< ಆಮೋಸನು 4 >
1 ೧ ಸಮಾರ್ಯ ಬೆಟ್ಟದಲ್ಲಿನ, ಬಾಷಾನಿನ ಕೊಬ್ಬಿದ ಹಸುಗಳಂತಿರುವ ಸ್ತ್ರೀಯರೇ, ಬಡವರನ್ನು ಹಿಂಸಿಸಿ, ದಿಕ್ಕಿಲ್ಲದವರನ್ನು ಜಜ್ಜಿ, ನೀವು ನಿಮ್ಮ ಪತಿಗಳಿಗೆ, “ಪಾನಗಳನ್ನು ತರಿಸಿ, ಕುಡಿಯೋಣ” ಎಂದು ಹೇಳುವವರೇ, ಈ ಮಾತನ್ನು ಕೇಳಿರಿ.
E HOOLOHE oukou i keia olelo, e na bipi wahine o Basana, Na mea ma na mauna o Samaria, Na mea e hookaumaha ana i ka poe ilihune, Na mea e hooluhi ana i ka poe nele, Na mea e olelo ana i ko lakou mau haku, E lawe mai, a e inu kakou.
2 ೨ ಕರ್ತನಾದ ಯೆಹೋವನು ತನ್ನ ಪರಿಶುದ್ಧತ್ವದ ಮೇಲೆ ಆಣೆಯಿಟ್ಟು: “ಇಗೋ ನಿಮ್ಮನ್ನು ಕೊಂಡಿಗಳಿಂದಲೂ, ನಿಮ್ಮಲ್ಲಿ ಉಳಿದವರನ್ನು ಮೀನುಗಾಳಗಳಿಂದಲೂ, ಎಳೆದುಕೊಂಡು ಹೋಗುವ ದಿನಗಳು ನಿಮಗೆ ಬರುತ್ತವೆ ಎಂದು ಪ್ರಮಾಣ ಮಾಡಿದ್ದಾನೆ.
Ua hoohiki o Iehova ka Haku, ma kona hemolele, Aia hoi, e hiki mai ana na la maluna o oukou, E lawe aku ai oia ia oukou me na kilou, A i ka poe mahope o oukou i na makau lawaia.
3 ೩ ಗೋಡೆಯಲ್ಲಿಯ ಬಿರುಕುಗಳ ಮೂಲಕ, ಪ್ರತಿಯೊಬ್ಬ ಸ್ತ್ರೀಯೂ ನೇರವಾಗಿ ತನ್ನ ಮುಂದೆಯೇ ಹೊರಟು ಹೋಗುವಳು, ಹರ್ಮೋನಿನ ದಿಕ್ಕಿನ ಕಡೆಗೆ ತಳ್ಳಲ್ಪಡುವಿರಿ” ಇದು ಯೆಹೋವನ ನುಡಿ.
A e puka aku oukou, ma ua wahi hiolo, o kela mea keia mea ma kona alo, A e hooleiia'ku iwaho o ka pakaua, wahi a Iehova.
4 ೪ “ಬೇತೇಲಿಗೆ ಹೋಗಿ ದ್ರೋಹ ಮಾಡಿರಿ, ಗಿಲ್ಗಾಲಿನಲ್ಲಿ ಸೇರಿ ದ್ರೋಹವನ್ನು ಇನ್ನೂ ಹೆಚ್ಚಿಸಿರಿ. ಪ್ರತಿದಿನ ಬೆಳಿಗ್ಗೆ ನಿಮ್ಮ ಬಲಿಗಳನ್ನು ಅರ್ಪಿಸಿರಿ, ಮೂರು ದಿನಕ್ಕೆ ಒಂದು ಸಲ ದಶಮಾಂಶವನ್ನು ಸಲ್ಲಿಸಿರಿ.
E hele mai oukou i Betela, a e hana hewa; E hoonui i ka hana hewa ma Gilegala; A lawe mai oukou i ka oukou mau mohai no ke kakahiaka, A i na hapaumi o oukou no ke kolu o na makahiki:
5 ೫ ಹುಳಿಹಿಟ್ಟನ್ನು ಕೃತಜ್ಞತಾರ್ಪಣವಾಗಿ ಹೋಮ ಮಾಡಿರಿ; ಕೊಟ್ಟ ಕಾಣಿಕೆಯನ್ನು ಪ್ರಕಟಿಸಿರಿ; ಸಾರಿಹೇಳಿರಿ, ಇಸ್ರಾಯೇಲರೇ ಹೀಗೆ ಮಾಡುವುದು ನಿಮಗೆ ಇಷ್ಟ” ಇದು ಕರ್ತನಾದ ಯೆಹೋವನ ನುಡಿ.
A e puhi i ka berena hu i mohai aloha, A e hoike aku i na mohai aloha i lohe: No ka mea, o ka oukou makemake no ia, e na mamo a Iseraela, wahi a Iehova ka Haku.
6 ೬ “ನಿಮ್ಮ ಪಟ್ಟಣಗಳಲ್ಲಿ ನಿಮ್ಮ ಹಲ್ಲಿಗೆ ಏನೂ ಸಿಕ್ಕದಂತೆಯೂ ಮತ್ತು ನಿಮ್ಮ ಸಕಲ ನಿವಾಸಗಳಲ್ಲಿ ಅನ್ನದ ಕೊರತೆಯಾಗುವ ಹಾಗೆಯೂ ಮಾಡಿದೆನು. ಆದರೂ ನೀವು ನನ್ನ ಕಡೆಗೆ ಹಿಂದಿರುಗಲಿಲ್ಲ” ಇದು ಯೆಹೋವನ ನುಡಿ.
A ua haawi aku hoi au ia oukou i ka maemae o na niho ma ko oukou mau kulanakauhale a pau, A i ka nele i ka berena ma ko oukou mau wahi a pau: Aka, aole oukou i hoi hou mai ia'u, wahi a Iehova.
7 ೭ “ಸುಗ್ಗಿಗೆ ಮೂರು ತಿಂಗಳು ಕಳೆಯಬೇಕಾದಾಗಲೂ, ನಿಮಗೆ ಮಳೆಯನ್ನು ತಡೆದೆನು. ಒಂದು ಪಟ್ಟಣದ ಮೇಲೆ ಮಳೆಯಾಗುವಂತೆಯೂ, ಇನ್ನೊಂದು ಪಟ್ಟಣದ ಮೇಲೆ ಮಳೆಯಾಗದಂತೆಯೂ ಮಾಡಿದೆನು. ಒಂದು ಭಾಗದ ಹೊಲದಲ್ಲಿ ಮಳೆಯಾಯಿತು. ಮಳೆಯಾಗದ ಹೊಲದ ಭಾಗವು ಬಾಡಿಹೋಯಿತು.
A paa ia'u ka ua, mai o oukou aku, i ka manawa ekolu malama i koe a hiki i ka ohi ana: A hooua iho au maluna o kekahi kulanakauhale, A hooua ole au maluna o kekahi kulanakauhale: Ua hoouaia kau wahi, A o kahi i hooua ole ia, ua maloo.
8 ೮ ಎರಡು ಅಥವಾ ಮೂರು ಪಟ್ಟಣದವರು ನೀರು ಕುಡಿಯುವುದಕ್ಕೆ ಮತ್ತೊಂದು ಪಟ್ಟಣಕ್ಕೆ ಬಳಲುತ್ತಾ ಹೋಗುತ್ತಿದ್ದರು, ಬಾಯಾರಿಕೆ ತೀರಲಿಲ್ಲ. ಆದರೂ ನೀವು ನನ್ನ ಕಡೆಗೆ ಹಿಂದಿರುಗಲಿಲ್ಲ.” ಇದು ಯೆಹೋವನ ನುಡಿ.
A hele aku elua ekolu paha na kulanakauhale i kekahi kulanakauhale e inu i ka wai, aole nae i kena: Aka, aole oukou i hoi hou mai ia'u, wahi a Iehova.
9 ೯ “ನಿಮ್ಮನ್ನು ಬೂದಿಯಿಂದಲೂ, ಬಿಸಿಗಾಳಿಯಿಂದಲೂ ಬಾಧಿಸಿದೆನು. ನಿಮ್ಮ ಲೆಕ್ಕವಿಲ್ಲದ ವನ, ದ್ರಾಕ್ಷಿತೋಟಗಳನ್ನು, ಅಂಜೂರದ ಗಿಡಗಳನ್ನು, ನಿಮ್ಮ ಎಣ್ಣೆಯ ಮರಗಳನ್ನು ಮಿಡತೆಯು ತಿಂದುಬಿಟ್ಟಿತು. ಆದರೂ ನೀವು ನನ್ನ ಕಡೆಗೆ ಹಿಂದಿರುಗಲಿಲ್ಲ” ಇದು ಯೆಹೋವನು ನುಡಿ.
Ua hahau aku au ia oukou i ka hua ai maalili, a me ka punahelu: He nui ko oukou kihapai, ko oukou mau pawaina, a me ko oukou mau laau fiku, a me ko oukou mau laau oliva, ua aiia hoi e ka uhini opiopio hulu ole; Aka, aole oukou i hoi hou mai ia'u, wahi a Iehova.
10 ೧೦ “ಐಗುಪ್ತದ ವ್ಯಾಧಿಗಳಂತಹ ವ್ಯಾಧಿಯನ್ನು ನಿಮ್ಮ ಮೇಲೆ ಕಳುಹಿಸಿದೆನು. ನಿಮ್ಮ ಯುವಕರನ್ನು ಖಡ್ಗದಿಂದ ಹತಿಸಿದೆನು, ನಿಮ್ಮ ಕುದರೆಗಳನ್ನು ಸೂರೆಮಾಡಿಸಿದೆನು, ನಿಮ್ಮ ದಂಡುಗಳ ದುರ್ವಾಸನೆ ನಿಮ್ಮ ಮೂಗಿಗೆ ಬಡಿಯುವಂತೆ ಮಾಡಿದೆನು. ಆದರೂ ನೀವು ನನ್ನ ಕಡೆಗೆ ಹಿಂದಿರುಗಲಿಲ್ಲ” ಇದು ಯೆಹೋವನ ನುಡಿ.
A ua hoouna aku au iwaena o oukou i ke ahulau, e like me ia ma Aigupita; Ua luku aku au i ko oukou poe kanaka opio i ka pahikaua, Me ko oukou poe lio i pioia; A ua hoopii ae au i ka pilau o ko oukou hoomoana ana, a hiki i ko oukou mau ihu; Aka, aole oukou i hoi hou mai ia'u, wahi a Iehova.
11 ೧೧ “ಸೊದೋಮ್ ಮತ್ತು ಗೊಮೋರಗಳನ್ನು ಕೆಡವಿದಂತೆ, ನಾನು ನಿಮ್ಮ ಪಟ್ಟಣಗಳನ್ನು ಕೆಡವಿಬಿಟ್ಟಿದ್ದೇನೆ. ಬೆಂಕಿ ಉರಿಯಿಂದ ಎಳೆದ ಕೊಳ್ಳೆಯ ಹಾಗೆ ಇದ್ದೀರಿ. ಆದರೂ ನೀವು ನನ್ನ ಕಡೆಗೆ ಹಿಂದಿರುಗಲಿಲ್ಲ” ಇದು ಯೆಹೋವನು ನುಡಿ.
Ua luku aku au iwaena o oukou, E like me ka luku ana o ke Akua ia Sodoma a me Gomora; Ua like hoi oukou me ka momokuahi i kailiia mai loko mai o ke ahi: Aka, aole oukou i hoi hou mai ia'u, wahi a Iehova.
12 ೧೨ “ಆದಕಾರಣ ಇಸ್ರಾಯೇಲೇ, ನಾನು ನಿನಗೆ ಮಾಡುತ್ತೇನೆ; ನಾನು ಮಾಡಬೇಕೆಂದಿರುವುದರಿಂದ, ಇಸ್ರಾಯೇಲೇ, ನಿನ್ನ ದೇವರ ಬರುವಿಕೆಗೆ ನಿನ್ನನ್ನು ಸಿದ್ಧಮಾಡಿಕೋ!
No ia mea, pela au e hana aku ai ia oe, e ka Iseraela: A no ka'u hana ana aku i keia ia oe, E hoomakaukau oe e halawai me kou Akua, e ka Iseraela.
13 ೧೩ ಇಗೋ, ಪರ್ವತಗಳನ್ನು ರೂಪಿಸಿ, ಗಾಳಿಯನ್ನು ನಿರ್ಮಿಸಿ, ತನ್ನ ಸಂಕಲ್ಪವನ್ನು ಮನುಷ್ಯರಿಗೆ ವ್ಯಕ್ತಗೊಳಿಸಿ, ಉದಯವನ್ನು ಅಂಧಕಾರವನ್ನಾಗಿ ಮಾಡಿ ಮತ್ತು ಭೂಮಿಯ ಉನ್ನತ ಪ್ರದೇಶಗಳನ್ನು ತುಳಿದುಬಿಡುವಾತನು” ಸೇನಾಧೀಶ್ವರ ದೇವರಾದ ಯೆಹೋವನೆಂಬುದೇ ನನ್ನ ನಾಮಧೇಯ.
No ka mea, aia hoi, o ka mea nana i hana na mauna, A o ka mea i hana i ka makani, A hai aku i ke kanaka i kona manao, A o ka mea i hoolilo i ka wanaao i pouli, O ka mea e hehi ana maluna o na wahi kiekie o ka honua, O Iehova, ke Akua o na kaua, kona inoa.