< ಧರ್ಮೋಪದೇಶಕಾಂಡ 18 >
1 ೧ ಯಾಜಕಸೇವೆ ಮಾಡುವ ಲೇವಿಯರಿಗಾಗಲಿ ಅಥವಾ ಲೇವಿಯ ಕುಲದವರಲ್ಲಿ ಯಾರಿಗೇ ಆಗಲಿ ಇತರ ಇಸ್ರಾಯೇಲರೊಡನೆ ಸ್ವಂತಕ್ಕಾಗಿ ಪಾಲಾಗಲಿ ಅಥವಾ ಸ್ವಾಸ್ತ್ಯವಾಗಲಿ ದೊರೆಯುವುದಿಲ್ಲ. ಯೆಹೋವನಿಗೆ ಸಮರ್ಪಿಸಲ್ಪಡುವ ಹೋಮದ್ರವ್ಯಗಳೂ ಆತನಿಗೋಸ್ಕರ ಪ್ರತ್ಯೇಕಿಸಲ್ಪಟ್ಟದ್ದೆಲ್ಲವೂ ಅವರಿಗೆ ಜೀವನಾಧಾರ.
पुजारीहरू अर्थात् लेवीहरू र सबै लेवी कुलको इस्राएलीहरूसित कुनै हिस्सा वा अंश हुने छैन । तिनीहरूले आफ्नो अंशको रूपमा आगोद्वारा चढाइएका परमप्रभुका बलिहरू खाऊन् ।
2 ೨ ಸ್ವದೇಶಸ್ಥರೊಂದಿಗೂ ಅವರಿಗೆ ಸ್ವತ್ತು ದೊರೆಯುವುದಿಲ್ಲ; ಯೆಹೋವನು ಅವರಿಗೆ ಹೇಳಿದಂತೆ ತಾನೇ ಅವರಿಗೆ ಸ್ವತ್ತಾಗಿರುವನು.
आफ्ना दाजुभाइहरूका बिचमा तिनीहरूको कुनै अंश नहोस् । तिनीहरूलाई प्रतिज्ञा गरिएअनुसार परमप्रभु नै तिनीहरूका अंश हुनुहुन्छ ।
3 ೩ ಜನರ ಕಡೆಯಿಂದ ಯಾಜಕರು ಹೊಂದಬೇಕಾದವುಗಳು ಯಾವುವೆಂದರೆ: ದನಗಳಲ್ಲಿಯಾಗಲಿ, ಆಡು ಮತ್ತು ಕುರಿಗಳಲ್ಲಿಯಾಗಲಿ ಪಶುವನ್ನು ಕೊಯಿದು ಯಜ್ಞಮಾಡುವವರೆಲ್ಲರೂ ಅದರ ಮುಂದೊಡೆಯನ್ನೂ, ಎರಡು ದವಡೆಗಳನ್ನೂ, ಕೋಷ್ಠವನ್ನೂ (ಒಳಭಾಗವನ್ನು) ಯಾಜಕರಿಗೆ ಕೊಡಬೇಕು.
गोरु वा भेडा बलिदान गर्ने मानिसहरूबाट पुजारीहरूले पाउने भाग यही होः कुम, दुईवटा गाला र आन्द्रा-भुँडी ।
4 ೪ ಧಾನ್ಯ, ದ್ರಾಕ್ಷಾರಸ ಮತ್ತು ಎಣ್ಣೆ ಇವುಗಳ ಪ್ರಥಮಫಲಗಳನ್ನು ಹಾಗೂ ಮೊದಲನೆಯ ಸಾರಿ ಕತ್ತರಿಸುವ ಕುರಿಗಳ ಉಣ್ಣೆಯನ್ನೂ ಅವರಿಗೆ ಕೊಡಬೇಕು.
तिमीहरूको अन्न, नयाँ मद्य, तेलको पहिलो फलसाथै तिमीहरूको भेडाको पहिलो ऊन तिमीहरूले पुजारीलाई दिनू ।
5 ೫ ನಿಮ್ಮ ದೇವರಾದ ಯೆಹೋವನು ನಿಮ್ಮ ಎಲ್ಲಾ ಕುಲಗಳಲ್ಲಿ ಇವರನ್ನೂ ಮತ್ತು ಇವರ ತರುವಾಯ ಇವರ ಸಂತತಿಯವರನ್ನೂ ತನ್ನ ಸನ್ನಿಧಿಯಲ್ಲಿ ಶಾಶ್ವತವಾಗಿ ಸೇವೆ ಮಾಡುವುದಕ್ಕೆ ತಾನೇ ನೇಮಿಸಿಕೊಂಡನಲ್ಲಾ.
किनकि परमप्रभु तिमीहरूका परमेश्वरले परमप्रभुको नाउँमा सेवा गर्न त्यो र त्यसका छोराहरूलाई सदाको लागि चुन्नुभएको छ ।
6 ೬ ಇಸ್ರಾಯೇಲರ ಯಾವುದಾದರೂ ಒಂದು ಊರಲ್ಲಿ ಇಳಿದುಕೊಂಡಿರುವ ಲೇವಿಯನು ಸ್ವಂತ ಮನಸ್ಸಿನಿಂದ ಆ ಊರನ್ನು ಬಿಟ್ಟು, ಯೆಹೋವನು ಆರಿಸಿಕೊಂಡ ಪವಿತ್ರ ಸ್ಥಳಕ್ಕೆ ಬಂದು,
इस्राएलको कुनै पनि सहरमा बसेको कुनै एउटा लेवीले आफ्नो सारा हृदयले इच्छा गरेर परमप्रभुले छान्नुहुने ठाउँमा आयो भने
7 ೭ ಅಲ್ಲೇ ಯೆಹೋವನ ಸನ್ನಿಧಿಯಲ್ಲಿ ಸೇವೆಮಾಡುವ ತನ್ನ ಸ್ವಕುಲದವರಂತೆ ತನ್ನ ದೇವರಾದ ಯೆಹೋವನ ಹೆಸರನ್ನು ಹೇಳಿ ತಾನೂ ಸೇವೆ ನಡಿಸಿದರೆ,
परमप्रभुको सामु खडा हुने त्यसका सबै लेवी दाजुभाइले जस्तै गरी त्यसले परमप्रभु त्यसका परमेश्वरको नाउँमा सेवा गरोस् ।
8 ೮ ಅವನ ಕೈಯಲ್ಲಿ ಪಿತ್ರಾರ್ಜಿತ ಸೊತ್ತನ್ನು ಮಾರಿದ ಹಣವಿದ್ದರೂ, ಇತರ ಲೇವಿಯರೊಂದಿಗೆ ಸಮವಾಗಿ ಭೋಗಿಸುವುದಕ್ಕೆ ಬಾಧ್ಯನಾಗಿರುವನು.
त्यसको आफ्नो परिवारको सम्पतिको बिक्रीबाट आएको अतिरिक्त त्यसले पनि खानको लागि समान हिस्सा पाउनुपर्छ ।
9 ೯ ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದಲ್ಲಿ ನೀವು ಸೇರಿದಾಗ ಅಲ್ಲಿರುವ ಜನಗಳು ಮಾಡುವ ಅಸಹ್ಯವಾದ ಕೆಲಸಗಳನ್ನು ನೀವು ಅನುಸರಿಸಲೇಬಾರದು.
जब तिमीहरू परमप्रभु तिमीहरूका परमेश्वरले तिमीहरूलाई दिन लाग्नुभएको देशमा आउँछौ तब तिमीहरूले ती जातिहरूका घृणित कुराहरूको देखासिकी गर्न नसिक्नू ।
10 ೧೦ ಮಕ್ಕಳನ್ನು ಬಲಿಕೊಡುವವರು, ಕಣಿಹೇಳುವವರು, ಶಕುನನೋಡುವವರು, ಯಂತ್ರ ಮಂತ್ರಗಳನ್ನು ಮಾಡುವವರು,
तिमीहरूका बिचमा आफ्नो छोरा या छोरीलाई आगोमा बलि गर्ने, शकून-अपशकून बताउने, जोखना हेर्ने, वा गिलासमा भएको चिन्हहरू पढ्ने वा टुनामुना गर्ने,
11 ೧೧ ಮಾಟಗಾರರು, ತಂತ್ರಗಾರರು, ಸತ್ತವರಲ್ಲಿ ವಿಚಾರಿಸುವವರು, ಬೇತಾಳ, ಪ್ರೇತ, ಭೂತ ಎಂದು ಪೂಜಿಸುವವರು ಯಾರೂ ನಿಮ್ಮಲ್ಲಿ ಇರಬಾರದು.
मोहनी लगाउने, आत्मासित सल्लाह लिने वा भाग्य बताउने वा मरेकाहरूका आत्मासित कुरा गर्ने कोही पनि नपाइयोस् ।
12 ೧೨ ಇಂಥ ಕೆಲಸಗಳನ್ನು ನಡಿಸುವವರನ್ನು ಯೆಹೋವನು ಸಹಿಸುವುದಿಲ್ಲ; ನಿಮ್ಮ ದೇವರಾದ ಯೆಹೋವನು ಇಂಥ ಹೇಯಕೃತ್ಯಗಳನ್ನು ಮಾಡುವ ಆ ಜನಾಂಗಗಳನ್ನು ನಿಮ್ಮಿಂದ ಹೊರ ಹೋಗುವಂತೆ ಮಾಡಿದ್ದಾನೆ.
किनकि जसले यी कुराहरू गर्छ, त्यो परमप्रभुको दृष्टिमा घृणित हुन्छ । यी घृणित कामहरूको कारणले गर्दा नै परमप्रभु तिमीहरूका परमेश्वरले तिमीहरूकै सामु तिनीहरूलाई धपाउँदै हुनुहुन्छ ।
13 ೧೩ ನೀವು ನಿಮ್ಮ ದೇವರಾದ ಯೆಹೋವನ ಮುಂದೆ ನಿರ್ದೊಷಿಗಳಾಗಿರಬೇಕು.
तिमीहरू परमप्रभु तिमीहरूका परमेश्वरको सामु निष्खोट हुनुपर्छ ।
14 ೧೪ ನೀವು ಸ್ವಾಧೀನಮಾಡಿಕೊಳ್ಳುವ ದೇಶದ ಜನಾಂಗಗಳು ಶಕುನಗಳನ್ನು ನೋಡುತ್ತಾರೆ ಮತ್ತು ಯಂತ್ರ ಮಂತ್ರಗಳನ್ನು ಮಾಡುತ್ತಾರೆ. ನೀವಾದರೋ ಹಾಗೆ ಮಾಡುವುದಕ್ಕೆ ನಿಮ್ಮ ದೇವರಾದ ಯೆಹೋವನಿಂದ ಅಪ್ಪಣೆಹೊಂದಲಿಲ್ಲ.
किनकि तिमीहरूले हराउने जातिहरूले जादुगरी, शकून-अपशकूनको अभ्यास गर्नेहरूको कुरा सुन्छन् । तर परमप्रभु तिमीहरूका परमेश्वरले तिमीहरूलाई त्यसो गर्न अनुमति दिनुभएको छैन ।
15 ೧೫ ನಿಮ್ಮ ದೇವರಾದ ಯೆಹೋವನು ನಿಮ್ಮ ಸಹೋದರರಲ್ಲಿ ನನ್ನಂಥ ಪ್ರವಾದಿಯನ್ನು ನಿಮಗೆ ಏರ್ಪಡಿಸುವನು; ಅವನಿಗೆ ನೀವು ಕಿವಿಗೊಡಬೇಕು.
परमप्रभु तिमीहरूका परमेश्वरले तिमीहरूका बिचबाट तिमीहरूका दाजुभाइबाट मजस्तै एक जना अगमवक्ता खड गर्नुहुने छ । तिनको कुरा सुन्नू ।
16 ೧೬ ಹೋರೇಬಿನಲ್ಲಿ ಸಭೆಕೂಡಿದ ದಿನದಲ್ಲಿ ನೀವು, “ನಮ್ಮ ದೇವರಾದ ಯೆಹೋವನ ಸ್ವರವನ್ನು ಇನ್ನು ಕೇಳುವುದಕ್ಕಾಗಲಿ ಅಥವಾ ಈ ಘೋರವಾದ ಅಗ್ನಿಜ್ವಾಲೆಯನ್ನು ಇನ್ನು ನೋಡವುದಕ್ಕಾಗಲಿ ನಮಗೆ ಮನಸ್ಸಿಲ್ಲ, ಹಾಗೇನಾದರು ಕೇಳಿ ನೋಡಿದರೆ ಸತ್ತು ಹೋಗುವೆವು” ಎಂದು ನೀವು ಹೇಳಿದಿರಷ್ಟೆ.
होरेबमा सभाको दिनमा तिमीहरूले यसो भन्दै परमप्रभु तिमीहरूका परमेश्वरलाई बिन्ती चढायौ, 'हामीले फेरि परमप्रभु हाम्रा परमेश्वरको आवाज सुन्न नपरोस् न त उहाँको यो डरलाग्दो आगो देख्न परोस् नत्रता हामी मर्ने छौँ ।'
17 ೧೭ ಆಗ ಯೆಹೋವನು ನನಗೆ, “ಇವರು ಹೇಳಿದ ಮಾತು ಒಳ್ಳೆಯದೇ;
परमप्रभुले मलाई भन्नुभयो, 'तिनीहरूले भनेका कुरा ठिक छ ।
18 ೧೮ ಇವರ ಸ್ವದೇಶದವರಲ್ಲಿ ನಿನ್ನಂಥ ಪ್ರವಾದಿಯನ್ನು ಅವರಿಗೋಸ್ಕರ ಏರ್ಪಡಿಸುವೆನು; ಅವನ ಬಾಯಿಂದ ನನ್ನ ಮಾತುಗಳನ್ನು ನುಡಿಸುವೆನು; ನಾನು ಅವನಿಗೆ ಆಜ್ಞಾಪಿಸಿದ್ದನ್ನೆಲ್ಲಾ ಅವನು ಅವರಿಗೆ ತಿಳಿಸುವನು.
म तिनीहरूकै दाजुभाइहरूका बिचबाट तँजस्तै एक जना अगमवक्ता खडा गर्ने छु । म त्यसको मुखमा मेरा वचन हालिदिने छु र त्यसले मैले तँलाई आज्ञा गरेका सबै वचन बोल्ने छ ।
19 ೧೯ ಅವನು ನನ್ನ ಹೆಸರಿನಲ್ಲಿ ಹೇಳಿದ ಮಾತುಗಳಿಗೆ ಯಾರು ಕಿವಿಗೊಡುವದಿಲ್ಲವೋ ಅಂಥವರನ್ನು ನಾನು ಶಿಕ್ಷಿಸುವೆನು.
त्यसले मेरो नाउँमा बोल्ने मेरा वचन नसुन्ने कोही पनि मारिने छ ।
20 ೨೦ ಆದರೆ ಯಾವ ಪ್ರವಾದಿ ನನ್ನಿಂದ ಅಧಿಕಾರಹೊಂದದೆ, ನಾನು ಪ್ರೇರಣೆಮಾಡದ ಮಾತುಗಳನ್ನು ಯೆಹೋವನ ಮಾತೆಂದು ಹೇಳಿ ಜನರಿಗೆ ತಿಳಿಸುವನೋ, ಇಲ್ಲವೆ ಇತರ ದೇವರುಗಳ ಹೆಸರಿನಲ್ಲಿ ಮಾತನಾಡುವನೋ ಅವನಿಗೆ ಮರಣಶಿಕ್ಷೆಯಾಗಬೇಕೆಂದು ಹೇಳಿದನು.
तर मेरो नाउँमा अहङ्कारी भएर मैले आज्ञा नगरेको वचन बोल्ने वा अन्य देवताहरूको नाउँमा बोल्ने अगमवक्ता मारिनैपर्छ ।'
21 ೨೧ ‘ಪ್ರವಾದಿಯು ಹೇಳಿದ ಮಾತು ಯೆಹೋವನ ಮಾತಲ್ಲವೆಂದು ತಿಳಿದುಕೊಳ್ಳುವುದು ಹೇಗೆ’ ಅಂದುಕೊಳ್ಳುತ್ತೀರೋ?
तिमीहरूले आ-आफ्ना हृदयमा सोधौला, 'परमप्रभुले बोल्नुभएको वचन होइन भनेर हामीले कसरी थाहा पाउने?'
22 ೨೨ ಪ್ರವಾದಿಯು ‘ಇದು ಯೆಹೋವನ ನುಡಿ’ ಎಂದು ಹೇಳಿ, ಆತನು ತಿಳಿಸಿದ ಸಂಗತಿಯೂ ನಡೆಯದೆ ಹೋದರೆ, ಅವನ ಮಾತು ಯೆಹೋವನದಲ್ಲವೆಂದು ನೀವು ತಿಳಿದುಕೊಳ್ಳಬೇಕು. ಅವನು ನನ್ನ ಅಪ್ಪಣೆ ಇಲ್ಲದೆ ಮಾತನಾಡಿದವನು ಮತ್ತು ನೀವು ಅವನಿಗೆ ಹೆದರಬಾರದು” ಎಂದು ಹೇಳಿದನು.
परमप्रभुको नाउँमा बोल्ने अगमवक्ताले बोल्दा तिमीहरूले परमप्रभुको सन्देश थाहा पाउने छौ ।