< ತಿಮೊಥೆಯನಿಗೆ ಬರೆದ ಎರಡನೆಯ ಪತ್ರಿಕೆ 4 >

1 ನಾನು ದೇವರ ಸಮಕ್ಷಮದಲ್ಲಿ ಮತ್ತು ಜೀವಿಸುವವರಿಗೂ ಸತ್ತವರಿಗೂ ನ್ಯಾಯತೀರಿಸುವುದಕ್ಕೆ ಬರುವ ಕ್ರಿಸ್ತ ಯೇಸುವಿನ ಪ್ರತ್ಯಕ್ಷತೆಯನ್ನೂ, ಆತನ ರಾಜ್ಯವನ್ನೂ ಮುಂದಿಟ್ಟು ನಿನಗೆ ಖಂಡಿತವಾಗಿ ಹೇಳುವುದೇನಂದರೆ,
ܡܤܗܕ ܐܢܐ ܠܟ ܩܕܡ ܐܠܗܐ ܘܡܪܢ ܝܫܘܥ ܡܫܝܚܐ ܗܘ ܕܥܬܝܕ ܠܡܕܢ ܚܝܐ ܘܡܝܬܐ ܒܓܠܝܢܐ ܕܡܠܟܘܬܗ
2 ದೇವರ ವಾಕ್ಯವನ್ನು ಸಾರು, ಅನುಕೂಲವಾದ ಕಾಲದಲ್ಲಿಯೂ ಅನುಕೂಲವಿಲ್ಲದ ಕಾಲದಲ್ಲಿಯೂ ಅದರಲ್ಲಿ ಆಸಕ್ತನಾಗಿರು. ಪೂರ್ಣ ದೀರ್ಘಶಾಂತಿಯಿಂದ ಉಪದೇಶಿಸುತ್ತಾ ಖಂಡಿಸು, ಗದರಿಸು, ಎಚ್ಚರಿಸು.
ܐܟܪܙ ܡܠܬܐ ܘܩܘܡ ܒܚܦܝܛܘܬܐ ܒܙܒܢܐ ܘܕܠܐ ܙܒܢܐ ܐܟܤ ܘܟܘܢ ܒܟܠܗ ܡܓܪܬ ܪܘܚܐ ܘܝܘܠܦܢܐ
3 ಯಾಕೆಂದರೆ ಜನರು ಸ್ವಸ್ಥಬೋಧನೆಯನ್ನು ಒಪ್ಪಲಾರದ ಕಾಲವು ಬರುತ್ತದೆ. ಅದರಲ್ಲಿ ಅವರು ಕಿವಿಗೆ ಇಂಪಾಗುವ ಹಾಗೆ ತಮ್ಮ ದುರಾಶೆಗಳಿಗೆ ಅನುಕೂಲವಾದ ಉಪದೇಶಗಳನ್ನು ನೀಡುವ ಅನೇಕ ಉಪದೇಶಕರನ್ನು ಇಟ್ಟುಕೊಳ್ಳುವರು.
ܢܗܘܐ ܓܝܪ ܙܒܢܐ ܕܠܝܘܠܦܢܐ ܚܠܝܡܐ ܠܐ ܢܫܬܡܥܘܢ ܐܠܐ ܐܝܟ ܪܓܝܓܬܗܘܢ ܢܤܓܘܢ ܠܢܦܫܗܘܢ ܡܠܦܢܐ ܒܚܘܬܚܬܐ ܕܡܫܡܥܬܗܘܢ
4 ಅವರು ಸತ್ಯ ಬೋಧನೆಗೆ ಕಿವಿಗೊಡದೆ ಕಟ್ಟುಕಥೆಗಳನ್ನು ಕೇಳುವುದಕ್ಕೆ ಇಚ್ಛಿಸುವರು.
ܘܡܢ ܫܪܪܐ ܢܗܦܟܘܢ ܐܕܢܗܘܢ ܠܫܘܥܝܬܐ ܕܝܢ ܢܤܛܘܢ
5 ಆದರೆ ನೀನು ಎಲ್ಲಾ ವಿಷಯಗಳಲ್ಲಿಯೂ ಸ್ವಸ್ಥಚಿತ್ತನಾಗಿರು, ಹಿಂಸೆಯನ್ನು ತಾಳಿಕೋ, ಸುವಾರ್ತಿಕನ ಕೆಲಸವನ್ನು ಮಾಡು, ನಿನಗೆ ನೇಮಿಸಿರುವ ಸೇವೆಯನ್ನು ಲೋಪವಿಲ್ಲದೆ ಮಾಡು.
ܐܢܬ ܕܝܢ ܗܘܝܬ ܥܝܪ ܒܟܠܡܕܡ ܘܤܝܒܪ ܒܝܫܬܐ ܘܥܒܕܐ ܥܒܕ ܕܡܤܒܪܢܐ ܘܬܫܡܫܬܟ ܫܠܡ
6 ಯಾಕೆಂದರೆ ನಾನಂತೂ ಈಗಲೇ ಪಾನದ್ರವ್ಯವಾಗಿ ಅರ್ಪಿತನಾಗುತ್ತಾ ಇದ್ದೇನೆ. ನನ್ನ ನಿರ್ಗಮನದ ಸಮಯವು ಸಮೀಪವಾಗುತ್ತಾ ಬಂದಿದೆ.
ܐܢܐ ܓܝܪ ܡܟܝܠ ܡܬܢܩܐ ܐܢܐ ܘܙܒܢܐ ܕܐܫܬܪܐ ܡܛܐ
7 ಶ್ರೇಷ್ಠ ಹೋರಾಟವನ್ನು ಮಾಡಿದ್ದೇನೆ, ನನ್ನ ಓಟವನ್ನು ಓಡಿಮುಗಿಸಿದ್ದೇನೆ, ಕ್ರಿಸ್ತ ನಂಬಿಕೆಯನ್ನು ಕಾಪಾಡಿಕೊಂಡಿದ್ದೇನೆ.
ܐܓܘܢܐ ܫܦܝܪܐ ܐܬܟܬܫܬ ܘܪܗܛܝ ܫܠܡܬ ܘܗܝܡܢܘܬܝ ܢܛܪܬ
8 ನೀತಿವಂತರಿಗೆ ದೊರಕುವ ಜಯಮಾಲೆಯು ಮುಂದೆ ನನಗಾಗಿ ಸಿದ್ಧವಾಗಿದೆ, ಅದನ್ನು ನೀತಿವಂತನಾದ ನ್ಯಾಯಾಧಿಪತಿಯಾಗಿರುವ ಕರ್ತನು ಆ ದಿನದಲ್ಲಿ ನನಗೆ ಕೊಡುವನು, ನನಗೆ ಮಾತ್ರವಲ್ಲದೆ ತನ್ನ ಪ್ರತ್ಯಕ್ಷತೆಯನ್ನು ಪ್ರೀತಿಸುವವರೆಲ್ಲರಿಗೂ ಕೊಡುವನು.
ܘܡܢ ܗܫܐ ܢܛܝܪ ܠܝ ܟܠܝܠܐ ܕܟܐܢܘܬܐ ܕܢܦܪܥܝܘܗܝ ܠܝ ܡܪܝ ܒܝܘܡܐ ܗܘ ܕܗܘܝܘ ܕܝܢܐ ܟܐܢܐ ܠܐ ܕܝܢ ܒܠܚܘܕ ܠܝ ܐܠܐ ܐܦ ܠܐܝܠܝܢ ܕܐܚܒܘ ܠܓܠܝܢܗ
9 ನೀನು ನನ್ನ ಬಳಿಗೆ ಬೇಗನೇ ಬರುವುದಕ್ಕೆ ಪ್ರಯತ್ನಪಡು,
ܢܬܒܛܠ ܠܟ ܕܬܐܬܐ ܠܘܬܝ ܒܥܓܠ
10 ೧೦ ಯಾಕೆಂದರೆ ದೇಮನು ಇಹಲೋಕವನ್ನು ಪ್ರೀತಿಸಿ, ನನ್ನನ್ನು ಬಿಟ್ಟು ಥೆಸಲೋನಿಕಕ್ಕೆ ಹೋದನು. ಕ್ರೆಸ್ಕನು ಗಲಾತ್ಯಕ್ಕೂ ತೀತನು ದಲ್ಮಾತ್ಯಕ್ಕೂ ಹೋದರು. (aiōn g165)
ܕܡܐ ܓܝܪ ܫܒܩܢܝ ܘܐܚܒ ܥܠܡܐ ܗܢܐ ܘܐܙܠ ܠܗ ܠܬܤܠܘܢܝܩܐ ܩܪܤܩܘܤ ܠܓܠܛܝܐ ܛܛܘܤ ܠܕܠܡܛܝܐ (aiōn g165)
11 ೧೧ ಲೂಕನು ಮಾತ್ರ ನನ್ನ ಜೊತೆಯಲ್ಲಿದ್ದಾನೆ. ಮಾರ್ಕನನ್ನು ನಿನ್ನ ಸಂಗಡ ಕರೆದುಕೊಂಡು ಬಾ, ಅವನು ನನಗೆ ಸೇವೆಯಲ್ಲಿ ಉಪಯುಕ್ತನಾಗಿದ್ದಾನೆ.
ܠܘܩܐ ܗܘ ܒܠܚܘܕܘܗܝ ܥܡܝ ܠܡܪܩܘܤ ܕܒܪ ܘܐܝܬܝܗܝ ܥܡܟ ܥܗܢ ܠܝ ܓܝܪ ܠܬܫܡܫܬܐ
12 ೧೨ ತುಖಿಕನನ್ನು ಎಫೆಸಕ್ಕೆ ಕಳುಹಿಸಿದೆನು. ತ್ರೋವದಲ್ಲಿ ನಾನು ಕರ್ಪನ ಬಳಿಯಲ್ಲಿ ಬಿಟ್ಟು ಬಂದ ಮೇಲಂಗಿಯನ್ನೂ, ಪುಸ್ತಕಗಳನ್ನೂ, ಮುಖ್ಯವಾಗಿ ಚರ್ಮದ ಕಾಗದಗಳನ್ನೂ ನೀನು ಬರುವಾಗ ತೆಗೆದುಕೊಂಡು ಬಾ.
ܠܛܘܟܝܩܘܤ ܕܝܢ ܫܕܪܬ ܠܐܦܤܘܤ
13 ೧೩
ܒܝܬ ܟܬܒܐ ܕܝܢ ܕܫܒܩܬ ܒܛܪܘܐܘܤ ܠܘܬ ܩܪܦܘܤ ܡܐ ܕܐܬܐ ܐܢܬ ܐܝܬܝܗܝ ܘܟܬܒܐ ܝܬܝܪܐܝܬ ܟܪܟܐ ܕܡܓܠܐ
14 ೧೪ ಕಂಚುಗಾರನಾದ ಅಲೆಕ್ಸಾಂದ್ರನು ನನಗೆ ಬಹಳ ಕೇಡುಮಾಡಿದನು. ಕರ್ತನು ಅವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಅವನಿಗೆ ಕೊಡುವನು.
ܐܠܟܤܢܕܪܤ ܩܝܢܝܐ ܒܝܫܬܐ ܤܓܝܐܬܐ ܚܘܝܢܝ ܦܪܥ ܠܗ ܡܪܢ ܐܝܟ ܥܒܕܘܗܝ
15 ೧೫ ನೀನು ಸಹ ಅವನ ವಿಷಯದಲ್ಲಿ ಎಚ್ಚರಿಕೆಯಾಗಿರು, ಅವನು ನಮ್ಮ ಮಾತುಗಳನ್ನು ಬಹಳವಾಗಿ ಎದುರಿಸಿದನು.
ܐܦ ܐܢܬ ܕܝܢ ܐܙܕܗܪ ܡܢܗ ܛܒ ܓܝܪ ܙܩܝܦ ܠܘܩܒܠ ܡܠܝܢ
16 ೧೬ ನಾನು ಮೊದಲನೆ ಸಾರಿ ಪ್ರತಿವಾದ ಮಾಡಿದಾಗ ಯಾರೂ ನನ್ನ ಸಂಗಡ ಇರಲಿಲ್ಲ, ಎಲ್ಲರೂ ನನ್ನನ್ನು ಕೈಬಿಟ್ಟರು. ಇದು ಅವರಿಗೆ ದೋಷವಾಗಿ ಎಣಿಸಲ್ಪಡದೆ ಇರಲಿ.
ܒܡܦܩ ܒܪܘܚܝ ܩܕܡܝܐ ܠܐ ܐܢܫ ܗܘܐ ܥܡܝ ܐܠܐ ܟܠܗܘܢ ܫܒܩܘܢܝ ܠܐ ܬܬܚܫܒ ܠܗܘܢ ܗܕܐ
17 ೧೭ ಆದರೆ ಕರ್ತನು ನನ್ನ ಬಳಿಯಲ್ಲಿ ನಿಂತು ನನ್ನನ್ನು ಬಲಪಡಿಸಿ ನನ್ನ ಮೂಲಕ ಸುವಾರ್ತೆಯು ಸಂಪೂರ್ಣವಾಗಿ ಸಾರಲ್ಪಡುವಂತೆಯೂ, ಅನ್ಯ ಜನರೆಲ್ಲರೂ ಅದನ್ನು ಕೇಳುವಂತೆಯೂ ಮಾಡಿದನು. ಇದಲ್ಲದೆ ಆತನು ನನ್ನನ್ನು ಸಿಂಹದ ಬಾಯೊಳಗಿಂದ ತಪ್ಪಿಸಿದನು.
ܡܪܝ ܕܝܢ ܩܡ ܠܝ ܘܚܝܠܢܝ ܕܒܝ ܟܪܘܙܘܬܐ ܬܫܬܠܡ ܘܢܫܡܥܘܢ ܥܡܡܐ ܟܠܗܘܢ ܕܐܬܦܨܝܬ ܡܢ ܦܘܡܐ ܕܐܪܝܐ
18 ೧೮ ಪ್ರತಿಯೊಂದು ದುಷ್ಕೃತ್ಯದಿಂದ ಕರ್ತನು ನನ್ನನ್ನು ಕಾಪಾಡಿ ತನ್ನೊಂದಿಗೆ ಪರಲೋಕ ರಾಜ್ಯಕ್ಕೆ ಸೇರಿಸುವನು. ಯುಗಯುಗಾಂತರಗಳಲ್ಲಿಯೂ ಆತನಿಗೆ ಸ್ತೋತ್ರ. ಆಮೆನ್. (aiōn g165)
ܘܢܦܨܝܢܝ ܡܪܝ ܡܢ ܟܠ ܥܒܕ ܒܝܫ ܘܢܚܝܢܝ ܒܡܠܟܘܬܗ ܕܒܫܡܝܐ ܕܠܗ ܫܘܒܚܐ ܠܥܠܡ ܥܠܡܝܢ ܐܡܝܢ (aiōn g165)
19 ೧೯ ಪ್ರಿಸ್ಕಿಲ್ಲಳಿಗೂ, ಅಕ್ವಿಲ್ಲನಿಗೂ, ಒನೇಸಿಪೊರನ ಮನೆಯವರಿಗೂ ವಂದನೆಹೇಳು.
ܗܒ ܫܠܡܐ ܠܦܪܝܤܩܠܐ ܘܠܐܩܠܘܤ ܘܠܒܝܬܐ ܕܐܢܤܝܦܘܪܘܤ
20 ೨೦ ಎರಸ್ತನು ಕೊರಿಂಥದಲ್ಲಿ ನಿಂತನು. ತ್ರೊಫಿಮನು ಅಸ್ವಸ್ಥನಾಗಿದ್ದುದರಿಂದ ಅವನನ್ನು ಮಿಲೇತದಲ್ಲಿ ಬಿಟ್ಟೆನು.
ܐܪܤܛܘܤ ܦܫ ܠܗ ܒܩܘܪܢܬܘܤ ܛܪܘܦܝܡܘܤ ܕܝܢ ܫܒܩܬܗ ܟܕ ܟܪܝܗ ܒܡܝܠܝܛܘܤ ܡܕܝܢܬܐ
21 ೨೧ ಚಳಿಗಾಲಕ್ಕೆ ಮುಂಚೆಯೇ ಬರುವುದಕ್ಕೆ ಪ್ರಯತ್ನಿಸು. ಯುಬೂಲನು, ಪೊದೆಯನೂ, ಲೀನನೂ, ಕ್ಲೌದ್ಯಳೂ ಉಳಿದ ಸಹೋದರರೆಲ್ಲರೂ ನಿನಗೆ ವಂದನೆ ಹೇಳುತ್ತಾರೆ.
ܢܬܒܛܠ ܠܟ ܕܩܕܡ ܤܬܘܐ ܬܐܬܐ ܫܐܠ ܒܫܠܡܟ ܐܘܒܘܠܘܤ ܘܦܘܕܤ ܘܠܝܢܘܤ ܘܩܠܘܕܝܐ ܘܐܚܐ ܟܠܗܘܢ
22 ೨೨ ಕರ್ತನು ನಿನ್ನ ಆತ್ಮದೊಂದಿಗೆ ಇರಲಿ. ಆತನ ಕೃಪೆಯು ನಿಮ್ಮೊಂದಿಗಿರಲಿ.
ܡܪܢ ܝܫܘܥ ܡܫܝܚܐ ܥܡ ܪܘܚܟ ܛܝܒܘܬܐ ܥܡܟ ܐܡܝܢ

< ತಿಮೊಥೆಯನಿಗೆ ಬರೆದ ಎರಡನೆಯ ಪತ್ರಿಕೆ 4 >