< ಆಮೋಸನು 6 >
1 ೧ ಅಯ್ಯೋ! ಚೀಯೋನಿನಲ್ಲಿ ನೆಮ್ಮದಿಯಾಗಿರುವವರ ಗತಿಯನ್ನು ಏನೆಂದು ಹೇಳಲಿ, ಪ್ರಮುಖ ಜನಾಂಗದಲ್ಲಿ ಹೆಸರುಗೊಂಡು ಇಸ್ರಾಯೇಲರ ನ್ಯಾಯವಿಚಾರಕರಾಗಿ, ಸಮಾರ್ಯದ ಬೆಟ್ಟದಲ್ಲಿ ನಿಶ್ಚಿಂತರಾಗಿರುವವರ, ಗತಿಯನ್ನು ಏನೆಂದು ಹೇಳಲಿ!
၁ဇိအုန်မြို့၌ ငြိမ်ဝပ်စွာနေသောသူ၊ ရှမာရိတောင်ပေါ်မှာ စိုးရိမ်ခြင်းနှင့် ကင်းလွတ်လျက်နေသောသူ၊ လူမျိုးတို့တွင် အထွဋ်အမြတ်ဟူ၍ ခေါ်ဝေါ်သောသူ၊ ဣသရေလအမျိုး ဆည်းကပ်သောသူတို့သည် အမင်္ဂလာရှိ ကြ၏။
2 ೨ ನಿಮ್ಮ ಪ್ರಮುಖರು, “ಕಲ್ನೆಗೆ ಹೋಗಿ ನೋಡಲಿ; ಅಲ್ಲಿಂದ ಮಹಾ ಪಟ್ಟಣವಾದ ಹಮಾತಿಗೆ ತೆರಳಿರಿ; ಆ ಮೇಲೆ ಫಿಲಿಷ್ಟಿಯರ ಗತ್ ಊರಿಗೆ ಇಳಿಯಿರಿ. ಅವು ಈ ರಾಜ್ಯಗಳಿಗಿಂತ ಶ್ರೇಷ್ಠವೋ? ಅವುಗಳ ಪ್ರಾಂತ್ಯವು ನಿಮ್ಮ ಪ್ರಾಂತ್ಯಗಳಿಗಿಂತ ದೊಡ್ಡದೋ?”
၂ကာလနေမြို့သို့သွား၍ ကြည့်ရှုကြလော့။ ထိုမြို့မှဟာမတ်ကြီးမြို့သို့၎င်း၊ ဖိလိတ္တိလူတို့နေသော ဂါသမြို့ သို့၎င်း သွားကြလော့။ ထိုနိုင်ငံတို့သည် ဤနိုင်ငံတို့ထက်သာ၍ ကောင်းသလော။ သူတို့နယ်အပိုင်းအခြားသည် သင်တို့နယ်အပိုင်းအခြားထက်သာ၍ ကျယ်သလော။
3 ೩ ಆಹಾ! ಆ ಪ್ರಮುಖರು ಆಪತ್ತಿನ ದಿನದ ಯೋಚನೆಯನ್ನು ದೂರಕ್ಕೆ ತಳ್ಳುತ್ತಾರೆ ಮತ್ತು ಅನ್ಯಾಯದ ಪೀಠಗಳನ್ನು ಹತ್ತಿರಕ್ಕೆ ತಂದುಕೊಳ್ಳುತ್ತಾರೆ.
၃ဆိုးယုတ်သော နေ့ရက်ကို ရွှေ့၍၊ မတရားသဖြင့် စီရင်ရာပလ္လင်ကို အနီးမှာတည်စေခြင်း၊
4 ೪ ದಂತದ ಮಂಚಗಳ ಮೇಲೆ ಮಲಗುತ್ತಾರೆ ಮತ್ತು ತಮ್ಮ ಗದ್ದುಗೆಗಳಲ್ಲಿ ಹಾಯಾಗಿ ಒರಗಿಕೊಳ್ಳುತ್ತಾರೆ. ಹಿಂಡಿನ ಕುರಿಮರಿಗಳನ್ನು, ಕೊಟ್ಟಿಗೆಯ ಕರುಗಳನ್ನು ತಿನ್ನುತ್ತಾರೆ.
၄ဆင်စွယ်ခုတင်ပေါ်မှာ အိပ်၍ မွေ့ရာပေါ်မှာလျောင်းခြင်း၊ သိုးစုထဲက သိုးသငယ်တို့ကို၎င်း၊ နွားတင်း ကုပ်ထဲက နွားသငယ်တို့ကို၎င်း ယူ၍စားခြင်း၊
5 ೫ ವೀಣೆಯ ಮೇಲೆ ಮನಸ್ಸು ಬಂದಂತೆ ಹಾಡುತ್ತಾರೆ; ದಾವೀದನ ಹಾಗೆ ಗಾನವಾದ್ಯಗಳನ್ನು ಕಲ್ಪಿಸಿಕೊಳ್ಳುತ್ತಾರೆ.
၅တယောထိုးသံနှင့်ပြိုင်လျက် သီချင်းဆိုခြင်း၊ တီးမှုတ်ရာတုရိယာမျိုးအသစ်ကို ဒါဝိဒ်မင်းရှာ၍ လုပ်သကဲ့သို့ လုပ်ခြင်း၊
6 ೬ ದ್ರಾಕ್ಷಾರಸವನ್ನು ಬೋಗುಣಿಯಲ್ಲಿ ಕುಡಿಯುತ್ತಾರೆ ಮತ್ತು ಉತ್ತಮ ಅಭಿಷೇಕ ತೈಲಗಳನ್ನು ಹಚ್ಚಿಕೊಳ್ಳುತ್ತಾರೆ, ಆದರೆ ಯೋಸೇಫನ ನಷ್ಟಕ್ಕೆ ವ್ಯಸನಪಡುವುದಿಲ್ಲ.
၆စပျစ်ရည်ကို ဖလားနှင့်သောက်၍၊ အဘိုးထိုက်သော နံ့သာဆီနှင့် လိမ်းခြင်းတို့ကိုပြု၍၊ ယောသပ်အမျိုး ဆင်းရဲခံရသည်ကို စိတ်မကြင်နာဘဲနေသော၊
7 ೭ ಆದುದರಿಂದ ಸೆರೆಗೆ ಒಯ್ಯುವವರ ಮುಂದುಗಡೆಯೇ, ಅವರು ಸೆರೆಗೆ ಹೋಗುವರು, ಮತ್ತು ಭೋಗಮಾಡುವವರ ಹರ್ಷಧ್ವನಿಯು ನಿಂತುಹೋಗುವುದು.
၇ထိုသူတို့သည် အဦးဆုံးသိမ်းသွားခြင်းကို ခံရသောသူတို့နှင့်အတူ ပါသွားကြလိမ့်မည်။ လျောင်း၍ နေသောသူတို့၏ ပွဲသည်လည်း ကွယ်ပျောက်ရလိမ့်မည်။
8 ೮ ಸೇನಾಧೀಶ್ವರ ದೇವರಾದ ಯೆಹೋವನ ನುಡಿಯನ್ನು ಕೇಳಿರಿ ಕರ್ತನಾದ ಯೆಹೋವನು ತನ್ನ ಮೇಲೆ ಆಣೆಯಿಟ್ಟು ಹೀಗೆಂದಿದ್ದಾನೆ, “ನಾನು ಯಾಕೋಬಿನ ಅಟ್ಟಹಾಸಕ್ಕೆ ಅಸಹ್ಯಪಟ್ಟು; ಅದರ ಕೋಟೆಗಳನ್ನು ಹಗೆಮಾಡುತ್ತೇನೆ. ಆದುದರಿಂದ ನಾನು ರಾಜಧಾನಿಯನ್ನೂ, ಅದರ ಸಕಲ ಸಮೃದ್ಧಿಯನ್ನೂ ಆಪತ್ತಿಗೆ ಗುರಿಮಾಡುವೆನು”
၈ကောင်းကင်ဗိုလ်ခြေအရှင် ဘုရားသခင်ထာဝရ ဘုရား မိန့်တော်မူသည်ကား၊ အရှင်ထာဝရဘုရားသည် ကိုယ်ကိုတိုင်တည်၍ ကျိန်ဆိုတော်မူသည်အတိုင်း၊ ယာကုပ်၏မာနကို ငါရွံရှာ၍ သူ၏ဘုံဗိမာန်တို့ကိုမုန်း သောကြောင့်၊ မြို့တော်နှင့် မြို့၌ရှိသမျှကို ငါစွန့်ပစ်မည်။
9 ೯ ಒಂದು ಮನೆಯಲ್ಲಿ ಹತ್ತು ಜನ ಉಳಿದರೂ ಅವರೆಲ್ಲರೂ ಸಾಯುವರು.
၉အိမ်တဆောင်တွင် လူတကျိပ်ကျန်ကြွင်းသော်လည်း သေကြလိမ့်မည်။
10 ೧೦ ಶವವನ್ನು ಸುಡಲು ಬಂದ ಸಂಬಂಧಿಕರು, ಹೆಣವನ್ನು ಮನೆಯೊಳಗಿಂದ ತೆಗೆದುಕೊಂಡು ಹೋದಾಗ, “ನಿಮ್ಮ ಹತ್ತಿರ ಇನ್ನೂ ಯಾರಾದರೂ ಇದ್ದಾರೋ?” ಎಂದು ಮನೆಯಲ್ಲಿರುವವರನ್ನು ಕೇಳುವಾಗ ಅವನು, “ಇಲ್ಲ” ಎನ್ನುವನು. ಆಗ ಸಂಬಂಧಿಕನು, “ಸುಮ್ಮನಿರು, ನಾವು ಯೆಹೋವನ ಹೆಸರನ್ನು ನೆನಪುಮಾಡಿಕೊಳ್ಳಬಾರದು.”
၁၀ပေါက်ဘော်တော်၍ မီးဖြင့် သင်္ဂြိုဟ်ရသော သူသည် အိမ်ထဲကအသေကောင်ကိုထုတ်၍ ချီသွား သောအခါ၊ အိမ်အတွင်းတွင်ရှိသော သူကိုခေါ်၍၊ သင်၌ တစုံတယောက်ကျန်ကြွင်းသေးသလောဟု မေးသော်၊ မကျန်ကြွင်းဟု ပြန်ပြောလိမ့်မည်။ ထမ်းသွားသောသူကလည်း၊ တိတ်ဆိတ်စွာနေလော့။ ထာဝရဘုရား၏ နာမတော်ကို ချီးမွမ်းရသော အခွင့်မရှိဟု ပြောဆိုလိမ့် မည်။
11 ೧೧ ಇಗೋ, ನೋಡಿರಿ, ಯೆಹೋವನು ಆಜ್ಞಾಪಿಸಲು, ದೊಡ್ಡ ಮನೆಯು ಕೆಡವಲ್ಪಟ್ಟು ಚೂರುಚೂರಾಯಿತು, ಚಿಕ್ಕ ಮನೆಯೂ ಮುರಿದುಹೋಗುವುದು.
၁၁အကြောင်းမူကား၊ ထာဝရဘုရားအမိန့်တော် ရှိသဖြင့်၊ အိမ်ကြီးကိုဖြို၍ အိမ်ငယ်ကိုလည်း ကွဲစေတော် မူလိမ့်မည်။
12 ೧೨ ಕುದುರೆಗಳು ಬಂಡೆಯ ಮೇಲೆ ಓಡಾಡುವುವೋ? ಅದನ್ನು ಎತ್ತುಗಳಿಂದ ಉಳುವರೋ? ಆದರೆ ನೀವು ನ್ಯಾಯವನ್ನು ವಿಷವನ್ನಾಗಿ ಮಾಡಿ, ಧರ್ಮದ ಸುಫಲವನ್ನು ಕಹಿಯಾಗಿಸಿದಿರಿ.
၁၂မြင်းသည် ကျောက်ပေါ်မှာ ပြေးတတ်သလော။ လူသည် ကျောက်ပေါ်မှာ နွားနှင့် ထွန်တတ်သလော။ သင်တို့သည် တရားသဖြင့် စီရင်ခြင်းကို ခါးစွာသော သစ်ရွက်ဖြစ်စေခြင်းငှါ၎င်း၊ ဖြောင့်မတ်ခြင်းကို ဒေါနရွက် ဖြစ်စေခြင်းငှါ၎င်း ပြုကြသည်တကား။
13 ೧೩ ನೀವು ಲೋ ದೆಬಾರ್ ಪಟ್ಟಣದಲ್ಲಿ ಉಲ್ಲಾಸಪಡುವವರೇ, ಸ್ವಬಲದಿಂದ ಕರ್ನಾಯಿಮ್ ಪಟ್ಟಣವನ್ನು ಪಡೆದುಕೊಂಡಿಲ್ಲವೇ ಎಂದುಕೊಳ್ಳುವವರೇ.
၁၃အချည်းနှီးသောအရာ၌ ဝါကြွားဝမ်းမြောက်၍၊ ငါတို့သည် ကိုယ်အစွမ်းသတ္တိအားဖြင့် အာဏာကို သိမ်းယူပြီမဟုတ်လောဟု ဆိုတတ်ကြသည်တကား။
14 ೧೪ ಸೇನಾಧೀಶ್ವರ ದೇವರಾದ ಯೆಹೋವನು ಇಂತೆನ್ನುತ್ತಾನೆ, “ಇಸ್ರಾಯೇಲರ ವಂಶದವರೇ, ಇಗೋ, ನಾನು ನಿಮಗೆ ವಿರುದ್ಧವಾಗಿ ಒಂದು ಜನಾಂಗವನ್ನು ಎಬ್ಬಿಸುವೆನು; ಅವರು ಹಮಾತಿನ ದಾರಿಯಿಂದ ಅರಾಬಾ ತಗ್ಗಿನ ಹೊಳೆಯ ತನಕ, ನಿಮ್ಮನ್ನು ಹಿಂಸಿಸುವರು.”
၁၄အကယ်စင်စစ်၊ အိုဣသရေလအမျိုး၊ သင်တို့ တဘက်၌ လူတမျိုးကို ငါထစေ၊ ထိုလူမျိုးသည် ဟာမတ် မြို့လမ်းဝမှစ၍ တော၌ရှိသော မြစ်တိုင်အောင် သင်တို့ကို ညှဉ်းဆဲလိမ့်မည်ဟု၊ ကောင်းကင်ဗိုလ်ခြေအရှင် ဘုရားသခင်ထာဝရဘုရား မိန့်တော်မူ၏။