< ಧರ್ಮೋಪದೇಶಕಾಂಡ 5 >
1 ೧ ಮೋಶೆ ಎಲ್ಲಾ ಇಸ್ರಾಯೇಲರನ್ನು ಕರೆದು, “ಇಸ್ರಾಯೇಲರೇ, ನಾನು ಈಗ ನಿಮಗೆ ತಿಳಿಸುವ ಆಜ್ಞಾವಿಧಿಗಳನ್ನು ಕೇಳಿರಿ; ಇವುಗಳನ್ನು ಗ್ರಹಿಸಿಕೊಂಡು ಅನುಸರಿಸಿ ನಡೆಯಬೇಕು.
၁မောရှေသည်ဣသရေလအမျိုးသားအပေါင်း တို့ကိုဆင့်ခေါ်၍ သူတို့အားဤသို့ပြောကြား လေသည်။ ``ဣသရေလအမျိုးသားတို့၊ ယနေ့ သင်တို့အား ငါပြဋ္ဌာန်းပေးမည့်ပညတ်တော် အားလုံးကိုနားထောင်ကြလော့။ ထိုပညတ် တော်များကိုနာယူလိုက်နာရန်သတိပြု ကြလော့။-
2 ೨ ನಮ್ಮ ದೇವರಾದ ಯೆಹೋವನು ಹೋರೇಬಿನಲ್ಲಿ ನಮ್ಮ ಸಂಗಡ ನಿಬಂಧನೆಯನ್ನು ಮಾಡಿದನು.
၂ငါတို့၏ဘုရားသခင်ထာဝရဘုရားသည် သိနာတောင်ပေါ်တွင်ငါတို့နှင့်ပဋိညာဉ် ပြုတော်မူ၏။-
3 ೩ ಆತನು ನಮ್ಮ ಪೂರ್ವಿಕರ ಸಂಗಡ ಈ ನಿಬಂಧನೆಯನ್ನು ಮಾಡದೆ, ಈಗ ಇಲ್ಲಿ ಜೀವದಿಂದಿರುವ ನಮ್ಮ ಸಂಗಡಲೇ ಇದನ್ನು ಮಾಡಿದನು.
၃ထာဝရဘုရားသည်ငါတို့၏ဘိုးဘေး တို့နှင့်သာလျှင် ပဋိညာဉ်ပြုသည်မဟုတ်။ ယနေ့အသက်ရှင်လျက်ရှိသော ငါတို့အား လုံးနှင့်လည်းပဋိညာဉ်ပြုတော်မူ၏။-
4 ೪ ಯೆಹೋವನು ಆ ಬೆಟ್ಟದ ಮೇಲೆ ಬೆಂಕಿಯ ಜ್ಞಾಲೆಯೊಳಗಿಂದ ಮುಖಾಮುಖಿಯಾಗಿ ನಿಮ್ಮ ಸಂಗಡ ಮಾತನಾಡಿದನು.
၄ထာဝရဘုရားသည်တောင်ပေါ်တွင်မီးထဲ မှ သင်တို့နှင့်မျက်နှာချင်းဆိုင်၍မိန့်မြွက် တော်မူသည်။-
5 ೫ ನೀವು ಆ ಬೆಂಕಿಯ ಜ್ವಾಲೆಯ ದೆಸೆಯಿಂದ ಭಯಪಟ್ಟು, ಬೆಟ್ಟವನ್ನು ಹತ್ತದೆ ಇದ್ದುದರಿಂದ ನಾನು ಯೆಹೋವನಿಗೂ ಮತ್ತು ನಿಮಗೂ ನಡುವೆ ನಿಂತು ಆತನು ಹೇಳಿದ ಮಾತುಗಳನ್ನು ನಿಮಗೆ ತಿಳಿಸಿದೆನು. ಆತನು ಹೇಳಿದ್ದೇನೆಂದರೆ,
၅သင်တို့သည်မီးကိုကြောက်ရွံ့သဖြင့်တောင် ပေါ်သို့မတက်ဝံ့သောကြောင့် ငါသည်ထာဝရ ဘုရားနှင့်သင်တို့စပ်ကြားတွင်ရပ်လျက် ထာဝရဘုရား၏အမိန့်တော်ကိုသင်တို့ အားဆင့်ဆိုခဲ့၏။''
6 ೬ “ನೀನು ದಾಸತ್ವದಲ್ಲಿದ್ದ ಐಗುಪ್ತದೇಶದೊಳಗಿಂದ ನಿನ್ನನ್ನು ಬಿಡುಗಡೆಮಾಡಿದ ಯೆಹೋವನೆಂಬ ನಿನ್ನ ದೇವರು ನಾನೇ.
၆``ထာဝရဘုရားက၊`ငါသည်သင်တို့ကို ကျွန်ခံရာအီဂျစ်ပြည်မှထုတ်ဆောင်ခဲ့သော သင်တို့၏ဘုရားသခင်ထာဝရဘုရား ဖြစ်တော်မူ၏။'
7 ೭ ನಾನಲ್ಲದೆ ನಿನಗೆ ಬೇರೆ ದೇವರುಗಳು ಇರಬಾರದು.
၇`` `ငါမှတစ်ပါးအခြားသောဘုရားကို မကိုးကွယ်နှင့်။-
8 ೮ “ಯಾವ ಮೂರ್ತಿಯನ್ನೂ ಮಾಡಿಕೊಳ್ಳಬಾರದು. ಆಕಾಶದಲ್ಲಾಗಲಿ, ಭೂಮಿಯಲ್ಲಾಗಲಿ, ಭೂಮಿಯ ಕೆಳಗಣ ನೀರಿನಲ್ಲಾಗಲಿ ಇರುವ ಯಾವುದರ ರೂಪವನ್ನೂ ಮಾಡಿಕೊಳ್ಳಬಾರದು.
၈`` `မိုးကောင်းကင်၌လည်းကောင်း၊ မြေကြီးပေါ်၌ လည်းကောင်း၊ မြေအောက်ရေထဲ၌လည်းကောင်း ရှိသောအရာနှင့်ပုံသဏ္ဌာန်တူသောရုပ်တုများ ကိုကိုးကွယ်ရန်အတွက်မထုလုပ်နှင့်။-
9 ೯ ಅವುಗಳಿಗೆ ಅಡ್ಡಬೀಳಲೂ ಬಾರದು, ಪೂಜೆಮಾಡಲೂ ಬಾರದು. ನಿನ್ನ ದೇವರಾದ ಯೆಹೋವನೆಂಬ ನಾನು ನನಗೆ ಸಲ್ಲತಕ್ಕ ಗೌರವವನ್ನು ಮತ್ತೊಬ್ಬನಿಗೆ ಸಲ್ಲಗೊಡಿಸದವನಾದ್ದರಿಂದ, ನನ್ನನ್ನು ದ್ವೇಷಿಸುವವರ ವಿಷಯದಲ್ಲಿ ಪೂರ್ವಿಕರ ದೋಷಫಲವನ್ನು ಮಕ್ಕಳ ಮೇಲೆ ಮೂರು ನಾಲ್ಕು ತಲೆಗಳ ವರೆಗೆ ಬರಮಾಡುವವನಾಗಿದ್ದೇನೆ.
၉ထိုရုပ်တုများကိုဦးမချ၊ ဝတ်မပြုနှင့်။ အဘယ်ကြောင့်ဆိုသော်ငါသည်သင်တို့၏ ဘုရားသခင်ထာဝရဘုရားဖြစ်၍ ပြိုင် ဘက်ကိုလုံးဝလက်ခံတော်မမူ။ ငါ့ကို မုန်းသောသူတို့အားငါဒဏ်ခတ်မည်။ ထို မျှမကသူတို့၏တတိယမျိုးဆက်၊ စတုတ္ထမျိုးဆက်တိုင်အောင်ငါဒဏ်ခတ် မည်။-
10 ೧೦ ನನ್ನನ್ನು ಪ್ರೀತಿಸಿ ನನ್ನ ಆಜ್ಞೆಗಳನ್ನು ಕೈಕೊಳ್ಳುವವರಿಗೋಸ್ಕರ ಸಾವಿರ ತಲೆಗಳವರೆಗೆ ದಯೆತೋರಿಸುವವನಾಗಿಯೂ ಇದ್ದೇನೆ.
၁၀သို့ရာတွင်ငါ့ကိုချစ်၍ငါ၏ပညတ်တော်တို့ ကိုစောင့်ထိန်းသောသူတို့အား အမျိုးဆက် ထောင်သောင်းတိုင်အောင်ငါ၏မေတ္တာကိုပြ မည်။
11 ೧೧ “ನಿನ್ನ ದೇವರಾದ ಯೆಹೋವನ ಹೆಸರನ್ನು ಅಯೋಗ್ಯಕಾರ್ಯಕ್ಕಾಗಿ ಉಪಯೋಗಿಸಬಾರದು. ಯೆಹೋವನು ತನ್ನ ಹೆಸರನ್ನು ಅಯೋಗ್ಯ ಕಾರ್ಯಕ್ಕಾಗಿ ಉಪಯೋಗಿಸುವವನನ್ನು ಶಿಕ್ಷಿಸದೆ ಬಿಡುವುದಿಲ್ಲ.
၁၁`` `သင်၏ဘုရားသခင်ထာဝရဘုရားသည် နာမတော်ကိုအလွဲသုံးစားပြုသူအားဒဏ် ခတ်တော်မူမည်ဖြစ်သောကြောင့် ကိုယ်တော်၏ နာမတော်ကိုအလွဲသုံးစားမပြုနှင့်။
12 ೧೨ “ನಿನ್ನ ದೇವರಾದ ಯೆಹೋವನು ಆಜ್ಞಾಪಿಸಿದಂತೆ ನೀನು ಸಬ್ಬತ್ ದಿನವನ್ನು ದೇವರ ದಿನವೆಂದು ಆಚರಿಸಬೇಕು.
၁၂`` `သင်တို့၏ဘုရားသခင်ငါထာဝရဘုရား မိန့်တော်မူသည်အတိုင်း ဥပုသ်နေ့ကိုစောင့် ထိန်း၍ထိုနေ့ကိုငါ့အတွက်သီးသန့်ထား လော့။-
13 ೧೩ ಆರು ದಿನಗಳಲ್ಲಿ ನೀನು ದುಡಿದು ನಿನ್ನ ಕೆಲಸವನ್ನೆಲ್ಲಾ ಮಾಡಬೇಕು.
၁၃ခြောက်ရက်ပတ်လုံးအလုပ်လုပ်လော့။
14 ೧೪ ಏಳನೆಯ ದಿನ ನಿನ್ನ ದೇವರಾದ ಯೆಹೋವನಿಗೆ ಮೀಸಲಾದ ವಿಶ್ರಾಂತಿ ದಿನವಾಗಿದೆ. ಅದರಲ್ಲಿ ನೀನು ಯಾವ ಕೆಲಸವನ್ನೂ ಮಾಡಬಾರದು. ನಿನ್ನ ಗಂಡುಮಕ್ಕಳು, ಹೆಣ್ಣುಮಕ್ಕಳು, ಗಂಡಾಳು, ಹೆಣ್ಣಾಳು, ಎತ್ತು, ಕತ್ತೆ, ಪಶುಗಳು ಮತ್ತು ನಿನ್ನ ಊರಲ್ಲಿರುವ ಅನ್ಯದೇಶದವರು ಯಾವ ಕೆಲಸವನ್ನೂ ಮಾಡಬಾರದು. ನಿನ್ನಂತೆಯೇ ನಿನ್ನ ಗಂಡಾಳು ಹೆಣ್ಣಾಳುಗಳಿಗೂ ವಿಶ್ರಾಂತಿ ದೊರೆಯಬೇಕು.
၁၄သတ္တမနေ့သည်ငါဘုရားအတွက်ဆက်ကပ် ရသောအလုပ်နားရက်ဖြစ်၏။ ထိုနေ့တွင်သင် မှစ၍ သင်၏သားသမီး၊ ကျေးကျွန်၊ တိရစ္ဆာန် နှင့်သင်တို့တိုင်းပြည်တွင်နေထိုင်သောလူမျိုး ခြားများသည်အလုပ်မလုပ်ရ။ သင်တို့၏ ကျေးကျွန်သည်သင်တို့ကဲ့သို့အနားယူ ရမည်။-
15 ೧೫ ಐಗುಪ್ತ ದೇಶದಲ್ಲಿ ನೀವು ದಾಸತ್ವದಲ್ಲಿದ್ದುದ್ದನ್ನೂ, ನಿಮ್ಮ ದೇವರಾದ ಯೆಹೋವನು ಭುಜಪರಾಕ್ರಮದಿಂದಲೂ ಮತ್ತು ಶಿಕ್ಷಾಹಸ್ತದಿಂದಲೂ ನಿಮ್ಮನ್ನು ಬಿಡುಗಡೆಮಾಡಿದ್ದನ್ನೂ ಜ್ಞಾಪಕಮಾಡಿಕೊಳ್ಳಿರಿ. ನೀವು ಸಬ್ಬತ್ ದಿನವನ್ನು ಆಚರಿಸಬೇಕೆಂದು ನಿಮ್ಮ ದೇವರಾದ ಯೆಹೋವನು ಇದಕ್ಕಾಗಿಯೇ ಆಜ್ಞಾಪಿಸಿದ್ದಾನೆ.
၁၅သင်တို့သည်အီဂျစ်ပြည်တွင်ကျွန်ခံခဲ့ဖူး ကြောင်းကိုလည်းကောင်း၊ သင်တို့ဘုရားသခင် ထာဝရဘုရားသည် သင်တို့ကိုမဟာတန်ခိုး တော်ဖြင့်ကယ်တင်ခဲ့ကြောင်းကိုလည်းကောင်း သတိရကြလော့။ ထိုအကြောင်းကြောင့်ငါ သည်သင်တို့အားဥပုသ်နေ့ကိုစောင့်ရန် မိန့်မှာတော်မူ၏။
16 ೧೬ “ನಿನ್ನ ದೇವರಾದ ಯೆಹೋವನು ಆಜ್ಞಾಪಿಸಿದಂತೆ ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು; ಸನ್ಮಾನಿಸಿದರೆ ನಿನ್ನ ದೇವರಾದ ಯೆಹೋವನು ನಿನಗೆ ಅನುಗ್ರಹಿಸುವ ದೇಶದಲ್ಲಿ ನೀನು ಬಹುಕಾಲ ಕ್ಷೇಮವಾಗಿ ಇರುವಿ, ಮತ್ತು ನಿನಗೆ ಒಳ್ಳೆಯದಾಗುವುದು.
၁၆`` `သင်တို့အားထာဝရဘုရားပေးသနား တော်မူမည့်ပြည်တွင် သင်တို့သည်ကောင်းစား ၍အသက်ရှည်စေရန် သင်တို့၏ဘုရားသခင် ထာဝရဘုရားမိန့်မှာတော်မူသည့်အတိုင်း မိဘကိုရိုသေသမှုပြုကြလော့။
၁၇`` `သူ့အသက်ကိုမသတ်နှင့်။
18 ೧೮ “ವ್ಯಭಿಚಾರ ಮಾಡಬಾರದು.
၁၈`` `သူ့သားအိမ်ရာကိုမပြစ်မှားနှင့်။
၁၉`` `သူ့ဥစ္စာကိုမခိုးနှင့်။
20 ೨೦ “ಮತ್ತೊಬ್ಬನ ಮೇಲೆ ಸುಳ್ಳು ಸಾಕ್ಷಿ ಹೇಳಬಾರದು.
၂၀`` `သူတစ်ပါးတစ်ဘက်၌မတရားသက်သေ မခံနှင့်။
21 ೨೧ “ಮತ್ತೊಬ್ಬನ ಹೆಂಡತಿಯನ್ನು ಅಪೇಕ್ಷಿಸಬಾರದು; ಮತ್ತೊಬ್ಬನ ಹೊಲ, ಮನೆ, ಗಂಡಾಳು, ಹೆಣ್ಣಾಳು, ಎತ್ತು ಮತ್ತು ಕತ್ತೆ ಮುಂತಾದವುಗಳನ್ನು ಆಶಿಸಬಾರದು.”
၂၁`` `သူတစ်ပါး၏မယား၊ အိမ်၊ မြေ၊ ကျေးကျွန်၊ နွား၊ မြည်းမှစ၍သူပိုင်သမျှတို့ကိုတပ်မက် ခြင်းမရှိနှင့်' ဟုမိန့်တော်မူ၏။
22 ೨೨ ಈ ಮಾತುಗಳನ್ನು ಯೆಹೋವನು ಆ ಬೆಟ್ಟದ ಮೇಲೆ ಬೆಂಕಿ, ಮೋಡ, ಕಾರ್ಗತ್ತಲು ಇವುಗಳ ಮಧ್ಯದೊಳಗಿಂದ ನಿಮ್ಮ ಸರ್ವಸಮೂಹಕ್ಕೆ ಕೇಳಿಸುವಂತೆ ಮಹಾ ಸ್ವರದಿಂದ ನುಡಿದನು. ಇದಲ್ಲದೆ ಆತನು ಮತ್ತೇನೂ ಹೇಳಲಿಲ್ಲ. ಆತನು ಆ ಮಾತುಗಳನ್ನು ಎರಡು ಕಲ್ಲಿನ ಹಲಗೆಗಳಲ್ಲಿ ಕೆತ್ತಿ ನನಗೆ ಕೊಟ್ಟನು.
၂၂``ထာဝရဘုရားသည်တောင်အနီးသို့စုရုံး လာသောသင်တို့အပေါင်းအား ဤပညတ်တော် များကိုပြဋ္ဌာန်းပေးတော်မူ၏။ ထာဝရဘုရား သည်မီးနှင့်မှောင်မည်းသောမိုးတိမ်ထဲမှကျယ် သောအသံတော်ဖြင့် ဤပညတ်တော်များကိုမိန့် မြွက်တော်မူ၏။ ထပ်၍မိန့်မြွက်တော်မမူ။ ထို့ နောက်ထာဝရဘုရားသည်ပညတ်တော်များ ကိုကျောက်ပြားနှစ်ချပ်ပေါ်တွင်ရေး၍ငါ့ အားပေးအပ်တော်မူသည်။''
23 ೨೩ ಆ ಬೆಟ್ಟವು ಬೆಂಕಿಯಿಂದ ಪ್ರಜ್ವಲಿಸುತ್ತಿರುವಾಗ ಆ ಕತ್ತಲೊಳಗಿಂದ ದೇವರ ಸ್ವರವನ್ನು ಕೇಳಿ, ನೀವು ಅಂದರೆ ನಿಮ್ಮ ಕುಲಾಧಿಪತಿಗಳೂ ಮತ್ತು ಹಿರಿಯರೂ ನನ್ನ ಬಳಿಗೆ ಬಂದು,
၂၃``တောင်တစ်ခုလုံးမီးတောက်၍အမှောင်ထု ထဲမှဗျာဒိတ်တော်သံကိုသင်တို့ကြားရ သောအခါ သင်တို့၏ခေါင်းဆောင်များနှင့် အနွယ်အကြီးအကဲတို့သည်ငါ့ထံသို့ ချဉ်းကပ်၍၊-
24 ೨೪ “ನಮ್ಮ ದೇವರಾದ ಯೆಹೋವನು ತನ್ನ ಘನವನ್ನೂ ಮತ್ತು ಮಹಿಮೆಯನ್ನೂ ನಮಗೆ ತೋರಿಸಿ, ಅಗ್ನಿಜ್ವಾಲೆಯೊಳಗಿಂದ ತನ್ನ ಸ್ವರವನ್ನು ನಮಗೆ ಕೇಳುವಂತೆ ಮಾಡಿದನಲ್ಲಾ. ಮನುಷ್ಯನು ತನ್ನ ಸಂಗಡ ದೇವರು ಮಾತನಾಡಿದರೂ ಸಾಯದೆ ಬದುಕಿದ್ದುಂಟೆಂಬುದು ಈ ಹೊತ್ತು ನಮಗೆ ತಿಳಿಯಬಂತು.
၂၄`အကျွန်ုပ်တို့၏ဘုရားသခင်ထာဝရဘုရား ၏အသံတော်ကိုမီးထဲမှကြားရသဖြင့် အကျွန်ုပ်တို့အားထာဝရဘုရားက မိမိ ၏ဘုန်းတန်ခိုးတော်ကိုထင်ရှားပြသတော် မူပါပြီ။ ဘုရားသခင်သည်လူသားအား စကားပြောသော်လည်း လူသားသည်မသေ ဘဲအသက်ရှင်နေနိုင်ကြောင်းကိုအကျွန်ုပ် တို့ယနေ့သိမြင်ရကြပါပြီ။-
25 ೨೫ ಆದರೂ ಈ ಘೋರವಾದ ಅಗ್ನಿಜ್ವಾಲೆಯು ನಮ್ಮನ್ನು ದಹಿಸಿ ಬಿಟ್ಟಿತು, ಮತ್ತು ನಮ್ಮ ದೇವರಾದ ಯೆಹೋವನ ಸ್ವರವನ್ನು ನಾವು ಪುನಃ ಕೇಳಿದರೆ ಸತ್ತೇವು.
၂၅သို့ရာတွင်အကျွန်ုပ်တို့သည် အဘယ်ကြောင့် အရဲစွန့်၍အသေခံရမည်နည်း။ ထိုကြောက် မက်ဖွယ်မီးကြီးကြောင့် အကျွန်ုပ်တို့သည် ပျက်စီးဆုံးရှုံးရကြပါလိမ့်မည်။ အကျွန်ုပ် တို့၏ဘုရားသခင်ထာဝရဘုရား၏ အသံတော်ကိုထပ်၍ကြားရလျှင်အကျွန်ုပ် တို့သေရပါလိမ့်မည်။-
26 ೨೬ ಬೆಂಕಿಯ ಜ್ವಾಲೆಯೊಳಗಿಂದ ಮಾತನಾಡುವ ಚೈತನ್ಯಸ್ವರೂಪನಾದ ದೇವರ ಸ್ವರವನ್ನು ನಾವು ಕೇಳಿದಂತೆ ಎಲ್ಲಾ ಮನುಷ್ಯರೊಳಗೆ ಯಾರು ಕೇಳಿ ಬದುಕಿದರು? ಹೀಗಿರುವುದರಿಂದ ನಾವು ಯಾಕೆ ಸಾಯಬೇಕು?
၂၆အသက်ရှင်တော်မူသောဘုရား၏အသံတော် ကိုမီးထဲမှ အကျွန်ုပ်တို့ကဲ့သို့ကြားရပြီးမှ အသက်ရှင်သောလူသတ္တဝါရှိဖူးပါသလော။-
27 ೨೭ ನೀನೇ ಹತ್ತಿರಕ್ಕೆ ಹೋಗಿ ನಮ್ಮ ದೇವರಾದ ಯೆಹೋವನ ಆಜ್ಞೆಗಳನ್ನೆಲ್ಲಾ ತಿಳಿದುಕೊಂಡು ಬಂದು ನಮಗೆ ತಿಳಿಸು; ತಿಳಿಸಿದಾಗ ನಾವು ನಡಿಸುವೆವು” ಎಂದು ಹೇಳಿದಿರಿ.
၂၇ကိုယ်တော်သာချဉ်းကပ်၍အကျွန်ုပ်တို့၏ ဘုရားသခင်ထာဝရဘုရားမိန့်မှာသမျှ ကိုကြားနာပြီးလျှင် အကျွန်ုပ်တို့အားဆင့် ဆိုတော်မူပါ။ အကျွန်ုပ်တို့သည်အမိန့်တော် ကိုနာခံပါမည်' ဟုလျှောက်ထားကြ၏။
28 ೨೮ ನಿಮ್ಮ ಮಾತುಗಳನ್ನು ಯೆಹೋವನು ಕೇಳಿ ನನಗೆ, “ಈ ಜನರು ನಿನಗೆ ಹೇಳಿದ ಮಾತುಗಳನ್ನು ಕೇಳಿದ್ದೇನೆ; ಆ ಮಾತುಗಳೆಲ್ಲಾ ಒಳ್ಳೆಯವೇ.
၂၈``ထာဝရဘုရားသည်သင်တို့ထိုသို့လျှောက် ထားသောစကားကိုကြားတော်မူလျှင် ငါ့ အား`ငါသည်ဤသူတို့လျှောက်ထားသော စကားကိုကြားရပြီ။ သူတို့ပြောသည့် အတိုင်းမှန်ပေ၏။-
29 ೨೯ ನನ್ನಲ್ಲಿ ಭಯಭಕ್ತಿಯುಳ್ಳವರಾಗಿ, ನನ್ನ ಆಜ್ಞೆಗಳನ್ನು ಅನುಸರಿಸುವ ಮನಸ್ಸು ಯಾವಾಗಲೂ ಅವರಲ್ಲಿ ಇದ್ದರೆ ಒಳ್ಳೇಯದು. ಆಗ ಅವರಿಗೂ ಅವರ ಸಂತತಿಯವರಿಗೂ ಯಾವಾಗಲೂ ಶುಭವುಂಟಾಗುವುದು”
၂၉သူတို့သည်ဤကဲ့သို့ငါ့ကိုအစဉ်ကြောက်ရွံ့ ရိုသေ၍ ငါ၏ပညတ်တော်အားလုံးကိုစောင့်ထိန်း ကြမည်ဆိုလျှင် သူတို့နှင့်သူတို့၏အဆက် အနွယ်များသည်ထာဝစဉ်ကောင်းစားကြ လိမ့်မည်။-
30 ೩೦ “‘ನಿಮ್ಮ ನಿಮ್ಮ ಡೇರೆಗಳಿಗೆ ಹಿಂತಿರುಗಿ ಹೋಗಿರಿ’ ಎಂದು ಅವರಿಗೆ ಆಜ್ಞಾಪಿಸು.
၃၀ယခုမိမိတို့တဲအိမ်များသို့ပြန်ကြရန် သူတို့အားပြောလော့။-
31 ೩೧ ನೀನಾದರೋ ಇಲ್ಲೇ ನನ್ನ ಹತ್ತಿರ ನಿಂತಿರು; ನಾನು ಅವರಿಗೆ ಬೋಧಿಸಬೇಕಾದ ಎಲ್ಲಾ ಧರ್ಮೋಪದೇಶವನ್ನು ಮತ್ತು ವಿಧಿನಿಯಮಗಳನ್ನೂ ನಿನಗೆ ತಿಳಿಸುತ್ತೇನೆ. ನಾನು ಅವರಿಗೆ ಸ್ವಂತಕ್ಕಾಗಿ ಕೊಡುವ ದೇಶದಲ್ಲಿ ಅವರು ಇವುಗಳನ್ನು ಅನುಸರಿಸಬೇಕು” ಎಂದು ಹೇಳಿದನು.
၃၁သင်ကိုယ်တိုင်မူကားငါနှင့်အတူနေရစ်လော့။ ငါပေးမည့်ပြည်တွင်သူတို့လိုက်နာစောင့်ထိန်း ရန် ပညတ်တော်များနှင့်ပြဋ္ဌာန်းချက်ရှိသမျှ ကိုသင့်အားငါဆင့်ဆိုမည်။ ထိုပညတ်တော် များနှင့်ပြဋ္ဌာန်းချက်များကိုသူတို့အား သွန်သင်လော့' ဟု မိန့်တော်မူ၏။-
32 ೩೨ ಆದುದರಿಂದ ನೀವು ಬಲಕ್ಕಾಗಲಿ ಎಡಕ್ಕಾಗಲಿ ತಿರುಗಿಕೊಳ್ಳದೆ ತಪ್ಪಿ ನಡೆಯದೆ ನಿಮ್ಮ ದೇವರಾದ ಯೆಹೋವನು ಆಜ್ಞಾಪಿಸಿದಂತೆಯೇ ನಡೆದುಕೊಳ್ಳಬೇಕು.
၃၂``ဣသရေလအမျိုးသားတို့၊ သင်တို့၏ဘုရားသခင်ထာဝရဘုရားမိန့်တော်မူသမျှအတိုင်း လိုက်နာရမည်။ မည်သည့်ပညတ်တော်ကိုမျှမချိုး ဖောက်နှင့်။-
33 ೩೩ ಆಗ ನೀವು ಸ್ವತಂತ್ರಿಸಿಕೊಳ್ಳುವ ದೇಶದಲ್ಲಿ ಬಹುಕಾಲ ಸುಕ್ಷೇಮದಿಂದ ಬದುಕಿಕೊಳ್ಳುವಂತೆ, ನಿಮ್ಮ ದೇವರಾದ ಯೆಹೋವನು ಆಜ್ಞಾಪಿಸಿದ ಮಾರ್ಗದಲ್ಲೇ ನಡೆಯಬೇಕು.
၃၃သင်တို့ဝင်ရောက်သိမ်းယူမည့်ပြည်တွင်ကောင်း စား၍ ဆက်လက်နေထိုင်ရန်ပညတ်တော်ရှိ သမျှကိုလိုက်နာစောင့်ထိန်းရကြမည်။