< ಸಮುವೇಲನು - ದ್ವಿತೀಯ ಭಾಗ 21 >

1 ದಾವೀದನ ಕಾಲದಲ್ಲಿ ಮೂರು ವರ್ಷಗಳ ವರೆಗೂ ಎಡಬಿಡದೆ ಬರವಿತ್ತು. ದಾವೀದನು ಯೆಹೋವನನ್ನು ವಿಚಾರಿಸಲು ಆತನು, “ಸೌಲನು ಗಿಬ್ಯೋನ್ಯರನ್ನು ಕೊಲ್ಲಿಸಿದ್ದರಿಂದ ಅವನ ಮೇಲೆಯೂ, ಅವನ ಮನೆಯವರ ಮೇಲೆಯೂ ರಕ್ತಾಪರಾಧವಿದೆ” ಎಂದು ಉತ್ತರ ಕೊಟ್ಟನು.
در دوران سلطنت داوود، قحطی شد و این قحطی سه سال طول کشید. داوود به درگاه خداوند دعا کرد و خداوند فرمود: «این قحطی به سبب خطای شائول و خاندان اوست، زیرا آنها جبعونی‌ها را کشتند.»
2 ಗಿಬ್ಯೋನ್ಯರು ಇಸ್ರಾಯೇಲ್ಯರ ಕುಲಕ್ಕೆ ಸೇರಿದವರಲ್ಲ. ಸಂಹೃತರಾಗದೆ ಉಳಿದ ಅಮೋರಿಯರಷ್ಟೆ. ಇಸ್ರಾಯೇಲ್ಯರು ತಾವು ಇವರನ್ನು ಕೊಲ್ಲುವುದಿಲ್ಲವೆಂದು ಪ್ರಮಾಣಮಾಡಿದ್ದರು. ಆದರೂ ಸೌಲನು ಇಸ್ರಾಯೇಲ್ ಮತ್ತು ಯೆಹೂದ ಕುಲಗಳ ಮೇಲೆ ತನಗಿದ್ದ ಅಭಿಮಾನದ ನಿಮಿತ್ತ ಇವರನ್ನು ನಿರ್ನಾಮಗೊಳಿಸಬೇಕೆಂದಿದ್ದನು.
پس داوود جبعونی‌ها را احضار نمود. (آنها جزو قوم اسرائیل نبودند، بلکه گروه کوچکی از اموری‌ها بودند. بنی‌اسرائیل قسم خورده بودند که آنها را نکشند؛ اما شائول به دلیل غیرتی که برای اسرائیل و یهودا داشت سعی کرد آنها را نابود کند.)
3 ಆಗ ಅರಸನಾದ ದಾವೀದನು ಗಿಬ್ಯೋನ್ಯರನ್ನು ಕರೆದು, “ನಾನು ನಿಮಗೋಸ್ಕರ ಏನು ಮಾಡಬೇಕೆನ್ನುತ್ತೀರಿ? ನಿಮಗೆ ಪ್ರಾಯಶ್ಚಿತ್ತವಾಗಿ ಯಾವುದನ್ನು ಮಾಡಿದರೆ ನೀವು ಯೆಹೋವನ ಸ್ವತ್ತನ್ನು ಆಶೀರ್ವದಿಸುವಿರಿ?” ಎಂದು ಕೇಳಿದನು.
داوود از ایشان پرسید: «چطور می‌توانم ظلمی را که در حق شما شده، جبران کنم تا شما قوم خداوند را برکت دهید؟»
4 ಅದಕ್ಕೆ ಅವರು, “ಸೌಲನ ಸಂತಾನದವರಿಗೂ ನಮಗೂ ಇರುವ ವ್ಯಾಜ್ಯವು ಬೆಳ್ಳಿ ಬಂಗಾರದಿಂದ ಮುಗಿಯಲಾರದು. ಇಸ್ರಾಯೇಲ್ಯರನ್ನು ಕೊಲ್ಲುವ ಅಧಿಕಾರವು ನಮಗಿಲ್ಲ” ಎಂದು ಉತ್ತರ ಕೊಟ್ಟರು. ಆಗ ಅರಸನು ಅವರಿಗೆ, “ಏನು ಮಾಡಬೇಕು ಹೇಳಿರಿ ಮಾಡುತ್ತೇನೆ” ಅಂದನು.
آنها جواب دادند: «ما از خاندان شائول طلا و نقره نمی‌خواهیم. در ضمن راضی هم نیستیم که به خاطر ما کسی از اسرائیلی‌ها کشته شود.» داوود گفت: «شما هر چه بخواهید برایتان انجام می‌دهم.»
5 ಆಗ ಅವರು, “ನಮ್ಮನ್ನು ಇಸ್ರಾಯೇಲರ ಪ್ರಾಂತ್ಯಗಳಿಂದ ಹೊರಡಿಸುವುದಕ್ಕೂ, ನಿರ್ನಾಮಗೊಳಿಸುವುದಕ್ಕೂ ಪ್ರಯತ್ನಿಸಿದ ಆ ಮನುಷ್ಯನ ಮಕ್ಕಳಲ್ಲಿ ಏಳು ಮಂದಿಯನ್ನು ನಮಗೆ ಒಪ್ಪಿಸು.
آنها گفتند: «هفت نفر از پسران شائول را به دست ما بدهید، یعنی پسران مردی را که می‌کوشید ما را از بین ببرد تا از ما کسی در اسرائیل باقی نماند. ما آنها را در حضور خداوند در جِبعه، شهر شائول که پادشاه برگزیدهٔ خداوند بود، به دار می‌آویزیم.» پادشاه گفت: «بسیار خوب، این کار را می‌کنم.»
6 ಯೆಹೋವನಿಂದ ಆರಿಸಲ್ಪಟ್ಟ ಸೌಲನು ವಾಸವಾಗಿದ್ದ ಗಿಬೆಯದಲ್ಲಿ ನಾವು ಅವರನ್ನು ಕೊಂದು, ಯೆಹೋವನ ಸನ್ನಿಧಿಯಲ್ಲಿ ಅವರನ್ನು ನೇತು ಹಾಕುವೆವು” ಎಂದರು. ಅದಕ್ಕೆ ಅರಸನು, “ಆಗಲಿ ಅವರನ್ನು ನಿಮಗೆ ಒಪ್ಪಿಸುತ್ತೇನೆ” ಅಂದನು.
7 ದಾವೀದನು ತಾನು ಸೌಲನ ಮಗನಾದ ಯೋನಾತಾನನಿಗೆ ಯೆಹೋವನ ಹೆಸರಿನಲ್ಲಿ ಮಾಡಿದ ಪ್ರಮಾಣವನ್ನು ನೆನಪುಮಾಡಿಕೊಂಡು ಸೌಲನ ಮೊಮ್ಮಗನೂ ಯೋನಾತಾನನ ಮಗನೂ ಆದ ಮೆಫೀಬೋಶೆತನನ್ನು ಉಳಿಸಿದನು.
داوود به خاطر عهد و پیمانی که در حضور خداوند با یوناتان بسته بود، پسر او مفیبوشت را که نوهٔ شائول بود به دست ایشان نداد.
8 ಆದರೆ ಸೌಲನಿಗೆ ಅಯ್ಯಾಹನ ಮಗಳಾದ ರಿಚ್ಪಳಲ್ಲಿ ಹುಟ್ಟಿದ ಅರ್ಮೋನೀ ಮತ್ತು ಮೆಫೀಬೋಶೆತ್ ಎಂಬ ಇಬ್ಬರು ಮಕ್ಕಳನ್ನೂ, ಮೆಹೋಲದ ಬರ್ಜಿಲ್ಲೈಯ ಮಗನಾದ ಅದ್ರಿಯೇಲನಿಗೆ ಸೌಲನ ಮಗಳಾದ ಮೀಕಲಳಲ್ಲಿ ಹುಟ್ಟಿದ ಐದು ಮಂದಿ ಮಕ್ಕಳನ್ನೂ ಕರೆದುಕೊಂಡು ಅವರನ್ನು ಗಿಬ್ಯೋನ್ಯರಿಗೆ ಒಪ್ಪಿಸಿದರು.
ولی دو پسر شائول یعنی ارمونی و مفیبوشت را که مادرشان رصفه، دختر اَیه بود، به ایشان داد. همچنین پنج پسر میرب را هم که از دختر شائول، زن عدریئیل پسر برزلای محولاتی به دنیا آمده بودند، به دست آنها سپرد.
9 ಅವರು ಇವರನ್ನು ಕೊಂದು, ಗುಡ್ಡದ ಮೇಲೆ ಯೆಹೋವನ ಸನ್ನಿಧಿಯಲ್ಲಿ ನೇತುಹಾಕಿದರು. ಈ ಏಳು ಮಂದಿಯೂ ಏಕ ಕಾಲದಲ್ಲಿ ಸತ್ತುಹೋದರು. ಇವರನ್ನು ಕೊಂದಾಗ ಜವೆಗೋದಿಯ ಸುಗ್ಗಿ ಆರಂಭವಾಗಿತ್ತು
جبعونی‌ها آنها را روی کوه در حضور خداوند به دار آویختند. بدین ترتیب، این هفت نفر در آغاز فصل درو جو مردند.
10 ೧೦ ಆಗ ಅಯ್ಯಾಹನ ಮಗಳಾದ ರಿಚ್ಪಳು ಒಂದು ಗೋಣಿತಟ್ಟನ್ನು ತೆಗೆದುಕೊಂಡು, ಅದನ್ನು ಬಂಡೆಯ ಮೇಲೆ ಹಾಸಿ, ಸುಗ್ಗಿಯ ಆರಂಭದಿಂದ ಶವಗಳ ಮೇಲೆ ಮಳೆ ಬೀಳುವ ತನಕ ಅದರ ಮೇಲೆ ಕುಳಿತುಕೊಂಡು, ಹಗಲಿನಲ್ಲಿ ಆಕಾಶದ ಪಕ್ಷಿಗಳೂ, ರಾತ್ರಿಯಲ್ಲಿ ಕಾಡು ಮೃಗಗಳೂ ಅವುಗಳನ್ನು ತಿನ್ನದಂತೆ ಕಾಯುತ್ತಿದ್ದಳು.
سپس رصفه، کنیز شائول، پلاسی گرفت و آن را روی یک تخته سنگ نزدیک اجساد انداخت و تمام فصل درو در آنجا ماند تا نگذارد پرندگان در روز و درندگان در شب اجساد را بخورند.
11 ೧೧ ಅಯ್ಯಾಹನ ಮಗಳೂ, ಸೌಲನ ಉಪಪತ್ನಿಯೂ ಆದ ರಿಚ್ಪಳು ಮಾಡಿದ ಈ ಕಾರ್ಯವು ದಾವೀದನಿಗೆ ಗೊತ್ತಾಯಿತು.
وقتی داوود شنید که رصفه، دختر آیَه، مُتعۀ شائول چه کرده است،
12 ೧೨ ಆಗ ಅವನು ಸೌಲನ ಮತ್ತು ಅವನ ಮಗನಾದ ಯೋನಾತಾನನ ಎಲುಬುಗಳನ್ನು ತರುವುದಕ್ಕೋಸ್ಕರ ಯಾಬೇಷ್ ಗಿಲ್ಯಾದಿಗೆ ಹೋದನು. ಫಿಲಿಷ್ಟಿಯರು ಸೌಲನನ್ನು ಗಿಲ್ಬೋವದಲ್ಲಿ ಸೋಲಿಸಿದ ನಂತರ ಅವನ ಮತ್ತು ಯೋನಾತಾನನ ಶವಗಳನ್ನು ಬೇತ್ ಷೆಯಾನಿನ ಬೀದಿಗಳಲ್ಲಿ ನೇತುಹಾಕಿದ್ದರು. ಯಾಬೇಷ್ ಗಿಲ್ಯಾದಿನವರು ಅಲ್ಲಿಂದ ಅವುಗಳನ್ನು ಕದ್ದುಕೊಂಡು ಹೋಗಿದ್ದರು.
ترتیبی داد که استخوانهای مردگان را دفن کنند. در ضمن از مردان یابیش جلعاد خواهش کرد استخوانهای شائول و پسرش یوناتان را برایش بیاورند. (وقتی شائول و یوناتان در جنگی که در کوه جلبوع واقع شد مردند، فلسطینی‌ها جنازه‌های آنها را در میدان شهر بیتْ‌شان به دار آویختند، ولی مردان یابیش جلعاد شبانه رفتند و جنازه‌های آنها را دزدیدند.) پس استخوانهای شائول و یوناتان را نزد داوود آورده، آنها را در قبر قیس، پدر شائول، واقع در صیلع در ملک بنیامین دفن کردند. سرانجام خداوند دعای داوود را مستجاب نمود و قحطی تمام شد.
13 ೧೩ ದಾವೀದನು ಯಾಬೇಷಿನಲ್ಲಿದ್ದ ಸೌಲ ಮತ್ತು ಯೋನಾತಾನರ ಎಲುಬುಗಳನ್ನು ಗಿಬ್ಯೋನಿನಲ್ಲಿ ಹತರಾದವರ ಎಲುಬುಗಳನ್ನೂ ತೆಗೆದುಕೊಂಡರು.
14 ೧೪ ಅವರು ಅ ಎಲಬುಗಳನ್ನೆಲ್ಲಾ ಬೆನ್ಯಾಮೀನ್ ದೇಶದ ಚೇಲಾ ಊರಿನಲ್ಲಿ ಸೌಲನ ತಂದೆಯಾದ ಕೀಷನ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಿಸಿದನು. ಅರಸನ ಅಪ್ಪಣೆಯಂತೆ ಇದೆಲ್ಲಾ ಆದ ನಂತರ ದೇಶದ ಮೇಲೆ ದೇವರಿಗಿದ್ದ ಕೋಪವು ಶಾಂತವಾಗಿ, ಅವನು ಅವರ ಪ್ರಾರ್ಥನೆಗಳಿಗೆ ಉತ್ತರಕೊಟ್ಟನು.
15 ೧೫ ಫಿಲಿಷ್ಟಿಯರಿಗೂ ಇಸ್ರಾಯೇಲರಿಗೂ ಪುನಃ ಯುದ್ಧವಾಯಿತು. ದಾವೀದನು ತನ್ನ ಸೇವಕರನ್ನು ಕರೆದುಕೊಂಡು ಫಿಲಿಷ್ಟಿಯರಿಗೆ ವಿರೋಧವಾಗಿ ಯುದ್ಧಕ್ಕೆ ಹೋದಾಗ ಬಹಳವಾಗಿ ದಣಿದಿದ್ದನು.
یک بار وقتی فلسطینی‌ها با اسرائیلی‌ها می‌جنگیدند، داوود و افرادش در بحبوحهٔ جنگ خسته و درمانده شدند.
16 ೧೬ ಆಗ ರೆಫಾಯರಲ್ಲೊಬ್ಬನಾದ ಇಷ್ಬಿಬೆನೋಬ್ ಎಂಬುವನು ದಾವೀದನನ್ನು ಕೊಲ್ಲುಬೇಕೆಂದಿದ್ದನು. ಅವನ ತಾಮ್ರದ ಬರ್ಜಿಯು ಮುನ್ನೂರು ಶೆಕಲ್ (ಬೆಳ್ಳಿನಾಣ್ಯ) ತೂಕದ್ದು. ಅವನು ಸೊಂಟಕ್ಕೆ ಹೊಸ ಕತ್ತಿಯನ್ನು ಕಟ್ಟಿಕೊಂಡಿದ್ದನು.
یک غول فلسطینی به نام یشبی بنوب که وزن نیزهٔ مفرغین او در حدود سه کیلو و نیم بود و زره‌ای نو بر تن داشت، به داوود حمله کرد و نزدیک بود او را بکشد.
17 ೧೭ ಆದರೆ ಚೆರೂಯಳ ಮಗನಾದ ಅಬೀಷೈಯು ದಾವೀದನ ಸಹಾಯಕ್ಕೆ ಬಂದು, ಆ ಫಿಲಿಷ್ಟಿಯನನ್ನು ಕೊಂದು ಹಾಕಿದನು. ಆಗ ಜನರು ದಾವೀದನಿಗೆ, “ಇಸ್ರಾಯೇಲರ ದೀಪವು ಆರಿಹೋಗದಂತೆ ನೀನು ಇನ್ನು ಮುಂದೆ ನಮ್ಮ ಜೊತೆಯಲ್ಲಿ ಯುದ್ಧಕ್ಕೆ ಬರಬಾರದು” ಎಂದು ಖಂಡಿತವಾಗಿ ಹೇಳಿದನು.
ولی ابیشای پسر صرویه به کمک داوود شتافت و آن فلسطینی را کشت. بنابراین افراد داوود به تأکید به او گفتند: «تو امید اسرائیل هستی و دیگر نباید به میدان جنگ بیایی. ما نمی‌خواهیم تو را از دست بدهیم.»
18 ೧೮ ಅನಂತರ ಫಿಲಿಷ್ಟಿಯರ ಸಂಗಡ ಗೋಬಿನಲ್ಲಿ ಯುದ್ಧ ನಡೆಯಿತು. ಆಗ ಹುಷಾ ಊರಿನವನಾದ ಸಿಬ್ಬೆಕೈ ಎಂಬುವನು ರೆಫಾಯನಾದ ಸೆಫ ಎಂಬುವನನ್ನು ಕೊಂದನು.
در جنگی که بعد در جُب با فلسطینی‌ها درگرفت، سبکای حوشاتی یک غول فلسطینی دیگر به نام ساف را کشت.
19 ೧೯ ಗೋಬಿನಲ್ಲಿ ಫಿಲಿಷ್ಟಿಯರೊಡನೆ ಇನ್ನೊಮ್ಮೆ ಯುದ್ಧ ನಡೆದಾಗ ಬೇತ್ಲೆಹೇಮಿನವನಾದ ಯಾರೇಯೋರೆಗೀಮ್ ಎಂಬುವವನ ಮಗನಾದ ಎಲ್ಹಾನಾನನು ಗಿತ್ತೀಯನಾದ ಗೊಲ್ಯಾತನನ್ನು ಕೊಂದನು. ಗೊಲ್ಯಾತನ ಬರ್ಜಿಯ ಹಿಡಿಕೆಯು ನೇಕಾರರ ಕುಂಟೆಯಷ್ಟು ಗಾತ್ರವಿತ್ತು.
بار دیگر در همان محل، الحانان برادر جلیات جتی را که چوب نیزه‌اش به کلفتی چوب نساجها بود، کشت.
20 ೨೦ ಮತ್ತೊಂದು ಸಾರಿ ಗತ್ ಊರಿನಲ್ಲಿ ಯುದ್ಧ ನಡೆಯಿತು. ಅಲ್ಲಿ ಒಬ್ಬ ಎತ್ತರವಾದ ಪುರುಷನಿದ್ದನು. ಅವನ ಕೈಕಾಲುಗಳಿಗೆ ಆರಾರು ಬೆರಳುಗಳಂತೆ ಒಟ್ಟಿಗೆ ಇಪ್ಪತ್ತನಾಲ್ಕು ಬೆರಳುಗಳಿದ್ದವು ಅವನು ರೆಫಾಯನಿಗೆ ಹುಟ್ಟಿದವನಾಗಿದ್ದನು.
یک بار هم وقتی فلسطینی‌ها در جت با اسرائیلی‌ها می‌جنگیدند، یک غول فلسطینی که در هر دست و پایش شش انگشت داشت، نیروهای اسرائیلی را به ستوه آورد. آنگاه یوناتان، برادرزادهٔ داوود که پسر شمعا بود، او را کشت.
21 ೨೧ ಅವನು ಇಸ್ರಾಯೇಲರನ್ನು ನಿಂದಿಸಿದಾಗ ದಾವೀದನ ಅಣ್ಣನಾದ ಶಿಮಿಯಾನನ ಮಗ ಯೋನಾತಾನನು ಅವನನ್ನು ಕೊಂದು ಹಾಕಿದನು.
22 ೨೨ ಗತ್ ಊರಿನವರಾದ ಈ ನಾಲ್ಕು ಮಂದಿ ರೆಫಾಯರೂ ದಾವೀದನಿಂದಲೂ ಅವನ ಸೇವಕರಿಂದಲೂ ಹತರಾದರು.
این چهار مرد که به دست داوود و سربازان او کشته شدند از نسل غول‌پیکران جت بودند.

< ಸಮುವೇಲನು - ದ್ವಿತೀಯ ಭಾಗ 21 >