< ಥೆಸಲೋನಿಕದವರಿಗೆ ಎರಡನೆಯ ಪತ್ರಿಕೆ 1 >
1 ೧ ನಮ್ಮ ತಂದೆಯಾದ ದೇವರಲ್ಲಿಯೂ ಕರ್ತನಾದ ಯೇಸು ಕ್ರಿಸ್ತನಲ್ಲಿಯೂ ಇರುವ ಥೆಸಲೋನಿಕದವರ ಸಭೆಗೆ ಪೌಲ, ಸಿಲ್ವಾನ, ಮತ್ತು ತಿಮೊಥೆ ಎಂಬ ನಾವು ಬರೆಯುವುದೇನಂದರೆ,
ಪೌಲಃ ಸಿಲ್ವಾನಸ್ತೀಮಥಿಯಶ್ಚೇತಿನಾಮಾನೋ ವಯಮ್ ಅಸ್ಮದೀಯತಾತಮ್ ಈಶ್ವರಂ ಪ್ರಭುಂ ಯೀಶುಖ್ರೀಷ್ಟಞ್ಚಾಶ್ರಿತಾಂ ಥಿಷಲನೀಕಿನಾಂ ಸಮಿತಿಂ ಪ್ರತಿ ಪತ್ರಂ ಲಿಖಾಮಃ|
2 ೨ ತಂದೆಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಲಭಿಸಲಿ.
ಅಸ್ಮಾಕಂ ತಾತ ಈಶ್ವರಃ ಪ್ರಭು ರ್ಯೀಶುಖ್ರೀಷ್ಟಶ್ಚ ಯುಷ್ಮಾಸ್ವನುಗ್ರಹಂ ಶಾನ್ತಿಞ್ಚ ಕ್ರಿಯಾಸ್ತಾಂ|
3 ೩ ಸಹೋದರರೇ, ನಾವು ಯಾವಾಗಲೂ ನಿಮ್ಮನ್ನು ಕುರಿತು ದೇವರಿಗೆ ಕೃತಜ್ಞತಾಸ್ತುತಿ ಮಾಡುವುದಕ್ಕೆ ಬದ್ಧರಾಗಿದ್ದೇವೆ, ಹಾಗೆ ಮಾಡುವುದು ಯೋಗ್ಯವಾಗಿದೆ. ಏಕೆಂದರೆ ನೀವು ನಂಬಿಕೆಯಲ್ಲಿ ಬಹಳ ಅಭಿವೃದ್ಧಿ ಹೊಂದುತ್ತಾ, ಪರಸ್ಪರವಾದ ಪ್ರೀತಿ ನಿಮ್ಮೆಲ್ಲರಲ್ಲಿಯೂ ಹೆಚ್ಚಾಗುತ್ತಿದೆ.
ಹೇ ಭ್ರಾತರಃ, ಯುಷ್ಮಾಕಂ ಕೃತೇ ಸರ್ವ್ವದಾ ಯಥಾಯೋಗ್ಯಮ್ ಈಶ್ವರಸ್ಯ ಧನ್ಯವಾದೋ ಽಸ್ಮಾಭಿಃ ಕರ್ತ್ತವ್ಯಃ, ಯತೋ ಹೇತೋ ರ್ಯುಷ್ಮಾಕಂ ವಿಶ್ವಾಸ ಉತ್ತರೋತ್ತರಂ ವರ್ದ್ಧತೇ ಪರಸ್ಪರಮ್ ಏಕೈಕಸ್ಯ ಪ್ರೇಮ ಚ ಬಹುಫಲಂ ಭವತಿ|
4 ೪ ಹೀಗಿರುವುದರಿಂದ ನಿಮಗೆ ಬಂದಿರುವ ಎಲ್ಲಾ ಹಿಂಸೆಗಳಲ್ಲಿಯೂ ನೀವು ಅನುಭವಿಸುತ್ತಿರುವ ಎಲ್ಲಾ ಸಂಕಟಗಳಲ್ಲಿಯೂ ತೋರಿಬಂದ ನಿಮ್ಮ ತಾಳ್ಮೆ ನಂಬಿಕೆಗಳ ನಿಮಿತ್ತ ದೇವ ಜನರ ಸಭೆಗಳಲ್ಲಿ ನಾವೇ ಹೆಮ್ಮೆಯಿಂದ ಮಾತನಾಡುತ್ತೇವೆ.
ತಸ್ಮಾದ್ ಯುಷ್ಮಾಭಿ ರ್ಯಾವನ್ತ ಉಪದ್ರವಕ್ಲೇಶಾಃ ಸಹ್ಯನ್ತೇ ತೇಷು ಯದ್ ಧೇರ್ಯ್ಯಂ ಯಶ್ಚ ವಿಶ್ವಾಸಃ ಪ್ರಕಾಶ್ಯತೇ ತತ್ಕಾರಣಾದ್ ವಯಮ್ ಈಶ್ವರೀಯಸಮಿತಿಷು ಯುಷ್ಮಾಭಿಃ ಶ್ಲಾಘಾಮಹೇ|
5 ೫ ದೇವರ ನೀತಿಯುಳ್ಳ ತೀರ್ಪಿಗೆ ಪ್ರಮಾಣ ಯಾವುದೆಂದರೆ, ನೀವು ಪ್ರಯಾಸಪಡುತ್ತಿರುವ ದೇವರ ರಾಜ್ಯಕ್ಕೆ ನಿಮ್ಮನ್ನು ಯೋಗ್ಯರನ್ನಾಗಿಸುವುದು.
ತಚ್ಚೇಶ್ವರಸ್ಯ ನ್ಯಾಯವಿಚಾರಸ್ಯ ಪ್ರಮಾಣಂ ಭವತಿ ಯತೋ ಯೂಯಂ ಯಸ್ಯ ಕೃತೇ ದುಃಖಂ ಸಹಧ್ವಂ ತಸ್ಯೇಶ್ವರೀಯರಾಜ್ಯಸ್ಯ ಯೋಗ್ಯಾ ಭವಥ|
6 ೬ ನಿಮ್ಮನ್ನು ಸಂಕಟಪಡಿಸುವವರಿಗೆ ಪ್ರತಿಯಾಗಿ ಸಂಕಟವನ್ನೂ, ಸಂಕಟಪಡುವವರಾದ ನಿಮಗೆ ನಮ್ಮೊಡನೆ ಉಪಶಮನವನ್ನೂ ಕೊಡುವುದು ದೇವರ ಎಣಿಕೆಯಲ್ಲಿ ನ್ಯಾಯವಾಗಿದೆಯಷ್ಟೆ.
ಯತಃ ಸ್ವಕೀಯಸ್ವರ್ಗದೂತಾನಾಂ ಬಲೈಃ ಸಹಿತಸ್ಯ ಪ್ರಭೋ ರ್ಯೀಶೋಃ ಸ್ವರ್ಗಾದ್ ಆಗಮನಕಾಲೇ ಯುಷ್ಮಾಕಂ ಕ್ಲೇಶಕೇಭ್ಯಃ ಕ್ಲೇಶೇನ ಫಲದಾನಂ ಸಾರ್ದ್ಧಮಸ್ಮಾಭಿಶ್ಚ
7 ೭ ಯೇಸು ಕರ್ತನು ತನ್ನ ಶಕ್ತಿಯುತ ದೇವದೂತರೊಂದಿಗೆ ಅಗ್ನಿ ಜ್ವಾಲೆಗಳ ಮೂಲಕ ಪರಲೋಕದಿಂದ ಪ್ರತ್ಯಕ್ಷನಾಗುವ ಕಾಲದಲ್ಲಿ ಅದನ್ನು ಕೊಡುವನು.
ಕ್ಲಿಶ್ಯಮಾನೇಭ್ಯೋ ಯುಷ್ಮಭ್ಯಂ ಶಾನ್ತಿದಾನಮ್ ಈಶ್ವರೇಣ ನ್ಯಾಯ್ಯಂ ಭೋತ್ಸ್ಯತೇ;
8 ೮ ಆಗ ನಮ್ಮ ಕರ್ತನಾದ ಯೇಸುವು ದೇವರನ್ನರಿಯದವರಿಗೂ ತನ್ನ ಸುವಾರ್ತೆಗೆ ವಿಧೇಯರಾಗದವರಿಗೂ ಪ್ರತಿಕಾರ ಮಾಡುವನು.
ತದಾನೀಮ್ ಈಶ್ವರಾನಭಿಜ್ಞೇಭ್ಯೋ ಽಸ್ಮತ್ಪ್ರಭೋ ರ್ಯೀಶುಖ್ರೀಷ್ಟಸ್ಯ ಸುಸಂವಾದಾಗ್ರಾಹಕೇಭ್ಯಶ್ಚ ಲೋಕೇಭ್ಯೋ ಜಾಜ್ವಲ್ಯಮಾನೇನ ವಹ್ನಿನಾ ಸಮುಚಿತಂ ಫಲಂ ಯೀಶುನಾ ದಾಸ್ಯತೇ;
9 ೯ ಅವರು ಕರ್ತನ ಸಮ್ಮುಖಕ್ಕೂ ಆತನ ಪರಾಕ್ರಮದ ವೈಭವಕ್ಕೂ ದೂರವಾಗಿ ನಿತ್ಯನಾಶನವೆಂಬ ದಂಡನೆಯನ್ನು ಅನುಭವಿಸುವರು. (aiōnios )
ತೇ ಚ ಪ್ರಭೋ ರ್ವದನಾತ್ ಪರಾಕ್ರಮಯುಕ್ತವಿಭವಾಚ್ಚ ಸದಾತನವಿನಾಶರೂಪಂ ದಣ್ಡಂ ಲಪ್ಸ್ಯನ್ತೇ, (aiōnios )
10 ೧೦ ಆ ದಿನದಲ್ಲಿ ಆತನು ಬರುವಾಗ ತನ್ನ ಪರಿಶುದ್ಧ ಜನರಿಂದ ಮಹಿಮೆ ಹೊಂದಿದವನಾಗಿಯೂ ಮತ್ತು ನಾವು ನಿಮಗೆ ಹೇಳಿದ ಸಾಕ್ಷಿಯನ್ನು ನಂಬಿದವರೆಲ್ಲರ ಮೂಲಕ ತನ್ನ ವಿಷಯದಲ್ಲಿ ಆಶ್ಚರ್ಯ ಹುಟ್ಟಿಸುವನು.
ಕಿನ್ತು ತಸ್ಮಿನ್ ದಿನೇ ಸ್ವಕೀಯಪವಿತ್ರಲೋಕೇಷು ವಿರಾಜಿತುಂ ಯುಷ್ಮಾನ್ ಅಪರಾಂಶ್ಚ ಸರ್ವ್ವಾನ್ ವಿಶ್ವಾಸಿಲೋಕಾನ್ ವಿಸ್ಮಾಪಯಿತುಞ್ಚ ಸ ಆಗಮಿಷ್ಯತಿ ಯತೋ ಽಸ್ಮಾಕಂ ಪ್ರಮಾಣೇ ಯುಷ್ಮಾಭಿ ರ್ವಿಶ್ವಾಸೋಽಕಾರಿ|
11 ೧೧ ಆದುದರಿಂದ ನಿಮಗೋಸ್ಕರ ಯಾವಾಗಲೂ ಪ್ರಾರ್ಥನೆಮಾಡಿ, ನಮ್ಮ ದೇವರು ನಿಮ್ಮನ್ನು ಕರೆದದ್ದಕ್ಕೆ ತಾನೇ ನಿಮ್ಮನ್ನು ಯೋಗ್ಯರೆಂದು ಎಣಿಸಬೇಕೆಂತಲೂ, ಸತ್ಕ್ರಿಯೆಗಳಿಗಾಗಿರುವ ನಿಮ್ಮ ಸಕಲ ಆಸೆಗಳನ್ನೂ, ನಂಬಿಕೆಯ ಫಲವಾದ ನಿಮ್ಮ ಕೆಲಸವನ್ನೂ ಶಕ್ತಿಪೂರ್ವಕವಾಗಿ ಈಡೇರಿಸಬೇಕೆಂತಲೂ ಬೇಡಿಕೊಳ್ಳುತ್ತೇವೆ.
ಅತೋಽಸ್ಮಾಕಮ್ ಈಶ್ವರೋ ಯುಷ್ಮಾನ್ ತಸ್ಯಾಹ್ವಾನಸ್ಯ ಯೋಗ್ಯಾನ್ ಕರೋತು ಸೌಜನ್ಯಸ್ಯ ಶುಭಫಲಂ ವಿಶ್ವಾಸಸ್ಯ ಗುಣಞ್ಚ ಪರಾಕ್ರಮೇಣ ಸಾಧಯತ್ವಿತಿ ಪ್ರಾರ್ಥನಾಸ್ಮಾಭಿಃ ಸರ್ವ್ವದಾ ಯುಷ್ಮನ್ನಿಮಿತ್ತಂ ಕ್ರಿಯತೇ,
12 ೧೨ ಹೀಗಿರಲಾಗಿ ನಮ್ಮ ದೇವರು ಮತ್ತು ಕರ್ತನಾದ ಯೇಸು ಕ್ರಿಸ್ತನ ಕೃಪೆಗೆ ಅನುಸಾರವಾಗಿ ನಮ್ಮ ಕರ್ತನಾದ ಯೇಸುಕ್ರಿಸ್ತನ ಹೆಸರು ನಿಮ್ಮಲ್ಲಿ ಮಹಿಮೆ ಹೊಂದುವುದು ನೀವೂ ಆತನಲ್ಲಿ ಮಹಿಮೆ ಹೊಂದುವಿರಿ.
ಯತಸ್ತಥಾ ಸತ್ಯಸ್ಮಾಕಮ್ ಈಶ್ವರಸ್ಯ ಪ್ರಭೋ ರ್ಯೀಶುಖ್ರೀಷ್ಟಸ್ಯ ಚಾನುಗ್ರಹಾದ್ ಅಸ್ಮತ್ಪ್ರಭೋ ರ್ಯೀಶುಖ್ರೀಷ್ಟಸ್ಯ ನಾಮ್ನೋ ಗೌರವಂ ಯುಷ್ಮಾಸು ಯುಷ್ಮಾಕಮಪಿ ಗೌರವಂ ತಸ್ಮಿನ್ ಪ್ರಕಾಶಿಷ್ಯತೇ|