< ಸಮುವೇಲನು - ದ್ವಿತೀಯ ಭಾಗ 5 >

1 ಅನಂತರ ಇಸ್ರಾಯೇಲರ ಎಲ್ಲಾ ಕುಲಗಳವರು ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದು ಅವನಿಗೆ, “ನಾವು ನಿನ್ನ ರಕ್ತಸಂಬಂಧಿಗಳಾಗಿದ್ದೇವೆ,
וַיָּבֹ֜אוּ כָּל־שִׁבְטֵ֧י יִשְׂרָאֵ֛ל אֶל־דָּוִ֖ד חֶבְרֹ֑ונָה וַיֹּאמְר֣וּ לֵאמֹ֔ר הִנְנ֛וּ עַצְמְךָ֥ וּֽבְשָׂרְךָ֖ אֲנָֽחְנוּ׃
2 ಹಿಂದಿನ ದಿನಗಳಲ್ಲಿ ಅಂದರೆ, ಸೌಲನ ಆಡಳಿತದಲ್ಲಿ, ಇಸ್ರಾಯೇಲರ ದಳಾಧಿಪತಿಯಾಗಿ ಹೋಗುತ್ತಾ ಬರುತ್ತಾ ಇದ್ದವನು ನೀನೇ. ನಿನ್ನನ್ನು ಕುರಿತು ಯೆಹೋವನು, ‘ನೀನು ನನ್ನ ಪ್ರಜೆಗಳಾದ ಇಸ್ರಾಯೇಲರ ನಾಯಕನೂ ಪಾಲಕನೂ ಆಗಿರುವಿಯೆಂದು ಹೇಳಿದ್ದಾನೆ’” ಅಂದರು.
גַּם־אֶתְמֹ֣ול גַּם־שִׁלְשֹׁ֗ום בִּהְיֹ֨ות שָׁא֥וּל מֶ֙לֶךְ֙ עָלֵ֔ינוּ אַתָּ֗ה הָיִיתָה (הָיִ֛יתָ) מֹוצִיא (הַמֹּוצִ֥יא) וְהַמֵּבִי (וְהַמֵּבִ֖יא) אֶת־יִשְׂרָאֵ֑ל וַיֹּ֨אמֶר יְהוָ֜ה לְךָ֗ אַתָּ֨ה תִרְעֶ֤ה אֶת־עַמִּי֙ אֶת־יִשְׂרָאֵ֔ל וְאַתָּ֛ה תִּהְיֶ֥ה לְנָגִ֖יד עַל־יִשְׂרָאֵֽל׃
3 ಹೆಬ್ರೋನಿನಲ್ಲಿದ್ದ ಅರಸನಾದ ದಾವೀದನು ತನ್ನ ಬಳಿಗೆ ಬಂದಿದ್ದ ಇಸ್ರಾಯೇಲರ ಹಿರಿಯರೆಲ್ಲರೊಡನೆ ಅಲ್ಲಿಯೇ ಯೆಹೋವನ ಸನ್ನಿಧಿಯಲ್ಲಿ ಒಡಂಬಡಿಕೆ ಮಾಡಿಕೊಂಡನು. ಅವರು ದಾವೀದನನ್ನು ಅಭಿಷೇಕಿಸಿ, ಇಸ್ರಾಯೇಲರ ಅರಸನನ್ನಾಗಿ ಮಾಡಿದರು.
וַ֠יָּבֹאוּ כָּל־זִקְנֵ֨י יִשְׂרָאֵ֤ל אֶל־הַמֶּ֙לֶךְ֙ חֶבְרֹ֔ונָה וַיִּכְרֹ֣ת לָהֶם֩ הַמֶּ֨לֶךְ דָּוִ֥ד בְּרִ֛ית בְּחֶבְרֹ֖ון לִפְנֵ֣י יְהוָ֑ה וַיִּמְשְׁח֧וּ אֶת־דָּוִ֛ד לְמֶ֖לֶךְ עַל־יִשְׂרָאֵֽל׃ פ
4 ದಾವೀದನು ಮೂವತ್ತು ವರ್ಷದವನಾದಾಗ ಅರಸನಾಗಿ, ನಲ್ವತ್ತು ವರ್ಷ ಆಳಿದನು.
בֶּן־שְׁלֹשִׁ֥ים שָׁנָ֛ה דָּוִ֖ד בְּמָלְכֹ֑ו אַרְבָּעִ֥ים שָׁנָ֖ה מָלָֽךְ׃
5 ಅವನು ಹೆಬ್ರೋನಿನಲ್ಲಿದ್ದು ಯೆಹೂದ ಕುಲವೊಂದನ್ನೇ ಆಳಿದ್ದು ಏಳು ವರ್ಷ ಆರು ತಿಂಗಳು. ಯೆರೂಸಲೇಮಿನಲ್ಲಿದ್ದು ಯೆಹೂದ್ಯರನ್ನು ಮತ್ತು ಎಲ್ಲಾ ಇಸ್ರಾಯೇಲರನ್ನು ಆಳಿದ್ದು ಮೂವತ್ತು ಮೂರು ವರ್ಷಗಳು.
בְּחֶבְרֹון֙ מָלַ֣ךְ עַל־יְהוּדָ֔ה שֶׁ֥בַע שָׁנִ֖ים וְשִׁשָּׁ֣ה חֳדָשִׁ֑ים וּבִירוּשָׁלַ֣͏ִם מָלַ֗ךְ שְׁלֹשִׁ֤ים וְשָׁלֹשׁ֙ שָׁנָ֔ה עַ֥ל כָּל־יִשְׂרָאֵ֖ל וִיהוּדָֽה׃
6 ದಾವೀದನು ತನ್ನ ಜನರನ್ನು ಕರೆದುಕೊಂಡು ಯೆರೂಸಲೇಮಿನಲ್ಲಿದ್ದ ದೇಶದ ಮೂಲನಿವಾಸಿಗಳಾದ ಯೆಬೂಸಿಯರಿಗೆ ವಿರೋಧವಾಗಿ ಹೊರಟನು. ಅವರು ಇವನು ಒಳಗೆ ಬರುವುದಿಲ್ಲವೆಂದು ತಿಳಿದು ದಾವೀದನಿಗೆ, “ನೀನು ಒಳಗೆ ಬರಲಾರೆ, ಕುರುಡರು ಕುಂಟರು ಇವರೇ ನಿನ್ನನ್ನು ಅಟ್ಟಿಬಿಡುವರು” ಎಂದು ಹೇಳಿದರು.
וַיֵּ֨לֶךְ הַמֶּ֤לֶךְ וַֽאֲנָשָׁיו֙ יְר֣וּשָׁלַ֔͏ִם אֶל־הַיְבֻסִ֖י יֹושֵׁ֣ב הָאָ֑רֶץ וַיֹּ֨אמֶר לְדָוִ֤ד לֵאמֹר֙ לֹא־תָבֹ֣וא הֵ֔נָּה כִּ֣י אִם־הֱסִֽירְךָ֗ הַעִוְרִ֤ים וְהַפִּסְחִים֙ לֵאמֹ֔ר לֹֽא־יָבֹ֥וא דָוִ֖ד הֵֽנָּה׃
7 ಅದರೂ ದಾವೀದನು ದಾವೀದನಗರ ಎನ್ನಿಸಿಕೊಳ್ಳುವ ಚೀಯೋನಿನ ಕೋಟೆಯನ್ನು ಸ್ವಾಧೀನಪಡಿಸಿಕೊಂಡನು.
וַיִּלְכֹּ֣ד דָּוִ֔ד אֵ֖ת מְצֻדַ֣ת צִיֹּ֑ון הִ֖יא עִ֥יר דָּוִֽד׃
8 ಆ ದಿನ ದಾವೀದನು, “ಯೆಬೂಸಿಯರನ್ನು ಜಯಿಸಬೇಕೆಂದಿರುವವನು, ಜಲದ್ವಾರದ ಮೂಲಕ ಹತ್ತಿ ಹೋಗಿ, ನನ್ನನ್ನು ದ್ವೇಷಿಸುವ ಕುರುಡರನ್ನು ಮತ್ತು ಕುಂಟರನ್ನು ಕಂದಕದಲ್ಲಿ ನಾಶಪಡಿಸಬೇಕು” ಎಂದು ಹೇಳಿದನು. ಆದುದರಿಂದ “ಕುರುಡರೂ ಕುಂಟರೂ ಅರಮನೆಯ ಒಳಗೆ ಬರಲಾಗದು” ಎಂಬ ಗಾದೆಯುಂಟು.
וַיֹּ֨אמֶר דָּוִ֜ד בַּיֹּ֣ום הַה֗וּא כָּל־מַכֵּ֤ה יְבֻסִי֙ וְיִגַּ֣ע בַּצִּנֹּ֔ור וְאֶת־הַפִּסְחִים֙ וְאֶת־הַ֣עִוְרִ֔ים שְׂנֹאו (שְׂנֻאֵ֖י) נֶ֣פֶשׁ דָּוִ֑ד עַל־כֵּן֙ יֹֽאמְר֔וּ עִוֵּ֣ר וּפִסֵּ֔חַ לֹ֥א יָבֹ֖וא אֶל־הַבָּֽיִת׃
9 ದಾವೀದನು ಆ ಕೋಟೆಗೆ ದಾವೀದ ನಗರವೆಂದು ಹೆಸರಿಟ್ಟು ಅಲ್ಲೇ ವಾಸಿಸುತ್ತಾ, ಅದರ ಸುತ್ತಲೂ ಮಿಲ್ಲೋವಿನಿಂದ ಪ್ರಾರಂಭಿಸಿ, ಒಳಗಣ ಪೌಳಿಗೋಡೆಯನ್ನು ಕಟ್ಟಿಸಿದನು.
וַיֵּ֤שֶׁב דָּוִד֙ בַּמְּצֻדָ֔ה וַיִּקְרָא־לָ֖הּ עִ֣יר דָּוִ֑ד וַיִּ֤בֶן דָּוִד֙ סָבִ֔יב מִן־הַמִּלֹּ֖וא וָבָֽיְתָה׃
10 ೧೦ ಸೇನಾಧೀಶ್ವರನಾದ ಯೆಹೋವ ದೇವರು ಅವನ ಸಂಗಡ ಇದ್ದುದರಿಂದ ಅವನು ಆಧಿಕ ಪ್ರಬಲಗೊಳ್ಳುತ್ತಾ ಬಂದನು.
וַיֵּ֥לֶךְ דָּוִ֖ד הָלֹ֣וךְ וְגָדֹ֑ול וַיהוָ֛ה אֱלֹהֵ֥י צְבָאֹ֖ות עִמֹּֽו׃ פ
11 ೧೧ ತೂರಿನ ಅರಸನಾದ ಹೀರಾಮನು ದಾವೀದನಿಗೆ ದೂತರನ್ನೂ, ದೇವದಾರುಮರಗಳನ್ನೂ, ಬಡಗಿಯವರನ್ನೂ ಶಿಲ್ಪಿಗಳನ್ನೂ ಕಳುಹಿಸಲು ಅವರು ದಾವೀದನಿಗೋಸ್ಕರ ಅರಮನೆಯನ್ನು ಕಟ್ಟಿದರು.
וַ֠יִּשְׁלַח חִירָ֨ם מֶֽלֶךְ־צֹ֥ר מַלְאָכִים֮ אֶל־דָּוִד֒ וַעֲצֵ֣י אֲרָזִ֔ים וְחָרָשֵׁ֣י עֵ֔ץ וְחָֽרָשֵׁ֖י אֶ֣בֶן קִ֑יר וַיִּבְנֽוּ־בַ֖יִת לְדָוִֽד׃
12 ೧೨ ಇದರಿಂದ ದಾವೀದನು, “ಯೆಹೋವನು ನನ್ನನ್ನು ಇಸ್ರಾಯೇಲರ ರಾಜನನ್ನಾಗಿ ಸ್ಥಿರಪಡಿಸಿ, ತನ್ನ ಪ್ರಜೆಗಳಾದ ಇಸ್ರಾಯೇಲರ ನಿಮಿತ್ತವಾಗಿ ನನ್ನ ರಾಜ್ಯವನ್ನು ವೃದ್ಧಿಪಡಿಸಿದ್ದಾನೆ” ಎಂದು ತಿಳಿದುಕೊಂಡನು.
וַיֵּ֣דַע דָּוִ֔ד כִּֽי־הֱכִינֹ֧ו יְהוָ֛ה לְמֶ֖לֶךְ עַל־יִשְׂרָאֵ֑ל וְכִי֙ נִשֵּׂ֣א מַמְלַכְתֹּ֔ו בַּעֲב֖וּר עַמֹּ֥ו יִשְׂרָאֵֽל׃ ס
13 ೧೩ ದಾವೀದನು ಹೆಬ್ರೋನಿನಿಂದ ಯೆರೂಸಲೇಮಿಗೆ ಬಂದ ಮೇಲೆ ಅಲ್ಲಿಯೂ ಅನೇಕ ಸ್ತ್ರೀಯರನ್ನು ಪತ್ನಿಯರನ್ನಾಗಿಯೂ ಮತ್ತು ಉಪಪತ್ನಿಯರನ್ನಾಗಿಯೂ ಮಾಡಿಕೊಂಡಿದ್ದರಿಂದ ಅವನಿಗೆ ಇನ್ನೂ ಕೆಲವು ಮಂದಿ ಗಂಡು ಹೆಣ್ಣು ಮಕ್ಕಳು ಹುಟ್ಟಿದರು.
וַיִּקַּח֩ דָּוִ֨ד עֹ֜וד פִּֽלַגְשִׁ֤ים וְנָשִׁים֙ מִיר֣וּשָׁלַ֔͏ִם אַחֲרֵ֖י בֹּאֹ֣ו מֵחֶבְרֹ֑ון וַיִּוָּ֥לְדוּ עֹ֛וד לְדָוִ֖ד בָּנִ֥ים וּבָנֹֽות׃
14 ೧೪ ಅಲ್ಲಿ ಅವನಿಗೆ ಹುಟ್ಟಿದ ಮಕ್ಕಳ ಹೆಸರುಗಳು: ಶಮ್ಮೂವ, ಶೋಬಾಬ್, ನಾತಾನ್, ಸೊಲೊಮೋನ್,
וְאֵ֗לֶּה שְׁמֹ֛ות הַיִּלֹּדִ֥ים לֹ֖ו בִּירוּשָׁלָ֑͏ִם שַׁמּ֣וּעַ וְשֹׁובָ֔ב וְנָתָ֖ן וּשְׁלֹמֹֽה׃
15 ೧೫ ಇಬ್ಹಾರ್, ಎಲೀಷೂವ, ನೆಫೆಗ್, ಯಾಫೀಯ,
וְיִבְחָ֥ר וֶאֱלִישׁ֖וּעַ וְנֶ֥פֶג וְיָפִֽיעַ׃
16 ೧೬ ಎಲೀಷಾಮ, ಎಲ್ಯಾದ ಮತ್ತು ಎಲೀಫೆಲೆಟ್.
וֶאֱלִישָׁמָ֥ע וְאֶלְיָדָ֖ע וֶאֱלִיפָֽלֶט׃ פ
17 ೧೭ ಇಸ್ರಾಯೇಲರು ದಾವೀದನನ್ನು ಅಭಿಷೇಕಿಸಿ, ತಮ್ಮ ಅರಸನನ್ನಾಗಿ ಮಾಡಿಕೊಂಡರೆಂಬ ವರ್ತಮಾನವು ಫಿಲಿಷ್ಟಿಯರಿಗೆ ತಲುಪಿದಾಗ ಅವರು ಅವನನ್ನು ಸೆರೆಹಿಡಿಯುವುದಕ್ಕೆ ಹೊರಟರು. ದಾವೀದನು ಇದನ್ನು ಕೇಳಿ ದುರ್ಗಕ್ಕೆ ಹೋದನು.
וַיִּשְׁמְע֣וּ פְלִשְׁתִּ֗ים כִּי־מָשְׁח֨וּ אֶת־דָּוִ֤ד לְמֶ֙לֶךְ֙ עַל־יִשְׂרָאֵ֔ל וַיַּעֲל֥וּ כָל־פְּלִשְׁתִּ֖ים לְבַקֵּ֣שׁ אֶת־דָּוִ֑ד וַיִּשְׁמַ֣ע דָּוִ֔ד וַיֵּ֖רֶד אֶל־הַמְּצוּדָֽה׃
18 ೧೮ ಫಿಲಿಷ್ಟಿಯರು ದೇಶದೊಳಗೆ ನುಗ್ಗಿ ರೆಫಾಯೀಮ್ ತಗ್ಗಿಗೆ ಬಂದು ಅಲ್ಲಿ ಪಾಳೆಯಮಾಡಿಕೊಂಡಿದ್ದರು.
וּפְלִשְׁתִּ֖ים בָּ֑אוּ וַיִּנָּטְשׁ֖וּ בְּעֵ֥מֶק רְפָאִֽים׃
19 ೧೯ ಅದನ್ನು ತಿಳಿದು ದಾವೀದನು ಯೆಹೋವನನ್ನು, “ನಾನು ಫಿಲಿಷ್ಟಿಯರಿಗೆ ವಿರೋಧವಾಗಿ ಹೋಗಬಹುದೋ? ಅವರನ್ನು ನನ್ನ ಕೈಗೆ ಒಪ್ಪಿಸಿಕೊಡುವಿಯೋ?” ಎಂದು ಕೇಳಿದನು. ಅದಕ್ಕೆ ಯೆಹೋವನು, “ಹೋಗು ನಾನು ಹೇಗೂ ಅವರನ್ನು ನಿನ್ನ ಕೈಗೆ ಒಪ್ಪಿಸಿಕೊಡುವೆನು” ಎಂದು ಉತ್ತರಕೊಟ್ಟನು.
וַיִּשְׁאַ֨ל דָּוִ֤ד בַּֽיהוָה֙ לֵאמֹ֔ר הַאֶֽעֱלֶה֙ אֶל־פְּלִשְׁתִּ֔ים הֲתִתְּנֵ֖ם בְּיָדִ֑י וַיֹּ֨אמֶר יְהוָ֤ה אֶל־דָּוִד֙ עֲלֵ֔ה כִּֽי־נָתֹ֥ן אֶתֵּ֛ן אֶת־הַפְּלִשְׁתִּ֖ים בְּיָדֶֽךָ׃
20 ೨೦ ಆಗ ಅವನು ಹೋಗಿ ಅವರನ್ನು ಸೋಲಿಸಿ, “ಯೆಹೋವನು ಕಟ್ಟೆ ಒಡೆದ ಪ್ರವಾಹದಂತೆ ತನ್ನ ಶತ್ರುಗಳ ಮೇಲೆ ಬಿದ್ದು, ಅವರನ್ನು ನನ್ನ ಕಣ್ಣ ಮುಂದೆಯೇ ನಾಶಮಾಡಿದ್ದಾನೆ” ಎಂದು ಹೇಳಿ ಆ ಯುದ್ಧ ಸ್ಥಳಕ್ಕೆ “ಬಾಳ್ ಪೆರಾಚೀಮ್” ಎಂದು ಹೆಸರಿಟ್ಟನು.
וַיָּבֹ֨א דָוִ֥ד בְּבַֽעַל־פְּרָצִים֮ וַיַּכֵּ֣ם שָׁ֣ם דָּוִד֒ וַיֹּ֕אמֶר פָּרַ֨ץ יְהוָ֧ה אֶת־אֹיְבַ֛י לְפָנַ֖י כְּפֶ֣רֶץ מָ֑יִם עַל־כֵּ֗ן קָרָ֛א שֵֽׁם־הַמָּקֹ֥ום הַה֖וּא בַּ֥עַל פְּרָצִֽים׃
21 ೨೧ ಫಿಲಿಷ್ಟಿಯರು ಅಲ್ಲಿ ಬಿಟ್ಟು ಹೋಗಿದ್ದ ವಿಗ್ರಹಗಳನ್ನು ದಾವೀದನೂ ಅವನ ಜನರೂ ತೆಗೆದುಕೊಂಡು ಬಂದರು.
וַיַּעַזְבוּ־שָׁ֖ם אֶת־עֲצַבֵּיהֶ֑ם וַיִּשָּׂאֵ֥ם דָּוִ֖ד וַאֲנָשָֽׁיו׃ פ
22 ೨೨ ಫಿಲಿಷ್ಟಿಯರು ಇನ್ನೊಮ್ಮೆ ಹೊರಟು ಬಂದು ರೆಫಾಯೀಮ್ ತಗ್ಗಿನಲ್ಲಿ ಇಳಿದುಕೊಂಡರು.
וַיֹּסִ֥פוּ עֹ֛וד פְּלִשְׁתִּ֖ים לַֽעֲלֹ֑ות וַיִּנָּֽטְשׁ֖וּ בְּעֵ֥מֶק רְפָאִֽים׃
23 ೨೩ ದಾವೀದನು ಯೆಹೋವನ ಸನ್ನಿಧಿಯಲ್ಲಿ ವಿಚಾರಿಸಿದಾಗ ಆತನು ಅವನಿಗೆ, “ನೀನು ನೇರವಾಗಿ ಹೋಗಿ ಅವರನ್ನು ಮುತ್ತಿಗೆ ಹಾಕಬೇಡ. ಅವರಿಗೆ ತಿಳಿಯದಂತೆ ಸುತ್ತಿಕೊಂಡು ಹೋಗಿ ಹಿಂಬಾಲಿಸಿ, ಬಾಕಾ ಮರಗಳಿರುವ ಕಡೆಯಿಂದ ಅವರ ಮೇಲೆ ಬೀಳು.
וַיִּשְׁאַ֤ל דָּוִד֙ בַּֽיהוָ֔ה וַיֹּ֖אמֶר לֹ֣א תַעֲלֶ֑ה הָסֵב֙ אֶל־אַ֣חֲרֵיהֶ֔ם וּבָ֥אתָ לָהֶ֖ם מִמּ֥וּל בְּכָאִֽים׃
24 ೨೪ ಆ ಬಾಕಾ ಮರಗಳ ತುದಿಯಲ್ಲಿ ಹೆಜ್ಜೆಗಳ ಸಪ್ಪಳ ಕೇಳಿಸುವಾಗ ಯೆಹೋವನು ಫಿಲಿಷ್ಟಿಯರ ಸೈನ್ಯವನ್ನು ಸೋಲಿಸುವುದಕ್ಕೋಸ್ಕರ ನಿನ್ನ ಮುಂದಾಗಿ ಹೊರಟನೆಂದು ತಿಳಿದು ಅವರ ಮೇಲೆ ದಾಳಿಮಾಡು” ಎಂದನು.
וִ֠יהִי בְּשָׁמְעֲךָ (כְּֽשָׁמְעֲךָ֞) אֶת־קֹ֧ול צְעָדָ֛ה בְּרָאשֵׁ֥י הַבְּכָאִ֖ים אָ֣ז תֶּחֱרָ֑ץ כִּ֣י אָ֗ז יָצָ֤א יְהוָה֙ לְפָנֶ֔יךָ לְהַכֹּ֖ות בְּמַחֲנֵ֥ה פְלִשְׁתִּֽים׃
25 ೨೫ ದಾವೀದನು ಯೆಹೋವನ ಆಜ್ಞಾನುಸಾರವಾಗಿ ಮಾಡಿ, ಫಿಲಿಷ್ಟಿಯರನ್ನು ಗೆಬದಿಂದ ಗೆಜೆರಿನವರೆಗೂ ಸಂಹರಿಸಿದನು.
וַיַּ֤עַשׂ דָּוִד֙ כֵּ֔ן כַּאֲשֶׁ֥ר צִוָּ֖הוּ יְהוָ֑ה וַיַּךְ֙ אֶת־פְּלִשְׁתִּ֔ים מִגֶּ֖בַע עַד־בֹּאֲךָ֥ גָֽזֶר׃ פ

< ಸಮುವೇಲನು - ದ್ವಿತೀಯ ಭಾಗ 5 >