< ಅಪೊಸ್ತಲರ ಕೃತ್ಯಗಳ 22 >
1 ೧ “ಸಹೋದರರೇ, ತಂದೆಗಳೇ, ಈಗ ನಾನು ನೀಡುವ ಸಮರ್ಥನೆಯ ಮಾತನ್ನು ಕೇಳಿರಿ” ಎಂದು ಹೇಳಿದನು.
“Ndugu na baba zangu, sikilizeni utetezi wangu nitakaofanya kwenu sasa.”
2 ೨ ಅವನು ತಮ್ಮ ಸಂಗಡ ಇಬ್ರಿಯ ಭಾಷೆಯಲ್ಲಿ ಮಾತನಾಡುವುದನ್ನು ಕೇಳಿ ಅವರು ಮತ್ತಷ್ಟು ನಿಶ್ಯಬ್ದವಾದರು. ಆಗ ಅವನು ಹೇಳಿದ್ದೇನಂದರೆ;
Makutano walipo sikia Paulo akiongea nao kwa kiebrania, wakanyamaza. Akasema,
3 ೩ “ನಾನು ಯೆಹೂದ್ಯನು, ಕಿಲಿಕ್ಯದ ತಾರ್ಸದಲ್ಲಿ ಹುಟ್ಟಿದವನು, ಆದರೆ ಈ ಪಟ್ಟಣದಲ್ಲೇ ಬೆಳೆದವನು. ಗಮಲಿಯೇಲನ ಪಾದಸನ್ನಿಧಿಯಲ್ಲಿ, ನಮ್ಮ ಪೂರ್ವಿಕರ ಧರ್ಮಶಾಸ್ತ್ರದಲ್ಲಿ ಪೂರ್ಣ ಶಿಕ್ಷಣವನ್ನು ಪಡೆದವನು; ನೀವೆಲ್ಲರೂ ಈಹೊತ್ತು ದೇವರ ವಿಷಯದಲ್ಲಿ ಅಭಿಮಾನಿಗಳಾಗಿರುವಂತೆಯೇ, ನಾನೂ ಅಭಿಮಾನಿಯಾಗಿದ್ದೆನು.
“Mimi ni myahudi, nimezaliwa mji wa Tarso eneo la Kilikia, ila nilipata elimu katika mji huu, miguuni pa Gamalieli. Nilifundishwa kulingana na njia sahihi za sheria za baba zetu. Mimi ninabidii ya Mungu, kama ninyi nyote mlivyo leo.
4 ೪ ಈ ಮಾರ್ಗದವರನ್ನು ಹಿಂಸಿಸುವವನಾಗಿ ಗಂಡಸರಿಗೂ, ಹೆಂಗಸರಿಗೂ ಬೇಡಿಹಾಕಿಸುತ್ತಾ, ಅವರನ್ನು ಸೆರೆಮನೆಗಳಿಗೆ ಹಾಕಿಸುತ್ತಾ ಇದ್ದೆನು, ಕೊಲೆ ಮಾಡಲಿಕ್ಕೂ ಹಿಂಜರಿಯದೆ ಹಿಂಸಿಸುತ್ತಿದ್ದೆನು.
Niliwatesa kwa njia hii hadi kufa; nikawafunga wanaume na wanawake na kuwatupa gerezani.
5 ೫ ಈ ವಿಷಯದಲ್ಲಿ ಮಹಾಯಾಜಕನೂ, ಹಿರೀಸಭೆಯರೆಲ್ಲರೂ ಸಾಕ್ಷಿಗಳಾಗಿದ್ದಾರೆ; ಅವರಿಂದಲೇ ನಾನು ದಮಸ್ಕದಲ್ಲಿದ್ದ ಸಹೋದರರಿಗೆ ಪತ್ರಗಳನ್ನು ತೆಗೆದುಕೊಂಡು, ಅಲ್ಲಿಗೆ ಹೋದವರನ್ನೂ ಬೇಡಿಗಳಿಂದ ಬಂಧಿಸಿ ದಂಡನೆಗಾಗಿ ಯೆರೂಸಲೇಮಿಗೆ ತರಬೇಕೆಂದು ಹೊರಟವನು.
Hata kuhani mkuu na wazee wote wanaweza kutoa ushahidi kwamba nilipokea barua kutoka kwao kwa ajili ya ndugu walio Dameski, kwangu mimi kusafiri kwenda huko. Ilikuwa niwalete watu Yerusalemu wa njia ile ili wafungwe na kuadhibiwa.
6 ೬ “ನಾನು ಪ್ರಯಾಣಮಾಡುತ್ತಾ ದಮಸ್ಕದ ಹತ್ತಿರಕ್ಕೆ ಬಂದಾಗ ಸುಮಾರು ಮಧ್ಯಾಹ್ನದಲ್ಲಿ ಫಕ್ಕನೆ ಆಕಾಶದೊಳಗಿಂದ ಒಂದು ದೊಡ್ಡ ಬೆಳಕು ನನ್ನ ಸುತ್ತಲು ಹೊಳೆಯಿತು, ನಾನು ನೆಲಕ್ಕೆ ಬಿದ್ದೆನು.
Ilitokea kwamba pale nilipokua nikisafiri nakaribia Dameski, majira ya mchana ghafla nuru kuu ikatokea mbinguni ikaanza kuniangaza.
7 ೭ ಆಗ; ‘ಸೌಲನೇ, ಸೌಲನೇ, ನನ್ನನ್ನು ಏಕೆ ಹಿಂಸೆಪಡಿಸುತ್ತೀ’? ಎಂದು ನನಗೆ ಹೇಳಿದ ಒಂದು ಶಬ್ದವನ್ನು ಕೇಳಿದೆನು.
Nikaanguka chini na kusikia sauti ikiniambia, 'Sauli, Sauli kwanini unaniudhi?'
8 ೮ “‘ಅದಕ್ಕೆ ನಾನು; ಕರ್ತನೇ, ನೀನಾರು?’ ಎಂದು ಕೇಳಲು ಆತನು; ‘ನೀನು ಹಿಂಸೆಪಡಿಸುವ ನಜರೇತಿನ ಯೇಸುವೇ ನಾನು’ ಎಂದು ನನಗೆ ಹೇಳಿದನು.
Nikajibu, 'wewe ni nani, Bwana?' Akaniambia, 'Mini ni Yesu Mnazareti, ambaye wewe unaniudhi.'
9 ೯ ನನ್ನ ಜೊತೆಯಲ್ಲಿದ್ದವರು ಬೆಳಕನ್ನು ಕಂಡರೇ ಹೊರತು, ನನ್ನ ಸಂಗಡ ಮಾತನಾಡಿದಾತನ ಶಬ್ದವನ್ನು ಕೇಳಲಿಲ್ಲ.
Wale waliokuwa na mimi waliiona nuru, ila hawakusikia sauti ya yule alie ongea na mimi.
10 ೧೦ “ಆಗ ನಾನು; ‘ಕರ್ತನೇ, ನಾನೇನು ಮಾಡಬೇಕು’? ಎಂದು ಕೇಳಲು ಕರ್ತನು ನನಗೆ; ‘ನೀನೆದ್ದು ದಮಸ್ಕದೊಳಕ್ಕೆ ಹೋಗು, ಮಾಡುವುದಕ್ಕೆ ನಿನಗೆ ನೇಮಿಸಿರುವುದನ್ನೆಲ್ಲಾ ಅಲ್ಲಿ ತಿಳಿಸಲ್ಪಡುವುದು’ ಎಂದು ಹೇಳಿದನು.
Nikasema, 'Nifanye nini, Bwana?' Bwana akaniambia, 'Simama na uingie Dameski; huko utaambiwa kila kitu unachopaswa kufanya.'
11 ೧೧ ಆ ಬೆಳಕಿನ ಮಹಿಮೆಯಿಂದ ನನಗೆ ಕಣ್ಣುಕಾಣದೆ ಇದ್ದುದರಿಂದ ನನ್ನ ಜೊತೆಯಲ್ಲಿದ್ದವರು, ನನ್ನನ್ನು ಕೈಹಿಡಿದುಕೊಂಡು ದಮಸ್ಕದೊಳಕ್ಕೆ ಕರೆದುಕೊಂಡುಹೋದರು.
Sikuweza kuona kwa sababu ya muangaza wa nuru ile, ndipo nikaenda Dameski kwa kuongozwa na mikono ya wale waliokuwa na mimi.
12 ೧೨ “ಅಲ್ಲಿ ಧರ್ಮಶಾಸ್ತ್ರಕ್ಕೆ ಸರಿಯಾಗಿ ನಡೆಯುವ ದೈವಭಕ್ತನೂ, ಆ ಸ್ಥಳದ ಯೆಹೂದ್ಯರೆಲ್ಲರಿಂದ
Huko nikakutana na mtu aitwaye Anania, alikuwa mtu aliyeshika sheria na mwenye kuheshimika mbele ya Wayahudi wote walioishi huko.
13 ೧೩ ಒಳ್ಳೆಯವನೆಂದು ಹೆಸರು ಹೊಂದಿದವನೂ ಆಗಿದ್ದ ಅನನೀಯನೆಂಬವನು ನನ್ನ ಬಳಿಗೆ ಬಂದು, ನಿಂತು; ‘ಸಹೋದರನಾದ ಸೌಲನೇ, ನಿನ್ನ ದೃಷ್ಟಿಯನ್ನು ಹೊಂದಿಕೋ’ ಎಂದು ಹೇಳಿದನು. ಹೇಳಿದ ತಕ್ಷಣವೇ ನನಗೆ ಕಣ್ಣು ಕಾಣಿಸಿತು, ನಾನು ಅವನನ್ನು ನೋಡಿದೆನು.
Akaja kwangu, akasimama mbele yangu, na kusema, 'Ndugu yangu Sauli, upate kuona.'Kwa muda ule ule nikamuona.
14 ೧೪ “ಆಗ ಅವನು; ‘ನಮ್ಮ ಪೂರ್ವಿಕರ ದೇವರು, ತನ್ನ ಚಿತ್ತವನ್ನು ನೀನು ತಿಳಿದುಕೊಳ್ಳುವುದಕ್ಕೂ, ಆ ನೀತಿವಂತನನ್ನು ನೋಡುವುದಕ್ಕೂ, ಆತನ ಬಾಯಿಂದ ಬಂದ ಮಾತನ್ನು ಕೇಳುವುದಕ್ಕೂ ನಿನ್ನನ್ನು ನೇಮಿಸಿದ್ದಾನೆ.
Akasema, 'Mungu wa baba zetu amekuchagua wewe upate kujua mapenzi yake, kumuona yule mwenyehaki, na kusikia sauti itokayo kwenye kinywa chake.
15 ೧೫ ನೀನು ಕಂಡು, ಕೇಳಿದ ವಿಷಯದಲ್ಲಿ ಎಲ್ಲಾ ಮನುಷ್ಯರ ಮುಂದೆ ಆತನಿಗೆ ಸಾಕ್ಷಿಯಾಗಿರಬೇಕು.
Kwa sababu utakuwa shahidi kwake kwa watu wote juu ya uliyoyaona na kusikia.
16 ೧೬ ಈಗ ನೀನೇಕೆ ತಡಮಾಡುತ್ತೀ? ಎದ್ದು ಕರ್ತನ ಹೆಸರನ್ನು ಹೇಳಿಕೊಳ್ಳುವವನಾಗಿ, ದೀಕ್ಷಾಸ್ನಾನ ಮಾಡಿಸಿಕೊಂಡು ನಿನ್ನ ಪಾಪಗಳನ್ನು ತೊಳೆದುಕೋ’ ಅಂದನು.
Basi sasa kwa nini unasubiri? Amka, ubatizwe, ukaoshe dhambi zako, ukiliita jina lake.'
17 ೧೭ “ಅನಂತರದಲ್ಲಿ ನಾನು ಯೆರೂಸಲೇಮಿಗೆ ಹಿಂತಿರುಗಿ ಬಂದು ದೇವಾಲಯದೊಳಗೆ ಪ್ರಾರ್ಥನೆಮಾಡುತ್ತಿದ್ದಾಗ, ಧ್ಯಾನಪರವಶನಾಗಿ ಅವನನ್ನು ಕಂಡೆನು.
Baada ya kurejea Yerusalemu, na nilipokuwa nikisali ndani ya hekalu, ikatokea kwamba nikapewa maono.
18 ೧೮ ಆತನು; ‘ನೀನು ತ್ವರೆಪಟ್ಟು ಬೇಗನೆ ಯೆರೂಸಲೇಮಿನಿಂದ ಹೊರಟುಹೋಗು, ನನ್ನ ವಿಷಯದಲ್ಲಿ, ನೀನು ಹೇಳುವ ಸಾಕ್ಷಿಯನ್ನು ಅವರು ಅಂಗೀಕರಿಸುವುದಿಲ್ಲ’ ಅಂದನು.
Nikamuona akiniambia, 'Hima na utoke Yerusalemu haraka, kwa sababu hawatakubali ushuhuda wako kuhusu mimi.'
19 ೧೯ “ಅದಕ್ಕೆ ನಾನು; ‘ಕರ್ತನೇ, ಎಲ್ಲಾ ಸಭಾಮಂದಿರಗಳಲ್ಲಿ, ನಿನ್ನ ಮೇಲೆ ನಂಬಿಕೆಯಿಟ್ಟವರನ್ನು, ನಾನು ಸೆರೆಮನೆಯಲ್ಲಿ ಹಾಕಿಸುತ್ತಾ, ಹೊಡಿಸುತ್ತಾ ಇದ್ದೆನೆಂಬುದನ್ನು,
Nikasema, 'Bwana, wao wenyewe wanajua niliwafunga gerezani na kuwapiga wale waliokuamini katika kila sinagogi.
20 ೨೦ ಮತ್ತು ನಿನ್ನ ಸಾಕ್ಷಿಯಾದ ಸ್ತೆಫನನ ರಕ್ತವು ಚೆಲ್ಲಿಸಲ್ಪಟ್ಟಾಗ, ನಾನೂ ಹತ್ತಿರ ನಿಂತು ಅದನ್ನು ಸಮ್ಮತಿಸಿ, ಅವನನ್ನು ಕೊಂದವರ ವಸ್ತ್ರಗಳನ್ನು ಕಾಯುತ್ತಿದ್ದೆನಲ್ಲಾ’ ಎಂಬುದು ಅವರೇ ಬಲ್ಲವರಾಗಿದ್ದಾರೆ.
Na damu ya Stefano shahidi wako ilipomwagwa, Mimi pia nilikuwa nimesimama karibu na kukubali na nilikuwa nalinda nguo za wale waliomwua.'
21 ೨೧ ಆದರೆ ಆತನು; ‘ನೀನು ಹೋಗು, ನಾನು ನಿನ್ನನ್ನು ದೂರಕ್ಕೆ ಅನ್ಯಜನರ ಬಳಿಗೆ ಕಳುಹಿಸುತ್ತೇನೆಂದು’” ಹೇಳಿದನು.
Lakini aliniambia, 'Enenda, kwa sababu mimi nitakutuma uende mbali kwa watu wa mataifa.”'
22 ೨೨ ಅಲ್ಲಿಯವರೆಗೆ ಪೌಲನ ಮಾತುಗಳನ್ನು ಅವರು ಕೇಳಿಸಿಕೊಳ್ಳುತ್ತಿದ್ದರು. ಆನಂತರ; “ಇಂಥವನನ್ನು ಭೂಮಿಯಿಂದ ತೆಗೆದುಹಾಕಿಬಿಡು; ಇವನು ಬದುಕುವುದು ಯುಕ್ತವಲ್ಲವೆಂದು” ಕೂಗಿ ಹೇಳಿದರು.
Watu wakamruhusu aongee juu ya neno hili. Lakini baadaye walipaza sauti na kusema, “mwondoe mtu huyu katika nchi: kwa sababu sio sahihi aishi.”
23 ೨೩ ಅವರು ಕೂಗುತ್ತಾ, ತಮ್ಮ ವಸ್ತ್ರಗಳನ್ನು ಹರಿದುಕೊಳ್ಳುತ್ತಾ, ಧೂಳನ್ನು ತೂರುತ್ತಾ ಇರಲಾಗಿ,
Walipokuwa wakipaza sauti, na kutupa mavazi yao na kutupa mavumbi juu,
24 ೨೪ ಯಾವ ಕಾರಣದಿಂದ ಹೀಗೆ ಅವನಿಗೆ ವಿರುದ್ಧವಾಗಿ ಕೂಗಾಡುತ್ತಾರೆಂಬುದನ್ನು ಸಹಸ್ರಾಧಿಪತಿಯು ತಿಳಿದುಕೊಳ್ಳುವುದಕ್ಕಾಗಿ ಅವನನ್ನು ಕೋಟೆಯೊಳಗೆ ತಂದು, ಕೊರಡೆಗಳಿಂದ ಹೊಡೆದು ವಿಚಾರಿಸಬೇಕೆಂದು ಆಜ್ಞಾಪಿಸಿದನು.
jemedari mkuu akaamuru Paulo aletwe ngomeni. Akaamuru aulizwe huku anapigwa mijeledi, ili yeye mwenyewe ajue kwa nini walikuwa wanampigia kelele namna ile.
25 ೨೫ ಅವರು ಪೌಲನನ್ನು ಬಾರುಗಳಿಂದ ಕಟ್ಟುವಾಗ ಅವನು ತನ್ನ ಹತ್ತಿರ ನಿಂತಿದ್ದ ಶತಾಧಿಪತಿಯನ್ನು; “ರೋಮಾಪುರದ ಹಕ್ಕುದಾರನಾದ ಮನುಷ್ಯನನ್ನು ನ್ಯಾಯವಿಚಾರಣೆಮಾಡದೆ, ಕೊರಡೆಗಳಿಂದ ಹೊಡಿಸುವುದು ನಿಮಗೆ ನ್ಯಾಯವೋ?” ಎಂದು ಕೇಳಿದನು.
Hata walipokuwa wamemfunga kwa kamba, Paulo akamwambia yule akida aliye simama karibu naye, “Je! ni haki kwenu kumpiga mtu aliye Mrumi na bado hajahukumiwa?”
26 ೨೬ ಶತಾಧಿಪತಿಯು ಆ ಮಾತನ್ನು ಕೇಳಿ ಸಹಸ್ರಾಧಿಪತಿಯ ಬಳಿಗೆ ಹೋಗಿ; “ನೀನು ಏನು ಮಾಡಬೇಕೆಂದಿದ್ದೀ? ಈ ಮನುಷ್ಯನು ರೋಮಾಪುರದ ಹಕ್ಕುದಾರನು” ಎಂದು ಹೇಳಲು,
Yule akida aliposikia maneno haya, akaenda kwa jemedari mkuu na kumwambia, akisema, “Unataka kufanya nini? Kwa maana mtu huyu ni mrumi.”
27 ೨೭ ಸಹಸ್ರಾಧಿಪತಿಯು ಪೌಲನ ಹತ್ತಿರಕ್ಕೆ ಬಂದು; “ನೀನು ರೋಮಾಪುರದವರ ಹಕ್ಕುಳ್ಳವನೇನು? ನನಗೆ ಹೇಳು” ಎಂದು ಅವನನ್ನು ಕೇಳಿದನು. ಅವನು, “ಹೌದು” ಅಂದನು.
Jemedari mkuu akaja na kumwambia, “Niambie, je wewe ni raia wa Rumi?” Paulo akasema, “Ndiyo.”
28 ೨೮ ಅದಕ್ಕೆ ಸಹಸ್ರಾಧಿಪತಿಯು; “ನಾನು ಬಹಳ ಹಣಕೊಟ್ಟು ಆ ಹಕ್ಕನ್ನು ಕೊಂಡುಕೊಂಡೆನು” ಅನ್ನಲು ಪೌಲನು; “ನಾನಾದರೋ ಹಕ್ಕುದಾರನಾಗಿ ಹುಟ್ಟಿದವನು” ಅಂದನು.
Jemedari akamjibu, “Ni kupitia kiasi kikubwa cha pesa ndipo nilipata uraia.” Lakini Paulo akamwambia, “Mimi ni mrumi wa kuzaliwa.”
29 ೨೯ ಅವನನ್ನು ಹೊಡೆದು ವಿಚಾರಿಸುವುದಕ್ಕೆ ಬಂದವರು ಕೂಡಲೆ ಅವನನ್ನು ಬಿಟ್ಟುಬಿಟ್ಟರು. ಅದಲ್ಲದೆ ಅವನನ್ನು ರೋಮಾಪುರದ ಹಕ್ಕುದಾರನೆಂದು ಸಹಸ್ರಾಧಿಪತಿಗೆ ತಿಳಿದುಬಂದಾಗ ತಾನು ಅವನನ್ನು ಕಟ್ಟಿಸಿದ್ದರಿಂದ ಅವನಿಗೂ ಭಯಹಿಡಿಯಿತು.
Basi wale waliokuwa tayari kwenda kumuuliza wakaondoka na kumwacha wakati huo huo. Na jemedari naye akaogopa, alipojua kuwa Paulo ni Mrumi, na kwa sababu amemfunga.
30 ೩೦ ಪೌಲನ ವಿರುದ್ಧ ಯೆಹೂದ್ಯರು ಯಾವ ತಪ್ಪು ಹೊರಿಸುತ್ತಾರೆಂಬುವ ವಿಷಯದಲ್ಲಿ ನಿಜವಾದ ಸಂಗತಿಯನ್ನು, ತಿಳಿಯಬೇಕೆಂದು ಅಪೇಕ್ಷಿಸಿ ಸಹಸ್ರಾಧಿಪತಿಯು ಮರುದಿನ ಅವನ ಬೇಡಿಗಳನ್ನು ಬಿಚ್ಚಿ, ಮುಖ್ಯಯಾಜಕರೂ, ಹಿರೀಸಭೆಯವರೆಲ್ಲರೂ ಕೂಡಿಬರುವುದಕ್ಕೆ ಅಪ್ಪಣೆ ಕೊಟ್ಟು, ಪೌಲನನ್ನು ಕರೆದುಕೊಂಡು ಹೋಗಿ ಅವರ ಮುಂದೆ ನಿಲ್ಲಿಸಿದನು.
Siku iliyofuatayo, jemedari mkuu alitaka kujua ukweli kuhusu mashtaka ya Wayahudi dhidi ya Paulo. Hivyo akamfungua vifungo vyake akaamuru wakuu wa makuhani na baraza lote wakutane. Akamleta Paulo chini, na kumweka katikati yao.