< ಧರ್ಮೋಪದೇಶಕಾಂಡ 16 >
1 ೧ ನೀವು ಚೈತ್ರ ಮಾಸದಲ್ಲಿ ಪಸ್ಕಹಬ್ಬವನ್ನು ನಿಮ್ಮ ದೇವರಾದ ಯೆಹೋವನಿಗೋಸ್ಕರ ಆಚರಿಸಬೇಕು. ಆ ಮಾಸದ ಒಂದು ರಾತ್ರಿ ನಿಮ್ಮ ದೇವರಾದ ಯೆಹೋವನು ನಿಮ್ಮ ಪೂರ್ವಜರನ್ನು ಐಗುಪ್ತದೇಶದಿಂದ ಬಿಡಿಸಿದ ನೆನಪಿಗಾಗಿ ಪಸ್ಕಹಬ್ಬವನ್ನು ಆಚರಿಸಬೇಕು.
to keep: obey [obj] month [the] Abib and to make: do Passover to/for LORD God your for in/on/with month [the] Abib to come out: send you LORD God your from Egypt night
2 ೨ ನೀವು ಆಡು ಕುರಿಗಳಲ್ಲಾಗಲಿ, ದನಗಳಲ್ಲಾಗಲಿ ಪಸ್ಕದ ಪಶುವನ್ನು ಯೆಹೋವನು ತನ್ನ ಹೆಸರನ್ನು ಸ್ಥಾಪಿಸುವುದಕ್ಕೆ ಆರಿಸಿಕೊಳ್ಳುವ ಸ್ಥಳದಲ್ಲೇ ಆತನಿಗಾಗಿ ವಧಿಸಬೇಕು.
and to sacrifice Passover to/for LORD God your flock and cattle in/on/with place which to choose LORD to/for to dwell name his there
3 ೩ ಅದರೊಂದಿಗೆ ಹುಳಿಹಾಕಿದ ರೊಟ್ಟಿಯನ್ನು ತಿನ್ನಬಾರದು; ಯಾಕೆಂದರೆ ನೀವು (ರೊಟ್ಟಿಗೆ ಹುಳಿಹಾಕುವುದಕ್ಕೆ ಅವಕಾಶವಿಲ್ಲದೆ) ಅವಸರದಿಂದ ಐಗುಪ್ತದೇಶವನ್ನು ಬಿಟ್ಟು ಬಂದಿರಿ. ನಿಮಗೆ ಬಿಡುಗಡೆಯಾದ ಆ ದಿನವು ನಿಮ್ಮ ಜೀವಮಾನದಲ್ಲೆಲ್ಲಾ ನೆನಪಿನಲ್ಲಿಟ್ಟುಕೊಳ್ಳುವಂತೆ ನೀವು ಕಷ್ಟವನ್ನು ಸೂಚಿಸುವ ಹುಳಿಯಿಲ್ಲದ ರೊಟ್ಟಿಗಳನ್ನು ಏಳು ದಿನಗಳ ವರೆಗೂ ತಿನ್ನಬೇಕು.
not to eat upon him leaven seven day to eat upon him unleavened bread food: bread affliction for in/on/with haste to come out: come from land: country/planet Egypt because to remember [obj] day to come out: come you from land: country/planet Egypt all day life your
4 ೪ ಆ ಏಳು ದಿನಗಳು ನಿಮ್ಮ ದೇಶದಲ್ಲೆಲ್ಲಾ ಹುಳಿಬೆರೆತ ಯಾವ ಪದಾರ್ಥವೂ ನಿಮ್ಮ ಬಳಿಯಲ್ಲಿ ಇರಲೇಬಾರದು. ಮೊದಲನೆಯ ದಿನದ ಸಂಜೆಯಲ್ಲಿ ನೀವು ವಧಿಸಿದ ಪಶುಮಾಂಸದಲ್ಲಿ ಸ್ವಲ್ಪವನ್ನೂ ಮರುದಿನದ ವರೆಗೆ ಉಳಿಸಬಾರದು.
and not to see: see to/for you leaven in/on/with all border: area your seven day and not to lodge from [the] flesh which to sacrifice in/on/with evening in/on/with day [the] first to/for morning
5 ೫ ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ಯಾವ ಊರಲ್ಲಿಯಾದರೂ ಪಸ್ಕದ ಪಶುವನ್ನು ವಧಿಸದೆ,
not be able to/for to sacrifice [obj] [the] Passover in/on/with one gate: town your which LORD God your to give: give to/for you
6 ೬ ಆತನು ತನ್ನ ಹೆಸರನ್ನು ಸ್ಥಾಪಿಸುವುದಕ್ಕೆ ಆರಿಸಿಕೊಳ್ಳುವ ಸ್ಥಳದಲ್ಲೇ, ನೀವು ಐಗುಪ್ತದೇಶದಿಂದ ಹೊರಟುಬಂದ ಸಮಯ, ಅಂದರೆ ಸಾಯಂಕಾಲದಲ್ಲಿ ಪಸ್ಕದ ಯಜ್ಞವನ್ನು ಸಮರ್ಪಿಸಬೇಕು.
that if: except if: except to(wards) [the] place which to choose LORD God your to/for to dwell name his there to sacrifice [obj] [the] Passover in/on/with evening like/as to come (in): (sun)set [the] sun meeting: time appointed to come out: come you from Egypt
7 ೭ ಆ ಸ್ಥಳದಲ್ಲಿಯೇ ನೀವು ಅದನ್ನು ಅಡಿಗೆಮಾಡಿ ತಿನ್ನಬೇಕು. ಮರುದಿನ ನಿಮ್ಮ ನಿಮ್ಮ ಮನೆಗಳಿಗೆ ನೀವು ಹೊರಟು ಹೋಗಬಹುದು.
and to boil and to eat in/on/with place which to choose LORD God your in/on/with him and to turn in/on/with morning and to go: went to/for tent your
8 ೮ ಆರು ದಿನ ನೀವು ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು; ಏಳನೆಯ ದಿನದಲ್ಲಿ ನಿಮ್ಮ ದೇವರಾದ ಯೆಹೋವನಿಗಾಗಿ ಸಭೆ ಸೇರಿಬರಬೇಕು; ಆ ದಿನದಲ್ಲಿ ಯಾವ ಕೆಲಸವ ಮಾಡಬಾರದು.
six day to eat unleavened bread and in/on/with day [the] seventh assembly to/for LORD God your not to make: do work
9 ೯ ಬೆಳೆ ಕೊಯ್ಯುವುದಕ್ಕೆ ಕುಡುಗೋಲು ಹಾಕುವ ಕಾಲ ಮೊದಲುಗೊಂಡು ಏಳು ವಾರಗಳನ್ನು ಎಣಿಸಿ,
seven week to recount to/for you from to profane/begin: begin sickle in/on/with standing grain to profane/begin: begin to/for to recount seven week
10 ೧೦ ಆ ಏಳು ವಾರಗಳಾದ ನಂತರ ಪಂಚಾಶತ್ತಮ ದಿನದ ಹಬ್ಬವನ್ನು ಆಚರಿಸಬೇಕು. ನಿಮ್ಮ ದೇವರಾದ ಯೆಹೋವನು ನಿಮಗೆ ಅನುಗ್ರಹಿಸಿದ ಬೆಳೆಗೆ ತಕ್ಕಷ್ಟು ಕಾಣಿಕೆಯನ್ನು ನೀವು ಆಗ ಆತನಿಗೋಸ್ಕರ ತರಬೇಕು.
and to make: do feast Weeks to/for LORD God your payment voluntariness hand your which to give: give like/as as which to bless you LORD God your
11 ೧೧ ಮತ್ತು ಆತನು ತನ್ನ ಹೆಸರನ್ನು ಸ್ಥಾಪಿಸುವುದಕ್ಕೆ ಆರಿಸಿಕೊಳ್ಳುವ ಸ್ಥಳದಲ್ಲಿ ನೀವೂ ನಿಮ್ಮ ಗಂಡು ಹೆಣ್ಣು ಮಕ್ಕಳೂ, ದಾಸ ದಾಸಿಯರೂ, ನಿಮ್ಮ ಊರಲ್ಲಿರುವ ಲೇವಿಯರೂ, ಪರದೇಶದವರೂ, ಅನಾಥರು ಮತ್ತು ವಿಧವೆಯರೂ ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ಸಂಭ್ರಮಿಸಬೇಕು.
and to rejoice to/for face: before LORD God your you(m. s.) and son: child your and daughter your and servant/slave your and maidservant your and [the] Levi which in/on/with gate: town your and [the] sojourner and [the] orphan and [the] widow which in/on/with entrails: among your in/on/with place which to choose LORD God your to/for to dwell name his there
12 ೧೨ ಐಗುಪ್ತದೇಶದಲ್ಲಿ ದಾಸರಾಗಿದ್ದೆವೆಂಬುದನ್ನು ನೀವು ನೆನಪಿಗೆ ತಂದುಕೊಂಡು ಈ ವಿಧಿಗಳನ್ನು ಅನುಸರಿಸಿ ನಡೆಯಬೇಕು.
and to remember for servant/slave to be in/on/with Egypt and to keep: careful and to make: do [obj] [the] statute: decree [the] these
13 ೧೩ ನೀವು ಕಣದ ಕೆಲಸವನ್ನೂ, ದ್ರಾಕ್ಷಿ ಆಲೆಯ ಕೆಲಸವನ್ನೂ ಪೂರೈಸಿ, ಬೆಳೆಯನ್ನು ಮನೆಗೆ ತಂದಾಗ ಏಳು ದಿನಗಳವರೆಗೂ ಪರ್ಣಶಾಲೆಗಳ ಹಬ್ಬವನ್ನು ಆಚರಿಸಬೇಕು.
feast [the] booth to make: do to/for you seven day in/on/with to gather you from threshing floor your and from wine your
14 ೧೪ ಅದರಲ್ಲಿ ನೀವೂ, ನಿಮ್ಮ ಗಂಡು ಹೆಣ್ಣು ಮಕ್ಕಳೂ, ದಾಸ ಮತ್ತು ದಾಸಿಯರೂ, ನಿಮ್ಮ ಊರಲ್ಲಿರುವ ಲೇವಿಯರೂ, ಪರದೇಶದವರೂ, ಅನಾಥರು ಮತ್ತು ವಿಧವೆಯರೂ ಸಂಭ್ರಮಿಸಬೇಕು.
and to rejoice in/on/with feast your you(m. s.) and son: child your and daughter your and servant/slave your and maidservant your and [the] Levi and [the] sojourner and [the] orphan and [the] widow which in/on/with gate: town your
15 ೧೫ ನಿಮ್ಮ ದೇವರಾದ ಯೆಹೋವನು ಆರಿಸಿಕೊಳ್ಳುವ ಸ್ಥಳದಲ್ಲಿ ನೀವು ಏಳು ದಿನವೂ ಆ ಜಾತ್ರೆಯನ್ನು ಆಚರಿಸಬೇಕು. ನಿಮ್ಮ ವ್ಯವಸಾಯವನ್ನೂ ಮತ್ತು ಬೇರೆ ಎಲ್ಲಾ ಕೆಲಸಗಳನ್ನೂ ಆತನು ಸಫಲ ಮಾಡಿದ್ದರಿಂದ ನೀವು ಬಹಳ ಆನಂದದಿಂದಿರಬೇಕು.
seven day to celebrate to/for LORD God your in/on/with place which to choose LORD for to bless you LORD God your in/on/with all produce your and in/on/with all deed: work hand your and to be surely glad
16 ೧೬ ಹುಳಿಯಿಲ್ಲದ ರೊಟ್ಟಿಗಳ ಹಬ್ಬದಲ್ಲಿಯೂ, ಪಂಚಾಶತ್ತಮ ದಿನದ ಹಬ್ಬದಲ್ಲಿಯೂ ಮತ್ತು ಪರ್ಣಶಾಲೆಗಳ ಹಬ್ಬದಲ್ಲಿಯೂ ಅಂತು ವರ್ಷಕ್ಕೆ ಮೂರಾವರ್ತಿ ನಿಮ್ಮಲ್ಲಿರುವ ಗಂಡಸರೆಲ್ಲರೂ ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ಆತನು ಆರಿಸಿಕೊಳ್ಳುವ ಸ್ಥಳದಲ್ಲಿ ಕಾಣಿಸಿಕೊಳ್ಳಬೇಕು. ಒಬ್ಬರೂ ಕೈಯಲ್ಲಿ ಕಾಣಿಕೆಯಿಲ್ಲದೆ ಆತನ ಸನ್ನಿಧಿಗೆ ಬರಬಾರದು.
three beat in/on/with year to see: see all male your with face: before LORD God your in/on/with place which to choose in/on/with feast [the] unleavened bread and in/on/with feast [the] Weeks and in/on/with feast [the] booth and not to see: see with face: before LORD emptily
17 ೧೭ ಪ್ರತಿಯೊಬ್ಬನು ತನಗೆ ಯೆಹೋವನು ಅನುಗ್ರಹಿಸಿದ ಆದಾಯದ ಮೇರೆಗೆ ತನ್ನ ಶಕ್ತ್ಯಾನುಸಾರ ಕೊಡಬೇಕು.
man: anyone like/as gift hand: power his like/as blessing LORD God your which to give: give to/for you
18 ೧೮ ಪ್ರತಿಯೊಂದು ಕುಲವು ಇರುವ ಪ್ರದೇಶದಲ್ಲಿ ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ಎಲ್ಲಾ ಊರುಗಳಲ್ಲಿಯೂ, ನ್ಯಾಯಾಧಿಪತಿಗಳನ್ನೂ ಮತ್ತು ಅಧಿಕಾರಿಗಳನ್ನೂ ನೀವು ನೇಮಿಸಬೇಕು. ಅವರು ಜನರಿಗೋಸ್ಕರ ನ್ಯಾಯವನ್ನು ವಿಚಾರಿಸಿ ಸರಿಯಾದ ತೀರ್ಪುಕೊಡಬೇಕು.
to judge and official to give: put to/for you in/on/with all gate: town your which LORD God your to give: give to/for you to/for tribe your and to judge [obj] [the] people justice: judgement righteousness
19 ೧೯ ನೀವು ನ್ಯಾಯವನ್ನು ಬಿಟ್ಟು ತೀರ್ಮಾನ ಮಾಡಬಾರದು, ಪಕ್ಷಪಾತಮಾಡಬಾರದು, ಲಂಚತೆಗೆದುಕೊಳ್ಳಬಾರದು. ಲಂಚವು ಬುದ್ಧಿವಂತರನ್ನೂ ಕುರುಡರಂತೆ ಮಾಡುತ್ತದೆ; ನಿರಪರಾಧಿಗಳ ನ್ಯಾಯವನ್ನು ಕೆಡಿಸುತ್ತದೆ.
not to stretch justice not to recognize face: kindness and not to take: recieve bribe for [the] bribe to blind eye wise and to pervert word: case righteous
20 ೨೦ ನೀವು ಕೇವಲ ನ್ಯಾಯವನ್ನೇ ಅನುಸರಿಸಬೇಕು. ಹಾಗೆ ನಡೆದರೆ ನೀವು ಬದುಕಿಕೊಂಡು ನಿಮ್ಮ ದೇವರಾದ ಯೆಹೋವನು ಕೊಡುವ ದೇಶವನ್ನು ಸ್ವಾಧೀನಮಾಡಿಕೊಳ್ಳುವಿರಿ.
righteousness righteousness to pursue because to live and to possess: take [obj] [the] land: country/planet which LORD God your to give: give to/for you
21 ೨೧ ನಿಮ್ಮ ದೇವರಾದ ಯೆಹೋವನಿಗೋಸ್ಕರ ನೀವು ಕಟ್ಟಿಸಿಕೊಳ್ಳುವ ಯಜ್ಞವೇದಿಯ ಬಳಿಯಲ್ಲಿ, ಅಶೇರ ವಿಗ್ರಹಕ್ಕೆ ಸಂಬಂಧಪಟ್ಟ ಯಾವ ಮರದ ಸ್ತಂಭವನ್ನೂ ನೆಡಬಾರದು.
not to plant to/for you Asherah all tree beside altar LORD God your which to make to/for you
22 ೨೨ ಪವಿತ್ರ ಕಲ್ಲಿನ ಕಂಬವನ್ನೂ ನಿಲ್ಲಿಸಬಾರದು; ಇದು ನಿಮ್ಮ ದೇವರಾದ ಯೆಹೋವನಿಗೆ ವಿರುದ್ಧವಾದದ್ದು.
and not to arise: establish to/for you pillar which to hate LORD God your