< ಧರ್ಮೋಪದೇಶಕಾಂಡ 34 >
1 ೧ ಮೋಶೆಯು ಮೋವಾಬ್ಯರ ಮೈದಾನದಿಂದ ಯೆರಿಕೋ ಪಟ್ಟಣಕ್ಕೆ ಎದುರಾಗಿರುವ ನೆಬೋ ಪರ್ವತಕ್ಕೆ ಹೋಗಿ ಪಿಸ್ಗಾ ಎಂಬ ಬೆಟ್ಟದ ಶಿಖರವನ್ನು ಹತ್ತಿದನು. ಆಗ ಯೆಹೋವನು ಕಾನಾನ್ ದೇಶವನ್ನೆಲ್ಲಾ ಅಂದರೆ ದಾನ್ ಪಟ್ಟಣದ ವರೆಗೂ ಗಿಲ್ಯಾದ್ ಸೀಮೆ,
Andin Musa Moabning tüzlǝnglikliridin qiⱪip Nebo teƣining üstigǝ, yǝni Yerihoning utturisidiki Pisgaⱨ teƣining qoⱪⱪisiƣa qiⱪti. Xu yǝrdǝ Pǝrwǝrdigar uningƣa pütkül zeminni kɵrsǝtti; Gileadtin Danƣiqǝ,
2 ೨ ನಫ್ತಾಲಿ ಪ್ರದೇಶ, ಎಫ್ರಾಯೀಮ್ ಮತ್ತು ಮನಸ್ಸೆ ಕುಲಗಳವರ ಸೀಮೆ, ಪಶ್ಚಿಮಸಮುದ್ರದವರೆಗೂ ಯೆಹೂದ ಸೀಮೆ,
pütkül Naftali bilǝn Əfraim wǝ Manassǝⱨning zeminini, Yǝⱨudaning pütkül zemini bilǝn ⱪoxup mǝƣribtiki dengizƣiqǝ,
3 ೩ ದಕ್ಷಿಣಪ್ರದೇಶ, ಚೋಗರೂರಿನ ತನಕ ಯೆರಿಕೋ ಎಂಬ ಖರ್ಜೂರಗಳ ಪಟ್ಟಣದ ಸುತ್ತಲಿರುವ ಮೈದಾನ ಇದನ್ನೆಲ್ಲಾ ಅವನಿಗೆ ತೋರಿಸಿ,
jǝnubtiki Nǝgǝw zeminini, «Horma xǝⱨiri» dǝp atalƣan Yeriho wadisidiki tüzlǝnglikni Zoar xǝⱨirigǝ ⱪǝdǝr, ⱨǝmmini uningƣa kɵrsǝtti.
4 ೪ “ನಾನು ಅಬ್ರಹಾಮ್, ಇಸಾಕ್ ಮತ್ತು ಯಾಕೋಬರಿಗೆ ಪ್ರಮಾಣಮಾಡಿ ಅವರ ಸಂತತಿಯವರಿಗೆ ಕೊಡುವೆನೆಂದು ವಾಗ್ದಾನಮಾಡಿದ ದೇಶವು ಇದೇ; ನಿನಗೆ ಪ್ರತ್ಯಕ್ಷವಾಗಿ ತೋರಿಸಿದ್ದೇನೆ. ಆದರೆ ನೀನು ನದಿ ದಾಟಿ ಅಲ್ಲಿಗೆ ಹೋಗಕೂಡದು” ಎಂದು ಹೇಳಿದನು.
Andin Pǝrwǝrdigar uningƣa sɵz ⱪilip: «Mǝn ⱪǝsǝm ⱪilip: «Bu zeminni sening nǝslinggǝ berimǝn» dǝp Ibraⱨim, Isⱨaⱪ wǝ Yaⱪupⱪa wǝdǝ ⱪilƣan zemin mana muxudur. Əmdi sanga uni ɵz kɵzüng bilǝn kɵrüxkǝ nesip ⱪildim, lekin sǝn xu yǝrgǝ ɵtüp kirǝlmǝysǝn» dedi.
5 ೫ ಯೆಹೋವನ ಮಾತಿನಂತೆ ಆತನ ಸೇವಕನಾದ ಮೋಶೆ ಅಲ್ಲೇ ಮೋವಾಬ್ಯರ ದೇಶದಲ್ಲಿ ಮರಣ ಹೊಂದಿದನು.
Andin Pǝrwǝrdigarning eytⱪinidǝk, Pǝrwǝrdigarning ⱪuli Musa xu yǝrdǝ, yǝni Moabning zeminida wapat boldi.
6 ೬ ಮೋವಾಬ್ಯರ ದೇಶದಲ್ಲಿ ಬೇತ್‍ಪೆಗೋರದ ಎದುರಾಗಿರುವ ಕಣಿವೆಯಲ್ಲಿ (ಯೆಹೋವನು) ಅವನ ದೇಹವನ್ನು ಸಮಾಧಿಮಾಡಿದನು; ಅವನ ಸಮಾಧಿ ಎಲ್ಲಿದೆಯೋ ಇಂದಿನ ವರೆಗೆ ಯಾರಿಗೂ ತಿಳಿಯದು.
U uni Moabning zeminidiki taƣ jilƣisida, Bǝyt-Peorning utturisida dǝpnǝ ⱪildi; uning ⱪǝbrisining ⱪǝyǝrdǝ ikǝnlikini bügüngiqǝ ⱨeqkim bilmǝydu.
7 ೭ ಮೋಶೆ ಸಾಯುವಾಗ ನೂರಿಪ್ಪತ್ತು ವರ್ಷದವನಾಗಿದ್ದನು. ಅವನ ಕಣ್ಣು ಮೊಬ್ಬಾಗಲಿಲ್ಲ, ಅವನ ಜೀವಕಳೆ ಕುಂದಿಹೋಗಿರಲಿಲ್ಲ.
Musa wapat bolƣan waⱪitta bir yüz yigirmǝ yaxⱪa kirgǝnidi, lekin kɵzliri ⱨeq torlaxmiƣan wǝ maƣduridin ⱨeq kǝtmigǝnidi.
8 ೮ ಮೋವಾಬ್ಯರ ಮೈದಾನದಲ್ಲಿ ಇಸ್ರಾಯೇಲರು ಮೋಶೆಗೋಸ್ಕರ ಮೂವತ್ತು ದಿನಗಳ ವರೆಗೆ ದುಃಖಿಸಿದರು. ಅಲ್ಲಿಗೆ ಮೋಶೆಯ ಪ್ರಲಾಪದ ದಿನಗಳು ಮುಗಿದವು.
Israillar Musa üqün Moabdiki tüzlǝngliktǝ ottuz küngiqǝ matǝm tutti. Xuning bilǝn Musa üqün matǝm tutup yiƣlaydiƣan künlǝr tügigǝnidi.
9 ೯ ಮೋಶೆಯು ನೂನನ ಮಗನಾದ ಯೆಹೋಶುವನ ಮೇಲೆ ಕೈಯಿಟ್ಟಿದ್ದರಿಂದ ಅವನು ಜ್ಞಾನವರಸಂಪನ್ನನಾದನು. ಯೆಹೋವನು ಮೋಶೆಗೆ ಕೊಟ್ಟ ಆಜ್ಞೆಗೆ ಅನುಸಾರವಾಗಿ ಇಸ್ರಾಯೇಲರು ಯೆಹೋಶುವನ ಮಾತಿನ ಪ್ರಕಾರ ನಡೆದರು.
Musa ⱪollirini uning üstigǝ ⱪoyƣaqⱪa, Nunning oƣli Yǝxua danaliⱪ bǝrgüqi Roⱨ bilǝn tolƣanidi. Xuning bilǝn Israillar uningƣa itaǝt ⱪilip, Pǝrwǝrdigarning Musaƣa buyruƣinidǝk ⱪildi.
10 ೧೦ ಮೋಶೆಗೆ ಸಮಾನನಾದ ಮತ್ತೊಬ್ಬ ಪ್ರವಾದಿ ಇಸ್ರಾಯೇಲರಲ್ಲಿ ಮತ್ತೆ ಹುಟ್ಟಲೇ ಇಲ್ಲ, ಯೆಹೋವನು ಮೋಶೆಯ ಸಂಗಡ ಮುಖಾಮುಖಿಯಾಗಿ ಮಾತನಾಡುತ್ತಿದ್ದನು.
Musadin keyin uningdǝk Pǝrwǝrdigar bilǝn yüz turanǝ sɵzlǝxkǝn ikkinqi bir pǝyƣǝmbǝr Israil iqidǝ qiⱪmidi;
11 ೧೧ ಆತನು ಐಗುಪ್ತದೇಶದಲ್ಲಿ ಫರೋಹನ ಮುಂದೆಯೂ, ಅವನ ಪ್ರಜಾಪರಿವಾರದವರ ಮುಂದೆಯೂ ವಿಧವಿಧವಾದ ಅದ್ಭುತಕಾರ್ಯಗಳನ್ನು ಮತ್ತು ಮಹತ್ಕಾರ್ಯಗಳನ್ನು ನಡಿಸುವುದಕ್ಕೆ ಯೆಹೋವನು ಅವನನ್ನು ಕಳುಹಿಸಿದನು.
Pǝrwǝrdigarning uni Misir zeminiƣa ǝwǝtixi bilǝn u xu yǝrdǝ Pirǝwngǝ, uning hizmǝtkarliri wǝ pütkül zeminidikilǝr aldida kɵrsǝtkǝn ⱨǝmmǝ mɵjizilik alamǝt wǝ karamǝtlǝrgǝ,
12 ೧೨ ಅವನು ಇಸ್ರಾಯೇಲರ ಕಣ್ಣ ಮುಂದೆ ವಿಶೇಷವಾದ ಭುಜಪರಾಕ್ರಮವನ್ನೂ ಮತ್ತು ಆಶ್ಚರ್ಯಕರವಾದ ಕಾರ್ಯಗಳನ್ನೂ ನಡೆಸಿದನು.
ayan ⱪilinƣan xu barliⱪ uluƣ ⱪudrǝtkǝ wǝ Musaning pütkül Israilning kɵz aldida kɵrsǝtkǝn barliⱪ dǝⱨxǝtlik ⱨǝywisigǝ tǝng turƣudǝk ⱨeqⱪandaⱪ adǝm qiⱪmidi.