< ಆಮೋಸನು 9 >
1 ೧ ಕರ್ತನು ಯಜ್ಞವೇದಿಯ ಪಕ್ಕದಲ್ಲಿ ನಿಂತಿರುವುದನ್ನು ಕಂಡೆನು. ಆತನು ಹೀಗೆ ಅಪ್ಪಣೆ ಕೊಟ್ಟನು, “ಹೊಸ್ತಿಲುಗಳು ಕದಲುವಂತೆ ಕಂಬಗಳ ಬೋದಿಗೆಗಳನ್ನು ಬಲವಾಗಿ ಹೊಡೆ. ಅವುಗಳನ್ನು ಒಡೆದುಬಿಟ್ಟು ಎಲ್ಲರ ತಲೆಯ ಮೇಲೆ ಬೀಳುವ ಹಾಗೆ ಮಾಡಿ, ಉಳಿದವರನ್ನು ಖಡ್ಗದಿಂದ ಸಂಹರಿಸುವೆನು. ಅವರಲ್ಲಿ ಯಾರೂ ಓಡಿಹೋಗರು, ಯಾರೂ ತಪ್ಪಿಸಿಕೊಳ್ಳರು.
Utuu Gooftaan iddoo aarsaa bira dhaabatuu nan arge; innis akkana jedhe: “Akka buusaawwan balbalaa raafamaniif fiixee utubaa dhaʼi. Mataa nama hundaa irratti gad isaan harcaasi; warra hafe immoo anatu goraadeedhaan fixa. Tokkoon isaanii iyyuu baqatanii hin baʼan; isaan keessaa namni tokko iyyuu hin miliqu.
2 ೨ ಪಾತಾಳದವರೆಗೆ ತೋಡಿಕೊಂಡು ಹೋದರೂ, ನನ್ನ ಕೈ ಅವರನ್ನು ಅಲ್ಲಿಂದ ಹಿಡಿದೆಳೆಯುವುದು, ಸ್ವರ್ಗದ ತನಕ ಹತ್ತಿದರೂ ಅಲ್ಲಿಂದಲೂ ಅವರನ್ನು ಇಳಿಸುವೆನು. (Sheol )
Yoo isaan boolla qilee qotatan iyyuu harki koo achii isaan fuudha. Yoo isaan samiitti ol baʼan iyyuu ani achii gad isaan nan buusa. (Sheol )
3 ೩ ಕರ್ಮೆಲ್ ಬೆಟ್ಟದ ತುದಿಯಲ್ಲಿ ಅಡಗಿಕೊಂಡರೂ, ನಾನು ಅವರನ್ನು ಹುಡುಕಿ ಅಲ್ಲಿಂದಲೂ ಹಿಡಿದು ತರುವೆನು. ನನ್ನ ಕಣ್ಣಿಗೆ ಮರೆಯಾಗಿ ಸಮುದ್ರದತಳದಲ್ಲಿ ಅಡಗಿಕೊಂಡರೂ, ಅಲ್ಲಿಯೂ ನನ್ನ ಅಪ್ಪಣೆಯ ಪ್ರಕಾರ ಘಟಸರ್ಪವು ಅವರನ್ನು ಕಚ್ಚುವುದು.
Yoo isaan fiixee Qarmeloos irra dhokatan iyyuu, ani achii adamsee qabee gad isaan nan fida. Yoo isaan galaana jala na dhokatan iyyuu, ani akka inni achitti isaan idduuf bofa itti nan ajaja.
4 ೪ ಅವರು ತಮ್ಮ ಶತ್ರುಗಳ ವಶವಾಗಿ ಸೆರೆಗೆ ಹೋದರೂ, ಖಡ್ಗವು ನನ್ನ ಆಜ್ಞಾನುಸಾರ ಅಲ್ಲಿಯೂ ಅವರನ್ನು ಹತಿಸುವುದು. ಮೇಲಿಗಲ್ಲ, ಕೇಡಿಗಾಗಿಯೇ ಅವರ ಮೇಲೆ ದೃಷ್ಟಿಯಿಡುವೆನು.”
Yoo diinonni isaanii boojiʼanii isaan fudhatan, achitti goraadee isaan fixxu itti nan ajaja. “Ani waan gaariidhaaf utuu hin taʼin waan hamaadhaaf ija koo isaan irra nan buusa.”
5 ೫ ಸೇನಾಧೀಶ್ವರನಾದ ಯೆಹೋವನು ಭೂಮಿಯನ್ನು ಮುಟ್ಟಿದ ಮಾತ್ರಕ್ಕೆ ಅದು ಕರಗಿ ಹೋಗುತ್ತದೆ; ಸಕಲ ನಿವಾಸಿಗಳು ಗೋಳಾಡುತ್ತಾರೆ; ನೆಲವೆಲ್ಲಾ ನೈಲ್ ನದಿಯಂತೆ ಉಬ್ಬಿ, ಐಗುಪ್ತದ ನದಿಯ ಹಾಗೆಯೇ ಇಳಿದು ಹೋಗುತ್ತದೆ.
Gooftaan, Waaqayyo Waan Hunda Dandaʼu lafa ni tuqa; isheenis ni baqxi; wanni ishee irra jiraatu hundinuu ni booʼa; biyyattiin guutuun akka laga Abbayyaa ol kaati; ergasiis akka laga Gibxi gad galti;
6 ೬ ಉನ್ನತಲೋಕದಲ್ಲಿ ಉಪ್ಪರಿಗೆಯನ್ನು ಅನೇಕ ಅಂತಸ್ತನ್ನಾಗಿ ಕಟ್ಟಿಕೊಂಡು, ಭೂಲೋಕದ ಮೇಲೆ ಗುಮ್ಮಟವನ್ನು ಸ್ಥಾಪಿಸಿಕೊಂಡಿದ್ದಾನೆ. ಸಮುದ್ರದ ನೀರನ್ನು ಸೇದಿ, ಭೂಮಂಡಲದ ಮೇಲೆ ಹೊಯ್ಯುತ್ತಾನೆ, ಯೆಹೋವನೆಂಬುವುದೇ ಆತನ ನಾಮಧೇಯ.
inni darbii isaa ol dheeraa samii irratti ijaarratee hundee isaa lafa irra dhaabbatu, inni bishaanota galaanaa waamee fuula lafaa irratti gad roobsu sun maqaan isaa Waaqayyo.
7 ೭ ಯೆಹೋವನು ಇಂತೆನ್ನುತ್ತಾನೆ, “ಇಸ್ರಾಯೇಲರೇ, ನೀವು ನನ್ನ ಗಣನೆಯಲ್ಲಿ ಕೂಷ್ಯರ ಹಾಗಿದ್ದೀರಲ್ಲವೇ? ನಾನು ಇಸ್ರಾಯೇಲರನ್ನು ಐಗುಪ್ತ ದೇಶದಿಂದ ಫಿಲಿಷ್ಟಿಯರನ್ನು ಕಫ್ತೋರಿನಿಂದ ಅರಾಮ್ಯರನ್ನು ಕೀರಿನಿಂದ ಏಕರೀತಿಯಾಗಿ ಬರಮಾಡಲಿಲ್ಲವೇ?
“Isin Israaʼeloonni anaaf akkuma saba Itoophiyaa mitii?” jedha Waaqayyo. “Ani Israaʼeloota biyya Gibxiitii, Filisxeemota Kaftoorii, warra Sooriyaa immoo Qiirii baasee hin fidnee?
8 ೮ ಇಗೋ, ಕರ್ತನಾದ ಯೆಹೋವನು ಪಾಪವುಳ್ಳ ರಾಜ್ಯದ ಮೇಲೆ ದೃಷ್ಟಿಯಿಟ್ಟಿದ್ದಾನೆ, ಮತ್ತು ಅದನ್ನು ಭೂಮಂಡಲದೊಳಗಿಂದ ನಾಶಮಾಡುವನು, ಆದರೆ ಯಾಕೋಬಿನ ಮನೆತನವನ್ನು ಸಂಪೂರ್ಣವಾಗಿ ನಾಶಮಾಡನು” ಇದು ಯೆಹೋವನ ನುಡಿ.
“Dhugumaan iji Waaqayyo Gooftaa mootummaa cubbamaa irra jira. Ani fuula lafaa irraa isa nan balleessa; taʼus ani guutumaan guutuutti mana Yaaqoob hin balleessu” jedha Waaqayyo.
9 ೯ “ಇಗೋ, ಧಾನ್ಯವನ್ನು ಜರಡಿಯಲ್ಲಿ ಜಾಲಿಸುವ ಪ್ರಕಾರ, ಇಸ್ರಾಯೇಲರನ್ನು ಸಕಲ ಜನಾಂಗಗಳಲ್ಲಿ ಹಾಕಿ ಜಾಲಿಸಬೇಕು” ಆದರೂ ಒಂದು ಕಾಳಾದರೂ ನೆಲಕ್ಕೆ ಬೀಳುವುದಿಲ್ಲ, ಎಂದು ಅಪ್ಪಣೆ ಕೊಡುವೆನು.
“Ani ajaja kennee akkuma midhaan gingilchaadhaan gingilfamee iji tokko iyyuu lafa hin buune sana saboota hunda gidduutti mana Israaʼel nan gingilcha.
10 ೧೦ ನಮ್ಮನ್ನು ಆಪತ್ತು ಹಿಂದಟದು; ನಮ್ಮನ್ನು ತಡೆಯುವುದಿಲ್ಲ, ಎನ್ನುವ ನನ್ನ ಜನರಲ್ಲಿರುವ ಸಮಸ್ತ ಪಾಪಿಗಳೆಲ್ಲರು ಖಡ್ಗದಿಂದ ಹತರಾಗುವರು.
Cubbamoonni saba koo gidduu jiraatan hundi Warri, ‘Balaan nu hin argatu yookaan nutti hin dhufu’ jedhan hundi goraadeedhaan dhumu.
11 ೧೧ “ಆ ದಿನದಲ್ಲಿ ನಾನು ದಾವೀದನ ಬಿದ್ದುಹೋಗಿರುವ ಗುಡಾರವನ್ನು ಎತ್ತಿ, ಅದರ ಬಿರುಕುಗಳನ್ನು ಮುಚ್ಚುವೆನು, ಹಾಳಾದದ್ದನ್ನು ಎಬ್ಬಿಸಿ, ಹಿಂದಿನ ದಿನಗಳಲ್ಲಿ ಮಾಡಿದ ಹಾಗೆ ಕಟ್ಟುವೆನು.
“Ani bara sana keessa dunkaana Daawit “Kan kufe sana deebisee nan dhaaba. Kan tarsaʼes walitti nan supha; diigamaa isaa iddootti deebisee akka duraatti nan ijaara;
12 ೧೨ ನನ್ನ ಜನರು ಎದೋಮಿನ ಉಳಿದ ಭಾಗವನ್ನು, ಯೆಹೋವನ ಪ್ರಜೆ ಎನ್ನಿಸಿಕೊಂಡಿದ್ದ ಸಕಲ ಜನಾಂಗಗಳನ್ನೂ ಸ್ವಾಧೀನಮಾಡಿಕೊಳ್ಳುವ ಹಾಗೆ ಹಾಳಾದದ್ದನ್ನು ನಿಲ್ಲಿಸಿ ಮೊದಲಿದ್ದಂತೆ ಅದನ್ನು ತಿರುಗಿ ಕಟ್ಟಿಸುವೆನು” ಎಂಬುದಾಗಿ ಯೆಹೋವನು ನುಡಿದಿದ್ದಾನೆ.
kunis akka isaan hambaa Edoomii fi saboota maqaa kootiin waamaman hunda dhaalaniif” jedha Waaqayyo, inni waan kana hojjetu.
13 ೧೩ ಯೆಹೋವನು ಇಂತೆನ್ನುತ್ತಾನೆ, “ಇಗೋ, ದಿನಗಳು ಬರುವವು, ಆ ಕಾಲದಲ್ಲಿ ಉಳುವವನು ಕೊಯ್ಯುವವನನ್ನೂ, ದ್ರಾಕ್ಷಿಯನ್ನು ತುಳಿಯುವವನು ಬಿತ್ತುವವನನ್ನೂ ಹಿಂದಟ್ಟುವರು. ಆಗ ಬೆಟ್ಟಗಳು ಹೊಸ ಸಿಹಿ ದ್ರಾಕ್ಷಾರಸವನ್ನು ಸುರಿಸುವವು, ಎಲ್ಲಾ ಗುಡ್ಡಗಳು ಕರಗುವವು.
Waaqayyo akkana jedha; “Kunoo, barri itti namni haamu tokko isa qotu qaqqabu, “namni wayinii dhaabu immoo isa cuunfu qaqqabu tokko ni dhufa; Daadhiin wayinii haaraan tulluuwwan irraa ni coccopha; gaarran hunda keessaas ni yaaʼa.
14 ೧೪ ನಾನು ನನ್ನ ಜನರಾದ ಇಸ್ರಾಯೇಲರ ದುರಾವಸ್ಥೆಯನ್ನು ತಪ್ಪಿಸುವೆನು. ಅವರು ಹಾಳು ಬಿದ್ದ ಪಟ್ಟಣಗಳನ್ನು ಪುನಃ ಕಟ್ಟಿ ಅವುಗಳಲ್ಲಿ ವಾಸಿಸುವರು ಮತ್ತು ದ್ರಾಕ್ಷಿಯ ತೋಟಗಳನ್ನು ಮಾಡಿಕೊಂಡು ಅವುಗಳ ದ್ರಾಕ್ಷಾರಸವನ್ನು ಕುಡಿಯುವರು, ತೋಟಗಳನ್ನು ಮಾಡಿಕೊಂಡು ಅವುಗಳ ಫಲಗಳನ್ನು ತಿನ್ನುವರು.
Ani saba koo Israaʼelin boojuudhaa nan deebisa. “Isaanis magaalaawwan diigaman deebisanii ijaaranii keessa ni jiraatu. Isaan wayinii dhaabanii, daadhii wayinii isaanii ni dhugu; isaan biqiltuu dhaabbatanii ija isaa ni nyaatu.
15 ೧೫ ನಾನು ಅವರನ್ನು ಸ್ವದೇಶದಲ್ಲಿ ನೆಲೆಗೊಳಿಸುವೆನು, ಅವರಿಗೆ ನಾನು ದಯಪಾಲಿಸಿದ ಸೀಮೆಯೊಳಗಿಂದ ಇನ್ನು ಮುಂದೆ ಯಾರೂ ಅವರನ್ನು ಕಿತ್ತುಹಾಕುವುದಿಲ್ಲ” ಇದು ನಿನ್ನ ದೇವರಾದ ಯೆಹೋವನ ನುಡಿ.
Ani Israaʼeloota biyya ofii isaanii keessa nan dhaaba; isaan biyya ani isaaniif kenne keessaa lammata hin buqqifaman,” jedha Waaqayyo Waaqni kee.