< ಧರ್ಮೋಪದೇಶಕಾಂಡ 14 >

1 ನೀವು ನಿಮ್ಮ ದೇವರಾಗಿರುವ ಯೆಹೋವನ ಮಕ್ಕಳಾಗಿರುವುದರಿಂದ ಸತ್ತವರಿಗೋಸ್ಕರ ದೇಹವನ್ನು ಗಾಯಮಾಡಿಕೊಳ್ಳಬಾರದು ಮತ್ತು ತಲೆಯ ಮುಂದಿನಭಾಗವನ್ನು ಬೋಳಿಸಿಕೊಳ್ಳಲೂ ಬಾರದು.
Inu ndinu ana a Yehova Mulungu wanu. Osamadzichekacheka kapena kudzimeta pamphumi chifukwa cha abale anu amene amwalira,
2 ಯಾಕೆಂದರೆ ನೀವು ಕೇವಲ ನಿಮ್ಮ ದೇವರಾದ ಯೆಹೋವನ ಪರಿಶುದ್ಧ ಜನರೇ. ಆತನು ಭೂಲೋಕದಲ್ಲಿರುವ ಸಮಸ್ತ ಜನಾಂಗಗಳಲ್ಲಿ ನಿಮ್ಮನ್ನೇ ಸ್ವಕೀಯ ಜನರಾಗುವುದಕ್ಕೆ ಆರಿಸಿಕೊಂಡಿದ್ದಾನೆ ಎಂಬುದು ನಿಮಗೆ ತಿಳಿದಿರಬೇಕು.
pakuti ndinu anthu opatulika a Yehova Mulungu wanu. Pakati pa anthu onse pa dziko lonse lapansi, Yehova wasankha inu kuti chikhale chuma chake chamtengo wapatali.
3 ನಿಷಿದ್ಧವಾಗಿರುವ ಯಾವುದನ್ನೂ ನೀವು ತಿನ್ನಬಾರದು.
Musamadye chinthu chilichonse chonyansa.
4 ನೀವು ತಿನ್ನಬಹುದಾದ ಪಶುಜಾತಿಗಳು ಯಾವುವೆಂದರೆ ದನ, ಕುರಿ, ಆಡು,
Nyama zomwe mukhoza kudya ndi izi: ngʼombe, nkhosa, mbuzi,
5 ದುಪ್ಪಿ, ಜಿಂಕೆ, ಸಾರಂಗ, ಕಾಡುಮೇಕೆ, ಚಿಗರಿ, ಕಡವೆ, ಕೊಂಡಗುರಿ (ಕಾಡುಟಗರು) ಎಂಬಿವುಗಳೇ.
mbawala, gwape, mphoyo, mphalapala, ngoma, nyumbu ndi mbalale.
6 ಯಾವ ಪ್ರಾಣಿಯ ಕಾಲ್ಗೊರಸು ಸೀಳಿದೆಯೋ ಅದು ಮೆಲಕುಹಾಕುವಂಥದಾದರೆ ಅದರ ಮಾಂಸವನ್ನು ತಿನ್ನಬಹುದು.
Nyama iliyonse imene ili ndi chipondero chogawikana pakati ndi yobzikula mukhoza kudya.
7 ಆದರೆ ಯಾವ ಪ್ರಾಣಿಯು ಮೆಲಕುಹಾಕಿದರೂ ಗೊರಸು ಸೀಳಿರುವುದಿಲ್ಲವೋ ಮತ್ತು ಯಾವ ಪ್ರಾಣಿಯ ಗೊರಸು ಸೀಳಿದ್ದರೂ ಮೆಲಕು ಹಾಕುವುದಿಲ್ಲವೋ, ಅವುಗಳ ಮಾಂಸವನ್ನು ನೀವು ತಿನ್ನಬಾರದು. ಉದಾಹರಣೆ: ಒಂಟೆ, ಮೊಲ, ಬೆಟ್ಟದಮೊಲ ಇವುಗಳು ಮೆಲಕುಹಾಕುವಂಥವುಗಳಾದರೂ ಸೀಳುಗೊರಸು ಇಲ್ಲವಾದ ಕಾರಣ ಅವು ನಿಮಗೆ ಅಶುದ್ಧ.
Komabe pakati pa nyama zimene zimabzikula kapena zogawikana zipondero, zimene simukuyenera kudya ndi ngamira, kalulu ndi mbira. Zimenezi ngakhale zimabzikula, zipondero zake sizogawikana, choncho ndi zodetsedwa, musadye.
8 ಹಂದಿಯ ಗೊರಸು ಸೀಳಿದ್ದರೂ ಅದು ಮೆಲಕುಹಾಕುವುದಿಲ್ಲವಾದುದರಿಂದ ಅದು ನಿಮಗೆ ಅಶುದ್ಧ. ಇವುಗಳ ಮಾಂಸವನ್ನು ನೀವು ತಿನ್ನಬಾರದು; ಇವುಗಳ ಹೆಣವನ್ನು ಮುಟ್ಟಬಾರದು.
Nkhumba simabzikula ndi yodetsedwanso ngakhale ili ndi zipondero zogawikana. Musamadye nyama yake kapena kukhudza imene yafa.
9 ಜಲಜಂತುಗಳಲ್ಲಿ ನೀವು ತಿನ್ನಬಹುದಾದವುಗಳು ಯಾವುವೆಂದರೆ: ಯಾವ ಜಾತಿಯ ಜಲಜಂತುಗಳಿಗೆ ರೆಕ್ಕೆ ಇದ್ದು ದೇಹವೆಲ್ಲಾ ಪರೆಪರೆಯಾಗಿರುವುದೋ ಅದರ ಮಾಂಸವನ್ನು ತಿನ್ನಬಹುದು.
Mwa zamoyo zonse zimene zimakhala mʼmadzi, mukhoza kudya chilichonse chimene chili ndi minga ya pa msana ndi mamba.
10 ೧೦ ಯಾವ ಜಾತಿಯ ಜಲಜಂತುಗಳಿಗೆ ರೆಕ್ಕೆಯೂ ಮತ್ತು ಪರೆಪರೆಯಾದ ದೇಹವು ಇರುವುದಿಲ್ಲವೋ ಅವುಗಳ ಮಾಂಸವನ್ನು ನೀವು ತಿನ್ನಬಾರದು; ಅದು ನಿಮಗೆ ಅಶುದ್ಧ.
Koma chilichonse chimene chilibe minga ya pa msana ndi mamba musadye pakuti nʼchodetsedwa.
11 ೧೧ ಎಲ್ಲಾ ಶುದ್ಧ ಪಕ್ಷಿಗಳ ಮಾಂಸವನ್ನು ನೀವು ತಿನ್ನಬಹುದು.
Mukhoza kudya mbalame iliyonse yoyenera kudya.
12 ೧೨ ನೀವು ತಿನ್ನಬಾರದವುಗಳು ಯಾವುವೆಂದರೆ ಗರುಡ, ಬೆಟ್ಟದ ಹದ್ದು, ಕ್ರೌಂಚ,
Koma simukuyenera kudya izi: mphungu, nkhwazi, mwimba,
13 ೧೩ ಗಿಡಗ, ಹಕ್ಕಿಸಾಲೆ, ಸಕಲವಿಧವಾದ ಹದ್ದು,
nankapakapa, akamtema, akhungubwi a mitundu yonse, ndi mtundu uliwonse wa miphamba,
14 ೧೪ ಸಕಲವಿಧವಾದ ಕಾಗೆ,
mtundu uliwonse wa khwangwala,
15 ೧೫ ಉಷ್ಟ್ರಪಕ್ಷಿ, ಉಲೂಕ, ಕಡಲಹಕ್ಕಿ, ಸಕಲವಿಧವಾದ ಡೇಗೆ,
kadzidzi wamphondo, kadzidzi wodzuma, chipudo, mtundu uliwonse wa akabawi,
16 ೧೬ ಗೂಬೆ, ಹೆಗ್ಗೂಬೆ, ಕರೇಟು,
kadzidzi wamngʼono, chiswankhono ndi mantchichi,
17 ೧೭ ಚೀಲಮೂಗಿ, ರಣಹದ್ದು, ನೀರುಕಾಗೆ,
tsekwe, vuwo, dembo,
18 ೧೮ ಕೊಕ್ಕರೆ, ಸಕಲವಿಧವಾದ ಬಕ, ಹೆಡೆಹಕ್ಕಿ ಮತ್ತು ಕಣ್ಣಕಪಡಿ.
indwa, zimeza za mitundu yonse, nsadzu ndi mleme.
19 ೧೯ ರೆಕ್ಕೆಯುಳ್ಳ ಕ್ರಿಮಿಕೀಟಗಳೆಲ್ಲವೂ ನಿಮಗೆ ಅಶುದ್ಧ. ಅವುಗಳನ್ನು ನೀವು ತಿನ್ನಬಾರದು.
Zowuluka zonse za miyendo inayi ndi zodetsedwa. Musamadye zimenezi.
20 ೨೦ ರೆಕ್ಕೆಯುಳ್ಳವುಗಳಲ್ಲಿ ಶುದ್ಧ ಜಾತಿಯವುಗಳನ್ನು ಮಾತ್ರ ನೀವು ತಿನ್ನಬಹುದು.
Koma chowuluka chilichonse choyenera kudya mukhoza kudya.
21 ೨೧ ಸತ್ತುಬಿದ್ದದ್ದನ್ನು ನೀವು ತಿನ್ನಬಾರದು; ನಿಮ್ಮ ಊರಲ್ಲಿರುವ ಪರದೇಶೀಯರಿಗೆ ಅದನ್ನು ತಿನ್ನುವುದಕ್ಕೆ ಕೊಡಬಹುದು, ಅನ್ಯರಿಗೆ ಮಾರಬಹುದು. ನೀವಾದರೋ ನಿಮ್ಮ ದೇವರಾದ ಯೆಹೋವನಿಗೆ ಪ್ರತಿಷ್ಠಿತರಾದವರು. ಆಡುಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಬಾರದು.
Musamadye chilichonse chimene mwachipeza chofaifa. Mukhoza kupatsa mlendo amene akukhala mu mzinda wina uliwonse wa mizinda yanu. Iyeyo akhoza kudya kapena mukhoza kugulitsa kwa wina aliyense amene sali wa mtundu wanu. Koma inu ndinu anthu opatulika a Yehova Mulungu wanu. Musamaphike mwana wambuzi mu mkaka wa mayi wake.
22 ೨೨ ಪ್ರತಿವರ್ಷದ ನಿಮ್ಮ ಹೊಲದ ಬೆಳೆಯಲ್ಲಿ ದಶಮ ಭಾಗವನ್ನು ಪ್ರತ್ಯೇಕಿಸಬೇಕು.
Muzionetsetsa kuti mukupatula chakhumi pa zokolola zanu chaka chilichonse.
23 ೨೩ ಧಾನ್ಯ, ದ್ರಾಕ್ಷಿ, ಎಣ್ಣೆ ಇವುಗಳಲ್ಲಿ ದಶಮಭಾಗವನ್ನೂ ದನಕುರಿಗಳ ಚೊಚ್ಚಲು ಮರಿಗಳನ್ನೂ ಮತ್ತು ನಿಮ್ಮ ಹಿಂಡುಗಳನ್ನು ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ಆತನು ತನ್ನ ಹೆಸರನ್ನು ಸ್ಥಾಪಿಸಿಕೊಳ್ಳುವುದಕ್ಕೆ ಆರಿಸಿಕೊಳ್ಳುವ ಸ್ಥಳದಲ್ಲೇ ನೀವು ತಿನ್ನಬೇಕು. ಹೀಗೆ ನಿಮ್ಮ ದೇವರಾದ ಯೆಹೋವನಲ್ಲೇ ಯಾವಾಗಲೂ ಭಯಭಕ್ತಿಯುಳ್ಳವರಾಗಿ ಇರುವುದನ್ನು ಅಭ್ಯಾಸ ಮಾಡಿಕೊಳ್ಳುವವರಾಗಿರಬೇಕು.
Muzidyera chakhumi cha tirigu wanu, vinyo wanu watsopano ndi mafuta, ndi ana oyamba kubadwa a ngʼombe zanu pamaso pa Yehova Mulungu wanu pa malo amene adzasankhe ngati kokhalako dzina lake, kuti muphunzire kuopa Yehova Mulungu wanu.
24 ೨೪ ನಿಮ್ಮ ದೇವರಾದ ಯೆಹೋವನು ಆರಿಸಿಕೊಳ್ಳುವ ಸ್ಥಳವು ನಿಮಗೆ ದೂರವಾಗಿದ್ದು, ಆ ಕಾಣಿಕೆಗಳನ್ನು ಅಷ್ಟು ದೂರ ಹೊತ್ತುಕೊಂಡು ಹೋಗುವುದು ಅಸಾಧ್ಯವಾದರೆ, ನಿಮ್ಮ ದೇವರಾದ ಯೆಹೋವನು ನಿಮಗೆ ಅಭಿವೃದ್ಧಿಯನ್ನು ಉಂಟುಮಾಡಿದ ಕಾಲದಲ್ಲಿ,
Koma ngati malo amenewa ali kutali kwambiri ndipo kuti inu mwadalitsidwa ndi Yehova Mulungu wanu, ndipo simungathe kunyamula chakhumi chanu (chifukwa chakuti malo amene Yehova adzasankha kukayikako dzina lake ali kutali kwambiri),
25 ೨೫ ಅವುಗಳನ್ನು ಮಾರಿಬಿಟ್ಟು, ಆ ಹಣದ ಗಂಟನ್ನು ಆತನು ಆರಿಸಿಕೊಂಡ ಸ್ಥಳಕ್ಕೆ ತೆಗೆದುಕೊಂಡು ಹೋಗಿರಿ.
ndiye musinthitse chakhumi chanucho ndi siliva, ndipo mutenge silivayo ndi kupita naye kumalo kumene Yehova Mulungu wanu adzasankhe.
26 ೨೬ ಅಲ್ಲಿ ನಿಮ್ಮ ಇಷ್ಟಾನುಸಾರ ದನ, ಕುರಿ, ದ್ರಾಕ್ಷಾರಸ, ಮದ್ಯ ಮೊದಲಾದವುಗಳನ್ನು ಆ ಹಣದಿಂದ ಕೊಂಡುಕೊಂಡು, ನೀವೂ ಮತ್ತು ನಿಮ್ಮ ಮನೆಯವರೂ ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ಊಟಮಾಡಿ ಸಂತೋಷವಾಗಿರಬೇಕು.
Gwiritsani ntchito silivayo kugula chilichonse chimene muchifuna monga ngʼombe, nkhosa, vinyo kapena zakumwa zina zosasitsa, kapena china chilichonse chimene muchifuna. Ndipo inu ndi anthu a pa banja panu mudzazidyera komweko pamaso pa Yehova Mulungu wanu ndi kukondwera.
27 ೨೭ ಲೇವಿಯರಿಗೆ ನಿಮ್ಮೊಡನೆ ಯಾವ ಸ್ವಾಸ್ತ್ಯವೂ ಇಲ್ಲವಾದ್ದರಿಂದ ನೀವು ಅವರನ್ನು ಕೈಬಿಡಬಾರದು.
Alevi okhala mʼmizinda yanu musaleke kuwathandiza popeza alibe gawo lawo la chuma kapena cholowa chawochawo.
28 ೨೮ ಪ್ರತಿ ಮೂರನೆಯ ವರ್ಷದ ಬೆಳೆಯ ದಶಮಭಾಗವನ್ನು ತಂದು ನೀವು ಇರುವ ಊರಿನಲ್ಲಿಯೇ ಕೂಡಿಸಬೇಕು.
Kumapeto kwa zaka zitatu zilizonse muzibweretsa zakhumi zonse pa zokolola za chaka chimenecho ndi kuzisunga mʼmidzi yanu,
29 ೨೯ ಆಗ ಊರಿನಲ್ಲಿರುವ ಅನ್ಯದೇಶದವರೂ, ಅನಾಥರು, ವಿಧವೆಯರೂ ಮತ್ತು ನಿಮ್ಮೊಡನೆ ಸ್ವತ್ತನ್ನು ಹೊಂದದೆಹೋದ ಲೇವಿಯರೂ ಊಟಮಾಡಿ ಸಂತೋಷವಾಗಿರಲಿ. ನೀವು ಹೀಗೆ ನಡೆದುಕೊಂಡರೆ ನಿಮ್ಮ ದೇವರಾದ ಯೆಹೋವನು ನಿಮ್ಮ ಎಲ್ಲಾ ಪ್ರಯತ್ನಗಳನ್ನು ಸಫಲಮಾಡುವನು.
kuti Alevi (amene alibe gawo lawo la chuma kapena cholowa chawochawo), alendo, ana ndi akazi amasiye, amene akukhala mʼmizinda yanu akhoza kubwera kudzadya ndi kukhuta. Ndipo kuti akutero Yehova Mulungu wanu akudalitseni pa ntchito zanu zonse.

< ಧರ್ಮೋಪದೇಶಕಾಂಡ 14 >