< ಸಮುವೇಲನು - ದ್ವಿತೀಯ ಭಾಗ 8 >
1 ೧ ಅನಂತರ ದಾವೀದನು ಹೋಗಿ ಫಿಲಿಷ್ಟಿಯರ ಮೇಲೆ ಮುತ್ತಿಗೆ ಹಾಕಿ, ಅವರನ್ನು ಸೋಲಿಸಿ, ಅವರ ರಾಜಧಾನಿಯನ್ನು ವಶಪಡಿಸಿಕೊಂಡು, ಆಡಳಿತವನ್ನು ತನ್ನ ಸ್ವಾಧೀನದಲ್ಲಿಟ್ಟುಕೊಂಡನು.
이 후에 다윗이 블레셋 사람을 쳐서 항복 받고 블레셋 사람의 손에서 메덱암마를 빼앗으니라
2 ೨ ಇದಲ್ಲದೆ ಅವನು ಮೋವಾಬ್ಯರನ್ನು ಸೋಲಿಸಿ, ಅವರನ್ನು ನೆಲಕ್ಕೆ ಉರುಳಿಸಿ, ಹಗ್ಗದಿಂದ ಅಳತೆಮಾಡಿಸಿ, ಪ್ರತಿ ಮೂರನೆಯ ಎರಡು ಭಾಗದ ಜನರನ್ನು ಕೊಲ್ಲಿಸಿ, ಮೂರನೆ ಭಾಗದ ಜನರನ್ನು ಉಳಿಸಿದನು. ಉಳಿದ ಮೋವಾಬ್ಯರು ದಾವೀದನ ದಾಸರಾಗಿ ಅವನಿಗೆ ಕಪ್ಪಕೊಡಬೇಕಾಯಿತು.
다윗이 또 모압을 쳐서 저희로 땅에 엎드리게 하고 줄로 재어 그 두 줄 길이의 사람은 죽이고 한 줄 길이의 사람은 살리니 모압 사람이 다윗의 종이 되어 조공을 바치니라
3 ೩ ದಾವೀದನು ಯೂಫ್ರೆಟಿಸ್ ನದಿಯ ಸುತ್ತಣ ಪ್ರದೇಶದಲ್ಲಿ ತನ್ನ ರಾಜ್ಯಾಧಿಕಾರವನ್ನು ಸ್ಥಾಪಿಸುವುದಕ್ಕೆ ಹೋಗುತ್ತಿದ್ದ ರೆಹೋಬನ ಮಗನೂ ಚೋಬದ ಅರಸನೂ ಆದ ಹದದೆಜೆರನನ್ನು ಸೋಲಿಸಿದನು.
르흡의 아들 소바 왕 하닷에셀이 자기 권세를 회복하려고 유브라데 강으로 갈 때에 다윗이 저를 쳐서
4 ೪ ಅವನು ಅವರ ಸಾವಿರದ ಏಳುನೂರು ರಾಹುತರನ್ನೂ ಇಪ್ಪತ್ತು ಸಾವಿರ ಮಂದಿ ಕಾಲಾಳುಗಳನ್ನೂ ಸೆರೆಹಿಡಿದು ನೂರು ಕುದುರೆಗಳನ್ನಿಟ್ಟುಕೊಂಡು ಮಿಕ್ಕಾದ ಕುದುರೆಗಳ ಹಿಂಗಾಲಿನ ನರಗಳನ್ನು ಕತ್ತರಿಸಿಬಿಟ್ಟನು.
그 마병 일천칠백과 보병 이만을 사로잡고 병거 일백 승의 말만 남기고 그 외의 병거의 말은 다 발의 힘줄을 끊었더니
5 ೫ ದಮಸ್ಕದ ಅರಾಮ್ಯರು, ಚೋಬದ ಅರಸನಾದ ಹದದೆಜೆರನನ್ನು ರಕ್ಷಿಸಲು ಬಂದಾಗ ದಾವೀದನು ಅವರನ್ನೂ ಸೋಲಿಸಿ ಅವರಲ್ಲಿ ಇಪ್ಪತ್ತೆರಡು ಸಾವಿರ ಜನರನ್ನು ಕೊಂದನು.
다메섹 아람 사람들이 소바 왕 하닷에셀을 도우러 온지라 다윗이 아람 사람 이만 이천을 죽이고
6 ೬ ಅನಂತರ ದಾವೀದನು ದಮಸ್ಕದ ಅರಾಮ್ಯ ದೇಶದಲ್ಲಿ ಕಾವಲುದಂಡನ್ನಿರಿಸಿದನು. ಹೀಗೆ ಅರಾಮ್ಯರು ಅವನ ಸೇವಕರಾಗಿ ಅವನಿಗೆ ಕಪ್ಪಕೊಡುವವರಾದರು. ಯೆಹೋವನ ಅನುಗ್ರಹದಿಂದ ದಾವೀದನಿಗೆ ಎಲ್ಲಿ ಹೋದರೂ ಜಯದೊರಕಿತು.
다메섹 아람에 수비대를 두매 아람 사람이 다윗의 종이 되어 조공을 바치니라 다윗이 어디를 가든지 여호와께서 이기게 하시니라
7 ೭ ಅವನು ಹದದೆಜೆರನ ಸೇವಕರ ಬಳಿ ಇದ್ದ ಬಂಗಾರದ ಗುರಾಣಿಗಳನ್ನು ಯೆರೂಸಲೇಮಿಗೆ ತೆಗೆದುಕೊಂಡು ಹೋದನು.
다윗이 하닷에셀의 신복들의 가진 금방패를 빼앗아 예루살렘으로 가져오고
8 ೮ ಇದಲ್ಲದೆ ಅರಸನಾದ ದಾವೀದನು ಹದದೆಜೆರನ ಪಟ್ಟಣಗಳಾದ ಬೆಟಹದಿಂದಲೂ ಬೇರೋತೈಯಿಂದಲೂ ಬಹಳ ತಾಮ್ರವನ್ನು ತೆಗೆದುಕೊಂಡು ಹೋದನು.
또 하닷에셀의 고을 베다와 베로대에서 매우 많은 놋을 빼앗으니라
9 ೯ ದಾವೀದನು ಹದದೆಜೆರನ ಸೈನ್ಯವನ್ನು ಸೋಲಿಸಿದನೆಂಬ ವರ್ತಮಾನವು ಹಮಾತಿನ ಅರಸನಾದ ತೋವಿಗೆ ಮುಟ್ಟಿತು.
하맛 왕 도이가 다윗이 하닷에셀의 온 군대를 쳐서 파하였다 함을 듣고
10 ೧೦ ತೋವಿಗೂ ಹದದೆಜೆರನಿಗೂ ವಿರೋಧವಿತ್ತು. ದಾವೀದನು ಹದದೆಜೆರನ ಮೇಲೆ ದಾಳಿಮಾಡಿ, ಅವನನ್ನು ಸೋಲಿಸಿದ್ದರಿಂದ ತೋವು ದಾವೀದನನ್ನು ವಂದಿಸುವುದಕ್ಕೂ ಹರಸುವುದಕ್ಕೂ ತನ್ನ ಮಗನಾದ ಯೋರಾಮನನ್ನು ಕಳುಹಿಸಿದನು. ಇವನು ಬರುವಾಗ ದಾವೀದನಿಗೋಸ್ಕರ ತಾಮ್ರ, ಬೆಳ್ಳಿ, ಬಂಗಾರದ ಪಾತ್ರೆಗಳನ್ನು ತಂದನು.
그 아들 요람을 보내어 다윗 왕에게 문안하고 축복하게 하니 이는 하닷에셀이 도이로 더불어 전쟁이 있던 터에 다윗이 하닷에셀을 쳐서 파함이라 요람이 은 그릇과 금 그릇과 놋 그릇을 가지고 온지라
11 ೧೧ ಅರಸನಾದ ದಾವೀದನು ಇವುಗಳನ್ನು ತನ್ನಿಂದ ಅಪಜಯಹೊಂದಿದ ಅರಾಮ್ಯರೂ, ಮೋವಾಬ್ಯರೂ, ಅಮ್ಮೋನಿಯರೂ, ಫಿಲಿಷ್ಟಿಯರೂ, ಅಮಾಲೇಕ್ಯರೂ ಎಂಬ ಈ ಸುತ್ತಣ ಜನಾಂಗಗಳಿಂದಲೂ,
다윗 왕이 그것도 여호와께 드리되 저가 정복한 모든 나라에서 얻은 은금
12 ೧೨ ಚೋಬದ ಅರಸನಾದ ರೆಹೋಬನ ಮಗ ಹದದೆಜೆರನಿಂದಲೂ ಪಡೆದುಕೊಂಡ ಬೆಳ್ಳಿ, ಬಂಗಾರವನ್ನೂ ಯೆಹೋವನಿಗೋಸ್ಕರ ಪ್ರತಿಷ್ಠಿಸಿದನು.
곧 아람과 모압과 암몬 자손과 블레셋 사람과 아말렉에게서 얻은 것들과 소바 왕 르홉의 아들 하닷에셀에게서 노략한 것과 같이 드리니라
13 ೧೩ ಇದಲ್ಲದೆ ದಾವೀದನು ಹೋಗಿ ಉಪ್ಪಿನ ತಗ್ಗಿನಲ್ಲಿ ಅರಾಮ್ಯರ ಹದಿನೆಂಟು ಸಾವಿರ ಮಂದಿ ಸೈನಿಕರನ್ನು ಸೋಲಿಸಿದಂದಿನಿಂದ ಬಹು ಪ್ರಖ್ಯಾತಿ ಹೊಂದಿದನು.
다윗이 염곡에서 에돔 사람 일만 팔천을 쳐 죽이고 돌아와서 명예를 얻으니라
14 ೧೪ ದಾವೀದನು ಎದೋಮಿನಲ್ಲೆಲ್ಲಾ ಕಾವಲುದಂಡನ್ನಿರಿಸಿದನು. ಎದೋಮ್ಯರೆಲ್ಲರೂ ದಾವೀದನ ದಾಸರಾದರು. ಯೆಹೋವನ ಅನುಗ್ರಹದಿಂದ ದಾವೀದನಿಗೆ ಎಲ್ಲಿ ಹೋದರೂ ಜಯವುಂಟಾಯಿತು.
다윗이 에돔에 수비대를 두되 온 에돔에 수비대를 두니 에돔 사람이 다 다윗의 종이 되니라 다윗이 어디를 가든지 여호와께서 이기게 하셨더라
15 ೧೫ ದಾವೀದನು ಇಸ್ರಾಯೇಲ್ಯರ ಅರಸನಾಗಿ, ಎಲ್ಲಾ ಪ್ರಜೆಗಳನ್ನು ನೀತಿನ್ಯಾಯಗಳಿಂದ ನಡೆಸುತ್ತಾ ಬಂದನು.
다윗이 온 이스라엘을 다스려 모든 백성에게 공과 의를 행할새
16 ೧೬ ಚೆರೂಯಳ ಮಗನಾದ ಯೋವಾಬನೂ ಅವನ ಸೇನಾಧಿಪತಿಯೂ ಅಹೀಲೂದನ ಮಗನಾದ ಯೆಹೋಷಾಫಾಟನು ರಾಜವಂಶಸ್ಥದ ಇತಿಹಾಸಕಾರನಾಗಿದ್ದನು.
스루야의 아들 요압은 군대장관이 되고 아힐룻의 아들 여호사밧은 사관이 되고
17 ೧೭ ಅಹೀಟೂಬನ ಮಗನಾದ ಚಾದೋಕನೂ ಅಹೀಮೆಲೆಕನ ಮಗನಾದ ಎಬ್ಯಾತಾರನೂ ಅವನ ಯಾಜಕರು, ಸೆರಾಯನು ಲೇಖಕನು,
아히둡의 아들 사독과 아비아달의 아들 아히멜렉은 제사장이 되고 스라야는 서기관이 되고
18 ೧೮ ಯೆಹೋಯಾದಾವನ ಮಗನಾದ ಬೆನಾಯನು ಕೆರೇತ್ಯ ಮತ್ತು ಪೆಲೇತ್ಯ ಎಂಬ ಕಾವಲು ದಂಡುಗಳ ಮುಖ್ಯಸ್ಥನು. ದಾವೀದನ ಮಕ್ಕಳು ರಾಜನ ಮುಖ್ಯಸಲಹೆಗಾರರಾಗಿದ್ದರು.
여호야다의 아들 브나야는 그렛 사람과 블렛 사람을 관할하고 다윗의 아들들은 대신이 되니라