ವ್ಯರ್ಥ.
मैले सूर्यमूनि गरिने सबै काम देखेको छु, र ती सबै व्यर्थ छन् र बतासलाई खेदेजस्तो हो
15 ೧೫ ವಕ್ರವಾದದ್ದನ್ನು ಸರಿಮಾಡುವುದಕ್ಕೆ ಆಗುವುದಿಲ್ಲ! ಇಲ್ಲದ್ದನ್ನು ಲೆಕ್ಕಿಸುವುದಕ್ಕೆ ಅಸಾಧ್ಯ!
बाङ्गोलाई सोझो बनाउन सकिँदैन । हराएकोलाई गन्न सकिँदैन ।
16 ೧೬ ನಾನು ನನ್ನ ಮನಸ್ಸಿನಲ್ಲಿ ಯೋಚಿಸುತ್ತಾ, “ನೋಡು, ನನಗಿಂತ ಮೊದಲು ಯೆರೂಸಲೇಮನ್ನು ಆಳಿದವರೆಲ್ಲರಿಗಿಂತಲೂ ಹೆಚ್ಚು ಜ್ಞಾನವನ್ನು ಸಂಪಾದಿಸಿಕೊಂಡಿದ್ದೇನೆ. ನನ್ನ ಹೃದಯವು ಜ್ಞಾನವನ್ನೂ, ತಿಳಿವಳಿಕೆಯನ್ನೂ ವಿಶೇಷವಾಗಿ ಹೊಂದಿದೆ” ಎಂದುಕೊಂಡೆನು.
मैले मेरो मनलाई यसो भनेको छु, “हेर्, यरूशलेममा मभन्दा अगि भएका सबैले भन्दा मैले धेरै बुद्धि प्राप्त गरेको छु । मेरो मनले धेरै बुद्धि र ज्ञान देखेको छ ।”
17 ೧೭ ಆಗ ಜ್ಞಾನವನ್ನೂ, ಹುಚ್ಚುತನವನ್ನೂ, ಬುದ್ಧಿಹೀನತೆಯನ್ನೂ ಗ್ರಹಿಸಲು ನಾನು ಮನಸ್ಸಿಟ್ಟೆನು. ಇದು ಸಹ ಗಾಳಿಯನ್ನು ಹಿಂದಟ್ಟುವ ಹಾಗೆ ಎಂದು ನಾನು ಅರಿತುಕೊಂಡೆನು.
त्यसैले बुद्धि, पागलपन र मूर्खता जान्न मेरो मन लगाएँ । यो पनि बतासको रेखदेख गर्ने कोसिस रहेछ भनी मैले बुझेँ ।
18 ೧೮ ಏಕೆಂದರೆ ಬಹಳ ಜ್ಞಾನವಿದ್ದಲ್ಲಿ ಬಹಳ ಸಂಕಟ. ಹೆಚ್ಚು ತಿಳಿವಳಿಕೆಯನ್ನು ಪಡೆದವನಿಗೆ ಹೆಚ್ಚು ವ್ಯಥೆ ಇದೆ.
किनकि बुद्धिको प्रशस्ततामा धेरै निराशा हुन्छ, र ज्ञान बढाउनेले पिर बढाउँछ ।