< ಧರ್ಮೋಪದೇಶಕಾಂಡ 19 >
1 ೧ ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದ ಜನಾಂಗಗಳನ್ನು ಆತನು ನಾಶಮಾಡಿ ಬಿಟ್ಟ ತರುವಾಯ, ನೀವು ಆ ದೇಶವನ್ನು ಸ್ವಾಧೀನಮಾಡಿಕೊಂಡು ಅವರ ಗ್ರಾಮಗಳಲ್ಲಿಯೂ,
Sa dihang si Yahweh nga inyong Dios magwagtang sa mga kanasoran, niadtong mga yuta nga ihatag ni Yahweh nga inyong Dios kaninyo, ug sa dihang moabot kamo puli kanila ug mopuyo sa ilang mga siyudad ug mga balay,
2 ೨ ಮನೆಗಳಲ್ಲಿಯೂ ವಾಸವಾಗಿರುವಾಗ, ಆ ನಿಮ್ಮ ದೇಶದ ಮಧ್ಯದಲ್ಲಿ ನೀವು ಮೂರು ಆಶ್ರಯ ನಗರಗಳನ್ನು ಗೊತ್ತುಮಾಡಬೇಕು.
magpili kamo ug tulo ka mga siyudad alang sa inyong kaugalingon sa tungatunga sa inyong yuta nga gihatag kaninyo ni Yahweh nga inyong Dios nga panag-iyahon.
3 ೩ ನರಹತ್ಯಮಾಡಿದವರು ಆ ನಗರಗಳಿಗೆ ಓಡಿಹೊಗುವುದಕ್ಕೆ ಅನುಕೂಲವಾಗುವಂತೆ ನೀವು ಅವುಗಳ ದಾರಿಗಳನ್ನು ಸರಿಪಡಿಸಬೇಕು. ಮತ್ತು ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವದೇಶವಾಗುವುದಕ್ಕೆ ಕೊಡುವ ಆ ದೇಶವನ್ನು ಮೂರು ಭಾಗ ಮಾಡಬೇಕು.
Magbuhat kamo ug dalan ug bahinon ang utlanan sa inyong yuta sa tulo ka mga bahin, ang yuta nga ihatag kaninyo ni Yahweh nga inyong Dios nga panag-iyahon, aron ang tanan nga makapatay ug laing tawo mokalagiw paingon didto.
4 ೪ ಆ ನಗರಗಳ ವಿವರ ಹೀಗಿದೆ, ಯಾವನಾದರೂ ದ್ವೇಷವಿಲ್ಲದೆ ಕೈತಪ್ಪಿ ಮತ್ತೊಬ್ಬನನ್ನು ಕೊಂದರೆ ಅವನು ಆ ಪಟ್ಟಣಗಳಲ್ಲಿ ಒಂದಕ್ಕೆ ಓಡಿಹೋಗಿ ಬದುಕಿಕೊಳ್ಳಬಹುದು.
Mao kini ang balaod alang sa usa ka nakapatay ug tawo ug sa tawo nga mikalagiw didto aron mabuhi: bisan si kinsa nga nakapatay sa iyang isigkatawo nga wala gituyo, ug walay kasuko kaniya kaniadto -
5 ೫ ಉದಾಹರಣೆ, ಒಬ್ಬ ಮನುಷ್ಯನು ಕಟ್ಟಿಗೆಯನ್ನು ಕಡಿಯಬೇಕೆಂದು ಮತ್ತೊಬ್ಬನ ಜೊತೆಯಲ್ಲಿ ಅಡವಿಗೆ ಹೋಗಿ, ಅಲ್ಲಿ ಒಂದು ಮರವನ್ನು ಕಡಿಯಬೇಕೆಂದು ಕೊಡಲಿಯಿಂದ ಹೊಡೆಯುತ್ತಿರುವಾಗ, ಕೊಡಲಿಯು ಕಾವಿನಿಂದ ಜಾರಿ ಆ ಮತ್ತೊಬ್ಬನಿಗೆ ತಗಲಿದ್ದರಿಂದ ಅವನು ಸತ್ತರೆ, ಹೊಡೆದವನು ಆ ಪಟ್ಟಣಗಳಲ್ಲಿ ಒಂದಕ್ಕೆ ಓಡಿಹೋಗಿ ಬದುಕಿಕೊಳ್ಳಬಹುದು.
ingon nga sa dihang ang usa ka tawo miadto sa kalasangan uban sa iyang isigkatawo aron mamutol ug kahoy, sa dihang giatsa na niya ang kahoy aron putlon kini, ug ang tumoy niini nahuslo ug naigo ang iyang isigkatawo mao nga namatay siya- kadtong tawhana mokalagiw paingon sa usa niining mga siyudara ug mabuhi.
6 ೬ ಸತ್ತವನ ಮೇಲೆ ಅವನಿಗೆ ಮೊದಲು ದ್ವೇಷವಿಲ್ಲದ್ದರಿಂದ ಮತ್ತು ಅವನನ್ನು ಸಾಯಿಸುವ ಉದ್ದೇಶವಿಲ್ಲದ ಕಾರಣ ಮರಣಶಿಕ್ಷೆಗೆ ಪಾತ್ರನಲ್ಲ. ಆದರೂ ಹತ್ಯಮಾಡಿದವನಿಗೆ ಮುಯ್ಯಿತೀರಿಸುವ ಹಂಗುಳ್ಳ ಸಮೀಪ ಬಂಧುವು ಇನ್ನು ಕೋಪದಿಂದ ಉರಿಯುತ್ತಿರುವಾಗಲೇ ಅವನನ್ನು ಹಿಂದಟ್ಟಿ ಹೋಗಬಹುದು ಮತ್ತು ಮಾರ್ಗ ದೂರವಾಗಿರುವ ಪಕ್ಷಕ್ಕೆ ಅವನನ್ನು ಹಿಡಿದು ಕೊಂದು ಹಾಕಿಬಿಡಬಹುದು.
Kondili, ang tawong manimalos alang sa dugo mahimong mangita niadtong mikuha sa kinabuhi, ug sa kainit sa iyang kasuko maabtan siya tungod kay kini usa ka layo nga panaw. Ug patyon niya siya, bisan dili angay mamatay kadtong tawhana; ug dili angayan sa kamatayon tungod wala siyay kasuko sa iyang isigkatawo sa wala pa kini nahitabo.
7 ೭ ಈ ಕಾರಣದಿಂದ ನೀವು ಮೂರು ಆಶ್ರಯ ನಗರಗಳನ್ನು ಗೊತ್ತುಮಾಡಬೇಕೆಂದು ಆಜ್ಞಾಪಿಸಿದ್ದೇನೆ.
Busa, gimandoan ko kamo nga magpili ug tulo ka mga siyudad alang kaninyo.
8 ೮ ಯೆಹೋವನು ನಿಮ್ಮ ಪೂರ್ವಿಕರಿಗೆ ವಾಗ್ದಾನಮಾಡಿದಂತೆ ನಿಮ್ಮ ರಾಜ್ಯವನ್ನು ವಿಸ್ತರಿಸಿ, ತಾನು ನಿಮ್ಮ ಪೂರ್ವಿಕರಿಗೆ ಸೂಚಿಸಿದ ಪ್ರದೇಶವನ್ನೆಲ್ಲಾ ಕೊಡುವಾಗ, ಇನ್ನೂ ಮೂರು ನಗರಗಳನ್ನು ನಿಮಗಾಗಿ ಗೊತ್ತುಮಾಡಬೇಕು. ನಾನು ಈಗ ನಿಮಗೆ ಬೋಧಿಸುವ ಈ ಧರ್ಮೋಪದೇಶವನ್ನೆಲ್ಲಾ ನೀವು ಅನುಸರಿಸುವವರಾಗಿ,
Kung si Yahweh nga inyong Dios magapadako sa inyong mga ginsakopan, nanumpa siya sama sa iyang gipanumpa nga buhaton ngadto sa inyong katigulangan, ug magahatag kaninyo sa tanang yuta nga iyang gisaad nga ihatag sa inyong mga katigulangan;
9 ೯ ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ, ಆತನು ಹೇಳುವ ಮಾರ್ಗದಲ್ಲೇ ಯಾವಾಗಲೂ ನಡೆಯುವುದಾದರೆ, ಆಗ ಯೆಹೋವನು ಈ ಮೂರು ನಗರಗಳನ್ನು ನಿಮಗೆ ಕೊಡುವನು.
kung tumanon ninyo kining tanan nga mga kasugoan, nga akong gisugo kaninyo karon - ang mga sugo nga higugmaon si Yahweh nga inyong Dios ug kanunay nga magalakaw sa iyang mga dalan, busa angay kamo nga magdugang ug tulo pa ka mga siyudad alang sa inyong kaugalingon, gawas niining tulo.
10 ೧೦ ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವದೇಶವಾಗುವುದಕ್ಕೆ ಕೊಡುವ ದೇಶದಲ್ಲಿ ನಿರಪರಾಧಿಗೆ ಮರಣಶಿಕ್ಷೆಯಾಗದಂತೆ; ಆ ದೋಷವು ನಿಮ್ಮದಾಗದಂತೆ ನೀವು ಹೀಗೆ ಮಾಡಬೇಕು.
Buhata kini aron walay motulo nga dugo nga dili sad-an taliwala sa yuta nga gihatag ni Yahweh nga inyong Dios kaninyo ingon nga panulondon, aron walay sala sa dugo diha kaninyo.
11 ೧೧ ಆದರೆ ಯಾವನಾದರೂ ಒಬ್ಬನಲ್ಲಿ ದ್ವೇಷವನ್ನೇ ಇಟ್ಟು ಸಮಯನೋಡಿಕೊಂಡು, ಅವನ ಮೇಲೆ ಬಿದ್ದು ಅವನನ್ನು ಹೊಡೆದು ಕೊಂದ ತರುವಾಯ ಈ ಪಟ್ಟಣಗಳಲ್ಲಿ
Apan kung adunay tawo nga nagdumot sa iyang isigkatawo, maga-atang kaniya, magatindog batok kaniya, ug samaran siya aron mamatay siya, ug unya kung mokalagiw siya paingon ngadto sa usa niining mga siyudara—
12 ೧೨ ಒಂದಕ್ಕೆ ಓಡಿಹೋದರೆ, ಅವನ ಊರಿನ ಹಿರಿಯರು ಅವನನ್ನು ಅಲ್ಲಿಂದ ಹಿಡಿದು ತರಿಸಿ ಅವನಿಗೆ ಮರಣಶಿಕ್ಷೆಯಾಗುವಂತೆ ಮುಯ್ಯಿತೀರಿಸುವ ಹಂಗುಳ್ಳವನ ಕೈಗೆ ಒಪ್ಪಿಸಬೇಕು.
busa, ang katigulangan kinahanglan magdala ug magakuha kaniya gikan didto, ug itugyan siya sa kamot sa masaligan nga paryenti, aron mamatay siya.
13 ೧೩ ನೀವು ಅವನನ್ನು ಕನಿಕರಿಸಬಾರದು. ನಿಮಗೆ ಶುಭವುಂಟಾಗುವಂತೆ ನಿರಪರಾಧಿಯ ಪ್ರಾಣವನ್ನು ತೆಗೆದವನನ್ನು ಇಸ್ರಾಯೇಲರಲ್ಲಿ ಉಳಿಯದಂತೆ ಮಾಡಬೇಕು.
Dili angay nga maluoy ang inyong mata kaniya; kondili, kinahanglan ninyong wagtangon ang sad-an sa dugo gikan sa Israel, nga mahimo kining maayo alang kaninyo.
14 ೧೪ ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವದೇಶವಾಗುವುದಕ್ಕೆ ಕೊಡುವ ದೇಶದಲ್ಲಿ ನಿಮ್ಮ ಪಾಲಿಗೆ ಬಂದ ಸ್ವತ್ತಿನಲ್ಲಿ ನೆರೆಯವನ ಭೂಮಿಯ ಹಿಂದಿನ ಕಾಲದ ಗಡಿಯನ್ನು ಒತ್ತಬಾರದು.
Dili ninyo angay ibalhin ang muhon sa inyong silingan nga ilang gibutang sa dugay na nga panahon, sa inyong mga panulondon nga inyong mapanunod, sa yuta nga gihatag ni Yahweh nga inyong Dios kaninyo aron panag-iyahon.
15 ೧೫ ಯಾವ ದೋಷದ ಅಥವಾ ಅಪರಾಧದ ವಿಷಯದಲ್ಲೂ ಒಬ್ಬನೇ ಒಬ್ಬನ ಸಾಕ್ಷಿಯನ್ನು ನೀವು ಅಂಗೀಕರಿಸಬಾರದು. ನಡೆದ ಸಂಗತಿ ರುಜುವಾತಾಗುವುದಕ್ಕೆ ಇಬ್ಬರ ಇಲ್ಲವೆ ಮೂವರ ಸಾಕ್ಷಿಗಳು ಬೇಕು.
Ang usa ka bugtong saksi dili angay magatindog batok sa tawo alang sa bisan unsang kasal-anan, o sa mga nabuhat nga sayop, ni sa unsang matang nga siya nakasala; sa baba sa duha ka mga saksi, o sa baba sa tulo ka mga saksi, kinahanglan ang bisan unsang butang angay pamatud-an.
16 ೧೬ ಯಾವನಾದರೂ ನ್ಯಾಯವಿರುದ್ಧವಾಗಿ ಬಂದು ಮತ್ತೊಬ್ಬನನ್ನು ಅಪರಾಧಿ ಎಂದು ಸಾಕ್ಷಿಹೇಳಿದರೆ,
Pananglitan ang usa ka dili matarong nga saksi motindog batok sa bisan kinsang tawo aron sa pagsaksi batok kaniya sa mga daotang binuhatan.
17 ೧೭ ವ್ಯಾಜ್ಯವಾಡುವ ಆ ಇಬ್ಬರೂ ಯೆಹೋವನ ಸನ್ನಿಧಿಯಲ್ಲಿ ಯಾಜಕರ ಮುಂದೆಯೂ, ಆಗ ಇರುವ ನ್ಯಾಯಾಧಿಪತಿಗಳ ಮುಂದೆಯೂ ನಿಲ್ಲಬೇಕು.
Kinahanglan nga ang duha ka mga tawo, ang mga tawo taliwala niadtong gihisgotan angay motindog sa atubangan ni Yahweh, sa atubangan sa mga pari ug mga maghuhukom nga nag-alagad niadtong mga panahona.
18 ೧೮ ನ್ಯಾಯಾಧಿಪತಿಗಳು ಚೆನ್ನಾಗಿ ವಿಚಾರಣೆ ಮಾಡಿದ ಮೇಲೆ ಆ ಮನುಷ್ಯನ ಸಾಕ್ಷಿ ಸುಳ್ಳೆಂದು ತೋರಿಬಂದರೆ,
Ang mga maghuhukom kinahanglan maghimo ug matukion nga mga pangutana; tan-awa, kung ang saksi usa ka bakakon nga saksi ug nagpamatuod sa bakak batok sa iyang igsoon,
19 ೧೯ ಅವನು ಆ ಮತ್ತೊಬ್ಬನಿಗೆ ಕೊಡಿಸಬೇಕೆಂದಿದ್ದ ಶಿಕ್ಷೆಯನ್ನು ಅವನಿಗೆ ವಿಧಿಸಬೇಕು. ಹೀಗೆ ನೀವು ಆ ದುಷ್ಟತ್ವವನ್ನು ನಿಮ್ಮ ಮಧ್ಯದೊಳಗಿಂದ ತೆಗೆದುಹಾಕಬೇಕು.
kinahanglan buhaton nimo kaniya, ang iyang pangandoy nga buhaton niya sa iyang igsoon, ug walaon ninyo ang daotan gikan kaninyo.
20 ೨೦ ಉಳಿದವರು ಆ ಸಂಗತಿಯನ್ನು ಕೇಳಿ ಭಯಪಟ್ಟು ಇನ್ನು ಮುಂದೆ ಅಂಥ ದುಷ್ಟತ್ವವನ್ನು ನಡೆಸುವುದಿಲ್ಲ.
Unya kadtong nagpabilin makadungog ug mahadlok, ug gikan dinhi dili na magbuhat pag-usab ug daotan taliwala kaninyo.
21 ೨೧ ನೀವು ಅಂಥವರನ್ನು ಕನಿಕರಿಸಬಾರದು; ಪ್ರಾಣಕ್ಕೆ ಪ್ರತಿಯಾಗಿ ಪ್ರಾಣವನ್ನೂ, ಕಣ್ಣಿಗೆ ಪ್ರತಿಯಾಗಿ ಕಣ್ಣನ್ನೂ, ಹಲ್ಲಿಗೆ ಪ್ರತಿಯಾಗಿ ಹಲ್ಲನ್ನೂ, ಕೈಗೆ ಪ್ರತಿಯಾಗಿ ಕೈಯನ್ನೂ ಮತ್ತು ಕಾಲಿಗೆ ಪ್ರತಿಯಾಗಿ ಕಾಲನ್ನೂ ತೆಗೆದುಬಿಡಬೇಕು.
Dili angay maluoy ang inyong mga mata; ang kinabuhi magbayad ug kinabuhi, mata sa mata, ngipon sa ngipon, kamot sa kamot, tiil sa tiil.