< ದಾನಿಯೇಲನು 3 >

1 ರಾಜನಾದ ನೆಬೂಕದ್ನೆಚ್ಚರನು ಅರುವತ್ತು ಮೊಳ ಎತ್ತರದ, ಆರು ಮೊಳ ಅಗಲದ ಒಂದು ಬಂಗಾರದ ಪ್ರತಿಮೆಯನ್ನು ಮಾಡಿಸಿ, ಬಾಬೆಲ್ ಸಂಸ್ಥಾನದ ದೂರಾ ಎಂಬ ಬಯಲಿನಲ್ಲಿ ನಿಲ್ಲಿಸಿದನು.
Ɔhene Nebukadnessar yɛɛ sikakɔkɔɔ ohoni bi a na ne ɔsorokɔ yɛ anammɔn aduɔkron, na ne tɛtrɛtɛ nso yɛ anammɔn nkron. Wɔde sii Dura tata so wɔ Babiloniaman mu.
2 ಆಗ ರಾಜನಾದ ನೆಬೂಕದ್ನೆಚ್ಚರನು ತಾನು ನಿಲ್ಲಿಸಿದ ಪ್ರತಿಮೆಯ ಪ್ರತಿಷ್ಠೋತ್ಸವಕ್ಕೆ ಉಪರಾಜ, ನಾಯಕ, ದೇಶಾಧಿಪತಿ, ಮಂತ್ರಿ, ಕೋಶಾಧ್ಯಕ್ಷ, ನ್ಯಾಯಾಧಿಪತಿ, ವಿಚಾರಕ ಮುಂತಾದವರನ್ನೂ, ಸಮಸ್ತ ಸಂಸ್ಥಾನಾಧಿಕಾರಿಗಳನ್ನೂ ಒಟ್ಟುಗೂಡಿಸುವಂತೆ ಸಮಾಚಾರವನ್ನು ಕಳುಹಿಸಿದನು.
Afei, ɔtoo nkra kɔmaa ahenemma, mpanimfoɔ, amradofoɔ, afotufoɔ, nsanaafoɔ, atemmufoɔ, asɛnnifoɔ ne ɔman no mu mpanimfoɔ sɛ, wɔmmra ohoni a wɔreda no adi no ase.
3 ಆ ಉಪರಾಜ, ನಾಯಕ, ದೇಶಾಧಿಪತಿ, ಮಂತ್ರಿ, ಕೋಶಾಧ್ಯಕ್ಷ, ನ್ಯಾಯಾಧಿಪತಿ, ವಿಚಾರಕ ಇವರೂ ಸಮಸ್ತ ಸಂಸ್ಥಾನಾಧಿಕಾರಿಗಳೂ ರಾಜನಾದ ನೆಬೂಕದ್ನೆಚ್ಚರನು ನಿಲ್ಲಿಸಿದ ಪ್ರತಿಮೆಯ ಪ್ರತಿಷ್ಠೋತ್ಸವಕ್ಕೆ ನೆರೆದು, ನೆಬೂಕದ್ನೆಚ್ಚರನು ನಿಲ್ಲಿಸಿದ ಪ್ರತಿಮೆಯ ಮುಂದೆ ನಿಂತುಕೊಂಡರು.
Ɛberɛ a ahenemma, mpanimfoɔ, amradofoɔ, afotufoɔ, nsanaafoɔ, atemmufoɔ, asɛnnifoɔ ne ɔman no mu mpanimfoɔ no bɛhyiaeɛ sɛ wɔrebɛda ohoni a Ɔhene Nebukadnessar de asi hɔ adi no, wɔbɛgyinagyinaa ohoni no anim.
4 ಆಗ ಸಾರುವವನು ಗಟ್ಟಿಯಾಗಿ ಕೂಗಿ, “ವಿವಿಧ ಜನಾಂಗ, ಕುಲ, ಭಾಷೆಗಳವರೇ, ನಿಮಗೆ ರಾಜಾಜ್ಞೆಯಾಗಿದೆ.
Na wɔbɔɔ dawuro teaam sɛ, “Nnipa ahodoɔ ne aman ahodoɔ ne kasa ahodoɔ nyinaa montie deɛ ɔhene ahyɛ sɛ monyɛ!
5 ನೀವು ತುತ್ತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ, ವಾಲಗ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಕೂಡಲೆ ಅಡ್ಡಬಿದ್ದು, ರಾಜನಾದ ನೆಬೂಕದ್ನೆಚ್ಚರನು ನಿಲ್ಲಿಸಿರುವ ಬಂಗಾರದ ಪ್ರತಿಮೆಯನ್ನು ಪೂಜಿಸಬೇಕು.
Sɛ mote abɛn, odurugya, sankuo, sankuten, atɛntɛbɛn ne nnwontodeɛ ahodoɔ nyinaa nnyegyeeɛ a, monkoto fam, na monsɔre ɔhene Nebukadnessar sikakɔkɔɔ ohoni no.
6 ಯಾವನು ಅಡ್ಡಬಿದ್ದು ಪೂಜಿಸುವುದಿಲ್ಲವೋ ಅವನು ತಕ್ಷಣವೇ ಧಗಧಗನೆ ಉರಿಯುವ ಬೆಂಕಿಯೊಳಗೆ ಹಾಕಲ್ಪಡುವನು” ಎಂದು ಸಾರಿದನು.
Obiara a wankoto fam ansɔre ohoni no dɔn no ara mu no, wɔde no bɛto fononoo a ogya redɛre wɔ mu framfram mu.”
7 ಆದಕಾರಣ ಅದೇ ಕಾಲದಲ್ಲಿ ಸಮಸ್ತ ಜನಾಂಗ, ಕುಲ, ಭಾಷೆಗಳವರು ತುತ್ತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಕೂಡಲೆ ಎಲ್ಲರೂ ಅಡ್ಡಬಿದ್ದು ರಾಜನಾದ ನೆಬೂಕದ್ನೆಚ್ಚರನು ನಿಲ್ಲಿಸಿದ ಬಂಗಾರದ ಪ್ರತಿಮೆಯನ್ನು ಪೂಜಿಸಿದರು.
Enti, ɛberɛ a wɔtee abɛn, odurugya sankuo, sankuba sankuo, bɛnta, atɛntɛbɛn ne nnwontodeɛ ahodoɔ nyinaa nnyegyeeɛ no, nnipa no nyinaa ne aman ahodoɔ ne wɔn a wɔka kasa ahodoɔ nyinaa kotoo fam, sɔree ohoni a Ɔhene Nebukadnessar de asi hɔ no.
8 ಹೀಗಿರಲು ಆ ಸಮಯದಲ್ಲಿ ಕೆಲವು ಮಂದಿ ಪಂಡಿತರು ಯೆಹೂದ್ಯರ ಮೇಲೆ ದೂರು ಹೊರಿಸುವುದಕ್ಕೆ ರಾಜನ ಸನ್ನಿಧಿಗೆ ಬಂದು
Nanso, Kaldeafoɔ no bi kɔɔ ɔhene no nkyɛn kɔtoatoa Yudafoɔ no sɛ,
9 ರಾಜನಾದ ನೆಬೂಕದ್ನೆಚ್ಚರನಿಗೆ, “ಅರಸನೇ, ಚಿರಂಜೀವಿಯಾಗಿರು!
“Nana wo nkwa so!
10 ೧೦ ಪ್ರಭುವೇ, ತುತ್ತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ, ವಾಲಗ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಪ್ರತಿಯೊಬ್ಬನೂ ಅಡ್ಡಬಿದ್ದು, ಬಂಗಾರದ ಪ್ರತಿಮೆಯನ್ನು ಪೂಜಿಸಲಿ.
Wohyɛɛ mmara maa ɔmanfoɔ sɛ, obiara te abɛn, odurugya sankuo, sankuba sankuo, bɛnta, atɛntɛbɛn ne nnwontodeɛ ahodoɔ nyinaa nnyegyeeɛ a, ɔnkoto fam, na ɔnsɔre sika ohoni no,
11 ೧೧ “ಯಾರು ಅಡ್ಡಬಿದ್ದು ಪೂಜಿಸುವುದಿಲ್ಲವೋ ಅವನು ಧಗಧಗಿಸುವ ಬೆಂಕಿಯೊಳಗೆ ಹಾಕಲ್ಪಡಲಿ ಎಂದು ಆಜ್ಞೆಮಾಡಿದಿಯಲ್ಲಾ.
na obiara a wantie ankɔto ansɔre ohoni no, wɔde no bɛto fononoo a ogya redɛre framfram wɔ mu no mu.
12 ೧೨ ನೀನು ಬಾಬೆಲ್ ಸಂಸ್ಥಾನದ ಕಾರ್ಯಭಾರವನ್ನು ವಹಿಸಿಕೊಟ್ಟ ಶದ್ರಕ್, ಮೇಶಕ್, ಅಬೇದ್ನೆಗೋ ಎಂಬ ಕೆಲವು ಮಂದಿ ಯೆಹೂದ್ಯರು ಇದ್ದಾರೆ. ರಾಜನೇ, ಇವರು ನಿನ್ನನ್ನು ಲಕ್ಷಿಸುವುದಿಲ್ಲ, ನಿನ್ನ ದೇವರುಗಳನ್ನು ಸೇವಿಸುವುದಿಲ್ಲ, ನೀನು ನಿಲ್ಲಿಸಿದ ಬಂಗಾರದ ಪ್ರತಿಮೆಯನ್ನು ಪೂಜಿಸುವುದಿಲ್ಲ” ಎಂದು ಅರಿಕೆಮಾಡಿದರು.
Nanso, Nana, Yudafoɔ bi a wɔn din de Sadrak, Mesak ne Abednego a wode wɔn atuatua Babiloniaman ano no abu wo animtia, na wansɔre wʼanyame anaa sikakɔkɔɔ ohoni a wode asi hɔ no.”
13 ೧೩ ನೆಬೂಕದ್ನೆಚ್ಚರನು ಉಗ್ರರೋಷವುಳ್ಳವನಾಗಿ ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರನ್ನು ಹಿಡಿದು ತರಬೇಕೆಂದು ಆಜ್ಞಾಪಿಸಿದನು.
Ɛhɔ ara, Nebukadnessar bo fuu yie, na ɔhyɛɛ sɛ, wɔmfa Sadrak, Mesak ne Abednego mmra nʼanim. Wɔde wɔn baeɛ no,
14 ೧೪ ಹಾಗೆ ಅವರನ್ನು ಹಿಡಿದು ತರಲು ನೆಬೂಕದ್ನೆಚ್ಚರನು ಅವರಿಗೆ, “ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರೇ, ನೀವು ನನ್ನ ದೇವರನ್ನು ಸೇವಿಸದೆ, ನಾನು ನಿಲ್ಲಿಸಿದ ಬಂಗಾರದ ಪ್ರತಿಮೆಯನ್ನು ಪೂಜಿಸದೆ ಇರುವುದು ಬೇಕೆಂದೇ ಮಾಡಿದ್ದೋ?
Nebukadnessar bisaa wɔn sɛ, “Sadrak, Mesak ne Abednego, ɛyɛ nokorɛ sɛ, moansɔre mʼanyame ne sikakɔkɔɔ ohoni a mede asi hɔ no?
15 ೧೫ “ಈಗಲಾದರೂ ನೀವು ಸಿದ್ಧವಾಗಿದ್ದು ತುತ್ತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ, ವಾಲಗ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಕೂಡಲೆ ಅಡ್ಡಬಿದ್ದು, ನಾನು ನಿಲ್ಲಿಸಿದ ಪ್ರತಿಮೆಯನ್ನು ಪೂಜಿಸಿದರೆ ಸರಿ; ಇಲ್ಲವಾದರೆ ತಕ್ಷಣವೇ ಧಗಧಗನೆ ಉರಿಯುವ ಬೆಂಕಿಯೊಳಗೆ ಹಾಕಲ್ಪಡುವಿರಿ; ನಿಮ್ಮನ್ನು ನನ್ನ ಕೈಯೊಳಗಿಂದ ಬಿಡಿಸಬಲ್ಲ ದೇವರು ಯಾರು?” ಎಂದು ಹೇಳಿದನು.
Mɛma mo ɛkwan bio. Sɛ mote abɛn, odurugya sankuo, sankuba sankuo, bɛnta, atɛntɛbɛn ne nnwontodeɛ ahodoɔ nyinaa nnyegyeeɛ no, na mokoto fam, na mosɔre ohoni a mayɛ no a, na me ne mo nni asɛm biara. Na sɛ mopo a, wɔbɛto mo agu fononoo a ogya redɛre wɔ mu no mu prɛko pɛ. Sɛ ɛba saa a, nyame bɛn na ɔbɛtumi agye mo afiri me tumi ase?”
16 ೧೬ ಇದನ್ನು ಕೇಳಿ ಶದ್ರಕ್ ಮೇಶಕ್, ಅಬೇದ್ನೆಗೋ ಎಂಬುವವರು ರಾಜನಿಗೆ, “ನೆಬೂಕದ್ನೆಚ್ಚರನೇ, ಈ ವಿಷಯದಲ್ಲಿ ನಾವು ನಿನಗೆ ಏನೂ ಹೇಳಬೇಕಾಗಿಲ್ಲ.
Sadrak, Mesak ne Abednego buaa sɛ, “Ao, Nana Nebukadnessar, yɛnnye nni sɛ ɛho hia sɛ yɛyi yɛn ho ano wɔ wʼanim.
17 ೧೭ ‘ಅರಸನೇ, ನಾವು ಆರಾಧಿಸುವ ದೇವರಿಗೆ ಚಿತ್ತವಿದ್ದರೆ ಆತನು ಧಗಧಗನೆ ಉರಿಯುವ ಬೆಂಕಿಯೊಳಗಿಂದ ನಮ್ಮನ್ನು ಬಿಡಿಸಬಲ್ಲನು; ಹೇಗೂ ನಿನ್ನ ಕೈಯಿಂದ ನಮ್ಮನ್ನು ಬಿಡಿಸುವನು.
Sɛ wɔto yɛn gu fononoo a ogya redɛre wɔ mu no mu a, Onyankopɔn a yɛsom no no bɛgye yɛn. Nana, ɔbɛgye yɛn afiri wo tumi ase.
18 ೧೮ ಚಿತ್ತವಿಲ್ಲದಿದ್ದರೂ ರಾಜನೇ, ಇದು ನಿನಗೆ ತಿಳಿದಿರಲಿ, ನಾವು ನಿನ್ನ ದೇವರುಗಳನ್ನು ಆರಾಧಿಸುವುದಿಲ್ಲ, ನೀನು ನಿಲ್ಲಿಸಿದ ಬಂಗಾರದ ಪ್ರತಿಮೆಯನ್ನು ಪೂಜಿಸುವುದಿಲ್ಲ’” ಎಂದು ಉತ್ತರಕೊಟ್ಟರು.
Na sɛ ɛba sɛ wannye yɛn mpo a, Nana nte aseɛ sɛ, sɔre deɛ, yɛrensɔre wʼanyame anaa sikakɔkɔɔ ohoni a wode asi hɔ no da biara da.”
19 ೧೯ ಆಗ ನೆಬೂಕದ್ನೆಚ್ಚರನು ಕೋಪೋದ್ರೇಕದಿಂದ ಮುಖಭಾವವನ್ನು ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರ ಕಡೆಗೆ ತಿರುಗಿಸಿಕೊಂಡು ಬೆಂಕಿಯನ್ನು ನಿತ್ಯಕ್ಕಿಂತ ಏಳರಷ್ಟು ಹೆಚ್ಚಾಗಿ ಉರಿಸಬೇಕು ಎಂದು ಆಜ್ಞಾಪಿಸಿದನು.
Nebukadnessar bo fuu Sadrak, Mesak ne Abednego yie, na wampɛ wɔn anim ahwɛ. Ɔhyɛɛ sɛ, wɔmma fononoo no ogya no hyeɛ no nnɔ mmɔho nson.
20 ೨೦ ಇದಲ್ಲದೆ ತನ್ನ ಸೈನ್ಯದ ಕೆಲವು ಮಂದಿ ಶೂರರಿಗೆ ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರನ್ನು ಕಟ್ಟಿ ಧಗಧಗನೆ ಉರಿಯುವ ಬೆಂಕಿಯೊಳಗೆ ಎತ್ತಿಹಾಕಬೇಕೆಂದು ಅಪ್ಪಣೆಕೊಟ್ಟನು.
Afei, ɔhyɛɛ nʼakodɔm mu mmarima ahoɔdenfoɔ pa ara no bi sɛ, wɔnkyekyere Sadrak, Mesak ne Abednego, na wɔnto wɔn ngu fononoo no mu ogyadɛreɛ no mu.
21 ೨೧ ಅದರಂತೆ ಶಲ್ಯ, ಇಜಾರು, ಮುಂಡಾಸ ಮೊದಲಾದ ಉಡುಪನ್ನು ಧರಿಸಿಕೊಂಡಿದ್ದ ಹಾಗೆಯೇ ಅವರನ್ನು ಕಟ್ಟಿ ಧಗಧಗನೆ ಉರಿಯುವ ಬೆಂಕಿಯೊಳಗೆ ಹಾಕಿಬಿಟ್ಟರು.
Enti, wɔkyekyeree saa nkurɔfoɔ yi a wɔhyehyɛ wɔn ntwontwo, wɔn ntadeɛ, wɔn mmotire ne wɔn ntoma papee, too wɔn guu fononoo ogya a ɛrederɛ no mu.
22 ೨೨ ಹೀಗಾಗಿ ರಾಜಾಜ್ಞೆಯು ಖಂಡಿತವಾಗಿದ್ದುದರಿಂದಲೂ ಬೆಂಕಿಯ ಕಾವು ಅತಿ ತೀಕ್ಷ್ಣವಾಗಿದ್ದುದರಿಂದಲೂ ಅಗ್ನಿಜ್ವಾಲೆಯು ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರನ್ನು ಎತ್ತಿ ಹಾಕಿದವರನ್ನೇ ದಹಿಸಿಬಿಟ್ಟಿತು.
Na ɛsiane ɔhene no abufutrasoɔ ne ɔhyɛ a ama fononoo no adɔ hyeehyeehye aborosoɔ no enti, asraafoɔ a wɔde Sadrak, Mesak, ne Abednego regu fononoo no mu no wuwuu ogyaframa no ano.
23 ೨೩ ಶದ್ರಕ್, ಮೇಶಕ್, ಅಬೇದ್ನೆಗೋ ಈ ಮೂವರು ಕಟ್ಟಲ್ಪಟ್ಟವರಾಗಿ ಧಗಧಗನೆ ಉರಿಯುವ ಬೆಂಕಿಯ ಮಧ್ಯದಲ್ಲಿ ಬಿದ್ದುಬಿಟ್ಟರು.
Na Sadrak, Mesak ne Abednego a wɔakyekyere wɔn pampee no hwehwee ogya fononoo a ɛrederɛ no mu.
24 ೨೪ ಆಗ ರಾಜನಾದ ನೆಬೂಕದ್ನೆಚ್ಚರನು ಬೆಚ್ಚಿಬಿದ್ದು, ತಟ್ಟನೆ ಎದ್ದು ತನ್ನ ಮಂತ್ರಿಗಳಿಗೆ, “ಕಟ್ಟಿದ ಮೂವರನ್ನು ನಾವು ಬೆಂಕಿಯೊಳಗೆ ಹಾಕಿಸಲಿಲ್ಲವೋ?” ಎಂದು ಕೇಳಲು ಅವರು ರಾಜನಿಗೆ, “ಅರಸನೇ, ಹೌದು, ಹಾಕಿರುವುದು ಸತ್ಯ” ಎಂದು ಉತ್ತರಕೊಟ್ಟರು.
Nebukadnessar gu so rehwɛ no, prɛko pɛ, ɔhuri teaam ahodwirie so guu nʼafotufoɔ no so sɛ, “Ɛnnyɛ mmarima baasa na yɛkyekyeree wɔn too wɔn guu fononoo no mu?” Wɔbuaa sɛ, “Aane, Nana, yɛyɛɛ saa pɛpɛɛpɛ.”
25 ೨೫ ಅದಕ್ಕೆ ಅವನು, “ಇಗೋ, ಕಟ್ಟಿಲ್ಲದ ನಾಲ್ವರನ್ನು ನೋಡುತ್ತೇನೆ, ಬೆಂಕಿಯಲ್ಲಿ ತಿರುಗಾಡುತ್ತಿದ್ದಾರೆ, ಅವರಿಗೆ ಯಾವ ಹಾನಿಯೂ ಇಲ್ಲ; ನಾಲ್ಕನೆಯವನ ರೂಪವು ದೇವಕುಮಾರನ ರೂಪದಂತಿದೆ” ಎಂದು ಹೇಳಿದನು.
Nebukadnessar teaam sɛ. “Monhwɛ! Mehunu nnipa baanan a biribiara nkyekyeree wɔn sɛ wɔnenam ogya no mu. Egya dɛreɛ no nhyee wɔn. Onipa a ɔtɔ so ɛnan no te sɛ anyame ba bi!”
26 ೨೬ ಆಗ ನೆಬೂಕದ್ನೆಚ್ಚರನು ಧಗಧಗನೆ ಉರಿಯುವ ಬೆಂಕಿಯ ಬಾಯಿಯ ಬಳಿಗೆ ಹೋಗಿ, “ಪರಾತ್ಪರದೇವರ ಸೇವಕರಾದ ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರೇ ಬನ್ನಿ, ಹೊರಗೆ ಬನ್ನಿ ಎಂದು ಕೂಗಲು, ಶದ್ರಕ್ ಮೇಶಕ್ ಅಬೇದ್ನೆಗೋ ಎಂಬುವವರು ಬೆಂಕಿಯೊಳಗಿಂದ ಹೊರಟು ಬಂದರು.
Na Nebukadnessar twe bɛnee fononoo a ogya redɛre wɔ mu no ɛpono ano, sɛdeɛ ɔbɛtumi, teaam sɛ, “Sadrak, Mesak ne Abednego, ɔsorosoro Onyankopɔn asomfoɔ, momfiri mmra! Mommra ha!” Ɛno enti, Sadrak, Mesak ne Abednego firii ogya no mu baeɛ.
27 ೨೭ ಅಲ್ಲಿ ಕೂಡಿದ್ದ ಉಪರಾಜ, ನಾಯಕ, ದೇಶಾಧಿಪತಿ, ಮಂತ್ರಿಗಳು ಅವರನ್ನು ನೋಡಿ ಅವರ ಮೇಲೆ ಬೆಂಕಿಯ ಅಧಿಕಾರವು ನಡೆದಿಲ್ಲ, ಅವರ ತಲೆಕೂದಲೂ ಸುಟ್ಟಿಲ್ಲ, ಅವರ ಶಲ್ಯಗಳಿಗೆ ವಿಕಾರವಿಲ್ಲ, ಬೆಂಕಿಯ ವಾಸನೆಯೇ ಮುಟ್ಟಿಲ್ಲ” ಎಂದು ತಿಳಿದುಕೊಂಡರು.
Afei, ahenemma, mpanimfoɔ, amradofoɔ ne afotufoɔ bɛtwaa wɔn ho hyiaeɛ, na wɔhunuu sɛ, ogya no anka wɔn. Wɔn tirinwi mpo ho anka. Na wɔn ntadeɛ anhye. Na wisie mpo mmɔn wɔn ho.
28 ೨೮ ಆಗ ನೆಬೂಕದ್ನೆಚ್ಚರನು, “ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರ ದೇವರಿಗೆ ಸ್ತೋತ್ರವಾಗಲಿ! ಆತನು ತನ್ನ ದೂತನನ್ನು ಕಳುಹಿಸಿ ತನ್ನಲ್ಲಿ ಭರವಸವಿಟ್ಟು ರಾಜಾಜ್ಞೆಯನ್ನು ಜಯಿಸಿ ತನ್ನನ್ನೇ ಹೊರತು ಇನ್ನಾವ ದೇವರನ್ನೂ ಸೇವಿಸಿ ಪೂಜಿಸಬಾರದೆಂದು ಸ್ವದೇಹಗಳನ್ನು ಮರಣಕ್ಕೆ ಒಪ್ಪಿಸಿದ ತನ್ನ ಸೇವಕರನ್ನು ಉದ್ಧರಿಸಿದ್ದಾನಲ್ಲವೇ.
Afei, Nebukadnessar kaa sɛ, “Ayɛyie nka Sadrak, Mesak ne Abednego Onyankopɔn. Ɔsomaa ne ɔbɔfoɔ, ma wɔbɛgyee nʼasomfoɔ a wɔgye no die. Wɔbuu me ɔhene mmara so, na wɔde wɔn honam maeɛ, sɛdeɛ ɛbɛyɛ a wɔrensom na wɔrensɔre anyame biara gye wɔn Onyankopɔn.
29 ೨೯ ಸಕಲ ಜನಾಂಗ, ಕುಲ, ಭಾಷೆಗಳವರಲ್ಲಿ ಯಾರಾದರೂ ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರ ದೇವರ ವಿಷಯದಲ್ಲಿ ಅಲ್ಲ ಸಲ್ಲದ ಮಾತುಗಳನ್ನಾಡಿದರೆ ಅವರನ್ನು ತುಂಡುತುಂಡಾಗಿ ಕತ್ತರಿಸಿ, ಅವರ ಮನೆಗಳನ್ನು ತಿಪ್ಪೆಯನ್ನಾಗಿ ಮಾಡಬೇಕೆಂಬ ಆಜ್ಞೆಯನ್ನು ವಿಧಿಸುತ್ತೇನೆ; ಹೀಗೆ ಉದ್ಧರಿಸಲು ಸಮರ್ಥನಾದ ಇನ್ಯಾವ ದೇವರೂ ಇಲ್ಲವಲ್ಲಾ” ಎಂದು ಹೇಳಿದನು.
Ne saa enti, merehyɛ saa mmara yi sɛ ɔman, nkurɔfoɔ ne kasa ahodoɔ nyinaa mu, obiara a ɔbɛka Sadrak, Mesak ne Abednego Onyankopɔn ho abususɛm no, ampa ara wɔbɛtwitwa wɔn mu asinasini na wɔadwiri wɔn afie ama adane wira. Onyame biara nni hɔ a ɔbɛtumi agye nkwa sɛɛ yi.”
30 ೩೦ ಬಳಿಕ ರಾಜನು ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರನ್ನು ಬಾಬೆಲ್ ಸಂಸ್ಥಾನದಲ್ಲಿ ಉನ್ನತ ಪದವಿ ನೀಡಿ ಗೌರವಿಸಿದನು.
Afei, Ɔhene Nebukadnessar maa Sadrak, Mesak ne Abednego dibea a ɛkorɔn yie wɔ Babiloniaman mu.

< ದಾನಿಯೇಲನು 3 >