< ಸಮುವೇಲನು - ದ್ವಿತೀಯ ಭಾಗ 3 >
1 ೧ ಬಹು ದಿನಗಳವರೆಗೆ ಸೌಲನ ವಂಶದವರಿಗೂ ಮತ್ತು ದಾವೀದನ ವಂಶದವರಿಗೂ ಯುದ್ಧ ನಡೆಯಿತು. ದಾವೀದನು ಬಲಗೊಳ್ಳುತ್ತಾ ಬಂದನು. ಸೌಲನ ವಂಶವು ದುರ್ಬಲವಾಗುತ್ತಾ ಬಂತು.
၁ရှောလုအမျိုးနှင့် ဒါဝိဒ်အမျိုးတို့သည် ကြာမြင့်စွာစစ်တိုက်၍၊ ဒါဝိဒ်သည်အားတိုးပွားလျက်၊ ရှောလု အမျိုးသည် အားရွေ့လျော့လျက် ရှိကြ၏။
2 ೨ ಹೆಬ್ರೋನಿನಲ್ಲಿರುವಾಗ ದಾವೀದನಿಗೆ ಹುಟ್ಟಿದ ಮಕ್ಕಳು; ಚೊಚ್ಚಲ ಮಗನು ಅಮ್ನೋನನು, ಇವನು ಇಜ್ರೇಲಿನವಳಾದ ಅಹೀನೋವಮಳಲ್ಲಿ ಹುಟ್ಟಿದವನು.
၂ဟေဗြုန်မြို့၌ ဒါဝိဒ်မြင်သောသားတို့တွင် သားဦးကား၊ ယေဇရေလမြို့သူ အဟိနောင်တွင် မြင်သောသားအာမနုန်တည်း။
3 ೩ ಎರಡನೆಯವನು ಕಿಲಾಬನು. ಇವನು ಕರ್ಮೆಲ್ಯನಾದ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಳಲ್ಲಿ ಹುಟ್ಟಿದವನು. ಮೂರನೆಯವನು ಅಬ್ಷಾಲೋಮನು. ಇವನು ಗೆಷೂರಿನ ಅರಸನಾದ ತಲ್ಮೈ ಎಂಬುವನ ಮಗಳಾದ ಮಾಕಳ ಪುತ್ರನು.
၃ဒုတိယသားကား၊ နာဗလမယား၊ ကရမေလမြို့သူ အဘိဂဲလတွင်မြင်သောသား ခိလပ်တည်း။ တတိယသားကား၊ ဂေရှုရိရှင်ဘုရင်တာလမဲ သမီးမာခါ၏သား အဗရှလုံတည်း။
4 ೪ ನಾಲ್ಕನೆಯವನು ಅದೋನೀಯನು. ಇವನು ಹಗ್ಗೀತಳ ಮಗನು. ಐದನೆಯವನು ಶೆಫಟ್ಯನು, ಇವನು ಅಬೀಟಲಳ ಮಗನು.
၄စတုတ္တသားကား၊ ဟဂ္ဂိတ်၏ သားအဒေါနိယ တည်း။ ပဥ္စမသားကား၊ အဘိတလနသား ရှေဖတိတည်း။
5 ೫ ಆರನೆಯವನು ಇತ್ರಾಮನು. ಇವನು ದಾವೀದನಿಗೆ ಅವನ ಹೆಂಡತಿಯಾದ ಎಗ್ಲಳಲ್ಲಿ ಹುಟ್ಟಿದವನು. ಹೆಬ್ರೋನಿನಲ್ಲಿರುವಾಗ ದಾವೀದನಿಗೆ ಹುಟ್ಟಿದ ಮಕ್ಕಳು ಇವರೇ.
၅ဆဋ္ဌမသားကား၊ မြောက်သားတော် ဧဂလာ တွင် မြင်သောသား ဣသရံတည်း။ ဤရွေ့ကား၊ ဟေဗြုန် မြို့၌ ဒါဝိဒ်မြင်သောသားတည်း။
6 ೬ ಸೌಲನ ವಂಶದವರಿಗೂ ದಾವೀದನ ವಂಶದವರಿಗೂ ಯುದ್ಧ ನಡೆಯುತ್ತಿರುವಾಗ ಸೌಲನ ವಂಶದವರಲ್ಲಿ ಅಬ್ನೇರನೇ ಬಲಿಷ್ಠನಾಗಿದ್ದನು.
၆ရှောလုအမျိုးနှင့်ဒါဝိဒ်အမျိုး စစ်တိုက်ကြစဉ်အခါ၊ အာဗနာသည် ရှောလုအမျိုးဘက်မှာ ကိုယ်ကို ခိုင်မာစေ၏။
7 ೭ ಅಯಾಹನ ಮಗಳಾದ ರಿಚ್ಪಳು ಸೌಲನ ಉಪಪತ್ನಿಯಾಗಿದ್ದಳು. ಒಂದು ದಿನ ಈಷ್ಬೋಶೆತನು ಅಬ್ನೇರನನ್ನು, “ನೀನು ನನ್ನ ತಂದೆಯ ಉಪಪತ್ನಿಯರನ್ನು ಕೂಡಿದ್ದೇಕೆ?” ಎಂದು ಕೇಳಿದನು.
၇ရှောလု၌ အဲအာ၏သမီးရိဇပမည်သော မယားငယ်တယောက်ရှိ၏။ ဣရှဗောရှက်က၊ သင်သည် ငါ့အဘ၏ မယားငယ်ကိုအဘယ်ကြောင့် သိမ်းသနည်းဟု အာဗနာအားဆိုလျှင်၊
8 ೮ ಅಬ್ನೇರನು ಈ ಮಾತನ್ನು ಕೇಳಿ ಕೋಪಗೊಂಡು ಈಷ್ಬೋಶೆತನಿಗೆ, “ಈ ವರೆಗೆ ನಾನು ನಿನ್ನ ತಂದೆಯಾದ ಸೌಲನ ಕುಟುಂಬಕ್ಕೂ ಅವನ ಬಂಧು ಮಿತ್ರರಿಗೂ ದಯೆತೋರಿಸುತ್ತಿದ್ದೇನಲ್ಲಾ. ನಿನ್ನನ್ನು ದಾವೀದನ ಕೈಗೆ ಒಪ್ಪಿಸಿಕೊಡಲಿಲ್ಲವಷ್ಟೆ. ಈಗ ಈ ಹೆಂಗಸಿನ ದೆಸೆಯಿಂದ ನನ್ನಲ್ಲಿ ತಪ್ಪುಹಿಡಿಯುವುದಕ್ಕೆ ನಾನೇನು ಯೆಹೂದ ನಾಯಿಯ ತಲೆಯೋ?
၈ထိုစကားကြောင့် အာဗနာသည် အလွန်စိတ်ဆိုးလျက်၊ ငါသည် ယုဒအမျိုးကို ဆီးတား၍ သင့်အဘရှောလု အမျိုးနှင့် ညီအစ်ကိုအဆွေခင်ပွန်းတို့အား ယနေ့တိုင်အောင် ကျေးဇူးပြုသဖြင့် သင့်ကိုဒါဝိဒ်လက်သို့ မအပ်နှံဘဲနေသော်၊ သင်သည်ငါ့ကို ခွေး၏ဦးခေါင်းကဲ့သို့ သာမှတ်၍ ထိုမိန်းမအတွက် ယနေ့အပြစ်တင်ရမည် လော။
9 ೯ ನಾನು ಅರಸುತನವನ್ನು ಸೌಲನ ಕುಟುಂಬದಿಂದ ತೆಗೆದು ದಾನಿನಿಂದ ಬೇರ್ಷೆಬದ ವರೆಗಿರುವ ಎಲ್ಲಾ ಇಸ್ರಾಯೇಲರಲ್ಲಿಯೂ, ಯೆಹೂದ್ಯರಲ್ಲಿಯೂ ದಾವೀದನ ಸಿಂಹಾಸನವನ್ನು ಸ್ಥಿರಪಡಿಸಿ,
၉ထာဝရဘုရားသည် နိုင်ငံတော်ကို ရှောလုအမျိုးမှ နှုတ်၍
10 ೧೦ ಯೆಹೋವನಾದ ದೇವರು ದಾವೀದನಿಗೆ ಮಾಡಿದ ವಾಗ್ದಾನವನ್ನು ನೆರವೇರಿಸದೆ ಹೋದರೆ, ಆತನು ನನಗೆ ಬೇಕಾದದ್ದನ್ನು ಮಾಡಲಿ” ಅಂದನು.
၁၀ဒါဝိဒ်၏ အာဏာတော်ကိုဒန်မြို့မှစ၍ ဗေရ ရှေဘမြို့တိုင်အောင် ဣသရေလပြည်၊ ယုဒပြည်အရပ် ရပ်တို့၌ တည်စေခြင်းငှါ၊ ဒါဝိဒ်အားပြုမည်ဟု ကျိန်ဆို တော်မူသည်အတိုင်း၊ ငါလည်း ဒါဝိဒ်အားမပြုဘဲနေလျှင်၊ ထိုမျှမက ဘုရားသခင်သည် အာဗနာအား ပြုတော်မူပါစေသောဟု ဆိုသောကြောင့်၊
11 ೧೧ ಈಷ್ಬೋಶೆತನು ಅವನಿಗೆ ಹೆದರಿ ಏನೂ ಉತ್ತರಕೊಡಲಾರದೆ ಹೋದನು.
၁၁ဣရှဗောရှက်သည် ကြောက်၍ စကားတခွန်း ကိုမျှ မပြန်ဝံ့။
12 ೧೨ ಅನಂತರ ಅಬ್ನೇರನು ದಾವೀದನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ, “ದೇಶವು ಯಾರದು? ನೀನು ನನ್ನೊಡನೆ ಒಡಂಬಡಿಕೆ ಮಾಡಿಕೊಂಡರೆ ಇಸ್ರಾಯೇಲರನ್ನೆಲ್ಲಾ ನಿನ್ನ ಕಡೆಗೆ ತಿರುಗಿಸುವ ಪ್ರಯತ್ನದಲ್ಲಿ ನಾನು ನಿನ್ನ ಸಂಗಡ ಕೈಜೋಡಿಸುತ್ತೇನೆ” ಎಂದು ಹೇಳಿಸಿದನು.
၁၂ထိုနောက်အာဗနာသည် မိမိအတွက် သံတမန်တို့ကို ဒါဝိဒ်ထံသို့စေလွှတ်၍၊ ပြည်ရှင်မင်းကား အဘယ်သူနည်း။ ကျွန်တော်နှင့်မိဿဟာယဖွဲ့တော်မူပါ။ ဣသရေလအမျိုးအပေါင်းတို့ကို ကိုယ်တော်ထံသို့ ပြောင်းလဲစေခြင်းငှါ၊ ကျွန်တော်သည် ကိုယ်တော်ဘက်သို့ ဝင်စားပါမည်ဟု လျှောက်ဆို၏။
13 ೧೩ ಅದಕ್ಕೆ ದಾವೀದನು, “ಒಳ್ಳೆಯದು, ನಿನ್ನ ಸಂಗಡ ಒಡಂಬಡಿಕೆ ಮಾಡಿಕೊಳ್ಳುತ್ತೇನೆ. ಆದರೆ ನಿನ್ನಿಂದ ನನಗೆ ಒಂದು ಸಹಾಯ ಬೇಕು. ನನ್ನನ್ನು ನೋಡುವುದಕ್ಕೆ ಬರುವಾಗ ಸೌಲನ ಮಗಳಾದ ಮೀಕಲಳನ್ನು ಕರೆದುಕೊಂಡು ಬರಬೇಕು. ಹಾಗೆ ಕರೆದುಕೊಂಡು ಬಾರದಿದ್ದರೆ, ನೀನು ನನ್ನ ಮುಖವನ್ನು ನೋಡಕೂಡದು” ಎಂದು ಉತ್ತರಕೊಟ್ಟನು.
၁၃ဒါဝိဒ်ကလည်း ကောင်းပြီ။ သင်နှင့်ငါ မိဿဟာယဖွဲ့မည်။ သို့ရာတွင် ငါတောင်းစရာတခုရှိ၏။ ငါ့မျက်နှာကိုမြင်အံ့သောငှါ လာသောအခါ၊ ရှောလုသမီး မိခါလကို ဆောင်ခဲ့ရမည်။ သို့မဟုတ် ငါ့မျက်နှာကို မမြင်ရဟု ပြန်ဆို၏။
14 ೧೪ ಆಗ ದಾವೀದನು ಸೌಲನ ಮಗನಾದ ಈಷ್ಬೋಶೆತನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ, “ನಾನು ನೂರು ಮಂದಿ ಫಿಲಿಷ್ಟಿಯರ ಮುಂದೊಗಲನ್ನು ತಂದು ಕೊಟ್ಟು ವರಿಸಿದ ನನ್ನ ಹೆಂಡತಿಯಾದ ಮೀಕಲಳನ್ನು ನನಗೊಪ್ಪಿಸು” ಎಂಬುದಾಗಿ ಆಜ್ಞಾಪಿಸಿದನು.
၁၄ဒါဝိဒ်သည်လည်း သံတမန်တို့ကို ရှောလုသား ဣရှဗောရှက်ထံသို့စေလွှတ်၍၊ ငါသည် ဖိလိတ္တိလူ အရေဖျားတရာနှင့် ဝယ်ယူသော ငါ့မယားမိခါလကို အပ်လိုက်ရမည်ဟု မှာလိုက်သည်အတိုင်း၊
15 ೧೫ ಈಷ್ಬೋಶೆತನು ಲಯಿಷನ ಮಗನೂ ಆಕೆಯ ಗಂಡನೂ ಆದ ಪಲ್ಟೀಯೇಲನ ಮನೆಗೆ ಆಳುಗಳನ್ನು ಕಳುಹಿಸಿ ಆಕೆಯನ್ನು ಕರೆಯಿಸಿದನು.
၁၅ဣရှဗောရှက်သည် စေလွှတ်၍ ထိုမိန်းမကို သူ၏လင်လဲရှ၏ သားဖာလတိလက်မှ နှုတ်ယူလေ၏။
16 ೧೬ ಆಗ ಪಲ್ಟೀಯೇಲನು ಬಹುರೀಮಿನವರೆಗೆ ಅಳುತ್ತಾ ಆಕೆಯ ಹಿಂದೆ ಹೋದನು. ಅನಂತರ ಅಬ್ನೇರನು ಅವನಿಗೆ, “ಹಿಂದಿರುಗಿ ಮನೆಗೆ ಹೋಗು” ಎಂದು ಹೇಳಲು ಅವನು ಹಿಂದಿರುಗಿ ಹೋದನು.
၁၆သူ၏လင်သည် ငိုကြွေးလျက် သူ့နောက်သို့ ဗာဟုရိမ်မြို့တိုင်အောင်လိုက်လေ၏။ အာဗနာကလည်း ပြန်သွားတော့ဟုဆိုသော် ပြန်သွားရ၏။
17 ೧೭ ಅಬ್ನೇರನು ಇಸ್ರಾಯೇಲರ ಹಿರಿಯರಿಗೆ, “ದಾವೀದನು ನಮ್ಮ ಅರಸನಾಗಬೇಕೆಂದು ನೀವು ಮೊದಲು ಅಪೇಕ್ಷಿಸಿದಂತೆಯೇ ಈಗ ಮಾಡಿರಿ.
၁၇အာဗနာသည်လည်း၊ ဣသရေလအမျိုး အသက်ကြီးသူတို့နှင့် တိုင်ပင်လျက်၊ သင်တို့သည် အထက်က ဒါဝိဒ်ကိုရှင်ဘုရင်အရာ၌ ချီးမြှောက်ချင်သော စိတ်ရှိကြသည်ဖြစ်၍၊
18 ೧೮ ಯೆಹೋವನು ದಾವೀದನ ವಿಷಯವಾಗಿ ನನ್ನ ಸೇವಕನಾದ ದಾವೀದನ ಮುಖಾಂತರವಾಗಿ ನನ್ನ ಪ್ರಜೆಗಳಾದ ಇಸ್ರಾಯೇಲ್ಯರನ್ನು ಫಿಲಿಷ್ಟಿಯರ ಕೈಗೂ ಬೇರೆ ಎಲ್ಲಾ ಶತ್ರುಗಳ ಕೈಗೂ ತಪ್ಪಿಸುವನೆಂದು ನುಡಿದಿದ್ದಾನಲ್ಲಾ” ಎಂದು ಹೇಳಿದನು.
၁၈ယခုချီးမြှောက်ကြလော့။ ထာဝရဘုရားက၊ ငါ့ကျွန်ဒါဝိဒ်လက်ဖြင့် ငါ၏လူ ဣသရေလအမျိုးကို ဖိလိတ္တိ လူတို့လက်မှ၎င်း၊ ရန်သူအပေါင်းတို့လက်မှ၎င်း၊ ငါကယ် နှုတ်မည်ဟု ဒါဝိဒ်အဘို့ မိန့်တော်မူပြီဟု ဆိုလေ၏။
19 ೧೯ ಅವನು ಬೆನ್ಯಾಮೀನ್ಯರಿಗೂ ಇದೇ ಪ್ರಕಾರ ಹೇಳಿದನು. ತರುವಾಯ ಅವನು ಇಸ್ರಾಯೇಲರೂ ಬೆನ್ಯಾಮೀನ್ಯರೆಲ್ಲರೂ ಒಪ್ಪಿಕೊಂಡು ಹೇಳಿದ ಮಾತುಗಳನ್ನು ದಾವೀದನಿಗೆ ತಿಳಿಸುವುದಕ್ಕೋಸ್ಕರ ಹೆಬ್ರೋನಿಗೆ ಹೊರಟನು.
၁၉တဖန်အာဗနာသည် ဗင်္ယာမိန်အမျိုးသားတို့ကို လည်း သွေးဆောင်လေ၏၊ နောက်တဖန် ဣသရေလ အမျိုး အလိုရှိသမျှအရာ၊ ဗင်္ယာမိန်အမျိုး တညီညွတ် တည်း အလိုရှိသမျှသောအရာတို့ကို ဟေဗြုန်မြို့၌ ဒါဝိဒ် အား ပြန်လျှောက်ခြင်းငှါ သွား၍၊
20 ೨೦ ಅವನು ಹೆಬ್ರೋನಿಗೆ ಬಂದಾಗ ದಾವೀದನು ಅವನಿಗೂ ಅವನ ಸಂಗಡ ಬಂದಿದ್ದ ಇಪ್ಪತ್ತು ಜನರಿಗೂ ಔತಣ ಮಾಡಿಸಿದನು.
၂၀လူနှစ်ကျိပ်ပါလျက် ဒါဝိဒ်ရှိရာ ဟေဗြုန်မြို့သို့ ရောက်သဖြင့်၊ ဒါဝိဒ်သည် ပွဲလုပ်၍ အာဗနာနှင့် သူ၏ လူတို့ကိုကျွေး၏။
21 ೨೧ ಅಬ್ನೇರನು ದಾವೀದನಿಗೆ, “ನಾನು ಹೊರಟುಹೋಗಿ ಇಸ್ರಾಯೇಲರನ್ನೆಲ್ಲಾ ಕೂಡಿಸಿ, ನನ್ನ ಒಡೆಯನಾದ ಅರಸನ ಬಳಿಗೆ ಕರೆದುಕೊಂಡು ಬರುವೆನು. ಅವರು ನಿನ್ನ ಸಂಗಡ ಒಡಂಬಡಿಕೆ ಮಾಡಿಕೊಳ್ಳುವರು. ನೀನು ನಿನ್ನ ಅಪೇಕ್ಷೆಯಂತೆ ಎಲ್ಲರ ಮೇಲೆ ದೊರೆತನಮಾಡಬಹುದು” ಎಂದು ಹೇಳಲು ದಾವೀದನು ಅವನನ್ನು ಸಮಾಧಾನದಿಂದ ಕಳುಹಿಸಿಕೊಟ್ಟನು.
၂၁အာဗနာကလည်း၊ ဣသရေလအမျိုးသား အပေါင်းတို့သည် ကိုယ်တော်နှင့် မိဿဟာယဖွဲ့စေခြင်းငှါ ၎င်း၊ ကိုယ်တော်သည်အလိုတော်ရှိသမျှအတိုင်း စိုးစံစေခြင်းငှါ၎င်း၊ ကျွန်တော်ထသွား၍ ထိုသူအပေါင်းတို့ကို ကျွန်တော်သခင်၊ ကျွန်တော်ရှင်ဘုရင် ထံတော်၌စုဝေး စေပါမည်ဟု လျှောက်ပြီးမှ၊ ဒါဝိဒ်လွှတ်လိုက်၍ သူသည် ငြိမ်ဝပ်စွာ သွားလေ၏။
22 ೨೨ ಸುಲಿಗೆ ಮಾಡುವುದಕ್ಕಾಗಿ ಹೋಗಿದ್ದ ದಾವೀದನ ಭಟರು ಯೋವಾಬನೂ ದೊಡ್ಡ ಕೊಳ್ಳೆಯೊಡನೆ ಅಷ್ಟರಲ್ಲಿ ಹಿಂತಿರುಗಿ ಬಂದರು. ಅವನು ಹೆಬ್ರೋನಿಗೆ ಬಂದಾಗ ಅಬ್ನೇರನು ದಾವೀದನ ಹತ್ತಿರ ಇರಲಿಲ್ಲ. ದಾವೀದನು ಅವನನ್ನು ಸುರಕ್ಷಿತವಾಗಿ ಕಳುಹಿಸಿಬಿಟ್ಟಿದ್ದನು.
၂၂ထိုအခါ ယွာဘနှင့်ဒါဝိဒ်၏ကျွန်တို့သည် ရန်သူအလုံးအရင်းကို လိုက်ရာမှပြန်လာ၍၊ လက်ရဥစ္စာများကို ယူခဲ့ကြ၏။ အာဗနာသည် ဒါဝိဒ် နှင့်အတူဟေဗြုန်မြို့၌ မရှိ။ ဒါဝိဒ်သည် လွှတ်လိုက်၍ သူသည်ငြိမ်ဝပ်စွာ သွားနှင့်ပြီ။
23 ೨೩ ಸೈನ್ಯಸಹಿತವಾಗಿ ಹಿಂದಿರುಗಿ ಬಂದ ಯೋವಾಬನು ನೇರನ ಮಗನಾದ ಅಬ್ನೇರನು ಬಂದಿದ್ದನೆಂದೂ, ಅರಸನು ಅವನನ್ನು ಸುರಕ್ಷಿತವಾಗಿ ಕಳುಹಿಸಿದನೆಂದೂ ತಿಳಿದು, ಅರಸನ ಬಳಿಗೆ ಹೋಗಿ,
၂၃ယွာဘနှင့် သူ၌ပါသောစစ်သူရဲအပေါင်းတို့သည် ရောက်ကြသောအခါ၊ နေရ၏သားအာဗနာသည် ရှင်ဘုရင်ထံတော်သို့လာပြီ။ ရှင်ဘုရင်သည်လည်း လွှတ်လိုက်၍၊ သူသည်ငြိမ်ဝပ်စွာသွားပြီဟု ယွာဘအား ကြားပြောလျှင်၊
24 ೨೪ “ನೀನು ಮಾಡಿದ್ದೇನು? ಅಬ್ನೇರನು ನಿನ್ನ ಬಳಿಗೆ ಬಂದಿದ್ದನಂತೆ. ನೀನು ಅವನನ್ನು ಸುರಕ್ಷಿತವಾಗಿ ಕಳುಹಿಸಿಬಿಟ್ಟಿದ್ದೇಕೆ?
၂၄ယွာဘသည် ရှင်ဘုရင်ထံတော်သို့ဝင်၍၊ ကိုယ်တော်သည် အဘယ်သို့ပြုတော်မူသနည်း။ အာဗနာ သည်အထံတော်သို့လာပြီးမှ တဖန်အလွတ်သွားစေခြင်းငှါ အဘယ်ကြောင့် လွှတ်လိုက်တော်မူသနည်း။
25 ೨೫ ನೇರನ ಮಗನಾದ ಅಬ್ನೇರನ ಸಂಗತಿ ನಿನಗೆ ಗೊತ್ತಿಲ್ಲವೋ? ಅವನು ನಿನ್ನನ್ನು ವಂಚಿಸುವುದಕ್ಕೂ ನಿನ್ನ ಸ್ಥಿತಿಗತಿಗಳನ್ನು ತಿಳಿದುಕೊಳ್ಳುವುದಕ್ಕೂ ನೀನು ಏನೇನು ಮಾಡುತ್ತಿರುತ್ತೀ ಎಂಬುದನ್ನು ಕಂಡುಹಿಡಿಯುವುದಕ್ಕೂ ಬಂದಿದ್ದನಷ್ಟೇ” ಎಂದು ಹೇಳಿ,
၂၅နေရ၏သား အာဗနာသည် ကိုယ်တော်ကိုလှည့်စား၍ ကိုယ်တော်ထွက်ဝင်တော်မူခြင်း၊ စီရင်တော်မူ ခြင်းအလုံးစုံကို သိအံ့သောငှါသာ လာသည်ကို ကိုယ်တော်သိတော်မူ၏ဟု လျှောက်ပြီးလျှင်၊
26 ೨೬ ಯೋವಾಬನು ದಾವೀದನನ್ನು ಬಿಟ್ಟು, ಹೊರಗೆ ಹೋಗಿ, ಅಬ್ನೇರನನ್ನು ಕರೆತರುವಂತೆ ದೂತರನ್ನು ಕಳುಹಿಸಿದನು. ಇವರು ಹೋಗಿ ಸಿರಾ ಬಾವಿಯ ಬಳಿಯಿಂದ ಅವನನ್ನು ಕರೆದುಕೊಂಡು ಬಂದರು. ಇದು ದಾವೀದನಿಗೆ ಗೊತ್ತಿರಲಿಲ್ಲ.
၂၆အထံတော်ကထွက်၍ အာဗနာနောက်သို့ တမန်တို့ကိုစေလွှတ်လျက်၊ သိရရေတွင်းမှ ခေါ်လေ၏။ ထိုအမှုကို ဒါဝိဒ်မသိ။
27 ೨೭ ಅಬ್ನೇರನು ಹೆಬ್ರೋನಿಗೆ ಬಂದಾಗ ಯೋವಾಬನು ಅವನನ್ನು ರಹಸ್ಯ ಸಂಭಾಷಣೆಗೋ ಎಂಬಂತೆ ಊರಬಾಗಿಲಿನೊಳಗೆ ಕರೆದುಕೊಂಡು ಹೋಗಿ ತನ್ನ ತಮ್ಮನಾದ ಅಸಾಹೇಲನನ್ನು ಕೊಂದದ್ದಕ್ಕೆ ಪ್ರತಿಯಾಗಿ ಅವನನ್ನು ಹೊಟ್ಟೆಯಲ್ಲಿ ತಿವಿದು ಕೊಂದನು.
၂၇အာဗနာသည် ဟေဗြုန်မြို့သို့ရောက်သောအခါ၊ ယွာဘသည် သင့်အတင့်နှုတ်ဆက်ခြင်ငှါ၊ မြို့တံခါးနားသို့ ခေါ်ပြီးလျှင်၊ ညီအာသဟေလ သေသည်အတွက် သူ၏ ဝမ်းကိုထိုး၍ သူသည်လည်း သေ၏။
28 ೨೮ ಸ್ವಲ್ಪ ಹೊತ್ತಾದ ಮೇಲೆ ಈ ವರ್ತಮಾನವು ದಾವೀದನಿಗೆ ಮುಟ್ಟಿತು. ಆಗ ಅವನು, “ನೇರನ ಮಗನಾದ ಅಬ್ನೇರನ ರಕ್ತಾಪರಾಧಕ್ಕೆ ನಾನೂ, ನನ್ನ ರಾಜ್ಯವೂ ಯೆಹೋವನ ಮುಂದೆ ಸದಾ ನಿರ್ದೋಷಿಗಳು.
၂၈ထိုနောက်ဒါဝိဒ်သည် ကြားသောအခါ၊ နေရ၏သား အာဗနာကို သတ်သောအပြစ်နှင့် ငါသည် ထာဝရ ဘုရားရှေ့တော်၌ လွတ်ပါစေ။ ငါ့နိုင်ငံလွတ်ပါစေ။
29 ೨೯ ಈ ಅಪರಾಧವು ಯೋವಾಬನ ಮೇಲೆಯೂ ಅವನ ಸಂತಾನದವರ ಮೇಲೆಯೂ ಇರಲಿ. ಅವನ ಮನೆಯಲ್ಲಿ ಮೇಹಸ್ರಾವವುಳ್ಳವರೂ (ರಕ್ತ, ಕೀವುಸ್ರವಿಸುವ ಚರ್ಮ ರೋಗ), ಕುಷ್ಠರೋಗಿಗಳೂ, ಕುಂಟರೂ, ಕತ್ತಿಯಿಂದ ಹತರಾಗುವವರೂ, ಭಿಕ್ಷೇ ಬೇಡುವವರು ಇದ್ದೇ ಇರಲಿ” ಅಂದನು.
၂၉ယွာဘခေါင်း၊ သူ့အဆွေအမျိုးအပေါင်းတို့၏ ခေါင်းပေါ်သို့ရောက်ပါစေ။ ယွာဘ၏အဆွေအမျိုး၌ ရိနာစွဲသောသူ၊ နူနာစွဲသောသူ၊ ကျောကုန်းသောသူ။ ထားဖြင့် သေသောသူ၊ ငတ်မွတ်သောသူ မပြတ်စေနှင့်ဟု မြွက်ဆို၏။
30 ೩೦ ಅಬ್ನೇರನು ಗಿಬ್ಯೋನಿನ ಸಮೀಪದಲ್ಲಾದ ಯುದ್ಧದಲ್ಲಿ ಯೋವಾಬ ಅಬೀಷೈಯರ ತಮ್ಮನಾದ ಅಸಾಹೇಲನನ್ನು ಸಾಯಿಸಿದ್ದರಿಂದ ಅವರು ಇವನನ್ನು ಕೊಂದು ಹಾಕಿದರು.
၃၀ထိုသို့ယွာဘနှင့်ညီ အဘိရှဲသည်အာဗနာကို သတ်၏။ အကြောင်းမူကား၊ သူတို့ညီ အာသဟေလကို ဂိဗောင်စစ်တိုက်ပွဲ၌ အာဗနာသတ်သတည်း။
31 ೩೧ ಅರಸನಾದ ದಾವೀದನು ಯೋವಾಬನಿಗೂ ಅವನ ಸಂಗಡ ಇದ್ದ ಜನರಿಗೂ, “ನಿಮ್ಮ ಬಟ್ಟೆಗಳನ್ನು ಹರಿದುಕೊಂಡು, ಗೋಣಿತಟ್ಟುಗಳನ್ನು ಕಟ್ಟಿಕೊಂಡು, ಗೋಳಾಡುತ್ತಾ ಅಬ್ನೇರನ ಶವದ ಮುಂದೆ ನಡೆಯಿರಿ” ಎಂದು ಆಜ್ಞಾಪಿಸಿ ತಾನು ಶವಯಾತ್ರೆ ಹಿಂದೆ ಹೋದನು.
၃၁ဒါဝိဒ်ကလည်း၊ ယွာဘနှင့်မိမိ၌ရှိသောသူ အပေါင်းတို့အား၊ သင်တို့အဝတ်ကိုဆုတ်၍ လျှောက်တေ အဝတ်ကိုဝတ်လျက်၊ အာဗနာအတွက် ငိုကြွေးမြည်တမ်း ခြင်းကို ပြုကြလော့ဟု အမိန့်တော်ရှိ၍ ကိုယ်တော်တိုင် မသာလိုက်လေ၏။
32 ೩೨ ಅಬ್ನೇರನ ಶವವನ್ನು ಹೆಬ್ರೋನಿನಲ್ಲಿ ಸಮಾಧಿಮಾಡಿದರು. ಅರಸನು ಅವನ ಸಮಾಧಿಯ ಹತ್ತಿರ ನಿಂತು ಗಟ್ಟಿಯಾಗಿ ಅತ್ತನು. ಜನರೆಲ್ಲರೂ ಅತ್ತರು.
၃၂အာဗနာကိုဟေဗြုန်မြို့၌ သင်္ဂြိုဟ်ကြ၏။ သင်္ချိုင်းအနားမှာ ရှင်ဘုရင်သည် အသံကိုလွှင့်၍ ငိုကြွေး ၏။ လူအပေါင်းတို့သည်လည်း ငိုကြွေးကြ၏။
33 ೩೩ ದಾವೀದನು ಅಬ್ನೇರನನ್ನು ಕುರಿತು, “ಅಬ್ನೇರನೇ ನಿನಗೆ ಮೂರ್ಖರಿಗಾಗುವಂತೆ ದುರ್ಮರಣವಾಯಿತೋ?
၃၃ရှင်ဘုရင်သည် အာဗနာအတွက် မြည်တမ်း သည်ကား၊ အာဗနာသည် လူမိုက်ကဲ့သို့သေသလော။
34 ೩೪ ನಿನ್ನ ಕೈಗಳು ಕಟ್ಟಲ್ಪಡಲಿಲ್ಲ. ನಿನ್ನ ಕಾಲುಗಳಿಗೆ ಬೇಡಿಗಳು ಹಾಕಿರಲಿಲ್ಲ. ನೀನು ದುಷ್ಟರಿಂದ ಹತನಾದಂತೆ ಹತನಾದಿ” ಎಂದು ಶೋಕಗೀತೆಯನ್ನು ಹಾಡಲು ಜನರು ತಿರುಗಿ ಅತ್ತರು.
၃၄သင်၏လက်ကိုမချည်၊ သံချေချင်းမခတ်ဘဲ လူဆိုးလက်ဖြင့် သေသကဲ့သို့ သေရှာပါပြီတကားဟု မြွက် ဆို၏။ လူအပေါင်းတို့သည်လည်း တဖန်ငိုကြွေးကြ၏။
35 ೩೫ ಸೂರ್ಯಸ್ತಮಾನಕ್ಕೆ ಮೊದಲೇ ಜನರೆಲ್ಲರೂ ದಾವೀದನ ಬಳಿಗೆ ಬಂದು ಅವನನ್ನು ಊಟಕ್ಕೆ ಎಬ್ಬಿಸಬೇಕೆಂದು ಪ್ರಯತ್ನಿಸಿದರು. ಆದರೆ ಅವನು, “ಸೂರ್ಯನು ಮುಣುಗುವ ಮೊದಲು ನಾನು ರೊಟ್ಟಿಯನ್ನಾಗಲಿ, ಬೇರೆ ಯಾವುದನ್ನಾಗಲಿ ಬಾಯಲ್ಲಿ ಹಾಕಿದರೆ ದೇವರು ನನಗೆ ಬೇಕಾದದ್ದನ್ನು ಮಾಡಲಿ” ಎಂದು ಆಣೆಯಿಟ್ಟು ಹೇಳಿದನು.
၃၅မိုဃ်းမချုပ်မှီ ဒါဝိဒ်သည် စားတော်ခေါ်မည် အကြောင်း လူအပေါင်းတို့သည် ချဉ်းကပ်ကြသော်လည်း၊ ဒါဝိဒ်က၊ နေမဝင်မှီ မုန့်အစရှိသော စားစရာတစုံတခုကို ငါမြည်းစမ်းလျှင်၊ ထိုမျှမကငါ၌ ဘုရားသခင်ပြုတော် မူစေသတည်းဟု ကျိန်ဆို၏
36 ೩೬ ಜನರು ಇದನ್ನು ಕಂಡು ಮೆಚ್ಚಿದರು. ಅರಸನು ಮಾಡಿದ್ದೆಲ್ಲವೂ ಅವರಿಗೆ ಒಪ್ಪಿಗೆಯಾಯಿತು.
၃၆ထိုအမှုကိုလူအပေါင်းတို့သည် မှတ်၍ နှစ်သက် ကြ၏။ ပြုတော်မူသမျှတို့ကိုလည်း လူအပေါင်းတို့သည် နှစ်သက်ကြ၏။
37 ೩೭ ನೇರನ ಮಗನಾದ ಅಬ್ನೇರನ ಕೊಲೆಯಲ್ಲಿ ಅರಸನು ಕೈಹಾಕಲಿಲ್ಲವೆಂಬುದು ಅವನ ಎಲ್ಲಾ ಜನರಿಗೂ ಇಸ್ರಾಯೇಲರಿಗೂ ಅದೇ ದಿನ ಗೊತ್ತಾಯಿತು.
၃၇ရှင်ဘုရင်သည် နေရ၏သားအာဗနာကို သတ် စေခြင်းငှါအလိုမရှိဟု ထိုနေ့၌ဣသရေလအမျိုးသားများနှင့် လူများအပေါင်းတို့သည် သိနားလည်ကြ၏။
38 ೩೮ ಅರಸನು ತನ್ನ ಸೇವಕರಿಗೆ, “ಈ ದಿನ ಇಸ್ರಾಯೇಲರಲ್ಲಿ ಹತವಾದವನು, ಪ್ರಭುವೂ, ಮಹಾಪುರುಷನೂ ಆಗಿದ್ದಾನೆಂಬುದು ನಿಮಗೆ ಗೊತ್ತಿದೆಯಲ್ಲಾ.
၃၈ရှင်ဘုရင်ကလည်း၊ ဣသရေလအမျိုး၌ မင်းသားဖြစ်သောသူ၊ ကြီးမြတ်သောသူတပါးသည် ယနေ့ဆုံးကြောင်းကို သင်တို့မသိသလော။
39 ೩೯ ನಾನು ರಾಜ್ಯಾಭಿಷೇಕ ಹೊಂದಿದವನಾಗಿದ್ದರೂ ಈಗ ಏನೂ ಮಾಡಲಾರದವನಾಗಿದ್ದೇನೆ. ಚೆರೂಯಳ ಮಕ್ಕಳಾದ ಇವರು ನನ್ನ ಹತೋಟಿಗೆ ಬಾರದವರು ಯೆಹೋವನೇ ಕೆಡುಕರಿಗೆ ಮುಯ್ಯಿ ತೀರಿಸಲಿ” ಎಂದು ಹೇಳಿದನು.
၃၉ငါသည်ဘိသိတ်ခံရ၍ ရှင်ဘုရင်ဖြစ်သော်လည်း ယနေ့အားနည်း၏။ ဇေရုသားဖြစ်သော ဤသူတို့သည် ငါ့ထက်လွန်၍ အားကြီးကြ၏။ မတရားသဖြင့် ပြုသော သူကို မိမိအပြစ်နှင့်အလျောက် ထာဝရဘုရား ပေးဆပ် တော်မူစေသတည်းဟု မိမိကျွန်တို့အား မိန့်တော်မူ၏။