< ಪ್ರಸಂಗಿ 10 >
1 ೧ ಸತ್ತ ನೊಣಗಳಿಂದ ಗಂಧದತೈಲವು ಕೊಳೆತು ನಾರುವುದು. ಹಾಗೆಯೇ ಸ್ವಲ್ಪ ಹುಚ್ಚುತನವು ಜ್ಞಾನ ಮತ್ತು ಘನತೆಗಳನ್ನು ಕೆಡಿಸುತ್ತದೆ.
Nga ensowera enfu bwe zoonoona akaloosa akawunya obulungi, bwe katyo akasobyo akatono bwe koonoona amagezi n’ekitiibwa.
2 ೨ ಜ್ಞಾನಿಯ ಬುದ್ಧಿಯು ಅವನ ಬಲಗಡೆಯಿರುವುದು. ಅಜ್ಞಾನಿಯ ಬುದ್ಧಿಯು ಅವನ ಎಡಗಡೆಯಿರುವುದು.
Omutima gw’omuntu ow’amagezi gumukozesa ekituufu, naye ogw’omusirusiru gumutwala kukola bitasaana.
3 ೩ ಇದಲ್ಲದೆ ಹುಚ್ಚನು ಬುದ್ಧಿತಪ್ಪಿ ತಿರುಗುವ ದಾರಿಯಲ್ಲಿ ತನ್ನ ಹುಚ್ಚುತನವನ್ನು ಎಲ್ಲರಿಗೆ ಪ್ರಕಟಮಾಡುವನು.
Ne bw’aba ng’atambula, amanyibwa nga talina magezi, era buli amulaba agamba nti musirusiru.
4 ೪ ದೊರೆಯು ನಿನ್ನ ಮೇಲೆ ಸಿಟ್ಟುಗೊಂಡರೆ ಉದ್ಯೋಗವನ್ನು ಬಿಡಬೇಡ. ತಾಳ್ಮೆಯು ದೊಡ್ಡ ಸಿಟ್ಟನ್ನು ಅಡಗಿಸುತ್ತದೆ.
Mukama wo bw’akunyiigiranga, tomulaganga busungu; okuddamu n’eggonjebwa kukyusa ekiruyi.
5 ೫ ಲೋಕದಲ್ಲಿ ಒಂದು ಸಂಕಟವನ್ನು ಕಂಡಿದ್ದೇನೆ. ಅದು ಆಳುವವನ ಸಮ್ಮುಖದಿಂದ ಹೊರಟುಬರುವ ಹಾಗೆಯೇ ತೋರುತ್ತದೆ.
Ekibi ekirala kye nalaba, kye kikwata ku nsobi y’omufuzi:
6 ೬ ಮೂಢರಿಗೆ ಮಹಾ ಪದವಿ ದೊರೆಯುವುದು. ಘನವಂತರೂ ಹೀನಸ್ಥಿತಿಯಲ್ಲಿರುವರು.
nalaba ng’abasirusiru baweebwa ebifo ebisava, naye ng’abagagga bo baweebwa ebyo ebya wansi.
7 ೭ ಆಳುಗಳು ಕುದುರೆ ಸವಾರಿ ಮಾಡುವುದನ್ನೂ, ಪ್ರಭುಗಳು ಆಳುಗಳಂತೆ ನೆಲದ ಮೇಲೆ ನಡೆಯುವುದನ್ನೂ ನೋಡಿದ್ದೇನೆ.
Ate nalaba ng’abaddu beebagala embalaasi, songa abalangira batambuza bigere ng’abaddu.
8 ೮ ಗುಂಡಿಯನ್ನು ತೋಡುವವನು ತಾನೇ ಅದರಲ್ಲಿ ಬೀಳುವನು, ಗೋಡೆಯನ್ನು ಒಡೆಯುವವನಿಗೆ, ಹಾವು ಕಚ್ಚುವುದು.
Asima ekinnya alikigwamu, n’oyo amenya ekisenge omusota gulimubojja.
9 ೯ ಯಾವನು ಕಲ್ಲುಗಳನ್ನು ಕೀಳುವನೋ ಅವನಿಗೆ ಹಾನಿ ಆಗುವುದು. ಮರವನ್ನು ಕಡೆಯುವವನಿಗೆ ಅಪಾಯವಿದೆ.
Oyo ayasa amayinja gamulumya, n’oyo ayasa enku zimulumya.
10 ೧೦ ಮೊಂಡು ಕೊಡಲಿಯ ಬಾಯಿಯನ್ನು ಮಸೆಯದಿದ್ದರೆ ಅವನು ಹೆಚ್ಚು ಬಲವನ್ನು ಪ್ರಯೋಗಿಸಬೇಕು. ಕಾರ್ಯಸಿದ್ಧಿಗೆ ಜ್ಞಾನವೇ ಸಾಧನ.
Embazzi bwe tebaako bwogi, n’etewagalwa, agitemya ateekwa okufuba ennyo, naye obumanyirivu bwe buwangula.
11 ೧೧ ಹಾವಾಡಿಸುವುದರೊಳಗೆ ಹಾವು ಕಚ್ಚಿದರೆ, ಹಾವಾಡಿಗನಿಗೆ ಯಾವ ಪ್ರಯೋಜನವೂ ಇಲ್ಲ.
Omusota bwe guluma nga tegunnakola bya bufuusa, omufuusa talina kyafunamu.
12 ೧೨ ಜ್ಞಾನಿಯ ಮಾತು ಹಿತ. ಅಜ್ಞಾನಿಯ ಬಾಯಿ ತನ್ನನ್ನೇ ನುಂಗಿಬಿಡುವುದು.
Ebigambo ebiva mu kamwa k’omuntu ow’amagezi bya muwendo nnyo eri abo ababiwulira, naye akamwa k’omusirusiru kamusuula mu ntata.
13 ೧೩ ಅಜ್ಞಾನಿಯ ಮಾತುಗಳು ಆರಂಭದಲ್ಲಿ ಬುದ್ಧಿಹೀನತೆ, ಅಂತ್ಯದಲ್ಲಿ ಅಪಾಯದ ಮರಳುತನ.
Entandikwa y’ebigambo bye nga temuli nsa, ne ku nkomerero yaabyo biba mususa.
14 ೧೪ ಮನುಷ್ಯನು ಮುಂದೆ ಆಗುವುದನ್ನು ತಿಳಿಯನು. ತಾನು ಕಾಲವಾದ ಮೇಲೆ ಹೀಗೆಯೇ ಆಗುವುದೆಂದು ಅವನು ಯಾರಿಂದ ತಿಳಿದುಕೊಂಡಾನು? ಅಜ್ಞಾನಿಯ ಮಾತುಗಳೋ ಬಹಳ.
Omusirusiru asavuwaza ebigambo. Tewali amanyi birijja, kale ani asobola okumubuulira ebiribaawo oluvannyuma lwe?
15 ೧೫ ಪಟ್ಟಣದ ದಾರಿ ತಿಳಿಯದವನಿಗೆ ಮೂಢರು ತಿಳಿಸಲು, ಪಡುವ ಪ್ರಯಾಸದಿಂದ ಆಯಾಸವೇ.
Omusirusiru aterebuka mangu olw’ekitamugendedde bulungi, n’abulwa n’ekkubo erimutwala mu kibuga.
16 ೧೬ ದೇಶದ ಅರಸನು ಯುವಕನಾಗಿದ್ದರೆ, ಪ್ರಭುಗಳು ಹೊತ್ತಾರೆ ಔತಣಕ್ಕೆ ಕುಳಿತುಕೊಂಡರೆ ನಿನಗೆ ದೌರ್ಭಾಗ್ಯವೇ!
Zikusanze gw’ensi kabaka bw’aba nga yali muddu, nga n’abalangira bakeera kwetamiirira!
17 ೧೭ ದೇಶದ ಅರಸನು ಕುಲೀನನಾಗಿದ್ದರೆ, ಪ್ರಭುಗಳು ಅಮಲಿಗಾಗಿ ಅಲ್ಲ, ಆದರೆ ಶಕ್ತಿಗಾಗಿ ಸಕಾಲದಲ್ಲಿ ಊಟಕ್ಕೆ ಕುಳಿತರೆ ನಿನಗೆ ಭಾಗ್ಯವೇ!
Olina omukisa gw’ensi kabaka wo bw’aba nga wa lulyo lulangira, ate nga n’abalangira bo bamanyi ekiseera eky’okuliiramu, olw’okufuna amaanyi so si lwa kutamiira.
18 ೧೮ ಸೋಮಾರಿತನದಿಂದ ತೊಲೆಗಳು ಬೊಗ್ಗುವವು. ಜೋಲುಗೈಯಿಂದ ಮನೆ ಸೋರುವುದು.
Obugayaavu buleetera akasolya k’ennyumba okutonnya, n’emikono egitayagala kukola gireetera ennyumba okutonnya.
19 ೧೯ ನಗುವಿಗಾಗಿ ಔತಣವು, ದ್ರಾಕ್ಷಾರಸದಿಂದ ಜೀವನಕ್ಕೆ ಆನಂದವು, ಧನವು ಎಲ್ಲವನ್ನೂ ಒದಗಿಸಿಕೊಡುವುದು.
Ekijjulo kikolebwa lwa kusanyuka, ne wayini yeeyagaza obulamu, naye ensimbi y’esobola byonna.
20 ೨೦ ಮನಸ್ಸಿನಲ್ಲಿಯೂ ಅರಸನನ್ನು ದೂಷಿಸದಿರು. ಮಲಗುವ ಕೋಣೆಯಲ್ಲಿಯೂ ಧನಿಕನನ್ನು ಬಯ್ಯದಿರು. ಆಕಾಶದ ಹಕ್ಕಿಯು ಆ ಶಬ್ದವನ್ನು ಮುಟ್ಟಿಸುವವು; ಪಕ್ಷಿಯು ಆ ವಿಷಯವನ್ನು ತಿಳಿಸುವುದು.
Tokolimira kabaka mu mutima gwo newaakubadde okukolimira omugagga mu kisenge kyo, kubanga ennyonyi ey’omu bbanga eyinza okwetikka ebigambo byo nga biwandiikiddwa ku biwaawaatiro byayo n’ebibatuusaako.