< ಅಪೊಸ್ತಲರ ಕೃತ್ಯಗಳ 21 >
1 ೧ ನಾವು ಅವರನ್ನು ಬಿಟ್ಟು ಹಡಗನ್ನು ಹತ್ತಿದ ಮೇಲೆ ನೇರವಾಗಿ ಕೋಸ್ ದ್ವೀಪಕ್ಕೆ ಬಂದು ಸೇರಿದೆವು. ಮರುದಿನ ರೋದ ದ್ವೀಪಕ್ಕೆ ಹೋಗಿ ಅಲ್ಲಿಂದ ಪತರ ಪಟ್ಟಣಕ್ಕೆ ಬಂದೆವು.
Hatukahuhana kuvali ni twazuha, tuvahindi inzila iya kumuleñi wa Koso, mi halizwa nitwaya kumuleñi wa Rode, mi hatuzwa aho nitwaya kumuleñi wa Patara.
2 ೨ ಅಲ್ಲಿ ಫೊಯಿನೀಕೆಗೆ ಹೋಗುವ ಹಡಗನ್ನು ಕಂಡು, ಅದರಲ್ಲಿ ಪ್ರಯಾಣವನ್ನು ಮುಂದುವರೆಸಿದೆವು.
Linu hatuwana chikepe chibali kuya kwa Fenisia nitwechila kuchili ni kuzuha.
3 ೩ ಮುಂದೆ ಕುಪ್ರದ್ವೀಪವನ್ನು ಕಂಡು ಎಡಗಡೆಗೆ ಬಿಟ್ಟು ಸಿರಿಯದೇಶದ ಕಡೆಗೆ ಸಾಗಿ ತೂರ್ ಪಟ್ಟಣಕ್ಕೆ ಬಂದು ಇಳಿದೆವು. ಏಕೆಂದರೆ, ಅಲ್ಲಿ ಸರಕನ್ನು ಇಳಿಸಬೇಕಾಗಿತ್ತು.
Linu hatusika muchida cha Sipera, nitwavola kuvumonso, nitwazuha kuya kwa Siria, mi nitwakasikila kumuleñi wa Tire, mukuti njoko chikepe kuchivali kulukela kukalongwela zivya.
4 ೪ ಅಲ್ಲಿ ಶಿಷ್ಯರನ್ನು ಹುಡುಕಿ, ಕಂಡು ಏಳು ದಿನ ಉಳಿದುಕೊಂಡೆವು. ಅವರು ದೇವರಾತ್ಮನ ಪ್ರೇರಣೆಯಿಂದ ಪೌಲನಿಗೆ; ನೀನು ಯೆರೂಸಲೇಮಿಗೆ ಕಾಲಿಡಬೇಡವೆಂದು ಹೇಳಿದರು.
Hatuwana valutwana, nitwekala mazuva amana iyanza ni obele. Ava valutwana ni vati kwa Paulusi chenzila ya Luhuho Lunjolola kuti senzi akalyatiki itende lyakwe mwa Jerusalema.
5 ೫ ಆ ದಿನಗಳನ್ನು ಮುಗಿಸಿಕೊಂಡು ನಾವು ಹೊರಡುವಾಗ ಅವರೆಲ್ಲರೂ ತಮ್ಮ ಮಡದಿ ಮಕ್ಕಳು ಸಹಿತವಾಗಿ ಬಂದು ನಮ್ಮನ್ನು ಊರ ಹೊರಕ್ಕೆ ಬೀಳ್ಕೊಟ್ಟರು. ನಾವು ಸಮುದ್ರತೀರದಲ್ಲಿ ಮೊಣಕಾಲೂರಿಕೊಂಡು ಪ್ರಾರ್ಥನೆ ಮಾಡಿ,
Linu hatumana mazuba, nitwakatuka ni kuyenda mumusipili wetu. Vonse ni banakazi ni bana vabo, ni vatusindikeza mane ulu hatukazwa mumuleñi.
6 ೬ ಒಬ್ಬರಿಗೊಬ್ಬರು ವಂದನೆಮಾಡಿ ಹಡಗನ್ನು ಹತ್ತಿದೆವು; ಅವರು ಹಿಂತಿರುಗಿ ತಮ್ಮತಮ್ಮ ಮನೆಗಳಿಗೆ ಹೋದರು.
Linu nitwakuvama helizo kulapela ni kulilaeza navo. Nitwakechila muchikepe abo havavola kumunzi.
7 ೭ ನಾವು ತೂರ್ ಪಟ್ಟಣದಿಂದ ಹೊರಟು ಪ್ತೊಲೆಮಾಯಕ್ಕೆ ಸೇರಿ ಸಮುದ್ರಪ್ರಯಾಣವನ್ನು ಮುಗಿಸಿದೆವು. ಅಲ್ಲಿದ್ದ ಸಹೋದರರನ್ನು ವಂದಿಸಿ ಅವರ ಬಳಿಯಲ್ಲಿ ಒಂದು ದಿನ ಇದ್ದು,
Linu hatumana musipili wetu wa kwa Tire, chitwakasika kwa Ptolemaisi. Uko nitwakalumelisa vaakwakwetu ni kwikala nabo izuva lyonke.
8 ೮ ಮರುದಿನ ಹೊರಟು ಕೈಸರೈಯಕ್ಕೆ ಬಂದು, ಸುವಾರ್ತಿಕನಾದ ಫಿಲಿಪ್ಪನ ಮನೆಗೆ ಹೋಗಿ ಅವನ ಬಳಿಯಲ್ಲಿಯೇ ಇಳುಕೊಂಡೆವು. ಅವನು ಆ ಏಳು ಮಂದಿಯಲ್ಲಿ ಒಬ್ಬನಾಗಿದ್ದನು.
Izuba lichilila nitwayenda kwa Sesarea. Mi nitwakenjila munzuvo ya Filipi, yo kutaza iñusa ilotu lya Jesus, yabali zumwi wavantu vamana iyanza ni vuvele, imi nitwekala naye.
9 ೯ ಅವನಿಗೆ ಕನ್ಯೆಯರಾದ ನಾಲ್ಕುಮಂದಿ ಹೆಣ್ಣು ಮಕ್ಕಳಿದ್ದರು; ಅವರು ಪ್ರವಾದಿಸುವವರಾಗಿದ್ದರು.
Linu uzu mukwame avena vana vone vavakazana vaseni kwiziva kale vakwame vavali vatanikizi.
10 ೧೦ ನಾವು ಅಲ್ಲಿ ಅನೇಕ ದಿನಗಳು ಇದ್ದ ನಂತರ, ಅಗಬನೆಂಬ ಒಬ್ಬ ಪ್ರವಾದಿಯು ಯೂದಾಯದಿಂದ ನಮ್ಮ ಬಳಿಗೆ ಬಂದು, ಪೌಲನ ನಡುಕಟ್ಟನ್ನು ತೆಗೆದು,
Sina hatuvena hateni mazuva alikene, chikwakeza mutanikizi yavali kuzwa kwa Judea yavali kusumpwa Agabusi.
11 ೧೧ ತನ್ನ ಕೈಕಾಲುಗಳನ್ನು ಕಟ್ಟಿಕೊಂಡು; “ಈ ನಡುಕಟ್ಟು ಯಾವನದೋ ಅವನನ್ನು ‘ಯೆಹೂದ್ಯರು ಇದೇ ರೀತಿಯಾಗಿ ಯೆರೂಸಲೇಮಿನಲ್ಲಿ ಕಟ್ಟಿ ಅನ್ಯಜನರ ಕೈಗೆ ಒಪ್ಪಿಸಿ ಕೊಡುವರು, ಎಂದು ಪವಿತ್ರಾತ್ಮನು ಹೇಳುತ್ತಾನೆಂಬುದಾಗಿ’” ಹೇಳಿದನು.
Nakeza kwetu mi nahinda lutunga lwa Paulusi. Chalisumina mayanza ni matende akwe, “Vovulyo muluwambila Luhoho Lujolola, “mi vovulyo mweti nivamusuminine vantu vamwa Jerusalem solunu lutunga, mi muva mutamvike mumayaza avantu vamasi angi.”'
12 ೧೨ ಆ ಮಾತನ್ನು ಕೇಳಿದಾಗ ನಾವು, ಆ ಸ್ಥಳದವರೂ; ನೀನು ಯೆರೂಸಲೇಮಿಗೆ ಹೋಗಲೇಬಾರದೆಂದು ಪೌಲನನ್ನು ಬೇಡಿಕೊಂಡೆವು.
Linu hatuzuwa izi zintu, tuvonse ni vantu vavakuhala mwe cho chivaka nitwa kumbila Paulusi kuti sanziayendi kwa Jerusalema.
13 ೧೩ ಅದಕ್ಕೆ ಪೌಲನು; “ನೀವು ದುಃಖಿಸುತ್ತಾ ಏಕೆ ನನ್ನ ಎದೆಯೊಡೆಯುವಂತೆ ಮಾಡುತ್ತೀರಿ? ನಾನು ಕರ್ತನಾದ ಯೇಸುವಿನ ಹೆಸರಿನ ನಿಮಿತ್ತವಾಗಿ ಯೆರೂಸಲೇಮಿನಲ್ಲಿ ಬೇಡೀಹಾಕಿಸಿಕೊಳ್ಳುವುದಕ್ಕೆ ಮಾತ್ರವಲ್ಲ ಸಾಯುವುದಕ್ಕೂ ಸಿದ್ಧವಾಗಿದ್ದೇನೆ” ಅಂದನು.
Imi Paulusi cheteva, “Mukwete mutenda nzi, kulila ni kuni nicisa kunkulo? Mukuti nilitukiseze, isiñi kusuminwa bulyo, kono ni kufwila izina lya Simwine Jesu mwa Jerusalema.”
14 ೧೪ ಅವನು ಒಪ್ಪದೆ ಇದ್ದುದರಿಂದ; “ಕರ್ತನ ಚಿತ್ತದಂತೆ ಆಗಲಿ” ಎಂದು ಹೇಳಿ ನಾವು ಸುಮ್ಮನಾದೆವು.
Sina Paulusi kanaavalikusaka kukukuwezwa, nitwasiya mi nitwati, “Kutendwe chisakwa ni Simwine.”
15 ೧೫ ಆ ದಿನಗಳಾದ ಮೇಲೆ ನಾವು ಚೇತರಿಸಿಕೊಂಡು ಯೆರೂಸಲೇಮಿಗೆ ಹೊರಟೆವು.
Aa mazuva hamana, nitwahinda zivya zetu ni kuya kwa Jerusalema.
16 ೧೬ ಕೈಸರೈಯದಿಂದ ಕೆಲವು ಶಿಷ್ಯರು ನಮ್ಮ ಜೊತೆಯಲ್ಲಿ ಬಂದು ನಾವು ಇಳುಕೊಳ್ಳಬೇಕಾಗಿದ್ದವನ ಮನೆಯ ತನಕ ನಮ್ಮನ್ನು ಕರೆದುಕೊಂಡು ಹೋದರು. ಆ ಮನೆಯವನು ಪ್ರಥಮ ಶಿಷ್ಯರಲ್ಲಿ ಒಬ್ಬನಾದ ಕುಪ್ರದೇಶದ ಮ್ನಾಸೋನನೆಂಬವನು.
Linuhe vamwi valutwana vavali kuzwa kwa Sesara nivayenda naswe. Nivaleta ni mukwame yosumpwa Mnason, mukweme uzwa kwa Sipera, mi nivakeza ni mukwame, mulutwana wamatangilo utuola kwikala naye.
17 ೧೭ ನಾವು ಯೆರೂಸಲೇಮಿಗೆ ಬಂದಾಗ ಸಹೋದರರು ನಮ್ಮನ್ನು ಸಂತೋಷದಿಂದ ಬರಮಾಡಿಕೊಂಡರು.
Ha chitusika mwa Jerusama, vaakwakwe ni vatutamvula chakusanga.
18 ೧೮ ಮರುದಿನ ಪೌಲನು ನಮ್ಮನ್ನು ಕರೆದುಕೊಂಡು ಯಾಕೋಬನ ಬಳಿಗೆ ಹೋದನು. ಸಭೆಯ ಹಿರಿಯರೆಲ್ಲರು ಸಹ ಬಂದರು.
Izuva lichilila Paulusi na yenda naswe kwa Jakobo, ni bakulwana bonse babena hateni.
19 ೧೯ ಪೌಲನು ಅವರನ್ನು ವಂದಿಸಿ ತನ್ನ ಸೇವೆಯ ಮೂಲಕವಾಗಿ ದೇವರು ಅನ್ಯಜನರಲ್ಲಿ ಮಾಡಿದ ಕಾರ್ಯಗಳನ್ನು ಒಂದೊಂದಾಗಿ ವಿವರಿಸಿದನು.
Ha chivamana kuvalumelisa, navavihela chimwi ni chimwi chintu chava tendendwa ni Ireez muvamasi angi cha mutendo wakwe.
20 ೨೦ ಅವರು ಅದನ್ನು ಕೇಳಿ ದೇವರನ್ನು ಕೊಂಡಾಡಿದರು. ಆಗ ಅವರು ಅವನಿಗೆ; “ಸಹೋದರನೇ, ಯೆಹೂದ್ಯರಲ್ಲಿ ಯೇಸುವನ್ನು ನಂಬಿರುವವರು ಸಾವಿರಾರು ಮಂದಿ ಇದ್ದಾರೆಂಬುದನ್ನು ನೋಡುತ್ತಿದ್ದೀಯಲ್ಲಾ. ಅವರೆಲ್ಲರೂ ಧರ್ಮಶಾಸ್ತ್ರದ ಅಭಿಮಾನಿಗಳಾಗಿದ್ದಾರೆ.
Linu hava izuwa, ni vatemba Ireeza, mi nibati kwali, “Ubwene muukwetu, zikiti zongai ziva zumini mukati ka Majuda. Vonse vava kozeze kuvika mulao.
21 ೨೧ ನೀನು ಅನ್ಯಜನರ ಮಧ್ಯದಲ್ಲಿ ವಾಸವಾಗಿರುವ ಯೆಹೂದ್ಯರೆಲ್ಲರಿಗೆ; ‘ನಿಮ್ಮ ಮಕ್ಕಳಿಗೆ ಸುನ್ನತಿಮಾಡಿಸಬೇಡಿರಿ, ನಿಮ್ಮ ಆಚಾರಗಳನ್ನು ಅನುಸರಿಸಿ ನಡೆಯಬೇಡಿರಿ ಎಂದು ಹೇಳಿ, ಮೋಶೆಯ ಧರ್ಮವನ್ನು ತ್ಯಜಿಸಬೇಕೆಂಬುದಾಗಿ ಬೋಧಿಸುತ್ತಿರುವೆ’ ಎಂದು ನಿನ್ನ ಕುರಿತಾಗಿ ಹೇಳಿದ್ದಾರೆ.
Vava wambilwa chako, kuti uluta Majuda vonse vahala mumasi angi kuti va kane Mushe, nikuti uvava wambila kuti kanzi batwali vana vavo kumupato ni kuse chilila chisiyankulu chetu.
22 ೨೨ ನೀನು ಬಂದಿರುವುದನ್ನು ಅವರು ಹೇಗೂ ತಿಳಿದುಕೊಳ್ಳುವರು. ಹೀಗಿರುವಲ್ಲಿ ನಾವು ಏನು ಮಾಡಬೇಕು?
Tuwola kutendanzi? Mavazuwe chokusima kuti uvakezi.
23 ೨೩ ಅದಕಾರಣ ನಾವು ನಿನಗೆ ಹೇಳುವ ಕೆಲಸವನ್ನು ಮಾಡು. ನಮ್ಮಲ್ಲಿ ಶಪಥಮಾಡಿದ ನಾಲ್ಕುಮಂದಿ ಇದ್ದಾರೆ.
Mukuti utende zitu kuwambila hanu: Twina vakwame vone vava likonki chakuha isepiso.
24 ೨೪ ನೀನು ಅವರನ್ನು ಕರೆದುಕೊಂಡು ಹೋಗಿ, ಅವರೊಡನೆ ನಿನ್ನನ್ನು ಶುದ್ಧಿಮಾಡಿಕೊಂಡು ಅವರು ತಮ್ಮ ಕ್ಷೌರದ ಶಪಥವನ್ನು ತೀರಿಸಿಕೊಳ್ಳುವುದಕ್ಕಾಗಿ, ಆಗುವ ವೆಚ್ಚವನ್ನು ನೀನು ಕೊಡು. ಹೀಗೆ ಮಾಡಿದರೆ ಎಲ್ಲರೂ ನಿನ್ನ ವಿಷಯವಾಗಿ ತಾವು ಕೇಳಿದ ಸುದ್ದಿ ನಿಜವಲ್ಲವೆಂತಲೂ, ನೀನು ಧರ್ಮಶಾಸ್ತ್ರವನ್ನು ಕೈಕೊಂಡು ನಡೆಯುತ್ತೀ, ಎಂತಲೂ ತಿಳಿದುಕೊಳ್ಳುವರು.
Hinde ava vakwame ni kulijoloza navo vulyo, ni kuva lihila insinyehelo zavo, nikuti vangunke mitwi yavo. Kokuti vezive kuti zintu zivava wambilwa chako kazina vuniti. Muvalitute kuti nawe vulyo mwichilila mulao.
25 ೨೫ ಅನ್ಯಜನರಲ್ಲಿ ಯೇಸುವನ್ನು ನಂಬಿರುವವರ ಕುರಿತಾದರೋ, ವಿಗ್ರಹಕ್ಕೆ ನೈವೇದ್ಯಮಾಡಿದ್ದನ್ನೂ, ರಕ್ತವನ್ನೂ, ಕತ್ತು ಹಿಸುಕಿ ಕೊಂದದ್ದನ್ನೂ ಅನೈತಿಕತೆಯನ್ನೂ ಬಿಟ್ಟು ದೂರವಾಗಿರಬೇಕೆಂಬುದಾಗಿ ನಾವು ತೀರ್ಮಾನಿಸಿದ ನಿಯಮಗಳನ್ನು ಬರೆದು ಕಳುಹಿಸಿದೆವಲ್ಲಾ” ಎಂದು ಹೇಳಿದರು.
Kono kuamana ni vamasi angi vavazumini, tuvañoli ni kuvaha intayelo kuti vali zwise kuzintu zihailwe vazimu, kumalaha, niziva siniwa, niza vuliyendezi.”
26 ೨೬ ಆಗ ಪೌಲನು ಮರುದಿನ ಆ ನಾಲ್ವರೊಡನೆ ಹೋಗಿ ಶುದ್ಧಾಚಾರದ ವಿಧಿಯನ್ನು ನೆರವೇರಿಸಿದನು. ಅನಂತರ ಶುದ್ಧಾಚಾರ ಮುಗಿಯುವ ದಿನವನ್ನು ತಿಳಿಸುವುದಕ್ಕಾಗಿ ದೇವಾಲಯದೊಳಗೆ ಹೋದನು. ಅವರಲ್ಲಿ ಪ್ರತಿಯೊಬ್ಬನಿಗಾಗಿ ಯಾವಾಗ ಬಲಿಯರ್ಪಣೆಯಾಗುವುದೆಂದು ಅಲ್ಲಿ ಸೂಚಿಸಿದನು.
Linu Paulusi nahinda vakwame, imi izuva lichilila nalijoloza iyemwine ni kujoloza avo vakwame, nikuya mwi templele, kukatumusa mazuva akulijoloza, kukasikila hakuka hewa chitavelo kuzumwi ni zumwi wavo.
27 ೨೭ ಆ ಏಳು ದಿನಗಳು ಮುಗಿಯುತ್ತಿದ್ದಂತೆ ಅಸ್ಯಸೀಮೆಯಿಂದ ಬಂದಿದ್ದ ಯೆಹೂದ್ಯರು ಪೌಲನನ್ನು ದೇವಾಲಯದಲ್ಲಿ ಕಂಡು ಗುಂಪುಕೂಡಿದ ಜನರೆಲ್ಲರನ್ನು ಚದುರಿಸಿ ಅವನನ್ನು ಹಿಡಿದು;
Linu mazuva akwana iyanza ni obele havena hafihi ni ku hamana, vamwi Majuda vazwa kwa Asia ni vavona Paulusi mwi temple, imi niya sangisa chinavungi chonse, niva vika mayanza avo hali.
28 ೨೮ “ಇಸ್ರಾಯೇಲ್ ಜನರೇ, ನಮಗೆ ಸಹಾಯಮಾಡಿರಿ, ನಮ್ಮ ಜನರಿಗೂ, ಧರ್ಮಶಾಸ್ತ್ರಕ್ಕೂ, ಈ ಆಲಯಕ್ಕೂ ವಿರುದ್ಧವಾಗಿ ಎಲ್ಲೆಲ್ಲಿಯೂ, ಎಲ್ಲರಿಗೂ ಬೋಧನೆ ಹೇಳುವ ಆ ಮನುಷ್ಯನು ಇವನೇ. ಇದಲ್ಲದೆ ಇವನು ಗ್ರೀಕರನ್ನು ದೇವಾಲಯದೊಳಗೆ ಕರೆದುಕೊಂಡು ಬಂದು ಈ ಪರಿಶುದ್ಧಸ್ಥಳವನ್ನು ಹೊಲೆಮಾಡಿದ್ದಾನೆ” ಎಂದು ಕೂಗಿದರು.
Vavali kuhuwa, “Vakwame va Isilaele, mutu tuse. Uzu njimukwame yoluta vaantu vonse kumwi ni kumwi zintu zilwisana vaantu, mulao ne chinu chivaka. Kwandahezo, avaleti Magerike mwi Tempele imi vava silafazi ichi chivaka chijolola.”
29 ೨೯ ಮೊದಲು ಅವರು ಎಫೆಸದ ತ್ರೊಫಿಮನನ್ನು ಅವನ ಸಂಗಡ ಪಟ್ಟಣದಲ್ಲಿ ನೋಡಿದ್ದರಿಂದ ಅವನನ್ನು ಪೌಲನು ದೇವಾಲಯದೊಳಗೆ ಕರೆದುಕೊಂಡು ಬಂದನೆಂದು ಭಾವಿಸಿದರು.
Mukuti chivava vwene kale Trofimosi Mufalisi naye mumuleneñi, imi nivazeza kuti Paulusi waka muleta mwi tempele.
30 ೩೦ ಆಗ ಪಟ್ಟಣದಲ್ಲೆಲ್ಲಾ ಕೋಲಾಹಲವೆದ್ದಿತು, ಜನರು ಎಲ್ಲಾ ಕಡೆಯಿಂದಲೂ ಓಡಿಬಂದು ಸೇರಿಕೊಂಡರು. ಪೌಲನನ್ನು ಹಿಡಿದು, ದೇವಾಲಯದ ಹೊರಗಡೆಗೆ ಎಳೆದುಕೊಂಡು ಬಂದ ಕೂಡಲೇ ಬಾಗಿಲುಗಳನ್ನು ಮುಚ್ಚಿದರು.
Onse muleneñi uba sangite, imi vonse vantu nivatiya hamwina ni kukakwata Paulusi. Chivaka mukwitulwila kunze ye temple, mi ziyazo nize yaliwa haho.
31 ೩೧ ಅವರು ಅವನನ್ನು ಕೊಲ್ಲುವುದಕ್ಕೆ ಯತ್ನಿಸುತ್ತಿದ್ದಾಗ ಯೆರೂಸಲೇಮಿನಲ್ಲೆಲ್ಲಾ ಗಲಿಬಿಲಿಯಾಯಿತೆಂದು ಪಟಾಲಮಿನ ಸಹಸ್ರಾಧಿಪತಿಗೆ ವರದಿ ಬಂದಿತು.
Sina havava kulika kumwihaya, iñusa nilyeza ku muyendisi wa vaganteli kuti Jerusalema yonse nyungana.
32 ೩೨ ಅವನು ತಕ್ಷಣವೇ ಸಿಪಾಯಿಗಳನ್ನೂ, ಶತಾಧಿಪತಿಗಳನ್ನೂ ತೆಗೆದುಕೊಂಡು ಜನಸಮೂಹದ ಹತ್ತಿರ ಓಡಿಬಂದನು. ಅವರು ಸಹಸ್ರಾಧಿಪತಿಯನ್ನೂ, ಸಿಪಾಯಿಗಳನ್ನೂ ನೋಡಿ ಪೌಲನನ್ನು ಹೊಡೆಯುವುದನ್ನು ಬಿಟ್ಟರು.
Haho vulyo nahinda masole ni balauli wa masole niku tilila hansi kuchi navungi chonse.
33 ೩೩ ಸಹಸ್ರಾಧಿಪತಿಯು ಹತ್ತಿರಕ್ಕೆ ಬಂದು ಅವನನ್ನು ಹಿಡಿದು, ಅವನಿಗೆ ಎರಡು ಬೇಡಿಯನ್ನು ಹಾಕಬೇಕೆಂದು ಅಪ್ಪಣೆಕೊಟ್ಟು;
Linu vantu hava vona muyendisi wa masole ni masole, niva siya kundama Paulusi. Linu muyendisi wa masole cheza kuwonda Paulusi, imi nalaela kuti a suminiwe ni mawenge obele. Chavuza kuti njini imi chinzi chava tendinzi.
34 ೩೪ ಇವನಾರು? ಏನು ಮಾಡಿದ್ದಾನೆ? ಎಂದು ಕೇಳಲು ಕೆಲವರು ಹೀಗೆ, ಕೆಲವರು ಹಾಗೆ ಕೂಗುತ್ತಿರಲು ಗದ್ದಲದ ನಿಮಿತ್ತ ನಿಜ ಸ್ಥಿತಿಯನ್ನು ತಿಳಿಯಲಾರದೆ ಅವನನ್ನು ಕೋಟೆಯೊಳಗೆ ತೆಗೆದುಕೊಂಡು ಹೋಗಿರೆಂದು ಅಪ್ಪಣೆಕೊಟ್ಟನು.
Bamwi muchina vungi vava kuhuleza chintu chimwi. Sina muyendisi kana ava kuwola kuwamba chimwi chevaka lyelata, nalaela kuti Paulusi aletwa munzubo ikolete.
35 ೩೫ ಪೌಲನು ಮೆಟ್ಟಿಲುಗಳ ಮೇಲೆ ಬಂದಾಗ ಜನರ ನೂಕಾಟದ ನಿಮಿತ್ತ ಸಿಪಾಯಿಗಳು ಅವನನ್ನು ಹೊತ್ತುಕೊಂಡು ಹೋಗಬೇಕಾಯಿತು.
Linu heza kutantilwa, Masole vava mukatwile kakuti chinavungi chiva kalihite.
36 ೩೬ ಏಕೆಂದರೆ, ಗುಂಪಾಗಿ ಕೂಡಿದ ಜನರು ಹಿಂದಿನಿಂದ ಬಂದು; “ಅವನನ್ನು ಕೊಲ್ಲಿರಿ” ಎಂದು ಕೂಗುತ್ತಾ ಬೆನ್ನಟ್ಟಿ ಬರುತ್ತಿದ್ದರು.
Mukuti chinavangi cha vantu chiva ve chilile niva kuhuweleza. “Muzwe mumusiye!”
37 ೩೭ ಪೌಲನನ್ನು ಕೋಟೆಯೊಳಗೆ ಕರೆದುಕೊಂಡು ಹೋಗುವುದರೊಳಗಾಗಿ ಅವನು ಆ ಸಹಸ್ರಾಧಿಪತಿಗೆ, “ನಿನಗೆ ಒಂದು ಮಾತು ಹೇಳುವುದಕ್ಕೆ ನನಗೆ ಅಪ್ಪಣೆ ಇದೆಯೋ”? ಎಂದು ಕೇಳಲು ಅವನು; “ಗ್ರೀಕ್ ಭಾಷೆ ನಿನಗೆ ಬರುತ್ತದೋ?
Linu Paulusi havena hafwihi ni kwi njizikwa munzubo ikolete, chati ku muyendisi yomanisa, “Ni woli kuwamba chimwi kwako?” Muyendisi chati, “U wamba chigerike?
38 ೩೮ ಕೆಲವು ದಿನಗಳ ಹಿಂದೆ ದಂಗೆ ಎಬ್ಬಿಸಿ ಆ ನಾಲ್ಕು ಸಾವಿರ ಮಂದಿ ಘಾತಕರನ್ನು ಅಡವಿಗೆ ಕರೆದುಕೊಂಡು ಹೋದ ಆ ಐಗುಪ್ತ್ಯನು ನೀನೇ ಅಲ್ಲವೇ” ಎಂದು ಕೇಳಿದನು.
Kena njewe zuna Muegepita, yaba letete inkondo imi uva hindi zikiti kiti zonee zava sandukili kuzitwala munkaanda?”
39 ೩೯ ಅದಕ್ಕೆ ಪೌಲನು; ನಾನು ಯೆಹೂದ್ಯನು, ತಾರ್ಸದವನು, ಕಿಲಿಕ್ಯಸೀಮೆಯ ಪ್ರಖ್ಯಾತವಾದ ಪಟ್ಟಣದವನು. ಈ ಜನರಿಗೆ ಕೆಲವು ಮಾತುಗಳನ್ನು ಹೇಳುವುದಕ್ಕೆ ನನಗೆ ಅಪ್ಪಣೆಯಾಗಬೇಕೆಂದು ಕೇಳಿಕೊಳ್ಳುತ್ತೇನೆ ಅಂದನು.
Paulusi chati, “Ni Mujuda, ni zwa mumuleneñi wa Tarese mwa Silisia. Ni muzaki wa muleneñi u sepahala, niku kumbila, kuti uni zuminine ni wambe ku vantu.”
40 ೪೦ ಸಹಸ್ರಾಧಿಪತಿಯು ಅಪ್ಪಣೆ ಕೊಡಲು, ಪೌಲನು ಮೆಟ್ಟಿಲುಗಳ ಮೇಲೆ ನಿಂತುಕೊಂಡು, ಜನರಿಗೆ ಕೈಸನ್ನೆ ಮಾಡಿದನು. ಗದ್ದಲವು ಬಹಳ ಮಟ್ಟಿಗೆ ಶಾಂತವಾದ ಮೇಲೆ ಅವನು ಇಬ್ರಿಯ ಭಾಷೆಯಲ್ಲಿ ಮಾತನಾಡಲು ಪ್ರಾರಂಭಿಸಿದನು.,
Lina muyendisi hamuha chivaka, Paulusi cha zimana hatantilwa ni kusovola vantu cheyanza, Hakuva tontwile ahulu, nawamba kuvali muchi Heberu, chati,