< ಆಮೋಸನು 3 >
1 ೧ ಇಸ್ರಾಯೇಲರೇ ಯೆಹೋವನು ನಿಮಗೆ ವಿರುದ್ಧವಾಗಿ, ತಾನು ಐಗುಪ್ತ ದೇಶದೊಳಗಿಂದ ಪಾರು ಮಾಡಿದ ಪೂರ್ಣಕುಲಕ್ಕೆ ವಿರುದ್ಧವಾಗಿ ನುಡಿದಿರುವ ಈ ಮಾತನ್ನು ಕೇಳಿರಿ,
Слушайте това слово, което Госопд изговори против вас, Израиляни, - против целия род, рече Господ, който възведох от Египетската земя, като казах:
2 ೨ ಭೂಮಿಯ ಸಕಲ ಕುಲಗಳೊಳಗೆ ನಿಮ್ಮನ್ನು ಮಾತ್ರ ನನ್ನವರೆಂದು ಆರಿಸಿಕೊಂಡಿದ್ದೇನೆ. ಆದಕಾರಣ ನಿಮ್ಮ ಎಲ್ಲಾ ಪಾಪಗಳ ಫಲವನ್ನು ನೀವು ಅನುಭವಿಸುವಂತೆ ಮಾಡುವೆನು.
Само вас познах Измежду всичките родове на света; Затова, ще ви накажа за всичките ви беззакония.
3 ೩ ಗೊತ್ತುಮಾಡಿಕೊಳ್ಳದೆ ಯಾರಾದರಿಬ್ಬರು ಜೊತೆಯಾಗಿ ನಡೆಯುವುದುಂಟೆ?
Ще ходят ли двама заедно Освен по съгласие?
4 ೪ ಬೇಟೆಯ ಬಲಿ ಕಾಣದೇ ಸಿಂಹವು ಅರಣ್ಯದಲ್ಲಿ ಗರ್ಜಿಸುವುದೋ? ಏನನ್ನೂ ಬೇಟೆಯಾಡದೆ ಪ್ರಾಯದ ಸಿಂಹವು ಗವಿಯಲ್ಲಿ ಕುಳಿತು ಗುರುಗುಟ್ಟುವುದೋ?
Ще изреве ли лъвът в леса Ако няма лов? Ще издаде ли гласа си младият лъв от леговището си, Ако не е хванал нещо?
5 ೫ ಕಾಳಿಲ್ಲದೆ ಪಕ್ಷಿಯು ನೆಲದಲ್ಲಿನ ಬಲೆಯೊಳಗೆ ಬೀಳುವುದೋ? ಏನೂ ಬಲೆಗೆ ಸಿಕ್ಕಿಕೊಳ್ಳದೇ ಬೋನು ಉರುಲಾಗುವುದೋ?
Може ли птица да попадне в клопка на земята, Дето няма примка за нея? Скача ли примка от земята Без да е хванала нещо?
6 ೬ ಪಟ್ಟಣದಲ್ಲಿ ಕೊಂಬನ್ನು ಊದಿದರೆ ಜನರು ಹೆದರುವುದಿಲ್ಲವೋ? ಯೆಹೋವನಿಂದಲ್ಲದೆ ಪಟ್ಟಣಕ್ಕೆ ವಿಪತ್ತು ಸಂಭವಿಸುವುದೋ?
Може ли да засвири тръба в град И людете да не се уплашат? Може ли бедствие да сполети град И да не го е направил Господ?
7 ೭ ನಿಶ್ಚಯವಾಗಿ ತನ್ನ ಸೇವಕರಾದ ಪ್ರವಾದಿಗಳಿಗೆ ತನ್ನ ಯೋಜನೆಯನ್ನು ತಿಳಿಸದೆ ಯೆಹೋವನಾದ ದೇವರು ಏನನ್ನೂ ಮಾಡುವುದಿಲ್ಲ.
Наистина Господ Иеова няма да направи нищо Без да открие своето намерение на слугите си пророците.
8 ೮ ಸಿಂಹವು ಗರ್ಜಿಸಿದರೆ, ಭಯಪಡದೆ ಇರುವವರು ಯಾರು? ಕರ್ತನಾದ ಯೆಹೋವನು ನುಡಿದಿದ್ದಾನೆ, ಆ ನುಡಿಯನ್ನು ಕೇಳಿ ಪ್ರವಾದಿಸದವರು ಯಾರು?
Лъвът изрева; кой не ще се уплаши? Господ Иеова изговори; кой не ще пророкува?
9 ೯ ಅಷ್ದೋದಿನ ಅರಮನೆಗಳಲ್ಲಿಯೂ, ಐಗುಪ್ತ ದೇಶದ ಅರಮನೆಗಳಲ್ಲಿಯೂ ಹೀಗೆ ಪ್ರಕಟಿಸಿರಿ, “ಸಮಾರ್ಯದ ಬೆಟ್ಟಗಳಲ್ಲಿ ಕೂಡಿಬನ್ನಿರಿ. ಪಟ್ಟಣದೊಳಗೆ ಇರುವ ಗದ್ದಲವನ್ನು, ಅದರೊಳಗಿರುವ ಹಿಂಸೆಯನ್ನೂ ನೋಡಿರಿ.
Прогласете в палатите на Азот И в палатите на Египтската земя, И речете - Съберете се по планините на Самария Та вижте големите метежи всред нея, И какви насилия има вътре в нея.
10 ೧೦ ನ್ಯಾಯನೀತಿಗಳನ್ನು ಮಾಡುವುದಕ್ಕೆ ಅವರಿಗೆ ತಿಳಿದಿಲ್ಲ” ಇದು ಯೆಹೋವನ ನುಡಿ. ತಮ್ಮ ಉಪ್ಪರಿಗೆಗಳಲ್ಲಿ ಬಾಧೆಯನ್ನೂ, ನಾಶನವನ್ನೂ ಕೂಡಿಸಿಟ್ಟುಕೊಂಡಿದ್ದಾರೆ.
Защото, казва Господ, Ония, които натрупват в палатите си плода на насилие и грабеж, Не знаят да вършат правото.
11 ೧೧ ಹೀಗಿರಲು, ಕರ್ತನಾದ ಯೆಹೋವನು ಇಂತೆನ್ನುತ್ತಾನೆ: “ಶತ್ರುವು ನಿನ್ನ ದೇಶವನ್ನು ಮುತ್ತಿಕೊಳ್ಳುವನು. ನಿನ್ನ ಶಕ್ತಿಯನ್ನು ಕುಂದಿಸಿಬಿಡುವನು ಮತ್ತು ನಿನ್ನ ಅರಮನೆಗಳು ಸೂರೆಯಾಗುವವು.”
За това, така казва Господ Иеова; Неприятел ще окръжава земята ти, И ще смъкне от тебе силата ти, И палатите ти ще бъдат разграбени.
12 ೧೨ ಯೆಹೋವನು ಇಂತೆನ್ನುತ್ತಾನೆ: “ಸಿಂಹದ ಬಾಯೊಳಗಿಂದ ಕುರುಬನು ತನ್ನ ಕುರಿಗಳ ಎರಡು ಕಾಲನ್ನೂ, ಅಥವಾ ಕಿವಿಯ ಒಂದು ತುಂಡನ್ನೂ, ಹೇಗೆ ರಕ್ಷಿಸುವನೋ, ಹಾಗೆಯೇ ಸಮಾರ್ಯದೊಳಗೆ ಹಾಸಿಗೆಯ ಮೂಲೆಯಲ್ಲಿಯೂ, ಮಂಚದ ಪಟ್ಟೇದಿಂಬುಗಳಲ್ಲಿಯೂ, ಒರಗಿಕೊಳ್ಳುವ ಇಸ್ರಾಯೇಲರ ಸ್ವಲ್ಪ ಭಾಗ ಮಾತ್ರ ರಕ್ಷಿಸಲ್ಪಡುವುದು.”
Така казва Господ: Както овчарят изтръгва из лъвовите уста Две голени, или част от ухо, Така ще изтръгнат Израиляните, Които в Самария седят в ъгъла на канапе И на копринени възглавници на постелка.
13 ೧೩ ಸೇನಾಧೀಶ್ವರ ದೇವನಾದ ಯೆಹೋವನು ಇಂತೆನ್ನುತ್ತಾನೆ; ಕೇಳಿರಿ, ಯಾಕೋಬ ವಂಶದವರಿಗೆ ವಿರುದ್ಧವಾಗಿ ಸಾಕ್ಷಿಕೊಡಿರಿ.
Слушайте, и предупредете Якововия дом, Казва Господ Иеова, Бог на Силите,
14 ೧೪ “ನಾನು ಇಸ್ರಾಯೇಲಿನ ದ್ರೋಹಗಳಿಗಾಗಿ ಅವರನ್ನು ಶಿಕ್ಷಿಸುವ ದಿನಗಳಲ್ಲಿ, ಬೇತೇಲಿನ ಯಜ್ಞವೇದಿಗಳನ್ನು ಧ್ವಂಸಮಾಡುವೆನು. ಯಜ್ಞವೇದಿಯ ಕೊಂಬುಗಳು ಕಡಿಯಲ್ಪಟ್ಟು ನೆಲದ ಮೇಲೆ ಉರುಳುವವು.
Че в деня, когато нанеса наказание върху Израиля за престъплението му, Ще накажа и жертвениците на Ветил, И роговете на жертвеника ще се отсекат и ще паднат наземи.
15 ೧೫ ನಾನು ಚಳಿಗಾಲದ ಅರಮನೆಯನ್ನೂ, ಬೇಸಿಗೆಯ ಅರಮನೆಯನ್ನೂ ಹೊಡೆದುಹಾಕುವೆನು. ದಂತಮಂದಿರಗಳು ಹಾಳಾಗುವವು ಮತ್ತು ದೊಡ್ಡಮನೆಗಳು ಕೊನೆಗಾಣುವವು” ಇದು ಯೆಹೋವನ ನುಡಿ.
Още ще поразя зимната къща зедно с лятната къща, Къщите от слонова кост ще се съсипят, И на големите къщи ще се тури край, казва Господ.