< ಅಪೊಸ್ತಲರ ಕೃತ್ಯಗಳ 13 >

1 ಅಂತಿಯೋಕ್ಯದಲ್ಲಿದ್ದ ಸಭೆಯೊಳಗೆ ಪ್ರವಾದಿಗಳೂ, ಬೋಧಕರೂ ಇದ್ದರು; ಅವರು ಯಾರೆಂದರೆ; ಬಾರ್ನಬ, ನೀಗರನೆಂಬ ಸಿಮೆಯೋನ, ಕುರೇನ್ಯದ ಲೂಕ್ಯ, ಸಾಮಂತ ಹೆರೋದನ ಜೊತೆಯಲ್ಲಿ ಬೆಳೆದ ಮೆನಹೇನ, ಸೌಲ ಇವರೇ.
ಅಪರಞ್ಚ ಬರ್ಣಬ್ಬಾಃ, ಶಿಮೋನ್ ಯಂ ನಿಗ್ರಂ ವದನ್ತಿ, ಕುರೀನೀಯಲೂಕಿಯೋ ಹೇರೋದಾ ರಾಜ್ಞಾ ಸಹ ಕೃತವಿದ್ಯಾಭ್ಯಾಸೋ ಮಿನಹೇಮ್, ಶೌಲಶ್ಚೈತೇ ಯೇ ಕಿಯನ್ತೋ ಜನಾ ಭವಿಷ್ಯದ್ವಾದಿನ ಉಪದೇಷ್ಟಾರಶ್ಚಾನ್ತಿಯಖಿಯಾನಗರಸ್ಥಮಣ್ಡಲ್ಯಾಮ್ ಆಸನ್,
2 ಇವರು ಕರ್ತನನ್ನು ಆರಾಧಿಸುತ್ತಾ, ಉಪವಾಸಮಾಡುತ್ತಾ ಇದ್ದಾಗ ಪವಿತ್ರಾತ್ಮನು; “ನಾನು ಬಾರ್ನಬ ಮತ್ತು ಸೌಲರನ್ನು ಕರೆದ ಸೇವೆಗಾಗಿ ಅವರನ್ನು ಬೇರ್ಪಡಿಸಿರಿ” ಎಂದು ಹೇಳಿದನು.
ತೇ ಯದೋಪವಾಸಂ ಕೃತ್ವೇಶ್ವರಮ್ ಅಸೇವನ್ತ ತಸ್ಮಿನ್ ಸಮಯೇ ಪವಿತ್ರ ಆತ್ಮಾ ಕಥಿತವಾನ್ ಅಹಂ ಯಸ್ಮಿನ್ ಕರ್ಮ್ಮಣಿ ಬರ್ಣಬ್ಬಾಶೈಲೌ ನಿಯುಕ್ತವಾನ್ ತತ್ಕರ್ಮ್ಮ ಕರ್ತ್ತುಂ ತೌ ಪೃಥಕ್ ಕುರುತ|
3 ಆಗ ಅವರು ಉಪವಾಸವಿದ್ದು ಪ್ರಾರ್ಥಿಸಿ ಆ ಇಬ್ಬರ ಮೇಲೆ ಹಸ್ತಗಳನ್ನಿಟ್ಟು ಅವರನ್ನು ಕಳುಹಿಸಿಕೊಟ್ಟರು.
ತತಸ್ತೈರುಪವಾಸಪ್ರಾರ್ಥನಯೋಃ ಕೃತಯೋಃ ಸತೋಸ್ತೇ ತಯೋ ರ್ಗಾತ್ರಯೋ ರ್ಹಸ್ತಾರ್ಪಣಂ ಕೃತ್ವಾ ತೌ ವ್ಯಸೃಜನ್|
4 ಹೀಗೆ ಅವರು ಪವಿತ್ರಾತ್ಮನಿಂದ ಕಳುಹಿಸಲ್ಪಟ್ಟವರಾಗಿ ಸೆಲ್ಯೂಕ್ಯಕ್ಕೆ ಬಂದರು; ಅಲ್ಲಿಂದ ಸಮುದ್ರದಲ್ಲಿ ಪ್ರಯಾಣವಾಗಿ ಕುಪ್ರದ್ವೀಪಕ್ಕೆ ಹೋದರು.
ತತಃ ಪರಂ ತೌ ಪವಿತ್ರೇಣಾತ್ಮನಾ ಪ್ರೇರಿತೌ ಸನ್ತೌ ಸಿಲೂಕಿಯಾನಗರಮ್ ಉಪಸ್ಥಾಯ ಸಮುದ್ರಪಥೇನ ಕುಪ್ರೋಪದ್ವೀಪಮ್ ಅಗಚ್ಛತಾಂ|
5 ಸಲಮೀಸ್ ಎಂಬ ಸ್ಥಳಕ್ಕೆ ಸೇರಿ ಅಲ್ಲಿ ಯೆಹೂದ್ಯರ ಸಭಾಮಂದಿರಗಳಲ್ಲಿ ದೇವರ ವಾಕ್ಯವನ್ನು ಬೋಧಿಸಿದರು. ಮಾರ್ಕನೆನಿಸಿಕೊಳ್ಳುವ ಯೋಹಾನನು ಸಹಾಯಕನಾಗಿ ಅವರ ಸಂಗಡ ಇದ್ದನು.
ತತಃ ಸಾಲಾಮೀನಗರಮ್ ಉಪಸ್ಥಾಯ ತತ್ರ ಯಿಹೂದೀಯಾನಾಂ ಭಜನಭವನಾನಿ ಗತ್ವೇಶ್ವರಸ್ಯ ಕಥಾಂ ಪ್ರಾಚಾರಯತಾಂ; ಯೋಹನಪಿ ತತ್ಸಹಚರೋಽಭವತ್|
6 ಅವರು ದ್ವೀಪದಲ್ಲೆಲ್ಲಾ ಸಂಚಾರಮಾಡಿ ಪಾಫೋಸ್ ಎಂಬ ಊರಿನ ತನಕ ಬಂದು ಅಲ್ಲಿ ಸುಳ್ಳುಪ್ರವಾದಿಯೂ, ಮಂತ್ರವಾದಿಯೂ ಆಗಿದ್ದ ‘ಬಾರ್‍ಯೇಸು’ ಎಂಬ ಒಬ್ಬ ಯೆಹೂದ್ಯ ಮನುಷ್ಯನನ್ನು ಕಂಡರು.
ಇತ್ಥಂ ತೇ ತಸ್ಯೋಪದ್ವೀಪಸ್ಯ ಸರ್ವ್ವತ್ರ ಭ್ರಮನ್ತಃ ಪಾಫನಗರಮ್ ಉಪಸ್ಥಿತಾಃ; ತತ್ರ ಸುವಿವೇಚಕೇನ ಸರ್ಜಿಯಪೌಲನಾಮ್ನಾ ತದ್ದೇಶಾಧಿಪತಿನಾ ಸಹ ಭವಿಷ್ಯದ್ವಾದಿನೋ ವೇಶಧಾರೀ ಬರ್ಯೀಶುನಾಮಾ ಯೋ ಮಾಯಾವೀ ಯಿಹೂದೀ ಆಸೀತ್ ತಂ ಸಾಕ್ಷಾತ್ ಪ್ರಾಪ್ತವತಃ|
7 ಅವನು ರಾಜ್ಯ ಪಾಲನಾಗಿದ್ದ ಸೆರ್ಗ್ಯ ಪೌಲನೆಂಬ ಅಧಿಪತಿಯ ಜೊತೆಯಲ್ಲಿದ್ದನು. ಆ ಅಧಿಪತಿಯು ಬುದ್ಧಿವಂತನಾಗಿದ್ದು, ಬಾರ್ನಬ ಮತ್ತು ಸೌಲನನ್ನು ತನ್ನ ಬಳಿಗೆ ಕರೆಸಿ ದೇವರ ವಾಕ್ಯವನ್ನು ಕೇಳುವುದಕ್ಕೆ ಅಪೇಕ್ಷೆ ಪಟ್ಟನು.
ತದ್ದೇಶಾಧಿಪ ಈಶ್ವರಸ್ಯ ಕಥಾಂ ಶ್ರೋತುಂ ವಾಞ್ಛನ್ ಪೌಲಬರ್ಣಬ್ಬೌ ನ್ಯಮನ್ತ್ರಯತ್|
8 ಆದರೆ ಆ ಮಂತ್ರವಾದಿಯಾದ ಎಲುಮನು (ಎಲುಮನೆಂಬ ಹೆಸರಿಗೆ ಮಂತ್ರವಾದಿಯೆಂದರ್ಥ) ಅವರನ್ನು ವಿರೋಧಿಸಿದನು; ಅಧಿಪತಿಯು ಕ್ರಿಸ್ತನಲ್ಲಿ ನಂಬಿಕೆಯಿಡದಂತೆ ಅಡ್ಡಿಮಾಡಲು ಪ್ರಯತ್ನಿಸಿದನು.
ಕಿನ್ತ್ವಿಲುಮಾ ಯಂ ಮಾಯಾವಿನಂ ವದನ್ತಿ ಸ ದೇಶಾಧಿಪತಿಂ ಧರ್ಮ್ಮಮಾರ್ಗಾದ್ ಬಹಿರ್ಭೂತಂ ಕರ್ತ್ತುಮ್ ಅಯತತ|
9 ಆಗ ಪೌಲನೆನಿಸಿಕೊಳ್ಳುವ ಸೌಲನು ಪವಿತ್ರಾತ್ಮಭರಿತನಾಗಿ,
ತಸ್ಮಾತ್ ಶೋಲೋಽರ್ಥಾತ್ ಪೌಲಃ ಪವಿತ್ರೇಣಾತ್ಮನಾ ಪರಿಪೂರ್ಣಃ ಸನ್ ತಂ ಮಾಯಾವಿನಂ ಪ್ರತ್ಯನನ್ಯದೃಷ್ಟಿಂ ಕೃತ್ವಾಕಥಯತ್,
10 ೧೦ ಅವನನ್ನು ದೃಷ್ಟಿಸಿನೋಡಿ; “ಸೈತಾನನ ಮಗನೇ, ಮೋಸದಿಂದಲೂ, ಎಲ್ಲಾ ಕೆಟ್ಟತನದಿಂದಲೂ ತುಂಬಿರುವವನೇ, ಎಲ್ಲಾ ನೀತಿಗೂ ವಿರೋಧಿಯೇ, ನೀನು ಕರ್ತನ ನೇರವಾದ ಮಾರ್ಗಗಳನ್ನು ಡೊಂಕು ಮಾಡುವುದನ್ನು ಬಿಡುವುದಿಲ್ಲವೋ?
ಹೇ ನರಕಿನ್ ಧರ್ಮ್ಮದ್ವೇಷಿನ್ ಕೌಟಿಲ್ಯದುಷ್ಕರ್ಮ್ಮಪರಿಪೂರ್ಣ, ತ್ವಂ ಕಿಂ ಪ್ರಭೋಃ ಸತ್ಯಪಥಸ್ಯ ವಿಪರ್ಯ್ಯಯಕರಣಾತ್ ಕದಾಪಿ ನ ನಿವರ್ತ್ತಿಷ್ಯಸೇ?
11 ೧೧ ಇಗೋ, ಕರ್ತನು ನಿನಗೆ ವಿರುದ್ಧವಾಗಿ ಕೈ ಎತ್ತಿದ್ದಾನೆ; ನೀನು ಕುರುಡನಾಗಿ ಕೆಲವು ಕಾಲ ಸೂರ್ಯನನ್ನು ನೋಡದೆ ಇರುವಿ” ಎಂದು ಹೇಳಿದನು. ಆ ಕ್ಷಣವೇ ಅವನಿಗೆ ಕಣ್ಣು ಮೊಬ್ಬಾಗಿ ಕತ್ತಲೆ ಕವಿಯಿತು; ಅವನು ಕೈಹಿಡಿದು ಆಧಾರ ಕೊಡುವವರನ್ನು ಹುಡುಕುತ್ತಾ ತಿರುಗಾಡಿದನು.
ಅಧುನಾ ಪರಮೇಶ್ವರಸ್ತವ ಸಮುಚಿತಂ ಕರಿಷ್ಯತಿ ತೇನ ಕತಿಪಯದಿನಾನಿ ತ್ವಮ್ ಅನ್ಧಃ ಸನ್ ಸೂರ್ಯ್ಯಮಪಿ ನ ದ್ರಕ್ಷ್ಯಸಿ| ತತ್ಕ್ಷಣಾದ್ ರಾತ್ರಿವದ್ ಅನ್ಧಕಾರಸ್ತಸ್ಯ ದೃಷ್ಟಿಮ್ ಆಚ್ಛಾದಿತವಾನ್; ತಸ್ಮಾತ್ ತಸ್ಯ ಹಸ್ತಂ ಧರ್ತ್ತುಂ ಸ ಲೋಕಮನ್ವಿಚ್ಛನ್ ಇತಸ್ತತೋ ಭ್ರಮಣಂ ಕೃತವಾನ್|
12 ೧೨ ಅಧಿಪತಿಯು ಆ ಸಂಗತಿಯನ್ನು ನೋಡಿ ಕರ್ತನ ಬೋಧನೆಗೆ ಅತ್ಯಾಶ್ಚರ್ಯಪಟ್ಟು ನಂಬುವವನಾದನು.
ಏನಾಂ ಘಟನಾಂ ದೃಷ್ಟ್ವಾ ಸ ದೇಶಾಧಿಪತಿಃ ಪ್ರಭೂಪದೇಶಾದ್ ವಿಸ್ಮಿತ್ಯ ವಿಶ್ವಾಸಂ ಕೃತವಾನ್|
13 ೧೩ ತರುವಾಯ ಪೌಲನೂ ಅವನ ಜೊತೆಯಲ್ಲಿದ್ದವರೂ ಪಾಫೋಸೂರನ್ನು ಬಿಟ್ಟು ಸಮುದ್ರಪ್ರಯಾಣಮಾಡಿ ಪಂಫುಲ್ಯ ಸೀಮೆಗೆ ಸೇರಿದ ಪೆರ್ಗೆ ಪಟ್ಟಣಕ್ಕೆ ಬಂದರು; ಮಾರ್ಕನೆಂಬ ಯೋಹಾನನು ಅವರನ್ನು ಬಿಟ್ಟು ಹಿಂತಿರುಗಿ ಯೆರೂಸಲೇಮಿಗೆ ಹೋದನು.
ತದನನ್ತರಂ ಪೌಲಸ್ತತ್ಸಙ್ಗಿನೌ ಚ ಪಾಫನಗರಾತ್ ಪ್ರೋತಂ ಚಾಲಯಿತ್ವಾ ಪಮ್ಫುಲಿಯಾದೇಶಸ್ಯ ಪರ್ಗೀನಗರಮ್ ಅಗಚ್ಛನ್ ಕಿನ್ತು ಯೋಹನ್ ತಯೋಃ ಸಮೀಪಾದ್ ಏತ್ಯ ಯಿರೂಶಾಲಮಂ ಪ್ರತ್ಯಾಗಚ್ಛತ್|
14 ೧೪ ಆ ಮೇಲೆ ಅವರು ಪೆರ್ಗೆಯಿಂದ ಸಂಚಾರಮಾಡಿ ಪಿಸಿದ್ಯ ಸೀಮೆಗೆ ಸೇರಿದ ಅಂತಿಯೋಕ್ಯಕ್ಕೆ ಬಂದರು. ಸಬ್ಬತ್ ದಿನದಲ್ಲಿ ಅವರು ಸಭಾಮಂದಿರದೊಳಗೆ ಹೋಗಿ ಕುಳಿತುಕೊಂಡರು.
ಪಶ್ಚಾತ್ ತೌ ಪರ್ಗೀತೋ ಯಾತ್ರಾಂ ಕೃತ್ವಾ ಪಿಸಿದಿಯಾದೇಶಸ್ಯ ಆನ್ತಿಯಖಿಯಾನಗರಮ್ ಉಪಸ್ಥಾಯ ವಿಶ್ರಾಮವಾರೇ ಭಜನಭವನಂ ಪ್ರವಿಶ್ಯ ಸಮುಪಾವಿಶತಾಂ|
15 ೧೫ ಧರ್ಮಶಾಸ್ತ್ರ ಮತ್ತು ಪ್ರವಾದಿಗಳ ಗ್ರಂಥ ಇವುಗಳ ಪಾರಾಯಣವಾದ ಮೇಲೆ ಸಭಾಮಂದಿರದ ನಾಯಕರು; “ಸಹೋದರರೇ, ಜನರಿಗೆ ಹೇಳತಕ್ಕ ಬುದ್ಧಿಮಾತೇನಾದರೂ ನಿಮಗಿದ್ದರೆ ಹೇಳಿರಿ” ಎಂದು ಅವರಿಗೆ ಹೇಳಿ ಕಳುಹಿಸಿದರು.
ವ್ಯವಸ್ಥಾಭವಿಷ್ಯದ್ವಾಕ್ಯಯೋಃ ಪಠಿತಯೋಃ ಸತೋ ರ್ಹೇ ಭ್ರಾತರೌ ಲೋಕಾನ್ ಪ್ರತಿ ಯುವಯೋಃ ಕಾಚಿದ್ ಉಪದೇಶಕಥಾ ಯದ್ಯಸ್ತಿ ತರ್ಹಿ ತಾಂ ವದತಂ ತೌ ಪ್ರತಿ ತಸ್ಯ ಭಜನಭವನಸ್ಯಾಧಿಪತಯಃ ಕಥಾಮ್ ಏತಾಂ ಕಥಯಿತ್ವಾ ಪ್ರೈಷಯನ್|
16 ೧೬ ಆಗ ಪೌಲನು ಎದ್ದು ಕೈಸನ್ನೆ ಮಾಡಿ ಹೇಳಿದ್ದೇನಂದರೆ;
ಅತಃ ಪೌಲ ಉತ್ತಿಷ್ಠನ್ ಹಸ್ತೇನ ಸಙ್ಕೇತಂ ಕುರ್ವ್ವನ್ ಕಥಿತವಾನ್ ಹೇ ಇಸ್ರಾಯೇಲೀಯಮನುಷ್ಯಾ ಈಶ್ವರಪರಾಯಣಾಃ ಸರ್ವ್ವೇ ಲೋಕಾ ಯೂಯಮ್ ಅವಧದ್ಧಂ|
17 ೧೭ “ಇಸ್ರಾಯೇಲ್ ಜನರೇ, ಮತ್ತು ಯೆಹೂದ್ಯ ಮತಾವಲಂಬಿಗಳೇ, ಕೇಳಿರಿ. ನಮ್ಮ ಇಸ್ರಾಯೇಲ್ ಜನರ ದೇವರು ಆರಿಸಿಕೊಂಡ ನಮ್ಮ ಪೂರ್ವಿಕರು ಐಗುಪ್ತದೇಶದಲ್ಲಿ ವಾಸಿಸುತ್ತಿದ್ದಾಗ ಅವರನ್ನು ಪ್ರಬಲರನ್ನಾಗಿ ಮಾಡಿ, ಅಭಿವೃದ್ಧಿಗೆ ತಂದು ತನ್ನ ಭುಜಬಲದಿಂದ ಅವರನ್ನು ಆ ದೇಶದಿಂದ ಬರಮಾಡಿದನು.
ಏತೇಷಾಮಿಸ್ರಾಯೇಲ್ಲೋಕಾನಾಮ್ ಈಶ್ವರೋಽಸ್ಮಾಕಂ ಪೂರ್ವ್ವಪರುಷಾನ್ ಮನೋನೀತಾನ್ ಕತ್ವಾ ಗೃಹೀತವಾನ್ ತತೋ ಮಿಸರಿ ದೇಶೇ ಪ್ರವಸನಕಾಲೇ ತೇಷಾಮುನ್ನತಿಂ ಕೃತ್ವಾ ತಸ್ಮಾತ್ ಸ್ವೀಯಬಾಹುಬಲೇನ ತಾನ್ ಬಹಿಃ ಕೃತ್ವಾ ಸಮಾನಯತ್|
18 ೧೮ ಆತನು ಸುಮಾರು ನಲವತ್ತು ವರ್ಷಗಳವರೆಗೂ ಅಡವಿಯಲ್ಲಿ ಅವರ ನಡವಳಿಕೆಯನ್ನು ಸಹಿಸಿಕೊಂಡು,
ಚತ್ವಾರಿಂಶದ್ವತ್ಸರಾನ್ ಯಾವಚ್ಚ ಮಹಾಪ್ರಾನ್ತರೇ ತೇಷಾಂ ಭರಣಂ ಕೃತ್ವಾ
19 ೧೯ ಕಾನಾನ್ ದೇಶದಲ್ಲಿದ್ದ ಅನ್ಯಜನಗಳ ಏಳು ರಾಜ್ಯಗಳನ್ನು ನಿರ್ಮೂಲಮಾಡಿ, ಆ ಜನರ ದೇಶವನ್ನು ಅವರಿಗೆ ಸ್ವತ್ತಾಗಿ ಹಂಚಿಕೊಟ್ಟನು.
ಕಿನಾನ್ದೇಶಾನ್ತರ್ವ್ವರ್ತ್ತೀಣಿ ಸಪ್ತರಾಜ್ಯಾನಿ ನಾಶಯಿತ್ವಾ ಗುಟಿಕಾಪಾತೇನ ತೇಷು ಸರ್ವ್ವದೇಶೇಷು ತೇಭ್ಯೋಽಧಿಕಾರಂ ದತ್ತವಾನ್|
20 ೨೦ ಇಷ್ಟರೊಳಗೆ ಸುಮಾರು ನಾನೂರೈವತ್ತು ವರ್ಷಗಳು ಗತಿಸಿದವು. ಇದಾದ ಮೇಲೆ ಪ್ರವಾದಿಯಾದ ಸಮುವೇಲನ ಕಾಲದ ವರೆಗೆ ನ್ಯಾಯಾಧಿಪತಿಗಳನ್ನು ಕೊಟ್ಟನು.
ಪಞ್ಚಾಶದಧಿಕಚತುಃಶತೇಷು ವತ್ಸರೇಷು ಗತೇಷು ಚ ಶಿಮೂಯೇಲ್ಭವಿಷ್ಯದ್ವಾದಿಪರ್ಯ್ಯನ್ತಂ ತೇಷಾಮುಪರಿ ವಿಚಾರಯಿತೃನ್ ನಿಯುಕ್ತವಾನ್|
21 ೨೧ ತರುವಾಯ ಅವರು ತಮಗೆ ಅರಸನು ಬೇಕೆಂದು ಕೇಳಿಕೊಳ್ಳಲು, ದೇವರು ಅವರಿಗೆ ಬೆನ್ಯಾಮೀನನ ಕುಲದ ಕೀಷನ ಮಗನಾದ ಸೌಲನನ್ನು ರಾಜನನ್ನಾಗಿ ಕೊಟ್ಟನು. ಅವನು ಅವರನ್ನು ನಲವತ್ತು ವರ್ಷ ಆಳಿದನು.
ತೈಶ್ಚ ರಾಜ್ಞಿ ಪ್ರಾರ್ಥಿತೇ, ಈಶ್ವರೋ ಬಿನ್ಯಾಮೀನೋ ವಂಶಜಾತಸ್ಯ ಕೀಶಃ ಪುತ್ರಂ ಶೌಲಂ ಚತ್ವಾರಿಂಶದ್ವರ್ಷಪರ್ಯ್ಯನ್ತಂ ತೇಷಾಮುಪರಿ ರಾಜಾನಂ ಕೃತವಾನ್|
22 ೨೨ ಆ ಮೇಲೆ ದೇವರು ಅವನನ್ನು ತೆಗೆದುಹಾಕಿ ದಾವೀದನನ್ನು ಅವರ ಮೇಲೆ ಅರಸನನ್ನಾಗಿ ನೇಮಕಮಾಡಿ; ‘ಇಷಯನ ಮಗನಾದ ದಾವೀದನು ನನಗೆ ಸಿಕ್ಕಿದನು, ಅವನು ನನ್ನ ಹೃದಯಕ್ಕೆ ಒಪ್ಪುವ ಮನುಷ್ಯನು, ಅವನು ನನ್ನ ಇಷ್ಟಾರ್ಥವನ್ನೆಲ್ಲಾ ನೆರವೇರಿಸುವನು’ ಎಂಬುದಾಗಿ ಅವನ ವಿಷಯವಾಗಿ ಸಾಕ್ಷಿಹೇಳಿದನು.
ಪಶ್ಚಾತ್ ತಂ ಪದಚ್ಯುತಂ ಕೃತ್ವಾ ಯೋ ಮದಿಷ್ಟಕ್ರಿಯಾಃ ಸರ್ವ್ವಾಃ ಕರಿಷ್ಯತಿ ತಾದೃಶಂ ಮಮ ಮನೋಭಿಮತಮ್ ಏಕಂ ಜನಂ ಯಿಶಯಃ ಪುತ್ರಂ ದಾಯೂದಂ ಪ್ರಾಪ್ತವಾನ್ ಇದಂ ಪ್ರಮಾಣಂ ಯಸ್ಮಿನ್ ದಾಯೂದಿ ಸ ದತ್ತವಾನ್ ತಂ ದಾಯೂದಂ ತೇಷಾಮುಪರಿ ರಾಜತ್ವಂ ಕರ್ತ್ತುಮ್ ಉತ್ಪಾದಿತವಾನ|
23 ೨೩ “ಅವನ ಸಂತಾನದಿಂದ ದೇವರು ತನ್ನ ವಾಗ್ದಾನದ ಪ್ರಕಾರ ಇಸ್ರಾಯೇಲರಿಗೆ ಒಬ್ಬ ರಕ್ಷಕನನ್ನು ಹುಟ್ಟಿಸಿದ್ದಾನೆ.
ತಸ್ಯ ಸ್ವಪ್ರತಿಶ್ರುತಸ್ಯ ವಾಕ್ಯಸ್ಯಾನುಸಾರೇಣ ಇಸ್ರಾಯೇಲ್ಲೋಕಾನಾಂ ನಿಮಿತ್ತಂ ತೇಷಾಂ ಮನುಷ್ಯಾಣಾಂ ವಂಶಾದ್ ಈಶ್ವರ ಏಕಂ ಯೀಶುಂ (ತ್ರಾತಾರಮ್) ಉದಪಾದಯತ್|
24 ೨೪ ಆ ರಕ್ಷಕನೇ ಯೇಸು, ಆತನ ಆಗಮನಕ್ಕೆ ಮೊದಲು ಯೋಹಾನನು ಇಸ್ರಾಯೇಲ್ ಜನರೆಲ್ಲರಿಗೆ, ನೀವು ದೇವರ ಕಡೆಗೆ ತಿರುಗಿಕೊಂಡು ಪಶ್ಚಾತ್ತಾಪದ ದೀಕ್ಷಾಸ್ನಾನಮಾಡಿಸಿಕೊಳ್ಳಬೇಕೆಂದು ಸಾರಿದನು.
ತಸ್ಯ ಪ್ರಕಾಶನಾತ್ ಪೂರ್ವ್ವಂ ಯೋಹನ್ ಇಸ್ರಾಯೇಲ್ಲೋಕಾನಾಂ ಸನ್ನಿಧೌ ಮನಃಪರಾವರ್ತ್ತನರೂಪಂ ಮಜ್ಜನಂ ಪ್ರಾಚಾರಯತ್|
25 ೨೫ ಯೋಹಾನನು ತನ್ನ ಸೇವೆಯನ್ನು ಪೂರೈಸುತ್ತಿರುವಾಗ ಜನರಿಗೆ; ‘ನನ್ನನ್ನು ಯಾರೆಂದು ಯೋಚಿಸುತ್ತೀರಿ? ನಾನು ಆತನಲ್ಲ, ಆದರೆ ನನ್ನ ಹಿಂದೆ ಒಬ್ಬನು ಬರುತ್ತಾನೆ, ಆತನ ಪಾದರಕ್ಷೆಯನ್ನು ಬಿಚ್ಚುವುದಕ್ಕೆ ನಾನು ಯೋಗ್ಯನಲ್ಲ’ ಎಂದು ಹೇಳಿದನು.
ಯಸ್ಯ ಚ ಕರ್ಮ್ಮಣೋ ಭಾರಂ ಪ್ರಪ್ತವಾನ್ ಯೋಹನ್ ತನ್ ನಿಷ್ಪಾದಯನ್ ಏತಾಂ ಕಥಾಂ ಕಥಿತವಾನ್, ಯೂಯಂ ಮಾಂ ಕಂ ಜನಂ ಜಾನೀಥ? ಅಹಮ್ ಅಭಿಷಿಕ್ತತ್ರಾತಾ ನಹಿ, ಕಿನ್ತು ಪಶ್ಯತ ಯಸ್ಯ ಪಾದಯೋಃ ಪಾದುಕಯೋ ರ್ಬನ್ಧನೇ ಮೋಚಯಿತುಮಪಿ ಯೋಗ್ಯೋ ನ ಭವಾಮಿ ತಾದೃಶ ಏಕೋ ಜನೋ ಮಮ ಪಶ್ಚಾದ್ ಉಪತಿಷ್ಠತಿ|
26 ೨೬ “ಸಹೋದರರೇ, ಅಬ್ರಹಾಮನ ವಂಶಸ್ಥರೇ, ಮತ್ತು ನಿಮ್ಮೊಂದಿಗಿರುವ ಯೆಹೂದ್ಯಮತಾವಲಂಬಿಗಳೇ, ನಮಗೆ ಈ ರಕ್ಷಣೆಯ ವಾಕ್ಯವು ಕಳುಹಿಸಲ್ಪಟ್ಟಿದೆ.
ಹೇ ಇಬ್ರಾಹೀಮೋ ವಂಶಜಾತಾ ಭ್ರಾತರೋ ಹೇ ಈಶ್ವರಭೀತಾಃ ಸರ್ವ್ವಲೋಕಾ ಯುಷ್ಮಾನ್ ಪ್ರತಿ ಪರಿತ್ರಾಣಸ್ಯ ಕಥೈಷಾ ಪ್ರೇರಿತಾ|
27 ೨೭ ಯೆರೂಸಲೇಮಿನಲ್ಲಿ ವಾಸವಾಗಿರುವವರೂ, ಅವರ ಅಧಿಕಾರಿಗಳೂ, ಆತನನ್ನಾಗಲಿ, ಪ್ರತಿ ಸಬ್ಬತ್ ದಿನದಲ್ಲಿ ಪಾರಾಯಣವಾಗುವ ಪ್ರವಾದಿಗಳ ಮಾತುಗಳನ್ನಾಗಲಿ ಗ್ರಹಿಸದೆ, ಆತನನ್ನು ಅಪರಾಧಿಯೆಂದು ತೀರ್ಪುಮಾಡಿ ಆ ಮಾತುಗಳನ್ನೇ ನೆರವೇರಿಸಿದರು.
ಯಿರೂಶಾಲಮ್ನಿವಾಸಿನಸ್ತೇಷಾಮ್ ಅಧಿಪತಯಶ್ಚ ತಸ್ಯ ಯೀಶೋಃ ಪರಿಚಯಂ ನ ಪ್ರಾಪ್ಯ ಪ್ರತಿವಿಶ್ರಾಮವಾರಂ ಪಠ್ಯಮಾನಾನಾಂ ಭವಿಷ್ಯದ್ವಾದಿಕಥಾನಾಮ್ ಅಭಿಪ್ರಾಯಮ್ ಅಬುದ್ಧ್ವಾ ಚ ತಸ್ಯ ವಧೇನ ತಾಃ ಕಥಾಃ ಸಫಲಾ ಅಕುರ್ವ್ವನ್|
28 ೨೮ ಮರಣದಂಡನೆಗೆ ಕಾರಣವೇನೂ ತಮಗೆ ಸಿಕ್ಕದಿದ್ದರೂ, ಆತನನ್ನು ಕೊಲ್ಲಿಸಬೇಕೆಂದು ಪಿಲಾತನನ್ನು ಕೇಳಿಕೊಂಡರು.
ಪ್ರಾಣಹನನಸ್ಯ ಕಮಪಿ ಹೇತುಮ್ ಅಪ್ರಾಪ್ಯಾಪಿ ಪೀಲಾತಸ್ಯ ನಿಕಟೇ ತಸ್ಯ ವಧಂ ಪ್ರಾರ್ಥಯನ್ತ|
29 ೨೯ ಆತನ ವಿಷಯವಾಗಿ ಶಾಸ್ತ್ರದಲ್ಲಿ ಬರೆದಿರುವುದೆಲ್ಲಾ ನೆರವೇರಿಸಿದ ಮೇಲೆ, ಆತನನ್ನು ಮರದ ಕಂಬದಿಂದ ಇಳಿಸಿ ಸಮಾಧಿಯಲ್ಲಿಟ್ಟರು.
ತಸ್ಮಿನ್ ಯಾಃ ಕಥಾ ಲಿಖಿತಾಃ ಸನ್ತಿ ತದನುಸಾರೇಣ ಕರ್ಮ್ಮ ಸಮ್ಪಾದ್ಯ ತಂ ಕ್ರುಶಾದ್ ಅವತಾರ್ಯ್ಯ ಶ್ಮಶಾನೇ ಶಾಯಿತವನ್ತಃ|
30 ೩೦ “ಆದರೆ ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನು.
ಕಿನ್ತ್ವೀಶ್ವರಃ ಶ್ಮಶಾನಾತ್ ತಮುದಸ್ಥಾಪಯತ್,
31 ೩೧ ಮತ್ತು ಆತನು ಗಲಿಲಾಯದಿಂದ ಯೆರೂಸಲೇಮಿಗೆ ತನ್ನ ಜೊತೆಯಲ್ಲಿ ಬಂದವರಿಗೆ ಅನೇಕ ದಿನಗಳವರೆಗೂ ಕಾಣಿಸಿಕೊಂಡನು; ಈಗ ಅವರು ಜನರಿಗೆ ಆತನ ಸಾಕ್ಷಿಗಳಾಗಿದ್ದಾರೆ.
ಪುನಶ್ಚ ಗಾಲೀಲಪ್ರದೇಶಾದ್ ಯಿರೂಶಾಲಮನಗರಂ ತೇನ ಸಾರ್ದ್ಧಂ ಯೇ ಲೋಕಾ ಆಗಚ್ಛನ್ ಸ ಬಹುದಿನಾನಿ ತೇಭ್ಯೋ ದರ್ಶನಂ ದತ್ತವಾನ್, ಅತಸ್ತ ಇದಾನೀಂ ಲೋಕಾನ್ ಪ್ರತಿ ತಸ್ಯ ಸಾಕ್ಷಿಣಃ ಸನ್ತಿ|
32 ೩೨ “ದೇವರು ನಮ್ಮ ಪೂರ್ವಿಕರಿಗೆ ಮಾಡಿದ ವಾಗ್ದಾನವನ್ನು ನಮ್ಮ ಮಕ್ಕಳಿಗೋಸ್ಕರ ನೆರವೇರಿಸಿದ್ದಾನೆಂಬ ಶುಭಸಮಾಚಾರವನ್ನು ನಾವು ನಿಮಗೆ ಸಾರುವವರಾಗಿದ್ದೇವೆ. ಆತನು ಯೇಸುವನ್ನು ಮರಣದಿಂದ ಎಬ್ಬಿಸಿದ್ದರಲ್ಲಿ;
ಅಸ್ಮಾಕಂ ಪೂರ್ವ್ವಪುರುಷಾಣಾಂ ಸಮಕ್ಷಮ್ ಈಶ್ವರೋ ಯಸ್ಮಿನ್ ಪ್ರತಿಜ್ಞಾತವಾನ್ ಯಥಾ, ತ್ವಂ ಮೇ ಪುತ್ರೋಸಿ ಚಾದ್ಯ ತ್ವಾಂ ಸಮುತ್ಥಾಪಿತವಾನಹಮ್|
33 ೩೩ ‘ನನಗೆ ನೀನು ಮಗನು, ನಾನೇ ಈ ಹೊತ್ತು ನಿನ್ನನ್ನು ಪಡೆದಿದ್ದೇನೆ’ ಎಂದು ಎರಡನೆಯ ಕೀರ್ತನೆಯಲ್ಲಿ ಬರೆದಿರುವ ಮಾತು ನೆರವೇರಿತು.
ಇದಂ ಯದ್ವಚನಂ ದ್ವಿತೀಯಗೀತೇ ಲಿಖಿತಮಾಸ್ತೇ ತದ್ ಯೀಶೋರುತ್ಥಾನೇನ ತೇಷಾಂ ಸನ್ತಾನಾ ಯೇ ವಯಮ್ ಅಸ್ಮಾಕಂ ಸನ್ನಿಧೌ ತೇನ ಪ್ರತ್ಯಕ್ಷೀ ಕೃತಂ, ಯುಷ್ಮಾನ್ ಇಮಂ ಸುಸಂವಾದಂ ಜ್ಞಾಪಯಾಮಿ|
34 ೩೪ “ಇದಲ್ಲದೆ ದೇವರು ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದ್ದರಿಂದ ಆತನು ಇನ್ನೆಂದಿಗೂ ಕೊಳೆಯುವ ಅವಸ್ಥೆಗೆ ಸೇರತಕ್ಕವನಲ್ಲವೆಂಬುದರ ಕುರಿತು ದೇವರು ಹೇಳಿರುವುದು ಏನೆಂದರೆ; ‘ದಾವೀದನಿಗೆ ಖಂಡಿತವಾಗಿ ವಾಗ್ದಾನಮಾಡಿದ ಕೃಪಾವರಗಳನ್ನು ನಿಮಗೂ ಕೊಡುತ್ತೇನೆ, ಅವು ನಂಬತಕ್ಕವುಗಳೇ’ ಎಂಬುದೆ.
ಪರಮೇಶ್ವರೇಣ ಶ್ಮಶಾನಾದ್ ಉತ್ಥಾಪಿತಂ ತದೀಯಂ ಶರೀರಂ ಕದಾಪಿ ನ ಕ್ಷೇಷ್ಯತೇ, ಏತಸ್ಮಿನ್ ಸ ಸ್ವಯಂ ಕಥಿತವಾನ್ ಯಥಾ ದಾಯೂದಂ ಪ್ರತಿ ಪ್ರತಿಜ್ಞಾತೋ ಯೋ ವರಸ್ತಮಹಂ ತುಭ್ಯಂ ದಾಸ್ಯಾಮಿ|
35 ೩೫ ಅದಕ್ಕೆ ಅನುಸಾರವಾಗಿ ಆತನು; ‘ನೀನು ನಿನ್ನ ಪ್ರಿಯನಿಗೆ ಕೊಳೆಯುವ ಅವಸ್ಥೆಯನ್ನು ನೋಡಗೊಡಿಸುವುದಿಲ್ಲವೆಂದು’ ಬೇರೊಂದು ಕೀರ್ತನೆಯಲ್ಲಿ ಹೇಳಿದ್ದಾನೆ.
ಏತದನ್ಯಸ್ಮಿನ್ ಗೀತೇಽಪಿ ಕಥಿತವಾನ್| ಸ್ವಕೀಯಂ ಪುಣ್ಯವನ್ತಂ ತ್ವಂ ಕ್ಷಯಿತುಂ ನ ಚ ದಾಸ್ಯಸಿ|
36 ೩೬ “ದಾವೀದನಾದರೋ ತನ್ನ ಜೀವಮಾನ ಕಾಲದಲ್ಲಿ ದೇವರ ಸಂಕಲ್ಪಕ್ಕನುಸಾರವಾಗಿ ಸೇವೆಮಾಡಿದ ನಂತರ, ಸತ್ತಾಗ ತನ್ನ ಪೂರ್ವಜರ ಬಳಿ ಅವನನ್ನು ಸಮಾಧಿಮಾಡಲಾಯಿತು, ಅವನ ದೇಹವು ಕೊಳೆಯುವ ಅವಸ್ಥೆಯನ್ನು ಅನುಭವಿಸಿತು.
ದಾಯೂದಾ ಈಶ್ವರಾಭಿಮತಸೇವಾಯೈ ನಿಜಾಯುಷಿ ವ್ಯಯಿತೇ ಸತಿ ಸ ಮಹಾನಿದ್ರಾಂ ಪ್ರಾಪ್ಯ ನಿಜೈಃ ಪೂರ್ವ್ವಪುರುಷೈಃ ಸಹ ಮಿಲಿತಃ ಸನ್ ಅಕ್ಷೀಯತ;
37 ೩೭ ಆದರೆ ದೇವರು ಮರಣದಿಂದ ಎಬ್ಬಿಸಿದ ಯೇಸುವು ಕೊಳೆಯುವ ಅವಸ್ಥೆಯನ್ನು ಅನುಭವಿಸಲಿಲ್ಲ.
ಕಿನ್ತು ಯಮೀಶ್ವರಃ ಶ್ಮಶಾನಾದ್ ಉದಸ್ಥಾಪಯತ್ ಸ ನಾಕ್ಷೀಯತ|
38 ೩೮ “ಆದುದರಿಂದ ಸಹೋದರರೇ, ಆತನ ಮೂಲಕವಾಗಿ ಪಾಪ ಕ್ಷಮಾಪಣೆಯು ದೊರೆಯುತ್ತದೆಂಬುದು ನಿಮಗೆ ಸಾರೋಣವಾಗಿತ್ತೆಂದು ನಿಮಗೆ ತಿಳಿದಿರಲಿ.
ಅತೋ ಹೇ ಭ್ರಾತರಃ, ಅನೇನ ಜನೇನ ಪಾಪಮೋಚನಂ ಭವತೀತಿ ಯುಷ್ಮಾನ್ ಪ್ರತಿ ಪ್ರಚಾರಿತಮ್ ಆಸ್ತೇ|
39 ೩೯ ಮೋಶೆಯ ಧರ್ಮಶಾಸ್ತ್ರದ ಮೂಲಕ ನೀವು ಬಿಡುಗಡೆಯಾಗಿ ನೀತಿವಂತರೆನಿಸಿಕೊಳ್ಳದೆ ಇದ್ದಿರಿ. ಆದರೆ ಆತನನ್ನು ನಂಬುವವರೆಲ್ಲರೂ ಆತನ ಮೂಲಕವಾಗಿ ಬಿಡುಗಡೆಹೊಂದಿ ನೀತಿವಂತರೆನಿಸಿ ಕೊಳ್ಳುತ್ತಾರೆ.
ಫಲತೋ ಮೂಸಾವ್ಯವಸ್ಥಯಾ ಯೂಯಂ ಯೇಭ್ಯೋ ದೋಷೇಭ್ಯೋ ಮುಕ್ತಾ ಭವಿತುಂ ನ ಶಕ್ಷ್ಯಥ ತೇಭ್ಯಃ ಸರ್ವ್ವದೋಷೇಭ್ಯ ಏತಸ್ಮಿನ್ ಜನೇ ವಿಶ್ವಾಸಿನಃ ಸರ್ವ್ವೇ ಮುಕ್ತಾ ಭವಿಷ್ಯನ್ತೀತಿ ಯುಷ್ಮಾಭಿ ರ್ಜ್ಞಾಯತಾಂ|
40 ೪೦ ಹೀಗಿರಲಾಗಿ ಪ್ರವಾದಿಗಳ ಗ್ರಂಥದಲ್ಲಿ ಹೇಳಿರುವುದು ನಿಮಗೆ ಸಂಭವಿಸದಂತೆ ನೋಡಿಕೊಳ್ಳಿರಿ. ಆದೇನಂದರೆ;
ಅಪರಞ್ಚ| ಅವಜ್ಞಾಕಾರಿಣೋ ಲೋಕಾಶ್ಚಕ್ಷುರುನ್ಮೀಲ್ಯ ಪಶ್ಯತ| ತಥೈವಾಸಮ್ಭವಂ ಜ್ಞಾತ್ವಾ ಸ್ಯಾತ ಯೂಯಂ ವಿಲಜ್ಜಿತಾಃ| ಯತೋ ಯುಷ್ಮಾಸು ತಿಷ್ಠತ್ಸು ಕರಿಷ್ಯೇ ಕರ್ಮ್ಮ ತಾದೃಶಂ| ಯೇನೈವ ತಸ್ಯ ವೃತ್ತಾನ್ತೇ ಯುಷ್ಮಭ್ಯಂ ಕಥಿತೇಽಪಿ ಹಿ| ಯೂಯಂ ನ ತನ್ತು ವೃತ್ತಾನ್ತಂ ಪ್ರತ್ಯೇಷ್ಯಥ ಕದಾಚನ||
41 ೪೧ “‘ಎಲೈ, ತಿರಸ್ಕಾರ ಮಾಡುವವರೇ, ಆಶ್ಚರ್ಯಪಡಿರಿ, ನಾಶವಾಗಿಹೋಗಿರಿ. ನಿಮ್ಮ ಕಾಲದಲ್ಲಿ ನಾನು ಒಂದು ಕಾರ್ಯವನ್ನು ಮಾಡುವೆನು; ಆ ಕಾರ್ಯವನ್ನು ಒಬ್ಬನು ನಿಮಗೆ ವಿವರಿಸಿದರೂ ನೀವು ಅದನ್ನು ಸ್ವಲ್ಪವೂ ನಂಬುವುದಿಲ್ಲ’” ಎಂಬುದೇ ಎಂದು ಹೇಳಿದನು.
ಯೇಯಂ ಕಥಾ ಭವಿಷ್ಯದ್ವಾದಿನಾಂ ಗ್ರನ್ಥೇಷು ಲಿಖಿತಾಸ್ತೇ ಸಾವಧಾನಾ ಭವತ ಸ ಕಥಾ ಯಥಾ ಯುಷ್ಮಾನ್ ಪ್ರತಿ ನ ಘಟತೇ|
42 ೪೨ ಪೌಲನೂ, ಬಾರ್ನಬನೂ ಸಭಾಮಂದಿರವನ್ನು ಬಿಟ್ಟು ಹೋಗುತ್ತಿರುವಾಗ ಜನರು ಈ ಮಾತುಗಳನ್ನು ಬರುವ ಸಬ್ಬತ್ ದಿನದಲ್ಲಿಯೂ ತಮಗೆ ಹೇಳಬೇಕೆಂದು ಕೇಳಿಕೊಂಡರು.
ಯಿಹೂದೀಯಭಜನಭವನಾನ್ ನಿರ್ಗತಯೋಸ್ತಯೋ ರ್ಭಿನ್ನದೇಶೀಯೈ ರ್ವಕ್ಷ್ಯಮಾಣಾ ಪ್ರಾರ್ಥನಾ ಕೃತಾ, ಆಗಾಮಿನಿ ವಿಶ್ರಾಮವಾರೇಽಪಿ ಕಥೇಯಮ್ ಅಸ್ಮಾನ್ ಪ್ರತಿ ಪ್ರಚಾರಿತಾ ಭವತ್ವಿತಿ|
43 ೪೩ ಸಭೆಯು ಮುಗಿದ ತರುವಾಯ ಯೆಹೂದ್ಯರಲ್ಲಿ, ದೈವಭಕ್ತರಾಗಿದ್ದ ಯೆಹೂದ್ಯ ಮತಾವಲಂಬಿಗಳಲ್ಲಿ ಅನೇಕರು ಪೌಲ ಮತ್ತು ಬಾರ್ನಬನನ್ನು ಹಿಂಬಾಲಿಸಿದರು. ಇವರು ಅವರ ಸಂಗಡ ಮಾತನಾಡಿ ದೇವರ ಕೃಪಾಶ್ರಯದಲ್ಲಿ ನೆಲೆಗೊಂಡಿರಬೇಕೆಂದು ಅವರನ್ನು ಪ್ರೋತ್ಸಾಹಪಡಿಸಿದರು.
ಸಭಾಯಾ ಭಙ್ಗೇ ಸತಿ ಬಹವೋ ಯಿಹೂದೀಯಲೋಕಾ ಯಿಹೂದೀಯಮತಗ್ರಾಹಿಣೋ ಭಕ್ತಲೋಕಾಶ್ಚ ಬರ್ಣಬ್ಬಾಪೌಲಯೋಃ ಪಶ್ಚಾದ್ ಆಗಚ್ಛನ್, ತೇನ ತೌ ತೈಃ ಸಹ ನಾನಾಕಥಾಃ ಕಥಯಿತ್ವೇಶ್ವರಾನುಗ್ರಹಾಶ್ರಯೇ ಸ್ಥಾತುಂ ತಾನ್ ಪ್ರಾವರ್ತ್ತಯತಾಂ|
44 ೪೪ ಮುಂದಿನ ಸಬ್ಬತ್ ದಿನದಲ್ಲಿ ಹೆಚ್ಚುಕಡಿಮೆ ಇಡೀ ಊರಿನವರು ದೇವರ ವಾಕ್ಯವನ್ನು ಕೇಳುವುದಕ್ಕೆ ಸೇರಿಬಂದರು.
ಪರವಿಶ್ರಾಮವಾರೇ ನಗರಸ್ಯ ಪ್ರಾಯೇಣ ಸರ್ವ್ವೇ ಲಾಕಾ ಈಶ್ವರೀಯಾಂ ಕಥಾಂ ಶ್ರೋತುಂ ಮಿಲಿತಾಃ,
45 ೪೫ ಆದರೆ ಜನರು ಗುಂಪುಗುಂಪಾಗಿ ಬರುವುದನ್ನು ನೋಡಿ ಯೆಹೂದ್ಯರು ಮತ್ಸರವುಳ್ಳವರಾಗಿ ಪೌಲನು ಹೇಳಿದ ಮಾತುಗಳಿಗೆ ವಿರೋಧವಾಗಿ ದೂಷಣೆಯ ಮಾತುಗಳನ್ನಾಡುತ್ತಾ ಇದ್ದರು.
ಕಿನ್ತು ಯಿಹೂದೀಯಲೋಕಾ ಜನನಿವಹಂ ವಿಲೋಕ್ಯ ಈರ್ಷ್ಯಯಾ ಪರಿಪೂರ್ಣಾಃ ಸನ್ತೋ ವಿಪರೀತಕಥಾಕಥನೇನೇಶ್ವರನಿನ್ದಯಾ ಚ ಪೌಲೇನೋಕ್ತಾಂ ಕಥಾಂ ಖಣ್ಡಯಿತುಂ ಚೇಷ್ಟಿತವನ್ತಃ|
46 ೪೬ ಆಗ ಪೌಲನೂ, ಬಾರ್ನಬನೂ ಧೈರ್ಯದಿಂದ ಮಾತನಾಡಿ; ದೇವರ ವಾಕ್ಯವನ್ನು ಮೊದಲು ನಿಮಗೇ ಹೇಳುವುದು ಅಗತ್ಯವಾಗಿತ್ತು; ಆದರೆ ನೀವು ಅದನ್ನು ತಳ್ಳಿಬಿಟ್ಟು ನಿಮ್ಮನ್ನು ನಿತ್ಯಜೀವಕ್ಕೆ ಅಪಾತ್ರರೆಂದು ತೀರ್ಪು ಮಾಡಿಕೊಂಡಿದ್ದರಿಂದ ಇಗೋ, ನಾವು ನಿಮ್ಮನ್ನು ಬಿಟ್ಟು ಅನ್ಯಜನರ ಕಡೆಗೆ ಹೋಗುತ್ತೇವೆ. (aiōnios g166)
ತತಃ ಪೌಲಬರ್ಣಬ್ಬಾವಕ್ಷೋಭೌ ಕಥಿತವನ್ತೌ ಪ್ರಥಮಂ ಯುಷ್ಮಾಕಂ ಸನ್ನಿಧಾವೀಶ್ವರೀಯಕಥಾಯಾಃ ಪ್ರಚಾರಣಮ್ ಉಚಿತಮಾಸೀತ್ ಕಿನ್ತುಂ ತದಗ್ರಾಹ್ಯತ್ವಕರಣೇನ ಯೂಯಂ ಸ್ವಾನ್ ಅನನ್ತಾಯುಷೋಽಯೋಗ್ಯಾನ್ ದರ್ಶಯಥ, ಏತತ್ಕಾರಣಾದ್ ವಯಮ್ ಅನ್ಯದೇಶೀಯಲೋಕಾನಾಂ ಸಮೀಪಂ ಗಚ್ಛಾಮಃ| (aiōnios g166)
47 ೪೭ ಹಾಗೆಯೇ ಕರ್ತನು ನಮಗೆ ಅಪ್ಪಣೆ ಕೊಟ್ಟಿದ್ದಾನೆ, ಹೇಗೆಂದರೆ; ನೀನು ಲೋಕದ ಕಟ್ಟಕಡೆಯ ವರೆಗೆ ರಕ್ಷಕನಾಗಿರುವಂತೆ ನಿನ್ನನ್ನು ಅನ್ಯಜನಾಂಗಗಳಿಗೂ ಬೆಳಕನ್ನಾಗಿ ನೇಮಿಸಿದ್ದೇನೆ ಎಂದು ದೇವರು ಹೇಳಿದ್ದಾನೆ ಎಂದರು.
ಪ್ರಭುರಸ್ಮಾನ್ ಇತ್ಥಮ್ ಆದಿಷ್ಟವಾನ್ ಯಥಾ, ಯಾವಚ್ಚ ಜಗತಃ ಸೀಮಾಂ ಲೋಕಾನಾಂ ತ್ರಾಣಕಾರಣಾತ್| ಮಯಾನ್ಯದೇಶಮಧ್ಯೇ ತ್ವಂ ಸ್ಥಾಪಿತೋ ಭೂಃ ಪ್ರದೀಪವತ್||
48 ೪೮ ಅಲ್ಲಿದ್ದ ಅನ್ಯಜನರು ಆ ಮಾತನ್ನು ಕೇಳಿ ಸಂತೋಷಪಟ್ಟು, ದೇವರ ವಾಕ್ಯವನ್ನು ಹೊಗಳಿದರು. ಮತ್ತು ನಿತ್ಯಜೀವಕ್ಕೆ ನೇಮಿಸಲ್ಪಟ್ಟವರೆಲ್ಲರೂ ನಂಬಿದರು. (aiōnios g166)
ತದಾ ಕಥಾಮೀದೃಶೀಂ ಶ್ರುತ್ವಾ ಭಿನ್ನದೇಶೀಯಾ ಆಹ್ಲಾದಿತಾಃ ಸನ್ತಃ ಪ್ರಭೋಃ ಕಥಾಂ ಧನ್ಯಾಂ ಧನ್ಯಾಮ್ ಅವದನ್, ಯಾವನ್ತೋ ಲೋಕಾಶ್ಚ ಪರಮಾಯುಃ ಪ್ರಾಪ್ತಿನಿಮಿತ್ತಂ ನಿರೂಪಿತಾ ಆಸನ್ ತೇ ವ್ಯಶ್ವಸನ್| (aiōnios g166)
49 ೪೯ ಕರ್ತನ ವಾಕ್ಯವು ಆ ಸೀಮೆಯ ಎಲ್ಲಾ ಕಡೆಗಳಲ್ಲಿ ಹಬ್ಬುತ್ತಾ ಬಂದಿತು.
ಇತ್ಥಂ ಪ್ರಭೋಃ ಕಥಾ ಸರ್ವ್ವೇದೇಶಂ ವ್ಯಾಪ್ನೋತ್|
50 ೫೦ ಆದರೆ ಯೆಹೂದ್ಯರು ತಮ್ಮ ಮತಕ್ಕೆ ಸೇರಿದ್ದ ಭಕ್ತೆಯರಾದ ಕುಲೀನ ಸ್ತ್ರೀಯರನ್ನೂ, ಊರಿನ ಪ್ರಮುಖರನ್ನೂ, ಹುರಿದುಂಬಿಸಿ ಪೌಲ ಮತ್ತು ಬಾರ್ನಬರ ವಿರೋಧವಾಗಿ ಹಿಂಸೆಯನ್ನೆಬ್ಬಿಸಿ ಅವರನ್ನು ತಮ್ಮ ಪ್ರದೇಶದಿಂದ ಆಚೆಗೆ ಅಟ್ಟಿಬಿಟ್ಟರು.
ಕಿನ್ತು ಯಿಹೂದೀಯಾ ನಗರಸ್ಯ ಪ್ರಧಾನಪುರುಷಾನ್ ಸಮ್ಮಾನ್ಯಾಃ ಕಥಿಪಯಾ ಭಕ್ತಾ ಯೋಷಿತಶ್ಚ ಕುಪ್ರವೃತ್ತಿಂ ಗ್ರಾಹಯಿತ್ವಾ ಪೌಲಬರ್ಣಬ್ಬೌ ತಾಡಯಿತ್ವಾ ತಸ್ಮಾತ್ ಪ್ರದೇಶಾದ್ ದೂರೀಕೃತವನ್ತಃ|
51 ೫೧ ಪೌಲ ಬಾರ್ನಬರು ತಮ್ಮ ಕಾಲಿಗೆ ಹತ್ತಿದ್ದ ಧೂಳನ್ನು ಝಾಡಿಸಿಬಿಟ್ಟು ಇಕೋನ್ಯಕ್ಕೆ ಹೋದರು.
ಅತಃ ಕಾರಣಾತ್ ತೌ ನಿಜಪದಧೂಲೀಸ್ತೇಷಾಂ ಪ್ರಾತಿಕೂಲ್ಯೇನ ಪಾತಯಿತ್ವೇಕನಿಯಂ ನಗರಂ ಗತೌ|
52 ೫೨ ಶಿಷ್ಯರಾದವರು ಸಂತೋಷಭರಿತರೂ, ಪವಿತ್ರಾತ್ಮಭರಿತರೂ ಆಗಿದ್ದರು.
ತತಃ ಶಿಷ್ಯಗಣ ಆನನ್ದೇನ ಪವಿತ್ರೇಣಾತ್ಮನಾ ಚ ಪರಿಪೂರ್ಣೋಭವತ್|

< ಅಪೊಸ್ತಲರ ಕೃತ್ಯಗಳ 13 >