< ಧರ್ಮೋಪದೇಶಕಾಂಡ 24 >
1 ೧ ಯಾವನಾದರೂ ತಾನು ಮದುವೆಮಾಡಿಕೊಂಡ ಸ್ತ್ರೀಯಲ್ಲಿ ಏನೋ ಅವಲಕ್ಷಣವನ್ನು ಕಂಡು ಅವಳಲ್ಲಿ ಸಂತೋಷಪಡದೆ ಇದ್ದರೆ ಅವನು ತ್ಯಾಗಪತ್ರವನ್ನು ಬರೆದುಕೊಟ್ಟು ಅವಳನ್ನು ಮನೆಯಿಂದ ಕಳುಹಿಸಬೇಕು.
A IA lawe ke kanaka i kekahi wahine a mare ia ia, a loaa ole i ka wahine ke alohaia mai imua o kona maka, no ka loaa i ke kane kekahi kina o ka wahine; alaila e kakau kela i palapala e hemo ai ka wahine, a e haawi aku ia mea ma kona lima, a e hookuke aku ia ia iwaho o kona hale.
2 ೨ ಅವಳು ಮನೆಯಿಂದ ಹೋಗಿ ಮತ್ತೊಬ್ಬನನ್ನು ಮದುವೆಯಾಗಬಹುದು.
A hala kela iwaho o kona hale, e hele no ia e lilo i wahine na kekahi kane hou.
3 ೩ ಆಕೆ ಎರಡನೆಯ ಗಂಡನಿಂದಲೂ ತಿರಸ್ಕರಿಸಲ್ಪಟ್ಟು, ತ್ಯಾಗಪತ್ರವನ್ನು ಹೊಂದಿ ಕಳುಹಿಸಲ್ಪಟ್ಟರೆ ಅಥವಾ ಎರಡನೆಯ ಗಂಡನು ಸತ್ತರೆ,
Ina e inain ke kane hou ia ia, a kakau nana i palapala no ka hemo ana, a e haawi aku ia mea ma kona lima, a e hookuke aku ia ia mawaho o kona hale; a i make paha ke kane hou, nana ia i lawe i wahine nana:
4 ೪ ಆಗ ಅವಳನ್ನು ಕಳುಹಿಸಿಬಿಟ್ಟ ಮೊದಲನೆಯ ಗಂಡನು ಅವಳನ್ನು ಪುನಃ ತನ್ನ ಹೆಂಡತಿಯಾಗಿ ಸ್ವೀಕರಿಸಬಾರದು; ಅವಳು ಅಶುದ್ಧಳಾದಳು; ಅವಳನ್ನು ಪುನಃ ಸ್ವೀಕರಿಸುವುದು ಯೆಹೋವನಿಗೆ ಅಸಹ್ಯ ಕಾರ್ಯ. ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವದೇಶವಾಗುವುದಕ್ಕೆ ಕೊಡುವ ದೇಶಕ್ಕೆ ದೋಷವುಂಟಾಗುವಂತೆ ಅವಕಾಶಕೊಡಬಾರದು.
O kana kane mamua, nana ia i hookuke aku, aole e pono ia ke lawe hou ia ia i wahine nana, mahope mai o kona haumia ana; no ka mea, he mea hoopailuaia imua o Iehova: mai hana aku oe i ka mea e hewa'i ka aina a Iehova kou Akua e haawi mai ai i wahi e noho ai nou.
5 ೫ ಹೊಸದಾಗಿ ಮದುವೆಮಾಡಿಕೊಂಡವನು ಸೈನ್ಯದವರೊಡನೆ ಯುದ್ಧಕ್ಕೆ ಹೋಗಬಾರದು; ಭಾರವಾದ ಯಾವ ಕೆಲಸವನ್ನೂ ಅವನಿಗೆ ನೇಮಿಸಬಾರದು. ಅವನು ಒಂದು ವರ್ಷದ ವರೆಗೂ ಬಿಡುವಾಗಿ ಮನೆಯಲ್ಲಿ ಇದ್ದುಕೊಂಡು ಪರಿಗ್ರಹಿಸಿದ ಹೆಂಡತಿಯೊಡನೆ ಸುಖವಾಗಿರಲಿ.
Aia lawe ke kanaka i wahine hou nana, mai hele aku ia me ka poe kaua, aole hoi e kauia maluna ona kekahi hana: e noho kaawale ia ma kona wahi i hookahi makahiki, a e hooluolu aku i kana wahine ana i lawe ai.
6 ೬ ಬೀಸುವ ಕಲ್ಲನ್ನು ಪೂರ್ತಿಯಾಗಲಿ ಅಥವಾ ಅರ್ಧವಾಗಲಿ ಒತ್ತೆ ತೆಗೆದುಕೊಳ್ಳಬಾರದು; ಅದು ಜೀವನಾಧಾರವನ್ನೇ ಒತ್ತೆಯಾಗಿ ತೆಗೆದುಕೊಂಡ ಹಾಗಾಗುವುದು.
Mai laweia ka mea wili palaoa i uku panai, aole ka pohaku kaa luna; no ka mea, oia ke lawe i ko ke kanaka mea e ola'i i uku panai.
7 ೭ ಯಾವನಾದರೂ ಸ್ವದೇಶದವನಾದ ಇಸ್ರಾಯೇಲನನ್ನು ಕದ್ದು ಅವನನ್ನು ದಾಸತ್ವದಲ್ಲಿ ನಡಿಸಿದ್ದಾಗಲಿ ಅಥವಾ ಮಾರಿಬಿಟ್ಟದ್ದು ಕಂಡುಬಂದರೆ ಕದ್ದವನಿಗೆ ಮರಣಶಿಕ್ಷೆಯಾಗಬೇಕು. ಹೀಗೆ ಅಂಥ ದುಷ್ಟತ್ವವನ್ನು ನಿಮ್ಮ ಮಧ್ಯದಿಂದ ತೆಗೆದುಹಾಕಿಬಿಡಬೇಕು.
Ina e ikeia ke kanaka e aihue ana i kekahi hoahanau ona o na mamo a Iseraela, a hoolilo ia ia i kauwa hooluhi, a kuai lilo aku paha ia ia; alaila e make ua kanaka aihue la; a e hoolei aku oe i ka ino mai waena aku o oukou.
8 ೮ ಕುಷ್ಠರೋಗಿಗಳ ವಿಷಯದಲ್ಲಿ ಯಾಜಕರಾದ ಲೇವಿಯರು ಬೋಧಿಸುವಂತೆಯೇ ಮಾಡುವುದಕ್ಕೆ ನೀವು ಜಾಗರೂಕರಾಗಿರಬೇಕು. ನಾನು ಅವರಿಗೆ ಆಜ್ಞಾಪಿಸಿದ ನಿಯಮಗಳನ್ನೇ ನೀವು ಅನುಸರಿಸಬೇಕು.
E makaala i ka mai lepera, e malama pono, a e hana aku hoi i na mea a pau a na kahuna, a ka Levi e ao mai ai ia oukou; e like me ka'u i kauoha aku ai ia lakou, pela oukou e malama ai, a e hana'i hoi.
9 ೯ ನೀವು ಐಗುಪ್ತದೇಶದಿಂದ ಬಂದಾಗ ದಾರಿಯಲ್ಲಿ ನಿಮ್ಮ ದೇವರಾದ ಯೆಹೋವನು ಮಿರ್ಯಾಮಳಿಗೆ ಮಾಡಿದ್ದನ್ನು ನೆನಪುಮಾಡಿಕೊಳ್ಳಿರಿ.
E hoomanao i ka mea a Iehova kou Akua i hana mai ai ia Miriama ma ke ala, i ko oukou hele ana mai Aigupita mai.
10 ೧೦ ಮತ್ತೊಬ್ಬನಿಗೆ ಸಾಲಕೊಡುವಾಗ ಒತ್ತೆಯನ್ನು ತೆಗೆದುಕೊಳ್ಳುವುದಕ್ಕೆ ಅವನ ಮನೆಯೊಳಕ್ಕೆ ಹೋಗದೆ ಹೊರಗೆ ಇರಬೇಕು.
A i haawi lilo ole oe i kekahi mea i kou hoalauna, mai hele aku iloko o kona hale e kii i kona uku panai.
11 ೧೧ ಸಾಲತೆಗೆದುಕೊಂಡವನೇ ಒತ್ತೆಯ ಸಾಮಾನುಗಳನ್ನು ತಂದುಕೊಡಬೇಕು.
Mawaho oe e ku ai, a o ke kanaka ia ia ka mea au i haawi lilo ole, nana no e lawe mai mawaho i ka uku panai ia oe.
12 ೧೨ ಅವನು ಕೇವಲ ಬಡತನದಿಂದ ತನ್ನ ಕಂಬಳಿಯನ್ನೇ ಒತ್ತೆಯಾಗಿ ಇಟ್ಟ ಸಂದರ್ಭದಲ್ಲಿ ಹೊತ್ತುಮುಣುಗಿದಾಗ ಅದನ್ನು ಹಿಂದಕ್ಕೆ ಕೊಡಬೇಕು.
Ina he kanaka ilihune ia, mai hiamoe oe me kona uku panai:
13 ೧೩ ಅದನ್ನು ಇಟ್ಟುಕೊಂಡು ರಾತ್ರಿ ಮಲಗಬಾರದು; ಅವನು ಅದನ್ನು ಹೊದ್ದುಕೊಂಡೇ ಮಲಗಿಕೊಳ್ಳಬೇಕಲ್ಲಾ; ಅದಲ್ಲದೆ ಅವನು ನಿಮ್ಮನ್ನು ಹರಸುವನು, ಮತ್ತು ನೀವು ಮಾಡಿದ್ದು ಧರ್ಮಕಾರ್ಯವೆಂದು ನಿಮ್ಮ ದೇವರಾದ ಯೆಹೋವನು ತಿಳಿದುಕೊಳ್ಳುವನು.
E hoihoi no i ka uku panai ia ia i ka napoo ana o ka la; a e hiamoe ill me kone kapa, a e hoomaikai mai oia ia oe, a e lilo ia i pono nou imua o Iehova kou Akua.
14 ೧೪ ನೀವು ಸ್ವದೇಶದವರಲ್ಲಿಯಾಗಲಿ ಅಥವಾ ನಿಮ್ಮಲ್ಲಿರುವ ಅನ್ಯದೇಶದವರಲ್ಲಿಯಾಗಲಿ ಗತಿಯಿಲ್ಲದ ಬಡ ಕೂಲಿಯವನಿಗೆ
Mai alunu oe i ke kanaka hoolimalima ilihune, nele, aole i kekahi o kou poe hoahanau, aole hoi i kekahi o kou poe kanaka e ma kou aina, maloko o kou mau ipuka.
15 ೧೫ ಏನೂ ಅನ್ಯಾಯಮಾಡದೆ ದಿನದ ಕೂಲಿಯನ್ನು ಆ ದಿನದಲ್ಲೇ ಹೊತ್ತುಮುಣುಗುವುದಕ್ಕೆ ಮುಂಚಿತವಾಗಿ ಅವನಿಗೆ ಕೊಡಬೇಕು. ಅವನಿಗೆ ಬೇರೆ ಗತಿಯಿಲ್ಲದ್ದರಿಂದ ಅದನ್ನೇ ಎದುರುನೋಡುತ್ತಾನಲ್ಲಾ. ನೀವು ಕೊಡದಿದ್ದರೆ ಅವನು ಯೆಹೋವನಿಗೆ ಮೊರೆಯಿಟ್ಟಾನು; ಆಗ ನೀವು ದೋಷಿಗಳಾಗಿ ಕಂಡುಬಂದೀರಿ.
I kona manawa no, nau e haawi kona uku, aole ke kali ana a napoo ka la; no ka mea, na ilihune ia, a ua manao nui kona naau ma ia mea; malia o kahea aku oia ia Iehova nou, a e lilo ia i hewa nou.
16 ೧೬ ಮಕ್ಕಳ ಪಾಪಕ್ಕಾಗಿ ತಂದೆಗೂ, ತಂದೆಯ ಪಾಪಕ್ಕಾಗಿ ಮಕ್ಕಳಿಗೂ ಮರಣಶಿಕ್ಷೆಯಾಗಬಾರದು. ಪ್ರತಿಯೊಬ್ಬನೂ ತನ್ನ ಪಾಪಫಲವನ್ನು ತಾನೇ ಅನುಭವಿಸಬೇಕು.
Mai make na makua no na keiki, aole hoi e make na keiki no na makua: e make no kela kanaka keia kanaka no kona hewa iho.
17 ೧೭ ನೀವು ಪರದೇಶಿಯ ಅಥವಾ ದಿಕ್ಕಿಲ್ಲದವನ ವ್ಯಾಜ್ಯವನ್ನು ವಿಚಾರಿಸುವಾಗ ನ್ಯಾಯವನ್ನು ಬಿಟ್ಟು ತೀರ್ಪು ಕೊಡಬಾರದು. ವಿಧವೆಯಿಂದ ಉಡುವ ಬಟ್ಟೆಯನ್ನು ಒತ್ತೆಯಿಡಿಸಿಕೊಳ್ಳಬಾರದು.
Mai hookeekee oe i ka pono o ka malihini, aole hoi i ke keiki makua ole, aole hoi oe e lawe i ke kapa aahu o ka wahinekanemake i uku panai.
18 ೧೮ ನೀವೇ ಐಗುಪ್ತದೇಶದಲ್ಲಿ ದಾಸರಾಗಿದ್ದಾಗ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಬಿಡಿಸಿದನೆಂಬುವುದನ್ನು ನೆನಪುಮಾಡಿಕೊಳ್ಳಿರಿ; ಅದಕ್ಕಾಗಿಯೇ ಇದನ್ನು ಆಜ್ಞಾಪಿಸಿದ್ದೇನೆ.
Aka, e hoomanao iho oe he kauwa hooluhi oe ma Aigupita, a na Iehova kou Akua oe i hoopakele ae ia wahi: nolaila, ke kauoha aku nei au ia oe e hana ia mea.
19 ೧೯ ನೀವು ಪೈರುಗಳನ್ನು ಕೊಯ್ಯುವಾಗ ಒಂದು ಸಿವುಡನ್ನು ಹೊಲದಲ್ಲೇ ಮರೆತುಬಂದರೆ ಅದನ್ನು ತರುವುದಕ್ಕೆ ಹಿಂದಕ್ಕೆ ಹೋಗಬಾರದು; ಪರದೇಶಿ, ಅನಾಥ, ವಿಧವೆ ಇಂಥವರಿಗೋಸ್ಕರ ಇರಲಿ. ನೀವು ಹೀಗೆ ನಡೆದುಕೊಂಡರೆ ನಿಮ್ಮ ದೇವರಾದ ಯೆಹೋವನು ನಿಮ್ಮ ಎಲ್ಲಾ ಕೆಲಸಗಳಲ್ಲಿಯೂ ನಿಮ್ಮನ್ನು ಅಭಿವೃದ್ಧಿಪಡಿಸುವನು.
Aia oki iho oe i kau palaoa ma kau mahinaai, a hoopoina oe i kekahi pua ma ka mahinaai, mai hele hou oe e kii ia mea; na ka malihini no ia, a na ka mea makua ole, a na ka wahinekanemake; i hoopomaikai mai ai o Iehova kou Akua ia oe i na hana a pau a kou mau lima.
20 ೨೦ ಎಣ್ಣೆಯಮರಗಳ ರೆಂಬೆಗಳನ್ನು ಹೊಡೆದು ಕಾಯಿಗಳನ್ನು ಉದುರಿಸಿದ ಮೇಲೆ ಪುನಃ ಉದುರಿಸುವುದಕ್ಕೆ ಹೋಗಬಾರದು; ಮಿಕ್ಕ ಕಾಯಿಗಳು ಪರದೇಶಿ, ಅನಾಥ, ವಿಧವೆ ಇಂಥವರಿಗೋಸ್ಕರ ಇರಲಿ.
Aia hahau aku oe i kou laau oliva, mai huli hou oe i na lala: na ka malihini no ia, na ka mea makua ole, a na ka wahinekanemake.
21 ೨೧ ದ್ರಾಕ್ಷಿತೋಟದ ಬೆಳೆಯನ್ನು ಕೂಡಿಸಿಕೊಳ್ಳುವಾಗ ಹಕ್ಕಲಾಯಬಾರದು; ಅದು ಪರದೇಶಿ, ಅನಾಥ, ವಿಧವೆ ಇಂಥವರಿಗೋಸ್ಕರ ಇರಲಿ.
Aia hoiliili oe i na hua waina o kou pawaina, mai ohi oe i ke koena mahope ou: na ka malihini no ia, na ka mea makua ole, a na ka wahinekanemake.
22 ೨೨ ನೀವೇ ಐಗುಪ್ತದೇಶದಲ್ಲಿ ದಾಸರಾಗಿದ್ದದ್ದು ಜ್ಞಾಪಕದಲ್ಲಿರಬೇಕು; ಅದಕ್ಕಾಗಿಯೇ ಇದನ್ನು ನಿಮಗೆ ಆಜ್ಞಾಪಿಸಿದ್ದೇನೆ.
E hoomanao oe, he kauwa hooluhi oe ma ka aina o Aigupita: nolaila ke kauoha aku nei au ia oe e hana ia mea.